ಮೆತ್ತಿನ ಮ್ಯಾಲೆ ಅತ್ತಿಗೀ ಒರಗೀರ
ಮೈದಿನಿ ಹೋಗಿ ಎಬಸೀರೆ ಏನೆಂದೆ
ನೀರಾಟಿಕೆ ನೀರು ಬರಬೇಕು

ಪಟ್ಟೀನೆ ಉಟ್ಟೀರು ಸರವನ್ನ ಹಾಕಿದೆ
ಪುತ್ರಯ್ಯನ್ಹಾಕಿ ಒರಗೀದೆ
ಪುತ್ರಯ್ಯ ತೆಗೆದು ಅಣ್ಣನ ಕೈಲೆ ಕೊಡಿ
ಪಟ್ಟಿನ ಮಾಲೆ ಬದುಲುಡಿ ಅತ್ತಿಗೆ
ನೀರಾಟಿಕೆ ನೀವೇ ಬರಬೇಕು ಅತ್ತಿಗೆ
ನಾವೊಂದು ಪಂತದಲು ನಿಲಬೇಕು
ಗಂಡನ ಮನಿಯ ಅಕ್ಕಮ್ಮ
ಗೆದ್ದೊಳಗೆ ನಡೆದಾಳು ಅಕ್ಕಮ್ಮ
ಗೆದ್ದೆನೆಂಬ ಹರಸು ಬಿಡಲಿಲ್ಲ