ಕುದಿರಿ ಮ್ಯಾನೆ ಕೂತ್ಕಂಡ ಚದುರಂಗ ಅಡುತ ಬಂದ
ಮಗನೆಂದ ಒಳಗೆ ಕರೆದಾಳ ತಾಯಮ್ಮ
ಮಗನಲ್ಲ ಮಗಳ ಪುರುಷಾಶನು

ಅಳಿ ಬಪ್ಪು ದಾರೀಲಿ ಎನೆಲ್ಲ ನಡಸೀಳ
ಸಾಲು ಸಂಪೂಗಿಯ ನಡಸೀಳ ತಾಯಮ್ಮ
ಅಳಿ ಬಪ್ಪು ದಾರಿ ನೆಳಲೆಂದು

ಅಳಿ ಒರ್ಗು ಜಗಲಿರೆ ಏನ್ಹಾಕಿ ಒರೆದಾಳ
ತಲೆದಿಂಬನ್ಹಾಕಿ ಒರೆದಾಳ ತಾಯಮ್ಮ
ಅಳಿಬಂದರಲ್ಲೆ ಒರಗಲಿ

ಕಾಕಿಯು ಕರೆದರೆ ಲೊಕದರು ಬರುವರು
ಕಿಚ್ಚು ಕರೆದರೆ ತಾಯೆ ಹುಸಿಯಲ್ಲ ಉಪ್ಪುಂದ
ಕಾಲು ತಾವರೆಯ ಅಳಿ ಬಂದ್ರೆ