ಕೇರಿ ಗೌಡನ ಮಗಳು ನೀರೀಗೆ ಹೋಗುವಾಗ
ಅಲ್ಲೊಬ್ಬ ಜಾಣ ತಡೆದಾನು
ಅಲ್ಲೊಬ್ಬ ಜಾಣ ತಡೆದಾನೆಂಬ ಸಮಯದಲ್ಲಿ
ರಾಗೀ ಕಾಳಾಗಿ ಉರುಡಿ ಹೋಳು
ರಾಗಿ ಕಾಳಾಗಿ ಉರುಡಿ ಹೋಪ ಸಮಯದಲ್ಲಿ
ಉರಿ ಹುಂಜನಾಗಿ ಹೆಕ್ಕ ತಿಂದ
ಉರಿ ಹುಂಜನಾಗಿ ಹೆಕ್ಕ ತಿಂಬ ಸಮಯದಲ್ಲಿ
ಹಣ್ಣಡಕಿಯಾಗಿ ಉದುರಿ ಹೋಪ ಸಮಯದಲ್ಲಿ
ರನ್ನದ ಚೂರಿಯಲ್ಲಿ ಒಡೆದಾನು     
ರನ್ನದ ಚೂರಿಯಲ್ಲಿ ಒಡೆದಾನೆಂಬ ಸಮಯದಲ್ಲಿ
ಬಾಳಿ ಮೀನಾಗಿ ಉರುಡಿಹೋಳು
ಬಾಳಿ ಮೀನಾಗಿ ಉರುಡಿ ಹೋಪ ಸಮಯದಲ್ಲಿ
ಚಣ್ಣ ಗಾಳದಲಿ ಸೆಡಿದಾನು
ಚಣ್ಣ ಗಾಳದಲಿ ಸೆಡಿದಾನೆಂಬ ಸಮಯದಲ್ಲಿ
ಪಾರವಾಳದ್ಹಕ್ಕಿಯಾಗಿ ಹಾರಿ ಹೋಳು
ಪಾರ‍್ವಾಳದ್ಹಕ್ಕಿಯಾಗಿ ಹಾರಿ ಹೋಪ ಸಮಯದಲ್ಲಿ
ಸಿಕ್ಕಿ ಬಿದ್ದೆ ನಿನ್ನ ಬಲೆಯಲ್ಲಿ
ದಮ್ಮಯ್ಯ ಗಂಡ ಬಿಡು ನನ್ನ…