ಕೊಡನೀರ್ ಹೋಪ್ ಹಾದೀಲೆ ಏನೆಲ್ಲ ನೆಡಸೀರು
ಸಾಲುಸಂಪಂಗೀಯ ನೆಡಸೀರು ನಮ್ಮ ನಿಸ್ತ್ರಿಯರು
ನಡಿನಡುತಗೆ ಹೋಗ ಕೋಯ್ ದೀರು ನಮ್ಮ ನಿಸ್ತ್ರಯರು
ಹಗ್ಗವಿಲ್ಲದೇ ಹೂಗೆ ನೆಯ್ದಿರು ನಮ್ಮ ನಿಸ್ತ್ರಿಯರು
ಎಳೆ ಇಲ್ಲದ ಹೂಗ ಮುಡದಿರು
ಜೋಯಿಸರ ಅರಮನೆಯಾವುದೆಂದು ನಾನರಿಯೆ
ಮುತ್ತಿನ ಬೇಲಿ ಮನಿ ಮುಂದೆ ಅಂತ್ಹೇಳಿ
ಜೋಯಿಸರ ಮೂರ‍್ ಕರಿಯ ಕರೆದೀರು
ಜೋಯಿಸರ ಮೂರ‍್ ಕರಿಯ ಕರೆವಂಥ ಸಮಯದಲ್ಲಿ
ಜೋಯಿಸರು ನಿದ್ದುರಿಯ ಗೆಯ್ತಿದ್ರು
ಜೋಯಿಸರು ನಿದ್ದುರಿಯ ಗೆಯ್ದೇಳು ಸಮಯ್ದಲ್ಲಿ
ಮೈಮುಟ್ಟಿ ಮಡದಿ  ಎಬಸೀರು
ಮೈಮುಟ್ಟಿ ಮಡದಿ ಏನೆಂದು ಎಬಸೀರು
ಒಕ್ಕಲು ಕಂದಮ್ಮಗೆ ಮದುವಿಯೂ
ಒಕ್ಕಲು ಕಂದಮ್ಮಗೆ ಮದುವಿಯು ಸ್ವಾಮಿ ಕೇಳಿ
ಕೊಡನೀರಿಗೆ ಬಂದೀರು ಸ್ವಾಮಿ ಏಳಿ
ಅಷ್ಟೊಂದ ಮಾತ ಕೇಂಡರು ಜೋಯಸರು
ಮೆತ್ತಿಂದ ಕೆಳಗೆ ಇಳಿದರೂ  ಜೋಯಸರು
ಬೆಳ್ಳಿ ತಗನೇಣು ಹಿಡಿದರೂ
ಬೆಳ್ಳಿ ತನನೇಣು ಬಲಗೈಲಿ ಹಿಡಕಂಡು
ಬಾಮಿಯಂಗಣಕೆ ನಡೆದಾರು ಜೋಯಿಸರು
ಒಂದು ಕೊಡಪಾನ ನೀರ ತೆಗೆದರು ಜೋಯಿಸರು
ಮಣ್ಣಿನ ಕೊಡಕೆಲ್ಲ ತುಂಬಿ ನೆಗೆದ್ರು
ಹಕ್ಕಿ ಮುಟ್ಟದಿದ್ದ ನೀರು ಪಕ್ಷಿ ಮುಟ್ಟದಿದ್ದ ನೀರು
ಕೋಟೇಸ್ರ ಕೋಟಿನಿಂಗನ ಕೆರೀ ನೀರು
ಕೋಟೇಸ್ರ ಕೋಟಿನಿಂಗನ ಕೆರಿ ನೀರುಹೊಳೆ ನೀರ
ಕೊಂಬಿನ ಮೇಲ್ ತಂತು ಕೊಡನೀರು
ಕೊಂಬಿನ ಮೇಲ್ ತಂತು ಕೊಡನೀರು ಅಕ್ಕಮ್ಮ
ಮುದ್ದು ನಿನ್ ಕಂದಮ್ನ ಜಳಕಕ್ಕೆ
ಇಲ್ಲೆಲ್ಲ ನೀರು ಚಂದವಿಲ್ಲೆಂದು
ಕಾಳಿ ಕಾವೇರಿಯ  ಕೆರಿ ನೀರು ಹೊಳಿ ನೀರು
ಕೊಂಬಿನ ಮೇಲ್ ತಂತು ಕೊಡನೀರು ಅಕ್ಕಮ್ಮ
ಮುದ್ದು ನಿನ್ನ ಕಂದಮ್ನ ಜಳಕಕ್ಕೆ
ಉದ್ದೀನಗದ್ದೀಲೆ ಉದ್ದುಕು ಚಪ್ಪುರು ಹಾಕಿ
ಬುದ್ವಂತರೆಲ್ಲ ಸಭಿಕೂಡಿ ಈ ಮನಿ
ಬುದ್ದು ಬಾಲಯ್ಯಗೂ ಬುಳುಮೀಸಿ