ಏಳ್ಮುಡಿ ಗದ್ದೀಗೆ ಎಳ್ಳ ಬಿತ್ತಿ ಕೊಳಲಂಬತ್ತೆ ಗೆಜ್ಜೀಗೆ
ಎಳ್ಳ ತಿಂಬ್ಕೆ ಎಲಿಯೇ ಬಮತೇ ಕೊಳಲಂಬತ್ತೆ ಗೆಜ್ಜೀಗೆ
ಎಳ್ಳ ತಿಂಬ ಎಲಿಯ ಹಿಡುಕೆ ಕೊಳಲಂಬತ್ತೆ ಗೆಜ್ಜೀಗೆ
ಬಟ್ಲ ಕಣ್ಣಿನ ಬೆಕ್ಕು ಬಂತೆ ಕೊಳಲಂಬತ್ತೆ ಗೆಜ್ಜೀಗೆ
ಬಟ್ಲ ಕಣ್ಣಿನ ಬೆಕ್ಕು ಹಿಡುಕೆ ಕೊಳಲಂಬತ್ತೆ ಗೆಜ್ಜೀಗೆ
ದಾಸ ಅಂಬ ನಾಯಿ ಬಂತೆ ಕೊಳಲಂಬತ್ತೆ ಗೆಜ್ಜೀಗೆ
ದಾಸ ಅಂಬ ನಾಯಿ ಹಿಡುಕೆ ಕೊಳಲಂಬತ್ತೆ ಗೆಜ್ಜೀಗೆ
ಪಟ್ಟಪರಿ ಎಂಬಹುಲಿಯ ಬಂತೆ ಕೊಳಲಂಬತ್ತೆ ಗೆಜ್ಜೀಗೆ
ಪಟ್ಟಪರಿ ಎಂಬ ಹುಲಿಯ ಸುಡುಕೆ ಕೊಳಲಂಬತ್ತೆ ಗೆಜ್ಜೀಗೆ
ಬೆಳ್ಳಿ ಕಟ್ಟಿನ ಕೋವಿ ಬಂತೆ ಕೊಳಲಂಬತ್ತೆ ಗೆಜ್ಜೀಗೆ
ಬೆಳ್ಳಿ ಕಟ್ಟಿನ ಕೋವಿ ಸುಡುಕೆ ಕೊಳಲಂಬತ್ತೆ ಗೆಜ್ಜೀಗೆ
ಪಿಣಿ ಪಿಣಿ ಎಂಬ ಬೆಂಕಿ ಬಂತೆ ಕೊಳಲಂಬತ್ತೆ ಗೆಜ್ಜೀಗೆ
ಪಿಣಿ ಪಿಣಿ ಎಂಬ ಬೆಂಕಿ ನಂದ್ಸುಕೆ ಕೊಳಲಂಬತ್ತೆ ಗೆಜ್ಜೀಗೆ
ದಣು ದಣು ಎಂಬ ನೀರೇ ಬಂತೆ ಕೊಳಲಂಬತ್ತೆ ಗೆಜ್ಜೀಗೆ
ದಣು ದಣು ಎಂಬ ನೀರ‍್ ಕುಡುಕೆಕೊಳಲಂಬತ್ತೆ ಗೆಜ್ಜೀಗೆ
ಕೈಲಿ ಎಂಬ ದನವೇ ಬಂತೆ ಕೊಳಲಂಬತ್ತೆ ಗೆಜ್ಜೀಗೆ
ಕೈಲಿ ಎಂಬ ದನಿನ ಕಟ್ಟಿ ಕೊಳಲಂಬತ್ತೆ ಗೆಜ್ಜೀಗೆ
ಚಂಬು ತುಂಬ ಹಾಲು ಕರದು ಕೊಳಲಂಬತ್ತೆ ಗೆಜ್ಜೀಗೆ
ಚನಬ್ ತುಂಬಿದ ಹಾಲ ಕಾಸಿ ಕೊಳಲಂಬತ್ತೆ ಗೆಜ್ಜೀಗೆ
ಕಟಪಟ ಎಂದು ಮಜ್ಗೀ ತಿಕ್ಕಿ ಕೊಳಲಂಬತ್ತೆ ಗೆಜ್ಜೀಗೆ
ಬೆಳುಗಲ್ಲಂಥ ಬೆಣ್ಣಿ ತಗದು ಕೊಳಲಂಬತ್ತೆ ಗೆಜ್ಜೀಗೆ
ಬೆಳುಗಲ್ಲಂಥ ಬೆಣ್ಣಿ ಕಾಸಿ ಕೊಳಲಂಬತ್ತೆ ಗೆಜ್ಜೀಗೆ
ಜರಿ ಜರಿಯಂಥ ತುಪ್ಪ ಮಾಡಿ ಕೊಳಲಂಬತ್ತೆ ಗೆಜ್ಜೀಗೆ
ಜರಿ ಜರಿಯಂಥ ತುಪ್ಪ ಮಾರಿ ಕೊಳಲಂಬತ್ತೆ ಗೆಜ್ಜೀಗೆ
ಝಣ ಝಣ ಎಮದು ರೂಪಾಯಿ ತಂದು ಕೊಳಲಂಬತ್ತೆ ಗೆಜ್ಜೀಗೆ
ಝಣ ಝಣ ಎಂಬು ರೂಪಾಯಿ ಕೊಟ್ರೂ ಕೊಳಲಂಬತ್ತೆ ಗೆಜ್ಜೀಗೆ
ಗೊಂಬಿಯಂಥ ಮಗೀನ ತಂದ್ಲು ಕೊಳಲಂಬತ್ತೆ ಗೆಜ್ಜೀಗೆ