ಯಾರೂ ಏಳದ ಮುಂಚೆ ಕೋಳಿ ಕೂಗದ ಮುಂಚೆ
ಬಾಲಮ್ಮ ಎದ್ದು ಕದವ ತೆಗೆದಾಳು ಬಾಲಮ್ಮ
ಬಾಮಿ ಅಂಗಳಕೆ ನಡೆದಾಳು ಬಾಲಮ್ಮ
ಕಾಲು ಶ್ರೀಮುಖವ ತೊಳೆದಾಳೆ ಬಾಲಮ್ಮ
ಗೀರದಿಂದೊಳಗೆ ಬಂದಾಳೆ ಬಾಲಮ್ಮ       
ಕಸಮುಸಿರಿ ಎಲ್ಲ ಹೊರಗ್ಹಾಕಿ ಬಾಲಮ್ಮ
ರಾಜಾಂಗಣ ಕಸವ ಗುಡಿಸೀಳು ಬಾಲಮ್ಮ
ಬೆಳ್ಳಿಯ ಚೆಂಬ ಬಲಗೈಲಿ ಹಿಡಕಂಡು
ಬಾಮಿಯಂಗಳಕೆ ನಡೆದಾಳು ಬಾಲಮ್ಮ
ಒಂದು ಚಂಬ್ ನೀರ ಹಿಡಿದಾಳು ಬಾಲಮ್ಮ
ಕೈಲಿ ಕೊಟ್ಟಿಗೆಗೆ ನಡೆದಾಳು ಬಾಲಮ್ಮ
ಕೈಲಿಗೆ ಮುರುವು ಇಡವಾಳು ಬಾಲಮ್ಮ
ಕರುಬಿಟ್ಟು ಅರಗಳಿಗೆ  ನಿಲುವಾಳು ಬಾಲಮ್ಮ
ಚಿನ್ನದ ಕೆಚ್ಚಲ ತೊಳೆದಾಳುಬಾಲಮ್ಮ
ಚಿನ್ನದ ಕೆಚ್ಚಲ ಕರೆದಾಳುಬಾಲಮ್ಮ
ಕರೆದು ತುಂಬಿಸೆಲೆ ನೂರಿಹಾಲು ಬಾಲಮ್ಮ
ಗೀರದಿಂದೋಳಗೆ ಬರುವಾಳು ಬಾಲಮ್ಮ
ಹಾಲೊಳಗ್ಹೆಪ್ಪ ಅನುಮಾಡಿ ಬಾಲಮ್ಮ
ಮನಸೀನ ಹೊಸ ಪರಿಯ ಅರಿದಾಳೆ
ಮ್ಯಾಲ್ಹಾದಿ ಬಿಸಿಲೆಂದು ಕೆಳಹಾದಿ ಕೆಸರೆಂದು
ಸಸಿ ತೊಟದ ದಾರಿ ಹಿಡಿದಳು ಬಾಲಮ್ಮ
ನಿಂಬಿ ಮರ ಸೇರಿ ನಿಲುವಾಳು
ಮುಸುರಿ ತಿಕ್ಕುದ ಕಂಡೆ ಕಸವ ಗುಡಿಸುದ ಕಂಡೆ
ಈಗ ಕಂಡ ಮಗುವೆ ಒಳಗಿಲ್ಲ ಹೆರಗಿಲ್ಲ
ಎತ್ಹೋದಳೆಂದೇ ಹುಡುಕಾಡಿ ಅವಳತ್ತಿಗೀ
ಹಿತ್ತಲದಾರಿ ಹಿಡಿದಾಳು ಅವಳತ್ತಿಗೀ
ಮೈದಿನಿ ಕಂಡವಳೆ ಮುಗುಳ್ನಿಗಿ ಆಡ್ಕಂಡು
ಗಿರದಿಂದ ಮನಿಗೆ ಬರುವಾಳೆ ಅವ್ಳತ್ತಿಗೀ
ಮೆತ್ತತ್ತಿ ಮೇಲೆ ನಡೆದಾಳು ಅವಳತ್ತೀಗಿ
ಸಂಪೂಗಿ ಕೊಡನ ಹನಿ ಎಣ್ಣೆ ತಕ್ಕಂಡ
ಎಸಳು ಗಿಂಡುಗಿಗೆ ಬಗಸೀಳ ಅವಳತ್ತಿಗೀ
ಕೈತುಂಬ ಬೆಳೆ ಎಲಿಯ ಹಿಡಿದಾಳೆ
ಕೈತುಂಬ ಬೆಳಿ ಎಲಿಯ ಹಿಡದು ಅವಳತ್ತೀಗಿ
ಮೆತ್ತಿಂದ ಕೆಳಗೆ ಇಳಿದಾಳೆ ಅವಳತ್ತೀಗೆ
ನೆತ್ತಿಗು ಪಾಡಿಸಳೆ ಹನಿಎಣ್ಣೆ ಅವಳತ್ತಿಗೆ
ಕೈತುಂಬ ಬೆಳಿ ಎಲಿಯ ಕೊಡುವಳು ಅವಳತ್ತಿಗೆ
ಮೈದುನಿ ಒಡಗೂಡಿ ಬರುವಳು ಅವಳತ್ತಿಗೆ
ತಮ್ಮಯ್ನ ಕರೆದು ನುಡಿದಳು ತಮ್ಮಯ್ನ ಕರೆದು ಏನೆಂದು ನುಡಿದಾಳು
ಹೊಯಿಬಾ ಜೋಐಇಸರ ಅರಮನೆಗೆ
ಅಷ್ಟೊಂದ ಮಾತ ಕೇಂಡಾನೆ ತಮ್ಮಯ್ಯ
ಮನಿಕಿಂತ ಮೂಡಾಯಿ ಇರುವುದು ಚಂದಾಳಿ ಮರ
ತೊಲಿ ಬಚ್ಚಿಕಾಯ ಕೊಯ್ದಾನು ತಮ್ಮಯ್ಯ
ಮುಗುಟ ಬಚ್ಚಿ ಕಾಯ ಸೊಲಿದಾನು ತಮ್ಮಯ್ಯ
ಹೋದಾನು ಜೊಯಿಸರ ಅರಮನಿಗೆ ತಮ್ಮಯ್ಯ
ಜೋಯಿಸರ ಮೂರು ಕರಿಯ ಕರೆದಾನು
ಮಡದಿ ಮೈನೆರೆದ ಗಳಿಗೆಯ ಜೋಯಿಸರೇ
ಒಳ್ಳಿ ಪಂಚಾಂಗ ತೆಗೆದ್ಹೇಳಿ
ಅಷ್ಟೊಂದ ಮಾತ ಕೇಂಡರು ಜೋಯಿಸರು
ಒಳ್ಳಿ ಪಂಚಾಂಗ ತೆಗೆದೋದಿ
ಶುಕ್ರವಾರ ದಿನದಲ್ಲಿ ಹೊತ್ಮೂಡಿ ಗಂಜ್ಹೋತ್ತಿಗೆ
ಕರೆಕಂಡು ಕ್ಯಾದುಗೀಯ ಅರಳೀತು
ಅಷ್ಟೊಂದು ಮಾತ ಕೇಂಡನೆ ತಮ್ಮಯ್ಯ
ಗೀರಾದಿಂದ ಮನಿಗೆ ಬರುವನು ತಮ್ಮಯ್ಯ
ಅಕ್ಕಮ್ಮನ ಕರಿದೇ ನುಡಿದಾನು
ಶುಕ್ರವಾರ ದಿನದಲ್ಲಿ ಹೊತ್ಮೂಡಿ ಗಂಜ್ಹೋತ್ತಿಗೆ
ಕೆರೆ ಕಂಡು ಕ್ಯಾದುಗೀಯೆ ಅರಳೀತು ಅಕ್ಕಮ್ಮ
ಒಳ್ಳಿ ಪಂಚಾಂಗ ನುಡಿದೋದಿ

ಐದು ಮಂದಿಯೊಳಗೆ ಐರಾವತಿ ತಂಗ್ಯಮ್ಮ
ಮೈನೆರೆದಳೆಂದೇಹೊಸ ಸುದ್ಧಿ ಅವಳಣ್ಣ
ಐದೂರಿಗ್ವಾಲೆ ಬರೆದಾನೆ ಏನೆಂದೆ ಬರೆದಾನೆ
ಐರಾವತಿಗೊಪ್ಪು ತಲಿಹೂಗು ಮಂದಲಿಬಿಟ್ಟು
ಐದು ದಿನಕಾಗಿ ಬರಕಂದ