ತಮ್ಮ ಬತ್ತಬರವೇ ಅಷ್ಟ ದೂರ ನೋಡೀಳು
ಪಾದಾಕೆ ನೀರ ಕೊಡುವಳೇ ಅವ್ಳೀಗ
ಎಂದ್ ಬಾರದ ತಮ್ಮಯ್ಯ ಇಂದೇನೆ ಬಂದೀಯ
ಬಂದ ಕಾರಣವೇ ಒದಗ್ಹೇಳು
ಎಂದೂ ನಾ ಬರಲಿಲ್ಲ ಎಂತೂ ನಾ ಬರಲಿಲ್ಲ 
ಬರಬೆಕೇ ಮನೆಯ ಮದುವಿಗೆ
ಅಂಗಳ ಗುಡಿಸುವರಿಲ್ಲ ಗಂಗಳ ತೋಳುವರಿಲ್ಲ
ಹ್ಯಾಂಗ ಬರಲಿ ಮನಿಯ ಮದುವಿಗೆ
ಅಂಗಳಕೆ ಆಳಿಡ್ತೆ ಗಂಗಳಕೂ ಕುತ್ತಿಡತೆ
ಬರಬೇಕು ಮನಿಯ ಮದುವಿಗೆ
ಕಬ್ಬು ಕಡಿವರಿಲ್ಲ ಕಡಲಿ ಬಿತ್ತಲಿಲ್ಲ
ಹ್ಯಾಂಗ ಬರಲಿ ಮನಿಯ ಮದುವಿಗೆ
ಕಬ್ಬು ಕಡಿಸಿ ಕೊಡ್ತಿ ಕಡ್ಲಿ ಬಿಕ್ಕಿಸಿ ಕೊಡ್ತೆ
ನೀ ಬಾರೆ ಮನಿಯ ಮದುವಿಗೆ
ಬಪ್ಪುಕೆ ಬಪ್ಪೆ ತಮ್ನೆ ಬರ‍್ದೇ ಇರುವಳಲ್ಲ
ಕೆಮಿವಾಲಿ ಜೋಡೆರಡೆ ಮುರಿದ್ಹಾದು
ವಾಲಿಜೋಡ್ ಮುರಿದಾರೆ ಅಕಸಾಲುರರ ಮನಿ
ಕೂತೊಂದರಗಳಿಗಿ ಗೇಸಿಕೊಡ್ತೆ ಅಕ್ಕಮ್ಮ
ನೀ ಬಾರೆ ಮನಿ ಮದುವಿಗೆ
ಬಪ್ಪುಕು ಬಪ್ಪೆ ತಮ್ನೆ ಬಾರದೇ ಇರುವಳಲ್ಲ
ಕಂದಯ್ನ ಕಾಲಿಗೆ ಗೆಜ್ಜಿ ಇಲ್ಲ ತಮ್ಮಯ್ಯ
ಹೆಂಗ್ ಬರ‍್ಲಿ ಮನಿಯ ಮದುವಿಗೆ
ಭಾವಗೆ ದಂಡಿಗೆ ಇಲ್ಲ ನನಗೆ ಪಾಲಿಕೆ ಇಲ್ಲ
ಹೆಂಗ್ ಬರಲಿ ಮನಿಯ ಮದುವಿಗೆ
ಅಷ್ಟೊಂದ ಮಾತ ಕೇಂಡಂತೆ ತಮ್ಮಯ್ಯ
ಪಾಲಿಕೆ ದಂಡಿಗಿನೆ ಕರೆತಂದ ತಮ್ಮಯ್ಯ
ಪಾಲಿಕೆ ಮ್ಯಾನೆ ಅಕ್ಕ ಭಾವನ ಕೂರಿಸಿಕೊಂಡ ತಮ್ಮಯ್ಯ
ಆಳಿಯನೆತ್ತಿಕಂಡ ಬರುವಾನ ತಮ್ಮಯ್ಯ
ತಾ ಬಂದ ತನ್ನ ಅರಮನಿಗೆ