ತಿಂಗಳ ದೇವ್ರು ಬಂದ್ರು
ಬಂದ್ರೆ ನಮ್ಮನಿಗೆ ಬರಲಿ
ಆರು ಕೋಲಂಗಳ ಮೂರು ಕೋಲ ತಿರುಪತಿ
ತಿರುಪತಿ ಅಮ್ಮನ ಗುಡ್ಡೀಲೆ
ಎತ್ತು ಬಂದು ನಿಂತಿತ್ತು
ಕಾರಿ ಕಾಯಿ ತಿಂದಿತ್ತು
ಕಳಕ ನೀರು ಕುಡ್ಡಿತ್ತು
ಮಾರೆಮ್ಮ ಬಂದ್ರ
ದಾರಿ ಹಿಡ್ಕಂಡ ಹೋದ್ರ
ತಿಂಗಳ ದೇವ್ರ ತಂಗಿ
ಒಂದ್ಹೆತ್ರ ಬಂಜಿ
ಎರಡ್ಹೆತ್ರ ಮಗು
ಮಗೀನ್ ಮಂಡೀಗೆ ಎಣ್ಣಿಲ್ಲ
ಕೋಳಿ ಕೊಂಬುಕೆ ಕಾಸಿಲ್ಲ
ನನ್ನಣ್ಣ ತಂದೆ ಹನ್ನೆಯ್ಡೆಮ್ಮಿ
ಕಟ್ಟಾರಿಲ್ಲ ಕರಿವಾರಿಲ್ಲ
ಮೆಟ್ ಮೆಟ್ ಸಗಣಿ
ತೆಗಿವಾರಿಲ್ಲ
ಕೋಳಿ ಕೇರಿಸೂರಪ್ಪ ಶೆಟ್ರು
ಸಗಣಿ ಮೇಲ್ ಬಿದ್ರು
ಹೊಡಕ್ರೂ ಮಿಡಕ್ರೂ