ಕುದುರೆ ತತ್ತೀರೆಂದು ನಮ್ಮೂರಿಗ್ಹೋಸ ಸುದ್ದಿ
ಕುದುರೆ ಇಲ್ಲ ಕುದುರೆ ಮರಿ ಇಲ್ಲ ಬೀಗರೆ
ಬಾಲಯ್ಯ ಕಾಲ್ಹಾದೀಲೆ ಬರುವಾನೆ
ಆನೆ ತತ್ತೀರೆಂದು ನಮ್ಮೂರಿಗ್ಹೋಸ ಸುದ್ಧಿ
ಆನಿ ಇಲ್ಲ ಆನಿ ಮರಿ ಇಲ್ಲ ಬೀಗರೆ
ಬಾಲಯ್ಯ ಕಾಲ್ಹಾದೀಲೆ ಬರುವಾನು
ಕುದುರಿ ನಾವ್ ತಂದೀತ್ತು ಕುದುರಿ ಮೇಲ್ ಬಂದಿತ್ತ
ಎಡ ದಾರೀಲ್ ಕೇಂಡ ಹೊಸ ಸುದ್ಧಿ ಏನೆಂದೆ ಹೊಸ ಸುದ್ದಿ
ಮತ್ತೆ ಅತ್ತೆವರ ಮನಿ ಸಣ್ಣ ಅನುತ್ಹೇಳಿ
ನಮ್ಮ ಕುದುರಿ ಕಟ್ಟುವುದಕ್ಕೆ ಸ್ಥಳವಿಲ್ಲ ಬೀಗರೆ
ಕುದುರಿಗೆ ನೀರ‍್ ಕುಡುಕೆ ಕೆರಿ ಇಲ್ಲ ಅನುತ್ಹೇಳಿ
ಹಿಂದಕೆ ನೂರಾನಿ ಹೊಡೆದಟ್ಟಿ ಬೀಗರೆ
ಬಾಲಯ್ಯ ಕಾಲ್ಹಾದೀಲೆ ಬರುವನು
ಕುದುರಿ ತರುತಿರೆಂದೂ ನಮ್ಮೂರಿಗ್ಹೋಸ ಸುದ್ದಿ
ಕುದುರಿ ಇಲ್ಲ ಕುದುರೆ ಮರಿ ಇಲ್ಲ ಬೀಗರೆ
ಕುದುರಿಗೆ ಮೇವುಕೆ ಸ್ಥಳವುಂಟು ಬೀಗರೆ
ಕುದುರಿಗೆ ನೀರುಂಟು ಮದಗುಂಟು.