ಮ್ಯಾಲೆ ನೆಲೆಗಟ್ಟು ತಗದು ಕೆಳಗೆ ರಂಗೋಲಿ ಬರದು
ತರತರದಲ್ಲಿ ಮಣಿ ಬಚ್ಚಿ ಮಗುವಿನಪ್ಪ
ಕೆಮಿಗೆಂಡೆಯಲ್ ಹೂಗ ಸುರಿದಾಕಿ ಮಣಿ ಮ್ಯಾನೆ
ಆ ಮನಿಯ ಗೊಂಬೆಯ್ಡು ಕೂಕಂಡ
ಕೊಂಬಿನಲ್ ನೀರ ಹಿಡಿದಾರೋ ಮಗುವಿನಪ್ಪ
ಬರದ ರಂಗೋಲಿ ಮೆಟ್ಕಂಡ
ಅಳಿಯನ್ ಕೈ ಅಡಿ ಬಚ್ಚಿ ಮಗಳ ಕೈ ಮ್ಯಾಲೆ ಬಚ್ಚಿ
ನಗನಾಣ್ಯ ಚಿನ್ನ ನಡುಗಿಟ್ಟು ಮಗುವಿನಪ್ಪ
ಮಗಲ ಪಾಲಿಸಿದ ಅಳಿಯನಿಗೆ
ಕುಸು ಕುಸು ಕೂದ್ಲವಳೇ ಕುಸುಬ ಬಗ್ತಲದವಳೆ
ಕೃಷ್ಣ ದೆವರಿಗಿಂತ ಕಿರಿಯಳೇ ಸೌಭದ್ರಿ ಅರ್ಜುನನಗೆ ಧಾರೆ ಎರೆವಾರೇ