ಒಂದೆಂಬ ತಿಂಗಳಿಗೆ ಏನೆಲ್ಲ
ತಿನಕೆಂದು ಅಂಗೈಯಲ್ಲಿಪ್ಪ ಎಳೆಸೂಟಿ ತಿನಕೆಂದು
ತಮ್ಮನ ಕೈಲ್ಹೇಳಿ ಮುರುಗೀಳು ಅವ್ಳ ತಮ್ಮ
ಹಾಡಿ ಒಳಗದನ ಅಗಿ ತಂದು ಅವ್ಳ ತಮ್ಮ   
ಅಕ್ಕ ನಿನ ಬೈಕಿ ತಿಳಿದ್ಹೇಳ
ಎರಡೆಂಬ ತಿಂಗಳಿಗೆ ಏನೆಲ್ಲ ತಿನಕಂದು
ಅಂಬರದಲ್ಲಿರುವ ಮಿಡಿ ಮಾವು ತಿನಕಂದ
ಅಣ್ಣನ ಕೈಲ್ಹೇಳಿ ಮರುಗೀಳು ಅವಳಣ್ಣ
ಅಂಬರ ಜೂಡಾಡಿ ಕ್ಯೊತಂದ ಅವಳಣ್ಣ
ತಂಗಿಯ ಕರೆದು ಕೊಡುವಾನು
ತಂಗಿ ನಿನ ಬೈಕಿ ತಿಳಿದ್ಹೇಳು
ಮೂರೆಂಬ ತಿಂಗಳಿಗೆ ಏನೆಲ್ಲ ತಿನಕೆಂದು
ಅಂಬರದಲ್ಲಿರುವ ಎಳೆ ಹುಣಸಿ ತಿನಕೆಂದು
ಮಾವನ ಕೂಡ್ಹೇಳಿ ಮರಗೀಳು ಅವ್ಳ ಮಾವ
ಅಂಬರ ಜೂಡಾಡಿ ಕ್ಯೊತಂದ ಅವ್ಳಮಾವ
ಸೊಸಿಯ ಕರೆದು ಕೊಡುವಾನು ಅವ್ಳ ಮಾವ
ಸೊಸಿ ನಿನ್ನ ಬೈಕಿ ತಿಳದ್ಹೇಳು
ನಾಕೆಂಬ ತಿಂಗಳಿಗೆ ಏನೆಲ್ಲ ತಿನಕೆಂದು
ಹೆಡೆ ಬಿಚ್ಚಿಬೆಲೆದ ಮರಸೀಣ ತಿನಕೆಂದು
ಅಪ್ಪನ ಕೈಲ್ಹೇಳಿ ಮರುಗೀಳೂ ಅವ್ಳಪ್ಪ
ಹಾರೀ ಒಳಗದನ ಅಗ ತಂದ ಅವ್ಳಪ್ಪ
ಮಗಳನು ಕರದು ಕೊಡುವಾನು
ಐದೆಂಬ ತಿಂಗಳಿಗೆ ಎನೆಲ್ಲ ತಿನಕೆಂದು
ಬಸಳಿಯ ಸೊಪ್ಪ ತಿನಕೆಂದುಅವ್ಳತಾಯಿ
ಬಸಳಿ ದಡಿಯ್ಯೆದೆ ಕೊಯ್ತಂದ್ಲು ಅವ್ಳತಾಯಿ
ಮುದ್ದು ತನ ಮಗಳ ಬಯಕೀಗೆ
ಆರನೇ ತಿಂಗಳಿಗೆ ಏನೆಲ್ಲ ತಿನಕೆಂದು
ತಾಯಮ್ಮನ ಕೈ ಮೊಸರನ್ನುಪ್ಪಿನಕಾಯಿ
ಮಗಳ ನೀನ್ ಬಯಕಿ ತಿಳಿದ್ಹೇಳೆ
ಏಳನೆ ತಿಂಗಳಿಗೆ ಏನೆಲ್ಲ ಮರಗೀಳು
ಕೆಂಡ ಸಂಪುಗಿಗೆ ಮುಡಿಕಂದ ಅವಳಣ್ಣ
ಮರಹತ್ತಿ ಹೂಗ ಕೊಯ್ತಂದ ಅವಳಣ್ಣ
ತಂಗಿ ಕೈವಸಕೆ ಕೊಡುವಾನು ಅಣ್ಣಯ್ಯ
ತಂಗಿ ನಿನ ಬಯಕಿ ತಿಳಿದ್ಹೇಳ
ಎಂಟನೇ ತಿಂಗಳಿಗೆ ಏನೆಲ್ಲ ಮರುಗೀಳು
ಕಸ್ತೂರಿ ಮಲ್ಲಿಗಿನೆ ಮುಡಿಕಂದ ಅವ್ಳಮಾವ
ಕುಂದಾಪ್ರಗೆ ಒಂದ್ವಾಲಿ ಬರೆದಾನೆ ಅವ್ಳಮಾವ
ಕಸ್ತೂರಿ ಮಲ್ಲಿಗೆಯ ಹೋರಿಬಂದೋ ಅವ್ಳಮಾವ
ಸೊಸಿಯ ಕೈವಸಕ್ಕೆ ಕೊಡುವಾನೋ ಏನೆಂದೆ ಕೊಡುವಾನು
ಸೊಸಿಯ ನಿನ ಬಯಕಿ ತಿಳಿದ್ಹೇಳೆ
ಒಂಬತ್ತು ತಿಂಗಳಿಗೆ ಏನೆಲ್ಲ ತಿಕಂದ
ಚಕ್ಕುಲಿ ಕರಜಗಿನೆ ತಿನಕಂದು ಬಾಲಮ್ಮ

ತಾಯಿ ಕೈಲ್ಹೇಳಿ ಮರುಗೀಳು ಅವ್ಳತಾಯಿ
ಚಕ್ಕುಲಿ ಕರಜಗಿನೆ ಮಾಢೀಳ ಅವ್ಳತಾಯಿ
ಮುದ್ದು ತನ ಮಗಳ ಬಯಕೀಗೆ

ತಾಸು ತಾಸಿನ ಬ್ಯಾನಿ ಕತ್ತಿಯಲ್ ಕಡಿದ್ಹಂಗೆ
ತಾಳಲರೆಮ್ಮ ತಡಿಲಾರೆ ಅನುತ್ಹೇಳಿ
ಕೊಟ್ಟಿಗೆಗೂ ಮನಿಗೂ ತಿರುಗೋಳು ಬಾಲಮ್ಮ
ಪಟ್ಟವಾಳೋ ಮಗನ ಪಡೆದಳೆ