ಭಾವಯ್ಯನ ಮಡದಿ ಬಯಲಲು ಬರುವಳು
ಪಾವನ ಚಿನ್ನ ಹೊಳೆದಾವು ಲಾವುರ
ಬಾವಯ್ಯ ಬಂಡಸಾಲಿನೇ ಇಳಿದಾರು

ಹೂವಿನ ಹಿತ್ತಲಲ್ಲಿ ಹೂಗ್ ಕೊಯ್ಯುವ ಬಾವಯ್ಯ
ನನಗೈದೆ ಮಿಟ್ಟಿ ತೆಗೆದಿಡಿ ಬಾವಯ್ಯ
ಎಣ್ಣಿ ನೀರ‍್ ಮಿಂದ ಮುಡಿ ಮ್ಯಾಲೆ

ದಡ್ಡಳಕ್ಕಮ್ಮ ಚಿನ್ನು ಕೊಡುತ್ತಾಳೆಂದು
ನಾನೂ ಪರನಾಡ ಮದಿಗೆದ್ದೆ ನನ್ನಕ್ಕ
ವಾಲಿಯೇ ಕೊಡ ಮದಿಗ್ಹ್ವಾತೆ
ವಾಲಿ ಮಾಡೋ ಸೊನಗಾರ ದಳಿಯೇ ದೊಡ್ಡ ಕಿಟ್ಟ
ವಾಲಿ ನಿನ ಕೆಮಿಗೆ ದೊಡ್ಡದಾದೋ ತಂಗ್ಯಮ್ಮ
ಮುಗುಳೆಕೊಡುವೇಂದ್ರೆ ನಿನಗಾಗ
ದಡ್ಡವಳಕ್ಕಮ್ಮ ಚಿನ್ನ ಮಾಡಿಸಿದಳೆಂದು
ನಾನೂಪರನಾಡ ಮದಿಗೆದ್ದೆ ನನ್ನಕ್ಕ
ಸರುವನ್ನೇ ಅರಗಳಿಗೆ ಕೊಡುಬಾರ
ಸರುವೇ ಕೊಡುವೆನೆಂದ್ರೆ ನಿನಗಾಗ
ಇಷ್ಟೆಂಬ ಮಾತ ಬಾವಯ್ಯ ಕೇಳುತ ಬಂದ್ರ
ಒಳಗಿದ್ದ ಮಡದಿಯ ಕರೆದರ
ಒಳಗಿದ್ದ ಮಡದಿಯ ಏನೆಂದೇ ಕರೆದರ
ಚಿನ್ನದ ಪೆಟ್ಟೆಇಯ ಹೆರತಂದ ಬಚ್ಕಂಡ
ನಿನಗೊಪ್ಪಿದ ಚಿನ್ನು ತೆಗಿ ಅಂದ್ರ
ನಿನಗೊಪ್ಪಿದ ಚಿನ್ನು ತೆಗಿ ಅಂದ ಮಾತಿಗೆ
ಕೊರ‍್ಲ ತುಂಬ್ತ         ನನ್ನ ಕೆಮಿ ತುಂಬ್ತು ಬಾವಯ್ಯ
ಚಿನ್ನದ ಪಟ್ಟುಗಿಯ ಒಳಗಿಯ ಒಳಗಿಡಿ

ಬಾವ ಮೈದಿನಿ ಎಂಬ ನೇಮವು ನಮಗುಂಟು
ಹೆಂಗಾಡಲಿ ಬಾವ ಪಗಡಿಯ ನಾನುಟ್ಟ
ಮ್ಯಾದುಲಿ ಸೀರೆ ಮೈಲಿಗಿ

ಬಾವಿಯ ಕಟ್ಟೇಲಿ ಬಾವಣ್ಣರು ನಿಂತೀರು
ನಿರಿಗ್ಹೋಪಂದ್ರು ಅವಗೇಡು
ಬಾವಣ್ಣರೇ ತೇಲಿಸಿಕೊಳ್ಳಿ ನಿಮ್ಮ ಕುದುರೆಯ