ಬೆಳ್ಳಿ ಮುಖದ ತಮ್ಮಯ ಬೆಳಗಾಪೆ ಏನ್ಬಂದೆ
ನಾಳೆ ನಮ್ಮಲ್ಲಿ ಮದುವಿಯೋ ಚಪ್ಪರದಲ್ಲಿ
ಕಳಸ ಇಡುವವರಿಲ್ಲ ಕರಿಬಂದೆ
ಇಂದಿನ ಮದುವಿಗೆ ಇಂದೇ ಕರೆಯಲು ಬಂದಿ
ದಾಳಧೂಳಿನಲಿ ಬರಲಾರೆ ತಮ್ಮಯ್ಯ
ಧೂಳಿ ರಂಗೋಲಿಯ ಬರಿಲಾರೆ
ಏಳೆಮ್ಮ ಎಳಗಂದಿ ಹತ್ತೆಮ್ಮೆ ಬತ್ತಗಂದಿ
ನಾ ಬಾರೆ ಕಾಣ ಮದುವೀಗೆ
ಎಮ್ಮಿ ಕರುಕು ಜನ ಕರಿನ ಕಟ್ಟುಕು ಜನ
ಹಾಕ್ವೆ ನೀ ಬರಬೇಕಕ್ಕ ಮದುವೆಗೆ
ಅಂಗ್ಳ ಗುಡುಸುಕೆ ಜನ ಗಂಗ್ಳ ತೋಳಿಯುಕು ಜನ
ಹಾಕ್ವೆ ನೀ ಬರಬೇಕಕ್ಕ ಮದುವೆಗೆ
ಕಡ್ಯಾಣ ಮುರಿದುಹೋಯ್ತು ಬಿಲ್ವಾರು ಮುರುಹೊತ್ತು
ಬರಲಾರೆ ಕಾಣ ಮದುವೆಗೆ
ಕಡ್ಯಾಣ ಕಟ್ಟಿ ಕೊಡ್ವೆ ಬಿಲ್ವಾರು ಸುರಿಸಿ ಕೊಡುವೆ
ನೀ ಬರಬೇಕಕ್ಕ ಮದುವೆಗೆ
ನೀನೀಗ ಬರದೇ ಇದ್ರೆ ನಾನ್ ಕರಿ ನಿಲ್ಸುವೆ
ನೆರೆಮನಿ ಗೌಂಡಿಕರೆಸುವೆ ಅಕ್ಕ ಕೇಲಟ
ಚಿನ್ನದ ಕಳ್ಸವ ಇಡ್ಸೂವೆ