ಬಾಲಯ್ಯ ಸಿಂಗಾರವಾಗಿ ಬಾಗಿಲಲಿ ನಿಂತ್ ಕಂಡ್
ತಾಯಿ ಸಿರಿಪಾದಕೆ ಶರಣಂದ ಏನಂದ
ತಾಯಿ ದಿಬ್ಬಣಕ್ಕೆ ಬರಬೇಕು
ಬಾಲಯ್ಯ ಸಿಂಗಾರವಾಗಿ ಬಾಗಿಲಲಿ ನಿಂತ್ ಕಂಡ
ಅಪ್ಪನ ಸಿರಿಪಾದಕೆ ಶರಣಂದ ಏನಂದ
ಅಪ್ಪಯ್ಯ ದಿಬ್ಬಣೆ ಬರಬೇಕು
ಬಾಲಯ್ಯ ಸಿಂಗಾರವಾಗಿ ಮಾರ್ಗದಲ್ಹೋಗುವಾಗ
ಗೆಣಿಗಾರರೆಲ್ಲ ಬರುವರು ಗೆಣೆದಾರರೆ
ನಾರಿ ರುಕ್ಮಿಣಿಯ ಒಡಗೂಡಿ ಗೆಣೆಗಾರರೆ
ನಾರಿ ರುಕ್ಮಿಣಿಯ ಒಡಗುಡಿ ಗೆಣೆಗಾರರೆ
ನಾಳೆ ಮಜ್ಜನಕೆ ಬರುತ್ತೇನೆ.