ಹೊತ್ತಾರೆ ಮುಂಚೆದ್ದು ಬಾಮಿಯಂಗಣಕೆ ಹೋಗಿ
ಕಾಲು ಶ್ರೀ ಮುಖವ ತೊಳೆದು ತುಳಸಿ ಮಂಟಪಕೆ ಬಂದು
ಮೇಲು ನಾಮವನೆ ಇಟ್ಟು ಹಾಲುಗಂಜಿಯನ್ನು ಉಂಡು
ಹೆಣ್ಣು ಕೇಂಬೂಕೆ ಹೊರಟರಯ್ಯ
ಆ ಊರು ಈ ಊರು ನೀಡೂರು ನಿಟ್ಟೂರು ಉಪ್ರಳ್ಳಿ
ಎಲ್ಲೆಲ್ಲೂ ಹೋದ್ರು ಮಾಯಿಗೊಪ್ಪು ಸೊಸಿ ಇಲ್ಲ
ಗಂಡಿಗೊಪ್ಪು ಹೆಣ್ಣು ಇಲ್ಲ ಮತ್ತು ತಿರಗರಯ್ಯ
ಎಲ್ಲೆಲ್ಲೂ ತಿರಗೀರು

ಕುಂದಾಪ್ರದ ಹೆಣ್ಣು… ಇಂಥವರ ಮನಿ…
ಮಾಯಿಗೊಪ್ಪು ಸೊಸಿ ಆಯ್ತು ಗಂಡಿಗೊಪ್ಪು ಹೆಣ್ಣು ಆಯ್ತು
ಮನಿಗೊಪ್ಪು ನೆಂಟ್ರಾಯ್ತ… ಮಾತು ಕತಿ ಎಲ್ಲ ಆಯ್ತಯ್ಯ
ಊಟಪಾಠವೆಲ್ಲ ಆಯ್ತು… ಮದಿ ಆಯ್ತಯ್ಯ…