ಸ್ವಾಮೀಗೂ ಭೂಮಿಗೂ ಲಗ್ನಾಗಬೇಕು
ನರಮನಸ್ರ ಕಾಣದ ಹೂಗಾಗಬೇಕು
ಜಾಜಿಯ ಹೂಗ ಅಕ್ಕೇನೆ ಗಂಗೆ
ಜಾಜಿಯ ಹೂಗುಬ್ಯಾಡೆಂದಳು ಗಂಗೆ
ಸ್ವಾಮಿಗೂ ಭೂಮಿಗೂ ಲಗ್ನಾಗಬೇಕು
ನರಮನಸ್ರ ಕಾಣದ ಹೂಗಾಗಬೇಕು
ಮಲ್ಲಿಗೆ ಹೂಗ ಅಕ್ಕೇನೆ ಗಂಗೆ
ಮಲ್ಲಿಗೆ ಹೂಗ ಬ್ಯಾಡೆಂದಳು ಗಂಗೆ
ಸ್ವಾಮಿಗೂ ಭೂಮಿಗೂ ಲಗ್ನಾಗಬೇಕು
ನರಮನಸ್ರ ಕಾಣದ ಹೂಗಾಗಬೇಕು
ಸಿಂಗಾರ ಹೂಗ ಅಕ್ಕೇನೆ ಗಂಗೆ
ಸಿಂಗಾರ ಹೂಗ ಬ್ಯಾಡೆಂದಳು ಗಂಗೆ
ಸ್ವಾಮಿಗೂ ಭೂಮಿಗೂ ಲಗ್ನಾಗಬೇಕು
(ಹಿಗೆಯೇ  ಎಲ್ಲ ಹೂವಿನ ಹೆಸರನ್ನು ಹೇಳುತ್ತಾ ಹೋಗುವುದು)

ಅತ್ತಿಯ ಹೂಗೆ ಬೇಕೆಂದಳು ಗಂಗೆ
ಸ್ವಾಮೀಗೂ ಭೂಮಿಗೂ ಲಗ್ನಾಗಬೇಕು
ನರಮನಸ್ರ ಕಾಣದ ಹೂಗಾಗಬೇಕು.