ಚಪ್ಪರದ ಕಂಬ್ಹಿಡಿದು ಯಾಕಳುವೆ ಮಗಳೆ
ಬಾ ನಮ್ಮ ಸತ್ತುಗಿಯ ನೆಳಲಡ್ಡೆ ಬಾಲಮ್ಮ
ಪಟ್ಟೆ ಕೊಟ್ಟಾತ ಬಿಡುವನೇ ಬಾಲಮ್ಮ
ಇಂದ್ಹೋಗಿ ನಾಳೆ ಬರಲಕ್ಕು
ಚಪ್ಪರದ ಕಂಬ್ಹಿಡಿದು ಯಾಕಳುವೆ ಮಗಳೆ
ಬಾ ನಮ್ಮ ಸತ್ತುಗಿಯ ನೆಳಲಡ್ಡೆ ಬಾಲಮ್ಮ
ಹೊನ್ನು ಕೊಟ್ಟಾತ ಬಿಡುವನೇ ಬಾಲಮ್ಮ
ಇಂದ್ಹೋಗಿ ನಾಳೆ ಬರಲಕ್ಕು ಬಾಲಮ್ಮ
ಬಾನಮ್ಮ ಸತ್ತುಗೆಯ ನೆಳಲಡ್ಡೆ
ಆಡುಗೆ ಗೇಯ್ಟಿಯ ಕೊಡುವೆ ತೊಳಕು ಜಲ್ಲನು ಕೊಡುವೆ
ಬಾ ನಮ್ಮ ಸತ್ತುಗಿಯ ನೆಳಲಡ್ಡೆ