ಪಲ್ಲವಿ : ಮಧುರಾ ನಗರವು ಭೂ ವೈಕುಂಠವು
ಮಧುರಾಧಿಪತಿ ಯುಗ ಯುಗ ದೇವರು

ಚರಣ :  ರುಕ್ಮಿಣಿ ದೇವಿ ಜಗತಿಗೆ ಮಾತೆಯು
ಸುರಜನರೆಲ್ಲರೂ ಗೋಪಗೋಪಿಯರು

ಗಂಧರ್ವ ಯಕ್ಷರು ಪ್ರಜಾ ಮಂದಿಯು
ಸಸ್ಯ ಸಂಪದ ಅಮೃತದ ಲತೆಗಳು

ಪಶು ಪಕ್ಷಿಗಳು ಕಿನ್ನರರವರು
ನದಿಗಳು ಕೊಳಗಳು ಸುಧಾ-ಜಲವವು

ಉಸಿರಿನ ಶಬ್ದವೇ ಕೊಳಲಿನ ನಾದವು
ಮಧುರ ಭಾವಗಳೇ ಜಯದಾನಂದವು