ಪಲ್ಲವಿ : ಮನಕೆ ಮೈಗೆ ಬಂಧವಿಲ್ಲ ಕೊನೆಗೆ ಏನೂ ಉಳಿಯಲಿಲ್ಲ
ಬಂದ ದಾರಿಗೆ ಸುಂಕವಿಲ್ಲ ಕೃಷ್ಣಾ ! ಕೃಷ್ಣಾ !

ಚರಣ :  ಜನ್ಮ ಜನ್ಮ ಎತ್ತಿ ಎತ್ತಿ ಸಾಕು ಆಯಿತು
ಮತ್ತೆ ಜನ್ಮ ಇದ್ದರೆ ನಿನ್ನ ಭಜಿಸುವಂತೆ ಮಾಡು ಕೃಷ್ಣಾ !        

ಹಳೆಯ ಬಟ್ಟೆ ಕಳಚಿದಂತೆ ಹೊಸಬಟ್ಟೆ ಧರಿಸಿದಂತೆ
ಜನುಮ ಮುಗಿಸಿ ಜನುಮ ಎತ್ತಿ ಬಳಲಿಹೋದೆನು

ಹಗ್ಗ ಎಂದು ಹಾವು ತುಳಿದು ಭ್ರಾಮತಿ ಭ್ರಮೆಯಲ್ಲಿ ಬಿದ್ದು
ಬಟ್ಟಬಯಲು ಆಯಿತೆಲ್ಲ ಬುದ್ಧಿವಂತಿಗೆ ಕೃಷ್ಣಾ !

ನೀರಮೇಲೆ ಗುಳ್ಳೆಯಂತೆ ನನ್ನ ಆಸೆಯೆಲ್ಲವೂ
ಎಲ್ಲ ಒಡೆದು ಇಲ್ಲದಂತೆ ಹೋಯಿತಿನ್ನು ಕೃಷ್ಣಾ !

ಮಂಗನಂತೆ ಕುಣಿದು ಕುಣಿದು ನಿನ್ನ ಸಂಗ ತೊರೆದೆ ನಾನು
ಮಣ್ಣುತಿಂದ ಹಾಗಾಯಿತು ಬದುಕು ನನ್ನದು

ಜಯಿಸಬೇಕು ಮಾಯೆಯನ್ನ ಈಸಬೇಕು ಕಡಲನ್ನ
ಹೃದಯದೊಳಗೆ ಶ್ರೀಕೃಷ್ಣನ ಇರಿಸಬೇಕು