ಜಯಗುರು ಶಂಕರ ಜಯ ಮಂಗಳಾಕರ
ಭವದುಃಖ ಹರಿಹರ ಅಜ್ಞಾನನಾಶಕ
ಸುಜ್ಞಾನ ಬೋಧಕ ಪೂರಡವನು ಭಗ್ನವ
ಮಾಡಿ ಋಗ್ವೇದದಿ ಪ್ರಯಾಣವ ಪೇಳ್ವೆಗೆ
ಭಕ್ತರು ಬಯಸುವ ಮುಕ್ತಿಯ ತೋರುವ
ಶೃತಿಯತ್ತಿ ಅನುಭವ ಶಕ್ತಿ ಮಾಯದೊಳು
ಶಕ್ತಿಯನಳಿದು ವಿರಕ್ತಿ ನಿರಂಕುಶನೆ ತೃಪ್ತನೆ
ಶಂಕರಾನಂದನೆ ಪರಯೋಗಾವೀರನೆ
ಚಿನುಮಯಕಾರನೆ ಅಣುವು ಮೊದಲು
ಬ್ರಹ್ಮಾಂಡವ ವ್ಯಾಪಿಸಿ ಮನದಾಣೆಗೆ
ಅಗೋಚರನೆ || ಜಯಗುರು ||