ಉದಾಹರಣೆ :

1.  “ಅವನು ಮಾತನಾಡುತ್ತಿದ್ದುದನ್ನು ನೋಡಿದರೆ, ಆತ ಬಹಳ ಹೆದರಿ ಕೊಂಡಂತಿತ್ತು. ಅವನ ಧ್ವನಿ ಹೇಗೆ ನಡುಗುತ್ತಿತ್ತು ಎಂಬುದನ್ನು ಗಮನಿಸಿದಿರಾ?”

2.  “ಹೇಳಬೇಕಾದ ವಿಷಯವನ್ನು ಸ್ವಲ್ಪ ಸಮಾಧಾನವಾಗಿ ಹೇಳ್ಬೇಕು ಹೀಗೇಕೆ ಉದ್ರೇಕದಲ್ಲಿ ಕಿರುಚಾಡ್ಬೇಕು?”

3.  “ಮಾತಾಡೂಕೆ ಯಾಕೆ ಹಿಂಗೆ ತಡವರಿಸ್ತಾ ಇದ್ದೀಯೆ? ಅದೇನ್ ಹೇಳ್ಬೇಕು ಅಂತ ಇದೆಯೋ, ಅದನ್ನ ಸ್ಪಷ್ಟವಾಗಿ ಹೇಳು.”

4.  “ನೋಡಿ, ಅವರು ಎಷ್ಟು ಸಮರ್ಥವಾಗಿ ಮಾತಾಡ್ತಾರೆ. ಅವರ ಧ್ವನಿಯೇ, ಅವರ ಅಚಲ ನಿರ್ಧಾರವನ್ನು ಸೂಚಿಸುವಂತಿದೆ.”

5.  “ಅದೇನ್ರಿ ಅವನಿಗೆ ಬಂದಿರೂ ಸಂಕಟ? ಯಾವಾಗ ಏನೇ ಮಾತನಾಡುದ್ರು ಸಂಕಟ ಪಟ್ಕೊಂಡೇ ಮಾತಾಡ್ತನೆ. ಅವನ ಮಾತ್ನಲ್ಲಿ ಸ್ವಲ್ಪನಾದ್ರು ನೆಮ್ಮದಿ ಲಕ್ಷಣಾನೇ ಇಲ್ಲ.”