ಈಚೀಚೆಗೆ ನನಗೆ ಒಂದೊಂದು ಸಲ
ಅನಿಸುತ್ತದೆ :
ಮನುಷ್ಯರಿಗಿಂತ ಪ್ರಾಣಿಗಳೆ ವಾಸಿ.

ನಾಯಿಗಳು
ಮುಂದೆ ತಿಂದು
ಹಿಂದೆ ಬೊಗಳುವುದಿಲ್ಲ.

ಹುಲಿಗಳು
ಹೊಟ್ಟೆ ತುಂಬಿದ ಹೊತ್ತು
ಮತ್ತೊಂದಕ್ಕೆ ಬಾಯಿ ಹಾಕುವುದಿಲ್ಲ.

ಹಾವುಗಳು
ರೇಗಿಸಿದಾಗ ಅಲ್ಲದೆ
ಉಳಿದಂತೆ ಕಚ್ಚುವುದಿಲ್ಲ.

ಹಸುಗಳು
ಯಾವ ಪ್ರತಿಷ್ಠೆಗೂ ಪರದಾಡುವುದಿಲ್ಲ.

ಕತ್ತೆಗಳು
ನೆನಪಿಟ್ಟುಕೊಂಡು ಒದೆಯುವುದಿಲ್ಲ.