ಪಲ್ಲವಿ : ಮನೆ ಮನೆಗೆ ಹೋಗುವೆ ಮನಬಿಚ್ಚಿ ಕೂಗುವೆ
ಕೃಷ್ಣನೇ ದೇವರೆಂದು ಸಾರಿ ಸಾರಿ ಹೇಳುವೆ

ಚರಣ :  ಕಷ್ಟದಲ್ಲೂ ಕೃಷ್ಣನೇ ಸುಖದಲ್ಲೂ ಕೃಷ್ಣನೇ
ಎಲ್ಲ ಕಾಲದಲ್ಲೂ ಕೃಷ್ಣ ಕೃಷ್ಣನೇ ಅನ್ನುವೆ

ಕಳೆದ ಜನ್ಮ ಮರೆತು ಹೋಯ್ತು ಬರುವ ಜನುಮ ಗೊತ್ತಿಲ್ಲ
ಹುಟ್ಟು-ಸಾವು ಗುಟ್ಟನರಿಯೆ ಕೃಷ್ಣನೇ ಗತಿ ನಮಗೆ

ತಂದೆ ತಾಯಿ ನೀನೇ ಎಂದೆ ಬಂಧು ಬಳಗ ನೀನೇ ಎಂದೆ
ಸ್ನೇಹ ಸಖನು ನೀನೇ ಎಂದೆ ತನು ಮನದಲಿ ನೀನೇ ಎಂದೆ

ಕೈ ಜೋಡಿಸಿ ದನಿಗೂಡಿಸಿ ಕೃಷ್ಣನಿಗೆ ಜಯವೆನ್ನಿ
ಮನೆ ಮನೆಯಲಿ ಕೃಷ್ಣನಾಮ ಹಾಡೋಣ ಬನ್ನಿ