ಗಂಡಗಂಜಿ ಬದುಕು ಮಾಡಮ್ಮ
ಮುತ್ತೈದೆತನವ
ಕಳಕೋ ಬೇಡ ತಿಳಿಯೋ ತಂಗಮ್ಮಾ
ಗಂಡ ಬಂದನಾದ ಮೇಲೆ
ಬಂದು ಮಾತುಗಳಾಡಿಕೊಂಡು
ಊರು ಹೊರಗೆ ಹೋಗಿ ನೀನು
ಬಹಳ ದಿವಸ ಬಾಳಮ್ಮಾ  || ಗಂಡಗಂಜಿ ||

ಮನೆ ಮನೆ ತಿರುಗಬೇಡಮ್ಮ
ಮನೆ ಮುಂದೆ ಇರುವ ಕಸವ ತೆಗೆದು
ಹಸನ ಮಾಡಮ್ಮಾ
ಮನೆ ಮನೆ ತಿರುಗಬೇಡ
ಮಾನಗೇಡಿ ಆಗಬೇಡ ಇಂತ
ಜ್ಞಾನವಂತರ ಸೇವೆ ಮಾಡಿ
ಜ್ಞಾನವನ್ನು ಪಡೆಯೋ ತಂಗಮ್ಮಾ  || ಗಂಡಗಂಜಿ ||

ಅತ್ತೆ ಮಾವನ ಸೇವೆ ಮಾಡಮ್ಮ
ಕೇಳಮ್ಮ ಕೇಳು ನಿತ್ಯ ಆಶೀರ್ವಾದ ಪಡೆಯಮ್ಮ
ಭಾವಮೈದನಿಗೆ ಅಂಜಿ ನೀನು
ಭಾವದೊಳು ಪರಿಶುದ್ಧಳಾಗಿ
ಈ ಠಾವು ಹಾ ಹೋದ ಮೇಲೆ ಈ ಠಾವು
ನಿನಗೆ ಸಿಕ್ಕದಮ್ಮಾ         || ಗಂಡಗಂಜಿ ||

ಎಷ್ಟ ಜನ್ಮವೆತ್ತಿ ಬಂದಮ್ಮಾ
ಈ ಲೋಕದೊಳಗೆ ಬಯಕೆಯೆಲ್ಲಾ
ತೀರಿಸಿಕೊಂಡಮ್ಮಾ
ಈ ಭವ ಕಡಲ ದಾಟಿ ನೀನು
ಭವ ಹರನ ಪೂಜೆ ಮಾಡಿ
ಈ ಪಾದವನ್ನು ಬಿಟ್ಟು ಗುರುವಿನ
ಪಾದವನ್ನು ಸೇರಿ ತಂಗಮ್ಮಾ       || ಗಂಡಗಂಜಿ ||