ಅನುಬಂಧ

ಸಾಂಸ್ಕೃತಿಕ ಪದಕೋಶ

೧. ಬಳಿಗೆ ತುಳುವಿನಲ್ಲಿ “ಬರಿ” ಎಂದು ಕರೆಯುತ್ತಾರೆ.

೨. ಮದಿಮಾಲ್ = ಮದುಮಗಳು, ಋತುಮತಿಯಾದ ಹೆಣ್ಣನ್ನು ಮದಿಮಾಳ್ ಎಂದು ಕರೆಯುತ್ತಾರೆ. ಋತುಮತಿಯಾಗುವುದನ್ನು “ಮದಿಮಲಾಪಿನಿ” ಎನ್ನುತ್ತಾರೆ.

೩. ಮದ್ಮೆ = ಮದುವೆ

೪. ಮುಡಿ = ಭತ್ತ ಅಥವಾ ಅಕ್ಕಿಯನ್ನು ರಕ್ಷಿಸಿಡಲು ತುಳುನಾಡಿನಲ್ಲಿ ಬೈಹುಲ್ಲಿನಲ್ಲಿ ಕಟ್ಟುವ ವೇತ್ತಾಕಾರದ ಗಂಟು ಮುಡಿ

೫. ಗುರಿಕಾರ = ಸಮುದಾಯದ ಯಜಮಾನ ಅಥವಾ ನಾಯಕ

೬. ಮುಗಾಯಿ = ಸ್ನಾನ ಮಾಡುವಾಗ ನೀರು ಒಯ್ಯಲು ಬಳಸುವ ಸಾಧನ (ಮಗ್)

೭. ತೆರಿಯ = ಬಟ್ಟೆ ಅಥವಾ ಬೈಹುಲ್ಲಿನಿಂದ ಮಾಡಿದ ಸಿಂಬಿ

೮. ದುಡಿ =ಕಿಣಿತದ ಸಂದರ್ಭಗಳಲ್ಲಿ ಮನ್ಸರು ಬಳಸುವ ಚರ್ಮವಾದ್ಯ

೯. ಪಿಲೆ = ಕೆಟ್ಟ, ಅನಿಷ್ಟದ

೧೦. ಅಪ್ಪ= ಅಕ್ಕಿಯಿಂದ ಬೆಲ್ಲ ಹಾಕಿ ಮಾಡುವ ವಿಶೇಷ ರೀತಿಯ ತಿಂಡಿ. ದೇವರಿಗೆ ನೈವೇದ್ಯದ ರೀತಿಯಲ್ಲಿ ಮಾಡುತ್ತಾರೆ.

೧೧. ಅಮೆ = ತುಳುವಿನಲ್ಲಿ ಸೂತಕಕ್ಕೆ ಪರ್ಯಾಯವಾಗಿ ಬಳಸುವ ಪದ.

೧೨. ಉಳಯಿ ಲೆಪ್ಪುನು = ಒಳಗೆ ಕರೆಯವುದು ಎಂದರ್ಥ. ಅಂದರೆ ಕುಟುಂಬದಲ್ಲಿ ಸತ್ತವರೊಂದಿಗೆ ಸೇರಿಸುವುದು ಎಂದರ್ಥ.

 

ಅನುಬಂಧ

ಪರಾಮರ್ಶನ ಗ್ರಂಥಗಳು

೧. ಅಭಯಕುಮಾರ್ (ಡಾ.), ೧೯೯೭; ಮುಗೇರ ಜನಾಂಗ ಜಾನಪದ ಅಧ್ಯಯನ, ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿ, ಮಂಗಳೂರು

೨. ಪ್ರೊ. ಎಚ್. ಕೆ. ಲಕ್ಕಪ್ಪ ಗೌಡ, ೧೯೯೮; ಕರ್ನಾಟಕ ಬುಡಕಟ್ಟುಗಳು (ಸಂಪುಟ-೧), ಕರ್ನಾಟಕ ಜಾನಪದ ಮತ್ತು ಯಕ್ಷಗಾನ ಅಕಾಡೆಮಿ, ಬೆಂಗಳೂರು

೩. ಕಮಲಾಕ್ಷ ಪಿ., ೧೯೯೪; ದ.ಕ. ಜಿಲ್ಲೆ ಹರಿಜನ ಗಿರಿಜನ ಇತಿಹಾಸ, ಕನ್ನಡ ಪುಸ್ತಕ ಪ್ರಾಧಿಕಾರ, ಬೆಂಗಳೂರು

ಕೊನೆ ಟಿಪ್ಪಣಿ

೧. ಅತ್ತೆ ಸೊಸೆ ಸಂಬಂಧ- ಒಂದು ಬಳಿಯ ಐತಿಹ್ಯ- ಮೂರು ಬಂಗುಡೆ ಆರು ತುಂಡು? ಈ ಕಥೆಯನ್ನು ಕರ್ನಾಟಕ ಬುಡಕಟ್ಟು ಅಧ್ಯಯನ- ೦೧ ಪುಸ್ತಕದ ಡಾ|| ವಾಮನ ನಂದಾವರ ಅವರ “ಮನ್ಸರು” ಎಂಬ ಲೇಖನದಿಂದ ಪಡೆಯಲಾಗಿದೆ.

 

ಅನುಬಂಧ

ವಕ್ತೃಗಳ ವಿಳಾಸ

೧. ಹೆಸರು : ವಿಮಲಾ ಕೆ.
ಪ್ರಾಯ : ೫೦ ವರ್ಷ
ವೃತ್ತಿ : ಶಿಕ್ಷಕಿ
ವಿಳಾಸ : ಕೆಮ್ಮಣ್ಣು, ದರಖಾಸ್ತು ಮನೆ, ನಿಟ್ಟೆ, ಕಾರ್ಕಳ ತಾಲೂಕು

೨. ಹೆಸರು : ಮೋಂಟು
ಪ್ರಾಯ : ಸುಮಾರು ೭೦ ವರ್ಷ
ವೃತ್ತಿ : ಸೂಲಗಿತ್ತಿ, ಕೃಷಿ ಕೆಲಸ
ವಿಳಾಸ : ದೇವರಾಜು ಅರಸು ನಗರ, ಪೆಂಚಾರು, ಮೂಡಬಿದರೆ, ಮಂಗಳೂರು ತಾಲೂಕು

೩. ಹೆಸರು : ನರ್ಸಿ
ಪ್ರಾಯ : ಸುಮಾರು ೬೦ ವರ್ಷ
ವೃತ್ತಿ : ಕಾರ್ಮಿಕರು
ವಿಳಾಸ : ಕೆಮ್ಮಣ್ಣು, ನಿಟ್ಟೆ, ಕಾರ್ಕಳ ತಾಲೂಕು

೪. ಹೆಸರು : ಸುರೇಖ
ಪ್ರಾಯ : ೩೩ ವರ್ಷ
ವೃತ್ತಿ : ಉಪನ್ಯಾಸಕಿ
ವಿಳಾಸ : ಶ್ರೀ ನಿರಂಜನ ಸ್ವಾಮಿ ಸುಂಕದಕಟ್ಟೆ, ಮಂಗಳೂರು

೫. ಹೆಸರು : ಪಿ. ಡೀಕಯ್ಯ
ಪ್ರಾಯ : ೪೦ ವರ್ಷ
ವೃತ್ತಿ : ಸರ್ಕಾರಿ ಉದ್ಯೋಗ
ವಿಳಾಸ : ನಾಗಮಲೆ, ಬೆಳ್ತಂಗಡಿ

೬. ಹೆಸರು : ನೋಣಯ್ಯ
ಪ್ರಾಯ : ೨೫ ವರ್ಷ
ವೃತ್ತಿ : ಹೋಟೆಲ್ ಕೆಲಸ
ವಿಳಾಸ : ದರೆಗುಡ್ಡೆ ಅಂಚೆ, ಮೂಡಬಿದಿರೆ