ಅಡವಿವಾಸನತಂದೆನಿಮ್ಮಡಿಹುಡುಕುತನಾಬಂದೆ ||ಪ||
ಶರಣರಂಶಕೇಳೊನಾನಿಮ್ಮಚರಣರಕ್ಷಿಧೂಳೊ
ಚರಣಕೆರಗಿದೆನೆಳೊಉತ್ಸವಪೂರ್ಣಮನಸಿನೊಳು
ಕರುಣಿಸುಕೃಪಾಳುಅಂತಃಕರಣದೃಷ್ಟಿಯೊಳೂ |1||
ಕಾಲಭಯವಬಿಡಿಸೊಗುರುಕಳಕೀಲಮೂಲವತಿಳಿಸೊ
ಮೆಲುಮನಸುನಿಲಿಸೊನಿಜಸುಕಲೀಲಾಮೃತಉಣಿಸೊ
ಬಾಲನಿಗುದ್ಧರಿಸೊಭವದುಃಖಮಾಲೆಯಪರಿಹರಿಸೊ ||2||
ನಿಮ್ಮದುಈಕಾಯಸಂಸಾರ| ಸುಮ್ಮನೆಮೇಲಿಛಾಯ
ಹಮ್ಮಿಲ್ಲಗುರುರಾಯಅರಿಕಿನಿಮ್ಮೊಳಗಿನ್ಯಾಯ
ವಮ್ಮನಾದಪರಿಯವರಪರಬ್ರಹ್ಮಸಿದ್ಧಅರಿಯಾ ||3||
ಅನ್ಯರಾತ್ಮದನೋವಯನ್ನಿಂದಕೊಳದಿರು
ನಿನ್ನವನೆನಿಸಿರ್ದಫಲವೇನುಗುರುವೆ
ಯನ್ನಾತ್ಮದನೋವಗಳುಚೆನ್ನಾಗಿಕೊಳಲವರು
ನಿನ್ನಪಾದದಧ್ಯಾನಘಟಿಸುವದರಿಂದ ||ಪ||
ಕೊಡುಕೊಳುವಠಾವಿನಲಿನುಡಿಬದಲಬೀಳದಲಿ
ಬಡವರಿಗನ್ನವಸ್ತ್ರಕುಡುವಸಮಯದಲಿ
ತಡಿಯದೆಬಂಧೆನ್ನಒಡಗೂಡಿಅವರಿಗೆ
ಕುಡುಸುಖವುಸಕಲಸಂಪತ್ತಿನಮುಖದಿಂದ ||1||
ಯತ್ತಕಾಣದೆಯನ್ನಸುತ್ತಸುಳಿಹುವರೆಲ್ಲ
ವತ್ತಿನೋಯಿಸಲಿಮನವುತೊತ್ತಾಗಿಯಿರುವೆ
ಮತ್ತೇನುನುಡಿಯದೆಚಿತ್ತನಿಮ್ಮಡಿಯಲ್ಲಿ
ಯಿತ್ತುಭಜಿಸುವೆವ್ಯಾಳ್ಯಹೊತ್ತುಯಂದರಿದೆ ||2||
ಅಘತಿಮಿರಹರಿಸಲ್ಕೆಯುಗಯುಗದಿಬರಲವರು
ಬಗೆಬಗೆತರದಿಂದನಿಂದಮಾಡುತಲಿ
ಜಗದೊಡೆಯಗುರುಶಿದ್ಧನಿಗಮಗೋಚರನಿನ್ನ
ಮಗನಾಗಿಬಾಳುವೆನುಮಹಗ್ನಾನದಿಂದ ||3||
ಅನ್ಯರ ನಡೆ ನುಡಿ ಆರಿಸುವವರು
ಅನ್ಯರ ನಡೆ ನುಡಿ ಆರಿಸುವವರು
ಅನಂತರುಂಟು ಜಗದಲ್ಲಿ
ತನ್ನ ನಡಿಗೆ ತಾ ಶಿಕ್ಷವ ಮಾಡಿ
ಚಿನ್ಮಯನೊಲಿಸುವರ್ಯಾರಿಲ್ಲಿ ||ಪ||
ತಮ್ಮ ಪೌರುಷವು ತಾವೇ ಪೇಳುವರು
ಅನಂತರುಂಟು ಜಗದಲ್ಲಿ
ಬ್ರಹ್ಮಜ್ಞಾನ ಸಂಪೂರ್ಣ ಧ್ಯೇಯದ
ಹಮ್ಮಳಿದವರ್ಯಾರಿಲ್ಲಿ? ||1||
ವೇದ ಆಗಮ ಶಾಸ್ತ್ರ ಪುರಾಣ
ಓದುವರುಂಟು ಜಗದಲ್ಲಿ
ಸಾಧಿಸಿ ಸದ್ಗುರು ಬೋಧಾಮೃತ ರಸ
ಸದಕಂಥವರ್ಯಾರಿಲ್ಲಿ ||2||
ನೀರಿನ ಕ್ರೀಯ ನಿತ್ಯ ನೇಮ ಜಪ
ಮಾಡುವರುಂಟು ಜಗದಲ್ಲಿ
ವೀರಶೈವ ಸುವಿಚಾರ ಮಾರ್ಗ
ಹಿಡಿದಾಚರಿಸುವರ್ಯಾರಿಲ್ಲಿ ||3||
ಭಕ್ತಿ ಜ್ಞಾನ ವೈರಾಗ್ಯ ಹೇಳುವರು
ಅನಂತರುಂಟು ಜಗದಲ್ಲಿ
ಮುಕ್ತಿ ಪುರುಷ ವಿರಕ್ತನ ಸಂಗ
ಸಮರಸ ಮಾಡುವರ್ಯಾರಿಲ್ಲಿ ||4||
ಸಿದ್ಧ ಶುದ್ಧ ಪ್ರಸಿದ್ಧ ನಾಮವ
ಭಜಿಸುವರುಂಟು ಜಗದಲ್ಲಿ
ಮುದ್ದುಬಸವ ಗುರುಸಿದ್ಧನ
ಸಂಗದೊಳಿದ್ದಂಥವರು ಯಾರಿಲ್ಲಿ ||5||
ಅಂಜದಿರಂಜದಿರಂಜದಿರು ಗುರು
ಸಂಜಿವ ಸಿದ್ಧನ ಮರಿಯದಿರು
ಗುಂಜಿ ಬಿಟ್ಟು ಮುಕ್ಹಾಕದಿರು ಹುರಿದ
ಗಂಜಿ ದೇಹಕ ಬಿಗಿ ಆದೆ ಕುರು ||ಪ||
ಹರನಿಂದಾದುದು ಇದುಯೆಲ್ಲ ಈ ನರರಿಂದಾಗುದೇನಿಲ್ಲ
ಗುರುವಿನ ಮಗ ತಾ ಇದು ಬಲ್ಲ ಶ್ರೀಗುರುವಿನ ಹೊರತು ಇನ್ನೊಬ್ಬಿಲ್ಲ ||ಅ.ಪ||
ಕಾಯವ ಕೊಲ್ಲುವ ದೇವನೆಯಲ್ಲ
ಸಾಯ ಮಾಡವರಿನ್ಯಾರಿಲ್ಲ
ಆಯಸ ಬಡಿಸುವ ನ್ಯಾಯದಿಂದ ಗುರು
ಪಾಯಸ ಉಣಿಸುವ ಮುಂದೆಲ್ಲ ||1||
ದೇಹಕ ಸುಖ ದುಃಖ ಎರಡುಂಟು
ಸಂದೇಹವೇಕೊ ನಿನಗಿನಿತಿಷ್ಟು
ಮಾಯ ಮರ್ದನ ಹಾಕಿದ ಗಂಟು ಗುರು
ರಾಯ ಸಿದ್ಧನ ನೆನಿ ಸುಖವುಂಟು ||2||
ಆಸಿ ಅಳಿದು ಪರದೇಶಿ ತಾನಾದ ಮೇಲಿನ್ನೆನಿನ್ನೇನೂ
ರಾಸಿ ದೈವದ ಗಂಡ ಈಶನೊಳಗಾದ ಮೇಲಿನ್ನೆನನ್ನೇನೂ ||ಪ||
ಮೀಸಲ ನುಡಿಗಳು ಏಸು ಬಸಳಿದರೇನು ಇನ್ನೇನಿನ್ನೇನೂ
ಕೂಸಿನಂದದಿ ಮನ ಉಲ್ಲಾಸದೊಳಿರ್ದ ಮೇಲಿನ್ನೇನಿನ್ನೇನೂ ||1||
ಕೊಡುವ ಕೊಳುವ ಸಂಸಾರ| ಬಿಡಗಡಿಯಾದ ಮೇಲಿನ್ನೇನಿನ್ನೇನೂ
ಬಡ ಮನವಳಿದೊಂದೆ ದ್ರಿಢವಾಗಿ ನಿಂತ ಮೇಲಿನ್ನೇನಿನ್ನೇನೂ ||2||
ಭಕ್ತಿ ಮಾರ್ಗದೊಳು ವಿರಕ್ತಿ ತಾನಾದ ಮೇಲಿನ್ನೇನಿನ್ನೇನೂ
ಯುಕ್ತಿ ವಿವೇಕ ಜ್ಞಾನ ಮುಕ್ತಿಗ್ಹೊಂದಿದ ಮೇಲ ಇನ್ನೇನಿನ್ನೇನೂ ||3||
ವಳ ಹೊರಗೊಂದಾಗಿ| ಝಳ ಝಳಯಿರ್ದ ಮೇಲ ಇನ್ನೇನಿನ್ನೇನೂ
ಬಳಗ ಶಿವಶರಣರ ವಳಗ ಕೂಡಿದ ಮೇಲ ಇನ್ನೇನಿನ್ನೇನೂ ||4||
ಅರಿವು ಹಿಡಿದು ಆಚರಿಸುತಲಿರ್ದ ಮೇಲ ಇನ್ನೇನಿನ್ನೇನೂ
ಗುರುವು ಸಿದ್ಧೇಶ್ವರನ ಗೋಪ್ಯದೊಳಾದ ಮೇಲ ಇನ್ನೇನಿನ್ನೇನೂ ||5||
ಅಲಕ್ ನಿರಂಜನ ವೊಯಿ ಫಕೀರ
ಸಬ್ ದುನಿಯಾ ಹೈ ಮಾಯಾ ಪೀರ
ಅಲ್ಲಾ ಸಾಹೇಬ ವೊಯಿ ಸರಕಾರ
ಸಬ್ ದುನಿಯಾ ಹೈ ಪೇಟ ಚಾಕರ ||ಪ||
ಸಬ್ ದುನಿಯಾ ಕೊ ಪಾಲನೆ ವಾಲ
ಪಾಂಡರಂಗ ಪಂತ ಮೊಯಿ ಅಖೆಲಾ ||1||
ಬ್ರಹ್ಮ ಏಕ ಹೈ ಧಪತರವಾಲ
ಹಿಸಾಬ ಕಿತಾಬ ಲಿಖನೆವಾಲ ||2||
ಪುನ್ಯ ಪಾಪ ವೊ ತೋಲನೆವಾಲ
ಯಮದೂತ ಹೈ ಶಿವಾಯ ಚೆಲ ||3||
ಅಲ್ಲಾ ಕರೆಸೊ ಸಬ ಹೊತ ಹೈ
ಆದ್ಮಿ ಭಡವ ಕ್ಯಾ ಕರತಾ ಹೈ ||4||
ಜೋ ಕರೆಸೊ ದೇವ ಏಕ ನ್ಯಾರ
ಹುಕುಮ ಶಿವಾಯ ಕೊಯಿ ಕರನೆ ಹಾರ
ಸಿದ್ಧ ಅಲ್ಲ ಸಾಹೇಬ ಮೇರ
ಕದೀಮ ದಾತ ಜೀತಾ ಪೀರ ||5||
ಅನ್ಯರ ನಡಿ ನುಡಿ ಆರಿಸುವವರು ಅನಂತರುಂಟು ಜಗದಲ್ಲಿ
ತನ್ನ ನಡಿಗೆ ತಾ ಶಿಕ್ಷವ ಮಾಡಿ ಚಿನ್ಮಯ ನೊಲಿಸುವರ್ಯಾರಲ್ಲಿ ||ಪ||
ತಮ್ಮ ಪೌರುಷ ತಾವೆ ಪೇಳ್ವರನಂತರುಂಟು ಜಗದಲ್ಲಿ
ಬ್ರಹ್ಮಜ್ಞಾನ ಸಂಪೂರ್ಣ ದೇಹದ ಹಮ್ಮಳಿದುಳೀದವರ್ಯಾರಲ್ಲಿ ||1||
ವೇದ ಆಗಮ ಶಾಸ್ತ್ರ ಪುರಾಣ ಓದಿದವರುಂಟು ಜಗದಲ್ಲಿ
ಸಾಧಿಸಿ ಸದ್ಗುರು ಬೋಧಾಮೃತರಸ ಸ್ವಾದ ಕೊಂಬವರ್ಯಾರಲ್ಲಿ ||2||
ನೀರಿನ ಕ್ರಿಯೆ ನಿತ್ಯನೇಮ ಜಪ ಮಾಡುವರುಂಟು ಜಗದಲ್ಲಿ
ವೀರಶೈವ ಸುವಿಚಾರ ಮಾರ್ಗ ಹಿಡಿದಾಚರಿಸುವಂತವರ್ಯಾರಲ್ಲಿ ||3||
ಭಕ್ತಿ ಜ್ಞಾನ ವೈರಾಗ್ಯ ಹೇಳುವರನಂತ ರುಂಟು ಜಗದಲ್ಲಿ
ಮುಕ್ತಿ ಪುರುಷ ವಿರಕ್ತನ ಸಂಗ ಸಮರಸ ಮಾಡವರ್ಯಾರಲ್ಲಿ ||4||
ಶಿದ್ಧ ಶುದ್ಧ ಪ್ರಸಿದ್ಧನ ನಾಮ ಭಜಿಸುವರುಂಟು ಜಗದಲ್ಲಿ
ಮುದ್ದು ಬಸವ ಗುರುಸಿದ್ಧನ ಸೇವದೊಳಿದ್ದಂತಿರುವವರ್ಯಾರಲ್ಲಿ ||5||
ಅಲ್ಲಹುದು ಮಾಡಿ ಬಿಟ್ಟಯಿಂತದು ಯಲ್ಲಿ ನಾ ಕಾಣಲಿಲ್ಲಾ
ಅಲ್ಲಮಪ್ರಭು ಸಿದ್ಧ ಅಲ್ಲದಾಟವನಾಡಿ ಬಲ್ಲಿದವನೆನಸಿಕೊಂಡ ||ಪ||
ಬಸವನ ಹೆಸರಿನಲ್ಲಿ ಹುಸಿ ಕಳವು ಹಾದರವ ತಾ ಮಾಡಿದ
ದಶದಿಕ್ಕಿನೊಳು ಜನರು ಹುಸಿಯೆಂದು ಕೂಗುವರು ಹಸಿಬಿಸಿ ನುಡಿಗಳಿಂದ
ಕುಲಗೇಡಿ ತಾ ಮೊದಲಿಗೆ ನೆಲಿಬುಡ ಕೊನಿಯಿಲ್ಲ ಯಾವಲ್ಲಿಯೂ
ಬಲವಿಲ್ಲ ವಬ್ಬರದು ಹಿಡಿದು ಹಟವು ಬಿಡಲರಿಯ ಛಲದಂಕನೆನಸಿಕೊಂಡಾ
ಮೂರು ಲೋಕಕ ಮೀರಿದ ಗುರುಸಿದ್ಧ ತೋರಿದನು ಮಹಿಮಾತ್ಮಿಯ
ಧೀರ ಬಸವಗ ಭಕ್ತಿ ಪುರ ಅಳವಡಿಸಿದನು ತೋರಿದನು ನಿಜ ಮುಕ್ತಿಯಾ ||1||
ಅಂತರಂಗವ ತಿಳಿಯಲಿಲ್ಲ ಸಾಧು ಸಂತರೆಂಬೊ
ಅಂತರಂಗವು ತಿಳಿಯದೆ ನೇನೆಂತು ಭಕ್ತಿ ಮಾಳ್ಪಿ ತಮ್ಮ
ಕಂತುಹರನ ಶರಣರಾವಗ ಸಂತೋಷದಲ್ಲಿ ಇರುತಿಹರು ||ಪ||
ಚಂಚಲ ಮನವು ಚಾಷ್ಟೆ ಮಾಳ್ಪದು ಪ್ರಾ
ಪಂಚವೆಂಬ ವಂಚನೆ ಬುದ್ಧಿ ಬೆಳಗು ತೊರದು
ಕಿಂಚಿತ ಭೋಗ ಭಾಗ್ಯವಿದನು ಸಂಚಿತ ಪ್ರಾರಬ್ಧಗಮಿಯನಿಸಿ
ಪಂಚಾಕ್ಷರಿಯಂಬ ಮಂತ್ರ ಪಂಚಕಲಶ ಹೂಡಹೋಗಿ ||1||
ಸುಟ್ಟು ಸರವಿ ಬಿಗಿದು ಕಟ್ಟುವರೆ ಜ್ಞಾನಗ್ನಿ ಭಸಿತ
ಮುಟ್ಟಿ ಹಸ್ತದಿ ಧರಿಸಿಕೊಂಬರೆ ಕೊಟ್ಟವಾಕ್ಯ ತಪ್ಪದಂತೆ
ದೃಷ್ಟಿ ಲಿಂಗದಲ್ಲಿಟ್ಟು ತಟ್ಟು ಮುಟ್ಟು ಎಂಬ ಸಂಶ
ಹುಟ್ಟು ಅಳಿದುಳಿದಂತೆ ಶರಣ ||2||
ಅರಿಗೆ ಗುರುವು ಶಿದ್ಧಲಿಂಗನು ಮಾಯಮರವಿಹಿರಿವ
ಭರದಿ ಭಕ್ತರ ಮನಿಗೆ ಬರುವನು ಕುರುಹು ತೋರಿಸಿಕೊಟ್ಟು ತನ್ನ
ಕರವು ಶಿರದ ಮೇಲಿಟ್ಟು ಸ್ಥಿರಕಾಲ ಬಾಳು ಮಗನೆಯಂದು
ಪರಮು ಹರುಷ ಕುಡುವ ಯೋಗಿ ||3||
ಅನಾದಿಯಿರುವನು ಅಡವಿಯಲ್ಲಿ| ಶಿವ ಅನುಭವದ ಮಂಟಪದಲ್ಲಿ
ಘನ ಸುಖ ಅನುದಿನ ಮನದಲ್ಲಿ ತನ್ನನೆನವು ನಿಷ್ಪತ್ತಿ ಆದಲ್ಲಿ ||ಪ||
ದೇಹ ಭಾವ ಅಳಿದುಳಿಯಲ್ಲಿ| ಗುರುರಾಯನ ಸೇವಕನಾದಲ್ಲಿ
ಮಾಯ ಮೋಹ ಬಿಟ್ಹೊದಲ್ಲಿ| ನಿರ್ದೇಹಿ ದಾಸೋಹ ಸ್ಥಲದಲ್ಲಿ ||1||
ತಾನೆ ತಾನಾಗಿರ್ದದಲ್ಲಿ ಮಹಜ್ಞಾನ ಆನಂದ ಸ್ಥಲದಲ್ಲಿ
ಖೂನ ಇಡುವದಿನ್ಯಾವಲ್ಲಿ ಸುಟ್ಟು ದಹನವಾದಿತು ಬೂದಿ ಮೈಯಲ್ಲಿ ||2||
ವೈರಾಗ್ಯದ ಬಲಯಿದ್ದಲ್ಲಿ ಮಾಯ ಸೇರದು ಮೀರಿದ ಸ್ಥಲದಲ್ಲಿ
ಧೀರ ಬಸವ ಸಿದ್ಧನ ಬಲ್ಲಿ ಆಶಿ ತೊರದು ತನುಮನಧನದಲ್ಲಿ ||3||
ಇದ್ದರೆ ಬ್ಯಾಗ ಕಣ್ತೆರಿಯೊ ಯಿಲ್ಲದಿದ್ದರ ನೀಯನ್ನ ಮರಿಯೊ
ಸಿದ್ಧ ಶಿವಭಕ್ತ ಮನ ಶುದ್ಧ ಮಾಡೋಯನ್ನ
ಮುದ್ದು ಮೂರ್ಲೋಕ ಪ್ರಸಿದ್ಧ ಶರಣಬಸವ ||ಪ||
ಅಂತರಂಗದ ಸಾಕ್ಷಿಮಾತು ಕೇಳಿ| ಅಂತ ಬಂದೆನು ಮನಸೋತು
ಕಂತುಹರನ ಅಂತಃಕರುಣದಿಂದಲಿ ಯನ್ನ
ಚಿಂತಿ ಬಿಡಿಸು ಬಹುಶಾಂತ ಶರಣಬಸವ ||1||
ಆರು ಕಾಣದ ಪರದೇಶಿ ಗೊತ್ತು| ತೋರಿಸು ಬಂದೆನ್ಹಾರೈಸಿ
ದಾರಿ ತೊರದು ವಶ ಮೀರಿ ಬಂದಿತು ಯನ್ನ
ಸೇರಿಸು ದಡಿಗೊಯಿದು ವೀರ ಶರಣಬಸವ ||2||
ಕೀರ್ತಿ ಬಂದಿತು ಜಗದೊಳಗೆ ಅಪ| ಕೀರ್ತಿ ತಕ್ಕೊ ಬ್ಯಾಡ ನಿನಗೆ
ಸಾರ್ತಕ ಮಾಡೊ ಮನಪೂರ್ತಿಯಿದರೊಳು ಪೊಕ್ಕು
ಮೂರ್ತಿ ಶ್ರೀಗುರು ಶಿದ್ಧೇಕಾರ್ತ ಶರಣಬಸವ ||3||
ಇಷ್ಟ್ಯಾಕೊ ನಿನ ಗತಿಯಾಸಿ ಘೋರ
ಯೆಷ್ಟು ಮಾಡಿಕೊಂಡಿ ಮಾಯ ಪಾಶಿ
ದೃಷ್ಟಿ ಮಾರ್ಗ ಬಡು ಪ್ರಾಣ ಫಾಸಿ ಜ್ಞಾನ
ದೃಷ್ಟಿಯಿಟ್ಟು ನೋಡು ನಿನ್ನ ಮನ ಸೋಸಿ ||ಪ||
ಸತ್ತು ಹೋದ ಮೇಲ ದೊರಿವದೆನು ವಂದು
ಗೊತ್ತು ಮಾಡಿಕೊ ಯಿರುವಾಗ ನೀನು
ಮಿತ್ಯ ಸಂಸಾರ ದುಃಖ ಫಲವಿಲ್ಲೇನು ಜನ್ಮ
ಯತ್ತಿ ಬಾರದಂತ ಹಾದಿ ಹಿಡಕೊ ನೀನೂ ||1||
ನರಜನ್ಮಕ ಹಿರಿದು ಜನ್ಮುಯಿಲ್ಲ ಈಗ
ದೊರಕಿಸಿಕೊಳ್ಳೊ ಮುಂದ ಸಿಗವೊದಿಲ್ಲ
ಗುರು ಹಿರಿಯರ ಸೇವೆ ಮಾಡೊದೆಲ್ಲ ಮುಕ್ತಿ
ದೊರಕುವ ಪಥ ಕೊಳು ಸೊಲ್ಲ ||2||
ಶರಣರ ಸೇವಕ ನೀನಾಗಿ ಗುರು
ಚರಣಕ ತನು ಮನ ಶಿರ ಬಾಗಿ
ಕರುಣಿ ಸಿದ್ಧನೊಲಿಸೆಲ್ಲೆ ಬೇಗಿ ಮುಕ್ತಿ
ದೊರಕುವ ದಾವಗ ಭವ ನೀಗಿ ||3||
ಇಟ್ಟಂಗಿರಬೇಕು ಸದ್ಗುರು ಕೊಟ್ಟ ಗುಣ ಬೇಕು
ನಿಷ್ಟೆಯಿಂದ ನಿಜ ತತ್ವವ ತಿಳಿದು ಹುಟ್ಟಿ ಹುಟ್ಟದ್ಹಾಂಗಿರಬೇಕು ||ಪ||
ಬಂದದ್ದುಣಬೇಕು ಹಿಂದಿನ ಕರ್ಮ ತೊಳಿಯಬೇಕು
ಮುಂದ ತಿಳಿಯಬೇಕು ಮೂರನು ಕೊಂದು ಉಳಿಯಬೇಕು
ಸಂದೇಹವಿಲ್ಲದೆ ಶಿದ್ಧನ ಭಜಿಸುತ ಆನಂದದೊಳಿರಬೇಕು ||1||
ಮೀಸಲ ನುಡಿಬೇಕು ದೇಹದ ವಾಸನ ಬಿಡು ಬೇಕು
ಆಸಿಯ ಕಡಿಬೇಕು ಮನ ಪರದೇಶಿ ಮಾಡಬೇಕು
ಈಶ ಶಿದ್ಧ ಪರಮೇಶನ ಭಜನಿ ಉಲ್ಲಾಸದೊಳಿರಬೇಕು ||2||
ಚಿಂತಿಯ ಮರಿಬೇಕು ತಾನಿಸ್ಚಿಂತಿಯೊಳಿರು ಬೇಕು
ಭ್ರಾಂತಿಯನಳಿಬೇಕು ಬಹುಸುಖ ಶಾಂತಿಯೊಳಿರುಬೇಕು ಮ
ಹಂತ ಸಿದ್ಧನ ಮರಿಯದ ಅನುದಿನ ಅಂತರಂಗದೊಳಗಿರಬೇಕು ||3||
ಇದ್ದು ಇಲ್ಲೆನಬೇಡಿರಣ್ಣ ಗುರು ಶಿದ್ಧಲಿಂಗನ ಬಾಕಿ ಕುಡತಕ್ಕದ್ದಣ್ಣ
ಬುದ್ಧಿವಂತರು ತಿಳಿವೊದಣ್ಣ ಸಕಲ ಉದ್ಯೋಗ ವ್ಯಾಪಾರ
ಅವನಿಂದಾದಣ್ಣ ||ಪ||
ಧನ ಧಾನ್ಯ ನಿಮ್ಮದಲ್ಲಣ್ಣ ಕೆಟ್ಟ
ದಿನ ಕಾಲ ಒದಗಿದವು ತಂದ ಮುಕ್ಕಣ್ಣ
ಘನ ಮಹಿಮ ಚನ್ನಬಸವಣ್ಣ ಬಕ್ತಿ
ವಿನಹ ಎಂದಿಗಿ ಮುಕ್ತಿ ಕುಡುವೊದಿಲ್ಲಣ್ಣ ||1||
ನಯ ಭಯ ಭಕ್ತಿ ಮೂಲಣ್ಣ ಭೂತ
ದಯವಿರುತಿರೆ ಮುಕ್ತಿ ಬೇರಿಲ್ಲವಣ್ಣ
ಜಯ ಜಯ ಜಯತ್ಕಾರವಣ್ಣ ಪುಣ್ಯ
ಮಾಯರೂಪು ಪರವಸ್ತು ಅಲ್ಲಿರ್ಪನಣ್ಣ ||2||
ಬೇಡಿಕೊಂಬುವನೇನು ಕಿರಿದೆ ಭಕ್ತಿ
ಮಾಡಿ ನೀಡುವನೆನು ಜಗದೊಳು ಹಿರಿದೇ
ಕೂಡಿ ವಂದಾದದ್ದು ಅರಿದೇ ಶಿದ್ಧನ
ಹಾಡಿ ಹರಸದೆ ವ್ಯರ್ಥ ಕೆಡುಬ್ಯಾಡೊ ಬರಿದೆ ||3||
ಇಷ್ಟ್ಯಾಕ ತಿಳಿವಲ್ಲಿ ಎಲೊ ಮೂಢ ಬರಿದೆ
ಭ್ರಷ್ಟ ಸಂಕಲ್ಪದೊಳಿರು ಬ್ಯಾಡ
ಕಷ್ಟಿ ಕರ್ಮದ ಯೋಗ ಬಿಡು ಗಾಡ ಲಿಂಗ
ನಿಷ್ಟಿಯೊಳಿರುವದು ಬಹು ಪಾಡ ||ಪ||
ಜಾತಿ ಜಂಗಮನಾಗಿ ಬಂದಾತ ಜ್ಞಾನ
ಜ್ಯೋತಿ ಪ್ರಕಾಶದಲ್ಲಿರುವಾತ
ಮಾತು ಮಾತಿಗೆ ನೀತಿ ತರುವಾತ ಮನ
ಸೋತು ಭಕ್ತಿಗೆ ಬೆನ್ನು ಹತ್ತಾತ ||1||
ಶರಣರಂಶಿಕನಾಗಿ ಜಗರೊಳು ಗುರು
ಚರಣ ಸ್ಮರಣಿ ತನ್ನ ಮನದೊಳು
ಕರುಣ ದೃಷ್ಟಿ ಬಡ ಜನರೊಳು
ಅಷ್ಟವರಣ ಪೂರಿತ ಬಸವನಂದದೊಳು ||2||
ಲೋಕಪಾವನ ಶಿದ್ಧಲಿಂಗೇಶ ನಕಲು
ಬೇಕಂತ ಚರಿಸುವ ದೇಶ ದೇಶ
ಸೋಕಗುಡನು ಮಾಯ ಭವಪಾಶ ಸಕಲ
ಏಕಾಗಿ ತೋರಿದರೆ ಶಿವನಂಶ ||3||
ಇವ ಪರಿಯಲಿ ಹಾರ ಶರಣಾರು ಏಕೊ
ಭಾವ ಸಜ್ಜನರಿಗೆ ದೊರಿವಾರು
ಸಾವಸು ಅತಿ ಸ್ನೇಹ ಬಳಸಾರೂ
ಸರ್ವ ಜೀವರೊಳಗ ಅಂತಃ ಕರುಣಾರು ||ಪ||
ಜ್ಞಾನ ಕ್ರಿಯಗಳೆರಡು ಸಮವಾಗಿ ಮಹ
ಜ್ಞಾನಿಗಳಿದ್ದಲ್ಲಿಗೆ ಹೋಗಿ
ಸ್ವಾನುಭಾವದ ಸುಖ ಮನನಾಗಿ
ಶಿವಧ್ಯಾನ ಗುರುವಿನ ಪಾದ ನೆನಪಾಗಿ ||1||
ಸಾಧು ಸಂತರ ಕೂಡ ಬಳಸ್ಯಾಡಿ ನಾಲ್ಕು
ವೇದ ಸಮ್ಮತವಾಗಿ ನಲಿದಾಡಿ
ಹೋದ ಮಹತ್ವದ ಹಾದಿ ಹುಡಕ್ಯಾಡಿ ಪ್ರೇಮ
ಉದರ ನಿತ್ಯಾನಂದ ಸೂರ್ಯಾಡಿ ||2||
ಬುದ್ಧಿವಂತರ ಉದಿಮಿದರಂತ ಗುರು
ಸಿದ್ಧನು ವಶವಾದನು ಅವರಂತೆ
ಗೆದ್ದರು ಭವ ಭಾದಿ ತಿರಗದಂತ
ಜಗದೊಳಿದ್ದರ ಏನವರು ಇಲ್ಲದಂತ ||3||
ಎನಗ್ಯಾರು ದಿಕ್ಕಿಲ್ಲ ನಿನ್ನೊರತು ಗುರುಸಿದ್ಧ
ಅನುದಿನ ಮೊರೆಯಿಡುವೆ ನೀನೆ ಗತಿಯೆಂದು ||ಪ||
ತಂದಿಯಾದರು ನೀನೆ ತಾಯಿಯಾದರು ನೀನೆ
ಬಂಧು ಬಳಗವು ನೀನೆ ಅಂದಿಂದಿಗೆ
ಯಂದೆಂದಿಗಗಲಾದೆ ಹೊಂದಿಕೊಂಡಿರುವಂತಹ
ಕಂದ ನಿಮ್ಮವನೆಂದು ಕರುಣಿಸೆಲೆ ದೇವಾ ||1||
ಯೇಳುತ ನಿಮ್ಮ ನೆನವು ಬೀಳುತ ನಿಮ್ಮ ನೆನವು
ವೇಳ್ಯಾಳ್ಯೆದೊಳು ನಿಮ್ಮ ನೆನಹು ಬಲಗೊಂಡು
ಯೆಳೇಳು ಜನ್ಮದಲಿ ಆಳಾಗಿ ಇರುವೆನು
ಬಾಳಾಕ್ಷ ಹರನಿಮ್ಮ ಘೂಳಿಯೆಂದೆನಿಸಿ ||2||
ನಡಿವಲ್ಲಿ ನಿಮ್ಮ ಧ್ಯಾನ ನುಡಿಯಲ್ಲಿ ನಿಮ್ಮ ಧ್ಯಾನ
ಕುಡಕೊಂಬೊ ವ್ಯಳಿಯಲ್ಲಿ ನಿಮ್ಮ ಧ್ಯಾನವನೂ
ಬಿಡದೆ ನಿಮ್ಮಯ ಪಾದ ಸಡಗರ ಸಂಪತ್ತೆಂದು
ಕಡಿ ಮೊದಲಿಲ್ಲದೆ ಭಜಿಸಿ ಕಾಯ್ದುಕೊಂಡಿರುವೆ ||3||
ಎಲ್ಲಿ ಕುಳಿತರು ನೀನೆ ಎಲ್ಲಿ ಹೋದರು ನೀನೆ
ಎಲ್ಲಾವು ತುಂಬಿಕೊಂಡಿರುವಿ ನೀನೆ
ಬಲ್ಲೆ ನೆನ್ನಯ ಪ್ರಾಣದೊಲ್ಲಭ ಅಲ್ಲಮನೆಂದು
ಸೊಲ್ಲು ಸೊಲ್ಲಿಗೆ ಭಜಿಸಿ ಸುಖದೊಳಿರುವೆನೂ ||4||
ನೀನೆ ಗತಿ ಗುರುಸಿದ್ಧ ನೀನೆ ಮತಿ ಗುರುಸಿದ್ಧ
ನೀನೆ ಗತಿ ಗುರುಸಿದ್ಧಲಿಂಗ ಜಂಗಮವೇ
ನೀನಲ್ಲದಿನ್ನುಂಟೆ ದಾನಿ ತ್ರೈಜಗದೊಳೂ
ಮಾನಾಪಮಾನವನು ನಿಮ್ಮ ದೆಂದೆನುತಾ ||5||
ಎಂತಾತ ಗುರು ನಮ್ಮ ಶಾಂತ ಮೂರುತಿ ಸಿದ್ಧ
ಚಿಂತಿ ಬಿಡಿಸಿ ಮನಕ ಸಂತೋಷ ತೋರಿದ್ದ ||ಪ||
ತನ್ನಿಂದ ತಾನೆ ಬಂದ ಯಿವಯನ್ನ ಭಕ್ತನೆಂದ
ಭಿನ್ನ ಗುಣಗಳು ಕೊಂದ ಬಿಡದೆನ್ನ ಬಯಲಿಗೆ ತಂದ ||1||
ಹರುಷ ಮನಸಿನೊಳಿಟ್ಟು ಪರುಷ ಜೊಳಿಗಿ ಕೊಟ್ಟು
ಪುರುಷ ಯಂತಾತ ದಿಟ್ಟ ಹರಸಿ ಭಸಿತ ವಿಟ್ಟ ||2||
ನರರ ಹಂಗಿಲ್ಲದ್ಹಾಂಗೆ ವರವು ಪಾಲಿಸಿದ ಬೇಗೆ
ಪರವಸ್ತು ಸಿದ್ಧಯನಗೆ ಮೆರೆಸುತ್ತಲಿರ್ದ ಹಿಂಗೆ ||3||
ಎಂಥ ಅಚ್ಚರಿ ಮಾತಾಯಿತಲ್ಲ
ಚಿಂತಿ ಎಂಬುದು ಬಿಟ್ಹೋಯಿತಲ್ಲ
ಸಂತೋಷ ಹೆಚ್ಚಿತು ಸರ್ವಾಂಗಕೆಲ್ಲ
ಶಾಂತ ಮೂರುತಿ ಸಿದ್ಧ ಆತ ಬಲ್ಲ ||ಪ||
ಆ ಊರು ಬಿಟ್ಟು ಈ ಊರಿಗೆ ಬಂದೆ
ದೇವರ ದಯಾ ಆಗಿತ್ತೊ ಮೊದಲಿಂದೆ
ಕಾವಲಿ ಕಳ್ಳರ ಭಯ ಹಿಂದ ಮುಂದೆ
ಸೇವಕ ನಿಮ್ಮವ ಸಿಗದೋಡಿ ಬಂದೆ ||1||
ಹಳ್ಳ ಕೊಳ್ಳ ಹುಲಿಗವಿ ಗಂಡಿ
ಮುಳ್ಳಿನ್ಹಾಸಕಿ ಫಾಸಿಖೋರ ಮಿಂಡಿ
ಕುಳ್ಳಿಲಿ ರಸ ಹಿರಿಕೊಂಬುವಳೊ ಹಿಂಡಿ
ಒಳ್ಳೊಳ್ಳೆ ಹಿರಿಯರನು ಬಿಡದಂಥ ರಂಡಿ ||2||
ಶರಣರಾಳು ಎಂಬ ಗರ್ವದಲ್ಲಿ
ಮರಣದಂಜಕಿ ಬಿಟ್ಟು ಮಾರ್ಗದಲ್ಲಿ
ಸ್ಮರಣಿ ಮಾಡುವೆ ಸಿದ್ಧನ ಹೆಸರಲ್ಲಿ
ಚರಣಕ್ಕೆರಗುವೆ ಬಂದು ಜೀವದಲ್ಲಿ ||3||
ಎನ್ನಿಂದೇನು ಆದುದಲ್ಲಾ ನಿನ್ನಿಂದಾದ ಮಹತ್ವಿಯಲ್ಲ
ಚನ್ನಬಸವರಾಜಯಿದನು ಬಲ್ಲನಲ್ಲಾದೆ ||ಪ||
ಗುರುವೆ ನಿಮ್ಮ ಕರುಣ ದೃಷ್ಟಿ| ಕರಕೆ ಲಿಂಗವಾಗಿ ಬರಲು
ಶರೀರ ದುರ್ಗುಣಂಗಳೆಲ್ಲ ಹರಿದು ಹೋದವೂ
ಶರಣನಾಗಿ ಚರಿಸುತಿರ್ದೆ ಸ್ಮರಣಿ ನಿಮ್ಮ ಪಾದದಲ್ಲಿ
ಧರಣಿ ಭೋಗ ಯನಗೆ ತೃಣವು ಆಗಿ ತೋರಿತೂ ||1||
ನಡಿಯಲರಿಯೆನಯ್ಯ ನಾನು| ನಡಿಯಲರಿಯೆನಯ್ಯ ಗುರುವೆ
ಪಿಡಿದು ಒಂದು ಕಡ್ಡಿಯೆತ್ತಿ ಬಿಸುಟಲರಿಯೆನೂ
ವಡಿಯ ನಿಮ್ಮ ಅಂಘ್ರಿ ಬಲದಿ| ಪೊಡವಿಯಲ್ಲಿ ಗಿಡವ ಕಿತ್ತಿ
ಬಡಿದು ಬಡಿದು ವಬ್ಬಳಿಯನು ಹಾಕಿ ಬಿಡುವೆನು ||2||
ಗುರುವ ಲಿಂಗ ಜಂಗಮ ವಂದೆ ಉದರಾದಲ್ಲಿ ಹುಟ್ಟಿ ಬಂಧೆ
ಪರವು ಸಾಧ್ಯವಾದ ಬಳಿಕ ಹೋದರಲ್ಯಾತಕೆ
ಅರಿವಿನಲ್ಲಿ ಅರಿತು ಸಿದ್ಧ ಲಿಂಗನಲ್ಲಿ ಬೆರೆವ ಸುಖವ
ಭರದಿ ಕರ್ಪುರಕ್ಕೆ ವುರಿಯ ಕೊಂಡಂತಾದೆನೊ ||3||
ಎನ್ನ ಬೆನ್ನಿಗೆ ಚಿಕ್ಕ ಚನ್ನಬಸವನುಯಿರುವ
ಯಿನ್ನಾವ ಭಯವು ಯನಗೆ ಗುರುವೆ|
ನಿನ್ನ ಪಾದುಕಿ ಹೊತ್ತು ಚೆನ್ನಾಗಿ ಮೆರಿವೆನು
ಕುನ್ನಿ ಜನರಡ್ಡಾಪರೆ ಗುರುವೆ ||ಪ||
ಯತ್ತ ನೋಡಿದರೆನ್ನ ಸುತ್ತ ಮುತ್ತಲು ನೀವೆ|
ಕತ್ತಲಿಯ ಯಿರು ಬಲ್ಲದೆ ಗುರುವೆ
ಕತ್ತಿ ಮಾನ್ವರು ನಿಮ್ಮ ತೊತ್ತಿಗೆ ಸರಿಯುಂಟೆ|
ಕತ್ತಿಯಿಟ್ಟ್ಯರಗುತಿಹರು ಗುರುವೆ ||1||
ಹುತ್ತಿನ ಸರ್ಪದ ಗೊತ್ತು ತಿಳಿಯದೆ ಜನರು|
ವತ್ತೊತ್ತಿ ನೋಡುತಿಹರು ಗುರುವೆ
ಸುತ್ತ ಚಿತ್ತಾನಂದ ಹೊತ್ತು ಹೆಡಿಯೆತ್ತಿರಲು
ಸತ್ತು ಹೋಗದೆ ಉಳಿವರೆ ಗುರುವೆ ||2||
ಮಲದೇಹ ತೊಳದೇನು ಮನದಲ್ಲಿ ಹೊಲೆ ಬಿಡದು
ಬಿಲುಬಿಂಕ ಬೀರುತಿಹರು ಗುರುವೆ
ಹೊಲಿಮಾದರಿಗೆ ಹೊರತು ಸರಿಯಲ್ಲ ಪೆದ್ದಯ್ಯ
ಕುಲದಲ್ಲಿ ಹೊಲ್ಯೆಯಲ್ಲವೆ ಗುರುವೆ ||3||
ಡಂಬಕದ ನಡಿನುಡಿಗೆ ನಂಬಿ ಕೆಟ್ಟಿತು ಲೋಕ
ರಂಬಿರ್ಯೊವಳ ಬಲಿಯಲಿ ಗುರುವೆ
ನಂಬುವರೆ ನಿನ್ನ ಪಾದ ಕುಂಭಿನಿಯ ಪಾತಕರು
ಕಂಬಿ ಮುರಿದೆಯ ಬಿಡುವನೆ ಗುರುವೆ ||4||
ಯಾರು ಅರಿಯರು ನೀವು ಬ್ಯರಾದ ಪರಿಗಳನು
ಧೀರ ಬಸವನಿಗಲ್ಲದೆ ಗುರುವೆ
ಕಾರಿಕಂಟಿಯ ಸಿದ್ಧ ದಾರಿ ತೋರನು ಅವರ
ಸೇರಿಸುವ ಯಮಪುರದಲಿ ಗುರುವೆ ||5||
ಎಲೊ ಎಲೊ ತಿಳಿ ಹುಚ್ಚ ಮರುಳೆ
ನಿನ್ನ ಹಗಲಿರುಳೆ
ಗೆಲಿವದು ತ್ರಯಮಲ ಇದೇ ಯಾಳೆ
ದೇಹ ನೀರ ಗುರುಳೆ ||ಪ||
ನಾನಾ ಜನ್ಮದಲಿ ಜ್ಞಾನ ಹೀನನಾದಿ
ಅಪಮಾನಿತನಾದಿ
ಜ್ಞಾನವುಳ್ಳ ಜಲ್ಮಕ ಬಂದು ತಿಳಿಯಲ್ದ್ಹೋದಿ
ಎಂಥ ಮೂರ್ಖನಾದಿ ||1||
ಮಂದಿ ನಿಂದೆ ಮಾಡಿ ವ್ಯರ್ಥ ಕೆಡುವದ್ಯಾಕೊ
ಪಾಪ ಕೊಳ್ಳುವದ್ಯಾಕೋ
ಮುಂದೆ ನಿನ್ನ ಹಾದಿ ಚಂದ ಹಸನ ಮಾಡಕೊ
ಹಿಂದಿನ ಕರ್ಮ ತೊಳೆದುಕೊ ||2||
ದಾನ ಧರ್ಮ ಪರಹಿತಾರ್ಥ ಪುಣ್ಯಕೊಳ್ಳೊ
ದೇಹಭೋಗ ಸುಳ್ಳೋ
ಜ್ಞಾನಮಾರ್ಗ ಹಿಡಿದು ಮುಂದೆ ದಾಟಿಕೊಳ್ಳೊ
ಭವದಿ ಹಾದಿ ಮುಳ್ಳೊ ||3||
ಗುರು ಹಿರಿಯರೆಂದು ಅವರ ವಾಕ್ಯ ಕೇಳೊ
ಗೋಪ್ಯವಿಟ್ಟುಕೊಳ್ಳೊ
ಅರಿವು ಹಿಡಿದು ಶಾಂತಿ ಭಕ್ತಿ ತಾಳೊ
ಶರಣರ ಕೂಡಿ ಬಾಳೊ ||4||
ತಂದಿ ಸಿದ್ಧನ ಒಲಿಸಿ ನಿಜ ಮುಕ್ತಿ ಬೇಡಿಕೊ
ವಂದನೆ ಮಾಡಿಕೊ
ಎಂದೆಂದಿಗ್ಹುಟ್ಟದಂತಹ ಪದವಿ ಪಡಕೊ
ಗುರುವಿನ ಪಾದ ಹಿಡಿಕೊ ||5||
ಏನಾರ ಮಾಡಯ್ಯ ನೀನು ಗುರುವೆ|
ನೀನೆ ಗತಿಯಂದು ನಂಬಿಕೊಂಡೆನು
ಮಾನವರಾಸಿ ನನಗೇನು ಮಹದಾನಿ ರೇವಣಸಿದ್ಧ ನಿನ್ನಾಳು ನಾನು ||ಪ||
ಮಂತ್ರ ಮೂರುತಿ ನಿಸ್ಸಂಸಾರಿ ಸ್ವಾತಂತ್ರ ನಿನ್ನಲ್ಲುಂಟು ಜಗದಧಿಕಾರಿ
ಯಂತ್ರ ವಾಹಕ ವಿರಾಭಾರಿ ಮಾಯ
ತಂತ್ರದಿ ಕುಣಿಸುವಿ ಲೋಕ ಪರಿಪರಿ ||1||
ಆರಿಗಿ ತಿಳಿಯದೀ ಆಟ ಭವ| ಭಾರಿಗಳರಿವರೆ ನಿನ್ನ ಕಪಟ
ಮೀರಿದ ಸ್ಥಲ ಶಾಂತಿನೋಟ ಗ್ನಾನ| ಪೂರಿತ ಲಿಂಗಾಂಗ ಸಮರಸ ಕೂಟ ||2||
ಮಾನಪಮಾನಕ್ಕೆ ಮೀರಿ ಶಿದ್ಧ| ನಾನಾಗಿಯಿರುವೆ ನಿಸ್ಸಂಶ ಮಾಯಾರಿ
ಸ್ವಾನುಭಾವದ ಸುಖ ತೋರಿ ನಿಮ್ಮ| ಧ್ಯಾನದೊಳಿರುವೆನು ನಡಿನುಡಿಬ್ಯರಿ ||3||
ಏನಾರ ಮಾಡಯ್ಯ ನೀನು|
ಮಹಾದಾನಿ ಶ್ರೀ ಗುರುಸಿದ್ಧ ನಿನ್ನಾಳು ನಾನು ||ಪ||
ಮಾನಾಪಮಾನ ವಂದೇನು ನಿಮ್ಮ |
ಧ್ಯಾನವಲ್ಲದೆ ಬ್ಯಾರೆ ಮತ್ತೊಂದರಿಯೆನು
ತಾನಾಗಿ ಬರುವದೆಲ್ಲವನು ಭಕ್ತಿ|
ಗ್ನಾನ ವೈರಾಗ್ಯದಲಿ ಅನುಭವ ಮಾಳ್ಪೆನೂ ||1||
ಆಳಿನ ಅಭಿಮಾನ ಅರಸನಿಗೆ ಕರಿಮಣಿ|
ತಾಳಿಯ ಅಭಿಮಾನ ಕಟ್ಟಿದ ಗಂಡನಿಗೆ
ವಿಳ್ಯದ ಅಭಿಮಾನ ಯತ್ತಿದವಗೆ ಬಿಕ್ಷದ
ಜೋಳಿಗಿ ಅಭಿಮಾನ ಕೊಟ್ಟಗುರುವಿಂಗೆ ||2||
ಯನ್ನ ಕಾಯುವದೆ ನಿನ್ನ ಬಿರುದು ನಾನು
ಯಿನ್ನೆಷ್ಟು ಹೇಳಲಿ ಅಭಿಮಾನ ತೊರದು
ನಿನ್ನಗ ಬಟ್ಟ ಬರಹುವದು ಶಿದ್ಧ
ಬೆನ್ಹತ್ತಿಯಿರು ಕಂಡ್ಯ ನಿನ್ನೊಳ್ನೀ ತಿಳಿದು ||3||
ಎನ್ನೊಳು ನೀವಿರ್ದು ಯನಗ ಕಾಣಿಸಕೊಳದೆ
ಯನ್ನಂತೆ ನಿವಿರ್ದಿರಿ ಗುರುವೆ
ಯನ್ಯಾದ ಗತಿಪಥವ ಯಿಹಪರಕ ಯಡೆಯಾಟ
ನಿನ್ನ ಪಾದ ಕಾಣಲಿಲ್ಲಾ ಗುರುವೆ ||ಪ||
ನಾನ ಜನ್ಮದಿ ತಿರುಗಿ
ಯೆನು ಕಾಣದೆ ಸುಳ್ಳೆ ಸುಖ ದುಃಖಕೊಳಗಾದೆನು ಗುರುವೆ
ನೀನೆ ಕರುಣೆಸಿ ಯನ್ನ ಮಾನ್ವ ಜನ್ಮಕ ತಂದು
ಗ್ನಾನವನು ಅಂಕುರಿಸಿದಿ ಗುರುವೆ ||1||
ಬಿರಿಮೊಗ್ಗಿಯಲಿ ಗಂಧ ಮರೆಯಾಗಿ ಯಿರ್ದಂತೆ
ಪರಿ ಪರಿಯ ಘಟಗಳಲ್ಲಿ ಗುರುವೆ
ಯಿರುವಿ ನೀರೊಳು ಬೆಂಕಿ ಇರ್ದಂತೆ ಯನ್ನೊಳಗೆ
ಸ್ಥಿರ ಕಾಲ ಅಡಗಿರ್ದಿರಿ ಗುರುವೆ ||2||
ಗತಿಯಾಗಲೆಂದೆನ್ನ ಮತಿಗೆ ಮಂಗಲವಾಗಿ
ಪಥ ತೊರ ಹೊರಹೊಂಟಿರೀ ಗುರುವೆ
ರಥಕ ಸಾರತಿಯಂತೆ ಪತಿಯಾಗಿ ಗುರುಸಿದ್ಧ
ಗತಿಯಾಗಲೆಂದೆನ್ನ ಮತಿಗೆ ಮಂಗಲವಾಗಿ ||3||
ಎಂದೆಂದು ಛಲನಾಗದಂತ ದೀಕ್ಷವನು
ತಂದಿ ರೇವಣಸಿದ್ಧ ಬಂದು ಮಾಡಿದನೂ ||ಪ||
ನಾನಾ ದುರ್ಗುಣ ದೇಹದ್ಹಂಕಾರ ಸುಟ್ಟಿ
ಜ್ಞಾನಾಗ್ನಿ ಭಸಿತ ಸರ್ವಾಂಗ ತುಂಬಿಟ್ಟ
ಸ್ವಾನುಭಾವದ ಸೂತ್ರ ಮನಕ ಹಚ್ಚಿ ಬಿಟ್ಟ
ನಾನಿನೆನ್ನದೆ ಲಿಂಗ ಅರಿವಿನೊಳಿಟ್ಟ ||1||
ಹೆಂಡರ ಮಕ್ಕಳನೆಲ್ಲ ಅಗಲಿಸಿ ಬಿಟ್ಟ
ದಂಡಕೋಲು ಜೋಳಿಗಿ ಸ್ಥಿರವಾದ ಪಟ್ಟ
ದಂಡನಾಯಕ ಮಂತ್ರ ಉಪದೇಶ ಕೊಟ್ಟ
ಮಂಡಲದೊಳು ತಿರಕನೆಂಬ ಹೆಸರಿಟ್ಟ ||2||
ಭಕ್ತಿ ಪ್ರಸಾದಕ್ಕೆ ಗುರಿ ಮಾಡಿ ಯಿಟ್ಟ
ಶಕ್ತೆರರ್ವರ ಸಂಗ ಮಾಡಿಸಿ ಕೊಟ್ಟ
ಮುಕ್ತಿದಾಯಕ ಸಿದ್ಧ ಮುನಿವರ ಧಿಟ್ಟ
ಯುಕ್ತಿಯಿಂದಲಿ ತನ್ನ ವೇಶ ಹಾಕಿ ಬಿಟ್ಟ ||3||
ಎಂತ ಆಶ್ಚರ್ಯ ಮಾತಾಯಿತಲ್ಲಾ
ಚಿಂತಿಯಂಬುದು ಬಿಟ್ಟೊಯಿತಲ್ಲಾ
ಸಂತೋಷ ಹೆಚ್ಚಿತು ಸರ್ವಾಂಗಕೆಲ್ಲ
ಶಾಂತ ಮೂರುತಿ ಶಿದ್ಧಲಿಂಗ ತಾ ಬಲ್ಲ ||ಪ||
ಆ ಊರು ಬಿಟ್ಟು ಈ ಊರಿಗೆ ಬಂದೆ
ದೇವರ ದಯವಿತ್ತು ಮುದದಿಂದೆ
ಕಾವಲಿ ಕಳ್ಳರ ಭಯ ಹಿಂದ ಮುಂದೆ
ಸೇವಕ ನಿಮ್ಮನ ಸಿಗದೋಡಿ ಬಂದೆ ||1||
ಹಳ್ಳ ಕೊಳ್ಳ ಹುಲಿಗವಿ ಗಂಡಿ
ಮುಳ್ಳಿನ್ಹಾಸಿಕಿ ಫಾಸಿಕೊರ ಮಿಂಡಿ
ಕುಳ್ಳಿಲಸು ಹೀರಿ ತೊಂಬುವಳು ಹಿಂಡಿ
ಒಳ್ಳೊಳ್ಳೆ ಹಿರಿಯರ ಬಿಡದಂತ ರಂಡಿ ||2||
ಶರಣರಾಳು ಯಂಬ ಗರ್ವದಲಿ|
ಮರಣದಂಜಿಕಿ ಬಿಟ್ಟು ಮಾರ್ಗದಲಿ
ಸ್ವರಣಿ ಮಾಡಿದೆ ಸಿದ್ದನ್ಹೆಸರಲಿ|
ಚರಣಕ್ಕೆರಗಿದೆ ಬಂದ ಜೀವದಲಿ ||3||
ಎಷ್ಟು ಜೊಕಿ ಮಾಡಿದರೇನು ದೇಹ ಬಿಟ್ಹೊಹದು ತಪ್ಪುವದೇನು
ನಿಷ್ಟಯುಳ್ಳ ಶಿವಶರಣರಿಗೆ ಧನ ಅಷ್ಟು ತನುಮನ ಕುಡು ನೀನೂ ||ಪ||
ತನುಮಿನ ಗುಣ ತಾಮಸ ಬಹಳ ದುಃಖ ಅನುದಿನ ತಪ್ಪದು ನೀ ಕೇಳು
ಘನ ಸುಖ ದೊರಕದು ಮರವಿ ಬಹಳ ಮಾಯಿ
ಅನುಕೂಲ ಯಿದಹರೊಳು ತಿಳಕೊ ಮೂಳ ||1||
ಮನಸಿನ ಗುಣ ಹಲವಾಗುವದು ಸುಳ್ಳೆ ನೆನಸಿ ನೆನಸಿ ಹರದ್ಹೊಗುವದು
ಕನಸಿನ ಪರಿ ಕೈಗೆ ಬಾರಾದು ಆಶಿ ಘನವಾಗಿ ಕಷ್ಟಯೆಂದು ತೀರಾದು ||2||
ಜೀವನ ಬುದ್ಧಿ ಜನ್ಮಯತ್ತಿಸುವದು ವಂದು ಝಾವದೊಳುಸತ್ತು ಹುಟ್ಟಿಸುವದು
ಭಾವ ಭರಿತ ಸಿದ್ಧನ ತಪ್ಪಿಸುವದು ಗುರುದೇವಗೊಪ್ಪಿಸು ಮುಕ್ತಿ ಘಟಿಸುವದು ||3||
ಎಲೋ ಎಲೋ ತಿಳಿ ಹುಚ್ಚ ಮರುಳೆ ನೀನು ಹಗಲಿರುಳೆ
ಗೆಲಿವದು ತ್ರೈಮಲ ಇದೆ ವ್ಯಾಳೆ ದೇಹ ನೀರ ಗುರುಳೆ ||ಪ||
ನಾನಾ ಜನ್ಮದಲ್ಲಿ ಜ್ಞಾನಹೀನನಾದಿ ಅಪಮಾನನಾದಿ
ಜ್ಞಾನ ಉಳ್ಳ ಜನ್ಮಕ ಬಂದು ತಿಳಿಯದ್ಹೊದಿ ಯಂತ ಮೂರ್ಖನಾದಿ
ಮಂದಿ ನಿಂದಮಾಡಿ ವ್ಯರ್ಥ ಕೆಡುವದ್ಯಾಕೊ ಪಾಪ ಕೊಳುವದ್ಯಾಕೊ
ಮುಂದ ನಿನ್ನ ಹಾದಿ ಚಂದ ಹಸನ ಮಾಡಿಕೊ ಹಿಂದಿನ ಕರ್ಮ ತೊಳದುಕೊ ||1||
ದಾನಧರ್ಮ ಪರಹಿತಾರ್ಥ ಪುಣ್ಯಕೊಳ್ಳೊ ಈ ದೇಹ ಭೋಗ ಸುಳ್ಳೊ
ಜ್ಞಾನಮಾರ್ಗ ಹಿಡದು ಮರ್ತ್ಯ ದಾಟಿಕೊಳ್ಳೊ ಭವದ ಹಾದಿ ಮುಳ್ಳೊ ||2||
ಗುರು ಹಿರಿಯರೆಂದು ಅವರ ವಾಕ್ಯ ಕೇಳೊ| ಗೊಪ್ಯಯಿಟ್ಟ ಕೊಳೊ
ಅರಿವು ಹಿಡಿದು ಶಾಂತಿ ಭಕ್ತಿ ತಾಳೊ ಶರಣರ ಕೂಡಿ ಬಾಳೊ ||3||
ತಂದಿ ಸಿದ್ಧನೊಲಿಸಿ ನಿಜ ಮೋಕ್ಷ ಬೇಡಿಕೊ ನಂದನಿಯ ಮಾಡಿಕೊ
ಯಂದೆಂದು ಹುಟ್ಟದಂತ ಪದವಿ ಪಡದು ಕೊ ಗುರುವಿನ ಪಾದ ಹಿಡದು ಕೊ ||4||
ಎನ್ನ ಸ್ವತಂತ್ರ ಯಿನಿತಿಲ್ಲ ಗುರು
ಬೆನ್ನ ಹತ್ತಿ ಮಾಡಿಸುತಿಹನಲ್ಲಾ
ಯಿನ್ನೊಬ್ಬರು ಅಧಿಕಾರರಿಲ್ಲಾ ಪ್ರಭು
ತನ್ನ ಹುಕುಮಿಟ್ಟನ ಜಗವೆಲ್ಲಾ ||ಪ||
ನಡಿ ನುಡಿ ಚೇತನ ತನ್ನದಲ್ಲಿ ಸೂತ್ರ
ಹಿಡಿದು ಕುಣಿಸುವನು ಜಗವೆಲ್ಲ ||1||
ಪಡಿ ಕುಡುವನು ಸರ್ವ ಜೀವಕೆಲ್ಲ ಮುಕ್ತಿ
ಪಡಿವದು ಯದರಿಂದ ಕಾಂಬೊದಿಲ್ಲ ||2||
ತನು ಮನ ಧನ ಶಾಶ್ವತವಲ್ಲ ಸುಖ
ಅನುದಿನ ಇರುವದು ತಿಳದಿಲ್ಲ
ಘನತರ ಮಾಯಿ ಕೈಯೊಳಗೆಲ್ಲ ಜಗ ||3||
ಏನಾದರೇನು ಗುರುಧ್ಯಾನ ವಂದಾರೆ ಸಾಕು
ನಾನಾ ಯೋಚನೆ ಮನವೆ ನಿನಗ್ಯಾಕ ಬೇಕು ||ಪ||
ದೇಹವಿದ್ದರೆಯೇನು ದೇಹ ಬಿದ್ದರಯೇನು
ದೇಹ ಸುಖ ದುಃಖ ಭೋಗ ಯಂತಾದರೇನು ||1||
ಜನರು ಮೆಚ್ಚಿದರೇನು ಜನರು ಮೆಚ್ಚದಿರಲೇನು
ಜನರು ಜಗದೊಳಗಿವನು ಹುಚ್ಚಂದರೇನು ||2||
ಕೆಲರು ಹೊಗಳಿದರೇನು ಕೆಲರು ಬಗಳಿದರೇನು
ಕೆಲರು ಛಿ ಛಿಯಂದು ಉಗುಳಲದಕೇನು ||3||
ತಿಪ್ಪಿ ಆದರಯೇನು ಉಪ್ಪರಗಿ ನೆಲಯೇನು
ಮುಪ್ಪು ಹೊಸಕಿ ಸುಚಿ ಅಸುಚಿಯಾದರೇನು ||4||
ಮಾಡಿ ಉಂಡರಯೇನು ಬೇಡಿ ಉಂಡರಯೇನು
ಕೂಡಿ ಅಗಲದೆ ಶಿದ್ಧನಾಂಘ್ರಿವಿರೆ ಸಾಕು ||5||
ಎಲ್ಲರ ನಡಿ ನುಡಿಗೆ ಅಲ್ಲಮನ ಚೇತನವ
ಅಲ್ಲ ಹೌದೆನ್ನಲಾರೆನೋ ತಮ್ಮ
ಬಲ್ಲ ಜಾಣರು ತಮಗ ಬಲ್ಲಷ್ಟ ಆಡುವರು
ಬಲ್ಲವನು ನಾನಲ್ಲವೋ ತಮ್ಮ ||ಪ||
ಸರ್ವಾಂತರ್ಯಾಮಿ ಶಿವ ನಿರ್ಮಾಣವು ನಾನರಿಯೆ
ಕರ್ಮ ದೇಹದ ಭೋಗವೊ ತಮ್ಮ
ಧರ್ಮಯಂತಿಹುದು ಆದರಂತೆ ಮಾಡಿಸುತಿಹುದು
ನಿರ್ಮಳಾತ್ಮರು ಬಲ್ಲರು ತಮ್ಮ ||1||
ತನ್ನ ನಡಿ ನುಡಿ ತನಗ ಸ್ವಾತಂತ್ರವಿನಿತಿಲ್ಲ
ತನ್ನಂತೆ ಜಗವೆಲ್ಲವೊ ತಮ್ಮ
ಭಿನ್ನವಿಟ್ಟಾಡಲಿಕೆ ಯನ್ನ ತ್ರಾಣವೆ ಗುರುವು
ಚಿನ್ಮಯ ಚಿದ್ರೂಪನೊ ತಮ್ಮ ||2||
ಯುಗ ಯುಗದಿ ಗುರು ಶಿದ್ಧ ಅಗಲದಲಿ ಸರ್ವರಿಗಿ
ಬಗಿ ಬಗಿಯ ಕುಣಿಸುತಿಹನೊ ತಮ್ಮ
ನಿಗಮ ಆಗಮ ಶಾಸ್ತ್ರ ವೇದ ಕೂಗುತಲಾವ
ಅಘಹರನ ಆಟ ವಿದನೂ ತಮ್ಮ ||3||
ಎಲ್ಲಾರು ನಮಗಷ್ಟೆ ಗುರುವೆ ಎಲ್ಲರಿಗಿ ನಾವಷ್ಟೆ
ಸೊಲ್ಲಿನೊಳಗೆ ಶಿವನಿಚ್ಛೆ ಸದ್ಗುರು ಬಲ್ಲಿದ ಭಜನಿ ತೊಟ್ಟಿ ||ಪ||
ನೀಡಿದವರು ನಮಗಷ್ಟೆ ಗುರುವೆ ನೀಡದವರು ನಮಗಷ್ಟೆ
ಹಾಡಿ ಹರಸಿದರಷ್ಟೆ ನಿಂದ ಮಾಡಿ ಪಿಡಸಲವರಷ್ಟೆ ||1||
ಬಡವರಾದರು ನಮಗಷ್ಟೆ ಸಂಪತ್ತು ಸಡಗರಿದ್ದರ ಅವರಷ್ಟೆ
ಪೊಡವಿನಾಳಿದರವರಷ್ಟೆ ತ್ರೈಜಗದೊಡಿಯ ನಾದರ ನಮಗಷ್ಟೆ ||2||
ಯಾವ ದೇಶದ ನಡಿನುಡಿ ಅಷ್ಟೆ ಜಂಗಮ ದೇವ ಭಕ್ತರು ನಮಗಷ್ಟೆ
ದೇವ ದೇವರ ದೇವನಷ್ಟೆ ಗುರು ಸಂಜೀವ ಸಿದ್ಧ ನಮಗಷ್ಟೆ ||3||
ಎತ್ತನೋಡಿದಡತ್ತ ಗುರು ಸಿದ್ಧಲಿಂಗನು| ಕೇಳು ಸಖಿಯೇ
ಸುತ್ತಮುತ್ತ ಎನ್ನ ಸುತ್ತಿಕೊಂಡಿರ್ಪನು| ಕೇಳು ಸಖಿಯೇ ||ಪ||
ತೆಳಗ ಮೇಗತಾನೆ ಒಲಗ ಹೊರಗ ತುಂಬ್ಯಾನೆ| ಕೇಳು ಸಖಿಯೇ
ಒಳಗ ಶಿವಶರಣರು ಬರುವ ಪಥವು ತಾನೆ| ಕೇಳು ಸಖಿಯೇ ||1||
ಪಿಂಡ ಬ್ರಹ್ಮಾಂಡ ಎದರಿಟ್ಟು ನೋಡುವ ತಾನೆ| ಕೇಳು ಸಖಿಯೇ
ಪಿಂಡಾಂಡವಳಿದ ಅಖಂಡನಾದವ ತಾನೇ ಕೇಳು ಸಖಿಯೇ ||2||
ಸರ್ವಂಗ ಲಿಂಗ ಪರ್ವತ ಕೊನೆ ಮೊನಿಯಲ್ಲಿ| ಕೇಳು ಸಖಿಯೇ
ನಿರ್ವಯಲಾದಂತ ನಿಜವಸ್ತು ಶಿದ್ಧನು| ಕೇಳು ಸಖಿಯೇ ||3||
ಏನೇನು ಅರಿಯನವ್ವಾ ನಾನು ಮಹ
ಜ್ಞಾನಿ ಪುರುಷ ಬಂದು ಸಂಗ ಮಾಡಿದನು
ಮಾನಪಮಾನ ಹೇಳಲೇನು ತನ್ನ
ಖೂನ ತೋರಿಸಿ ಬಿಗಿದಪ್ಪಿ ಕೊಂಡಾನು ||ಪ||
ಉಟ್ಟ ಸೀರಿಯ ಕುಪ್ಪಸ ಬಿಡಿಸಿ ಮೊಲಿ
ಮುಟ್ಟಿ ಮುಟ್ಟಿ ಮುದ್ದಾಡಿದ ಬಾಯಿ ಚಪ್ಪರಿಸಿ
ಕೊಟ್ಟ ಪ್ರಸಾದ ತಾ ಸ್ವೀಕರಿಸಿ ಮಗ
ಹುಟ್ಟಿದ ಹಡದೆನವ್ವ ಅವನೊಳು ಸಮ ಬೆರಸಿ ||1||
ಮಂದಿ ಮಕ್ಕಳಿಗೆ ಹೊರತಾದೆನು ಎನ್ನ
ಹಿಂದ ಮುಂದ ಕಾವಲಿಟ್ಟು ಮಾಡಲಿನ್ನೆನು
ಹಿಂದಿನವಗುಣವ ಬಿಟ್ಟೇನು ಆತನ
ಹೊಂದಿಕೊಂಡು ಅಗಲದಂತೆ ಅನುದಿನಯಿರುವೆನು ||2||
ದಿಕ್ಕಿಲ್ಲ ಯಾರು ಎಂದು ತಿಳಿದೆ ಮದ
ಸೊಕ್ಕಿದ ಪ್ರಾಯವೆಲ್ಲ ಒಪ್ಪಿಸಿ ಮೈಮರೆದೆ
ತಕ್ಕ ಪುರುಷನ ಕೂಡಿ ಮೆರೆದ ದಶ
ದಿಕ್ಕು ಮೀರಿದ ಗುರುಸಿದ್ಧನೆಂದು ಕರದೆ ||3||
ಎನಗ್ಯಾರು ದಿಕ್ಕಿಲ್ಲ
ನಿಮ್ಮ ಹೊರತು ಗುರುಸಿದ್ಧ
ಅನುದಿನ ಮೊರೆಯಿಡುವೆ
ನೀನೆ ಗತಿಯೆಂದು ||ಪ||
ತಂದಿ ಆದರ ನೀನೆ
ತಾಯಿ ಆದರ ನೀನೆ
ಬಂಧು ಬಳಗೆಲ್ಲಾ ನೀನೇ
ಅಂದು ಇಂದೀಗೆ ||1||
ಎಂದೆಂದಿಗೆ ಅಗಲದೆ
ಹೊಂದಿಕೊಂಡಿರುವಂಥ
ಕಂದ ನಿಮ್ಮವನೆಂದು
ಕರುಣಿಸೆಲೆ ದೇವಾ ||2||
ಎಳುತ್ತ ನಿಮ್ಮ ನೆನವು
ಬೀಳುತ್ತ ನಿಮ್ಮ ನೆನವು
ಯಾಳ್ಯಾಳ್ಯಾದೊಳು ನಿಮ್ಮ
ನೆನವು ನೆಲೆಗೊಂಡು ||3||
ಏಳೇಳು ಜನ್ಮದಲಿ
ಆಳಾಗಿ ಇರುವೆನು
ಭಾಳಾಕ್ಷ ಹರ ನಿಮ್ಮ
ಘೋಳೆಂದೆನಸಿ ||4||
ನಡೆಯಲ್ಲಿ ನಿಮ್ಮ ಧ್ಯಾನ
ನುಡಿಯಲ್ಲಿ ನಿಮ್ಮ ಧ್ಯಾನ
ಕುಡುಕೊಂಬೊ ಎಡಿಯಲ್ಲಿ
ನಿಮ್ಮ ಧ್ಯಾನವನು ||5||
ಬಿಡದೆ ನಿಮ್ಮಯ ಪಾದ
ಸಡಗರ ಸಂಪತ್ತೆಂದು
ಕಡಿ ಮೊದಲು ಭಜಿಸಿ
ಕಾಯ್ದುಕೊಂಡಿರುವೆನು ||6||
ಎಲ್ಲಿಗೆ ಹೋದರು ನೀನೆ ಎಲ್ಲಿ ಕುಳಿತರು ನೀನೆ
ಎಲ್ಲವು ತುಂಬಿಕೊಂಡಿರುವನು ನೀನೆ
ಬಲ್ಲೆನಯ್ಯ ಪ್ರಾಣದೊಲ್ಲಭ ನೀನೆಂದು
ಸೊಲ್ಲು ಸೊಲ್ಲಿಗಿ ಭಜಿಸಿ ಸುಖದೊಳಿರುವೆನು ||7||
ನೀನೆ ಗತಿ ಗುರುಸಿದ್ಧ ನೀನೆ ಮತಿ ಗುರುಸಿದ್ಧ
ನೀನೆ ಗತಿ ಗುರುಸಿದ್ಧ ಲಿಂಗ ಜಂಗಮವೋ
ನೀನಿಲ್ಲದಿನ್ನುಂಟೆ ಧನಿತ್ರಯ ಜಗದೊಳು
ಮಾನಪಮಾನ ನಿಮ್ಮದೆಂದೆನಿಸಿ ||8||
ಏನಾದರೇನು ಈ ದೇಹ ಗುರು
ತಾನೆ ಮುಟ್ಟಿದ ಬಂದು ಮೊದಲಿನಾ ಪ್ರಾಯ
ಜ್ಞಾನ ಉದಸಿತು ಅಂಗಮಾಯ ಇದೆ
ಖೂನ ಲಿಂಗಾಂಗಕ್ಕೆ ಸತಿಪತಿ ನ್ಯಾಯ ||ಪ||
ರಸ ಉಂಡು ಹಿಪ್ಪಿ ಬಿಟ್ಟಂತೆ ಗಂಧ
ಮೂಸಿ ನೋಡಿ ಪುಷ್ಪ ಪತ್ರಿ ಬಿಸಡಿ ಕೊಟ್ಟಂತೆ
ಮುಸಕ್ಷರಿದು ತಗಿದನದರಂತೆ ಹಾದಿ
ಹಸನ ಮಾಡಿದ ಗುರು ಬಸವ ಬರಲಂತೆ ||1||
ಸೂತ್ರಧಾರಿಯ ಆಟವೆಂದು ಸ
ತ್ಪಾತ್ರದಲ್ಲಾಡುವೆ ನೆನವಿಗೆ ತಂದು
ಕ್ಷೇತ್ರ ಯಾತ್ರಿಯು ಇದೆಯೆಂದು ನಿತ್ಯ
ಸ್ತೋತ್ರ ಮಾಡುವೆ ನಿರ್ಮಲ ಮನ ಒಪ್ಪಿನಿಂದೂ ||2||
ಬರುವ ಸುಖ ದುಃಖ ನಿಂದ್ಯ ಸ್ತೋತ್ರ ಶಿದ್ಧ
ವರನಾಗ್ನಿಯೆಂದರಿದು ಹರುಷಮಯ ಗಾತ್ರ
ಇರುವೆನಂಜದೆ ಅಣುಮಾತ್ರ ಪ್ರಮಥರು
ಬರುವ ದಾರಿಗೆ ದೃಷ್ಟಿ ಮುಚ್ಚಲರಿಯೆ ನೇತ್ರ ||3||
ಎಪ್ಪ ಎಪ್ಪಯೆಂದು ಎನಗೆ ಒಪ್ಪಿಸಿ ಕರೆದಂತವರೆಲ್ಲ
ಹೆಪ್ಪುಗೂಡಿ ಬಂದಾ ಹೆತ್ತಾ ಮಕ್ಕಳೆಂಬೊನೂ
ಕಪ್ಪುಗೊರಳ ಶಿದ್ಧ ತಾನು ನಪ್ಪು ಮಾಡಿಕೊಟ್ಟನೆಂದು
ತಪ್ಪದೆ ನಡೆನುಡಿಗಳಲ್ಲಿ ಅಪ್ಪಿಯಿರ್ದೆನು ||ಪ||
ಭಿನ್ನ ಭಾವ ಮಾಡಲರಿಯ ಅನ್ಯರವಗುಣ ನೋಡಲರಿಯೇ
ತನ್ನ ತಾನೆ ಬಂದ ಭೋಗ ತನ್ನ ತಾನೆ ಹೋಗುವಾಗ
ಎನ್ನದೆಂದು ಬೆನ್ನು ಹತ್ತಿ ಬರಲರಿಯೆನು ||1||
ಆತ್ಮಸಾಕ್ಷಿಯಾಗಿ ನಡಿವೆ ಆತ್ಮ ಸಾಕ್ಷಿಯಾಗಿ ನುಡಿವೆ
ಆತ್ಮ ಸಾಕ್ಷಿಯಾಗಿ ಸಕಲ ಅನುಭವ ಮಾಳ್ಪೆನೂ
ಆತ್ಮರಾಮ ತಾನೆ ಗುರುವು ಆತ್ಮರಾಮ ತಾನೆ ಲಿಂಗ
ಆತ್ಮರಾಮ ತಾನೆ ಜಂಗಮವಾಗಿ ಬಂದಿಹನೂ ||2||
ತಂದಿ ಮಕ್ಕಳೆಂಬೊ ಭಾವ ವಂದೆ ಮುಖವಾಗಿರ್ದ
ಕುಂದು ಉಂಟೆ ಜಗದೊಳದಕ ಸಮವಾಗಾಣೆನು
ತಂದಿ ತಾಯಿ ಶಿದ್ಧಲಿಂಗ ಬಂಧು ಬಳಗ ಶಿದ್ಧಲಿಂಗ
ಕಂದನಾಗಿ ಬಂದ ಎನಗೆ ಶಿದ್ಧಲಿಂಗನೂ ||3||
ಓಂ ನಮಃ ಶಿವಾಯ ಕಲಿರೊ ನಾಯಂಬುದಳಿರೊ
ಓಂ ನಮಃ ಶಿವಾಯ ಯಂಬುದ ತಿಳಿರೊ ||ಪ||
ಅಂತರಂಗದೊಳಿರ್ಪ ಆನಂದ ಲೋಲಾ
ಭಕ್ತಿಗೆ ಭಾಗ್ಯ ಜ್ಞಾನ ವೈರಾಗ್ಯ
ವ್ಯಕ್ತಾಗಿ ಸಾಧಿಸು ಮುಕ್ತಿಗೆ ಯೋಗ್ಯ
ಸಿದ್ಧನ ನಾಮ ಸದ್ಭಕ್ತಿ ಪ್ರೇಮ
ಉದ್ಧಾರ ಮಾಳ್ಪ ಪ್ರಸಿದ್ಧ ನಿಸ್ಸೀಮ ||1||
ಒಂದೆಂದು ಭಾವಿಸದೆ ಎರಡಿಟ್ಟು ನೋಡುವರೆ
ಒಂದೆಯರಡಾದುದರಿಯೆ ಪ್ರಾಣಿ
ಮಂದಮತಿ ಗುಣ ಬಿಟ್ಟು ಚಂದಾಗಿ ಮನವಿಟ್ಟು
ಕುಂದಾದೆ ಕೇಳ್ನೀತಿಯಾ ಪ್ರಾಣಿ ||ಪ||
ಮುಂದಾಗಿ ಮಗ ನಿನ್ನ ಹೊಂದಿ ಮೊಲಿತಿಂದ್ಹಾಲು
ತಂದು ನೀ ತೋರಿಲ್ಲವೆ ಪ್ರಾಣಿ
ಹಿಂದ ನಾ ನೀ ಇಬ್ಬರೊಂದಾದ ಕಾರಣದಿ
ಬಂದ ಗುರುಪುತ್ರನೊಬ್ಬ ಪ್ರಾಣಿ ||1||
ಪಡದ ಮಗನೊಬ್ಬ ನೀ ಹಡದ ಮುಗವಬ್ಬಿರಲು
ವಡಲೊಂದೆ ಎರಡಿಲ್ಲವೆ ಪ್ರಾಣಿ
ಬಡಗಿಲಿ ನೀರಲಿ ಬಡಿದರೆ ಎರಡಾಪುವದೆ
ವಡಗೂಡಿ ವಂದಿರ್ಪುದು ಪ್ರಾಣಿ ||2||
ಅರವು ಹಿಡಿದು ನೀ ಗುರುಪಾದ ಬಿಡುಬೇಡ
ಸ್ತಿರ ಪದವಿ ಮುಂದಿರುವದು ಪ್ರಾಣಿ
ಗರವ ಅಹಂಕಾರಕ್ಕೆ ಗುರಿಯಾಗಿ ಗುರುಸಿದ್ಧಗ
ಹೊರತಾಗಿ ಕೆಡುಬ್ಯಾಡ ಪ್ರಾಣಿ ||3||
ಕರುಣಿಸಯ್ಯ ಬ್ಯಾಗ ನೀನು ದಯ| ಕರುಣಿ ಬಡವರಾಪೇಕ್ಷಿಯನು
ಶರಣಬಸವ ಕಲ್ಪವೃಕ್ಷ ಕಾಮಧೇನು
ಚರಣಕ್ಕೆರಗಿದೆ ಬಂದು ಬಿಡೆ ನಿನ್ನನಾನು ||ಪ||
ನಿಮ್ಮ ತೊತ್ತಿನ ಮಗನಯ್ಯ ಯಿಷ್ಟು| ಹಮ್ಮಿಲಿ ಬೇಡುವೆ ಜಿಯ್ಯಾ
ಗಮ್ಮನೆ ಪಾಲಿಸು ಸುಮ್ನಿರ್ಪುದು ಸಲ್ಲ
ನಮ್ಮನದಲಿ ನಿಮ್ಮ ನಂಬಿಕೊಂಡಿರ್ದೆನೂ ||1||
ಯಿರ್ಚಿದೊಳಿರ್ದ ಭಕ್ತಿರಿಗೆ ಚಿಂತಿ| ಹಚ್ಚಿ ಕಾಡುವರೆ ಸೇವಕಗೆ
ಮೆಚ್ಚರು ಪ್ರಮಥರು ಯಚ್ಚತ್ತು ನೋಡಯ್ಯ
ಅಚ್ಚೊತ್ತಿದಂತೆನ್ನ ಬಿಚ್ಚಿ ಬ್ಯಾರಾಗದ್ದು ||2||
ಮಾನಪಮಾನಕ್ಕೆ ವಡಿಯ ನಿಮ್ಮ| ಧ್ಯಾನದೊಳಿರ್ದ ಮನಮಡಿಯ
ಸ್ವಾನುಭಾವದಲಿ ನಿನ್ನ ಖೂನ ತೊರಿಕೊಟ್ಟು
ಯೆನೇನು ಉಪದ್ರಯಿಲ್ಲದ್ದು ಗುರುಶಿದ್ಧ ||3||
ಕಂದನ ಹಟ ತಾಯಿ ತಂದಿಗಳೆ ನಡೆಸುವರು|
ಮಂದಿ ನಡೆಸಿಕೊಡುವರೆ ಗುರುವೆ
ಕಂದ ನಿಮ್ಮವನೆಂದು ಚಂದಾಗಿ ಹಟಮಾಳ್ಪೆ
ತಂದು ಕುಡು ಬ್ಯಾಗದಲ್ಲಿ ಗುರುವೆ ||ಪ||
ಹಡದ ತಾಯಿ ತಂದಿ ಬಡಿದು ಹೊಡದು ಬೈದು
ಹಿಡಿದು ಹೊರ ನೂಕುತಿಹರು ಗುರುವೆ
ಅಡಗಿಯಾದಾಕ್ಷಣಕ ಹುಡುಗನಿಗೆ ಹುಡುಹುಡುಕಿ
ಹಿಡತಂದು ಉಣಿಸುತಿಹರು ಗುರುವೆ ||1||
ಯನ್ನ ಮನ ಬಯಸುವದು| ನಿನ್ನ ಅಮೃತ ವಚನ
ಚನ್ನಾಗಿ ದಯಪಾಲಿಸು ಗುರುವೆ
ಯಿನ್ನೆನು ಬಯಕಿಲ್ಲ ನಿವ್ಹೊರತು ದಿಕ್ಕಿಲ್ಲ
ಮನ್ನಿಸು ತಕ್ಕದಯ್ಯ ಗುರುವೆ ||2||
ಯಲ್ಲಿ ಹೊಕ್ಕರು ಬಿಡೆನು ಅಲ್ಲಮ ಪ್ರಭು ಸಿದ್ಧ
ಕಲ್ಲಿಲ್ಹೊಡಸಿ ಕೊಳಲಿಲ್ಲವೆ ಗುರುವೆ
ಬಲ್ಲಿದ ಬಸವ ನಿನ್ನಲ್ಲಿ ಸಮರಸವಾಗಿ
ನಿಲ್ಲಲೊಡನೆ ಬಿಡುಬಲ್ಲನೆ ಗುರುವೆ ||3||
ಕರುಣಿಸು ಗುರುಸಿದ್ಧಯೀಗ ಅಂತಃಕರಣಮಯಿ ಕುವರಿಯ ಮ್ಯಾಗ
ಧರಣಿಯೊಳತಿ ದುಃಖ ಆಕಿಮನದೊಳಗೆ
ಪರಿಣಾಮ ತೋರಿಸಿ ಪರಿಹರಿಸು ಬ್ಯಾಗ ||ಪ||
ನಿನೆಗ್ಹೊಂದಿದಂತ ಪ್ರಾಣಿಗಳು ಯಿಷ್ಟು ಕನಿಕರ ಬರದೆ ನಿಮ್ಮೊಳು
ಮನ ಮುಚ್ಚಿ ಅನುದಿನ ನಿಮ್ಮ ಧ್ಯಾನ ಮಾಳ್ಪಳೂ
ಜನದೊಳಗೆ ಅಪಹಾಸ್ಯ ಆರಿಯ ಮೊರಿ ಕೇಳೊ ||1||
ಸತಿಪತಿಯಂಬನ್ಯಯವನು ಮೊದಲೆ
ಅತಿ ಮಾಡಿ ಕಳಿಸಿದ್ದಿ ನೀನು| ಪತಿವೃತ ಧರ್ಮದಲ್ಲಿ ಪತಿವಾಕ್ಯ ಮೀರದಲಿ
ಹಿತವಪ್ಪಿ ನಡಿವಳು ಪ್ರೀತಿಗಾಣೆ ಜಗದೊಳು ||2||
ಭಕ್ತರು ಮೆಚ್ಚರು ನಿನಗೆ ನಿಜ| ಮುಕ್ತಿಯ ಕುಡುವಿನೀ ಹ್ಯಾಂಗೆ
ತಕ್ತದೊಡಿಯ ಸಿದ್ಧಲಿಂಗ ಯಿದು ತರವಲ್ಲ
ಶಕ್ತಿ ವೀರಗ ಕೊಟ್ಟು ಸಮರಸ ಮಾಡವಳ ||3||
ಕಸ ನೀ ಹೊಡಿಯಮ್ಮ
ಮನಸಿನ ವಾಸನ ಬಿಡು ಹಮ್ಮ
ಹುಸಿಯಂಬ ಸಂಸಾರ ಹೊಟ್ಟು ಹಾರಿಸಿ ಘಟ್ಟಿ
ಬಸವನ ಪಾದ ಹಿಡಿಯಮ್ಮ ||ಪ||
ನಾಚಿಕೆ ಬಿಟ್ಟು ನಡಿ ನುಡಿ
ಹೆಜ್ಜಿ ತಪ್ಪದೆ ಇಟ್ಟು
ಸುಜನ ಭಾವದ ಭಕ್ತಿಯ ತೊಟ್ಟು ಕಿರಿ
ಗೆಜ್ಜಿ ಕಟ್ಟಿದ ಠಾಳಿ ಚಪ್ಪಳಿಗಿಟ್ಟು ||1||
ನಾನೀ ಯಂಬದು ಬಿಟ್ಟು
ನಾನಾ ಜನ್ಮ ರೋಗ ಸುಟ್ಟು
ಜ್ಞಾನದ ಸೀರಿ ಕುಪ್ಪಸ ತೊಟ್ಟು ಶಿವ
ಧ್ಯಾನ ಮುರಿಯದೆ ಬಹು ಯಚ್ಚರ ಯಿಟ್ಟು ||2||
ಅನುದಿನ ಯಿಷ್ಟಷ್ಟು ಶಿವ
ಅನುಭಾವಕ ಕಿವಿಗೊಟ್ಟು
ಘನಸುಖ ಮನಸಿಗೆ ತಂದು ಹಚ್ಚಿಟ್ಟು
ಸಿದ್ಧಗ ತನುಮನ ವಪ್ಪಿಸಿ ಕೊಟ್ಟು ||3||
ಕರಕರಿ ಮಾಡ್ವರೆ ಕಂದ ಗುರು
ವರಪುತ್ರ ನೀಯಿದ್ಧಿ ಯಿದು ಯೇನು ಚಂದ
ಪರಮ ಹರುಷ ಗುಣದಿಂದ ನಿಜ
ದರುವಿಟ್ಟು ನೋಡುತ ಆಡು ಆನಂದ ||ಪ||
ಯಾವ ದುಃಖವು ನಿನಗಿಲ್ಲ ಭಕ್ತಿ
ಭಾವ ನೋಡುವೆನೆಂದು ಬಂದಿದ್ದಿಯಲ್ಲಾ
ಶಿವಪೂಜೇಶ್ವರ ತಾನೆ ಬಲ್ಲ ಪ್ರೇಮ
ತವಕದಿ ಕರದುಣ್ಣು ಸವಿಸಕ್ಕರಿ ಬೆಲ್ಲ ||1||
ಠಕ್ಕುತನವ ಮಾಡಬ್ಯಾಡ
ನಾಲ್ಕು ದಿಕ್ಕಿಲಿ ನಿನ್ನ ಸುದ್ದಿ ಹೊಗ್ಯದಗಾಡ
ಚಿಕ್ಕತನದ ಬುದ್ಧಿ ಬ್ಯಾಡ ನಿನ್ನ
ವಕ್ಕರುಳಿಯದು ತಮ್ಮ ಯಿದು ಯೆನಪಾಡ ||2||
ಶಾಂತಿ ರೂಪವ ತಾಳಿಕೊಂಡು ಮಹ
ಮಹತ್ವ ಸಿದ್ಧನ ಪಾದ ನೋಡಿ ಮನಗಂಡು
ಅಂತರಂಗದ ಸಾರವುಂಡು ಲೋಕ
ರಂತೆ ನೀಯಿರುಬ್ಯಾಡ ಜನರೊಳು ಭಂಡು ||3||
ಕಳಕೊಬ್ಯಾಡೆಲೊ ಸ್ನೇಹ ತಮ್ಮ ಮನಸಿಗಿ
ತಿಳಕೊ ನೀ ಇರದು ಮದ ಹಮ್ಮ
ತೊಳಕೊ ಮೈಲಿಗಿ ಪಾಪ ಕರ್ಮ ಬಿತ್ತಿ
ಬೆಳಕೊ ಗುರುಕೃಪ ಪೂರ್ಣ ಜ್ಞಾನ ಪರ ಬ್ರಹ್ಮ ||ಪ||
ಯಾರಿಗಿ ಸ್ಥಿರವಲ್ಲೊ ಯಿದನು ಭಕ್ತಿ
ಹಾರಿಸಿ ಬಿಡುವದು ಆರು ಸ್ಥಲವನು
ಸಾರಿ ಹೇಳುವೆ ಸತ್ಯವಿದನು ಪಥ
ತೋರುವ ಗುರುವಿನ ಬೆನ್ನು ಹತ್ತೊ ನೀನು ||1||
ಹೊನ್ನು ಹೆಣ್ಣು ಮಣ್ಣು ಮೂರು ಭವದ
ಹುಣ್ಣೆಂದು ತಿಳಕೊಂಡು ಪ್ರಮಥರು ಸೇರರೂ
ಕಣ್ಣಿಲ್ಲದಂತೆ ಕುರುಡರೂ ಮುಚ್ಚಿ
ಮಣ್ಣು ಪಾಲಾದರು ಗತಿಯಂದು ಕಾಣರೂ ||2||
ಕೇಳಿದರ ವಳಿತಾದ ನಿನಗ ಮಾತು
ಕೇಳದಿದ್ದರ ಕೆಟ್ಟಿ ಫಲವಿಲ್ಲದರೊಳಗ
ಭಾಳ ಲೋಚನ ಸಿದ್ಧ ನಿನಗ ಮೆಟ್ಟಿ
ಸೀಳಿಸಿ ಬಿಸುಟುವ ನರಕ ಕುಣಿಯೊಳಗ ||3||
ಕಾಳ ವಡ್ಡತು ಜನಕ ಹೇಳತಿನ್ನಳವಲ್ಲ ಹೇಳಿದರ ಕೇಳೊ ಗುಣವಿಲ್ಲ
ಲೋಕದೊಳು ಬಹಳ ಹೆಚ್ಚಿತು ಪಾಪವೆಲ್ಲ ಯಮರಾಜ ಕೇಳಿ ಸೈರಿಣಿಲ್ಲಾ
ಸೂಳಿ ಮಕ್ಕಳ ತಂದು ಶೂಲಕ್ಹಾಕುವೆನೆಂದು
ಮ್ಯಾಳೈಸಿ ಹೊಂಟ ಬಿಡನಲ್ಲ ತ್ವಂಸಾರಿದೆ ||ಪ||
ಪಾಪಾತ್ಮರುದ್ಭವಿಸಿ ಲೋಪವಾಯಿತು ಭಕ್ತಿ
ತಾಪತ್ರಯಡೆಗೊಂಡಿತಲ್ಲ ಅತಿ ಕೋಪ ಹೆಚ್ಚಿತು ಶಾಂತಿಯಿಲ್ಲ
ಸಜ್ಜನರ ತಾಪ ಬಡಿಸುತ ಯಿರುವರಲ್ಲಾ
ಈಪರಿ ದುಷ್ಕರ್ಮ ವ್ಯಾಪಾರ ಮಾಡುವರು
ವಿಪರೀತ ಕಾಲ ಬಂತಲ್ಲಾ ತ್ವಂಸಾರಿದೆ ||1||
ಸತ್ಯ ಶರಣರ ಚಿತ್ತ ವತ್ತಿ ನೋಯಿಸಿದ ದ್ರೋಹ
ಬುತ್ತಿಯಾಯಿತು ಯಮಪುರಕ ಪಾಪವನು
ಬಿತ್ತಿ ಬೆಳದರು ಉಣಲಿಕ್ಕೆ ನರಕವನು
ಗುತ್ತಿಗ್ಹಿಡಿದರು ಬೀಳಲಿಕ್ಕೆ ಸತ್ತು ಹುಟ್ಟರು ಅಲ್ಲೆ
ಗೊತ್ತಾಯಿತವರಿಗೆ ಯತ್ತ ಹೊಂಟರು ಹೊರಿಯಕ್ಕೆ ತ್ವಂಸಾರಿದೇ ||2||
ಗುರುವು ಮಾಡಿಸುತಿರಲು ಅವರೇನು ಮಾಡುವರು
ಗುರುಪುತ್ರರರಿದು ಪೇಳಿದರು ಬಂದದ್ದು ಬರಲೆಂದು ಧೈರ್ಯ ತಾಳಿದರು
ಹಗಲಿರುಳು ಗುರು ಭಜನೆ ಬಿಡದೆ ಮಾಡುವರು
ನರರೊಳಗೆ ನರರಂತೆ ಶರೀರ ಧರ್ಮದ ತಾಳಿ
ಗುರುಸಿದ್ಧನ ಹೆಸರ್ಹೇಳುತಿಹರು ತ್ವಂಸಾರಿದೆ ||3||
ಕಿತ್ತೋಣಾದತ್ತ
ಶೆಪ್ಪ ಹರಿಯೋಣಾದತ್ತ
ಗುರು ಕರಜಾತನಿಂದ ಅರಿಯದೇ ಗರ್ವಿಲಿ
ನರ ಕುರಿಗೋಳ್ ನೀವು ಎಲ್ಲರು ಕೂಡಿ ||ಪ||
ಗುರುವಿನ ಮಗ ತಾನು
ದೇಹದ ಪರವಿ ಅವನಿಗೇನು
ನರಕುರಿಗೊಳ್ ನುಡಿ ಲಕ್ಷ್ಯಕ್ಕೆ ತಾರನು
ಪರಮಾನಂದ ಸುಖದೊಳ್ ಇರುವನು ||1||
ಕುಲ ಛಲದವನಲ್ಲ
ಕುಟಿಲರ ಮೆಟ್ಟಿ ಸೀಳಬಲ್ಲ
ಹೊಲೆಮಾದಿಗರಿಗೆ ಅಂಜುವನಲ್ಲ
ಮಲಹರ ನಾಜ್ಞೆಯ ಮೀರಲಿಕಿಲ್ಲ ||2||
ಕಾರಣಿಕನಾದವನು
ಮಹಾತ್ಮೆ ತೋರಿ ಕಳಿಸ್ಯಾನ ಶಿವನು
ಧೀರ ಬಸವ ವಿರಕ್ತ ಸಿದ್ಧನು
ಮೀರಿದವರ ಹಲ್ಲ ಮುರಿಯ ಬಂದಿಹನು ||3||
ಕುಡುವವನ್ಯಾರೊ ಕೊಂಬವನ್ಯಾರೊ
ಸುಡುಗಡ ಸಿದ್ಧನ ಸಾಕ್ಷಿಯ ತೊರೊ
ಬಡಿವಾರ ಯಾತಕ್ಕೆ ಭಕ್ತಿಗೆ ದೂರೊ
ನಡಿ ನುಡಿಯಲ್ಲಿ ಶಿವನ ನೆನವಿಗೆ ತಾರೊ ||ಪ||
ಅವನರಿಯದೆ ನೀ ತಂದಿದಿಯೇನು
ತವನಿಧಿ ತುಂಬ್ಯಾನ ತ್ರಿಜಗವನು
ಆವಯಿವಗ ಕುಡುವ ದಕ್ಷಿರಿ ತನಯೇನು
ಶಿವನೀಗೆ ಶಿವ ಇನ್ನೊಬ್ಹಾನೇನೂ ||1||
ಪಿಂಡ ಬ್ರಹ್ಮಾಂಡವನ ಭಂಡಾರ ಕೋಟಿ
ಉಂಡು ಉಟ್ಟು ಮೆರಿತದ ಎಂದಿಗಿಲ್ಲ ತುಟ್ಟಿ
ದಂಡನಾಯಕನೊಬ್ಬ ಮುಕ್ತಿಯ ಮುಟ್ಟಿ
ಕಂಡೆನಾ ಕಣ್ಣ ತುಂಬ ರಾಸಿ ಮನ ಮುಟ್ಟಿ ||2||
ತಾನೆ ವಸ್ತು ತಾನೆ ಮಾಯಿ|
ತಾನೆ ಇಹಪರ ಸಕಲ ಪ್ರಪಂಚ
ತಾನೆ ಶ್ರೀಗುರುಸಿದ್ಧ ನಿರ್ಲೆಪಕ
ತಾನೇ ತಾನಾಗಿರುವನು ಅನುದಿನ ||3||
ಕೆಟ್ಟವರೊಬ್ಬರು ನನಗಿಲ್ಲ ನಾಯಾರಿಗಿ ಕೆಟ್ಟದು ಮಾಡಿಲ್ಲ
ಹುಟ್ಟುಸಿ ತಂದವ ತಾಬಲ್ಲ ಮನ ಮುಟ್ಟಿ ಹೇಳುವ ನಿಮಗೆಲ್ಲ ||ಪ||
ಒಳ್ಳೆವ ಕೆಟ್ಟವ ಗುರುತಾನೆ ಯಿಷ್ಟು ಸುಳ್ಳೆ ನಿಮಿತ್ಯವ ಕೊಟ್ಟಾನೆ
ಕಳ್ಳ ಸುಳ್ಳರಿಗೆ ಬಲಹಾನೆ ಗಟ್ಟಿ ಸೊಳ್ಳು ಮಾಡಿ ಹಾರಿಸಿ ಬಿಡತಾನೆ ||1||
ವಿಪರೀತ ಮಾಡುತ ನಿಂತಾನೆ
ಇಲ್ಲದ ಪರಾಧ ನಮ್ಮೆಲ್ಲ ತರತಾನೆ
ಉಪಕಾರಸ್ತರನೆಲ್ಲ ನೋಡುತಾನೆ ತಪ್ಪಗಿ
ತಪರಾಕಿ ಬಡದು ಹಸನ ಮಾಡುತಾನೆ |2||
ಮಾರಿ ತರುವನು ಮಿತಿ ಮೀರಿದಂತೆ ಭವ
ಭಾರಿಗಳು ಹಾಸ್ಯ ಮಾಡಿ ನಗುವಂತೆ
ತಾರಿಸುವ ಘಾಳಿ ಬಿಸಲು ತಗಲದಂತೆ ಮಹತ್ವ
ತೋರಿಸುವ ಶಿದ್ಧ ಜನಕ ಕಾಣುವಂತೆ ||3||
ಕಹಿ ಸವಿ ಮಾಡಬಲ್ಲ ಪ್ರಸಾದಿಗಿ|
ಸವಿ ಕಹಿಯಾಗುವದುಂಟೇನು|
ಮೈಯ ಮರದಂತ ಮಹತ್ವ ಪುರುಷನ
ಮಾಯಿ ಕಾಡುವದುಂಟೇನೊ ||ಪ||
ಬಡತನಕ ಹಿಗ್ಗು ಹಚ್ಚಿಕೊಂಬುವಗ
ಸಡಗರ ಸಂಪತ್ತು ದುಃಖವೇನೊ
ಸುಡಗಾಡಿನಲ್ಲಿ ವಸ್ತಿ ಮಾಡುವ ಪುರುಷಗ
ಗುಡಿ ಸಿಕ್ಕರ ಭಯ ಬರುವದೇನೊ ||1||
ಕಿರಿತಾನಕ ಮನಯಳಸಿದ ಪುರುಷಗ
ಹಿರಿತನ ಬಂದರ ದುಃಖವೇನೊ
ಗುರುಪಾದಕ ಗುರಿಯಿಟ್ಟ ಶರಣಗ
ತಿರಿದುಂಡರ ಲಜ್ಜ ಬಾಹೊದೇನೊ ||2||
ನಿಂದ ಕೇಳಿ ಮನಕುಂದದ ಪುರಷಗ
ವಂದಿಸಿ ಸ್ತುತಿಸಲು ದುಃಖೇನೊ
ಬಂದ ಸುಖ ದುಃಖ ವಂದೆಂದವನಿಗೆ
ಅಂದಿಂದಿಗಿ ಭವ ಉಂಟೇನೊ ||3||
ಮಾನಪಮಾನಕ ಎದರ ನಿಂತವನಿಗೆ
ಮಾನವರಂಜಿಕಿ ಉಂಟೇನೊ
ತಾನೆ ತನ್ನೊಳು ತಿಳಿದ ಸತ್ಪುರಷಗ
ನಾನಾ ಶಾಸ್ತ್ರವ ಬೇಕೇನೊ ||4||
ತತ್ವ ಐದರೊಳೈದು ಬೆರಸ ಬಲ್ಲವನಿಗೆ
ಸತ್ವ ರಜ ತಮ ಉಂಟೇನೊ
ಮಹತ್ವಕ ಸಿದ್ಧನ ಹೊಂದಿದ ಭಕ್ತಗ
ಪಾತಕ ಸೂತಕ ಉಂಟೇನೊ ||5||
ಕೂಡಿ ಅಗಲದಂತ ಸ್ನೇಹ ಮಾಡಿದೆ ತಂಗಿ| ಕೇಳು ಸಖಿಯೇ
ಗಾಡಿಕಾರನು ಮಂತ್ರ ಮಾಡಿ ಮನ ಶಳದಾನು| ಕೇಳು ಸಖಿಯೇ
ಮಾಡಲಿನ್ನೇನವ್ವ ಕೂಡಿದೆ ಅವನೊಳು| ಕೇಳು ಸಖಿಯೇ
ನಾಡೆಲ್ಲ ಬೆಳಗಾಯಿತು ನಾಚಿಕಿ ಅಳದೊಯಿತು| ಕೇಳು ಸಖಿಯೇ ||ಪ||
ಸ್ನಾನ ಮಾಡಿಸಿದ ಸುಜ್ಞಾನ ತೀರ್ಥಕ ವೈದು| ಕೇಳು ಸಖಿಯೇ
ನಾನಾ ರೋಗಂಗಳು ತಾನೆ ಬಿಟ್ಟೋದವು| ಕೇಳು ಸಖಿಯೇ
ನಾನಿನೆಂಬುವದೆರಡೊಂದಾಗಿ ತೋರಿತು| ಕೇಳು ಸಖಿಯೇ
ಏನೇನು ಇಲ್ಲದ ತಾನೆ ತಾನಾಯಿತು| ಕೇಳು ಸಖಿಯೇ ||1||
ಪಾಡು ಇಳಸಿ ಹಣ್ಣು ಮಾಡಿದಾಕ್ಷಣದೊಳು| ಕೇಳು ಸಖಿಯೇ
ಕೂಡಿ ಉಣಸಿಕೊಂಡ ಸವಿಯಿತ್ತು ಸಮರಸ| ಕೇಳು ಸಖಿಯೇ
ನಾಡಿನೊಳಿವನಂತ ಜೋಡೆಲ್ಲಿ ಕಾಣೆನು| ಕೇಳು ಸಖಿಯೇ
ಬೇಡಿದ್ದು ಕುಡುವನು ಆಡಿದ್ದು ತಪ್ಪಾನು| ಕೇಳು ಸಖಿಯೇ ||2||
ಉಟ್ಟು ಕಳಿಯದಂತ ಧಟ್ಟಿ ಪಿತಾಂಬರ| ಕೇಳು ಸಖಿಯೇ
ಇಟ್ಟು ತೆಗಿಯದಂತ ಪೆಟ್ಟಿಗಿ ವಸ್ತವ| ಕೇಳು ಸಖಿಯೇ
ಎಷ್ಟು ಹೇಳಿ ಅಷ್ಟವರಣ ಅಂಗಾದದ್ದು| ಕೇಳು ಸಖಿಯೇ
ಇಷ್ಟಾರ್ಥ ಸಿದ್ಧಿ ಎದಿರಿಲಿಟ್ಟು ತೊರಿಸುವನು| ಕೇಳು ಸಖಿಯೇ ||3||
ಕೊಟ್ಟು ಬೇಡದಂತೆ ಉದ್ದಿಮಿ ಮಾಡೆಂದ| ಕೇಳು ಸಖಿಯೇ
ಮುಟ್ಟದೆ ಬಸುರಾಗಿ ಮುಕ್ತಿ ಹಡಕೊಳ್ಳೆಂದ| ಕೇಳು ಸಖಿಯೇ
ಹುಟ್ಟಿನ ಕೂಸಿನ ತೊಟ್ಟಿಲಲ್ಲದೆ ಕಟ್ಟಿ| ಕೇಳು ಸಖಿಯೇ
ಮುಟ್ಟಿ ಮುದ್ದಾಡಿಸಿ ಜೋಗುಳ ಪಾಡೆಂದ| ಕೇಳು ಸಖಿಯೇ ||4||
ಯಾರಿಗೆ ದೊರಕಾದು ಈರೇಳು ಭುವನದಿ| ಕೇಳು ಸಖಿಯೇ
ಮೀರಿದ ಘನವಸ್ತು ತಾನೆ ಕೈಸಾರಿತ್ತು| ಕೇಳು ಸಖಿಯೇ
ಮೇರು ಮಂದಿರವಾಗಿ ಧೀರ ಸಿದ್ಧೇಶನ| ಕೇಳು ಸಖಿಯೇ
ಆ ಹರನೊಳಗಾದೆನು ಮೂರು ಬಾಗಿಲ ಮುಚ್ಚಿ| ಕೇಳು ಸಖಿಯೇ ||5||
ಖೂನ ಹೇಳುವೆನು ಕೇಳೊಂದು|
ಧ್ಯಾನ ಮಾಡು ನಿತ್ಯ ಗುರುವಿಂದು| ಮಾಡು ನಿತ್ಯ ಗುರುವಿಂದು ||ಪ||
ನಾನಾ ಜನ್ಮಕಧಿಕ ನರಜನ್ಮ|
ಜ್ಞಾನಮಾರ್ಗ ಉಂಟು ತಿಳಿತಮ್ಮಾ ಮಾರ್ಗವುಂಟು ತಿಳಿತಮ್ಮ ||1||
ದಾನ ಧರ್ಮ ಪರರಿಗುಪಕಾರ
ಅನುದಿನ ಮಾಡೊ ಭಕ್ತಿ ಮನಪೂರಾ| ಮಾಡೊ ಭಕ್ತಿ ಮನಪೂರಾ||2||
ಗುರು ಹಿರಿಯರನ ಕಂಡು ಶಿರ ಬಾಗೋ
ಧರಿಯೊಳು ಹತ್ತು ಜನಕಬೇಕಾಗೊ| ಹತ್ತು ಜನಕ ಬೇಕಾಗೊ ||3||
ದೇವ ಭಕ್ತರಲ್ಲಿಗೆ ಹೋಗೊ
ಸೇವಾ ಮಾಡಿ ಅವರ ತೊತ್ತಾಗೊ| ಮಾಡಿಯವರ ತೊತ್ತಾಗೋ ||4||
ಸಿದ್ಧ ಸಿದ್ಧಯೆಂದು ನೀ ಕೂಗೋ
ಸದ್ಗತಿ ಮಾರ್ಗ ಹೊಂದಿ ಭವನೀಗೊ| ಮಾರ್ಗ ಹೊಂದಿ ಭವನೀಗೊ ||5||
ಗಂಗಾಧರನೆ ನಿಮ್ಮ ನಂಬಿದೆ|
ಅಂತರಂಗ ಸಾಕ್ಷಿ ಮಾಡಿದೆ ||ಪ||
ಬೇಡಿಕೊಂಬೆ ನಿಮ್ಮ ಚರಣ ಕಮಲಕ್ಕೆ
ಅಮೃತ ನೀಡೊ ಗುರುವೆ ಉಣಲಿಕ್ಕೆ
ನೀಡೊ ಗುರುವೆ ಉಣಲಿಕ್ಕೆ ||1||
ವ್ಯರ್ಥ ಮಾಡುಬೇಡ ಎನ್ನ ದೇಹ
ಸಾರ್ಥಕ ಮಾಡೊ ಜನ್ಮ ಗುರುರಾಯಾ
ಮಾಡೊ ಜನ್ಮ ಗುರುರಾಯಾ ||2||
ಸಿದ್ಧಲಿಂಗ ಮದನ ಸಂಹಾರ
ಬಸವಗ ಸಿದ್ಧಿಯಾಗೊ ದಯಪೂರಾ
ಸಿದ್ಧಿಯಾಗೊ ದಯಪುರಾ ||3||
ಗುರುವೆ ತಂದಿತಾಯಿ| ಗುರುವೆ ಬಂಧು ಬಳಗಾ
ಗುರುವೆ ಸಕಲೈಶ್ವರ್ಯ| ಗುರುವಿನ ನೆನಪೆ ಕಾರಣ ಕಾರ್ಯ ||ಪ||
ಗುರು ಮುಖ್ಯವೆಂಬುವರು| ಬಸವಾದಿ ಪ್ರಮಥರು
ಅರುವಿಡಿದು ಬಂದವರು| ಗುರುಕರುಣ ಪ್ರಸಾದ ಕೊಂಬುವರು ||1||
ಭಕ್ತಿ ಜ್ಞಾನ ವೈರಾಗ್ಯ| ಬಸವನೆ ಸೌಭಾಗ್ಯ
ಮುಕ್ತಿ ಪುರುಷ ಯೋಗ್ಯ| ನಿಜವಿರಕ್ತ ಪ್ರಭುವಿನಾಗ್ಯ ||2||
ಗುರುಪುತ್ರರಾದವರು| ನೆರೆ ನಂಬಿಕೊಂಡಿಹರು
ಸಿರಿ ಭೋಗ ಬಯಸಾರು| ಗುರುವಿನ ಮರಿಯದೆ ನೆನೆಸುವರು ||3||
ಕುಲಕೊಬ್ಬ ಶರಣಾರ| ಕೂಡಿ ಬಳಸುವ ಧೀರಾ
ಮಲಹರನವತಾರ| ಮುಕ್ತಿಫಲ ಕೊಡುವನು ಸಾರ ||4||
ಗುರುಸಿದ್ಧ ದಯಾಳ| ಮಾಯಿಕೊಳ ಹಾಳ
ಯಿರುವ ಮೀರಿದ ಸ್ಥಳ| ಕೂಡಿ ಮೆರೆವ ಭಕ್ತಿಯೊಳ ||5||
ಗುರುವಿನ ಭಜಿಸಿ ಕಾಲಭಯಕಳಿಯೊ
ಗುರುತಾದ ಮಾತು ಮನಸಿಗೆ ತಿಳಿಯೊ| ಮಾತು ಮನಸಿಗೆ ತಿಳಿಯೋ||ಪ||
ನರನೆ ಮಾಯ ಫಾಸಿ ಸಂಸಾರ
ಅರಿನೀರ ಗುರಳಿ ದೇಹ ಅಸ್ಥಿರ| ನೀರಗುರಳಿ ದೇಹ ಅಸ್ಥಿರ ||1||
ಸ್ಥಿರವಹ ಪದವಿ ಪಡಿಯೊ ಸುಖಸಾರ
ಅಸ್ಥಿರ ನಂಬಬೇಡ ಯಮ ಘೋರ| ನಂಬಬೇಡ ಯಮಘೋರ ||2||
ಗುರುಸಿದ್ಧ ನಾಮಾಮೃತ ಫಲ ತಮ್ಮ
ಮರಿಯದೆ ಸವಿಯೊ ನೀನೆ ಪರಬ್ರಹ್ಮ| ಸವಿಯೋ ನೀನೆ ಪರಬ್ರಹ್ಮ ||3||
ಗುರುವಿನ ಭಜನಿ ಬಿಡದೆ ಮಾಡಣ್ಣ
ಭವ ಪರಿಹರಿಸಿ ಬಿಡುವ ಮುಕ್ಕಣ್ಣ| ಹರಿಸಿ ||ಪ||
ಕರಮನ ಭಾವ ಶುದ್ಧ ಮೊರೆಯಿಟ್ಟು
ಪರಿಪರಿ ಭಜಿಸಿ ಕೇಳೊ ಕಿವಿಕೊಟ್ಟು| ಭಜಿಸಿ ||1||
ಮನಸಿಗೆ ತಂದು ನೋಡೊ ಸುಖವುಂಟು
ಕನಸೆಂದರಿಯೊ ಕಣ್ಣಿಗೆ ಕಾಣಷ್ಟು| ಆರಿಯೊ ||2||
ದೇಹ ಭೋಗದಾಸಿ ಬಿಟ್ಟು ಕೊಟ್ಟು
ನ್ಯಾಯದಿ ಸಿದ್ಧವೇಷ ನೀ ತೊಟ್ಟು| ಸಿದ್ಧ ||3||
ಗುರುವೆ ನೀ ಗತಿಯೆಂದು| ಮೊರೆಹೊಕ್ಕೆ ನಿಮ್ಮನ್ನ
ಪರಿಹರಿಸು ಮಾಯಾನ| ಕರಕೊ ಕರಪಿಡಿದು ಸಣ್ಣವನಾ ||ಪ||
ಅಂಸಿಕ ನಿಮ್ಮವಾ| ಸಂಸಾರ ದುಃಖವ
ಸಂಸಾರ ಬಾಧಾವ| ಯಿಂತ ಅವಸರ ಯಿಡುವರೆ ದೇವಾ ||1||
ಆಳಿನ ಅಭಿಮಾನ| ಆಳ್ವೋಡಿಯರಿಗೆಂದು ಹೇಳುವರಂದಿದು ||2||
ಪ್ರಮಥರು ಕೇಳರೆ ನಿಮಗಿಂದೊ
ಬಿರುದುಳ್ಳೊ ಗುರುಸಿದ್ಧ| ಕರುಣಿಸು ಸೋತಿದ್ದಾ
ಚರಣ ಕಮಲಕ ಶುದ್ಧ| ಮೂರನು ಪಪ್ಪಿಸಿ ಬಿಟ್ಟಿದ್ದಾ ||3||
ಗುರುವೆ ನೀ ಬೇಗನೆ ಮೊರೆ ಕೇಳೊ
ವ್ಯರ್ಥ ಹರದು ಹೋಗತಿನಿ ಹಿಡಕೊಳೊ
ಅರವು ತೊರದು ಅಸಿಗುಣದೊಳು
ಮುಕ್ತಿದೊರಕದು ಬಿದ್ದೆ ಮಾಯಿ ಬಲಿಯೋಳು ||ಪ||
ಗುರುವೆನೀ ಹಾಕಿದ ಬಲಿವೆಂದು|
ನಾ ಹಾಯಿಕೊಂಡೆನು ಮತ್ತೊಂದು
ಘೋರದುಃಖ ಸಂಸಾರ ಬಂದು
ತಾನೆ ಕೊರಳಿಗಿ ಬಿದ್ದಿತು ಬಿಡೆನೆಂದು ||1||
ಮಾಯ ಮೋಹಕ ಬಿದ್ದು ಮರುಳಾದೆ|
ಅಪಾಯ ಬರುವದು ಮುಂದ ತಿಳಿದ್ಹೊದೆ
ಆಯಸ ಬಹಳ ಭವಕ ಗುರಿಯಾದೆ ಗುರು
ರಾಯ ತಪ್ಪಿಸು ನಿಮ್ಮ ಮಗನಾದೆ ||2||
ಆಯಸ ಬಹಳ ಭವಕ ಗುರಿಯಾದೆ ಗುರು
ಸಿದ್ಧ ತೊಡಿಯೊ ಮೊದಲದರುಷ್ಟ
ಯಿದ್ದೆನು ಸೇವಕ ಗಟ್ಟಿಮುಟ್ಟ ಮಾಯ
ವದ್ದೆನು ಆವಗ ಮನಮುಟ್ಟ ||3||
ಗುರುವೆ ನಿನ್ಹೊರತು ಯಾರಿಲ್ಲ ಗೊತ್ತು ಅರಿಯದೆ ನನ್ನವರಿವರೆಂದೆನಲ್ಲ
ಆರು ವ್ಯಳ್ಯಕ ಆಗಲಿಲ್ಲಾ ನೆರದವ್ರ್ಹರದ್ಹೊದರೊಬ್ಬರಿರಲಿಲ್ಲ ||ಪ||
ತಂದಿ ತಾಯಿ ಬಂಧು ಬಳಗ ನೀನೆಯಂದು ನಿಶ್ಚೈಸಿದೆ ಯನ್ನ ಮನದೊಳಗೆ
ಹೊಂದಿಕೊಂಡಿರುವೆ ಕೈಕೆಳಗ ಬಂದು ಕರುಣಿಸು ಗುರುವೆ ನೀ ಯಿಷ್ಟರೊಳಗ ||1||
ಸುಖಯಿದ್ದರಿರುವೊರೆಲ್ಲಾರು ಯಿಂತ ದುಃಖದಲ್ಲಿ ಅವರ್ಯಾಕ ನನ್ನ ಸೇರ್ಯಾರು
ಪಕ ಪಕ ಕಂಡು ನಗುವರು ನಿಂದ ಮುಖರಾಗಿ ಬಹುತೇಕ ಅಡಿಕೊಂಬುವರು ||2||
ಹಗಲಿರುಳ ಭಜಿಸುವೆ ನಿನ್ನ ತೊತ್ತಿನ ಮಗನೆಂದು ಕರೆದೆತ್ತಿಕೊಳ್ಳಯ್ಯಯನ್ನ
ಯುಗ ಯುಗದಿ ಬಿಟ್ಟಿಲ್ಲ ನಿನ್ನ ಕಡಿಗೆ ತಗಿದು ಆಳಲಿಬೇಕು ಗುರುಶಿದ್ಧಯೆನ್ನ ||3||
ಗುರುವೆ ನಿನ್ನ ಪಾದದ ಧ್ಯಾನ ಮರಿಯದಂತೆ ಮಾಡು ಯನ್ನನ
ಪರಮ ಪುರುಷ ತುಂಬಿ ತುಳುಕಿದ್ದೆ ಖೂನ
ಯಿರುವೆ ನಿಮ್ಮ ಸೇವದೊಳನುದಿನ ||ಪ||
ಮರವಿಯಂಬೊ ಮಾಯದ ಪಾಶಿ
ಉರಲು ಬಿದ್ದಿತು ಬಿಡದು ಅತಿ ಆಶಿ
ಶರೀರ ಸುಖ ದುಃಖ ಭೋಗ ನೆನನೆನಸಿ
ಅರವು ತೋರದು ಆಗುವೆ ಘಾಸಿ ||1||
ಸೇವೆ ತಪ್ಪಿಸಿಕೊಂಡಿರ್ದಿರಾಗಿ
ಝಾವ ಅಗಲದು ವಿಧಿ ಮಾಯಿ ಕಾಗಿ
ಯಾವ ಜನ್ಮದಿ ಗತಿಯಿಲ್ಲ ವಳಗಾಗಿ
ದೇವ ಇದೆ ಜನ್ಮ ಹಿಡಿ ಕಯ್ಯ ಬೇಗಿ ||2||
ಅಂಶಿ ಭೂತ ನಿಮ್ಮವನೆಂದು
ಅವಸರ ಹೇಳುಮೆಯಿಹದಲ್ಲಿ ನಿಂದು
ಮಾಸ ಪಿಂಡದ ವರ್ತನಿ ಬಿಡನೆಂದು
ಸಂಶಯವಿಲ್ಲದೆ ಸಿದ್ಧ ಭಜಿಸುವೆಯೆಂದು ||3||
ಗುರುವೆ ನಿನ್ನಗ ಬಿಟ್ಟುದಲ್ಲ ನಿನ್ನ
ನೆರೆ ನಂಬಿಕೊಂಡವರು ಮಾಡಿದ್ದುದೆಲ್ಲ ||ಪ||
ಭಕ್ತ ದೇಹಕ ದೇವ ನೀನು ಮೂಲ
ಭಕ್ತಿ ಪುರುಷ ನಿನಗರಿವಲ್ಲದ್ದೆನು
ಶಕ್ತಿ ಪುರುಷ ನಿನಗರಿವಲ್ಲದ್ದೆನು
ಮುಕ್ತಿದಾಯಕ ಕಾಮಧೇನು
ಅಶಕ್ತ ನಿನ್ನಗಲ್ಲದೆ ಯಿರುವೆನು ನಾನು ||1||
ಕಂಭ ಸೂತ್ರದ ಬೊಂಬಿನಾನು ಘಾಳಿ
ತುಂಬಿ ಕುಣಿಸ್ಯಾಡುವಿ ಜಗವೆಲ್ಲ ನೀನು
ನಂಬಿ ಕೊಂಡಿರ್ದಿಯನ್ನನೂ ನಿನ್ನ
ಚಿಂಬತ್ತಿ ಬರುವೆನು ಕರದಲ್ಲಿ ನಾನು ||2||
ನಾನೀ ಯಂಬುವ ಭೇದವಿಲ್ಲ ನೀನೆ
ಖೂನಕ್ಕ ತಂದಿಟ್ಟಿ ನಾನೇನು ಬಲ್ಲ
ಮಾನಾಪಮಾನ ನಂದಲ್ಲ ಮಹ
ದಾನಿ ಶ್ರೀ ಗುರು ಸಿದ್ಧಲಿಂಗ ತಾ ಬಲ್ಲ ||3||
ಗುರುವಿನ ಬೋಧ ಪರಮ ವಿನೋದ
ಮರಿಯಾದೆ ಜಪಿಸಲು ದೊರಿವದು ಸ್ವಾದ ||ಪ||
ಗುರುಮಂತ್ರ ಮೂಲ ಶರಣರ್ಸಕಿಲ
ಅರಿವಿನ ಆಲಯ ಕರುಣ ಕೃಪಾಲ ||1||
ಹರನವತಾರ ನರಜನ್ಮ ಉದ್ಧಾರ
ನೆರೆ ನಂಬಿದವರಲ್ಲಿ ಇರುವ ಮನೋಹರ ||2||
ದೀಕ್ಷಾಧಿಕಾರಿ ಶಿಕ್ಷಪರಿ ಪರಿ
ಮೋಕ್ಷದಾಯಕ ಸಿದ್ಧ ಸಾಕ್ಷಾತ್ ಆಧಾರಿ ||3||
ಗುರುವೆ ನೀ ಗತಿಯಂಬ ಮಂತ್ರ ಅಚ್ಚೊತ್ತಿರೆ| ಕೇಳು ಸಖಿಯೆ
ಹರಿವದು ಭವಪಾಶ ದೊರಿವದು ನಿಜ ಮುಕ್ತಿ| ಕೇಳು ಸಖಿಯೆ ||ಪ||
ಗುರುವೆ ಕಾರಣಕರ್ತ ಗುರುವೆ ಪರ ಬ್ರಹ್ಮನು| ಕೇಳು ಸಖಿಯೆ
ಗುರುವೆ ಸಕಲೈಶರ್ಯ ಭಕ್ತಿ ಜ್ಞಾನ ವೈರಾಗ್ಯ| ಕೇಳು ಸಖಿಯೆ ||1||
ಗುರುವೆ ಮಂತ್ರಕ ಮೂಲ ಸ್ವಾತಂತ್ರ ಧೀರನು| ಕೇಳು ಸಖಿಯೆ
ಗುರುವೆ ಅಷ್ಟಾವರ್ಣ ಯಿಷ್ಟಾರ್ಥ ಸಿದ್ಧಿಯು| ಕೇಳು ಸಖಿಯೆ ||2||
ಭಕ್ತ ಮಹೇಶ ಪ್ರಸಾದಿ ಪ್ರಾಣಲಿಂಗಿ| ಕೇಳು ಸಖಿಯೆ
ಶಕ್ತಿ ಸಹವಾಗಿ ಶರಣೈಕ್ಯ ಸ್ಥಲವಿದೆ| ಕೇಳು ಸಖಿಯೆ ||3||
ಯಿಂತಪ್ಪ ಮಂತ್ರದ ಮಹತ್ವಿ ಯೆಷ್ಟೆಳಲಿ| ಕೇಳು ಸಖಿಯೆ
ಅಂತಿಂತು ಯಣಿಕಿಲ್ಲ ಸಂತೋಷ ಘನಮಕ್ಕು| ಕೇಳು ಸಖಿಯೆ ||4||
ಪರಮ ಹರುಷದಿಂದ ಪಠಿಸಲು ನಿಜ ಸುಖ| ಕೇಳು ಸಖಿಯೆ
ಪರಿಪೂರ್ಣ ಜ್ಞಾನದ ಪಥವಿದು ಪರಿಣಾಮ| ಕೇಳು ಸಖಿಯೆ ||5||
ಗುರು ವಚನಾಮೃತ ಕರಮನ ಭಾವದಿ| ಕೇಳು ಸಖಿಯೆ
ಸುರಿಯಲು ಶುಭಮಕ್ಕು ಸ್ಥಿರಂ ಜೀವಿ ಮಾಳ್ವದು| ಕೇಳು ಸಖಿಯೆ ||6||
ಆರು ಪ್ರಣಮದ ನೆಲೆ ಯಾರು ಅರಿಯರು ತಂಗಿ| ಕೇಳು ಸಖಿಯೆ
ಮಾರಹರಿ ಶರಣರು ಮನಗಂಡರಲ್ಲದೆ| ಕೇಳು ಸಖಿಯೆ ||7||
ಗುರುವೆ ಗತಿ ಚೈತನ್ಯ ಸಕಲ ಲೋಕಾಧಾರಿ| ಕೇಳು ಸಖಿಯೆ
ಮರಿಯಾದೆ ಭಜಿಸುತ ನರೆ ನಂಬು ಅನುದಿನ| ಕೇಳು ಸಖಿಯೆ ||8||
ಗುರುವು ಆದವ ತಾನೆ ಲಿಂಗವಾದವ ತಾನೆ| ಕೇಳು ಸಖಿಯೆ
ನರ ಸುರರೊಂದಿತ ಶಿದ್ಧ ಜಂಗಮ ತಾನೆ| ಕೇಳು ಸಖಿಯೆ ||9||
ಗುರುವೆ ತಾಯಿ ತಂದಿ ಗುರುವೆ ಬಂಧು ಬಳಗ
ಗುರುವೆ ಸಕಲೈಶ್ವರ್ಯವೊ ತಮ್ಮ
ಗುರುವಿನ ಹೊರತಿಲ್ಲ ಗುರುಪುತ್ರ ತಾ ಬಲ್ಲ
ನರ ಕುರಿಗಳೆಂತರಿವರೂ ತಮ್ಮ ||ಪ||
ಗುರುಪಾದದಲಿ ಚಿತ್ತು ಚರಣ ರಕ್ಷಿಯ ಪೊತ್ತು
ಧರಣಿಯೊಳು ಮೆರೆವುತಿರ್ದೆ ತಮ್ಮ
ಉರಿಉಂಡ ಕರ್ಪುರದ ಗಿರಿಯಂತೆ ಶೋಭಿಸುತ
ನಿರ್ಮಳ ಮನಸಿನಲ್ಲಿ ತಮ್ಮ ||1||
ಶರೀರ ತಾಳಿದಡೆನು ಸುಖ ದುಃಖವೆರಡಿಲ್ಲ
ನರಜನ್ಮದೊಳಧಿಕವೊ ತಮ್ಮ
ಪರಮ ಸಂತೋಷ ರಸ ಹೊರಸೂಸಿ ಚಲ್ಲುತಲಿ
ಕುರುಹು ನಿರ್ವಯಲಾಪುದೂ ತಮ್ಮ ||2||
ಅಂಗಲಿಂಗವೆರಡು ಸಂಗಮಾಗಿರಲಿಕ್ಕೆ
ಸಂಗಯ್ಯನೆಂಬ ನಾಮ ತಮ್ಮ
ಮಂಗಲಮೂರ್ತಿ ಮಹಾಲಿಂಗ ಜಂಗಮ ಸಿದ್ಧ
ಸಂಗನ ಬಸವಣ್ಣನೂ ತಮ್ಮ ||3||
ಗುರುವೆ ನಿಮ್ ಕರುಣಾಮೃತವ ನೀವೆಯನ್ನು
ಕರದು ಕರವ ಪಿಡಿದು ಶಿರದ ಮೇಲೆ ಹಸ್ತಯಿಟ್ಟಿರಲಾದೆ ||ಪ||
ಅಂದೆ ನಿಮ್ಮ ಸೇವಾದಲ್ಲಿ ಹೊಂದಿಕೊಂಡು ಯಿರ್ದೆನಯ್ಯಾ
ಬಂದ ಸುಖ ದುಃಖ ನಿಮ್ಮದೆಂಬೆ ಕೀರ್ತಿ ಅಪಕೀರ್ತಿ ||1||
ಕಂಬಸೂತ್ರ ಬೊಂಬಿಯಂತೆ ಅಂಬಲಿಯನು ತುಂಬಿಯನ್ನ
ಕುಂಭಿಯೊಳ್ಳುಣಿಸುತಿರ್ಪಿ ನಿಮ್ಮ ಲೀಲೆಯಾ ||2||
ಕೊಂಬು ಹೊಲಿಯಂದಾದರೇನು ಬಿರಿದು ಹೊಲಿಯಂದಾಗ ಬಹುದೆ
ಶಂಭು ಭಕ್ತ ಭೀಮಾನಿಯಂಬೊ ಬಿರಿದು ಸಾರಿತ್ತು ||3||
ತೊತ್ತು ಸೇವದಲ್ಲಿ ನಿತ್ಯ ಹೊತ್ತು ಗಳೆಯುತಿರ್ದೆನಯ್ಯ
ಸೊತ್ತು ಚಿತ್ತಾನಂದ ಸುಕವು ಕೊಟ್ಟಿರಲ್ಲಾದೆ ||4||
ಆವ ಚಿಂತಿಯಲ್ಲಿ ಮನಸು ಯಳೆಸದಂತೆ ಭ್ರಾಂತಿ
ಭಾವದೊಡನೆ ಕೂಡಿ ಯಿತ್ತ ಬರ್ಪದೂ ||5||
ನಿಮ್ಮ ನ್ಹಾಡಿ ಹರಸುತಿರ್ದೆ
ನಿಮ್ಮ ಧರ್ಮಯಂದು ಬಿಡದೆ ಭಜಿಸುತಿರ್ಪೆನೂ ||6||
ಎತ್ತ ಹೋದರೆನ್ನ ನೀವು
ಎತ್ತು ಮಾಡಿಕೊಂಡು ಮೇಲ
ಹತ್ತಿ ಹಲವು ದೇಶವೆಲ್ಲ ಚರಿಸುತಿರ್ಪಿರಿ
ಯಾವ ಜನ್ಮದಲ್ಲಿ ನೀವು ಯನ್ನ ತಂದಿಯಾದಿರಾಗಿ ||7||
ದೇವಭಕ್ತನೆಂಬೊ ನಾಮ ಆಯಿತಲ್ಲದೆ
ಯಿದ್ದು ಇಲ್ಲದ್ಹಾಂಗೆ ಬಸವ
ಸಿದ್ದಲಿಂಗನೊಳೈಕ್ಯವಾಗಿ
ಸುದ್ದಿ ಹೇಳುತಿರ್ಪ ಮಧ್ಯ ಮಾಯ ಸ್ಥಿತಿಗತಿಯಾ ||8||
ಗುರು ಉಂಡು ಉಳಿದ ಪ್ರಸಾದ
ಪರಮ ಹರುಷದಿ ಕೊಳ್ಳೋ ಫಲವಾದ
ಪರಿಪೂರ್ಣ ಜ್ಞಾನ ವಿನೋದ ಮುಕ್ತಿ
ದೊರಿವದು ಸತ್ಯ ನಿಜ ಬೋಧ ||ಪ||
ಗುರು ಮುಖ್ಯವೆಂದು ತಿಳಕೊಂಡು ಅವರು
ಬರುವ ಹಾದಿಯ ಕಾಯಿದು ಕೊಂದು
ಕರಶಿರ ಮನ ಬಾಗಿ ಕೊಂಡು ಭಕ್ತಿ
ಪರನಾಗಿ ದೃಷ್ಟಿಯಿಟ ಕೊಂಡು ||1||
ಗುರುವಿನಲ್ಲಿಯು ಕರುಣ ಹುಟ್ಟಿ ಕಣ್ಣು
ತೆರದು ನೋಡುವ ದಯ ದೃಷ್ಟಿ
ಗುರು ಪುತ್ರನಾದಿ ಭವಗೆಟ್ಟಿ ಪ್ರಮಥರು
ನೆರದು ಕೊಂಡಾಡುವದು ಘಟ್ಟಿ ||2||
ಉರಿಉಂಡ ಕರ್ಪುರದಂತೆ ಕತ್ತಲಿ
ಹರಿವದು ನೀ ಅದರಂತೆ
ನರನೊಳು ನರನ ಕಂಡಂತೆ ಸಿದ್ಧ
ಮರಿಮಾಡಿ ಇಡುವ ತನ್ನಂತೆ ||3||
ಗಂಡನ ಪುಣ್ಯವನು| ಉಂಡುಟ್ಟು ಸುಖ ಬಟ್ಟೆ
ಗಂಡು ಹೆಣ್ಣು ಮಕ್ಕಳ ಹಡದೆನವ್ವಾ
ಷಂಡನಂತ ಅಲ್ಹ್ಯಾಂಗೆ| ಪುಂಡನಂತಲ್ಲಿ ಹ್ಯಾಂಗೆ
ಗಂಡು ಹೆಣ್ಣು ತಾನೆ ನಾನಾದೆನೂ ||ಪ||
ತನು ತ್ರಯಕ ಗುರುವಾಗಿ
ಮನ ತ್ರಯಕ ಲಿಂಗಾಗಿ
ಧನ ತ್ರಯಕ ಜಂಗಮಾಕೃತಿಯ ತಾಳಿ
ತನು ಮನ ಧನ ಮೂರು
ಅನುಭವಿಸಿ ದಾಕ್ಷಣಕೆ
ಜನನ ಮರಣದ ಭೀತಿ ಹಾರಿತವ್ವಾ ||1||
ಭಕ್ತಿ ಜ್ಞಾನ ವೈರಾಗ್ಯ| ಯಂಬ ಭಾಗ್ಯವ ತಂದು
ಯುಕ್ತಿಯಿಂದಿಡು ಮುತ್ತು ಮೂಗಿಗೆಂದ
ವ್ಯಕ್ತ ಹಾಸಿಕಿ ಮಾಡಿ
ಮುಕ್ತಿ ಪುರುಷನ ಕೂಡಿ
ಶಕ್ತಿ ಸಮರಸ ಭಾವ ನಿತ್ಯ ಸೇವಾ ||2||
ಅರಿವು ಮರವನು ಮೀರಿ
ಪರವಶದೊಳಗಾದೆ
ಹರುಷಾಬ್ದಿಯಂಬ ಜಲ ತುಂಬಿ ತುಳುಕಿ
ಗುರುಸಿದ್ಧ ಲಿಂಗನ
ಶರೆ ಹಿಡಿದು ಬಿಡೆನವ್ವಾ
ಕರಪುರದ ಗಿರಿ ಉರಿಯ ಉಂಡ ಪರಿಯಾ ||3||
ಗುರು ಕರುಣಾಮೃತ ಗುರು ಪುತ್ರರಿಗೆ
ನರರಿಗೆ ದೊರಕಲಿಕಿಲ್ಲಣ್ಣ
ಗರಿವಿನಲ್ಲಿ ಗಂಭೀರರಾಗಿ
ಗುರು ಹಿರಿಯರ ಲಕ್ಷಕ ತರರಣ್ಣ ||ಪ||
ಸಿಂಹದ ಹಾರಿಕಿ ಸಿಂಹದ ಮರಿಗಲ್ಲದೆ
ನಾಯಿಗಿ ಹಾರಲಿ ಬರದಣ್ಣ
ಸಂಶಪ್ರಾಣಿ ಶಿವನಂಶೀಕವಾದಿತೆ
ಸಂಸಾರ ಯಂದಿಗೆ ಬಿಡದಣ್ಣ ||1||
ಹುಲಿ ಮೊಲಿಯನ ಹಾಲು
ಹುಲಿ ಮರಿಗಲ್ಲದೆ ಹುಲ್ಲೆಗೆ ದೊರಕುವದೇನಣ್ಣ
ಕಲಿಯುಗ ಜನ ಭಕ್ತಿ ನೆಲಿ ಬಲ್ಲದೆ ತಮ್ಮ
ಕುಲಛಲಕ್ಹೊಡದಾಡುವರಣ್ಣಾ ||2||
ಶಿವ ಭಕ್ತರ ನಡಿ ಶಿವ ಭಕ್ತರ ನುಡಿ
ಶಿವನಿಗೆ ಬೇಕಾಗಿಹುದಣ್ಣ
ಭವಚಾರಿಗಳಾಚರಣಿಯ ಸಲ್ಲದು
ರವ ರವ ನರಕ ಬಿಡದಣ್ಣ ||3||
ಜ್ಞಾನಮಾರ್ಗ ಅಜ್ಞಾನಿಗೆ ದೊರಿಯದು
ತಾನೆ ತಾನಾಗಿಹುದಣ್ಣ
ಖೂನವಿಟ್ಟು ಶ್ರೀಗುರುವಿನ ಪಾದ
ಧ್ಯಾನದೊಳಗ ಮುಳಗಿಹರಣ್ಣ ||4||
ಏಕೊ ಭಾವದ ನೆಲಿ ಲೋಕರು ಬಲ್ಲರೆ
ಸಾಕರ ಎಂದಿಗಿ ಇಲ್ಲಣ್ಣ
ಯೆಕೊದೇವ ಪರಬ್ರಹ್ಮ ಸಿದ್ಧಗ
ಬೇಕಾದರ ದೊರಕುವದಣ್ಣ ||5||
ಗುರುವಾಜ್ಞೆಯಲಿ ನಡಿವ ಗುರುಪುತ್ರನ ಪರಿ ಬ್ಯಾರೆ
ನರಗುರಿಗಳು ನಡಿವಂತ ಡಂಬಕ ನಡಿಹುವನೆ
ಪರಮ ಸಂತೋಷ ಜಲ ಹರಿವ ನದಿಯೊಳು ಮಿಂದು
ಯಿರುವ ಶ್ರೀಗುರು ಧ್ಯಾನ ಪಾಡುವೆ ಗತಿಯಂದೂ ||ಪ||
ನರರಿಗಾಸಿಯ ಮಾಡ ಪರಸ್ತ್ರಿಯರ ಮುಖ ನೋಡ
ಗರವು ಅಹಂಕಾರಿಗಳ ಕೂಡ ಮಾತಾಡ
ಹರನಾಮ ಜಪಿಸುವದು ಚಿರಕಾಲ ಮನದಲ್ಲಿ
ಪರರಿಗಿ ಹಿತವಾಹಂತ ಕಾರ್ಯ ನೇಮಿಸುಮ ||1||
ಗುರುವಾಗ್ನಿಯಲಿ ಬರುವ ಶರೀರ ಸುಖ ದುಃಖ ಭೋಗ
ಅರಿವಿನಿಂ ಕಣ್ಗಂಡು ಗುರಿಯಾಗಿ ನಿಲ್ವಾ
ಸರಿಯಾನು ಹಿಂದಕ ಮರಿಯಾನು ಗುರುಪಾದ
ಹೊರುವನು ಲೋಕದಲಿ ಕೀರ್ತಿ ಅಪಕೀರ್ತಿ ||2||
ಗುರು ಭಕ್ತನ ಹೃದಯದಲಿ ಇರುವ ಶ್ರೀಗುರುಸಿದ್ಧ
ಮೆರಿವನವರನ ಕೂಡಿ ಮೂರ್ಲೋಕದಲ್ಲಿ
ಉರಿವುಂಡ ಕರ್ಪುರದ ಗಿರಿಯಂತೆ ಶೋಭಿಸುತ
ಸರಿಗಾಣೆ ಶಿವಭಕ್ತ ಶಿಖಾಮಣಿ ಸಂಜೀವಾ ||3||
ಗರ್ಜಿನ ಮಾತಾಡುವದ್ಯಾಕೊ
ನಿಜ ಗುರುತರ ಪದವಿಗೆ ಕೈ ಹಾಕು
ಅರ್ಜಿ ಸದ್ಗುರುವಿಗೆ ಕುಡಬೇಕು ಅವರ
ಮರ್ಜಿ ತಿಳಿದು ಬಾಣ ಬಿಡುಬೇಕು ||ಪ||
ಶಿವ ಶರಣರ ಚಾಕರಿ ಇದ್ದಿನಿ ಹಿಂದ
ಭವ ಭವ ತಿರಗಿದ್ದು ಮರತಿವಿ
ತವನಿಧಿ ನಿತ್ಯ ಮನಿಗೆ ತರತಿವಿ
ಲೋಕದವರಿಚ್ಛಿಗ್ಹೊದರ ಕೆಡುತಿವಿ
ಭಿಡಿಯರಿಗೆ ಸಿಟ್ಟು ಹುಟ್ಟಿತು
ಬಡವರ ಹೊಟ್ಟಿ ಮ್ಯಾಲ ಕಾಲ್ಕೊಟ್ಟಿತು ವೈದು
ನಡು ನದಿಯೊಳು ಕೈಬಿಟ್ಟಿತು ||1||
ಯಾರ ಭಿಡಿಯ ನಮಗೇನು ಬೇಕು
ಮಾರಹರ ಸಿದ್ಧಲಿಂಗನ ಒಲಿಸ ಬೇಕು ಸತ್ಯ
ವೀರಶೈವಾಚಾರ ಜನಕ ತೋರಬೇಕು ||2||
ಗುರು ಮಾಡಿದ್ದಾಗುವದಲ್ಲಾ ಗೊತ್ತರಿಯದೆ ಬಳಲಿತು ಜಗವೆಲ್ಲಾ
ನರಗುರಿಗಳ ಕಲ್ಪನಿ ಸಲ್ಲ ಕಾಲ ಬರಲದು ಸುಖದುಃಖ ಬಿಡದಲ್ಲಾ ||ಪ||
ತಿಳಿದ ಮೇಲ ಸಂಕಲ್ಪವಿಲ್ಲ ಆಶಿ
ಅಳಿದ ಮೇಲ ದೇಹ ತನ್ನದಲ್ಲ
ಚಳಮಳಿ ಬಿಸಲು ಗಾಳಿ ರೋಗವೆಲ್ಲ ಸುತ್ತಿ
ಸುಳಿಯಲು ಎಳ್ಳಷ್ಟು ಭಯವಿಲ್ಲ ||1||
ಒಲ್ಲಂದರ ಬಿಡವೊದಿಲ್ಲ ಆಶಿ
ಯಲ್ಲಿ ಬೇಡಲು ಕುಡುವೊದಲ್ಲ
ಬಲ್ಲವನಿಗೆ ಬಯಕಿ ಮೊದಲಿಲ್ಲ ಅಗ್ನಿ
ಯಲ್ಲಿ ಬಂದದ್ದು ಧಿಕ್ಕರಿಸಲಿಲ್ಲ ||2||
ಬಸವ ಹಿಡದದ್ದು ಭಕ್ತಿಯ ನೇಮ ಮನ
ಬಸುರಾಗಿ ಹಡದಿತ್ತು ಗಣಸ್ತೋಮ
ಹುಸಿಯಲ್ಲ ಈ ಮಾತು ಹೃದಯ ಪ್ರೇಮ
ಸಿದ್ಧ ಶಿಶುವಾಗಿ ಸಲಿಸಿದ ನಿಸ್ಸೀಮ ||3||
ಗುರುವಿನ ಮರಿಬ್ಯಾಡ ಗುರುವಿನ ಸ್ಮರಣಿಯ ಬಿಡುಬ್ಯಾಡ
ಗುರುತ ಹಿಡಿದು ಗುರಿ ಹೊಡಿ ಗಾಢ ನೀ
ಅರಿತು ನೋಡು ವ್ಯರ್ಥ ಕೆಡುಬ್ಯಾಡ ||ಪ||
ಅಂಗದ ಆಶಿ ಅಳಿ ಹಿಡಿಬ್ಯಾಡ ಅಂತ
ರಂಗ ಶುದ್ಧಿಯಿಡು ಕೆಡುಬ್ಯಾಡ
ಭಂಗ ಗುಣಕ ಬಾಯಿ ಬಿಡುಬ್ಯಾಡ ಬದ
ರಂಗ ಮಾತಿಗಿ ಕಿವಿ ಕುಡು ಬ್ಯಾಡ ||1||
ಸಾಧು ಸತ್ಪರುಷರ ವಡಗೂಡು ನೀ
ಶೋಧಿಸಿ ತವೆ ತತ್ವದಿ ನೋಡು
ಬೋಧ ಗುರುವಿನ ಪಾದ ಸೇವ ಮಾಡು ಭವ
ದ್ಹಾದಿ ಬಾಧಿ ನೀಗಿ ನಿಜ ಗೂಡು ||2||
ಗುರುವೆ ಗತಿ ಸರ್ವರಿಗೆ ನೋಡ ಮಾಯ
ಮರವಿನೊಳಗ ಸುಳಿದಾಡಬ್ಯಾಡ
ಅರಿವೆ ಗುರುವು ಬ್ಯಾರಿಲ್ಲ ನೋಡ
ಶ್ರೀಗುರು ಸಿದ್ಧನ ಪಾದ ಬಿಡುಬ್ಯಾಡ ||3||
ಗಳಿಸಿಕೊಳ್ಳಿರೊ ಘನಸುಕ ದೊರಿವದು
ತಿಳಕೊಂಬುವ ಸಮಯಿದು ಅಣ್ಣ
ಕಳಕೊಂಡರ ಅದು ಕೈಗೆ ಸಿಲ್ಕದು
ಘಾಲಿ ನಿಮ್ಮಿಚ್ಛಲ್ಲಣ್ಣ ||ಪ||
ಕಂದನ ರೂಪಿಲಿ ಬಂದ ಶ್ರೀಗುರು ಭಕ್ತಿ
ಚಂದಾಗಿ ಮಾಡಿಕೊಳರಣ್ಣಾ
ಸಂದೇಹವಿಲ್ಲದೆ ಸದ್ಭಕ್ತರು ಪಾದ
ಕೊಂದಿಸಿ ಮುಕ್ತಿ ಪಡಿರಣ್ಣ ||1||
ಗುರು ಪುತ್ರರು ನೀವಾದರೆ ಆತನ
ಗುರತ ಹಿಡದು ಸೇವ ಮಾಡರಣ್ಣ
ನರರಾದರೆ ಯಮಪುರದಲಿ ನಿಂತು
ಪರಿ ಪರಿ ನಿಂದಿಸಿಕೊಳರಣ್ಣ ||2||
ಸಂಶ ಬಾರದು ಶಿವವಂಶಿಕರಿಗೆ ಫಲ
ಮಾಂಸ ಪಿಂಡ ಅಳಿದುಳಿರಣ್ಣ
ಸಂಸಾರಕ ಸುಖ ದುಃಖಗಳಾದರೆ
ಸಂಶವೆ ಘನವಾಗಿಹುದಣ್ಣ ||3||
ವಿಪರೀತ ತಿಳಿಯದು ಈರೇಳು ಲೋಕಕ
ಸಿಫರಸಿ ಯಾರದು ನಡಿಯದಣ್ಣ
ಅಪರಿಮಿತದ ದುಃಖವದಗಿತು ಲೋಕಕ
ತಪರಾಕಿ ಪೆಟ್ಟು ಬಿಡದಣ್ಣ ||4||
ನೀತಿ ಹೇಳುವೆ ನಿಜದಾತ ಶಿದ್ಧನ ವಾಕ್ಯ
ಪ್ರೀತಿಯುಳ್ಳವರಿಗೆ ಹಿತವಣ್ಣ
ಕೋತಿ ಗುಣದ ಅಡಜಾತಿಗಳಿಗೆ ಯಮ
ದೊತನೆ ಸಾಕ್ಷಿ ಕೇಳಣ್ಣ ||5||
ಗುರುವಿನ ಚರಣ ಶರಣರಾಭರಣ
ಮರಣ ವಿರಹಿತ ಮಹಾಲಿಂಗದ ಕಿರಣ ||ಪ||
ಶುದ್ಧಷ್ಟವರಣ ಪ್ರಸಿದ್ಧ ಎನ್ನ ಹರಣ
ಉದ್ಧಾರ ಮಾಳ್ಪದು ಸಿದ್ಧನಂತಃಕರಣ ||1||
ಗುರು ಮುಖ್ಯವೆಂದು ಪರಮ ಹರುಷ ತಂದು
ಪರಿ ಪರಿ ತೆರದಲ್ಲಿ ಬಜಿಸು ಅಂದಿಂದೂ ||2||
ಗುರುಸಿದ್ಧ ಮಂತ್ರ ನಂಬಿರು ಸ್ವತಂತ್ರ
ಯರವಿನ ಸಂಸಾರ ಇಹ ಪರ ತಂತ್ರ ||3||
ಗುರುವಿನ ಹೆಸರಿಟ್ಟರೇನು ಗೊತ್ತು
ಅರಿಯಾದ ಅಜ್ಞಾನಿ ಗುರುವಾಪುದೆನು
ಗುರುಗುಟ್ಟೊ ನಾಯಿ ಅಲ್ಲೆನು ಹಳಿ
ಕೆರಿವಿಲಿ ಬಡಿಯದೆ ಬಿಡುಹುವರೇನೂ ||ಪ||
ತನ್ನ ತಾ ತಿಳಿಯದ ಕೋತಿ ಅನ್ಯ
ಜನರಿಗೆ ಹೇಳುವದೆಲ್ಲಿದ್ರ ನೀತಿ
ಮುನ್ನೇಳು ಜನ್ಮದಡ ಜಾತಿಯಲ್ಲ
ತನ್ನಂತೆ ಮಾಡುವದು ಮಲತ್ರಯದ ಪ್ರೀತಿ ||1||
ಸಿಂಪಿ ಮುತ್ತಿಗೆ ಸರಿಯಾದೀತೆ ಕಣ್ಣು
ಕೆಂಪದ ಮಾಡೆನು ಇಲಿ ಚಿಕ್ಕಿಗ್ಹಿಡದೀತೆ
ಕಂಪಿಸಸಲು ಬೆಕ್ಕಂಜೋಡಿತೆ ಬೆಳ
ಗುಂಪಿ ಮಠದ ಮರಿಗೆ ನುಂಗೋದು ಬಿಟ್ಟಿತೆ ||2||
ಅರವು ಉಳ್ಳವಗ ಗುರುವೆಂಬೆ ಆಸಿ
ಹರಿಯದ ಅನಾಚಾರಿ ವಕ್ಕರ ಕೊಂಬೆ
ಪರಮ ಅಮೃತ ಕರದುಂಬೆ ನಮ್ಮ
ಗುರುವರ ಸಿದ್ಧಗ ಶರಣು ಶರಣೆಂಬೆ ||3||
ಗುರುವೆ ನೀ ಮಾಡಿದ್ದಾಗುವದು ಬಿಟ್ಟಿ
ಹೊರುವ ಹೊಲಿಯರಿಗಂಜಿ ನಡೆಯಲಾಗದು
ಕರಿ ಕಂಡು ಹರಿ ಅಂಜೊಡದು ಆಸಿ
ಹಿರಿಯರ ಬಿರಿನುಡಿಗೆ ಕೂದಲ ಡೊಂಕಾದು ||ಪ||
ತೊತ್ತಿನ ಫಡದವರೆಲ್ಲ ತಮ್ಮ
ಗೊತ್ತು ತಾವರಿಯದೆ ಬೊಗಳುವರಲ್ಲ
ಸತ್ಯ ನಡಿನುಡಿ ಕಾಣಲಿಲ್ಲ ಹಾದಿ
ಬುತ್ತಿ ನಿಂದವ ಮಾಡಿ ಕಟ್ಟುವರಲ್ಲಾ ||1||
ನಿಮ್ಮಳಾಗಿರ್ದ ಫಲವೇನು ಅಪ್ಪಣಿ
ಒಮ್ಮೆ ಕೊಟ್ಟರ ಧೂಳು ಹಾರಿಸಿ ಬಿಡುವೆನು
ಹೆಮ್ಮೆಕೋರರ ನಡಿ ನುಡಿಯನು ಮುರಿದು
ನಿಮ್ಮೆದರ ಮುಸಕಿಯ ಕಟ್ಟಿ ತರುವೆನು ||2||
ಗುರುಸಿದ್ಧ ನಿಮ್ಮ ಬಿರಿದು ಸಾರಿ ಪ್ರಮಥರು
ಬರುವ ದಾರಿಯ ನೋಡುತಿರುವೆ ಪರಿ ಪರಿ
ಮೀರಿದ ಸ್ಥಲಕಧಿಕಾರಿ ಭವ
ಭಾರಿಗಳು ಪದ್ರ ಹೆಚ್ಚಿತು ಮೀರಿ ||3||
ಗುರು ದ್ರೋಹಿಯಾದ ಗುಪ್ತ ಪಾತಕರಿಗೆ ಸೂತಕ ಮನಸಿನವರಿಗೆ
ಮುರಿದು ಮುಸ್ಕಿ ಕಟ್ಟಿ ಯಮ ಹಾಕೊನವರಿಗೆ
ಹಿರಿಯ ನರಕದ ಗಾರಿಗೆ ||ಪ||
ಸತ್ಯಶರಣರ ಚಿತ್ತ ವತ್ತಿ ನೋಯಿಸಿದವರಿಗೆ
ಹತ್ತುಕ ಮೀರಿದವರಿಗೆ ವತ್ತಲಿಟ್ಟು ಥಳಿಸುವ
ಯಮ ವರಳಲ್ಲವರಿಗೆ ಬ್ರಹ್ಮ ಘಾತಕರಿಗೆ ||1||
ಕೆಡಿಸಿ ಕಣ್ಣಿಲಿ ನೋಡುವಂತ ಪಾಪಿಗಳಿಗೆ ಅತಿ ಕೋಪಿಗಳಿಗೆ
ಹಿಡಿಸಿ ಕೊಳ ರೂಡಿಸಿ ಮೈಸುಡಸುವನವರಿಗೆ ಶಿವ ನಿಂದಕರಿಗೆ
ಹತ್ತು ನಡಿವ ಹಾದಿಗ ಮುಳ್ಳು ಹರವಿದವರಿಗೆ ಕತ್ತಿ ಮೂಳ ಹೊಲಿಯರಿಗೆ ||2||
ಕುತ್ತಿಗಿ ತನಕ ಹೂಳಿ ಕೊಣ ತುಳಿಸುವನವರಿಗೆ ಕುಟಿಲ ಕುಹಕರಿಗೆ
ನಂಬಿದವನ ಕುತ್ತಿಗಿ ಕೊಯಿವ ನಾರಿಯರಿಗೆ ಅತಿ ಜಾರಿಯರಿಗೆ
ವಂಭತ್ತಾರಿ ವಮ್ಮೆ ಕಾಸಿ ಹಾಕೊನವರಿಗೆ ಕಂಭ ಅದರ ಮೊರಿಗೆ ||3||
ಓದಿ ಹಾಡಿ ಹಾದಿ ತಪ್ಪಿ ನಡಿವ ಮೂಳರಿಗೆ ಯಿಂತ ಮಾದಿಗರಿಗೆ
ಬೋಧ ಕೊಟ್ಟ ಗುರುವು ಮಂತಯಮನ ಬಾಧಿಗೆ ಶಿದ್ಧ ಸಿಗಲಿಲ್ಲವರಿಗೆ ||4||
ಗುಂಡಗುರಕಿಯವರು ಯಂತ ಹೆಂಡಗಾರರಿವರು
ಪುಂಡ ಶ್ರೀಗುರು ಭಕ್ತಿ ಭಂಡಾರಿ ಬಸವನ ಕಂಡರ ಸೇರಾರು ||ಪ||
ಕೂಲಿ ಗುಡುಮರೆಲ್ಲ ಮ್ಯಾಲ ಬರುವರಲ್ಲ
ಕಾಲ ಒದಗಿತು ದಿಕ್ಪಾಲ ಮಾಡುವ ಗುರು ಸೋಲದವ ಅವನಲ್ಲಾ ||1||
ಸೊಕ್ಕ ತಲಿಗೆ ಏರಿ ಭಂಗಿ ಮುಕ್ಕಿದವರ ಪರಿ
ತೆಕ್ಕಿಗೆ ಬಿದ್ದರ ದಕ್ಕದು ದುರ್ಲಭ
ವಕ್ಕರ ಕೊಂಬುವ ಅಕ್ಕರದಿಂದಲಿ ||2||
ಶರಣ ಸಿದ್ಧಲಿಂಗ ಅಂತಃಕರುಣಿ ಗುರುವ ಸಂಗ
ಕಿರಣ ಕೋಟಿ ಪ್ರಭೆ ಜಂಗಮ ಲಿಂಗ
ಧರುಣಿಗಿ ವದಸಿದ ಮೊದಲೆ ನಿಸ್ಸಂಗ ||3||
ಗುರುವಿಗೆ ಬೈದರ ಸಿಟ್ಟಿಲ್ಲ ನಾ
ಗುರುವಿನ ಹೊರತು ಕಡಿಲಿಲ್ಲ
ಅರಿವೆ ಗುರುವು ನರರರಿರಲ್ಲಾ ಆಸಿ
ಹರಿದಾಡಿದೆ ಸಂಶ ಬರಲಿಲ್ಲ ||ಪ||
ನಾನೆ ಗುರುವಾಗ್ಯಾಡುವೆನು ಗುರು
ತಾನೆ ಯನ್ನೊಳು ನಿಂತು ಕೇಳುವನು
ಮಾನಪಮಾನವು ಇನ್ನೇನು ಮಹ
ದಾನಿ ಸಿದ್ಧನ ಕೂಡಿ ಮರವೆನೂ ||1||
ನಾನು ನೀನೆಂದರ ಫಲವಿಲ್ಲ ಗುರು
ತಾನೆ ಭಕ್ತಿಗೆ ಬಂದು ಸಿಕ್ಕನಲ್ಲಾ
ಜ್ಞಾನಿಯಾದವ ಇದರ ನೆಲಿ ಬಲ್ಲ ಶಿವ
ಅನುಭಾವಿ ಅದರೊಳು ಸಿಕ್ಕಲಿಲ್ಲ ||2||
ವಳಗ ಹೊರಗ ತುಂಬಿದ ತಾನೆ ಯನ್ನ
ತನ್ನೊಳಗ ಇಂಬಿಟ್ಟು ಮರತಾನೆ
ಬ್ಯಳಗಿಗಿ ಬೆಳಗಾಗಿರುವನೆ ಶಿದ್ಧ
ಅಳಿವು ಉಳಿವು ಏನು ಅರಿಯಾನೆ ||3||
ಗುರುವೆ ನೀ ತಪ್ಪಿಸಿ ಕೊಂಡರೇನಾಯ್ತು
ಗುರು ಪುತ್ರರು ಬಿಡರೆಂಬದರಿದ್ಹೊಯ್ತು
ಶರೀರದ ಸುಖ ದುಃಖ ನರರಿಗಲ್ಲದೆ ಶಿವ
ಶರಣರಿಗುಂಟೇನು ಮರಿಯರು ನಿಮ್ಮ ಪಾದ ||ಪ||
ನಿನಗರಿಯದ ಮಾಡುವರವರೇನು
ಮನಸಿಗೆ ಚೇತನ ಕುಡುವವ ನೀನು
ಅನುದಿನ ಅಗಲದೆ ಇರುವೆ ಅವರನು
ಜನನ ಮರಣಕ ದೂರರೆಂಬೊದರಿಯೆನು ||1||
ಏಳೇಳು ಜನ್ಮ ತಂದಿ ಅವರಾನು
ಹೇಳುವರೆಂದಿಗೆ ನಿಮ್ಮ ಹೆಸರಾನು
ಭಾಳಲೋಚನ ಭಕ್ತರಾಳಾಗಿ ದುಡದಿಲ್ಲೆ
ಹೇಳಿಸಿಕೊಳುವರೆ ಆಳಿನ ಕೈಯಲ್ಲಿ ||2||
ನಡಿ ನುಡಿಯಲಿ ನಿಮ್ಮನ್ಹಿಡದು ಕಟ್ಟುವರಲ್ಲ
ಬಿಡು ಸಿದ್ಧ ನಿಮ್ಮ ಭಂಗಳಿಯಲ್ಲ
ಬಡವಿ ಮಗನಿಗಂಜಿ ವಡಿಯನ ಕಂಟ್ಟಿ ಹೊಕ್ಕಿ
ಬಿಡದೆ ಹಿಡಿಗಲ್ಲಿಗಿ ಹೊಡಿಯೆ ಕೈಯೊಳು ಸಿಕ್ಕಿ ||3||
ಗುರುವಿಟ್ಟಂತೆ ಇರುವೆನು ಗುಣ ಅರಿಯದ ಬಾಲಕ ಕರು ನಾನು
ಪರವಸ್ತು ಸಿದ್ಧ ಆಕಳ ತಾನು ಪಾಲ್ಕರದುಣಿಸುವ ಸಹುವಿನ್ನೇನು ||ಪ||
ಪಾಪ ಪುಣ್ಯವೆಂಬುವದಿಲ್ಲಾ ಮೂರು ತಾಪವೆಂಬುದು ನಾನೇನು ಬಲ್ಲ
ಕೋಪ ಟೋಪ ಮೊದಲಲ್ಲಿಲ್ಲ ಗುರು ವ್ಯಾಪಿಸಿ ಕೊಂಡನು ಜಗವೆಲ್ಲ ||1||
ಮಾನಪಮಾನವ ಗುರುವಿಂದು ಅನುಮಾನ ಯಾತಕ ಬೇರೆ ಮತ್ತೊಂದು
ಏನಾಗುವದಾತನಾಗ್ನಿಯಿಂದ ಮಹಜ್ಞಾನ ಅಗಲದು ಮನ ಎಂದೆಂದು ||2||
ಯಾತರ ಭಯ ವೆಳ್ಳೆನಿತಿಲ್ಲ ಮಹದಾತ ಶಿದ್ಧ ಮಾಡಿದುದೆಲ್ಲ
ಪ್ರತಿಯಾತಕ ಮನಯಳಸಿಲ್ಲ ಸೋತು ಹೇಳಿದೆ ಆತ್ಮತಾ ಬಲ್ಲ ||3||
ಗುರುಲಿಂಗ ಜಂಗಮದ ಸೇವಕಾಗಿ ಚರಣದಾವಿಗಾಗಿ
ಸ್ತಿರಕಾಲ ಬದುಕಿದೆ ತಿರಕನಾಗಿ ಅವರೊಳ್ಯೆರಕವಾಗಿ ||ಪ||
ಗುರುಪಾದ ಪೂಜೆ ಹಿಂದ ಮಾಡಿ ಬಂದೆ ಬಂದುದರಿಂದೆ ||1||
ಅರವು ತಿಳಿಸಿದ ಗುರುವು ದಯದಿಂದೆ ಆರುಸ್ಥಲಗಳಿಂದೆ
ವಂದೆ ಹಲವಾಯಿತೆಂಬ ಜ್ಞಾನ ತಿಳಿತು ಸಂಕಲ್ಪ ತೊಳಿತು
ಕಂದಾ ಬಸವನ ಭೀತಿ ಹಾರಿ ಹೋಯಿತು ದೇಹ ನಿರ್ಮಲಾಯಿತು ||2||
ಚಂದದಿಂದ ಶರಣರ ಹಾಡಿ ಹರಸುವೆನು ಪ್ರೇಮ ಸುಖಿಸುವೆನು
ತಂದಿ ಸಿದ್ಧಲಿಂಗನ ಪಾದ ಕಾಮಧೇನು ಕರದು ಉಂಬುವೆನು ||3||
ಗುರುವೆಂದು ಭಾವಿಸಿದ ಪರಿಯಂತು ಪೇಳುವೆನು
ಕರಮನ ಭಾವದಲಿ ತಮ್ಮ
ಪರಮ ಸಂತೋಷರಸ ಹೊರ ಸೂಸಿ ಚಲ್ಲುತಲಿ
ಗುರು ಭಕ್ತಿ ಮಾಡುಬೇಕು ತಮ್ಮ ||ಪ||
ತನು ಮನ ಧನ ಮೂರು ಎದರಿಟ್ಟು ವಂಚಿಸದೆ
ಅನುಕೂಲ ಮಾಡುಬೇಕೊ ತಮ್ಮ
ಅನುದಿನ ಅವರಾಗ್ನಿ ಮನವಪ್ಪಿ ಮೀರದಲೆ
ಅನುಗೂಡಿ ನಡಿಯ ಬೇಕು ತಮ್ಮ ||1||
ಇಂತಪ್ಪ ಭಕ್ತಿಗುಣ ಜ್ಞಾನ ಹೀನರಿಗರಿದು
ಸಂತೋಷ ಮನಕಾಗದೊ ತಮ್ಮ
ಚಿಂತಿತಾ ಪ್ರಾಪ್ತಿ ಮನವಡಿಸುವದು ಭುಗಲ್ಹೊಗಸಿ
ಭ್ರಾಂತರಿಗೆ ಬಹು ದುಃಖವೊ ತಮ್ಮ ||2||
ಆಂಶಿ ಭೂತರಿಗಿಂತ ಅಂಸರವ ಒದಗುವದೆ
ಮಾಂಸ ಪಿಂಡಂಗಳೊರ್ತನೀ ತಮ್ಮ
ಸಂಸಾರ ಸುಖ ದುಃಖ ಗುರುಶಿದ್ದಗೊಪ್ಪಿಸುತ
ನಿಸ್ಸಂಶ ನಿಶ್ಚಿಂತರೊ ತಮ್ಮ ||3||
ಗುರುಪುತ್ರನಾದವನು ನರರೊಳಗೆ ಸಮನಲ್ಲ
ಶರೀರ ಸುಖ ದುಃಖ ಭೋಗ ಅವನಿಗಿಲ್ಲ ||ಪ||
ಶರಣರಾಳಿನ ಆಳು ಚರಣರಕ್ಷಿಯ ಧೂಳು
ಚರಿಸುತಿರ್ಪನು ಕೇಳು ಧರನಿಯೋಳು ||1||
ಎತ್ತಿದ್ದರೇನವನು ನಿತ್ಯ ಶಿವ ಧ್ಯಾನವನು
ಬಿತ್ತಿ ಬೆಳದುಂಬುವನು ಕಾಮಧೇನು ||2||
ಆವನೆ ನಿಜ ವಿರಕ್ತ ಶಿವನಿಗೆ ಸದ್ಭಕ್ತ
ಭುವನದೊಳು ಸಮರ್ಥ ತನ್ನ ತಾ ಅರ್ಥ ||3||
ತನ್ನಂತೆ ಜಗವೆಲ್ಲ ಭಿನ್ನಭಾವಗಳಿಲ್ಲ
ಅನ್ಯರಾತ್ಮವ ನೋಯಿಸಿ ನುಡಿವನಲ್ಲಾ ||4||
ನಡು ನುಡಿಗೆ ಬದಲಿಲ್ಲ ಬಡಿವಾರದವನಲ್ಲ
ಅಡಿಗಡಿಗೆ ಗುರುಮಂತ್ರ ನುಡಿಯಬಲ್ಲ ||5||
ಉಂಡು ತಾ ಉಪವಾಸಿ ಬಳಸಿ ಬ್ರಹ್ಮಚಾರಿ
ಪಿಂಡ ಬ್ರಹ್ಮಾಂಡಕ್ಕೆ ಸಾಕ್ಷಿಕಾರಿ ||6||
ಒಳಹೊರಗ ಒಂದಾಗಿ ಬೆಳಗಿನೊಳು ಚಂದಾಗಿ
ಸುಳಿದಾಡುತಿಹಯೋಗಿ ನಿಶ್ಚಿಂತನಾಗಿ ||7||
ಇಂತಪ್ಪ ಗುರು ಕರುಣ ಸಂತೋಷದಾಭರಣ
ಯಂತಾತ ಶಿವಶರಣ ಅಷ್ಟವರಣಾ ||8||
ಉರಿಉಂಡ ಕರ್ಪೂರದ ಪರಿಯಂತೆ ಗುರುಸಿದ್ಧ
ಬೆರಸಿ ಭಕ್ತರ ಜಗದಿ ಮೆರಸುತಿದಾನ ||9||
ಗುರುಶಿಷ್ಯರೀರ್ವರೊಂದಾಗಿ ಪರಮ
ಹರುಷ ನದಿಯೊಳು ಮಿಂದು ಲಿಂಗ ಮುಂತಾಗಿ
ಇರುವರಾನಂದ ಸುಖತಾಗಿ ಮಹ
ದರುವಿನೊಳ್ ಮನ ಮುಳುಗಿ ಪರವಶರಾಗಿ ||ಪ||
ನರ ಜನ್ಮ ಹಿರಿದಾದರಿಂದೆ ಇಲ್ಲೆ
ದೊರಕಿತು ಅವರಿಗೆ ಭಕ್ತಿ ಮುಖದಿಂದೆ ಸುಧೆ
ಸುರಿವದು ಅನುದಿನ ಸಮರಸದಿಂದೆ ||1||
ಅರವು ಹಿಡಕೊಂಡು ಬಂದವರು ಗುರು
ವರಪುತ್ರರೆಂದೆನಿಸಿ ಚರಿಸ್ಯಾಡುತಿಹರು
ಬರುವ ಸುಖದುಃಖ ಲಕ್ಷಕಿಡರು ಭಕ್ತಿ
ಪರರಾಗಿ ದಾಸೋಹ ನಡೆಸುತಲಿಹರೂ ||2||
ಕುರುಹು ತಪ್ಪಿಸಿಕೊಂಡಿಹರು ಮಾಯ
ಮರವಿಗಳಿಗೆ ತಾವು ಕಾಣಿಸಿ ಕೊಳರು
ಕಿರಿತನ ಹೊತ್ತು ಮೆರಿಹುವರು ಪ್ರಮಥರ
ಬರಹ ನೋಡುತ ಜಂಗಮಕೊಂದಿಸುತಿಹರು ||3||
ಪ್ರಾಣದೊಲ್ಲಭನಾಗ್ನಿಯಿಂಧ ಬಹು
ಜಾಣತನದಿ ಕಾಲ ಕಳಿದುಳಿದರಿಂದ
ತ್ರಾಣ ಹೆಚ್ಚಾಯಿತದರಿಂದ ಸಕಲ
ಪ್ರಾಣಗಳೊಂದೆಂದು ಭಾವಿಸಿ ಮುದದಿಂದ ||4||
ಜಾತಿ ಸೂತಕಯಿಲ್ಲದವರು
ಅಜಾತ ಶಿದ್ಧನ ಕೂಡಿ ಬಳಸ್ಯಾಡುತಿಹರು
ಪಾತಕ ಜನಕಂಜಲರಿರೂ ಪ್ರಮಥರ
ನೀತಿ ವಚನವ ನೋಡಿ ನಲಿದಾಡುತಿಹರೂ ||5||
ಗುರುವಿನ ಮಗ ನಾನು ಶರಣರ ಸೇವದೊಳಿರುವೆನು
ಪರಮ ಹರುಷ ತುಂಬಿ ಕುಣಿದಾಡುವೆನು
ಪರಿ ಪರಿ ವಚನ ಓದಿ ಹಾಡುವೆನು ||ಪ||
ಅರವು ಎಂಬ ಕವಚ ತೊಟ್ಟು| ಇರುವೆ ಇಲ್ಲ ಸಂಶ
ಉರಿ ಉಂಡ ಕರ್ಪುರ ಜೊತಿಯ ಅಂಶ
ಧರಿಯೊಳು ಮೆರೆವೆನು ಮೊದಲೆ ರಾಜ ಹಂಸಾ ||1||
ಭಜನಿ ಮಾರ್ಗದಲ್ಲಿ ಸುಜನರ ಕೂಡಿ ನಿಂತೆನಿಲ್ಲಿ
ಅಜಹರಿ ಸುರರು ಅರಿಯರು ಅಲ್ಲಿ
ಭಜನಿ ಮಾಡುವೆ ಭಕ್ತಿ ರಸ ಚಲ್ಲುತಲಿ ||2||
ವಿಪರೀತ ಈ ಆಟ ಜನರಿಗೆ ಅಪರಿಮಿತದ ಕಷ್ಟ
ಉಪಮಾತೀತರು ನೋಡುವ ನೋಟ
ತಪಸಿಗಳೊಡಿಯ ಶಿದ್ಧನ ಸಮಕೂಟ ||3||
ಗುರು ಸಿದ್ಧಲಿಂಗಾನ ಘೂಳಿ ಕೊಲ್ಲ
ಪುರದಲ್ಲಿ ಮಾಯಿನ ಜಯಶಿದ ಹೆಘಾಳಿ
ಪರಮ ಆನಂದದ ವೈಹಾಳಿ ಶಿವ
ಶರಣರ ಚರಣಕ್ಕ ಹತ್ತಿರ್ದ ಧೂಳಿ ||ಪ||
ತಾಯಿಯೆಂಬೊ ಖೂನ ತನಗಿಲ್ಲ ಹೆಣ್ಣು
ಮಾಯಿ ರೂಪ ಧರಿಸಿ ಬಂದದ್ದು ಬಲ್ಲ
ಕಾಯದರ್ಪಣ ಕಾಮವೆಲ್ಲ ಪ್ರಭು
ರಾಯ ಮಾಡಿದ ಆಟ ಬಸವ ತಾ ಬಲ್ಲ ||1||
ಕುಲ ಛಲ ಸ್ಥಲ ಮಲ ಭಾಂಡ ರೂಪು
ಹಲವಾಗಿ ತೋರಿತು ಪಿಂಡ ಬ್ರಹ್ಮಾಂಡ
ನೆಲ ಜಲದ ಬೊಂಬಿ ಕಣ್ಣಂಡ ಅದರ
ನೆಲಿ ಅರಿತು ವಳಹೊರಗ ಸಂಶ ಹರಕೊಂಡ ||2||
ತತ್ವವಂದುಳಿಯಿತ್ತು ನಿರ್ವಹಲೆನಸಿ
ಸತ್ವ ಸದ್ಭಕ್ತಿಯ ನಡಸಿ ಮಹ ಮ
ಹತ್ವ ತೋರಿದ ಶಿದ್ಧ ಇದ್ದು ಇಲ್ಲೆನಸಿ ||3||
ಗುರು ಕೊಟ್ಟದರೊಳು ಪರಿಣಾಮ
ಉಂಡು ಉಟ್ಟು ಇರುವದವರ ನೇಮ
ಶರೀರದ ಸುಖ ಕೆಳಿಸುವ ಕಾಮ ಸುಟ್ಟು
ಶಕೆ ಹಿಡಿದರು ಪ್ರಮಥ ಗಣಸ್ತೋಮ ||ಪ||
ವಕ್ಕ ಮಿಕ್ಕ ಪ್ರಸಾದಿಕರು ಪ್ರೇಮ
ಉಕ್ಕಲು ಅನುದಿನ ನೆಕ್ಕುವರು
ಅಕ್ಕನಾಗಮ್ಮನ ಅಂಶಿಕರು ಮದ
ಸೊಕ್ಕಿದವರ ಹಲ್ಲು ಮುರಿಹುವರು ||1||
ಭಕ್ತಿ ಬೀಜ ಬಿತ್ತಿ ಬೆಳೆಹುವರು ವಿ
ರಕ್ತ ಪುರುಷಗ ಕೊಟ್ಟು ಕೊಳಹುವರು
ಮುಕ್ತಿಪುರದಲ್ಲಿ ಸುಳಿದಾಡುವರು ಮಾಯ
ಶಕ್ತಿಯ ತಲಿ ಮೆಟ್ಟಿ ಹಾರುವರು ||2||
ಜ್ಞಾನಮಾರ್ಗ ಹಿಡಿದು ನಡಹುವರು ತಮ್ಮ
ಖೂನ ಕಂಡು ಕೂಡಿ ಬಳಸುವರು
ಸ್ವಾನುಭಾವದ ನೆಲಿ ತಿಳದಿಹರು ಮಹ
ದಾನಿ ಸಿದ್ಧನೊಳಳಿದುಳಿದಿಹರು ||3||
ಗುರು ಉಂಡು ಉಳಿದ ಪ್ರಸಾದ
ಪರಮ ಹರುಷದಿ ಕೊಳ್ಳೊ ಫಲವಾದ
ಪರಿಪೂರ್ಣ ಜ್ಞಾನ ವಿನೋದ ಮುಕ್ತಿ
ದೊರಿವದು ಸತ್ಯ ನಿಜ ಬೋಧ ||ಪ||
ಗುರು ಮುಖ್ಯವೆಂದು ತಿಳಿಕೊಂಡು ಅವರು
ಬರುವ ದಾರಿಯ ಕಾಯ್ದುಕೊಂಡು
ಕರಶಿರ ಬಾಗಿಕೊಂಡು ಭಕ್ತಿ
ಪರನಾಗಿ ದೃಷ್ಟಿ ಇಟುಕೊಂಡು ||1||
ಗುರುಲಿಂಗ ಜಂಗಮದವರ ವರಪುತ್ರನಾದವಗ
ನರರೊಳಗ ಎಣಿಸಬಹುದೇ ತಮ್ಮ
ಉರಿವುಂಡ ಕರ್ಪುರದ ಪರಿಯಂತೆ ಮನ ಕರಗಿ
ಕುರುಹು ನಿರ್ವಯಲಾಪದು ತಮ್ಮ ||ಪ||
ಸಂಸಾರದೊಳು ಶಿವ ವಂಶಿಕನು ಬಂದಿರಲು ಅ
ವಸರ ಇನಿತಿಲ್ಲವೊ ತಮ್ಮ
ಮಾಂಸ ಪಿಂಡವ ಕಳದು ಮಂತ್ರ ಪಿಂಡವ ಧರಿಸಿ
ಸಂಸಾರ ನಡಿಸುತಿಹನೊ ತಮ್ಮ ||1||
ಕುಲ ಛಲ ಸ್ಥಲವಿಲ್ಲ ದೇಹದಲಿ ಬಲವಿಲ್ಲ
ಮಲಹರನ ಭಜಿಸುತಿಹನೊ ತಮ್ಮ ||2||
ಶರಣಾರ ನಡಿ ಶುದ್ಧ ಶರಣಾರ ನುಡಿ ಶುದ್ಧ
ಶರಣರಂತವ ತಿಳಿಯದೊ ತಮ್ಮ
ಶರಣ ಸಿದ್ಧೇಶ್ವರನ ಕರುಣದಾ ಕಂದನವ
ಧರಣಿಯೊಳಗವತರಿಸಿದ ತಮ್ಮ ||3||
ಗುರುವೆ ನಿಮ್ಮಯ ಪಾದ| ಕರಣದುಣಲು ಬಹು ಸ್ವಾದ
ಪರಮ ಸುಖ ವಿನೋದ ನಿಮ್ಮ ಬೋಧ ||ಪ||
ನೀವೆ ನಿಮ್ಮ ದಯ ಹುಟ್ಟಿ ಸೇವ ಪಟ್ಟವ ಕಟ್ಟಿ
ಕಾವಲಿಯ ಒಳಗಿಟ್ಟು ಅಭಯ ಕೊಟ್ಟಿ ||1||
ನೇನೆ ಗತಿ ಎನಗೆಂದು| ಮನಕ ನಿಶ್ಚಯ ತಂದು
ಧ್ಯಾನ ಮಾಡುವೆ ನಿಂದು ಭಕ್ತ ಬಂಧೂ ||2||
ನಿನ್ಹೊರತು ದಿಕ್ಕಿಲ್ಲ ಅನ್ಯರಾಶ್ರಯವಿಲ್ಲ
ಚನ್ನಬಸವನೆ ಬಲ್ಲ ಜನರರಿಯರಲ್ಲಾ ||3||
ಇಟ್ಟಂತೆ ಇರುವೆನು| ಕೊಟ್ಟಂತದುಂಡೆನು
ತಟ್ಟು ಮುಟ್ಟೆಂಬ ಸಂಶ ಹುಟ್ಟಲಿಲ್ಲಾ ||4||
ಹಗಲಿರುಳೆ ನಿಮ್ಮ ನಾಮ| ಅಗಲದೆ ಎನ್ನ ನೇಮ
ಬಗಿ ಬಗಿಯ ರಣಸ್ತೋಮ ಬರುವ ಪ್ರೇಮ ||5||
ಶರಣರಾಳೆಂದೆನಿಸಿ| ಚರಣರಕ್ಷಿಯ ಹೊರಸಿ
ಧರಣಿಯೊಳು ಮೆರಸಿದರಿ ಲಜ್ಜ ಹಸರಿ ||6||
ಜನ ಮಚ್ಚು ನಡಸಿಲ್ಲ| ತನು ಭೋಗ ಬಿಡಸಿಲ್ಲ
ಜನನ ಮರಣಕ ಒಳಗು ಮಾಡಲಿಲ್ಲಾ ||7||
ಸತ್ತು ಚಿತ್ತಾನಂದ ನಿತ್ಯ ಪರಿಪೂರ್ಣೆಂಬ
ಗೊತ್ತು ತೋರಿಸಿ ಕೊಟ್ಟಿ ಘೂಳಿ ಬಿಟ್ಟೆ ||8||
ಲೋಕರಂಜಿಕಿಯಿಲ್ಲ| ನಾಕು ಮೈಹೊಳಬಲ್ಲ
ತೂಕ ಖರೆ ಕಡಿಮಿಲ್ಲ ಕೊಳುವಾತ ಬಲ್ಲ ||9||
ನಿಮ್ಮ ಚಿತ್ತಕ ಬಂತು| ಬ್ರಹ್ಮಲಿಪಿ ಅಳಕಿತ್ತು
ಹಮ್ಮು ಅಹಂಕಾರೆಂಬೊ ಅರಸು ಸತ್ತು ||10||
ಕಾಯಪುರ ಪಟ್ಟಣಕ| ರಾಯ ರೇವಣಸಿದ್ಧ
ಮಾಯಿ ಕೋಳಾಹಳ ಮಾಡಿ ಇದ್ದ ||11||
ಘನ ಘಾತಕ ಮಾಳ್ವರೆ ಗುರುಚನ್ನ ಬಸವಯ್ಯ ನೀವೆಮ್ಮಗೆ
ಅನ್ಯಯದಲಿ ಬಿಟ್ಟು ಆಗಲಿ ಹೋದರೆ ನಿಮಗೆ ಮನ್ನಣಿವುಂಟೆ ಜಗದೊಳಗೆ ||ಪ||
ಘಟ್ಟದ ನೆಲ್ಲಿಯ ಕಾಯಿಯು ಸಮುದ್ರದಲಿ ಹುಟ್ಟಿದ ಉಪ್ಪು ತಂದು
ಚಟ್ನಿಯಿಟ್ಟುಂಬವರಿಗೆಷ್ಟು ಸವಿದೊರುವದು ಅಷ್ಟು ಮನ ಮನ ಕೊಡಿಯಿತ್ತು ||1||
ನಂಬಿ ಕೊಂಡಿರ್ದೆನಯ್ಯ ಸಹುವಿಗೆ ಅಂಬಲಿಯ ಕುಡುವ ಜಯ್ಯ
ವಂಭತ್ತು ತಿಂಗಳ ಹೊತ್ತು ಹಡದ ತಾಯಿ ಸತ್ತು ಹೋದಂತಾತೂ ||2||
ಶಂಭು ಸಲಹಲಿ ಬಂದನುಯಂದರಿದು ಸಂಭ್ರಮದಿ ಹಿಗ್ಗಿರ್ದೆನು
ಕುಂಭಿನಿಯೊಳು ಬಂದು ದುಃಖ ಹಚ್ಹೊಗುವರೆ ಕುಂಬಾರ ತಿಗರಿಯಂತೆ ||3||
ನ್ಯಾಯವೇನಯ್ಯ ನಿನಗೆ ಗುರುರಾಯ ಮಾಯ ಹಚ್ಚಿದ ನಮ ನಿಮಗೆ
ಸಾಯಿವೊದು ಗೆಲವಿತ್ತು ಬಾಯ ಬಿಡುತಿರ್ದೆನಾಪಾಯ ಮಾಡಿಹೋಗುವರೆ ||4||
ಸಿದ್ಧ ತಂದರ ಬಂದಿಯು ಕೆಲವು ದಿವಸಿದ್ದು ಹೇಳದೆ ಹೋದಿಯ
ಉದ್ಯೋಗ ಕೆಡಿಸಿಟ್ಟ ಸಿದ್ಧನಿಗೆ ಬುದ್ಧಿಲ್ಲ ಮುದ್ದು ಬಸವನ ದುಃಖವ ||5||
ಚೀ ಛೀ ಎನ್ನರಣ್ಣ ಥು ಥು ಎನ್ನರಣ್ಣ
ಚೀ ಛೀ ಥು ಥೂ ಅಂದರ ಮನಸಿಗಿ ನಾಚಿಕಿ ಬಾರದಣ್ಣ ||ಪ||
ಯಾರಿಗೆ ಸೆರಾದು ಯಾವಗವಾರಿ ಕತ್ತರಿಸುವದೂ
ಮೀರಿದ ಸ್ಥಲ ಗುರು ಬಸವ ತಾಳದು ಬುಡ
ಬೊರಿಗಿಗೆಷ್ಟು ಹೇಳಿದರ ಕೇಳದು ||1||
ನಾ ಎಂದಿಗಿ ಕುಲಗೆಡಿ ತಾಯಿ ತಂದಿನ ಕಾಣದ ಖೋಡಿ
ಕಂದೆ ಕುಂದದೆ ಭಿಕ್ಷವ ಬೇಡಿ
ತಂದುಕೊಳುವದು ವಳಗಿನ ಸಂಶವಿಡಾಡಿ ||2||
ನಡಿ ನುಡಿ ಶುದ್ಧಿಲ್ಲ ನಾಲಿಗಿ ಹಿಡಿದು ಕಿತ್ತ್ಯಾರಲ್ಲ
ಹಡದ ತಾಯಿಗೆ ತಾ ಬಿಟ್ಟವನಲ್ಲ
ಸುಡಗಾಡಸಿದ್ಧಗಟಾವಿಕಿಯಲ್ಲ ||3||
ಚಿಂದಿ ಭಿಕ್ಷಕ ಬಂದೆವಮ್ಮ
ಎಣ್ಣೆ ತಂದು ದಿವಟಿಗಿ ಸುತ್ತಿ ಸುಡುವೆವು ಹಮ್ಮು
ಹಿಂದಿನ ದುಷ್ಕರ್ಮವಮ್ಮ ಹುಟ್ಟಿ
ದಂದಿಂದು ಮಾಡಿದ್ದು ತಂದು ನೀಡಮ್ಮ ||ಪ||
ಕೆಟ್ಟ ಕರ್ಮದ ಮಾಯ ಮರವಿ ಮಲಿನ
ಉಟ್ಟುಟು ಬಿಟ್ಟಂತ ಅಜ್ಞನದರವಿ
ಕೊಟ್ಟಿ ಗುಣಗಳೆಲ್ಲ ನೆರವಿ ಜೀವ
ಘಟ್ಟಿ ಮಾಡಿ ಕುಡು ಕೀರ್ತಿಗೆ ಬರವಿ ||1||
ಆಶಿಯಂಬುವ ಗಂಟು ಬಿಡರಿ ಮನ
ಸೋಸಿ ಮಾಸಿದ ಅರವಿ ಹುಡಕಿ ತಗದಿಡರಿ
ದಾಸಿ ಭಾವದ ಭಕ್ತಿ ತೊಡರಿ
ಪರದೇಶಿ ಬಸವಗ ಮೂರ ಒಪ್ಪಿಸಿ ಕುಡರಿ ||2||
ಬೆಳಗು ಮಾಡಲಿ ಬಂದು ಗುರುವು ನಿಮ್ಮ
ಒಳಗಿನ ಕತ್ತಲಿ ಎಂದಿಗೆ ಹರವು
ತಿಳಿವಿಕಿ ಸಿದ್ಧನೆಚ್ಚರವು ಮುಕ್ತಿ
ಕಳೆ ಬೆಳಗಿನೊಳಿಡುವ ಎಲ್ಲ ಇಹ ಪರವು ||3||
ಝಳ ಝಳ ಯಿರು ಕಂಡ್ಯಮನವೆ ಜೀವ
ಕಳವಳದೊಳಿಕ್ಕಿ ನೋಯಿಸದಿರು ತನುವೆ ||ಪ||
ವಳಹೊರಗೊಂದಾಗಿ ಚರಿಸು ಜ್ಞಾನ
ಬೆಳಗಿನೊಳಗ ಶಿವನಾಮ ಉಚ್ಛರಿಸು
ಬಳಗ ಶಿವಶರೂರ ನೆನಸು ಮಾಯಿ
ವಳಗಾಗದಿರು ಭವದ ಬೇರು ಸಂಹರಿಸೂ ||1||
ಭಿಕ್ಷಾಹಾರವ ಮಾಡಿಕೊಂಡು ನಿರಾ
ಪಕ್ಷಿಯಿಂದ ನಿತ್ಯ ಆಡೊ ಉಂಡುಂಡು
ಮೋಕ್ಷದ ಮಾರ್ಗ ಹಿಡಕೊಂಡು ನಿರ್ವಾಣ
ದೀಕ್ಷ ಜಂಗಮನಿಂದ ಬಿಡದೆ ಪಡಕೊಂಡು ||2||
ಗುರುಸಿದ್ಧಲಿಂಗನಾಳಾಗಿ ಭಕ್ತಿ
ಪಠದಲ್ಲಿ ಹೇಳಿದ್ದೆ ಕೇಳು ಗುಟ್ಯಾಗಿ
ಪುರಾತರ ವಚನ ಮುಂತಾಗಿ ಹುಟ್ಟಿ
ಬರದಂತ ಔಷಧ ಕೊಟ್ಟಿ ನಿನಗಾಗಿ ||3||
ಜಾತ್ರಿ ನೋಡಾಶ್ಚಯ್ವಾದೇನು ಶ್ರೀಗುರು ನಿಮ್ಮ
ಯಾತ್ರಿಗ್ಹೋಗಿ ಬರುವ ಜನರನಂತ ವೀರೇಳು ಲೋಕದಲ್ಲಿ
ಪಾತ್ರ ಪಾತ್ರಕ್ಕೆಲ್ಲ ನೀವೆ ಸೂತ್ರ ಹಚ್ಚಿ ಕುಣಿಸುವಂತೆ ||ಪ||
ಅಷ್ಟದಿಕ್ಕೂ ತುಂಬಿ ತುಳುಕಿತು ನವಖಾಂಡ ಪೃಥ್ವಿ
ಅಷ್ಟು ಅನ್ನ ಕ್ಷೇತ್ರವಾಯಿತು
ಯಿಷ್ಟಪ್ರಾನ ಭಾವಲಿಂಗ ಅಷ್ಟವರ್ಣ ನೀವೆಯಾಗಿ
ಶ್ರೇಷ್ಟವಾದ ಭಕ್ತಿರಸವಿಸಿಷ್ಟು ಮುಖದಿ ಕೊಂಬುವಂತ ||1||
ಇರವಿ ಮೊದಲು ಆನಿ ಕಡಿಯಲಿ
ಪರಿ ಪರಿಯ ಜೀವಿಗಳ್ಹೋಗಿ| ಬರುವ ಮಧ್ಯ ಮಾರ್ಗದಲಿ
ಮರವಿಯೆಂಬೊ ಮಾಯ ರೂಪದ
ಅರಹು ಕೆಡಸಿ ಬಿಟ್ಟಿಯಮ ಪುರಕ ಹೊರಸಿ ಕಳಸುವಂತ ||2||
ನೀವು ನಿಮ್ಮ ಭಕ್ತರಿದರೊಳು ಯಿದ್ದು ಯಿಲ್ಲದ್ಹಾಂಗೆ
ಸಾವ ಹುಟ್ಟು ಅರಿಯದೆ ಜಗದೊಳು
ಯಾವ ಕಾಲದಿ ಜಾತ್ರಿ ನೆರಸಿ
ಭಾವ ಭರಿತ ಸಿದ್ಧನೆನಸಿ| ದೇವ ಭಕ್ತರ ಕೂಡಿಕೊಂಡು
ಠಾವ ಠಾವಿಲಿ ಮೆರವುತಿರ್ಪ ||3||
ಡಂಬಕತನ ಮಾಡಬ್ಯಾಡ ಜಗ
ದಂಬಿಕ ಪತಿ ಸಿದ್ಧ ವಲಿಯನು ಮೂಢ
ನಂಬಿಗೆಂಬದು ಭಕ್ತಿ ಬುಡ ಹರುಷ
ತುಂಬಿ ಮಾಡಿದಡೆ ಅದಕಿ ನಿತಿಲ್ಲೊ ಕೇಡ ||ಪ||
ತಿಳಿಯದೆ ತೊಳಿವ ಪರವಾದಿ ಸಂಶ
ಅಳಿಯದೆ ನಿನಗೆಂದು ದೊರಕದು ಹಾದಿ
ಕಳೆಗುಂದಿ ಕಷ್ಟ ಯಮಬಾಧಿ ಮಾಯಿ
ಸುಳಿಯೆಳು ಬಿಡು ವ್ಯರ್ಥಕೆಟ್ಟು ನೀ ಹೋದಿ ||1||
ನಾನಾ ವಿಧದಿ ಮಾಳ್ಪ ಕ್ರಿಯಾ ಅನ್ನ
ದಾನವಂದಿಲ್ಲದಿರೆ ಕವಡಿಗಿ ಪ್ರಿಯ್ಯಾ
ಜ್ಞಾನ ಹೀನರು ಮಾಳ್ಪ ಚಿರ್ಯಾ ಅಪಮಾನಕ್ಕ
ಸಾದನ ತಗಲದು ಗುರಿಯಾ ||2||
ಶರಣರ ವಾಕ್ಯವ ಕೇಳಿ ನಡಿಯೊ ಅಂತಃ
ಕರುಣಿ ಸಿದ್ದನ ಪಾದ ದೃಢದಿಂದ ಪಿಡಿಯೊ
ಧರುಣಿ ಭೋಗದ ಆಸಿ ಕಡಿಯೊ ಶಿವ
ಸ್ಮರಣಿಯೊಳಗ ನಿಜ ಮುಕ್ತಿ ಸುಖ ಪಡಿಯೊ ||3||
ತಂದಿ ಬಸವಲಿಂಗ ನಮ್ಮ ತಾಯ ನೀಲಗಂಗ
ಹೊಂದಿದ ಬಳಗ ಪ್ರಮಥರೆಲ್ಲರು ಪ್ರಭುರಾಯ ಗುರು ಶಿದ್ಧಲಿಂಗ ||ಪ||
ತೊತ್ತಿನ ಮಗನೆಂದು ಯಲ್ಲರು ಯೆತ್ತಿಕೊಂಡರು ಬಂದು
ಚಿತ್ತವಲ್ಲಭ ಗುರು ಗೊತ್ತು ತೋರಿದನಾಗ ಕತ್ತಲೆ ಹರದಿತು
ಬೆಳಗುದಯಾಯಿತು ||1||
ಸೇವದೊಳೆನಗಿರಿಸಿ ಶಿವ ಅನುಭಾವ ಅಮೃತ ಉಣಿಸಿ
ಜಾವ ಅಗಲದೆ ಭಕ್ತಿ ಭಾವ ನೆಲೆಗೊಳಿಸುತ
ಕಾವಲಿವಳಗಿಟ್ಟು ಕಾಯಿವರುಯನ್ನನ ||2||
ಘನ ಸುಖ ಸಾಗರದಿ ಮುಳುಗಿದೆ ಅನುದಿನ ಯಚ್ಚರದಿ
ತನುಸುಖದುಃಖ ಭೋಗ ಅನುಮಾತ್ರರಿಯೆನು ಮನದೊಲ್ಲಭ
ಸಿದ್ಧನಂಘ್ರಿಯಮರಿಯೆನು ||3||
ತನ್ನ ತಾನೆ ತಿಳಿಯಬೇಕಲ್ಲ
ತಾನಲ್ಲದಿಲ್ಲ ತನ್ನ ತಾನೆ ತಿಳಿಯಬೇಕಲ್ಲ
ತನ್ನ ತಾನೆ ತಿಳಿದ ವಸ್ತು
ಭಿನ್ನವಿಟ್ಟು ನೋಡಲಲ್ಲಿ
ಅನ್ಯರೆಂಬುವರೊಬ್ಬರಿಲ್ಲ
ಚನ್ನಬಸವ ತಾನೆ ಬಲ್ಲ ||ಪ||
ಆರ ಹೇಳಿಕೆ ಕೇಳೊ ಮಾತಲ್ಲ ತೋರಿಸುವರಿಲ್ಲ
ಸೂರ್ರೆಗೊಟ್ಟರೆ ಶುದ್ಧ ಮನವನು
ಸೇರಿ ಲಿಂಗದ ಸಾರ ಕೊಂಬುತ್ತ
ಆರು ಸ್ಥಲ ಆಳವಟ್ಟು ಅನುದಿನ ತೋರುತಿರ್ಪುದು ಜ್ಞಾನ ಜ್ಯೋತಿ ||1||
ಘೋರ ಸಂಸಾರ ಮೀರಿ ನಿಲ್ಲುವುದು
ಬ್ಯಾರೆನ್ನದಿಹುದು ಯಾರಿಗಾಗದು ಏಕ ಚಿತ್ತವು
ಧೀರ ಶರೂರಿಗಲ್ಲದಿಲ್ಲ ನಾರಿ ಒಬ್ಬಳು ||2||
ನೇಮ ಜಪ ತಪ ಕ್ರಿಯದಲಿಲ್ಲಾ ತಾಮಸಿಗೆ ಸಲ್ಲ
ರೋಮ ಕೂಪದಿ ಪ್ರೇಮ ತುಂಬತ
ಭೀಮ ಸಿದ್ಧನ ಹೆಸರಗೊಂಬುತ
ನಾಮ ಸೀಮೆಯ ಮೀರಿ ನಿಜಗುರು ಸ್ವಾಮಿ ಪಾದದೊಳೈಕ್ಯವಾಹುದು||3||
ತಾನಾಗಿ ಬಂದದ್ದು ಬರಲಿ| ತನ್ನ ಸ್ಥಾನ ಬಿಟ್ಟು ಅಗಲದಿರಲಿ
ಮಾನಾಪ ಹೊತ್ತು ಮೆರಿಯಲಿ ಗುರು ಏನುತಂದದೆಲ್ಲ ತರಲಿ ||ಪ||
ಜ್ಞಾನದ ಮಾರ್ಗಿದೆ ಹಿಡಕೊ ಶಿವ
ಧ್ಯಾನ ಪೂರಿತನಾಗಿ ಪಡಕೊ
ಸ್ವಾನುಭಾವದ ಸುಖ ಪಡಕೊ ಹಿಂದ
ನಾನಾ ಜನ್ಮದ ಬೇರು ಕಡಕೊ ||1||
ಹರಗುರು ವಾಕ್ಯವ ಕೇಳು ಯತ್ತ
ತಿರಗದಂತೆ ಶಾಂತಿ ತಾಳು
ಪರಿಪೂರ್ಣ ಹರುಷ ಮನದೊಳುಯಿಟ್ಟು
ಗುರು ಪುತ್ರನಾಗಿ ನೀ ಬಾಳು ||2||
ಯದರಾಗಿ ನಿಂತದ್ದೆ ಖೂನ ನೀ
ಹೆದರಬ್ಯಾಡ ಅನುದಿನ
ಚದರಂಗದಾಟ ಹಚ್ಚಾನ
ಶಿದ್ಧ ಸದಕೇರಿ ದೃಷ್ಟಿ ಕೊಟ್ಟಾನ ||3||
ತಾನಾಗಿ ಬಂದದು ಬರಲಿ ಗುರುಯೆನು ತಂದದೆಲ್ಲ ತರಲಿ
ಮಾನಾಪಮಾನ್ಹೊತ್ತು ಮೆರಿಲಿ ಮಹಜ್ಞಾನ ಅಗಲದ ಮನವಿರಲಿ ||ಪ||
ದೇಹ ಭೋಗಕ ಬರುವೊದೆಲ್ಲ ಗುರುರಾಯ ತರುವನು ತಪ್ಪೊದಿಲ್ಲ
ಸಾಯಸ ಮಾಳ್ವದು ಸಲ್ಲ ಉಪಾಯ ಯಾರದು ಜಾಗೊದಿಲ್ಲ ||1||
ಸುಖ ದುಃಖ ನೆನವಿಗಿಡ ಬ್ಯಾಡ ನಿಜ ಸುಖದಲ್ಲಿ ಮನವಿಡು ಪಾಡ
ಕಕಲಾತಿಗಿ ಹೆಣಗ್ಯಾಡು ಬ್ಯಾಡ ಭವದುಃಖಕ ಗುರಿಯಾಗ ಬ್ಯಾಡ ||2||
ಸಿದ್ಧ ನೀ ಗತಿಯಂದು ಕೂಡುಯಿದೆ ಉದ್ಯೋಗದೊಳು ಮನಸಿಡು
ಬುದ್ಧಿವಂತರ ಸಂಗ ಮಾಡು ಆತ್ಮ ಶುದ್ಧ ನಿನ್ನೆದರಿಟ್ಟು ನೋಡು ||3||
ತೂಕ ನಿಟ್ಟಕ ತೊಗೊ ತಮ್ಮ ಘಾಸಿ
ಹಾಕಬೇಕೆಂಬುವರ ನಸೀಬ ಕಮ್ಮ
ಏಕೊ ಮನಸಿಲಿ ಪರಬ್ರಹ್ಮ ಮೂರು
ಲೋಕ ಆಳುವನೊಬ್ಬ ಬಿಡು ನನ್ನ ಹಮ್ಮ ||ಪ||
ಮಾನ ಕಲ್ಲನು ಖರೆ ಇರಲಿ ಆಪ
ಮಾನ ಕಮ್ಮಿಯ ಕಲ್ಲು ಜನರೊಳು ಹರಲಿ
ಹಾನಿ ಬರುವದು ಹಾಂಗಿರಲಿ ಅ
ಜ್ಞಾನಿಗಳಿಗೆ ಯವ ಹಾಕುವ ನರಕದಲಿ ||1||
ಮಾತಗ್ಗಮಾಡಿ ಕೆಡುಬ್ಯಾಡ ನಿನ್ನ
ಜಾತಿ ಜನ್ಮಕ ಬಟ್ಟ ಮುಂದಿಹುದು ಕೇಡ
ಆತುಕೊಂಡಿಹದಘ ಮೂಢ ಗುರು
ನಾಥ ಹೇಳಿದ ವಾಕ್ಯ ಸಠಿಯನ ಬ್ಯಾಡ ||2||
ಅರಿವುಳ್ಳ ಜನ್ಮಕ್ಕ ಬಂದಿ ಇಹ
ಪರವೆಂಬೊ ಎರಡೊಂದು ತಿಳಿಗುರುವಿನ ಹೊಂದಿ
ಮರವಿನೊಳ ತಿರಗುತ ನೊಂದಿ ನಮ್ಮ
ಗುರುವರ ಶಿದ್ಧಲಿಂಗನೆ ಪೂರ್ವ ತಂದಿ ||3||
ತಿಳಿವಲ್ಲಿ ತಿಳಿವಲ್ಲಿ ಮನ ತೊಳಿವಲ್ಲಿ
ಛಳಿ ಮಳಿ ಬಿಸಿಲು ಘಾಳಿ ತಾಳ್ವಲ್ಲಿ ನೀ
ಅಳಿದುಳಿವದು ಹ್ಯಾಂಗ ಹುಚ್ಚುದುಲ್ಲಿ ||ಪ||
ನಾ ಯಾರೆಂಬುವದಳಿವಲ್ಲಿ ಗುರು
ರಾಯನ ನೆನವಿಗೆ ತರವಲ್ಲಿ
ಮಾಯದ ಸಂಸರ ಬಿಡುವಲ್ಲಿ
ಅನ್ಯಾಯದ ನಡಿ ನುಡಿ ನಿನ್ನಲ್ಲಿ ||1||
ನಾನಿ ನಾನಿಯೆಂಬಲ್ಲಿ
ನಿನಗೇನು ದೊರಕಿತೊ ಅದರಲ್ಲಿ
ಜ್ಞಾನ ಹಾನಿ ವಿಧಿಕಾಲಲ್ಲಿ ಶಿವ
ಧ್ಯಾನ ಘಟಿಸುವದು ಯಾವಲ್ಲಿ ||2||
ನರಜನ್ಮಕ ಬಂದದ್ದೆನಾಯ್ತು
ಗೊತ್ತರಿಯದೆ ಸತ್ತು ಹುಟ್ಟಿ ವ್ಯರ್ಥಾಯಿತು
ಗುರು ಹಿರಿಯರಿಗಂಜದೆ ಹೋಯ್ತು
ಶ್ರೀ ಗುರುವರ ಶಿದ್ಧಗ ಹೊರತಾಯ್ತಾ ||3||
ತೊಳದರ ಏನು ಹೋಯಿತೊ ದೇಹವು ತೊಳಿದಿರಿಕೆನಾಯ್ತು
ಝಳಝಳ ಜ್ಞಾನದ ಬೆಳಗುದಿಸಿರುತಿರೆ ||ಪ||
ದೇಹವು ದುರ್ಗಂಧ ಮಾಯಾ ಛಾಯಾ ಕಣ್ಣಿಗಿ ಚಂದ
ಆಯಸ ಯಾಕತಿ ತೊಳಿಹುವ ಬಂಧ
ನ್ಯಾಯವೆ ನಿಜ ತಿಳಿದಲಿದುಳಿದವರಿಗೆ ||1||
ಮನದ ಲಿಂಗದಿ ಬೆರಸಿ ಮಹ
ಅನುಭಾವ ಅಮೃತ ಸಲಿಸಿ
ಘನ ಸುಖದಲಿ ಘಟ್ಟಿಗೊಂಡು ಶ್ರೀಗುರುಪಾದ
ಅನುದಿನ ಮರಿಯದೆ ನೆನವಿನೊಳಿರುತಿರೆ ||2||
ಸಂಶ ಪ್ರಾಣಿಯಲ್ಲ ಶಿದ್ಧನ ಅಂಶಿಕ ನೆಲಿ ಬಲ್ಲ
ಮಾಂಸ ಪಿಂಡ ಅಳಿದುಳಿದ ಶರಣರ
ಸಂಸಾರ ಸುಖ ದುಃಖವಿನಿತಿಲ್ಲ ||3||
ತಮ್ಮ ತಾವರಿಯದ ಹಿರಿಯರು ಪರಬ್ರಹ್ಮದ ಗೋಷ್ಟಿ ನುಡಿವರು
ಹಮ್ಮು ಅಹಂಕಾರ ಗರ್ವಕ್ಕೊಡಿಯರು ಗುರುವೆ ನಿಮ್ಮವರೆತ್ತ ಬಲ್ಲರು ||ಪ||
ಹಲವು ವಚನ ಶಾಸ್ತ್ರ ಕಲಿತರು ಅದರ
ಬರುವಿಲಿ ಹುಲಿಯಾಗಿ ತೋರ್ಪರು
ಮಲತ್ರಯ ದಾಸಿಯ ನೀಗರು ಮಾಯಿ
ಬಲಿಯೊಳು ಬಿದ್ದೆತ್ತ ಹೋಗರು ||1||
ತೊತ್ತಿನ ಪಡತೊಳ್ಗ ಹೊಲಿಯರು ಶರಣರ
ಗೊತ್ತು ತಿಳಿಯದೆ ನೊಯಿಸಿ ನುಡಿವರು
ಕತ್ತಿಯ ಹಾಲ್ಕುಂಡಿದಾತ್ಮರು ಹಾದಿ
ಬುತ್ತಿ ಕಟ್ಟಿಕೊಂಡು ಹೋಹರೂ ||2||
ತಿಳಿಯದೆ ತೊಳಕೊಂಬ ಮೂಳರು ಸಂಶ
ಅಳಿಯದೆ ಪಥಯೆಂದು ಕಾಣರು
ಛಳಿ ಮಳಿ ಬಿಸಲ್ಗಾಳಿ ತಾಳರೂ ಗೊತ್ತು
ತಿಳಿದ ಸತ್ಪುರುಷರಿಗೆ ಹಳಿವರೂ ||3||
ವೇಶ ಡಂಬಕ ಫಾಸಿಕೋರರು ಗಣ
ಸಹಸ್ರ ನೇಮದಿ ವೊದಿಕೊಂಬರು
ಹೇಸಿಕಿ ಕಸಮೂಲ ತಿಂಬರು ಮನ
ಉಲ್ಲಾಸ ಅಮೃತ ಎಂದಿಗುಂಬರೂ ||4||
ಸಿದ್ಧನ ಕರುಣವ ಪಡಿಯರು ದು
ರ್ಬುದ್ಧಿಯೆಂದಿಗೆ ಬಿಡಲರಿಯರು
ಗುದ್ಯಾಟ ಯಮಪುರದಿ ಯಿರುವರು ಭವ
ಗೆದ್ದೆವು ನಾವೆಂಬ ಮೂಢರೂ ||5||
ತನ್ನ ತಾನು ತಿಳಿದ ಮೇಲ ಭೇದವೇನು ಮತ್ತೊಂದಾದವೇನು
ತನ್ನಂತೆ ಸರ್ವ ಜೀವ ಕಾಣುವಾನು ಅಂತಃ ಕರುಣಿ ನೀನು ||ಪ||
ಮುಕ್ತಿ ಕುಡುವ ಗುರುವಿನಲ್ಲಿ ಮೂಲದಾವದು ಅದರ ಕೀಲದಾವದು
ವ್ಯಕ್ತವಾಗಿ ತಿಳಿಯೊ ವಿರಕ್ತಿ ಭಾವದು ಜೀವ ಶಿವನ ರೂಪಿದು ||1||
ಭಕ್ತನಾದುವದಕ ಪರಿಭಾವದಾವದು ಅದರ ಕುರುಹುದಾವದು
ಭಕ್ತಿ ಜ್ಞಾನ ವೈರಾಗ್ಯದ ಬಲವ ನೊಡದು ಕಲಸಿದರ ಬಾರದು ||2||
ಪಿಂಡ ರೂಪ ಧರಸಿ ಪ್ರಾಣ ಬಂದಿತ್ಹ್ಯಾಂಗ ಬ್ರಹ್ಮಾಂಡಾಯಿತ್ಹ್ಯಾಂಗ
ಪುಂಡ ಸಿದ್ಧಲಿಂಗನಾಟ ತಿಳದಿತ್ಹ್ಯಾಂಗ ತಿಳದರ ಉಳದಿತ್ಹ್ಯಾಂಗ ||3||
ತಂಬೂರಿ ಬಜಾಸು ಬೇಕೊ ತಮ್ಮ ತಂಬೂರಿ ಬಜಾಸು ಬೇಕೊ
ತಂಬೂರಿ ಬಜಾಸು ಬೇಕೊ ಸಾಂಬನ ಸವಾರಿ ತಯಾರಾಯ್ತು ||ಪ||
ಬಸವಯಂಬ ಘೂಳಿ ವಸ್ತ ಕಿರಿ ಜಂಗು ಸರಪಳಿ
ಭಸಿತ ರುದ್ರಾಕ್ಷಿ ಕೊರಳೊಳು ಮಾಲಿ
ಶಶಿಧರ ತೆಗೆದನು ಘೂಳಿ ವೈಯ್ಯಾಳಿ ||1||
ಭಜನಿ ಸಂಭ್ರಮದಿಂದ ಸುಜನರ ಸಂಗಹಿಂದ ಮುಂದಾ
ನಿಜಸುಖ ಗುರುವಿನ ಮಂತ್ರ ಬಲದಿಂದ
ಭಜಿಸುತ ಹೊಂಟಿತು ಘೂಳಿ ಆನಂದ ||2||
ಗುರುವು ಶಿದ್ಧಲಿಂಗ ಘೂಳಿನಯೇರಿದ ಸರ್ವಾಂಗ
ಮೇರು ಪರ್ವತ ನೋಡ ಹೊಂಟನು ಹೀಂಗ
ಕೋಟಿ ಸೂರ್ಯರಿಗೆ ಮಿಗಿಲು ಕಂಬ್ಹಾಂಗ ||3||
ತೊತ್ತು ಸೇವಾ ಮಾಡ ಬೇಕಣ್ಣ ನಿಜಗೊತ್ತು ತಿಳಿದು
ತೊತ್ತು ಸೇವಾ ಮಾಡಬೇಕು ಅತ್ತ ಇತ್ತ ಹೊತ್ತು ಗಳಿಯದೆ
ಚಿತ್ತ ಶುದ್ಧವಾಗಿ ಶರಣರ ನಿತ್ಯಪಾದರಕ್ಷಿ ಹೊತ್ತು ||ಪ||
ಕಾಯ ವಾಚ ಶುದ್ಧ ಮನದಲ್ಲಿ ಭಯ ಬಕ್ತಿಯಲ್ಲಿ
ರಾಯ ಜಂಗಮ ಬಂದ ಭರದಲಿ ಛಾಯಾ ಕಾಣುತ ಚರಣಕೆರಗುತ
ಮಾಯ ಮರ್ಧನ ದೇವ ಪೂಜೆಗೆ ಸಾಯವಾಗಿ ತೃಪ್ತಿಬಡಿಸುವ ||1||
ದಾನ ಧರ್ಮ ಜ್ಞಾನ ಮುಂತಾಗಿ ಶಿವಧ್ಯಾನಿಯಾಗಿ
ತಾನು ತನ್ನ ಮರತು ಅನುದಿನ ಸ್ವಾನುಭವ ಸುಖದೊಳಿರ್ದು
ಭಾನುಕೋಟಿ ಪ್ರಭೆಯ ಜಂಗಮ ಸ್ತೋಮ ಕಂಡು ಹರುಷಗೊಂಡು ||2||
ಆಶರೋಷ ಎರಡು ಗುಣ ನೀಗಿ ದಾಸೋಹಿಯಾಗಿ
ಬ್ಯಾಸರಿಲ್ಲದೆ ದಾಸಭಾವದಿ ಕೂಸು ತಾಯಿಯ ಪರಿಯಲಿರುತಿರೆ
ಶೇಷ ಭೂಷಣ ಸಿದ್ಧಲಿಂಗ ಘೋಶದೊಳಗಯಿಟ್ಟು ಕೊಂಬ ||3||
ತಾಳು ತಾಳು ತಾಳು ಗುರುವಾಕ್ಯವ ಕೇಳು
ತಾಳು ತಾಳು ಮನ ಶಾಂತಿ ಶಮೆ ದಮೆ | ಬಾಳು ನೀಶರಣರ
ಆಳಾಗಿ ಅನುದಿನ ||ಪ||
ದೇಹ ಮಾಯ ಛಾಯಾ ಇಂದ್ರಚಾಪದ ನ್ಯಾಯ
ದೇಹದ ಸುಖ ದುಃಖ ಭೋಗ ದುರ್ಗುಣದಾಸಿ
ಮಾಯಮರ್ಧನ ಪ್ರಭುರಾಯಗೊಪ್ಪಿ ಧೈರ್ಯ ||1||
ಹೊನ್ನು ಹೆಣ್ಣು ಮಣ್ಣು ಭವರೋಗದ ಹಣ್ಣು
ಇನ್ನು ನೀ ಬಯಸದೆ ಬೆನ್ನು ಹತ್ತು ಗುರುಪಾದ
ಉನ್ನತವಹುದು ಚೆನ್ನಾಗಿ ನಿಜ ಸುಖ ||2||
ಭಕ್ತಿ ಯುಕ್ತಿ ವಿರಕ್ತಿ ಇದುವೆ ನಿಜ ಮುಕ್ತಿ
ತಕ್ತದೊಡಿಯ ಶಿದ್ಧಲಿಂಗನ ಭಜಿಸುತ
ಭಕ್ತಿ ಜ್ಞಾನ ವೈರಾಗ್ಯದೊಳಿರು ಹರುಷ ||3||
ತನ್ನ ಪಾಲಿಗೆ ಗುರು ತಂದು ಕೊಟ್ಟಿ ಪಡಿ ತಾನೆ ಉಂಡು ತೀರಿಸಬೇಕು
ತನ್ನ ಸುಖ ದುಃಖ ಭೋಗ ಅನ್ಯರಿಗ್ಹೊಗದು
ಚೆನ್ನಾಗಿ ಅನುಭವ ಬಡಬೇಕು ||ಪ||
ಒಲ್ಲೆಂದರ ಬಿಡನು ಎಲ್ಲಿ ಹೊಕ್ಕರ
ಅಲ್ಲೆನಿಸಿ ಅನುಭವ ಮಾಡುವದು
ಬಲ್ಲಿದ ಮಾಯಿ ಎಂದರಿಯರು ಜನರು
ಅಲ್ಲಮನಾಗ್ನಿಲಿ ಬಂದಿಹುದೂ ||1||
ಬಲ್ಲಿದ ಪ್ರಮಥರು ಒಲ್ಲೆನರು ಅದ
ರಲ್ಲಿ ದೇಹ ಇಟ್ಟು ಬಿಟ್ಟಿಹರು
ಕಲ್ಯಾಣದಲ್ಲಿ ಕಟ್ಟಿಗಿ ಹುಲ್ಲು ಮಾರಿ ಭಕ್ತಿ
ಯಲ್ಲಿ ಭವದಾ ಬೇರು ಸುಟ್ಟಿಹರು ||2||
ಜ್ಞಾನಿಗಳಂಜರು ಮಾನಪಮಾನಕ
ತಾವೆ ಸಿದ್ದಾಗಿ ನಿಂತಿಹರು
ಖೂನ ಕಂಡು ಗುರುಧ್ಯಾನದೊಳಗ ಮನ
ಅನ ದಿನ ಅಗಲದ ಇಟ್ಟಿಹರು ||3||
ದೊರಕಿಸಿಕೊಂಬುವ ವ್ಯಾಳ್ಯ ಇದು ಏನು
ಹರಕತಿಲ್ಲ ಕೈ ಸಾರುವದು
ಮರುಕ ಮಾಡುವ ಮೂಢ ಜನರಿಗೆ
ದೊರಕಲಿಕಿಲ್ಲ ಇದ್ದದ್ಹೋಗುವದು ||ಪ||
ತನುಮನ ಧನ ವಂಚಿಸದೆ ಗುರುವಿಗಿ
ಅನುಕೂಲವಾದರ ಬಾಹುದು
ಅನುಮಾನಿಸಿ ದುರಭಿಮಾನದೊಳಿರೆ
ಅನುಕೂಲವಾದದ್ದು ಹೋಗುವುದು ||1||
ಗುರುಪಾದ ಸೇವ ಲಿಂಗದ ಪೂಜಿ
ಜಂಗಮ ದಾಸೋಹ ಮಾಡುವದು
ಕರಮನ ಭಾವದಿ ನೆರೆ ನಂಬಿಕೆ ಫಲ
ಪರಿ ಪರಿ ತರದಲಿ ತೋರುವದೂ ||2||
ಭಕ್ತಿ ಜ್ಞಾನ ವೈರಾಗ್ಯ ಸಂಪತ್ತು
ಯುಕ್ತಿ ಮಾರ್ಗಯಿದು ಸಿದ್ಧನ ಪಾದ
ಭಕ್ತನ ಹೃದಯದೊಳಿರುಹುವದು ||3||
ದೃಢದಿಂದಲಿ ನಮ್ಮ ಮೃಢ ಕಡವಸನನ
ಬಿಡದೆ ನಂಬಿಕೊಂಡವರಿಗೆ
ಸಡಗರ ಸಂಪತ್ತು ಕಡಿವೊದಲಿಲ್ಲದೆ
ಕುಡುವನು ಮುಕ್ತಿ ತಾನವರಿಗೆ ||ಪ||
ದಾನ ಧರ್ಮ ಪರವುಪಕಾರಿಗಳಿಗೆ ಕಾಮಧೇನು ತಾನಾಗ್ಯಾನೆ ಧ್ಯಾನ
ಮೌನ ಜಪ ತಪ ಯೋಗಿಗಳಿಗೆ ಕಾಮಿತಾರ್ಥ ಫಲ ಕುಡುತಾನೆ
ಸ್ವಾನುಭಾವ ಸುಜ್ಞಾನಿಗಳಿಗೆ ಅನುಭಾವ ತಿಳಿಸುತ ನಿಂತಾನೆ
ದಾನ ಮಾಡದ ದೀನ ಜನರಿಗಪಮಾನ ಮಾಡಿ ಬಿಟ್ಟು ಕೊಡತಾನೆ ||1||
ಇರುವೆ ಮೊಲದಲು ಈರೇಳು ಲೋಕ ಕಡಿ ಆನಿಗ್ಹರ ನಿತ್ಯ ಕುಡುತಾನೆ
ನರಜನ್ಮದ ಎರಡ್ಹೆಣ್ಣುಗಂಡು ಗೊಂಬಿ ಮಾಡಿ ಸೂತ್ರ ತಾ ಪಿಡಿದಾನೆ
ಮರವಿಯಂಬುವದೊಂದು ಪರಿಧಿಯ ಕಟ್ಟಿ ಮಾಯಿನ ಕುಣಿಸುತ ನಿಂತಾನೆ
ಪರಿಪರಿ ತೆರದಲಿ ಪ್ರಮಥರು ಕೂಡಿ ಪರಮಾನಂದದೊಳಿರುತಾನೆ ||2||
ಅಣುಮಹತ್ವಾಗಿ ಅರಸು ಪ್ರಧಾನಿ ಬಡವ ಬಲ್ಲಿದರನ ಮಾಡ್ಯಾನೆ
ತನುವಿಗೆ ಸುಖದುಃಖ ಅನುದಿನ ಕೀಲಿಸಿ ಮನಚಂಚಲ ಮಾಡಿಟ್ಟಾನೆ
ಜನನ ಮರಣ ಭಯ ಜನರಿಗೆ ತೋರಿ ಅನಂತ ಜನ್ಮ ಕೊಟ್ಟಾನೆ
ನೆನವು ಮಾತ್ರದಿ ಜಗ ಸೃಷ್ಟಿನಿರ್ಮಿಸಿ ಮಹಘನ ಸಿದ್ಧನೆನಿಸ್ಯಾನೆ ||3||
ದಿನ ದಿನ ಶಿವಯೋಗ ಲಿಂಗದ ನೆನವಿನೊಳಿರುವವಗ
ಘನ ಸುಖದಲಿ ಮನ ಆಗದ್ದಲದೆ ಅನುದಿನ
ತನು ಸುಖ ದುಃಖ ಭೋಗ ನೆನವಿಡದವನಿಗೇ ||ಪ||
ಗುರು ಪಾದ ಸೇವದಲಿ ಭಕ್ತಿ ಕರಮನ ಭಾವದಲಿ
ಪರಮ ಹರುಷ ತುಂಬಿ ಹೊರ ಸೂಸಿ ಚೆಲ್ಲುತ
ನರರೊಳು ನರರಂತೆ ಚರಿಸುತಿರ್ದವರಿಗೆ ||1||
ಲಿಂಗ ನಿಷ್ಟಯಲ್ಲಿ ನಿಲಸಿದ ಕಂಗಳಕಿತ್ತದಲ್ಲಿ
ಸಂಗನ ಶರಣರ ಮಹತ್ವ ಕೊಂಡಾಡುತ
ಅಂಗದ ಗುಣ ಅಳಿದುಳಿದಂತವರಿಗೇ ||2||
ಜಂಗಮ ಪ್ರಾಣಿ ಎನಿಸಿ ಸರ್ವಂಗ ಭಸಿತ ಧರಿಸಿ
ಮಂಗಳ ಮೂರ್ತಿ ಮಹಲಿಂಗ ಶಿದ್ಧನ
ಸಂಗಮಾಡಿ ಭವ ಹಿಂಗಿದಂತವನಿಗೇ ||3||
ನಮ್ಮಪ್ಪ ಬಸವಣ್ಣಾ ನಮ್ಮವ್ವ ನೀಲಮ್ಮಾ| ನಮ್ಮಯ್ಯ ಪ್ರಭುರಾಯ
ಚನ್ನಬಸವ ಯನ್ನ ಎನ್ನ ಕಾಯೊ ||ಪ||
ಇನ್ನುಳಿದ ಪ್ರಮಥಾರು| ಎನ್ನಾತ್ಮ ಧಣಿಯೇರು
ಬೆನ್ನಹತ್ತಿ ಯಿರುವಾರು| ಭಕ್ತಿ ಚೆನ್ನಾಗಿ ಕೊಳವಾರೂ ||1||
ಏಳೇಳು ಜನ್ಮದಲಿ| ಆಳಾಗಿ ಹರುಷದಲಿ
ಬಾಳಿದೆ ನೇಮದಲ್ಲಿ| ಬಿಡದೆನ್ನಾ ಆಳ್ದರು ಪ್ರೇಮದಲಿ ||2||
ಇಹಪರ ಸುಖದುಃಖಾ| ಭಯವಿಲ್ಲ ಆತ್ಮಕ್ಕಾ
ಜಯಿಸಿದ್ದ ಮೂಲೋಕ| ಜಯಗುರು ಸಿದ್ಧಗುರೊರಧಿರಾ ||3||
ಸೊಕ್ಕಿದವರ ಹಲ್ಲು ಮುರಿವಾನು
ದಿಕ್ಕು ದಿಕ್ಕಿನಲ್ಲಿ ಮರೆವಾನೊ| ದಿಕ್ಕೂ ದಿಕ್ಕಿನಲ್ಲಿ ಮೆರೆವಾನೊ ||4||
ಗಾಡಿಕಾರ ಸಿದ್ಧ ಘನಯೋಗಿ
ಬೇಡಿಕೊಂಬುವದು ತಲಿಡೋಗಿ| ಕೊಂಬುವದು ತಲಿದೊಗಿ ||5||
ನೇಮ ನಿತ್ಯವಿಲ್ಲದ ಸಂತರಿಗೆ
ಸ್ವಾಮಿ ಧ್ಯಾನವೊಂದೆ ಅವರಿಗೆ| ಧ್ಯಾನವೊಂದೆ ಅವರಿಗೆ ||ಪ||
ರಾಮಯೆಂಬೊ ಶಬ್ದ ಯಾವಾಗ
ಪ್ರೇಮಾನಂದ ಭಜನಿ ಮಾಡಾಗ
ಆನಂದ ಭಜನಿ ಮಾಡಾಗ ||1||
ಗುರುವಿನ ಪಾದದಲ್ಲಿ ವಿಶ್ವಾಸ
ಹರಹರಯೆಂಬೊ ನಾಮದ ಉಲ್ಲಾಸ| ಹರಯೆಂಬೊ ನಾಮದ ಉಲ್ಲಾಸ ||2||
ಮನ ಒಪ್ಪಿ ಪೂಜಿಸುವರು ಸಿದ್ಧನಿಗೆ
ಪುನರಪಿ ಜನ್ಮ ಬಾರದವರಿಗೆ| ಜನ್ಮ ಬಾರದವರಿಗೆ ||3||
ನೀ ಮಾಡಿದ್ದೆ ನಿಜವಾಪದು ಗುರುಸಿದ್ಧ ನಾ ಮಾಡಿದರೇನಾಪದು
ಪ್ರೇಮದಿಂದಲಿ ನಿಮ್ಮ ನಾಮ ಭಜನಿಯ ಸಾಕು| ಕಾಮಯನ್ನೊಳಗಿಲ್ಲವೊ ||ಪ||
ಜಪತಪ ಕ್ರಿಯೆಗಳನ್ನು ಷೋಡಶ ಉಪಚಾರ ಮಾಡರಿಯನು
ಉಪವಾಸ ವೃತನೇಮವಂದು ಅರಿಯೆನು ಗುರುವೆ ಜಾಗೃಸ್ವಪ್ನ ವಸ್ತಿಯಲ್ಲಿ ||1||
ವೇದ ಆಗಮ ಶಾಸ್ತ್ರವು ಬಹುದಿನ ವೋದಿ ದಂಡಾಯಿತು
ವಾದ ತರ್ಕವ ಹೆಚ್ಚಿ ಹಾದಿಕಾಣದೆ ಯಮ ಬಾಧಿಗೆ ಗುರಿಯಾಯಿತೂ ||2||
ಚೇತನವೇ ನೀವಿದ್ದಿರಿ ನಿಮಗರಿದ ನೂತನವು ಯಿನ್ನಾವುದು
ದಾತ ಶ್ರೀ ಸಿದ್ಧನಾಥ ದಾತ ನೀ ಸೋತು ಹೇಳಿದೆ ಸ್ತೋತ್ರವಾ ||3||
ನಿಮಗ ಬೇಡುವೆನು ಸಿದ್ಧಲಿಂಗ ನಿಮಗ ಕೊಂಡಾಡುವೆನೂ
ನಿಮಗಲ್ಲದ ಅನ್ಯ ಜನರಿಗೆ ಬಾಯಿದೆರಿಯೆ
ನಿಮ್ಮಾಣೆ ನಿಮ್ಮ ಪ್ರಮಥರಾಣೆ ಶಿವ ಶಿವ ||ಪ||
ತೊತ್ತು ನಿಮ್ಮವಳಲ್ಲದೆ ಪಾದುಕಿ ಹೊತ್ತು ದೃಢಚಿತ್ತದಲ್ಲಿಲ್ಲವೆ
ಯತ್ತ ಹೋದರು ಬೆನ್ನು ಹತ್ತಿಯಿರುವೆನು ಗುರುವೆ
ಮತ್ತ್ಯಾರು ಯನಗಿಲ್ಲ ನಿನ್ಹೊರತು ದಿಕ್ಕಿಲ್ಲ ||1||
ವತ್ತಿ ಆಳುತಲಿರ್ದಿರಿ ಒಮ್ಮನ ಭತ್ತ ಪಡಿಕೊಟ್ಟು ಯಿಟ್ಟಿರ್ದಿರಿ
ಮುತ್ತು ಕೊಟ್ಟಿರಿ ಮೂಗಿಲಿ ಹೊತ್ತು ಮೆರಿವೆನು ಜಗದಿ
ಕತ್ತಲೆ ಉಳದಿಲ್ಲ ಮತ್ತೇನು ಬಯಕಿಲ್ಲ ||2||
ನೆನಿಸುವೆ ಪಾದಗಳ ಅಮೃತ ರಸ ಉಣಿಸುವಿ ಸುಫಲಂಗಳ
ಮನದಧಿಕಾರಿ ಮಹ ಘನವಸ್ತು ಗುರುಶಿದ್ಧ
ಅನುದಿನ ಅಗಲದೆ ಅನುಗೂಡಿಯಿರುತಿರ್ಪಿ ||3||
ನಂಬಿದೆ ನಿನ್ನ ನಚ್ಚಿದೆ ಶ್ರೀಗುರು ರಾಯನ
ನಂಬಿದೆ ನಾ ನಿಮ್ಮ ಶಂಭು ಶಂಕರ ಸಿದ್ಧ
ಕುಂಭನಿಯೆಳು ಪಾದದ್ಹಂಬಲ ಹಗಲಿರುಳು ||ಪ||
ತಂದಿಯು ನೀನೆ ತಾಯಿಯು| ಬಂಧುವೂ ನೀನೆ ಬಳಗವೂ
ಕಂದ ನಿಮ್ಮವನೆಂದು ಕರಮನ ಭಾವದಿ
ಹೊಂದಿಕೊಂಡೆ ನಿಮ್ಮನೆಂದೆಂದು ಅಗಲದೆ ||1||
ಯೇಳುತ ನಿತ್ಯ ಬೀಳುತ| ಕೇಳುತ ಕೀರ್ತನಿ ಹೇಳುತ
ಯೆಳೇಳು ಜನ್ಮದಲಿ ಆಳಾಗಿಯಿದರಂತೆ| ಬಾಳಿದೆ ಬದುಕಿದೆ ಭಾಳಲೋಚನ ನಿಮ್ಮ ||2||
ಅಂಗನೀ ಅಂತರಂಗನೀ ಸಂಗನೀ ಸರ್ವಂಗ ನೀ ಮಂಗಳಾತ್ಮಕ ಶಿದ್ಧಲಿಂಗ
ಜಂಗಮ ದೇವ ಹಿಂಗಿರಲಾರೆ ಭವ ಭಂಗ ಭಕ್ತರ ಪ್ರೇಮಿ ||3||
ನಾ ಮಾಡಿದಪರಾಧ ನೀವೆ ಪರಿಹರಿಸಿ ಯನ್ನ ಪ್ರೇಮದಲಿ ಸಲಹಿದ್ದಿರಿ ಗುರುವೆ
ನೀ ಮಾಡಿದುಪಕಾರ ಯಿಷ್ಟಿಷ್ಟು ಯಣಿಕಿಲ್ಲ ಹೇಮಗಿರಿಯಿಂದಧಿಕವೊ ಗುರುವೆ ||ಪ||
ಎಷ್ಟು ಹೇಳಲಿ ನೀವೆ ಹಸ್ತಿಘಟ್ಟಫಪದಿಂದ| ಕಷ್ಟವು ಯನಿತಿಲ್ಲವು ಗುರುವೆ
ಅಷ್ಟವರಣವು ಅಂಗಕಳವಡಿಸಿ ಯಿದಿರಿಟ್ಟು ದೃಷ್ಟಾಂತ ತೊರಿಸಿದ್ದಿ ಗುರುವೆ ||1||
ನಡಿನುಡಿಯಲಿ ಹೊಂದಿ ವಡಗೂಡಿಯಿರುತಿರ್ಪಿ ಬಡತನಯನಗಿಲ್ಲವೊ ಗುರುವೆ
ಸಡಗರ ಸಂಪತ್ತು ಕಡಿ ಮೊದಲು ಯಣಿಕಿಲ್ಲ
ದೃಢಚಿತ್ತ ನೆಲೆಗೊಳಿಸಿದಿ ಗುರುವೆ ||2||
ಮಡಿ ಮೈಲಿಗೆಣಿಸಿಲ್ಲ ಹಿಡಿದ ಕೈಬಿಡಲಿಲ್ಲ ಪೊಡವಿಯೊಳು ಮ್ಯರಿಸುತಿದ್ದಿ ಗುರುವೆ
ಅಡಿಗಡಿಗೆ ಯಚ್ಚರಿಸಿ ಕುಡುವಿ ಕೂಡಲಸಂಗ ಸಿಡಿದು ನಿಂತೆನು ಕಡಿಯಲಿ ಗುರುವೆ ||3||
ಸೊಕ್ಕಿಲಿ ಬಹುಜನರು ಯಿಕ್ಕಿದರು ಮುಂಡಿಗಿಯವ ಕಾರಕಳಿವೆವೆಂದೂ ಗುರುವೆ
ದಿಕ್ಕು ನೀನೆ ಎಂದು ತಕ್ಕಷ್ಟು ಭಜಿಸಲಿಕೆ| ಮಕ್ಕರುಳಿ ಶವರ ಸೊಕ್ಕು ಮುರಿದಿ ಗುರುವೆ ||4||
ಯಾರು ಅರಿಯರು ನಿಮ್ಮ ವೀರಶೈವದ ಮಹತ್ವ
ಈರೇಳು ಭುವನದಲ್ಲಿ ಗುರುವೆ
ಧೀರ ಸಿದ್ಧೇಶ್ವರನ ಸೇರಿದ ಭಕ್ತರಿಗೆ
ತೋರುವದು ಮನಸಿನಲ್ಲಿ ಗುರುವೆ ||5||
ನೀ ಹ್ಯಾಂಗ ನಿನಗದು ಯದರ್ಹಾಂಗ
ತಿಳಿಕೊ ಬ್ಯಾಗ ಬ್ಯಾಗ ||ಪ||
ಕನ್ನಡಿಯೊಳ ಕಂಡ ಪರಿಯಂತೆ
ಮನಸಿನ ಗುಣದಂತೆ
ಅನುದಿನ ಪರಿಪರಿ ನೆನವು ಮಾತ್ರದಿ ಜಗ
ಅನುಕೂಲವಾಹುದು ಅಗಲದೆ ಸುಖ ದುಃಖ ||1||
ಗುಡಿ ಶಬ್ದದ ಮಾರ್ನುಡಿಯ ಕುಡುವಂತೆ
ನಡಿ ನಡಿ ಅದರಂತೆ
ಬುಡನಡು ಕಡಿತನಕ ಬಿಡದಾಚರಿಸುತ
ಅಡಿಯಗಲದೆ ಮಾಯಿ ವಡಲಾಗಿರ್ಪದು ||2||
ನೀನೆ ನಿನ್ನ ಹೃದಯದ ತಿಳಿಮಾಡು
ನಿನ್ನೆದರಿಟ್ಟು ನೋಡು
ಭಿನ್ನವಿಲ್ಲದ ಗುರು ಚಿನ್ಮಯ ಶಿದ್ಧನು
ನಿನ್ನಂತೆ ನಿನಗೆದರಾಗಿದರ್ಪನು ||3||
ನೀವೆ ಗತಿ ಗುರುವೆ ನಿಜ ಭಕ್ತ ಕಲ್ಪ ತರುವೆ
ದಾನಿ ರೇವಣಸಿದ್ಧ ನಿಮ್ಮ ಪಾದುಕಿ ಹೊತ್ತು ಮೆರಿವೆ ||ಪ||
ನಿಮ್ಮವ ನೆನಿಸಿಕೊಂಡೆ ಪರ ಬ್ರಹ್ಮನ ಭಿಕ್ಷವನುಂಡೆ
ಹಮ್ಮಷ್ಟು ಕಳದುಕೊಂಡೆ ದ್ಯಾಸ
ನಿಮ್ಯಾಲ ಭ್ರಮಿಗೊಂಡೆ ||1||
ತಂದರ ಬಂದೆನು ನಾನು ತಾಯಿ
ತಂದಿ ಆದವ ನೀನು
ಸಂದೇಹ ವಿಲ್ಲೇನೇನು ಮನ
ವಂದಾಗಿಯಿರುವೆನೂ ||2||
ಭಕ್ತನ ಮಾಡುವಿ ನೀನು ವಿರಕ್ತನ ಮಾಡುವಿ ನೀನು
ಮುಕ್ತನ ಮಾಡುವಿ ನೀನು ಅಶಕ್ತನ ಮಾಡುವಿ ನೀನು ||3||
ನಡಸಿದರ ನಡಿವೆನು ನೀ ನುಡಸಿದರ ನುಡಿವೇನು
ಕಡಿ ಮೊದಲಲ್ಲಿಯು ನೀನು ನಾ ಹಿಡಿಬಿಡುವದಿನ್ನೇನೂ ||4||
ತನು ಮನ ಧನವಷ್ಟು ನಿಂದು ಅದರೊಳಿನಿತಿಲ್ಲ ಯಳ್ಳಷ್ಟು ನಂದು
ಅನುಮಾನ ಯಾಕೆ ಮತ್ತೊಂದು ನಿಮ್ಮನೆನವಿನೊಳಿರುವೆ ಅಂದಿಂದು ||5||
ಮಾನವಾದರ ನಿಂದು| ಅಪಮಾನವಾದರ ನಿಂದು
ಹಾನಿ ವೃಧ್ಧಿಯು ನಿಂದು| ಭಕ್ತಿ ಜ್ಞಾನ ವೈರಾಗ್ಯವು ನಿಂದು ||6||
ಶಿದ್ಧಾಗಿ ಬಿರಿದು ಸಾರಿ ಹಿಡದಿದ್ದೆನು ಶರಣರ ದಾರಿ
ಉದ್ಯೋಗ ಪರೊಪರಿ ಹೀಂಗಿದ್ದೆನೊ ನಿಃಸಂಸಾರಿ ||7||
ನೀನೆ ಗತಿಯೆಂಬ ಸುಖ ಜ್ಞಾನಿ ಬಲ್ಲನು ಉಂಡು
ಹೀನ ಮಾನ್ವರು ಬಲ್ಲರೆ ಗುರುವೆ
ನಾನು ನೀನೆಂಬ ನುಡಿಯದರಿಟ್ಟು ಬಡದಾಡಿ
ಹಾನಿ ವಳಗಾಗುತಿಹರು ಗುರುವೆ ||ಪ||
ತಾನಾಗಿ ಬಂದಂತ ನಾನಾ ಸುಖ ದುಃಖ ಭೋಗ
ನೀನೆ ಕರುಣಿಸಿರೆಂದು ಗುರುವೆ
ಜ್ಞಾನ ಮುಖದಲಿ ನಿನ್ನ ಧ್ಯಾನಿಸುತ್ತ ಅನುಭವಿಸಿ
ಏನೇನು ಅರಿಯರಾಗಿ ಗುರುವೆ ||1||
ನಿಮ್ಮ ವಿಪರೀತ ತಿಳಿದೆ ಬ್ರಹ್ಮಜ್ಞಾನಿಗಳೆಂದು
ತಮ್ಮ ತಾನೆ ಹೊಗಳುತಿಹರು ಗುರುವೆ
ಹಮ್ಮು ಅಹಂಕಾರದಲ್ಲಿ ಹಲವು ಕಡಿ ಮನವೆಳಸಿ
ಸುಮ್ಮನೆ ಸಾಯುತ್ತಿಹುರು ಗುರುವೆ ||2||
ನೀವೆ ಕತ್ತಲಿ ಬೆಳಗು ಕಣ್ಣೆದರ ತಂದಿಟ್ಟು
ಝಾನಾವ ಅಗಲದ ಪರಿಯಲ್ಲಿ ಗುರುವೆ
ಸಾವ ಹುಟ್ಟುವದಕ್ಕ ಗುರಿಮಾಡಿ ಗುರುಸಿದ್ಧ
ನೀವ ತಪ್ಪಿಸಿ ಕೊಂಬಿರಿ ಗುರುವೆ ||3||
ನಂದು ನಂದು ಅಂತನಲಿ ಹ್ಯಾಂಗೆ
ನನ್ನ ತಂದು ಸಲಹಿದರ್ಯಾರೆಲೊ ಬ್ಯಾಗೆ
ಹಿಂದ ಜನ್ಮ ಏಸಿದರ ಹಾಂಗೆ ಹತ್ತಿ
ಬಂದು ಬಂದಿಲ್ಲ ಮುಂದ ನಂಬಲ್ಹ್ಯಾಂಗೆ ||ಪ||
ತಂದಿ ತಾಯಿ ಸತಿಸುತರೆಲ್ಲ ಹತ್ತಿ
ಹೊಂದಿದವರು ಒಬ್ಬರುಳಿಯಲಿಲ್ಲ
ಮುಂದಾಗುವದೇನು ತಿಳಿದಿಲ್ಲ ಬಹು
ಮುಂದಿದು ಇದರಂತೆ ನೋಡಿ ಬಲ್ಲ ||1||
ಹೊಲ ಮನಿ ವತನ ಜಾಗ ಮಿರಾಸಿ ಜಾಗ ದೇಹ
ಬಲಯಿತ್ತು ಇರುತಿರ್ದೆ ಊರಾಗ
ನೆಲೆಯಿಲ್ಲದಷ್ಟು ಹೊಯಿತು ಕ್ಷಣದಾಗ ಮಾಯಿ
ಬಲಿ ತಪ್ಪಿ ಉಳದಿದ್ದೆ ಜೀವದಲೀಗ ||2||
ಅಸ್ತಿರಯಂದು ಮನಕ ತಿಳಿದುಕೊಂಡೆ ಹೊಟ್ಟಿ
ಹಸ್ತು ಭಿಕ್ಷುಕನಾಗಿ ತಿರಿದು ಉಂಡೆ
ಸೂಸ್ಥಿರ ಇದೆ ಎಂದು ನಂಬಿಕೊಂಡೆ ಸಿದ್ಧ
ಹಸ್ತ ಹಿಡದನು ಬಂದು ಚರಣ ಕಂಡೆ ||3||
ನಡಿಯವ್ವ ಹೋಗುವೆನು ಅತ್ತ ಕಡಿ ಅಡವಿ ಪಾಲಾಗುವೆನು
ನಡು ನದಿಯೊಳು ಕಯ್ಯ ಬಿಡುವಂತ ಗುರುವಿನ
ಪಿಡಿದರ ಫಲವೇನು ಬಿಡು ತಂಗಿ ಅವನಾಸಿ ||ಪ||
ಹಡದಂತ ತವರವರು| ಈತಗಯನ್ನ ಹಿಡಿದು ಕೈಶರೆ ಕೊಟ್ಟರು
ಬಡತನಿದ್ದರ ಇರಲಿ ಪಡದಷ್ಟಾಯಿತು ಭೋಗ
ಬುಡನಡು ಕಡಿತನಕ ನಡಿನುಡಿವಂದಿಲ್ಲ ||1||
ಮಾತಿನಾಗ ಮಾತಿಲ್ಲವೆ ಸತಿ ಪತಿ ಭಾವ ಪ್ರೀತಿಯೆಂದಿಗಿ ಮಾಡಲಿಲ್ಲವೆ
ಜಾತಿಕಾರನಂತ ವೇಶ ಭೂತ ಪ್ರೇತಗಳನು ಕೂಡಿ
ಘಾತ ಮಾಡುವನು ಪ್ರಾಣ ಭಾತಿಯಾಗದಮ್ಮ ಯನಗ ||2||
ಮುತ್ತೈದಿತಾನವನು ಹತ್ತರು ಕೂಡಿಯಿತ್ತಂತ ಕಳಸವನು
ಮುತ್ತಿನ ಮೂಗುತಿ ನಮ್ಮ ಗೊತ್ತಿನಲ್ಲಿಯಿಟ್ಟುಕೊಂಡು
ಯತ್ತ ಹೋದರತ್ತ ಸಿದ್ಧನ ಹೆಸರು ಯೆತ್ತಿ ಪೊಗಳುತಲಿ ||3||
ನಾ ನಾ ಅನಬ್ಯಾಡ ನಾಯಕ ನರಕ ಮುಂದ ಮೂಢ
ನೀಯಂಬುವ ನಿರ್ವಯಲಿನ ಕೂಡ ನೀನೆ ನೀನಾಗಿರು ಪಾಡ ||ಪ||
ನಾಯಂಬುವ ತೊತ್ತು| ನಾನಾ ಜನ್ಮ ತಿರಗಿಸಿತ್ತು
ಮಾನವ ಜನ್ಮಕ ಮರಳಿ ತಂದಿತ್ತು ಮರಿಯದೆ| ಅನುದಿನ ದುಃಖ ಬಡಿಸಿತ್ತು ||1||
ನೀಯಂಬುದು ಭಕ್ತಿ ತಿಳಿಸಿ ನಿನ್ನೊಳು ಶಿವ ಶಕ್ತಿ
ನೀ ಯೆಂಬುದೆ ನಿಜಸಾಧಿಸು ಯುಕ್ತಿ
ನಾ ವಂದ್ಹೊದರ ತಾನೆ ಮುಕ್ತಿ ||2||
ನಾ ನೀಯಂಬುದಲ್ಲಾ ನಾನಾ ಜನ್ಮ ಅದಕಯಿಲ್ಲ
ತಾನೆ ತಾನಾದ ಬಸವ ತಾ ಬಲ್ಲ
ಯೆನೇನರಿಯನು ಸಿದ್ಧ ಬ್ಯಾರಿಲ್ಲ ||3||
ನಿನ್ನ ನೀ ತಿಳಿವದೆ ಸಾಕು ನೀನು
ಅನ್ಯರ ಆಡಿಕೊಂಬುವದು ಯಾಕ ಬೇಕು|
ಭಿನ್ನ ಗುಣಗಳ ಹೊರ ನೂಕು ಬಿಡದೆ
ಚೆನ್ನಾಗಿ ಗುರುವಿನ ಬೆನ್ಹತ್ತ ಬೇಕು ||ಪ||
ಪರನಿಂದ ಪಾಪ ಕೊಳಬ್ಯಾಡ ಪುಣ್ಯ
ಪರ ಉಪಕಾರದಿ ಗುರು ಇರುವ ಮೂಢ
ಹರನಾಮ ಮರತು ಕೆಡು ಬ್ಯಾಡ ಯಮ
ಪುರದರಸು ಕೆಟ್ಟವ ಸಿಟ್ಟಿಗೆ ಬರಬ್ಯಾಡ ||1||
ಓದಿ ಹಾಡಿದ ಫಲವೇನು ಆದರ
ಭೇದವ ತಿಳಿಯದೆ ಬಾಯಿ ಬಡಿದರೇನು
ಹಾದರದ ಯಣಕಿ ಅಲ್ಲೇನು ಗುರು
ಬೋಧ ದೊರಕುವದ್ಹಾಂಗ ಹೆಳೆಲೊ ನೀನೂ ||2||
ಗುರು ಹಿರಿಯರಿಗಂಜಬೇಕು ಭಕ್ತಿ
ಪರಿ ಪರಿ ತೆರದಲ್ಲಿ ಮಾಡುತಿರಬೇಕು
ಶರೀರದ ಸುಖ ನೀಗಬೇಕು ಆಶಿ
ಹರಿದು ಸರ್ವರಿಗೆಲ್ಲ ಕಿರಿದಾಗಬೇಕು ||3||
ಗುರುವಾಕ್ಯ ಮೀರಬಾರದು ಮುಕ್ತಿ
ದೊರಿವದು ಸುಮ್ಮನಲ್ಲ ಜ್ಞಾನ ತೊರದು
ಹರಿ ಬ್ರಹ್ಮರರಿಯದಂತಾದುಬಸವ
ವರವರದು ಪೇಳುವ ನೀತಿಯಿಂತಾದೂ ||4||
ಸಾಧು ಸತ್ಪುರುಷರ ಸಂಗ ಗುರು
ಪಾದ ಪೂಜೆಯ ಮಾಡಿ ಪಡಕೊ ಹುಚ್ಚ ಮಂಗ
ಗಾದಿ ವಾದ ಮಾನ ಭಂಗ ಸಕಲ
ವೇದಕ ನಿಲುಕದ ಗುರು ಸಿದ್ಧಲಿಂಗ ||5||
ನಿಮ್ಮ ನಮ್ಮಗ ಸಂಗಿತಿಯೇನು ಪರ ಬ್ರಹ್ಮ ಸಿದ್ಧನಾಳೆಲೊ ನಾನು
ಬ್ರಹ್ಮಜ್ಞಾನ ಓದಿದರೇನು ದೇಹದ
ಹಮ್ಮೆಂಬುದು ಬಿಡಲರಿ ನೀನೂ ||ಪ||
ಹಿತವಪ್ಪುವ ನಡಿನುಡಿಯಿಲ್ಲ ಸದ್
ಗತಿ ಹೊಂದುವ ಪಥವಿದು ಅಲ್ಲಾ
ಮತಿ ಹೀನರ ಸಾಹವಾಸ ಸಲ್ಲ ಸ
ಮ್ಮತವಾಗದು ಪ್ರಮಥರಿಗೆಲ್ಲ ||1||
ಮನ ಮನ ಕಲಿಯದ್ಯಾತರ ಸಂಗ ಮಹ
ಅನುಭಾವದಿ ಸಿಟ್ಟ್ಯಾಕೊ ಮಂಗ
ಘನ ಸುಖ ದೊರಕಿತು ನಿನಗ್ಹ್ಯಾಂಗ ಭಕ್ತಿ
ಅನುಕೂಲವಾಗದ ಪರಿಹೀಂಗ ||2||
ಜ್ಞಾನ ಅಮೃತರಸ ಉಂಬುವದು ಮಹ
ದಾನಿ ಸಿದ್ಧನ ಕೂಡಿಕೊಂಬುವದು
ಸ್ವಾನನಂತ ವದರ್ಯಾಡುವದು ಬಹು
ಮಾನಕ ಬಟ್ಟ ಕೇಡಿಹುದು ||3||
ನಾನಾಯಂಬದು ಬ್ಯಾಡ ಅಪಮಾನ ನರಕಕ್ಕೀಡ
ಖೂನದ ಮಾತಿದು ಮೂಢ ಗುರುಧ್ಯಾನ ಮಾಳ್ಪದು ಬಹುಪಾಡ ||ಪ||
ಸಾಧು ಸಜ್ಜನರಲ್ಲಿ ಹೋಗಿ ಗುರು
ಪಾದ ಇದೆಂದು ಶಿರ ಬಾಗಿ
ಗಾದಿವಾದ ಗರ್ವ ನೀಗಿ ಪ್ರಮಥರ
ಹಾಡಿ ಕೇಳು ಹರುಷನಾಗಿ ||1||
ನೀನೆ ಗತಿ ಯಂದೆಂದು ಶಿವ
ಅನುಭಾವದಿ ಮನನಿಂದು
ಭಾನು ಕೋಟಿ ಪ್ರಭೆಯೆಂದು ಮಹ
ಜ್ಞಾನದಿ ನೋಡು ಅಂದಿಂದು ||2||
ನಾನು ನೀನೆಂಬುದು ಬಿಟ್ಟು ನೋಡು
ನೀನೆ ನಿನ್ನೆದರಿಟ್ಟು ನಾನಾ
ಜನ್ಮದ ರೋಗ ಸುಟ್ಟು ಮಹಾ
ದಾನಿ ಸಿದ್ಧನ ವೇಶ ತೊಟ್ಟು ||3||
ನಿಂದ ಮಾಡುವವರೆಲ್ಲ ನಮ್ಮ
ತಂದಿ ತಾಯಿಗೆ ಮಿಗಿಲೆಂಬೆ
ಕಂದದೆ ಕುಂದದೆ ಕರಮನ ಭಾವದಿ
ಚಂದದಿ ಅಮೃತ ಸವಿದುಂಬೆ ||ಪ||
ಹಡದ ತಾಯಿ ತಂದಿ ಹಿಡಿಯದೆ ಕೈಯಲ್ಲಿ
ಕಡಿಗೆ ಬಿದ್ದ ಹಂಚು ತುಂಬು ತಂದು
ಹಡಿನಾರುವ ಹೊರ ಕಡಿಗೆಯ ಮೇಲ
ಪುಡಿ ಬೂದಿ ಉದರಿಸಿ ಕಡಿಗ್ಹಾರುವರು ||1||
ತಮ್ಮ ನಾಲಿಗಿ ತಾವು ಹಂಚನೆ ಮಾಡಿ
ವಮ್ಮನವೆಂಬುವ ತುಂಬು ವಡಗೂಡಿ
ನಮ್ಮ ದೋಷಗಳು ಕಣ್ಣಿಲಿ ನೋಡಿ
ಘಮ್ಮನೆ ತೆಗಿದರು ಸಂಶ ಈಡ್ಯಾಡಿ ||2||
ನಿಂದಕರಿಂದ ಭವ ಬಂಧನ ಹರಿವದು
ಹಿಂದಿನ ಪಾಪ ತೊಳಿಯುವದು
ತಂದಿ ಸಿದ್ಧನ ಹೊಂದಿದ ಭಕ್ತರವ
ರಿಂದೆ ಸದ್ಗತಿ ಕಾಂಬುವದು ||3||
ನಿಂದ್ಯ ಸ್ತೋತ್ರವು ನಿನಗೆ ವಂದೆ ಕೆಲಸದಲ್ಲ
ಕಂದ ನಿಜ ಪೇಳ್ವೆ ಕೇಳೊಲ್ಲ ಗುರುಶಿದ್ಧ
ವಂದೆ ಹಟ ನಿಂದ ನಾ ಬಲ್ಲ ಭಕ್ತರಿಗೆ
ಎಂದು ನೀ ಸುಖದೊಳಿಟ್ಟೆಲ್ಲ
ಮಂದ ಮತಿ ಜನರರಿದೆ ವಂದಿಸಿ ಸ್ತುತಿಸುವರು
ಮುಂದಾಗೊದೇನು ತಿಳದಿಲ್ಲಾ ತ್ವಂಸಾರಿದೆ ||ಪ||
ದೇಹ ಭೋಗಕ ಮೊದಲೆ ಸುಖ ದುಃಖ ಹಚ್ಚಿಟ್ಟಿ
ಆಯಾಸ ಅತಿ ಕರ್ಮ ಮೊಟ್ಟಿ ಹೊರಸಿದಿ
ಮಾಯಾದ ಸಂಸಾರ ಬಿಟ್ಟಿ ತಿಳಿಗುಡದು ಉ
ಪಾಯವಿಲ್ಲ ವಳಲೊಟ್ಟಿ ಬಾಯಿ ಬಿಟ್ಟರೆ ಯಮ
ರಾಯ ತಾ ಬಿಡುವನೆ ನಾಯಕ ನರಕಕ ಹಾಕಿಟ್ಟ ತ್ವಂಸಾರಿದೆ ||1||
ಘಟ್ಟಿಗೊಳ್ಳದು ಮನವ ಹೊಟ್ಟಿತಿಪ್ಪಲಿಟ್ಟಿ
ಯೆಷ್ಟು ಮಾಡಿದಡೇನು ಬರಿದೇ ಅನುದಿನ
ಕಷ್ಟ ಹೆಚ್ಚಿತು ಆಸಿ ಹರಿದೇ ಲಿಂಗದಲಿ
ನಿಷ್ಟೆ ಬಲಿಯದು ಹಮ್ಮ ಮುರಿದೆ
ಅಷ್ಟ ವರ್ಣವು ಅಂಗಕಳವಡದು ಭವದಲ್ಲಿ
ಹುಟ್ಟಿದವರಿಗೆ ಪಥದೋರಿದೇ ತ್ವಂ ಸಾರಿದೆ ||2||
ಆಸೆಯಿಲ್ಲದ ಸ್ತೋತ್ರ ರೋಷಿವಿಲ್ಲದ ನಿಂದ
ಭೂಷಣವು ಯಿದು ನಿಮಗೆಂದು ಭಕ್ತರು
ಲ್ಲಾಸದಲಿ ನುಡಿದಾರು ತಂದು ಪ್ರೇಮ
ರಸ ಸೂಸುತಲಿ ಕೇಳು ನೀ ಬಂದೂ
ಶೇಷ ಭೂಷಣಸಿದ್ಧ ದಾಸ ಬಸವನು ನಿಮಗ
ಬ್ಯಾಸರಿಲ್ಲ ಯಿರುವನೆಂದು ತ್ವಂ ಸಾರಿದೇ ||3||
ನೀವೆ ಹುಟ್ಟಿಸಿ ತಂದಿರಿ ಗುರು ಶಿದ್ಧ
ನೀವೆ ಬೆನ್ನಿಗಿ ಬಂದಿರಿ
ನೀವೆ ಚೇತನ ಯನ್ನ ನಡಿ ನುಡಿಗೆ ವಡಗೂಡಿ
ನೀವೆ ಅನುಭವ ಮಾಳ್ಪಿರಿ ||ಪ||
ಆವ ನಡತಿಯ ನಡದರೂ ಗುರು ಶಿದ್ಧ
ನೀವೆ ತೋರಿದ ಹಾದಿಯು
ಆವ ನುಡಿ ನುಡಿದರು ಶಿವಮಂತ್ರವೆಂದರಿದೆ
ಇನ್ನಾವ ಭಯವು ಎನಗೇ ||1||
ಆವ ಸ್ಥಲವಾದಡೇನು ಗುರು ಶಿದ್ಧ
ನೀವಿದ್ದ ಸ್ಥಲ ಕ್ಷೇತ್ರವು
ಆವ ಕುಲದಲಿ ನಿಮ್ಮ ಭಕ್ತರುದ್ಭವಿಸಿರಲು
ಸೇವಕನು ನಾನವರಿಗೇ ||2||
ಆವಾವ ಕಾಲದಲ್ಲಿ ಗುರು ಶಿದ್ಧ
ನೀವೆನ್ನ ಪ್ರಾಣಲಿಂಗ
ಝಾವ ಅಗಲದೆ ಯೆಕೊ ಭಾವದೊಳು ನೆಲೆಗೊಂಡು
ದಾವತಿಯ ಕೊಳುತಿರ್ಪಿರಿ ||3||
ನಾ ನೀನೆಂಬುವ ಸಂದಿಲ್ಲ ಶಿದ್ಧ ನೀನೆ ನಾನಾದೆನಲ್ಲ
ಜ್ಞಾನ ದೃಷ್ಟಿಗೆ ಕಾಣಿಸಿತಲ್ಲ ಅಜ್ಞಾನಿಗಳಿಗೆ ಯಿದು ವಶವಲ್ಲ ||ಪ||
ನನಗಾಗುವ ಸುಖ ದುಃಖವೆಲ್ಲ ಶಿವ ನಿನಗಾಗದೆ ಯನಗಾಗಿಲ್ಲ
ಮನ ಮನ ಸಾಕ್ಷಿ ಬಲ್ಲವ ಬಲ್ಲ ಕೂಡಿ ಅನುದಿನ ಅಗಲದೆ ಯಿರವೆಯಲ್ಲಿ ||1||
ನಿಂದ ಸ್ತುತಿಗೆ ನೀ ಸಿಗಲಿಲ್ಲ ನಿನ್ನ ಹೊಂದಿದವರ ಬಿಟ್ಟು ಅಗಲಿಲ್ಲ
ಕುಂದು ಕೊರತಿ ಬಸವನಿಗಿಲ್ಲ ಭವ ಬಂಧನ ಲೋಕಕ ಬಿಡಲಿಲ್ಲ ||2||
ನಾನೆ ನಿನ್ನಗ ಸರ್ವಂಗ ಶಿದ್ಧ ನೀನೆ ಯನಗ ಪ್ರಾಣಲಿಂಗ
ತಾನೆ ತಾ ಕೂಡಲಸಂಗ ಮಹದಾನಿ ಶ್ರೀಗುರು ಸಿದ್ಧಲಿಂಗ ||3||
ನಂದೇನ ಹೋಗತದಪ್ಪ ಹೋದರ ನಿಂದೆ ಹೋಯಿತಪ್ಪ
ವಂದೇ ಭಾವ ಯರಡಿಲ್ಲದ ನಡಿನುಡಿ ತಂದಿ ಶಿದ್ಧಲಿಂಗಪ್ಪ ||ಪ||
ತನು ಮನ ಧನ ನಿಂದು ಅದರೊಳಿನಿತಿಲ್ಲವೊ ನಂದು
ಅನುಮಾನ ಯಾತಕ ಘನ ಸುಖ ಬಂದು
ತನುಮನ ಸೇರಿತು ಅಗಲದೆಂದೆಂದೂ ||1||
ಮಾನಪಮಾನೊಂದು ಸಂಶ ಮನಸಿಗೆ ಬರದೆಂದು
ಖೂನವ ತೋರಿದಿ ನಾನೆ ನೀನೆಂದು
ಧ್ಯಾನದೊಳಿರುವೆನು ಅಗಲದೆಂದೆಂದೂ ||2||
ಜ್ಞಾನ ಮಂಟಪದಲ್ಲಿ ಶಿದ್ಧ ನೀನೆ ನಾ ಅಲ್ಲಿ
ಭಾನುಕೋಟೆ ಪ್ರಭೆ ಬೆಳಗು ಬಿದ್ದಲ್ಲಿ
ತಾನೆ ತಾನದ ನಿಜ ಸುಖದಲ್ಲಿ ||3||
ನೀನೆ ಗತಿ ಗುರುಸಿದ್ಧ ನೀನೆ ಮತಿ ಗುರುಸಿದ್ಧ
ನೀನೆ ಪತಿ ಗುರು ಸಿದ್ಧಲಿಂಗಾ
ತನ್ನಿಂದ ತಾನೆ ದೊರಕಿತು ನಿಮ್ಮ ಸಂಗಾ ಪರಿಪೂರ್ಣ ಜ್ಞಾನ ಹೆಚ್ಚಿತು ಸರ್ವಂಗ
ವ್ಯಾಪಿಸಿಕೊಂಡಿರ್ದಿ ಯನ್ನಮತರಂಗ
ಏನು ಹೇಳಲಿ ನಿಮ್ಮ ಧ್ಯಾನದೊಳು ಮನ ಮುಳಗಿ
ತಾನೆ ನೀನಾದ ಬಸವಲಿಂಗ ತ್ವಂಸಾರಿದೇ ||ಪ||
ನಿಮ್ಮ ನಾಮಾಮೃತದ ಸವಿದುಂಡು ಬದುಕಿರ್ದೆ
ಬ್ರಹ್ಮ ವಿಷ್ಣು ರುದ್ರಗರಿದೇ ಗುರುಪಾದ
ಸೊಮೆಂದು ವಳಹೊರಗ ತಿಳಿದೆ ಸಂಸಾರ
ಸುಮ್ಮನೆ ಮಾಳ್ಪೆ ಮನ ಹೋಗದೆ ನಂದೆಂಬೊ
ಹಮ್ಮಿಲ್ಲ ಫಲಪದ ಬರಿದೇ
ನಿಮ್ಮಾಗ್ನಿವಳಗಿರ್ದ ವಮ್ಮನವು ಎರಡರಿದೆ
ನಿಮ್ಮ ಪಾದುಕಿ ಹೊತ್ತು ಮೆರವೆ ತ್ವಂಸಾರಿದೇ ||1||
ಮಾಂಸಪಿಂಡಳಿದುಳಿದ ಮಂತ್ರಪಿಂಡದ ನೆಲಿಯ
ಸಂಶ ಪ್ರಾಣಿಗಳರಿವದೆಂತು ಬವ ದುಃಖ
ಸಂಸಾರ ಬಲಿಯಲ್ಲಿ ಕುಳಿತು ಬಹು ಜೀವ
ಹಿಂಸ ಮಾಡುವ ಕರ್ಮ ಕಲಿತು ಅತಿ ಆಸಿ
ಅಂಸರದಿ ವ್ಯರ್ತ ಹೊತ್ತು ಹೋಯಿತು
ಹಂಸಿನಂತೆ ನಿಮ್ಮ ಅಂಶಿರಾಗದೆ ನಿ
ಸೌಂಶ ತೋರದೆ ಕಾಡ ಬಿತ್ತು ತ್ವಂಸಾರಿದೆ ||2||
ನೀವೆ ಕರುಣಿಸಿ ಭಕ್ತಿ ಭಾವ ನೆಲೆಗೊಳಸಿದರೆ
ಸೇವ ಮಾಡುವದೇನಾಶ್ವರ್ಯ ಮನವಂದು
ಝಾವ ಆಗಲದು ಪರೋಪರಿಯ ಶಿವ ಅನು
ಭಾವ ಮಾಳ್ಪದು ಕರೆಕರಿಯ ನಿಮ್ಮ ಸುತ್ತ
ಕಾವಲಿರುವದು ಮತ್ತೊಂದರಿಯಾ
ದೇವ ರೇವಣಸಿದ್ಧ ನೀವೆಲ್ಲದಾಗುವದೇ
ಆವಪಥ ಹಿಡಿದೇನು ಬರಿದೇ ತ್ವಂಸಾರಿದೆ ||3||
ನೀರಿನ್ಹಾಂಗ ತಾ ನಿರಾಳವಿರತಿರೆ ನಿಂದಕ ಮನುಜರಿಗಂಜುವನೆ
ವೀರಶೈವ ನೀರಾಸಿಲಿ ನಡಿದಿರೆ ಊರಿಗೆ ಮುಟ್ಟದೆ ಉಳಿಯುವನೆ ||ಪ||
ಭಿಕ್ಷಹಾರಿ ತಾ ಬಿಡಗಡಿ ವಿರುತಿರೆ
ಲಕ್ಷಕ ಸಂಪತ್ತು ತರಹುವನೇ
ಅಕ್ಷಯ ಪದಿವೆಂದರಿಯಲು ನಿಜ ಸುಖ
ಮೋಕ್ಷಕ ಹೊಂದದೆ ಹೊಗುವನೇ ||1||
ಜ್ಞಾನಿಯಾಗಿ ಸಂಚರಿಸಲು ಬ್ಯಾರೆ
ಮಾನಮರ್ಯಾದಿ ಹುಡುಕುವನೇ
ಖೂನ ಕಂಡು ಕೂಡ್ಯಾಡಿ ಬಳಸಲು
ಕುಲದಭಿಮಾನವ ಹಿಡಿಹುವನೆ ||2||
ಗದ್ಧಲಗಲಿಯದ ಶುದ್ಧಾತ್ಮನು ಸುಳ್ಳೆ
ಸುದ್ದಿಯ ಕಿವಿಗೊಟ್ಟು ಕೇಳುವನೇ
ಸಿದ್ಧನ ಸೇವದೊಳಿರುತಿರೆ ಲೋಕದ
ಬುದ್ಧಿಗೆ ಬೆನ್ನು ಹತ್ತಿ ನಡಿಹುವನೇ ||3||
ನಿನ್ನಿಂದ ಹೊರತು ಇನ್ಯಾರು ಹಾರಸಿದ್ದ ನೀನೆ ಮೂರ್ಲೊಕ ಸರಕಾರ
ಮನ್ನಾಥ ಕೃಪಾ ಸಾಗರ ನಿನ್ನ ಬೆನ್ನು ಹತ್ತ್ಯದೇನು ಫಕೀರ ||ಪ||
ದಿಕ್ಕುಂಟೆ ಈ ಜಗದೊಳು ಯನ್ನ ದಕ್ಕಿಸಿಕೊಂಬುವರಾರು ಹೇಳು
ವಕ್ಕರುಳಿವದೆ ಈ ಜನರೊಳು ನೀವೆ ದಕ್ಕಿಸಿಕೊಂಡಿರಿ ದಯಾಳು ||1||
ನೀ ಮಾಡಿದ್ದೆ ಆಗುವದು ಸುಳ್ಳೆ ನಾ ಮಾಡಿದರೇನಾಗುವದು
ನೇಮ ಜಪತಪ ಕೆಟ್ಟು ಹೋಗುವದು
ನಿಮ್ಮ ನಾಮವೆ ಸದ್ಗತಿ ಕುಡುಹುವದು
ಸೂತ್ರಧಾರಿ ಸರ್ವ ಜಗಕೆಲ್ಲ ಅನ್ನ
ಕ್ಷೇತ್ರಯಿಟ್ಟಿರಿ ಒಬ್ಬರುಪವಾಸಿಲ್ಲ
ಧಾತ್ರತ್ವ ಸಿದ್ಧಲಿಂಗ ನೀವೆಯಲ್ಲಾ
ಜನ ಜಾತ್ರಿ ನೆರಸಿ ತಪ್ಪಿಸಿ ಕೊಂಡಿರಲ್ಲಾ ||2||
ನೋಡುವ ನಡಿ ತಂಗಿ ನಮ್ಮವರ ಜ್ಞಾನ ಮಾರ್ಗ ಹಿಡಿದು ಕ್ರಿಯ ಸಡಿಸುರ
ಮಾಡುವ ನಡಿ ಭಕ್ತಿ ಅವರತ್ಯೆಬೇಗ ಕುಡುವ ನಡಿ ನಮ್ಮ ತವರವರ ||ಪ||
ಶರಣರ ನಡಿನುಡಿ ಸುಗಂಧ ಶಿವ ಸ್ಮರಣಿಯೊಳಗ ಪ್ರೇಮ ಆನಂದ
ಕರುಣಸಾಗರ ತುಂಬಿ ಭರದಿಂದ ಗುರುಚರಣಕ್ಕ ನಮಿಸುವದು ಬಹುಚಂದ ||1||
ಅವರಲ್ಲಿ ಅಷ್ಟಾವರಣುಂಟು ತಂಗಿ ತವನಿಧಿ ತೋರುವ ದೃಢವುಂಟು
ಇವರಲ್ಲಿ ಏನಾದ ಬರಿಗಂಟು ನಮ್ಮವರಲ್ಲಿ ಅನುದಿನ ಸುಖವುಂಟು ||2||
ನರರೊಳು ನರರಂತೆ ಚರಿಸುವರು ಪುಣ್ಯ ಪರ ಉಪಕಾರಗಳೆನಿಸುವರು
ಹರನಾಮ ಗುರುಮಂತ್ರ ಜಪಿಸುವರು ಸಿದ್ಧವರನಂಘ್ರಿ ಘನವೆಂದು ಭಜಿಸುವರು ||3||
ನಿನ್ನ ಭಕ್ತಿಗೆ ಬಂದೆನಮ್ಮ ಗುರುವು ಬೆನ್ನ ಹತ್ತಿ
ಕರತಂದ ಹಸಿವು ತಡಿಯದಮ್ಮ
ಇನ್ಯಾಕ ಆಲಸ್ಯ ನೀಡಮ್ಮ ತೃಪ್ತಿ
ಚನ್ನಾಗಿ ಮಾಡಿಸು ಗುರುವಿನೊಪ್ಪಿ ತಮ್ಮ ||ಪ||
ಭಕ್ತಿ ಬೀಜವ ಬಿತ್ತಿ ಬೆಳಕೊ ಜ್ಞಾನ
ಶಕ್ತಿಯಾದರ ನೀವೆ ನಿನ್ನೊಳು ತಿಳಕೊ
ಮುಕ್ತಿ ಮಾರ್ಗವು ಇದೇ ಹಿಡಕೊ ವಿ
ರಕ್ತಿ ಪುರುಷ ಬಸವನಾಶೀರ್ವಾದ ಪಡಕೊ ||1||
ಯಾರಿಗೆ ಸಿಗದಂತ ಮುತ್ತು ಪುಣ್ಯ
ಭಾರಿಯಿತ್ತೊ ಏನೊ ನಿನಗ ದೊರಕಿತ್ತು
ಅರುವಿನ ಮನಿಯಲ್ಲಿರುತಿತ್ತು ಪ್ರಮಥರು
ಬರುವ ಸೂಚನ ಜನರ ತಿಳಸ ಬಂದಿತ್ತು ||2||
ಶುದ್ಧಾತ್ಮದಲಿ ಮನಸಿಡು ಬೇಗನ
ಎದ್ದು ಉದ್ಯೋಗಕ್ಕ ಅನುಕೂಲ ಮಾಡು
ಸಿದ್ಧರಸವ ಕರದು ನೀಡು ಪ್ರೀತಿಲಿ
ಮುದ್ದಾಡಿ ಅವನೊಳು ಸಮರಸಗೂಡು ||3||
ನಿಮ್ಮ ಭಕ್ತರ ಭಾವ ನೀವೆ ಬಲ್ಲಿರಿ ದೇವ
ಹಮ್ಮು ಅಹಂಕಾರಗಳು ಬಲ್ಲರೆ ಅವರಾತ್ಮ
ಬ್ರಹ್ಮಜ್ಞಾನಿಗಳರಿತು ನಿಮ್ಮಂತೆ ನೋಡುವರು
ಸುಮ್ಮನಾಗದು ಭಕ್ತಿ ಜ್ಞಾನ ವೈರಾಗ್ಯ ||ಪಲ್ಲವಿ||
ಲೋಕರಂತವರಲ್ಲ ಶೋಕ ಮೋಹಗಳಿಲ್ಲ
ಕಾಕು ಮಾನಸರಲ್ಲ ಕಕುಲಾತಿಯಿಲ್ಲ
ಬೇಕೆಂತ ಬಯಸಾರು ಬಂದರ ಅತಿಗಳಿಯಾರು
ಏಕ ಚಿತ್ತರಾಗಿ ದಾಸೋಹ ಮಾಡುವರು ||1||
ಅವರ ನಡಿನುಡಿ ಬ್ಯಾರೆ ಇವರ ನಡಿನುಡಿ ಬ್ಯಾರೆ
ಅವರಿಗೆ ಇವರಿಗೆ ಬದ್ಧ ವಿರುದ್ಧ ನಡದಿರೆ
ಆವರಿಸಿಕೊಂಬುವರೆ ಅವರ ಭಕ್ತಿಜ್ಞಾನ
ಇವರಿಗೆಂತಾಪುದು ಭವ ದುಃಖವೆ ಪ್ರಾಪ್ತಿ ||2||
ನೀವೆ ಕರುಣಿಸಿ ಬಂದು ನಮ್ಮ ಸೇವಕನೆಂದು
ದಾವತಿಯ ಕೊಳುತಿರೆ ಗತಿಯಾಗುವದಂದೂ
ಯಾವ ಕಾಲದಿ ಶಿದ್ಧ ನೀವಲ್ಲದಾಗದು
ಸಾವ ಹುಟ್ಟುವದಕ್ಕೆ ಕಾರಣವಾಗಿಹುದು ||3||
ನೀನೆ ಗತಿಯೆಂದು ಮನ ನಿಶ್ಚ್ವಿಸಿಕೊಂಡಿಹುದು
ನಾನೇನು ಮಾಡಲಯ್ಯ ಗುರುವೆ
ತಾನೆ ತಾನಾಗಿ ನಿಜ ಧ್ಯಾನ ಮೌನದೊಳಿಹುದು
ಏನೇನೂ ಅರಿಯದಂತೆ ಗುರುವೆ ||ಪ||
ಮನಕ ನೀನೆ ಸಾಕ್ಷಿ ನಿನಗ ಮನವೆ ಸಾಕ್ಷಿ
ಅನುಗೂಡಿ ಇರುತಿರ್ಪದು ಗುರುವೆ
ಘನಕೆ ಘನವಾದ ಮಹಾ ಘನವಸ್ತು ಎರಡಿಲ್ಲ
ಅನುದಿನ ಅಗಲದಂತೆ ಗುರುವೆ ||1||
ತನವು ತಾಳಿದರೇನು ತಾಪತ್ರಯವಿನಿತಿಲ್ಲ
ಘನ ಸುಖದೊಳೊಡಗೂಡಿತು ಗುರುವೆ
ಜನನ ಮರಣಕ ದೂರ ಜಾತಿ ಜಂಗಮ ಪೂರ
ಮನಲಿಂಗವಾದ ಬಳಿಕ ಗುರುವೆ ||2||
ಸಿದ್ಧ ಶುದ್ಧ ಪ್ರಸಿದ್ಧ ಪರಕ ಪರ
ಮುದ್ದು ಬಸವನ ಹೃದಯದಿ ಗುರುವೆ
ಇದ್ದು ಇಹಪರದಲ್ಲಿ ಉದ್ಯೋಗ ಮಾಡಿಸುವಿ
ಸಿದ್ಧ ಲಿಂಗಾಂಗವಾಗೀ ಗುರುವೆ ||3||
ನೀನೆ ಗತಿಯಂದು ಮನ ನಿಶ್ಚೈಸಿಕೊಂಡಿಹುದು
ತಾನೆ ತಾ ಭಕ್ತಿಯಲಿ ಜ್ಞಾನ ವೈರಾಗ್ಯದಲಿ
ನಾನೇಂಬುದಳಿದುಳಿಯಿತು ಗುರುವೆ ||ಪ||
ನಿನ್ನ ಮನ ಬಂದಂತೆ ನೀನೆ ಮಾಡುವಿ ಸಕಲ
ಇನ್ನೊಬ್ಬರೆದರಿಲ್ಲವೊ ಗುರುವೆ
ಎನ್ನ ಕರಮನ ಭಾವ ನಿನ್ನವೆಂದೆನಿಸಿರ್ದೆ
ಭಿನ್ನತ್ವ ಉಳಿಯಲಿಲ್ಲವೊ ಗುರುವೆ ||1||
ಏಳುತ ನೀ ಗತಿಯೆಂದು ಬೀಳುತ ನೀ ಗತಿಯೆಂದು
ಗೋಳಿಟ್ಟು ಕೂಗುತಿರ್ದೆ ಗುರುವೇ
ಕಾಳ ಕತ್ತಲೆ ಹರಿದು ಹೇಳದಲೆ ಓಡುವದು
ಸೂಳಿ ಮಕ್ಕಳು ಬಲ್ಲರೆ ಗುರುವೆ ||2||
ನಾನಳಿದು ನೀನುಳಿದ ಖೂನ ತಿಳಿದರೆ ಶಿವ
ಅನುಭಾವಿಗಳಿಗಲ್ಲದೇ ಗುರುವೆ
ಜ್ಞಾನ ಹೀನರು ಸಿದ್ಧ ನೀನೆ ಗತಿಯೆಂದರಿದೆ
ಹೀನ ವಿಷಯದಿ ಅಳಿವರು ಗುರುವೆ ||3||
ನೀನೆ ಗತಿಯೆಂಬುವಗ ತಾನೆ ಸಾರತಿ ಗುರುವು
ಏನು ಬಂದರ ಭಯವಿಲ್ಲ ಗುರುಪಾದ
ಧ್ಯಾನ ಮೌನದೊಳಿರುವನಲ್ಲ ಸುಖ ದುಃಖ
ಏನು ಅವನಿಗೆ ತೊರದಲ್ಲಾ ಸ್ವಾನುಭಾವದ ಭಕ್ತಿ ಜ್ಞಾನ ವೈರಾಗ್ಯದಲಿ
ತಾನೆ ತಾನಾಗಿರುವನಲ್ಲಾ ತ್ವಂ ಸಾರಿದೇ ||ಪ||
ಅಂಗಭೋಗದ ದ್ರವ್ಯ ಲಿಂಗಕರ್ಪಿಸಿ ಕೊಳುವ
ಜಂಗಮ ಪ್ರಾಣಿ ಬಸವಣ್ಣ ಸರ್ವಾಂಗ
ಲಿಂಗಮಯ ತಾನೆ ಮುಕ್ಕಣ್ಣ ಕೂಡಲಸಂಗ ನುಂಗಿದ ಬಯಲ ಬಣ್ಣ
ಮಂಗಳಾತ್ಮಕ ಮಹಲಿಂಗ ಪ್ರಭು ನಿಸ್ಸಂಶ
ಹಿಂಗದೆ ಇರುತಿರ್ಪರಣ್ಣ ತ್ವಂ ಸಾರಿದೆ ||1||
ಬೀಜಗಿಡ ಒಳಗೊಂಡು ಬಿಗಿದಪ್ಪಿ ಬಿದ್ಹಣ್ಣು
ಸಹಜ ಸಮರಸ ಭಕ್ತಿ ಭಾವ ಗುರುಪಾದ
ಪೂಜೆಗೊಪ್ಪಿದ ಪುಣ್ಯ ಫಲವ ದರ್ಪಣದ
ತೇಜ ನುಂಗಿತು ಮೂರು ಜಗವಾ
ಕಾಜೀನ ಗುಣವುಂಟೆ ಕರ್ಮವಿರಹಿತನೆನಸಿ
ಪೂಜರವ ತಾನಾಗಿ ಮೆರೆವಾ ತ್ವಂ ಸಾರಿದೇ ||2||
ಜಾತಿ ಹೀನರ ಮನಿಯ ಜ್ಯೋತಿ ಕಿರಿದಾಪುವದೆ
ಸೂತಕವು ಅದಕಿನಿತಿಲ್ಲ ಬಹು ಶಾಸ್ತ್ರ
ಮಾತು ನುಂಗಿತು ಸಣ್ಣದಲ್ಲಾ ಶಿವಶರಣ
ಯಾತರೊಳು ಸಿಲುಕುವನಲ್ಲ
ದಾತ ಶ್ರೀಗುರು ಶಿದ್ಧನಾಥ ಒಬ್ಬನೆ ಬಲ್ಲ
ಪಾತಕರು ಇದು ತಿಳಿಯರಲ್ಲಾ ತ್ವಂ ಸಾರಿದೇ ||3||
ನನ್ನವರ್ಯಾರ ಇವರಲ್ಲ ಸುಳ್ಳೆ ಬೆನ್ಹತ್ತಿ ತಿರಗಿದೆ ಏನೂ ಫಲವಿಲ್ಲ
ಮುನ್ನಿನ ಗುಣ ಬಿಡರಲ್ಲ ಇವ
ರಿನ್ನೆಲ್ಲಿ ಸದ್ಗತಿ ಪತ ದೊರಕದಲ್ಲಾ ||ಪ||
ತನು ಮನ ಧನ ವಂಚನ ಭಕ್ತಿ ಅವರು
ಅನುದಿನ ಮಾಡೆಯಿಲ್ಲ ಫಲ ಪ್ರಾಪ್ತಿ
ಧನದ ಮೇಲಣ ಬಹಳ ಪ್ರೀತಿ ಡಂಬಕ
ತನದಲ್ಲಿ ಮಾಡುವರು ಕ್ರಿಯ್ಯ ಬರೆ ಭ್ರಾಂತಿ ||1||
ಪ್ರಮಥರ ವಚನ ಓದಿ ಹಾಡಿ ಸುಳ್ಳೆ
ಭ್ರಮಿತರಾದರು ವಂದೆ ನಡಿಲಿಲ್ಲ ನೋಡಿ
ಕ್ರಮ ತಪ್ಪಿದಾಚಾರ ಮಾಡಿ ಸತ್ತ ಶವದಂತೆ ||2||
ಸೆಟೆವರು ಗರ್ವವಡಗೂಡಿ
ನನ್ನವರೆನ್ನುವ ಖೂನ ಭಕ್ತಿ
ಚಿನ್ನ ತೋರುತದ ನಿತ್ಯ ಶಿವಧ್ಯಾನ
ಉನ್ನತೊನ್ನತ ಪೂರ್ಣ ಜ್ಞಾನ ಸಿದ್ಧ
ಬೆನ್ಹತ್ತಿಯಿರುವನು ಧೈರ್ಯ ಸಾವಧಾನ ||3||
ನಾ ಮಾಡುವದೇನಿಲ್ಲ ಸಿದ್ಧ ನೀ ಮಾಡಿದ್ದೆ ಎಲ್ಲ
ಕಾಮ ಎನ್ನಲಿಲ್ಲ ನಿಃಕಾಮಿ ಬಸವ ತಾ ಬಲ್ಲ ||ಪ||
ಬಟ್ವ ಬಯಲು ಮೊದಲಲ್ಲಿ| ಸೃಷ್ಟಿ ಹುಟ್ಟಿತ್ತು ಯಾವಲ್ಲಿ
ಇಷ್ಟು ಕಪಟವು ನಿನ್ನಲ್ಲಿ ವಂದಿಷ್ಟು ತಪ್ಪಿಲ್ಲ ಎನ್ನಲ್ಲಿ ||1||
ವಂದೆ ಹಲವಾದವ ನೀನು ಪೂರ್ವ
ಹೊಂದಿಕೊಂಡಿರ್ದವ ನಾನು
ಸಂದೇಹವಿಲ್ಲ ಏನೇನು ನಿನ್ನ ಮುಂಡ ಮಾಡಾಚರಿವೆನು ||2||
ಉಪ್ಪು ನೆಲ್ಲಿಯು ಕೂಡಿದಂತೆ ಮನ
ಒಪ್ಪಿ ಘನ ಬೆರದಂತೆ ಕಪ್ಪುಗೊರಲ ಶಿದ್ಧನಂತೆ ಅಗಲ
ದಪ್ಪಿಕೊಂಡು ಇರುವನಂತೆ ||3||
ನಿನ್ನಿಂದ ಹೊರತು ನಮಗಿನ್ಯಾರು ಗುರು ಶಿದ್ಧ
ಭಿನ್ನವಿಲ್ಲದೆ ನಿನ್ನ ಬಿಗಿದಪ್ಪಿತು ಮನವು
ಇನ್ನೆನೂ ಬಯಕಿಲ್ಲಾ ನಿನ್ಹಾಸಿ ಹೊಚ್ಚಿದೆ
ಭಿನ್ನ ಸುಖ ದುಃಖ ಭೋಗ ನಿನ ಮುಖದಿ ಕೊಂಬೇ ||ಪ||
ಬಿಚ್ಚಿ ಬೇರಾಗದು ಉಚ್ಚಿತಗಿ ಬಾರದು
ನಿಶ್ಚಿತಾನಂದಾನ ಹುಚ್ಚು ತಲಿಗೇರಿ
ಎಚ್ಚರದಲಿ ನಿನ್ನ ಮಚ್ಚಿ ಮಯಮರದೀತು
ಬಚ್ಚ ಬರೆ ಚಿತ್ಸುಧೆಯ ಸುರಿದು ಕೆರೆ ತುಂಬಿ ||1||
ಗಾಳಿ ಗಂಧವ ಕೂಡಿ ಸುಳಿದಾಡುವ ಪರಿಯಂತೆ
ಹೊಳಿಯಲ್ಹುಟ್ಟಿದ ತೆರಿಯು ಹೊಳಿಯಲ್ಲಳಿದಂತೆ
ಒಳ ಹೊರಗೆ ತುಂಬಿ ನಿನ್ನೊಳಗೇಕ ಮುಖವಾಗಿ
ಸುಳಿದಾಡುವೆ ನಾ ನಿನ್ನ ಚೇತನ ಬಲದಿಂದಾ ||2||
ನೀರು ನೀರನೆ ಕೂಡಿ ನೀರು ರೂಪಾದಂತೆ
ನೀರು ನಿರ್ಮಳ ವಸ್ತು ಮನ ನೀರಾಲಂಬ
ನೀರೆ ನಿಃಶ್ಹೂನ್ಯ ಸ್ಥಲ ನೀರೆ ಶ್ರೀಗುರು ಶಿದ್ಧ
ನೀರೆ ನಿರ್ವಯಲೆಂದು ನಿಜ ತಿಳಿದಳಿದುಳಿದೆ ||3||
ನಾ ಎಂಬುವದ್ಹೊಯ್ತು ನಾಚಿಕಿ ಇಲ್ಲದ್ಹಂಗಾಯ್ತು
ನೀ ಎಂಬುದು ನಿಜವಾಗಿ ತೋರಿತು ನಿಜದೊಳಗೆ ನಿರ್ವಯಲಾಯ್ತು ||ಪ||
ಗುರುವಿನ ಕರುಣದಲಿ ದುರ್ಗುಣ ದೂರಾಗಿ ಭಕ್ತಿಯಲಿ
ಶರಣ್ಹೋಯಿತು ಮನ ಶರಣರ ಚರಣಕ ಪರಮಾನಂದದಲಿ ||1||
ಲಿಂಗ ನಿಷ್ಠೆಯಲ್ಲಿ ಹಿಂಗದ ಕಂಗಳ ಮೆನಿಯಲ್ಲಿ
ಸಂಗಮಾಗಿ ಅಂತರಂಗ ಮಧ್ಯದ ಮಂಗಳ ಕರದಲ್ಲಿ ||2||
ಏಕೋ ಭಾವದಲಿ ಸುವಿವೇಕ ಮಾರ್ಗದಲಿ
ಲೋಕನಾಥ ಪ್ರಭು ಶಿದ್ಧನ ಕಾಣುತ ಐಕ್ಯಸ್ಥಲದಲ್ಲಿ ||3||
ನಿನ್ನ ಕಣ್ಣಿಲಿ ಕಂಡೆನು ಗುರುಸಿದ್ಧ ನಿನ್ನ ಕರದಲಿ ಪಿಡಿದೆನು
ನಿನ್ನ ಮನ ನಿರ್ಧರಿಸಿ ನಿನ್ನ ಪೂಜೆಯ ಮಾಡಿ
ನಿನ್ನೊಳಗ ಅಳಿದುಳಿದೆನು ||ಪ||
ನಿನ್ನ ವೇಷವ ಧರಿಸಿದೆ ಗುರುಶಿದ್ಧ
ನಿನ್ನ ಮಂತ್ರದ ಜಪಿಸಿದೆ| ನಿನ್ನ ಕಾರ್ಯ ಮುಖದಿ
ಚೆನ್ನಾಗಿ ತಿರಿತಂದು ಬಿನ್ನಿಸದೆ ತೃಪ್ತಾದೆನೊ ||1||
ನಿನ್ನ ಕಾಲಲಿ ನಡಿವೆನು ಗುರುಶಿದ್ಧ| ನಿನ್ನ ಕೈಲಿ ಕುಡುಕೊಳುವೆನು
ನಿನ್ನ ಬಾಯಿಲಿ ಸತ್ಯ ವಚನ ಶಾಸ್ತ್ರವ ಪೇಳಿ
ನಿನ್ನ ಕಿವಿಲಿ ಕೇಳಿರ್ದೆನೂ ||2||
ನಿನ್ನಂಗ ಮುಖ ಸುಖವನೂ ಗುರುಶಿದ್ಧ| ನಿನ್ನೊಡನೆ ಸುಖಿಸಿರ್ದೆನೂ
ಇನ್ನೇನು ಬಯಕಿಲ್ಲ ಭಿನ್ನ ವಿನಿತಿಷ್ಟಲ್ಲ
ನಿನ್ನಂತೆ ನಾನದೇನೂ ||3||
ಪ್ರಥಮಾರಂಭದಲ್ಲಿ ಭಜಿಸುವೆನು
ಪಾರ್ವತಿ ಸುತಗ ನಮಿಸಿ ಪೊಗಳುವೆನು| ಸುತಗ ನಮಿಸಿಪೊಗಳುವೆನು ||ಪ||
ಸದ್ಗುಣ ಶಾಂತಿ ವಿದ್ಯ ಬುದ್ಧಿಯನು| ಶಾಂತಿ ವಿದ್ಯ ಬುದ್ಧಿಯನು
ಭಜನಿಗೆ ವಿಘ್ನ ಬಾರದಂತದನು
ಸುಜನರ ಸಂಗ ಸತ್ಯಗೋಷ್ಟಿಯನು| ಸಂತ ಸತ್ಯಗೋಷ್ಟಿಯನು
ವರವ ಪಾಲಿಸಿನಿತು ಭಿಕ್ಷವನು
ಪರಶಿವ ಸಿದ್ಧನಿಂದ ಮೋಕ್ಷವನು ||1||
ಪಡಿನಡಸುವ ಗುರುವಿರಲಿಕ್ಕೆ
ವಡಲಾಸಿ ಹಿಡಿದು ಬಳಲುವದ್ಯಾಕೆ
ದೃಢಮನಭಾವದಿ ಮೃಢನಡಿ ಪಿಡಿದಿರೆ
ಮಡಿ ಮೈಲಿಗೆಯಣಿಸುವದ್ಯಾಕೆ ||ಪ||
ಬಸುರಲ್ಲಿರಲು ವಂಭತ್ತು ಮಾಸ ಪಿಂಡ
ಬ್ಯಳಸಿದನ್ಯಾವ ಪರಿಯಳಿಯ ಮಾಂಸ
ವಿಷಯ ಸಂಸಾರಕಾಗಿ ವಸುಧಿ ಭೋಗರ ತಂದ
ಹಸುವಿನ ಚಿಂತಿ ಅವನಿಗಿಲ್ಲೆ ಮನಸ ||1||
ಆಶಿ ಮಾಡಿ ಆಶ್ರಹಿಡಿವೊದ್ಯಾಕೆ ಮನ
ಬ್ಯಾಸ್ರ ಹಂಗಿನ ಅನ್ನ ಕೊಳುವೊದ್ಯಾಕೆ
ಹಸಿಕೊಂಡು ನಿಜದಾಸನಾಗಿರುತ್ತಿರೆ
ಮೀಸಲ ಪಡಿ ನಿತ್ಯ ದೊರಕದ್ಯಾಕೆ ||2||
ಕಲ್ಲು ಕಪ್ಪಿಗೆ ಶಿವನಾಧಾರ ಪಡಿಯಿ
ದ್ದಲ್ಲಿಗೆ ನಡಿಸುವ ಪೂರ
ಬಲ್ಲತನದಿ ಗುರು ಬಲ್ಲಿದ ಶಿದ್ಧನ
ಸೊಲ್ಲಿನೊಳಿಡು ಭವ ಪರಿಹಾರ ||3||
ಪಾದರಕ್ಷೆಯ ಮಾಡಿದ ಶ್ರೀಗುರು ಯನ್ನ
ಪಾದರಕ್ಷೆಯ ಮಾಡಿದ ಪಾದರಕ್ಷೆಯ ಮಾಡಿ
ಭೇದವಿಲ್ಲದೆ ಕೂಡಿ ಸಾಧು ಸದ್ಭಕ್ತರ ಹೃದಯ ನೋಡುವೆನೆಂದು ||ಪ||
ಮೆಟ್ಟಿ ಮೆರಿವುತಿದ್ದಾನು ಯನ್ನನ್ನ
ಮುಟ್ಟಿ ಬಸುರಾಗಿ ಹಡದಿದ್ದನೂ
ಹುಟ್ಟಿದ ಕೂಸಿನ ತೊಟ್ಟಲಿಲ್ಲದೆ ಕಟ್ಟಿ
ಬಟ್ಟ ಬಯಲೊಳು ನಿಂತು ಬಗಿ ಬಗಿ ತೂಗುತ ||1||
ಜ್ಞಾನ ಕ್ರಿಯದ ಪಾದವ ಮಹ
ಜ್ಞಾನದ ಶಿಖ ಮುಖ ಭಯಕರವ
ಭಾನು ಕೋಟಿ ಪ್ರಭೆ ಬೆಳಗು ವಬ್ಬಳಿಯಾಗಿ
ತಾವೆ ತನ್ನ ಲೀಲೆಗವತರಸಿಯಾಡುತ ||2||
ಅಗಣಿತ ಮಹ ಮಹಿಮನು
ಸುಗುಣಮಣಿ ಸಿದ್ಧಲಿಂಗೇಶ್ವರನು
ನಿಗಮಕ್ಕತೀತನು ಹುಟ್ಟು ಸಾವರಿಯನು
ಆಗ ಹರ ಜಗದೀಶ ಯುಗ ಯುಗದಲಿ ತಾನು ||3||
ಬಸವಲಿಂಗಾಯ ನಮಃ ಶ್ರೀಗಿರಿವಾಸ ಸಿದ್ಧ ಜಂಗಮಾ ||ಪ||
ಶ್ರೀಗುರು ಬಸವಲಿಂಗ ಮಾಂ ಪಾಹಿ| ಶ್ರೀಗಿರಿವಾಸ ನೀ ಕಾಯಿ
ಶ್ರೀಗುರು ಬಸವಲಿಂಗ ಮಹಾದಾನಿ
ಶ್ರೀಗಿರಿವಾಸ ಭಕ್ತರಭಿಮಾನಿ| ವಾಸ ಭಕ್ತರಭಿಮಾನಿ ||1||
ಶ್ರೀಗುರು ಬಸವಲಿಂಗ ಮಹದಾತ
ಶ್ರೀಗಿರಿವಾಸ ಜಗಕ ಪ್ರಖ್ಯಾತ| ವಾಸ ಜಗಕ ಪ್ರಖ್ಯಾತ ||2||
ಶ್ರೀಗುರು ಬಸವಲಿಂಗ ಭವಭಂಗ
ಶ್ರೀಗಿರಿವಾಸ ಸಿದ್ಧ ಧವಲಾಂಗ| ವಾಸಸಿದ್ಧ ಧವಲಾಂಗ ||3||
ಶ್ರೀಗುರು ಬಸವಲಿಂಗ ಮಾಂ ಪ್ರಾಣ ಪ್ರಾಣ
ಶ್ರೀಗಿರಿವಾಸ ಸಿದ್ಧಕಲ್ಯಾಣ| ವಾಸ ಸಿದ್ಧ ಕಲ್ಯಾಣ ||4||
ಬೆಲ್ಲದಂತೆವರು ಬೇವಾದರ ಹಿತ
ಯಾವಲ್ಲಿರ್ಪದು ಹೇಳಣ್ಣ
ಅಲ್ಲಮ ಪ್ರಭುವಿನ ಅಗಲದೆ ಅನುದಿನ
ಸೊಲ್ಲಿನೊಳಿಡು ನಿಜ ಸುಖವಣ್ಣ ||ಪ||
ಗಂಟ ಬಿಟ್ಟ ಗೈಯಾಳಿಗೆ ಚಾಜದ
ದಂಡಿಯ ಕಟ್ಟುದ್ಹ್ಯಾಂಗಣ್ಣ
ಕಂಡರ ಸೇರರು ಮಂಡಲದೊಳು ಜನ
ಹೆಂಡಿಲಿ ಹೊಡದರ ತಾಳಣ್ಣ ||1||
ಪಾತಕ ಪ್ರಾಣಿಗೆ ನೀತಿಯ ಪೇಳಲು
ಪ್ರೀತಿಲಿ ಕೇಳುವದ್ಹ್ಯಾಂಗಣ್ಣ
ಸೋತು ಬಂದು ಶ್ರೀಗುರು ವಚನಾಮೃತ
ಪ್ರೀತಿಲಿ ಕೇಳಲು ಸವಿಯಣ್ಣ ||2||
ತಾನೆ ವಿಪರಿತ ಮಾಡಿದ ಗುರುಶಿದ್ಧ
ನಾನೇನು ಮಾಡಲಿ ಹೇಳಣ್ಣ
ಜ್ಞಾನ ಹೀನರು ಬಹುಮಾನವ ಕುಡುವರೆ
ನೀನೆ ನಿನ್ನೊಳು ತಿಳಿಯಣ್ಣ ||3||
ಭಿಕ್ಷಾಪತಿಯ ಬಿರಿದು ನಿಮ್ಮದು| ಪರಿಕಿಸ ಬೇಡ ಗುಣ ನಮ್ಮದು
ಬೇಡ ಗುಣ ನಮ್ಮದು ||ಪ||
ನಡಿಸಿದಂತೆ ನಡೆಯುತ್ತಿದ್ದೆನು
ನುಡಿಸಿದಂತೆ ನುಡಿಯುತ್ತಿದ್ದೆನು
ಅಡಿಗಡಿಗೊಡಿಯ ನಿಮ್ಮ ಭಜಿಪೆನು| ವಡಿಯ ನಿಮ್ಮ ಭಜಿಪೆನು ||1||
ಧೃಡಮನ ಬುದ್ಧಿಯಿಲ್ಲ ನಮ್ಮಲ್ಲಿ
ಕೈಬಿಡುಬೇಡ ಮಧ್ಯ ಹೊಳೆಯಲ್ಲಿ| ಬೇಡ ಮಧ್ಯ ಹೊಳಿಯಲ್ಲಿ ||2||
ಸಿದ್ಧ ಸರ್ವ ಜೀವ ದಯಪಾರಿ ಪದರಿಗೆ ಬಿದ್ದೆ ಬಿಡಿಸೊ ಭವ ಸೆರಗ
ಬಿಡಿಸೋ ಭವಸೆರೆ ||3||
ಭಜನಿ ಮಾಡೋ ಬನ್ನಿ ಭರದಿಂದ
ಸುಜನರ ಸಂಗ ಸಮರಸದಿಂದಾ| ಸಂಗ ಸಮರಸದಿಂದಾ ||ಪ||
ಭಕ್ತಿಯಲ್ಲಿ ಶಿವಾಶಿವಯೆಂದು| ನಿಜ ಮುಕ್ತರಾಗಬೇಕೆಂದು
ಮುಕ್ತರಾಗಬೇಕೆಂದು ||1||
ಹೀನ ವಿಷಯದಾಶೆ ಸಂಸಾರ| ಗುರುವಿನ ಧ್ಯಾನದಿಂದ ಪರಿಹಾರ
ಧ್ಯಾನದಿಂದ ಪರಿಹಾರ ||2||
ಹೊನ್ನು ಹೆಣ್ಣು ಮಣ್ಣು ಹಿರಿಸರಕ ಮಾವಿನ ಹಣ್ಣಾಯಿತು ಲೋಕಕ್ಕಾ
ಹಣ್ಣಾಯಿತು ಲೋಕಕ್ಕಾ ||3||
ಮಾಯಾ ಘಾಸಿಯೆಂದು ತಿಳಿಯಾರು
ಶ್ರೀಗುರು ರಾಯನ ನೆನಿಯಾರು| ರಾಯನ ನೆನಿಯಾರು ||4||
ಆಸಿ ಹಚ್ಚಿ ಹೋದರೇನಂತ
ಬಸವ ಹೇಸಿ ಬಿಟ್ಟ ಬಲವಂತ| ಹೇಸಿ ಬಿಟ್ಟ ಬಲವಂತ ||5||
ಹರುಷ ತುಂಬಿಕೊಂಡ ಮನದಲ್ಲಿ
ಹಿಡಿದ ಪರುಷ ಜೋಳಿಗಿ ಕೈಯಲ್ಲಿ| ಪರುಷ ಜೋಳಿಗಿ ಕೈಯಲ್ಲಿ ||6||
ಮೆರೆಯುತ್ತಿರ್ದ ಇಹಪರದಲ್ಲಿ
ನಿಜದರುವಿನ ಮನಿಯಲ್ಲಿ| ಅರುವಿನ ಮನಿಯಲ್ಲಿ ||7||
ಬೇಗನ ಹೋಗಿ ಇರುವ ನಡಿರಲ್ಲಿ
ಶಿವಯೋಗ ಮಾರ್ಗ ಸುಖದಲ್ಲಿ| ಯೋಗ ಮಾರ್ಗ ಸುಖದಲ್ಲಿ ||8||
ಸಿದ್ಧಗ ದಾಸರಾಗಿ ಇರುವಾನು
ಚಿತ್ತ ಶುದ್ಧಾಗಿ ಶರಣು ಹೋಗುವಾನು| ಶುದ್ಧಾಗಿಶರಣು ಹೋಗುವನು ||9||
ಭಜನಿಯಲ್ಲಿ ಅಮೃತ ಸುರಿಯುವದು
ಸುಜನರ ಸಂಗದಿಂದ ದೊರಕುವದು ||ಪ||
ಸಂಗ ದೊರಕುವದು ಸುಮ್ಮನಲ್ಲ
ಗಂಗಾಧರನ ಒಲುಮೆ ಅದಕೆಲ್ಲ| ಗಂಗಾಧರ ನೊಲುಮೆ ಅದಕೆಲ್ಲ ||1||
ಪರವುಪಕಾರಿ ಗುರುವು ಜಗದೊಳಗೆ
ದೊರಕಿದರಲ್ಲೆ ನಿಮ್ಮ ನಂಬುಗೆಗೆ ||2||
ಅಲ್ಲ ಸಿದ್ಧಿಯಾಗುವದು ಸರ್ವರಿಗೆ
ಸಿದ್ಧಲಿಂಗೇಶನ ಭಕ್ತರಿಗೆ| ಈಶನ ಭಕ್ತರಿಗೆ ||3|
ಭಕ್ತಿಲಿ ಮಾಡೊ ಭಜನಿ| ಮುಕ್ತಿಗೆ ಸಾಧನಿ
ಶಕ್ತಿ ಸಹಾಜ್ಞಾನಿ| ನಿಜವಿರಕ್ತ ಸಾವಧಾನಿ ||ಪ||
ಆಶಿರೋಷ ಬಿಟ್ಟು| ಈಶಗ ಮೊರೆಯಿಟ್ಟು
ದಾಸಿ ಭಾವ ತೊಟ್ಟು| ಪ್ರೇಮ ಸೂಸುತ ಅಡಿಯಿಟ್ಟ ||1||
ಅರಿವು ಎಂಬೊ ಕಪನಿ| ಗುರುಪಾದ ನಿಶಾನಿ
ಸ್ಥಿರವೆಂದು ಹಿಡಕೊ ನೀ| ಹುಡುಕುತ ಬರುವ ಭಕ್ತಿ ಭೀಮಾನಿ ||2||
ಹಿಗ್ಗಿಲಿ ಚರಿಸುತ| ಬಗ್ಗಿ ವಂದಿಸುತ
ಜಗ್ಗಿ ನಿಂತು ಹಾರುತ| ಮಲತ್ರಯ ನುಗ್ಗು ಮಾಡಿಬಿಡುತಾ ||3||
ಅತ್ತಿತ್ತ ನೋಡಾದೆ| ಹೊತ್ತು ವ್ಯರ್ಥ ಗಳಿಯಾದೆ
ಮತ್ತೇನು ಬಯಸಾದೆ| ನಿಜ ಗೊತ್ತು ಸಾಧಿಸುವದೆ ||4||
ಗುರು ಎಂಥಾ ಸಮರ್ಥ| ಮೂರ್ಲೋಕದ ಕರ್ತಾ
ಯಾರಿಲ್ಲ ಸಿದ್ಧನ ಹೊರ್ತಾ| ಬಿಡಬೇಡ ಸಾರಿದೆ ಹಿಡಿ ತುರ್ತಾ ||5||
ಬಸವರಾಜ ರಾಜ ರಾಜ
ಮೂಲಮಂತ್ರ ಪ್ರಣಮದ ಬೀಜ ಮಂತ್ರ ||ಪ||
ಬಸವ ಚಿತ್ತೈಸಿ ನೋಡಿದನು| ವಂದೆ ತತ್ತಿ ಜಗವ ಮಾಡಿದನು
ತತ್ತಿ ಜಗವ ಮಾಡಿದನು| ಬಸವಯಂಬೊ
ತ್ರಿಯಕ್ಷರ ಬ್ರಹ್ಮ ವಿಷ್ಣು ರುದ್ರರವತಾರ| ವಿಷ್ಣು ರುದ್ರರವತಾರ ||1||
ಬಸವ ಕಲ್ಪವೃಕ್ಷವಾದನು| ನೀಲಮ್ಮನೆ ಕಾಮಧೇನು
ನೀಲಮ್ಮನೆ ಕಾಮಧೇನು| ಬಸವ ಸರ್ವಲೋಕ ಸಲಹುವನು ಚೌಳ
ಶಂಕರಗೆ ವಾಹನಾನು| ಶಂಕರಗೆ ವಾಹನಾನು ||2||
ಬಸವ ಭಕ್ತಿಯಲ್ಲಿ ನಿಸ್ಸೀಮ ಗುರುಲಿಂಗ ಜಂಗಮಕ ಪ್ರೇಮ
ಲಿಂಗ ಜಂಗಮಕ ಪ್ರೇಮ| ಬಸವ ಆದಿ ಪ್ರಮಥ ನಾಯಕ
ಜಂಗಮ ತಾನೆ ಯಾವ ಕಾಲಕ| ತಾನೇ ಯಾವ ಕಾಲಕ ||3||
ಬಸವ ನಾಮವೆಂಬ ನಿಜ ಮಂತ್ರ ಬಿಡದೆ ಭಜಿಸು ಜನ್ಮ ಪವಿತ್ರ
ಭಜಿಸು ಜನ್ಮ ಪವಿತ್ರ| ಬಸವನ ಮಹಿಮಿ ಪ್ರಭು ಪೇಳಿದನು
ಪ್ರಮಥರು ಕೇಳಿ ಬಹಳ ಹರುಷವನು| ಕೇಳಿ ಬಹಳ ಹರುಷವನು ||4||
ಬಸವನ ಪಾದ ನಂಬಿ ಶರಣಾರು| ಜನ್ಮ ನೀಗಿ ನೀಗಿ ಹೋದಾರು
ನೀಗಿ ನೀಗಿ ಹೋದಾರು| ಕಲಿಯುಗದಲ್ಲಿ ಈಗ ಆದಾರು
ಬಸವನ ವಲಿಸಿಕೊಂಬ ಸುಜನಾರು| ವಲಿಸಿಕೊಂಬ ಸುನಾರು ||5||
ಬಸವನ ಭಜನಿ ಬಿಡದೆ ಮಾಡುವರು
ಮೃದುಭಾಷೆಯಿಂದ ನುಡಿವಾರು| ಮೃದು ಭಾಷೆಯಿಂದ ನುಡಿವಾರು ||6||
ಭಕ್ತಿಭಾವ ನಂಬುಗಿ ವಿಶ್ವಾಸ| ಯಿಟ್ಟಂತವರ ಹೃದಯದೊಳು ವಾಸ
ಅವರ ಹೃದಯದೊಳುವಾಸ| ಬಸವನೆ ಸಿದ್ಧನಾಗಿ ಭಾಗೋಡಿ
ಕಾಗಿಣಿಧಡಿಯ ಕಾಡು ಮನಿ ಮಾಡಿ| ಧಡಿಯ ಕಾಡು ಮನಿ ಮಾಡಿ ||7||
ಬಿರಿದು ನಿಮ್ಮದು ಯಂದು ಬೀರಿದೆ ಜಗದೊಳು ಸಿದ್ಧಲಿಂಗ
ಬಿರದಿನ ಅಭಿಮಾನ ನಿಮಗಲ್ಲದಿನ್ನುಂಟೆ ಸಿದ್ಧಲಿಂಗ ||ಪ||
ನಿನ್ನ ನಂಬಿದ ಮೇಲ ಯಿನ್ನಾವ ಭಯವುಂಟು ಸಿದ್ಧಲಿಂಗ
ಮುನ್ನೇಳು ಜನ್ಮದ ಪಾಶವ ಹರಿವದು ಸಿದ್ಧಲಿಂಗ ||1||
ನಿನ್ನ ಧ್ಯಾನದೊಳಿರೆ ಉನ್ನತ ಐಶ್ವರ್ಯ ಸಿದ್ಧಲಿಂಗ
ತನ್ನಿಂದ ತಾನೆ ತಾ ಚಿನ್ಹತ್ತಿ ಬರುವದು ಸಿದ್ಧಲಿಂಗ ||2||
ಹರುಷಾಬ್ಧಿಯೊಳು ಮನ ಬೆರಸುತ ನಿಮ್ಮನ ಸಿದ್ಧಲಿಂಗ
ಸ್ಮರಿಸಲು ನಿಜ ಮೋಕ್ಷ ಪರುಷವಲ್ಲಿರ್ಪದು ಸಿದ್ಧಲಿಂಗ ||3||
ಹರ ನಿಮ್ಮ ಘನತೆಯ ನರರೇನು ಬಲ್ಲರು ಸಿದ್ಧಲಿಂಗ
ಗುರು ಕರುಣದ ಪಡೆದ ಗುರುಪುತ್ರ ತಾ ಬಲ್ಲ ಸಿದ್ಧಲಿಂಗ ||4||
ನಂಬದೆ ಕೆಟ್ಟರು ನರಲೋಕದವರೆಲ್ಲ ಸಿದ್ಧಲಿಂಗ
ತುಂಬಿದ ಹರಗೊಲಿಗಂಬಿಗ ನೀನಯ್ಯ ಸಿದ್ಧಲಿಂಗ ||5||
ಗುರುವೆ ನೀ ಗತಿಯೆಂದು ಮೊರೆ ಹೊಕ್ಕೆ ನಿಮ್ಮನ ಸಿದ್ಧಲಿಂಗ
ದೊರಿಯೆ ಲಾಲಿಸು ಅಭಯ ಕರಶಿರದಮೇಲಿಟ್ಟು ಸಿದ್ಧಲಿಂಗ ||6||
ಸುಕವಿಲ್ಲ ಜಗದೊಳು ಶಕಮೂರು ಮಲನಚ್ಚಿ ಸಿದ್ಧಲಿಂಗ
ಹಕನಾಕಾದರು ಜನರು ಸುಕ ಸ್ವಲ್ಪ ದುಃಖ ಬಹಳ ಸಿದ್ಧಲಿಂಗ ||7||
ಸಂಸಾರ ಬಲಿಯೊಳು ಸರ್ವರು ಬಿದ್ದರು ಸಿದ್ಧಲಿಂಗ
ಅಂಶಿಕ ನಿಮ್ಮವ ಅಂಜೋಡಿ ಬಂದೆನು ಸಿದ್ಧಲಿಂಗ ||8||
ವಂದಿಸುವೆನು ಪಾದ ಸಂದೇಹವಿಲ್ಲದೆ ಸಿದ್ಧಲಿಂಗ
ಯೆಂದೆಂದಿಗೀ ಭವ ಬಂಧನ ವಲ್ಲೆನು ಸಿದ್ಧಲಿಂಗ ||9||
ಬಡ ಮನದವ ನಾನು ದೃಢವಿಲ್ಲ ಜಡದೇಹಿ ಸಿದ್ಧಲಿಂಗ
ವಡಿಯ ನಿಮ್ಮಂಘ್ರಿಯ ವಲಿದಿತ್ತು ಸಲಹಯ್ಯ ಸಿದ್ಧಲಿಂಗ
ತಡಿಯದೆ ಬಂದೆನ್ನ ಪಿಡಿದು ಪಾವನ ಮಾಡು ಸಿದ್ಧಲಿಂಗ ||10||
ನಡಸಿದರ ನಡಿವೆನು ನುಡಿಸಿದರ ನುಡಿವೆನು ಸಿದ್ಧಲಿಂಗ
ನಡಿನುಡಿಗೊಡಿಯ ಚೈತನ್ಯ ನೀನಲ್ಲದೆ ಸಿದ್ಧಲಿಂಗ ||11||
ನರಜನ್ಮದಲ್ಲಿ ಮಾಯ ಮರವಿಟ್ಟು ಕಾಡುವಿ ಸಿದ್ಧಲಿಂಗ
ಹರ ನಿಮ್ಮ ಕಪಟವು ಆರಿಗೆ ತಿಳಿಯದು ಸಿದ್ಧಲಿಂಗ ||12||
ನೀವೆ ನಿಮ್ಮ ಧರ್ಮಕ್ಕೆ ನಮ್ಮ ಸೇವಕನೆಂದು ಸಿದ್ಧಲಿಂಗ
ಜಾವ ಝಾವಕ ಜಾಗ್ರ ಮಾಡಿದರ ತಿಳಿವದು ಸಿದ್ಧಲಿಂಗ ||13||
ನೀವಲ್ಲದಿನ್ನುಂಟೆ ದೇವ ದೇವರ ದೇವ ಸಿದ್ಧಲಿಂಗ
ಭಾವ ಭರಿತ ಬಾಲ ಬಸವಗಾಳ್ದಾತನೆ ಸಿದ್ಧಲಿಂಗ ||14||
ಬಸವಯೆಂಬ ನಿಜನಾಮ ಪ್ರೇಮರಸ| ಹಸಿದುಂಬವರಿಗೆ ಬಹುಬೆಲ್ಲ
ಹುಸಿ ಕಳವು ಹಾದರ ಕಸಮೂಳ ನಡಿ ಸಂಸಾರಿಗಳಿಗೆ ಯಿದು ವಶವಲ್ಲಾ ||ಪ||
ಮುಕ್ತಿಮಾರ್ಗಯಿದು ಮೂಲಮಂತ್ರ ಮೂರಕ್ಷರ ಸಾಧಿಸಿದವ ಬಲ್ಲ
ಭಕ್ತಿ ಹೀನ ಭವರೋಗಿ ದುರ್ಗುಣಿ ಯುಕ್ತಿ ಶೂನ್ಯಗಿದು ತರವಲ್ಲ ||1||
ಅಂಗಲಿಂಗ ಸಂಗ ಸಮರಸ ನೀವ ಸುಕ ಜಂಗಮ ಪ್ರಾಣಿ ಯಾದವ ಯೋಗಿ
ಮಂಗನಂದದಿ ಮನಲಂಗಿಸಿ ಮಲತ್ರಯ ಸಂಗದೊಳಿರೆ ಭವದುಃಖ ರೋಗಿ ||2||
ಯಿಷ್ಟ ಪ್ರಾಣ ಭಾವಷ್ಟರೊಳಗ ಶಿದ್ಧ ಅಷ್ಟವರ್ಣ ರೂಪವ ಧರಸಿ
ನಿಷ್ಟೆಯುಳ್ಳ ನಿಜಭಕ್ತ ಬಸವನ ದೃಷ್ಟಿಗೆ ಅಗಲದೆ ಸಮಬೆರಸಿ ||3||
ಬೇಡಿಕೊಂಡೆನು ಸಿದ್ಧ ನಿನಗೆ ದಯಮಾಡಿ
ಕೂಡಿಸು ಗಂಡ ಹೆಂಡರಿಬ್ಬರಿಗೆ
ಪಾಡಿಳಿದು ಹೋಗುವದು ಕಡಿಗೆ ಮಹತ್ವ
ಮಾಡಿ ತೋರಿಸು ಕೀರ್ತಿ ಮೂಲೋಕದೊಳಗೆ ||ಪ||
ನಿನ್ನ ಭಕ್ತನು ಯಿವನೆಂದು ಅರ್ಜಿ
ಚೆನ್ನಾಗಿ ಕೊಡುವೆನು ಕೇಳು ನೀ ಬಂದು
ಮನ್ಮಥನ ಕೇಳಿ ಕುಡುಯೆಂದು ಅವನ
ಬೆನ್ನಿಗೆ ನೀ ನಿಂತು ಆಟ ನೋಡೆಂದು ||1||
ಭಕ್ತರುದ್ಧಾರ ಮಾಡುವದು ಯಿಚ್ಛ
ಶಕ್ತಿ ನಿನ್ನಲ್ಲುಂಟು ಸಾರಿದೆ ಬಿರದು
ಮುಕ್ತಿದಾಯಕ ಬಂದು ಬೆರದು ಅವರ
ಭಕ್ತಿ ಕೈ ಕೊಂಬುವದು ಮಾಡು ನೀ ಸರದೂ ||2||
ಮೊರೆಯಿಡುವೆ ಗುರುಸಿದ್ಧ ಕೇಳು ನಿನ್ನ
ನೆರೆ ನಂಬಿಕೊಂಡಿರುವ ಸಂಗಯ್ಯಗ್ಹೇಳು
ಪರುಪಕಾರವ ತಾಳು ಕಂಟಕ
ಪರಿಹರಿಸಿ ಅನುದಿನ ಯಿರು ನೀ ಯನ್ನೊಳು ||3||
ಭಜನಿ ಮಾಡುವ ಬನ್ನಿರಿ ಸುಜನರೆಲ್ಲ| ಭಜನಿ ಮಾಡುವ ಬನ್ನಿರಿ
ಭಜನಿ ಮಾಡುವ ಬನ್ನಿ ಸುಜನರೆಲ್ಲರು ಕೂಡಿ
ತ್ರಿಜಗದೊಡೆಯ ಸಿದ್ಧಲಿಂಗನಾಲಿಸುವಂತ ||ಪ||
ತಾಳ ಮದ್ದಲಿ ತಂಬೂರಿ
ಕಾಳಿಯು ಕರ್ನಿ ಘಂಟೆ ಜಾಗಟ ನಪಿರಿ
ಭಾಳಲೋಚನ ಸಿದ್ಧ ಕೇಳಿ ತಲಿದೂಗುವಂತೆ
ಮ್ಯಾಳ ಜಾಮಸಿ ನಿತ್ಯ ಬಹಳ ಘೋಷದಲಿಂದ ||1||
ಹರುಷದಿಂದಲಿ ಹಾಡುತ ಹರ
ಗುರು ವಾಕ್ಯ ಪರಿಪರಿಯ ಕೊಂಡಾಡುತ
ಪರಮ ಯೋಗಿಯ ಸಿದ್ಧ ಪರುಷ ತಾಳಿದ ಬಸವ
ಹರ ಶರಣರಿಗಂತಃ ಕರಣ ಹುಟ್ಟುವ ಹಾಗೆ ||2||
ದೋಷರಹಿತ ದೇವನು| ದೇಶವ ತಿರುಗಿ ಬ್ಯಾಸರಿಲ್ಲದೆ ಬಂದನೂ
ವಾಸ ಗುಂಡ ಗುರಕಿ ಈಶ ಸಿದ್ಧೇಶ್ವರನ
ದಾಸರಾಗಿಯು ನಿತ್ಯ ಧ್ಯಾಸ ಪಾದದೊಳಿಟ್ಟು ||3||
ಬೇಡಿಕೊಂಬುವನ್ಯಂತ ಶೂರ
ಹುಡಿ ಮಾಡಿ ಹಾರಿಸಿ ಬಿಟ್ಟ ಸಂಸಾರ ಘೋರ
ಹಾಡಿ ಹರಸುವ ಶರೂರ
ಒಡಗೂಡಿ ಉಂಬುವ ನಿತ್ಯ ಜ್ಞಾನರಸ ಪೂರ ||ಪ||
ದಿಕ್ಕಿಲ್ಲದಂತ ಪರದೇಶಿ ಮದ
ಸೊಕ್ಕಿದ ಮಾಯಿನ ಮೆಟ್ಟಿ ಸಂಹರಿಸಿ
ಮುಕ್ಕಣ್ಣನಗಲದಾಚರಿಸಿ ಮುಂಡಿ
ಗಿಕ್ಕಿದ ಮೂರ್ಲೊಕ ಯನ್ನವೆಂದೆನಿಸಿ ||1||
ದಿಕ್ಕೆಲ್ಲ ಚರಿಸುತ ಬರುವ ಪ್ರೇಮ
ಉಕ್ಕುತ ಅನುದಿನ ಆನಂದ ಸುರಿವ
ಚಿಕ್ಕ ಬಸವನೆಂಬೊ ಕುರುವ ಜ್ಞಾನ
ಮುಖ್ಯವಾದ ಭಕ್ತಿ ವೈರಾಗ್ಯದಿರುವ ||2||
2ಪರುಷ ಜೋಳಿಗಿ ಹಿಡಿದಿರುವ ಪುಣ್ಯ
ಪರುಷ ಬಡವರಿಗನ್ನ ಅರಿವಿಯ ಕುಡುವ
ಗುರು ಮಂತ್ರ ಸಿದ್ಧನೆಚ್ಚರವ ಅನು
ಸರಿಸಿ ಭಕ್ತರಿಗೆಲ್ಲ ಮುಕ್ತಿಯ ಕುಡುವ ||3||
ಭಿಕ್ಷ ಬೇಡುಂಬುವದೆ ಸಾಕ್ಷಿ ಜನ್ಮ
ಮೋಕ್ಷ ಮಾಡುವದು ತಾ ನಿರಾಪೇಕ್ಷಿ
ಭಿಕ್ಷ ಪತಿಯ ಪಾದಾಪೇಕ್ಷಿ ಬಿಡದೆ
ಲಕ್ಷವಿಡೆಲೆ ಆತ್ಮ ಗುರುವು ಪ್ರತ್ಯಕ್ಷ ||ಪ||
ಅಡಗಿ ಮಾಡುವ ಮೂರು ಗುಂಡು ಪೂರ್ವ
ಹಿಡಿದ್ಹಿಂದ ಬೆನ್ಹಿತ್ತಿ ಬಂದದ್ದು ಕಂಡು
ಅಡಿಗಿಯ ಮಾಡಿ ಉಂಡುಂಡು ಗಟ್ಟಿ
ಗಡಗಿಯ ವಡದ್ಹೊಯ್ತು ಗುರುಪಾದ ಕಂಡು ||1||
ಗುರುಪಾದ ಪ್ರತಾಪದಿಂದ ಆಶಿ
ಹರಿಯಿತ್ತು ಸಂಸಾರ ಕಚ್ಚಿತದರಿಂದ
ಅರಿವು ನಿಂತಿತು ಯದರ ಮುಂದ ಮಾಯ
ಮರವಿಯ ಬಿಟ್ಟೋಯಿತು ಬರದು ಯಂದೆಂದ ||2||
ನೆಲೆ ಕಲೆ ಸ್ಥಲವಿಲ್ಲದವನ ಕೂಡಿ
ಕುಲಗೆಟ್ಟಿ ಮನ ಮುಟ್ಟಿ ಸುಳದದ್ದೆ ನೆವನ
ಮಲಹರ ಶಿದ್ದಲಿಂಗನ ಭಕ್ತಿ
ಸ್ಥಲದಲ್ಲಿ ವಂದಾಗಿಯಿದ್ದಿದ್ದೆ ಖೂನ ||3||
ಭಿಕ್ಷವ ಬೇಡುವೆನು ಶ್ರೀಗುರು ಪಾದರಕ್ಷ ಕೊಂಡಾಡುವೆನು
ಸಾಕ್ಷಾತ್ ಗುರುಸಿದ್ಧ ದೀಕ್ಷ ಮಾಡಿದ ಯನ್ನ ಆ
ಕಾಂಕ್ಷಿ ಅಳಿಯಿತು ನಿರಾಪೆಕ್ಷೆಯಿಂದಲಿ ನಿತ್ಯ ||ಪ||
ಜ್ಞಾನ ಸನ್ಮಾರ್ಗದಲ್ಲಿ ಶ್ರೀಗುರು ಪಾದ ಧ್ಯಾನ ಸುಮನಸಿನಲ್ಲಿ
ಸ್ವಾನುಭಾವದ ಸುಖ ತಾನೆ ಸ್ವೀಕರಿಸುತ
ಯೆನೇನು ಇಲ್ಲದನಾದಿ ಸಂಚರಿಸುತ್ತ ||1||
ವಂದೆಂದು ಭಾವಿಸುತ ಒಳ ಹೊರಗಿನ| ಸಂದೇಹ ಪರಿಹರಿಸುತ
ದ್ವಂದವಳಿದು ನಿಜಾನಂದ ಲೀಲೆಯ ತೊಟ್ಟು
ಚಂದಾಗಿ ಚರಿಸುತ ಕಂದ ಬಸವ ಬಂದೂ ||2||
ಇಹಪರ ಎಂಬೊದಿಲ್ಲ ಜಯ ಗುರು ಸಿದ್ಧ ದಯಾನಿಧಿ ತಾನೆ ಬಲ್ಲ
ನಯ ಭಯ ದಯ ಭಕ್ತಿ ಸ್ವಯ ಬುದ್ಧಿ ಸ್ಥಿರವಾಗಿ
ಮಾಹ ಹರದಿತ್ತು ದೇಹ ಪರವಶದೊಳಗಾಗಿ ||3||
ಭಿಕ್ಷ ಬೇಡುತ ಬಂದೆ ನಾನು ಗುರು
ಸಾಕ್ಷಾತ ಶಿದ್ಧಲಿಂಗ ಕಳಿಸಿದ ತಾನು
ದೀಕ್ಷ ಮಾಡಿಸಿದ ಯನ್ನನೂ ನಿಜ
ಮೋಕ್ಷ ಮಾರ್ಗಯಿದೆ ನೀಡಮ್ಮ ನೀನು ||ಪ||
ಭಿಕ್ಷದನ್ನವು ಹಂಗಿಂದಲ್ಲಾ ವುಳಿಕಿ
ಕಾಕ್ಷಯಳಿಯಲು ನಿಜ ಮೋಕ್ಷ ಬ್ಯಾರಿಲ್ಲ
ಸಾಕ್ಷಾತ ರೂಪು ಸರ್ವೆಲ್ಲ ತನ್ನ
ಸಾಕ್ಷಿಯಾಗಿ ತಾನೆ ತಿಳಿದವನೆ ಬಲ್ಲ ||1||
ಭಿಕ್ಷಕನೆ ಲೋಕಕ್ಕೊಡಿಯ
ರುದ್ರಾಕ್ಷಿ ವಿಭೂತಿ ಮಂತ್ರಮಯ ಅಷ್ಟೈಶ್ವರ್ಯ
ಶಿಕ್ಷಕರ್ತನು ಪರೊಪಕರಿಯ ಬ್ರಹ್ಮ
ರಾಕ್ಷಿಗಳಿಗೆ ತಾನು ಮೊದಲಿನ ಹಿರಿಯ ||2||
ಭಿಕ್ಷ ಬೇಡುಂಬುವನು ತಂದು
ದುರ್ಭಿಕ್ಷ ಎಂಬುವದಿಲ್ಲ ಅವನಿಗೆಂದೆಂದು
ಮೋಕ್ಷದಾಯಕ ದಯಾ ಸಿಂಧು
ಪ್ರತ್ಯಕ್ಷವಾದನು ಸಿದ್ಧ ಬಸವನಿಗೆ ಬಂದೂ ||3||
ಬಂದುದ್ದೆಲ್ಲ ಬರಲಿ ಗುರು ತಂದದ್ದೆಲ್ಲ ತರಲಿ
ವಂದೆ ಮನಸು ಘಟ್ಟಿರಲಿ ಪಾದಕ ಹೊಂದಿಕೊಂಡು ಮೈಮರಿಲಿ ||ಪ||
ತನು ಮನ ಧನ ಗುರುವಿಂದು ಅದರೋಳು ಎಳ್ಳಷ್ಟು ಇಲ್ಲ ನಂದು
ಮನಸಿಗೆ ನಿಶ್ಚಯ ತಂದು ಗುರುವೆ ನೀನೆ ಗತಿ ಎಂದೆಂದು ||1||
ಮಾನಾಪಮಾನ ಇನ್ನೇನೂ ಗುರು ತಾನೆ ಕೊಂಬುತಲಿಹನೂ
ದೀನತನವ ಬಿಟ್ಟನು ಭಕ್ತಿಜ್ಞಾನ ವೈರಾಗ್ಯ ತೊಟ್ಟನೂ ||2||
ಜನನ ಮರಣ ಅರಿಯೇನು ಸೇವ ಮನ ಮುಟ್ಟಿ ಮಾಳ್ವೆನೂ
ಜನರಂಜಿಕಿ ನನಗೇನು ಶಿದ್ಧನನುಗೂಡಿ ಇರುವೆನು ||3||
ಬಿರಿದುಳ್ಳನ ನೀನಾದರ ಗುರುವೆ| ಭರದಿ ಪವಡ ತೊರಲಿ ಬೇಕು
ಬಿರಿದೆ ಬಿಂಕವ ಬೀರಿದಿಯಾದಡೆ| ಗುರು ಅಧಿಕ ಹ್ಯಂಗನ ಬೇಕು ||ಪ||
ಮಾಡಬಾರದದು ಮಾಡಿ ತೋರಿದರ| ಕಾಡಸಿದ್ಧ ನೀನಹುದೆಂಬೆ
ನಾಡಿನೋಳಾಶ್ಚರ್ಯ ಮಾಡದಿರ್ದೊಡ| ಹೇಡಿ ನಿನಗ ಬಿರದ್ಯಾಕೆಂಚೆ ||1||
ಬಾಡಿ ಬತ್ತಿ ಒಣಗ್ಹೋದ ಗಿಡಕ ಫಲ ಮಾಡಿ ತೋರಿದರ ಗುರುವೆಂಬೆ
ಹಾಡಿ ಬೇಡಿ ಹೊಟ್ಟಿ ಹೊರಿವವನಾದರೆ ನಾಡಿನೊಳಿವನೊಬ್ಬ ನರನೆಂಬೆ ||2||
ಕೊರಡು ಚಿಗಿಸಿ ಬರಡ್ಹಯನ ಮಾಡಲು| ಗಾರುಡ ಗುರು ಬಲವಂತನೆಂಚೆ
ಮೊರಡಿ ಭಂಗಾರ ಮಾಡದಿರ್ದಡೆ| ಕುರುಡಿ ಹುಳಕ ಸರಿಯಲ್ಲೆಂಬೆ ||3||
ಹುಟ್ಟಗುರುಡಗ ಕಣ್ಣು ಕೊಟ್ಟು ಪಾಳಿಸಿದರೆ ಸೃಷ್ಟ್ಟಿಕರ್ತ ನೀನಹುದೆಂಬೆ
ದೃಷ್ಟಾಂತರವ ತೋರಿಸದಿರ್ದಡೆ| ಯಷ್ಟ್ಯಾಕ ಬಿಂಕ ನಿನಗೆಂಬೆ ||4||
ಭಕ್ತರುದ್ಧಾರವ ಮಾಡಿದಿಯಾದರೆ| ತಕ್ತದೊಡಿಯ ಸಿದ್ಧನಹುದೆಂಬೆ
ಮುಕ್ತಿ ಪಥವ ನೀ ತೋರಿಸದಿರ್ದಡೆ ಶಕ್ತ ದೈವಕ ಸರಿಯಲ್ಲೆಂಬೆ ||5||
ಬಸವ ನಾಮ ನುಡಿಯಲಿ ಬೇಕು ಹಾದಿ
ಹಸನ ಮಾಡಿ ನಡಿಯಲಿ ಬೇಕು
ಹುಸಿ ಕಳವ್ಹಾದರ ಬಿಡು ಬೇಕು ಜಂಗಮ
ಹಸಿವು ತಿಳಿದ ಅನ್ನ ಕುಡು ಬೇಕು ||ಪ||
ಭಕ್ತಿಯಂಬ ಪ್ರಾಯ ಮದಸೊಕ್ಕಿ ವಿ
ರಕ್ತ ಪುರುಷನಿಗೆ ನದರಿಕ್ಕಿ
ಮುಕ್ತಿ ಮನಿಯೊಳು ಅವರ ಪ್ರೀತಿದಕ್ಕಿ ಜ್ಞಾನ
ಶಕ್ತಿಯಿಂದ ಪ್ರೇಮರಸ ಉಕ್ಕಿ ಉಕ್ಕಿ ||1||
ಗುರುಲಿಂಗ ಜಂಗಮ ದಾಸೋಹಿಯಾಗಿ ನಿತ್ಯ
ಪರಿಪರಿ ಪೂಜ ಪುಣ್ಯದೇಹಿಯಾಗಿ
ಹರಶರಣರ ಪಾದ ಸೇವಿಯಾಗಿ ದೇಹ
ಪರವಶದೊಳು ಶಿರದೂಗಿ ದೂಗಿ ||2||
ಆರುಸ್ಥಲದ ಲಿಂಗವಂಗವಾಗಿ ಶುದ್ಧ
ವೀರಶೈವಾಚಾರ ಸಂಪನ್ನನಾಗಿ
ಮೂರು ಪ್ರಣವ ಮೂಲ ಮಂತ್ರ ಮನನವಾಗಿ
ಚಂದ್ರ ಸೂರ್ಯ ಪ್ರಭೆಗೆ ಮೀರಿ ಶಿದ್ಧ ಬೆಳಗಾಗಿ ||3||
ಬ್ಯಾರಿಲ್ಲ ದೂರಿಲ್ಲ ಸನಿಯಿಲ್ಲೊ ತಮ್ಮ
ಆಗು ಕಾಲಕ ತನ್ನ ತಾನೆ ಆಗುವದು ||ಪ||
ಆಯಾಸ ಅನುದಿನ ಕಷ್ಟ ಬಟ್ಟರಿಲ್ಲ
ಬಯಸಿ ಬಯಸಿ ಬಳಲಿ ಭ್ರಮೆಗೊಟ್ಟರಿಲ್ಲ
ಸಾಯಸ ಮಾಡಿದರ ದೊರಕುವದಲ್ಲಿ
ಅನಯಾಸ ಬಾಹೊದು ಆರಿಗಿ ತಿಳದಿಲ್ಲ ||1||
ಅದಕಾಗಿ ತಾ ಹುಟ್ಟಿ ಬಂದಿರಬೇಕು
ಅದು ತನ್ನ ಕಾಯಿಕೊಂಡು ಕುಂತಿರಬೇಕು
ಅದಕಿದಕ ಕಲಿವಂತ ಸಮಯ ಒದಗಬೇಕು
ಅದಕೊಬ್ಬ ಗುರು ಬಂದು ತೋರಿಸಲು ಸಾಕು ||2||
ಹರಶರಣರ ಪಾದ ಸ್ಮರಿಸಲಿ ಬೇಕು
ಹರಷಾಬ್ದಿಯೊಳು ಮನ ಬೆರಸಲಿ ಬೇಕು
ಗುರು ಶಿದ್ಧಲಿಂಗನ ಹೆಸರ್ಹೇಳ ಬೇಕು
ಅರವು ಉಳ್ಳವರಾಗಿ ಆಚರಿಸಬೇಕು ||3||
ಬಲ್ಲವನಿಗೆನ್ಹೇಳ ಬೇಕು ಭಕ್ತಿ
ಯಿಲ್ಲದ ಜ್ಞಾನಿಯ ಸಂಗುತಿ ಸಾಕು
ಹೊಲ್ಲವನ್ಯಕಾಗಬೇಕು ಯದಿ
ಕಲ್ಲು ಮಾಡಿ ಶಿವಗ ಮೊರಿಯಿಡಬೇಕೂ ||ಪ||
ತಿಳಿದವರಲ್ಲೆರಡಿಲ್ಲ ಆಸಿ
ಅಳಿದ ಮೆಲ ಬಯಕಿ ಮಂದುಳಿಯದಲ್ಲಾ
ಝಳ ಝಳ ಮನಸು ಕಸರಿಲ್ಲಾ ಹರುಷ
ದೊಳಿ ತುಂಬಿ ಹಗಲಿರುಳು ಭೋರ್ಗರಿವುದಲ್ಲಾ ||1||
ಬಿಟ್ಟಾಡಿಕೊಂಬುವರೆಲ್ಲ ವಿಷ
ಯಿಟ್ಟು ಕೊಲ್ಲುವದಕ್ಕ ಹಿಂದಾಗೊದಿಲ್ಲ
ಕೊಟ್ಟಿ ಮನಸು ಬಾಯಿ ಬೆಲ್ಲ
ಗುಟ್ಟು ಕೊಟ್ಟು ಯೆಂದೆಂದಿಗಿ ಮಾತಾಡೊದಿಲ್ಲ ||2||
ಸಿದ್ಧ ಬಸವನೆಂಬೊ ನಾಮ ಯರ
ಡಿದ್ದಾರು ಅದು ವಂದೆ ಭಾವ ನಿಸ್ಸೀಮ
ಶುದ್ಧಾತ್ಮರಾಮ ನಿಃಕಾಮ ಕಸ
ರಿದ್ದಲ್ಲಿ ಸುಡುವದು ಕಾಲಾಗ್ನಿ ಸ್ತೋಮ ||3||
ಬಿಟ್ಟಿದಾವತಿ ಮಾಡಬ್ಯಾಡ ಮನ
ಮುಟ್ಟಿ ಶರಣರ ಸೇವೆ ಮಾಡೊದು ಪಾಡ
ಕೊಟ್ಟರೆಂಬುವ ಆಶಿ ಬ್ಯಾಡ ಕರುಣ
ಹುಟ್ಟಿದಾಕ್ಷಣ ಮೋಕ್ಷ ತಡವಿಲ್ಲೊ ಮೂಢ ||ಪ||
ನಾನಾ ಜನ್ಮವ ತಿರಗಿ ನೀನು ಮರಳಿ
ಮಾನವ ಜನ್ಮಕ ಬಂದಿ ಫಲವೇನು
ಸ್ವಾನುಭಾವದ ಸುಖವನು ಮಹಾ
ಜ್ಞಾನಿಗಳಲ್ಲುಂಟು ಪಡಕೊ ಬರದೆನೂ ||1||
ಯಿಂತಪ್ಪ ಸೇವ ದೊರಕುವದು ಅವರ
ಪಂಕ್ತಿಲಿ ರಸರಾಯಿ ತುಪ್ಪ ಉಣಿಸುವದು
ಸಂತೋಷ ಹೆಚ್ಚು ಮಾಡುವದು ಭವದ
ಚಿಂತಿ ಬಿಡಿಸಿ ಭಕ್ತಿ ಮಾರ್ಗ ಹಿಡಿಸುವದೂ ||2||
ಗುರು ವಚನಾಮೃತ ಕೇಳೊ ದೇಹ
ಯರವೆಂದು ತಿಳಕೊ ಈ ಸಂಸಾರ ಸುಳ್ಳೊ
ಪರಮಾರ್ಥ ದಾರಿ ಹಿಡಕೊಳ್ಳೊ ಪುಣ್ಯ
ಪುರದರಸು ಸಿದ್ಧನ ಪಾದ ಉಪಕೊಳ್ಳೊ ||3||
ಭ್ರಾಂತನಾಗಿ ಬಳಲುವದ್ಯಾಕೊ ಬಹು
ಶಾಂತಿ ತಾಳಿಕೊಂಡಿರಬೇಕು ಮ
ಹಂತ ಶಿದ್ಧನ ಭಜಿಸಲಿ ಬೇಕೊ ಬರುವೊ
ದಂತಿಂತೆನ್ನದೆ ಕೊಳಬೇಕೊ ||ಪ||
ಹಿಂದಾಗಿ ಹೋದುದೆಲ್ಲ ನೆನಿಸಬ್ಯಾಡ ಸುಳ್ಳೆ
ಮುಂದಿನಾಸ್ತಿ ಹಿಡಿದು ಬಯಕಿ ಬಯಸಬ್ಯಾಡ
ಕಂದಿಕುಂದಿ ಚಂದಗೆಟ್ಟು ಸೊರಗಬ್ಯಾಡ ಈಗ
ಬಂದದ್ದುಣ್ಣಲಿ ಬೇಕು ಬಿಡದು ಮೂಢ ||1||
ತನ್ನ ಪಾಲಿಗೆ ಗುರುತರಲಿಕ್ಕೆ ತಾ
ಅನುಭವಿಸದೆ ಹೋದಿತು ಯಾಕೆ
ಮುನ್ನ ಮಾಡಿದ ಫಲ ಉಣಬೇಕೆ
ತನ್ನ ಮನಕ ಸಾಕ್ಷಿ ತಂದು ಕೊಳಬೇಕೆ ||2||
ಗುರು ಹಿರಿಯರ ವಾಕ್ಯವ ಕೇಳು ಭಕ್ತಿ
ಪರನಾಗಿ ಯಿರುನೀ ಅವರೋಳು
ಹರಿವದು ಭವ ಪರಿಪರಿಯೆಳು ಪಥ
ದೊರಿವದು ಶಿದ್ಧನಾಶೀರ್ವಾದದೊಳು ||3||
ಬಸವಯ್ಯ ನಿನ ಮಹಿಮ ಉಸುರಲೆನ್ನಳವಲ್ಲ ||ಪ||
ಪಶುಪತಿ ಪಾದವನು ಕಂಡೆ ದೇವಾ
ನಿಮ್ಮ ಉಪಕಾರವನು ಇನ್ನೆಷ್ಟು ಪೇಳಲಿ
ಸೋಮಧರ ಗುರು ಶಿದ್ಧ ಬಲ್ಲನಾಗಿ
ತಮ್ಮ ಪಾದವ ಸೋಂಕಿ ಬ್ರಹ್ಮಲಿಪಿ ಅಳಕಿತ್ತು
ಹಮ್ಮು ಬಿಟ್ಟೊಡಿತ್ತು ನಿಮ್ಮ ಕಂಡು ||1||
ಗುರುಲಿಂಗ ಜಂಗಮದಾ ವರಭಕ್ತಿ ತಿಳಸಿದಿರಿ
ಪರವಸ್ತು ನೀವೆನ್ನ ಪ್ರಾಣವಾಗಿ
ಪರಿಪರಿಯ ವಚನದಲಿ ಪರಮ ಅಮೃತ ತುಂಬಿ
ಪರಿಣಾಮ ತೋರಿದಿರಿ ಮನಸಿನಲ್ಲಿ ||2||
ಎನ್ನವಳು ಇವಳೆಂದು ಮನ್ನಿಸಿ ಕರದೆನಗೆ
ಚನ್ನಾಗಿ ಪೇಳಿದಿರಿ ಗುರು ಸೇವೆಯಾ
ಭಿನ್ನವಿಲ್ಲದೆ ಎನ್ನ ನಿನ್ನಂತೆ ಮಾಡಿದಿರಿ
ಇನ್ನಾವ ಭ್ರಾಂತಿ ಉಳಿಯಲಿಲ್ಲಾ ||3||
ಶಿದ್ಧ ಬಸವನ ಪ್ರಾಣ ಇದ್ದದ್ದು ಕಲ್ಯಾಣ
ಮುದ್ದು ಬಸವನ ಚರಣ ಎನ್ನ ಹರಣ
ಶಿದ್ಧನಾ ಕರುಣದಲಿ ಬುದ್ಧಿಯನು ಕಲಸಿದಿರಿ
ಶುದ್ಧ ಸುವಿಚಾರದ ಮಾರ್ಗ ಹಿಡಸಿ ||4||
ಎತ್ತ ಹೋದರ ಬೆನ್ನು ಹತ್ತಿ ಬರುವೆನು ಗುರುವೆ
ನಿತ್ಯ ನಿತ್ಯ ಶಿಕ್ಷಾಮಾಡು ಕಂಡ್ಯ
ಚಿತ್ತದೊಲ್ಲಭ ಗುರುವೆ ಸತ್ಯ ಶಿವಶರಣರಿಗೇ
ವತ್ತೊತ್ತಿ ಕೊರದೆನ್ನ ವಪ್ಪಿಸಿಶನ್ನ ||5||
ಶಿದ್ಧನಾಮವ ಜಪಿಸಿ ಗೆದ್ದೆ ಭವ ದುಃಖವನು
ಬುದ್ಧಿವಂತರು ನೀವು ಕೇಳಿರಮ್ಮಾ
ಗುದ್ದ್ಯಾಟವೇತಕ್ಕ ಗುರುಪಾದ ದೊರಕಲಿಕೆ
ಮಧ್ಯಾಹ್ನ ಬಿಸಿಲಂತೆ ಯೋಗವೆಲ್ಲಾ ||6||
ಭಾರವಿಳಸಿಕೊಳ್ಳಿರಿ ಶಿವ ಭಕ್ತರು ಭಾರವಿಳಸಿಕೊಳ್ಳಿರಿ
ಭಾರವಿಳಸಿರಿ ಋಣ ಭಾರಾಗಿ ನಮ್ಮನ
ಘೋರ ಬಡಿಸುತಾದ ಇನ್ಯಾರಿಗೆ ಪೆಳಲಿ ||ಪ||
ಮಾಡಬಾರದು ಮಾಡಿದೆ ತಪ್ಪಾಯಿತು ಮೂಢನಗುಣ ನೋಡದೆ
ಕಾಡು ಮಾಯಿನ ಕಡಿಗಟ್ಟಿ ನಿಮ್ಮೊಳು
ಕೂಡಿಕೊಳ್ಳಿರಿ ಬೇಗ ಹಾಡಿ ಹರಸುವೆ ನಿಮಗ ||1||
ತೊತ್ತಿನ ಮಗನೆಂಬುತ ಅಭಯಕರವಿತ್ತು ಮೊರಿಯ ಕೇಳುತ
ಚಿತ್ತರ ತಂದೆನ್ನ ಎತ್ತಿಕೊಳ್ಳಿರಿ ಬೇಗ
ನಿತ್ಯ ನಿಮ್ಮನ ಭಜಿಸಿ ಹೊತ್ತುಗಳಿವೆನು ನೆನಸಿ ||2||
ಶಿದ್ಧ ನಮ್ಮಗ ತಂದನು ಶ್ರೀಗುರುವರು ಶಿದ್ಧನಿಮ್ಮಳಗಿದ್ದನು
ಬಿದ್ದೆನು ಪದರಿಗೆ ಉದ್ಧಾರು ಮಾಡೆಂದು
ಶುದ್ಧ ಸುವಿಚಾರದ ಬುದ್ಧಿವಂತರು ನೀವು ||3||
ಬಡತನ ಬಹು ದೊಡ್ಡದು ಪ್ರಮಥರಿಗೆಲ್ಲ
ಬಡತನ ಬಹು ದೊಡ್ಡದು
ಬಡತನದಲಿ ಭಕ್ತಿ ಒಡಗೂಡಿ ಇರುವದು
ಸುಡಗಾಡ ಸಿದ್ಧನ ಬಿಡದೆ ಭಜಿಸುವದು ||ಪ||
ಬಡವರೆಂಬುವರೆಲ್ಲರು ಭಕ್ತಿಲಿ ಶಿವನ
ಬಿಡದೆ ಕೊಂಡಾಡುವರು
ನಡಿನುಡಿಯಲಿ ಸತ್ಯ ಹಿಡಿದು ಬಿಡದೆ ನಿತ್ಯ
ಪಡಿತಂದು ಪರಿಣಾಮ ಒಡಗೂಡಿ ಇರುವಂತ ||1||
ಸತ್ಯ ಕಾಯಕ ನಡಿಸುತ ಸತಿಪತಿ ಕೂಡಿ
ನಿತ್ಯ ಜಂಗಮಕ ಉಣಿಸುತ
ಚಿತ್ತ ಶುದ್ಧವಾಗಿ ವಡೆಯರುಂಡು ಮಿಕ್ಕದ್ದು
ಎತ್ತಿಕೊಂಡು ಹರುಷದಲಿ ತುತ್ತು ಪ್ರಸಾದಕೊಂಬುತ ||2||
ಗುರುಪುತ್ರರಾದವರು ಶರೀರದ ಸುಖದುಃಖ ಮೀರಿದರು
ಪರಮ ಹರುಷ ತುಂಬಿ ಹೊರ ಸೂಸಿ ಚೆಲ್ಲುತ
ಸ್ಥಿರಕಾಲ ಸಿದ್ಧನೊಳೈಕ್ಯವಾಗಿರುವಂತ ||3||
ಮೂರ್ಖ ಬೀಳೂಬೇಡ ಕಾಂತಾರ
ಮಾರ್ಗಕೇಳು ಸಾಧು ಸಂತಾರ| ಕೇಳು ಸಾಧು ಸಂತಾರ ||ಪ||
ಮುಂದಾದ ನರಕಕೊಂಡ ಯಮಪೂರ ಬಂಧನ ಬಿಡದು ಮೀರಿ ಹೋದರ
ಮೀರಿ ಹೋದರ ||1||
ಹಿಂದ ಮುಂದರಿದು ನೋಡು ವಿಚಾರ
ಮುಂದ ಲೆಕ್ಕ ಕೇಳುತಾನ ಸರಕಾರ| ಲೆಕ್ಕ ಕೇಳುತಾನ ಸರಕಾರ ||2||
ಬುದ್ಧಿವಂತನಾಗ ಭಯ ದೂರಾ
ನಿದ್ದಿ ಮಾಡು ಬೇಡ ಹುಷಾರ| ಮಾಡು ಬೇಡ ಹುಷಾರ ||3||
ನೀತಿ ಮಾತು ವಚನ ಶಾಸ್ತರಾ
ಪ್ರೀತಿಲಿ ಕೇಳು ಹೇಳ್ತೆ ತಿಳಿಯಾರಾ| ಕೇಳು ಹೇಳ್ತೆ ತಿಳಿಯಾರಾ ||4||
ತಿರುಗಿ ಬಾರದಂತ ಸಂಸಾರ
ಗುರುವಿನ ಕೂಡಿ ಮಾಡೊ ನಿರಂತರ| ಕೂಡಿಮಾಡೊ ನಿರಂತರ ||5||
ಅರಿವು ಹಿಡಿದು ನಡೆಸು ಇಹಪರ
ಗುರುಪದದಲ್ಲಿ ಭಾಳ ಎಚ್ಚರ| ಅಲ್ಲಿ ಭಾಳ ಎಚ್ಚರ ||6||
ಮಾಯಿನ ಜೈಸುವಂತ ಆಚಾರ
ಕೈಬಾಯಿ ಕಚ್ಚಿ ಖರೆ ವ್ಯವಹಾರ| ಕಚ್ಚಿ ಖರೆಯಾವಾರ ||7||
ಕೋತಿ ಮನಸು ಮೂರು ಪ್ರಕಾರ
ಘಾತಿಸಿ ಕೊಲ್ಲುತಾದ ಯಲ್ಲಾರ| ಕೊಲ್ಲುತಾದ ಎಲ್ಲಾರ ||8||
ದೃಷ್ಟಿಗೆ ಕಾಣುತದ ಶಿವಪೂರ| ಕಾಣುತದ ಶಿವಪೂರ
ನಡಿ ನುಡಿ ಭಾವ ಏಕೊ ಪ್ರಕಾರ| ಬಿಡದಾಚರಿಸಿ
ಹೋಗೊ ಮಹಾದ್ವಾರಾ| ಆಚರಿಸಿ ಹೋಗೊ ಮಹಾದ್ವಾರಾ ||9||
ಕರುಣ ಹುಟ್ಟುವಂತೆ ಪ್ರಮಥರಾ| ಚರಣಕ ಶರಣು
ಹೋಗೆ ಮನಪೂರಾ| ಶರಣುಹೋಗೊ ಮನಪೂರಾ ||10||
ಹಾಡು ಬೇಕು ಶಿವನ ಶರಣಾರ
ಬೇಡು ಬೇಕು ಅಮೃತ ಫಲಹಾರ| ಬೇಕು ಅಮೃತ ಫಲಹಾರ ||11||
ಗುರುವು ಹಾನ ಸಿದ್ಧೇಶ್ವರ
ಶ್ರೀನಿವಾಸ ಸರಡಿಗಿವೂರ| ವಾಸಸರಡಿಗಿ ಊರ ||12||
ಮಾಡಿರೊ ಬಸವನ ಸ್ತೋತ್ರ ಜನ್ಮ| ಮಾಡಿದರೆ ಪವಿತ್ರ ಪವಿತ್ರ
ಆದಿ ಅನಾದಿಯ ಶರಣ ನಾಲ್ಕು| ವೇದಕ ನಿಲುಕದ ಚರಣ ಚರಣ
ಪ್ರಮಥ ಗಣನಾಥನು ಯೀತ| ಪರಬ್ರಹ್ಮ ವಸ್ತು ಧರ್ಮದಾತ ದಾತ
ಅಷ್ಟವರಣಕ್ಕೆ ಆಧಾರ ನಿಜ| ನಿಷ್ಟಿಯುಳ್ಳಂತ ಧೀರ ಗಂಭೀರ ||ಪ||
ಗುರುಲಿಂಗ ಜಂಗಮನಾಗಿ ಮೂರು
ಪರಿಯಲಿ ಚರಿಸುವಯೋಗಿ ಯೋಗಿ ||1||
ಬಸವಯಂಬುವ ನಾಮ ಭಕ್ತಿ
ರಸ ತುಂಬಿ ತುಳುಕುವದು ಪ್ರೇಮಾಪ್ರೇಮಾ ||2||
ಭಕ್ತಿಗೋಸ್ಕರವಾಗಿ ಬರುವ ನಿಜ
ಮುಕ್ತಿ ತೋರಿಸಿ ಭವಹರಿವ ಹರಿವ ||3||
ನಂಬಿದ ಭಕ್ತರೊಳಿರುವ ಜಗ| ದಂಬಿಗ ಕಾಮಧೇನು ಕರಿವ ಕರಿವ
ಸರ್ವ ಜೀವಿಗಳುದ್ಧಾರ ಮೇರು| ಪರ್ವತ ಶಿಖರ ಮಂದಿರ ಮಂದಿರ
ಸಿದ್ಧಲಿಂಗನ ಪೊತ್ತು ಮೆರಿವ| ಜಗದೊಳಿದ್ದು ಯಿಲ್ಲದ್ಹಾಂಗಿರುವಯಿರುವ ||4||
ಮಾಡುಣ್ಣಲರಿಯೆನು ಬೇಡುಣ್ಣಲರಿಯೆನು ಸಿದ್ಧಲಿಂಗ
ನಾಡಿನೊಳಿಂತಪ್ಪ ಹೇಡಿನ್ಹುಟ್ಟಿಸುವರೆ ಸಿದ್ಧಲಿಂಗ ||ಪ||
ಯನ್ನ ದೇಹವು ಯನಗೆ ಭಾರಾಗಿ ತೋರಿತ್ತು ಸಿದ್ಧಲಿಂಗ
ಯಿನ್ನೇನು ಮಾಡಲಿ ಕುಂತೇಳಲಾರೆನು ಸಿದ್ಧಲಿಂಗ ||1||
ತನು ಬಡಗೊಂಡಿತ್ತು ಮನ ಹೇಡಿಯಾಯಿತ್ತು ಸಿದ್ಧಲಿಂಗ
ಜನ ಸೇರದ್ಹೊಯಿತ್ತು ನಿನಗ್ಹೆಂಗ ಬಿಟ್ಟಿತ್ತು ಸಿದ್ಧಲಿಂಗ ||2||
ಹುಟ್ಟಿಸಿದ ತಪ್ಪಿಗೆ ಕೊಟ್ಟಿದ್ದಿ ಪಡಿಯನ್ನು ಸಿದ್ಧಲಿಂಗ
ಕಷ್ಟಯೆಳ್ಳಷ್ಟಿಲ್ಲ ಸೃಷ್ಟಿಕರ್ತನೆ ಬಲ್ಲ ಸಿದ್ಧಲಿಂಗ ||3||
ಯನ್ನ ಚಿಂತೆಯು ನಿಮಗೆ ಚೆನ್ನಾಗಿ ಯಿರಲಿಕ್ಕೆ ಸಿದ್ಧಲಿಂಗ
ಯಿನ್ಯಾವ ಭ್ರಾಂತಿಯು ಯನ್ನೊಳಗಿಲ್ಲವೊ ಸಿದ್ಧಲಿಂಗ ||4||
ಯಿಂತಪ್ಪ ಹೇಡಿ ನಿಶ್ಚಿಂತನ ಮಾಡಿದಿ ಸಿದ್ಧಲಿಂಗ
ಸಂತೋಷ ಹೆಚ್ಚಿತ್ತು ಅಂತಿಂತು ಯಣಿಕಿಲ್ಲ ಸಿದ್ಧಲಿಂಗ ||5||
ನೀವಿಟ್ಟ ಪರಿಯಲ್ಲಿ ಯಿದ್ದೆ ಈ ಲೋಕದಲಿ ಸಿದ್ಧಲಿಂಗ
ಜಾವ ಅಗಲದೆಯನ್ನ ಭಾವದೊಳಿರುತಿರ್ಪಿ ಸಿದ್ಧಲಿಂಗ ||6||
ಯೇಳೇಳು ಜನ್ಮದಲಿ ಆಳಾಗಿ ಯಿದರಂತೆ ಸಿದ್ಧಲಿಂಗ
ಬಾಳಿದೆ ಬದುಕಿದೆ ಆಳಿದಿ ಯನ್ನನು ಸಿದ್ಧಲಿಂಗ ||7||
ಮೊರಿ ಕೇಳು ಮೊರಿ ಕೇಳು ಗುರುಶಿದ್ಧಲಿಂಗ
ಧೊರಿಯೆ ನಿಮ್ಮಯ ಪಾದ ನಂಬಿದೆ ಸಂಗ ||ಪ||
ಮಾಡಬಾರದ ತಪ್ಪ ಮಾಡಿದ್ದೆ ನಾನು
ಮೂಢನ ಅವಗುಣ ನೋಡದೆ ನೀನು
ಕೂಡಿಕೊ ಭವಹರಿಸಿ ಬೇಡಿಕೊಂಡೇನು
ನೋಡಯ್ಯ ದಯ ದೃಷ್ಟಿ ಹಾಡಿ ಹರಸುವೆನು ||1||
ದಿಕ್ಕಿಲ್ಲದವರಿಗೆ ದಿಕ್ಕು ನೀನಯ್ಯಾ
ಸೊಕ್ಕಿ ಏಕ್ಕಿಲಿ ಭವಕ ಸಿಕ್ಕಿಲ್ಲೊ ಜಯಾ
ಚಿಕ್ಕವ ಸಿಕ್ಕಿದ್ದೆ ರಕ್ಕಸಿ ಕಯ್ಯ
ದಕ್ಕಿಸೆಂದು ಮೊರೆಹೊಕ್ಕೆ ದಮ್ಮಯ್ಯ ||2||
ಆಳಿನ ಅಭಿಮಾನ ಆಳ್ದ ವಡಿಯನಿಗೆ
ಹೇಳಿಕೊಂಡೆನು ದುಃಖ ಕೇಳುವ ಧಣಿಗೆ
ಯೇಳೇಳು ಜನ್ಮದ ಆಳಿದ್ದೆ ನಿನಗೆ
ಭಾಳ ಲೋಚನ ಶಿದ್ಧ ಸೆಳಕೊ ನೀ ಕಡಿಗೆ ||3||
ಮರವಾಗದೆಂದೆಂದು ಗುರು ಮಾಡಿದುಪಕಾರ
ಹರಿಸಿದ ಭವದುಃಖ ಬೆರಸಿದ ನಿಜ ಸುಖ ||ಪ||
ಅರಿವಿನ ಆಲಯ ತೆರದು ತೋರಿಸಿದ
ಪರಿ ಪರಿ ಸದ್ಗುಣ ವಸ್ತ ಕೀಲಿಸಿದ
ಶರೀರ ದುರ್ಗುಣದ ಹೊಟ್ಟು ಕೇರಿ ಹಾರಿಸಿದ
ಪರಿಪೂರ್ಣ ಜ್ಞಾನ ಸುಸಂಗ ಮಾಡಿಸಿದ ||1||
ಸಂಗ ಸಮರಸ ಭಾವ ಏಕೊ ಮಾಡಿಸಿದ
ಲಿಂಗ ಚಿತ್ಕಳೆ ಬೆಳಗಿನೊಳಗ ಸೇರಿಸಿದ
ಹಿಂಗದ ವಿರಳ ಸುಕ ಅಂಗಕ ಲೇಪಿಸಿದ
ಸಂಗನ ಶರಣರ ಸಂಗ ತೋರಿಸಿದ ||2||
ಘೋರ ಸಂಸಾರ ದುಃಖ ದೂರ ಮಾಡಿಸಿದ
ಪಾರಮಾರ್ಥದ ಸುಖ ಚಿರಗೊಳಿಸಿದ
ಪರಬ್ರಹ್ಮಪುರದ ವಿಸ್ತಾರ ತೋರಿಸಿದ
ವರಗುರು ಸಿದ್ಧನ ಗೊತ್ತು ಸೇರಿಸಿದ ||3||
ಮಾಡಿದ ಮಹಗುರು ಈ ಪರಿ ನಾ
ಬೇಡುತ ಬಂದೆನು ಭಿಕಾರಿ
ಬೇಡವ ನೀಡವಗ ಲಾಚಾರಿ ನೀವ
ನೀಡಿ ಪಡಿರೊ ನಿಜ ಸುಕ ದಾರಿ ||ಪ||
ಮನದಾಣ್ಮನ ಧ್ಯಾನ ಮರಿಯದಿರ್ರಿ ನೀವು
ಮನವಪ್ಪ ದಾನವ ಮಾಡುತಲಿರ್ರಿ
ಘನ ಕಾರ್ಯಕ ಹಿಂದುಳಿಯದಿರಿ ನಿಮ್ಮ
ಮನಿತನ ಬಂದರ ಹಳಿಯದಿರರಿ ||1||
ಮನ ನೋಡ ಕಳವಿದ ಮದನಾರಿ ಧನ
ತನು ಮನ ಬೇಡುತ ಪರಿ ಪರಿ
ಧ್ಯಾನಕ್ಕೆ ತಂದು ನೀವು ತಿಳಕೊಳರಿ
ಅನ್ನದಾನಕ್ಕೆ ಬಂದರ ನೀಡಿ ಖಳವರಿ ||2||
ಸ್ಥಿರವಲ್ಲ ಈ ಭೋಗ ತಿಳಿದು ನೋಡರಿ
ಅಸ್ಥಿರದ ದೇಹ ಪುಣ್ಯ ಘಳಸಿಕೊಳ್ಳರಿ
ಹಸಿದು ಬಂದವರಿಗಿ ಹಸ್ತ ಅನ್ನ ನೀಡರಿ ನೀವು
ಮಸ್ತ ಘಳಸಿ ಮಣ್ಣು ಮರಿ ಮಾಡಬೇಡರಿ ||3||
ಬುದ್ಧಿವಂತರಾದರ ತಿಳಕೊಳ್ಳರಿ ಯಮನ
ಸುದ್ದಿ ಕೇಳಿ ಪುಣ್ಯವ ಪಡಕೊಳ್ಳರಿ
ಸದ್ಗುರುವಿನ ದಯ ಪಡಕೊಳ್ಳರಿ ಹಿಂಗ
ಸಾಧಿಸಿ ಶಿವಪಥ ದೊರಕೊಳ್ಳರಿ ||4||
ಅಂಗದ ಅವಗುಣ ಅಳಿಬೇಕರಿ ಸಾಧು
ಸಂಗನ ಶರಣರ ತಿಳಿಬೇಕರಿ
ಲಿಂಗ ಸಂಗ ಹಿಂಗದಿರುಬೇಕರಿ ನಿಜ
ಜಂಗಮ ಸಿದ್ಧನ ಬೆರಿ ಬೇಕರಿ ||5||
ಮನ ಮನ ಕಲಿಯದ್ಯಾತರ ಮಾತು ಸುಳ್ಳೆ
ಅನುದಿನವಾದೆನು ಫಲ ದೊರಿತು
ಜನ ಮೆಚ್ಚಲ್ಲದೆ ಮನ ಮೆಚ್ಚದು ತನ್ನ
ನೆನವಿಗಿ ಬಾರದು ಘನ ಸುಖ ತೋರದು ||ಪ||
ಒಳಗೊಂದ್ಹೊರಗೊಂದಿಟಕೊಂಡು ಮಾತಿ
ನೊಳಗೆ ಮಮಕಾರ ಹೆಚ್ಚು ಮಾಡಿಕೊಂಡು
ಹಳಿ ಅರವಿಯ ಹರಕೊಳಗು ಮಾಡಿ ಮಡಚಿ
ಝಳಝಳ ಘಳಿಗೆಯ ಹಾಕಿ ತೋರಿಸುವಂತೆ ||1||
ಅಂತಂತವರಿಗೆ ಕಲತಲ್ಲಿ ಫಾಸಿ
ಯಂತು ಪೇಳಲಿ ಆಡಿಕೊಳುವಲ್ಲಿ
ಗಂತಗೊಳಿತ ತಕ್ಷಣದಲ್ಲಿ ವಿಧಿ
ನಿಂತಿತು ಬಂದಾ ಸ್ಥಲದಲ್ಲಿ ||2||
ಶಿವ ಭಕ್ತರ ನುಡಿ ಕಾಮಧೇನು
ಝಾವ ಅಗಲದೆ ಕರದುಣ್ಣೊ ನೀನು
ಭಾವ ಭರಿತ ಶಿದ್ಧಲಿಂಗ ತಾನು ತಮ್ಮ
ಸೇವಕರಿಗಿಂತ ಬುದ್ಧಿ ಕುಡುವನೂ ||3||
ಮಾತು ಹೇಳತೆ ನಿನಗೊಂದು ಮನ
ಸೋತು ಕೇಳೊ ಧ್ಯಾನಕ ತಂದು
ನೀತಿಶಾಸ್ತ್ರ ಅವ ಏಸೊಂದು ಜ್ಞಾನ
ಜೋತಿಗೆ ಸರಿಬಾರದ ಸುಂದು ||ಪ||
ಜ್ಞಾನ ಹುಟ್ಟುವದು ತನ್ನಲ್ಲಿ ಸಾವ
ಧಾನ ಮುಕ್ತಿ ಪಥ ಅದರಲ್ಲಿ
ಸ್ವಾನುಭಾವ ಮನನವಾದಲ್ಲಿ ಶಿವ
ಧ್ಯಾನ ಪ್ರೇಮರಸ ಅಲ್ಲಲ್ಲಿ
ತನ್ನ ತಾ ತಿಳಿದದ್ದೆ ಅನುಭಾವ ತನಗನ್ಯವಿಲ್ಲ ಜಗದ ಜೀವ
ಉನ್ನತ ನಿಜ ಸುಖ ಗುರು ಸೇವಾ ಮನ
ಭಿನ್ನವಾಗದ ದ್ವೈತಭಾವ ||1||
ಗುರುವಿನ ಮಗ ತಾನಾಗುವದು ಶಿವ
ಶರಣರಿಗೆ ತಲಿ ಬಾಗುವದು
ಕರುಣಿ ಸಿದ್ಧನ ಒಲಿಮಿಯಿದು ಆಸಿ
ಹರದರ ದೊರಕುವದಾಗಾದು ||2||
ಮಗ ನೀ ನನ್ನವನಾದರ ಮಾತು
ಮಿಗ ಮೀರದಿರುತಿರ ಬೇಕ್ಯಲಾ
ಅಗಹರ ಸಿದ್ಧನ ಅಗಲದೆ ಅನುದಿನ
ಬಿಗಿದಪ್ಪಿ ಬಿಡದಿರ ಬೇಕ್ಯಲಾ ||ಪ||
ತಂದಿ ಘಳಸಿದ ಘಳಿಕಿ ಮಕ್ಕಳಿಗಲ್ಲದೆ
ಮಂದಿಗೆ ಮಾಡುವನೇನ್ಯಲಾ
ದಂಡ ಮನವು ವಂದಾಗದೆ ತಂದಿಗೆ
ಕುಂದು ತರುವವ ಮಗನೇನ್ಯಲಾ ||1||
ಗುರು ಕರುಣಾಮೃತ ಕರಮನ ಭಾವದಿ
ಕರ ಕರದುಣುತಿರೆ ಶಿಷ್ಯಾತ್ಮ
ನರಗುರಿಗಳ ನಡಿ ಜರಿಯದೆ
ಗುರುವಿಗೆ ಯದರಿಟ್ಟಾಡುವ ನೀಚಾತ್ಮ ||2||
ತನು ಮನ ಧನ ಮಾರೊಪ್ಪಿಸಿ ಸಿದ್ದಗ
ಸಿದ್ಧಾಗಿರುತಿರೆ ಶಿವಯೋಗಿ
ಅನುದಿನ ನಿಜಸುಕ ಬಯಸದೆ ವಿಷಯಕ
ಮನವ್ಯಳಿಸ್ಯಾಡುವ ಭವರೋಗಿ ||3||
ಮುಂದಾಗೋದೆನು ತಿಳಿದಿಲ್ಲ ಹುಟ್ಟಿ
ದಂದಿಂದು ಶಿದ್ಧ ನೀವ ಕರುಣಿಸಿದೆಲ್ಲ
ಚೆಂದಾಗಿ ಅನುಭವ ಬಟ್ಟೆನಲ್ಲ ನಿಮ್ಮನ
ಹೊಂದಿ ಅನುದಿನ ನೀವೆ ಗತಿಯಂಬೆನಲ್ಲಾ ||ಪ||
ನಿಮ್ಮ ದಮ್ ನೀವೆ ಬಲ್ಲಿರಿ ಯಾವ
ಹಮ್ಮಿಲ್ಲ ಎಳ್ಳಷ್ಟು ಸಮಯ ತಂದಿರಿ
ಗುಮ್ಮ ನೀ ಕಷ್ಟವೆಂದು ಬೆದರಿ ಅದರ
ನಿಮ್ಮ ಪಾದಧ್ಯಾನ ಹಿಡಿದು ನಿಂತೆ ನಡದಾರಿ ||1||
ಕಾಯಿ ಕುಡಗೋಲು ನಿನ್ನ ಕಯ್ಯಾ ಸುಳ್ಳೆ
ಬಾಯಿ ಬಿಟ್ಟರ ಏನು ಇಲ್ಲ ಉಪಾಯ
ತಾಯಿ ಸಂಗತಿ ಮಾಡಿದ ನ್ಯಾಯ ವಿಧಿ
ಮಾಯಿಗೆದರಿಟ್ಟು ನಿಂತ ಕೇಳು ಗುರುರಾಯ ||2||
ನಿಮ್ಮ ಬಲದಿಂದ ಬದುಕಿದ್ದೆ ಪರ
ಬ್ರಹ್ಮ ಸಿದ್ದನ ಪದರಿವಿಡಿದು ಬಂದಿದ್ದೆ
ವಮ್ಮನದ ರಾಶಿ ಮಾಡಿದ್ದೆ ದೇಹದ
ಹಮ್ಮು ಚಿದರಗುಟ್ಟಿ ಚಲ್ಲಿ ಬಿಟ್ಟಿದ್ದೆ ||3||
ಮಡಿ ಎಂಬೋದು ಅದ ಯಾವಲ್ಲಿ
ಮಲಮುಡಿಯಿಂದ ಪುಟ್ಟಿಸಿದ ಬ್ರಹ್ಮ ಜಗದಲ್ಲಿ
ಹಡಿ ಹೊಲಸು ನರ ದೇಹದಲ್ಲಿ
ಹಸಿ ಗಡಗಿ ವಸರುವದು ಅನುದಿನದಲ್ಲಿ ||ಪ||
ಸ್ಥೂಲವೆ ಮಲಿನ ಸಂಬಂಧ ಭವ
ಜಾಲಕಾಸ್ಪದವಾಗಿ ತೋರುವದು ಚಂದ
ಶೀಲವೆಲ್ಯದೊ ಅದರಿಂದ ಮಣ್ಣು
ಪಾಲಾಗಿ ಹೋಗುವದು ತಿಳಕೊನಿಮುಂದ ||1||
ಸುಲಭ ಸೂಕ್ಷ್ಮ ತನುವಿನಲ್ಲಿ ನಿ
ರ್ಮಲವಾಗಿ ತೋರುವದು ಮನಲಿಂಗದಲ್ಲಿ
ನೆಲೆಗೊಳಿಸಿ ಆಚರಿಸಲೊಲ್ಲಿ ಪುಣ್ಯ
ಫಲವೇನು ದೊರಕುವದು ನಿನಗರದಲ್ಲಿ ||2||
ಭಕ್ತಿ ಕಾರಣ ವಂದಿಲ್ಲಾದೆ ನಿಜ
ಮುಕ್ತಿ ಬಯಸಿದರುಂಟೆ ಬಳಲಿಸಾವೊದೆ
ಯುಕ್ತಿ ಹೀನರ ಸಾದಕಿದೆ ನಮ್ಮ
ತಕ್ತದೊಡಿಯ ಶಿದ್ಧಲಿಂಗನರಿಯಾದೆ ||3||
ಮಡಿ ಮೈಲಿಗಿಯಂಬೊದಿನಿತಿಲ್ಲ ನಮ್ಮ
ಮೃಡ ಸಿದ್ಧ ತುಂಬಿರುವ ಜಗವೆಲ್ಲ
ಜಡಿ ಮುಡಿ ಗಂಗಿ ಗೌರಿ ಸಕಲವೆಲ್ಲ ತನ್ನ
ವಡಲೊಳಗಿಟ್ಟು ತಾ ಬ್ಯಾರಿಲ್ಲ ||ಪ||
ಭೂಮಿ ಆಕಾಶ ಪಂಚ ತತ್ವವೆಲ್ಲ ವಂದು
ಸೀಮಿ ಯಂಬ ಖೂನ ಬ್ಯಾರೆ ತೋರಲಿಲ್ಲ
ಸ್ವಾಮಿ ಸಕಲ ಪ್ರಾಣಿಗಳಿಗೆ ಭೇದವಿಲ್ಲ ತನ್ನ
ಪ್ರೇಮದಿಂದ ತಾನೆ ಆದ ಜಗವೆಲ್ಲಾ ||1||
ಅಂಗ ಲಿಂಗ ಬಿಟ್ಟು ಅಗಲಲ್ಲಿ
ಸರ್ವಾಂಗ ಲಿಂಗಮಯ ಸ್ಥಲವೆಲ್ಲ
ಹಿಂಗದು ಜೀವ ಶಿವ ಬ್ಯಾರೆ ಅಲ್ಲ ಅಂತ
ರಂಗ ಬಹಿರಂಗ ವಂದೆ ಯರಡಿಲ್ಲ ||2||
ಪಿಂಡ ಬ್ರಹ್ಮಾಂಡಕೇನು ಭೇದವಿಲ್ಲ ಮನ
ಗಂಡು ವಂದು ಸಂಶವುಳಿಯಲಿಲ್ಲ
ಪುಂಡ ಸಿದ್ದಲಿಂಗನಾಗ್ನಿ ಮೀರಲಿಲ್ಲ ಭಕ್ತಿ
ಭಂಡಾರಿ ಬವಕ ತಿರಗಿ ಬರಲಿಲ್ಲ ||3||
ಮಾನವ ಮಾಡಿದರೇನು ಜನರಪಮಾನವ ಮಾಡಿದರೇನು
ಭಾನು ಕೋಟಿ ಪ್ರಕಾಶ ಶಿದ್ಧನ ಧ್ಯಾನದೊಳಗ ಮನ ಅನುದಿನವಿರುತಿರೆ ||ಪ||
ಮುಂದಕ ಕರಿದಾರೇನು ಮುನಿದು
ಹಿಂದಕ ನೂಕಿದರೇನು
ಬಂಧನ ಬಿಡಸಿದರೇನು ಬಹುಪರಿ ಗಂಧವ ತೊಡಸಿದರೇನು
ಸಂದೇಹವಿಲ್ಲದ ಸದ್ಗುರುವಿನ ಪಾದ
ಛಂದನಿಯೊಳು ಮನ ಸಂದಿಸಿಯಿರುತಿರೇ ||1||
ಶ್ರೇಷ್ಟವೆಂದರೇನು ಅತಿ ಕನಿಷ್ಟನೆಂದರೇನು
ಮೃಷ್ಟಾನ್ನವ ಉಣಿಸಿದರೇನು ವಿಷಯಿಟ್ಟು
ಕಷ್ಟಿವ ಬಡಿಸಿದರೇನು
ಅಷ್ಟವರಣ ಹಿಡಿದಾಚರಿಸುವ ಮನ
ಮುಟ್ಟಿ ಶ್ರೀಗುರುಪದ ದೃಷ್ಟಿಯೊಳಿಟ್ಟಿರೇ ||2||
ರೋಷದವನೆಂದರೇನು ಪಾಪದ ರಾಸಿಯವನೆಂದರೇನು
ಹೇನೆಯಂದರೇನು ಇವ ಪರದೇಶಿಯಂದರೇನು
ಕೂಸಿನ ಪರಿ ಉಲ್ಲಾಸದಿ ಗುರುವಿನ
ದಾಸನಾಗಿ ಮನ ಸೂಸದಲಿರುತಿರೇ ||3||
ವಂದನಿ ಮಾಡಿದರೇನು ಸಕಲರು ನಿಂದಗಳಾಡಿದರೇನು
ಕುಂದುಗಳ್ಹೊರಸಿದರೇನು ಕುಟಿಲದಿ
ಬಂದು ಸಂಹರಸಿದರೇನು
ದ್ವಂದವಳಿದು ಮನ ಕುಂದದೆ ಅನುದಿನ ||4||
ಚಂದದಿ ಗುರು ಪಾದ ಹೊಂದಿಕೊಂಡಿರುತಿರೆ
ಜ್ಞಾನಿಯಂದರೇನು ಯಿವ ಬಲು ದೀನನೆಂದರೇನು
ಸ್ವಾನುಭಾವದಿ ತನ್ನ ತಾನೆ ತಿಳಿದು ಮಹ
ದಾನಿ ಸಿದ್ಧನ ಪಾದ ಧ್ಯಾನದೊಳಿರುತಿರೆ ||5||
ಮಾಡುವವನು ಯಾರಣ್ಣ ಜಗದೊಳು ಮಾಡಿಸಿಕೊಂಬುವನ್ಯಾರಣ್ಣ
ಮಾಡವ ಮಾಡಿಸಿಕೊಂಬುವನೊಬ್ಬ ಕಾಡಸಿದ್ದ ತಾ ಮುಕ್ಕಣ್ಣ ||ಪ||
ಆಡುವ ಹಾಡವ ನೋಡವ ತಾನೇ
ಬೇಡವ ನೀಡವನಾಗಿ ನಿಂತಾನೆ
ಕೂಡಿ ಕಡಿ ಬಡದಾಡವ ತಾನೇ
ಗಾಡಿಕಾರ ಯಿಂತ ಆಡಮಾಡ್ಯಾನೇ ||1||
ಹೆಣ್ಣು ಗಂಡು ಆಗಿರುವವ ತಾನೇ
ಸಣ್ಣದು ದೊಡ್ಡದರಲ್ಲಿ ಹಾನೇ
ಕಣ್ಣಿಗಿ ಕಾಣುವಷ್ಟು ತಾನೇ
ಬಣ್ಣ ನೀರೊಳು ಬ್ಯರದಂತ್ಹಾನೇ ||2||
ಯಲ್ಲರೊಳ ಹೊರಗಿದ್ದವ ತಾನೇ
ಅಲ್ಲ ಅಹುದು ಯಂಬುತಲಾನೇ
ಹಲ್ಲವ ಒಳ್ಳೆವ ಆದವನವನೇ
ಬಲ್ಲಿದ ಶಿದ್ಧನೆನಸಿ ಕೊಂಡ್ಹಾನೇ ||3||
ಮಾಡಬಾರದದು ಮಾಡಿದಿ ಜಗದೊಳು
ಕೂಡಿಕೊಂಬರೆ ಕುಲಯಿದ್ದವರು
ಗಾಡಿಕಾರ ಶಿದ್ಧಯಿವನೆಂದರಿಯದೆ
ನೋಡಿ ಹಾಸ್ಯ ಮಾಡಿ ನಗಹುವರು ||ಪ||
ವೇಶ ಕಾಣುತ ಪರದೇಶಿಗಿ ಮಿಗಿಲೆಂದು
ದಾಸರಾಗಿದ್ದರು ಬಹು ಜನರು
ಹೇಸಿಕಿ ಮಲತ್ರಯದಾಸಿಗಿ ತೊಡಕಲು
ದೂಷಣ ಮಾಡಿ ನುಡಿಹುವರು ||1||
ಗಂಡ ಸತ್ತ ರಂಡಮುಂಡಿನ ಕೂಡಿ
ಗಂಡು ಹೆಣ್ಣು ಮಕ್ಕಳ ಹಡಿಯುವರು
ಭಂಡಾಯಿತು ಭೂಮಂಡಲದೊಳು ಜನರು
ಹೆಂಡಿಲಿ ಹೊಡಿಯದೆ ಬಡಿಹುವರೇ ||2||
ಸಿದ್ಧನೀ ಮಾಡುವ ವಿಪರೀತ ತಿಳಿದರೆ
ಬುದ್ಧೀ ಹೀನ ಭೂತ ಪ್ರಾಣಿಗಳು
ಗುದ್ಯಾಟಕ ಗುರಿ ಮಾಡಿದಿ ಯಮಪುರ
ಸುದ್ದಿಯ ಬಲ್ಲರೆ ಮರಳುಗಳು ||3||
ಮನವೆ ನೀ ಮಾಡೊ ಗುರುಧ್ಯಾನ ಪ್ರೇಮ
ಅನುದಿನ ತುಂಬಿ ತುಂಬಿ ಬರಲದೆ ಖೂನ ||ಪ||
ಗುರುಪಾದ ಸೇವಕದಲ್ಲಿ ಭಕ್ತಿ ಪರನಾಗಿ
ಗುರು ವಾಕ್ಯ ನಿನ್ನ ಕಿವಿಯಲ್ಲಿ
ಪರಮ ಹರುಷ ಮನದಲ್ಲಿ ಮುಕ್ತಿ
ಪುರದರಸು ಗುರುವೆಂಬ ಏಕೊ ಭಾವದಲ್ಲಿ ||1||
ಲಿಂಗನಿಷ್ಟಾಪರನಾಗಿ ಗುರುಲಿಂಗ
ಜಂಗಮದಂಘ್ರಿ ಕಂಡು ಶಿರ ಬಾಗಿ
ಹಿಂಗಾದ ವಿರಳ ಸುಖಭೋಗಿ ಗುರು
ಸಂಗನೊಳ್ ಸಮರಸ ಬೆರಿದು ವಂದಗಿ ||2||
ಜಂಗಮ ದಾಸೋಹ ಮಾಡಿ ಬಹಿ
ರಂಗಾದ ಗುಣಗಳು ಎಲ್ಲ ವಿಡ್ಯಾಡಿ
ಸಂಗನ ಶರಣರ ಕೂಡಿ ಸಿದ್ಧ
ಲಿಂಗ ಜಂಗಮನಂಘ್ರಿ ಬಿಡದೆ ಕೊಂಡಾಗಿ ||3||
ಮೊದಲೆ ನಿರಾಶಿ ನೀ ಪರದೇಶಿ ಭಿಕ್ಷಾಹಾರಿಯಾಗಿರಬೇಕು
ಬದಿಲಿರ್ದವರಿಗೆ ಸಿಲುಕದೆ ಬಯಲಿಗಿ ನಿರ್ಭಯಲಾಗಿ ಹೋಗಲಿಬೇಕು ||ಪ||
ದಾಸರಿಗ್ಯಾತಕ ಆಶಿಯ ಸಂಸಾರ
ದ್ಯಾಸ ಗುರುವಿನಲ್ಲಿರಬೇಕು
ಮೀಸಲಮನ ಉಲ್ಲಾಸದಿ ಲಿಂಗಕ
ಹಾಸಿಕಿ ಮಾಡಿ ಕುಡಬೇಕು ||1||
ಮಾನಪಮಾನ ಅಜ್ಞಾನಿಗೆ ಉಂಟೆ
ತಾನೆ ತಾನಾಗಿರಬೇಕು ಮಾನವ
ಜನ್ಮಕ ಬಂದರ ಭಕ್ತಿ
ಜ್ಞಾನ ವೈರಾಗ್ಯವ ತೊಡಬೇಕು ||2||
ಶರಣರ ಸಂಗ ಶಿದ್ಧ ಅಂತರಂಗ
ಚರಣ ಸ್ಮರಣಿ ಬಿಡದಿರಬೇಕು
ಧರಣಿವಳಗ ಜನರೊಪ್ಪದ ನಡಿ ನುಡಿ
ಗುರುವಿಗಿ ಒಪ್ಪಾಗಿರಬೇಕು ||3||
ಮಾಡುವವನು ನೀನೆ ಸಿದ್ಧ ಮಾಡ್ಸಿಕೊಂಬುವ ನೀನೆ
ನಾಡಿನೊಳನುದಿನ ಚರಿಸುತ ಮನಿ ಮನಿ
ಬೇಡುವ ನೀಡುವ ಉಂಬವ ನೀನೆ ||ಪ||
ಪಿಂಡ ಬ್ರಹ್ಮಾಂಡ ನೀನೆ ಅಖಂಡ ಖಂಡಿತದವ ನೀನೆ
ಮಂಡಲದೊಳು ಮಾರ್ತಂಡ ಶಿರೊ ಮಣಿ
ಗಂಡು ಹೆಣ್ಣು ಷಂಡನಾದವ ನೀನೆ ||1||
ಪಂಚತತ್ವವು ನೀನೆ ಸಕಲ ಪ್ರಪಂಚನಾದವ ನೀನೆ
ಪಂಚಾಕ್ಷರದ ಮೂಲವ ನೀನೆ
ಸಂಚಿತ ಪ್ರಾರಬ್ಧಾಗಮಿ ನೀನೆ ||2||
ಅರಿವು ಮರವು ನೀನೆ ಶಿಷ್ಯ ಗುರುವು ಆದವ
ಪರಕೆ ಪರ ವಸ್ತು ಸಿದ್ಧನು ನೀನೆ
ವರ ಭಕ್ತಿ ಜ್ಞಾನ ವೈರಾಗ್ಯವು ನೀನೆ ||3||
ಯಾರಿಂದಾಗದು ಯಿಂತಾದು ನಮ್ಮ
ಗುರು ಸಿದ್ಧಲಿಂಗ ಮಾಡಿದಂತಾದು
ಸೇರದು ಮಾಯಿ ಜೀವದಂತಾದು
ಜನರ ಘೊರಿಸಿ ಮುರಿದು ನುಂಗುವಂತಾದು ||ಪ||
ಹಿಂದ ಮುಂದ ಯಾರು ಇಲ್ಲದ್ಹಾಂಗೆ ಭವ
ಬಂಧನ ಪರಿಹರಿಸಿದ ಬ್ಯಾಗೆ
ವಂದು ಸಂಶ ಉಳಿವಲ್ಲದ್ಹಾಂಗೆ ಗುರು
ಬಂದು ಮಾಡಿದ ಯನಗಿದರ್ಹಾಂಗೆ ||1||
ಕುಲ ಛಲ ಸ್ಥಲ ಯಸ ಕಸಕೊಂಡ ಯಲ್ಲ
ಕುಲದಲ್ಲಿ ಯನ್ನ ಕೂಡಿಕೊಂಡು ಉಂಡ
ಬಲಯಿತ್ತು ಬಹಳ ಆಶಿ ಶಳದುಕೊಂಡ ಭವಿ
ಕುಲ ಕಳದು ಮಾಡಿಬಿಟ್ಟ ಮಂತ್ರ ಪಿಂಡ ||2||
ಜೋಳಿಗಿ ದಂಡಕೋಲು ತಂದು ಕೊಟ್ಟ ಭಿಕ್ಷಾ
ಹಾರಕ ತನ್ನ ವೇಶ ಹಾಕಿ ಬಿಟ್ಟ
ಹೋಳಿಗಿ ಮಾಡಿದವರ ಹೊಸ್ತಿಲ ಮೆಚ್ಚ ಮುಡಿ
ಜೋಳದಂಬಲಿ ಉಂಡು ಆಶೀರ್ವಾದ ಕೊಟ್ಟ ||3||
ಅಷ್ಟ ದಿಕ್ಕು ಚರಿಸುತ್ತ ಬರುವ ಮನ
ಮುಟ್ಟಿ ಪೂಜಿಸಿದವರಲ್ಲಿರುವ
ಯಿಷ್ಟ ಪ್ರಾಣ ಭಾವದಿ ಬೆರಿವ ಅವರ
ಕಷ್ಟ ಕಳಿದು ಅಮೃತ ಸುರಿವ ||4||
ಸೊಕ್ಕಿದವರ ಸೊಕ್ಕಲಿಕ್ಕಿ ಬಿಡುವ ಯಾರು
ದಿಕ್ಕಿಲ್ಲದವರಿಗಾಶ್ರಯ ಕುಡುವ
ಚಿಕ್ಕ ಬಸವನ ಕೋಡಿ ಸಿದ್ಧ ಮೆರಿವ ದಶ
ದಿಕ್ಕಿನೊಳ ತುಂಬಿ ತುಳುಕಿ ಆಚಕಿರುವಾ ||5||
ಯಾವ ಚಿಂತಿ ನಮಗೇತಕ ದೇವರು ತಾನೆ ಸಲಹುವನಿರಲಿಕ್ಕೆ
ಯಾವ ಕಾಲದಲಿ ಸೇವಕ ಜನರಿಗೆ| ಪಾವನ್ನ ಪದರಲ್ಲಿಡಲಿಕ್ಕೆ ||ಪ||
ತಂದನು ತನ್ನ ಲೀಲೆಗೆ ಜಗದೊಳು
ಛಂದದಿಂದ ಸೇವ ಕೊಳಲಿಕ್ಕೆ
ಸಂದೇಹವೇತಕ ಸದ್ಗುರುವಿನ ಪಾದ
ವಂದನಿಯೊಳು ಮನಸಿರಲಿಕ್ಕೆ ||1||
ದಾರಿಗ್ಯಾತಕ ಆಶಿಯ ಸಂಸಾರ
ಘಾಸಿ ಘಾಸಿಯಂದು ತಿಳಿಯಲಿಕೆ
ಮೀಸಲ ಮನದಲಿ ಈಶನ ಭಜಿಸುವ
ಕೂಸಿನ್ಹಂಗ ಇರುತಿರಲಿಕ್ಕೆ ||2||
ನರಜನ್ಮಕ ಗುರುವಾಗಿ ಬಂದು ಶಿದ್ಧ
ಶಿರದ ಮೇಲ ಕರವಿಡಲಿಕ್ಕೆ
ಪರವಶವಾಯಿತು ಅರಿವಿನ ನಿಜ ಸುಖ
ಕರಮನ ಭಾವದಿ ಬೆಳಗಲಿಕೆ ||3||
ಯಾರ ಗೊಡವಿ ನಮಗೇನಾದ
ಗುರು ಧ್ಯಾನದೊಳಗ ಬಹುಮಾನಾದ
ಪರಮ ಜ್ಞಾನ ಸಂಪೂರ್ಣಾದ
ಪರಮಾತ್ಮನ ದಯ ನಮ್ಮ ಮೇಲಾದ ||ಪ||
ನರರ ಆಶಿ ನಮಗೇನಾದ
ಗುರು ಕೊಟ್ಟ ಜೋಳಿಗಿಯಲ್ಲಿ ಪರುಷಾದ
ಹರುಷಾಬ್ದಿಯೊಳು ಮನ ಮುಳುಗ್ಯಾದ
ಹರಹರಾಯಂಬ ಶಬ್ದವಳಗಾದ ||1||
ಸುಖ ದುಃಖ ಸಮರಸ ವಂದೆಯಾದ ನಿಜ
ಸುಖವೆಂಬೋ ನಿದ್ರಿ ಹತ್ತಿಯಚ್ಚರಾದ
ಶಿಖಾಮಣಿ ಯಂಬುವಂತ ದೇವರಾದ ಇಚ್ಛ
ಬೇಕಾದಷ್ಟು ಪದವಿ ನಿತ್ಯ ಕುಡುತಲಾದ ||2||
ಜನನ ಮರಣ ಭಯ ತಪ್ಯಾದ ಮಿಥ್ಯ
ತನುಮನ ಧನ ಸಿದ್ದಗೊಪ್ಪ್ಯದ
ಘನ ಗುರುವಿನ ಮಂತ್ರ ನೆನಪಾದ
ತನ್ನ ತಾನೆ ಅರಿತು ತಾ ಗೌಪ್ಯದ ||3||
ಯಾರ್ಹೋದರೇನೊಯಿದರು ಶಿವಶಿವ
ಯಾರ್ಬಂದರೇನು ತಂದರು ಹರ ಹರ
ಗುರುಸಿದ್ಧ ಸಾರತಿಯಾಗಿರಲಿಕ್ಕೆ
ಯಾರಾಸಿ ನಮಗಿಲ್ಲವೋ ||ಪ||
ಹುಟ್ಟಿಸಿದಲ್ಲಿಯು ಹುಟ್ಟಿದೆ ಕರುಣಿಸಿ
ಕೊಟ್ಟಿದ್ದು ಅನುಭವಿಸಿದೆ
ಅಷ್ಟಿವರ್ಣದ ನೆಲಿಯ ಎಷ್ಟು ತಿಳಿಸಿದ ನಷ್ಟು
ಘಟ್ಟಿಗೊಂಡಿತ್ತು ಮನಸಿಗೆ ||1||
ನಡಸಿದರ ನಡೆಯುತಿರ್ದೆ ಜಿಹ್ವದಲಿ
ನುಡಿಸಿದರ ನುಡಿಯುತಿರ್ದೆ
ಹಿಡಿದ ಪದವನು ತಿರಿಗಿ ಹಿಂದಕ್ಕೆ
ನೋಡದೆ ಒಡಿಯರನ ಭಜಿಸುತಿರ್ದೆ ||2||
ಶಿದ್ಧಾಗಿ ಇರುತಿರ್ದೆನು ತ್ರಿಕರಣ
ಶುದ್ಧ ಪದರಿಗೆ ಬಿದ್ದೆನು
ಮುದ್ದು ಬಸವನ ಯೆರಿ ಮೆರೆವ
ಶ್ರೀಗುರು ಸಿದ್ಧನಗಲದೆ ಇರುತಿರ್ದೆನೂ ||3||
ಯಾರಿಂದೇನಾಗುವದಿಲ್ಲ ನಮ್ಮ
ಗುರುಶಿದ್ಧ ಮಾಡಿದ್ದಾಗುವುದಲ್ಲಾ
ವೀರ ಮಹೇಶ್ವರ ತಾ ಬಲ್ಲ
ಭಾವಭಾರಿಗೆ ತಿಳಿಯದು ಜ್ಞಾನವಿಲ್ಲ ||ಪ||
ಸೃಷ್ಟಿ ಮಾರಕ ತಾನಾಧಿಕಾರಿ ಬ್ರಹ್ಮ
ವಿಷ್ಟು ರುದ್ರಗ ನಿಮಿತ್ಯ ತೋರಿ
ಅಷ್ಟು ಪ್ರಾಣಿಗಳಿಗೆ ಶಿವ ಸೂತ್ರಧಾರಿ ಜನ್ಮ
ನಷ್ಟ ಮಾಡೋತನಕ ಕುಣಿಸುವ ಪರೋಪರಿ ||1||
ಉತ್ತಮ ಮಧ್ಯಮ ಕನಿಷ್ಟನೆನಿಸಿ ಜೀವ
ಆತ್ಮನಲ್ಲಿ ತಾನೆ ಹೊಕ್ಕೂ ಜ್ಞಾನ ತಿಳಿಸಿ
ಮಹತ್ವ ತೋರಿದ ಜಗದೊಳು ಬೆರಸಿ
ಪರಮಾತ್ಮನೊಬ್ಬನೆ ಬ್ಯಾರೆ ಬ್ಯಾರೆಯೆನಿಸಿ ||2||
ತನ್ನ ಲೀಲೆಗೆ ತಾನೆ ಆಟ ಮಾಡಿ ಸಿದ್ಧ
ಚನ್ನಾಗಿ ಪ್ರಮಥರ ವಡಗೂಡಿ
ಉನ್ನತವಾದ ಮಾಯಿ ಕುಣಿಸ್ಯಾಡಿ ಬಸವನ
ಬೆನ್ನು ಹತ್ತಿ ಹೋದ ಬಯಲಿಗೆ ಬಯಲು ಕೂಡಿ ||3||
ಯಾತರ ಬಿಡೆಯ ನಿಮ್ಮೊಳು ಘನ
ಘಾತಕ ತನ ಮಾಳ್ವ ಪಾತಕರೊಳು ||ಪ||
ಸತ್ಯ ಶರಣರ ಮುನಿಯ ದ್ವಾರ ಕಾಯುವ
ತೊತ್ತಿನ ಮಗನಿಗೆ ಯಾತರುಪಕಾರ
ಹೆತ್ತವರ ಖೂನ ಅರಿಯ ಪೋರ ನಿತ್ಯ
ಬರುವದು ತರವಲ್ಲ ಮೇಲುಪಚಾರ ||1||
ಮಾಯ ಸಂಬಂಧಿಗಳೆಲ್ಲ ಅನ್ಯಾಯ ಮಾಳ್ವದು ಕೇಳಿ ನಾ ಬಲ್ಲ
ಬಾಯಿ ಬಡಕತನ ಬಿಡಲಿಲ್ಲ ಗುರು
ರಾಯ ಮೆಚ್ಚನು ನಿಮ್ಮ ಸಂಗುತಿಸಲ್ಲ ||2||
ಮಂದಿ ಮಕ್ಕಳ ಪರವಿಲ್ಲ ದೇಹ
ಕಂದಿ ಹೋದರ ತನ್ನ ಖಬರು ತನಗಿಲ್ಲ
ಯೆಂದಿಗಿದ್ದರ ನಿಮ್ಮವರಲ್ಲ ಗುರು
ತಂದಿ ಸಿದ್ಧನ ಪಾದ ಹೊಂದಿರುವೆವಲ್ಲಾ ||3||
ಯಾರಿಗೆ ದೊರಕದು ಯಿಂತಾದು
ಮನಸೂರ್ಯ ಮಾಡಿ ಗುರುವಿಗ್ಹೊಂದುವಂತಾದು
ಮೀರಿದ ಸ್ಥಲವಿದು ಯಂತಾದು ಬಸವ
ಏರಿ ನೋಡಿದ ಕೈಗೆ ಬಂತಾದು ||ಪ||
ತನ್ನ ತಾ ತಿಳಿದವರಿಗೆರಡಿಲ್ಲ ನಾನು
ನನ್ನದೆಂಬುವ ಗುರುಪುತ್ರನಲ್ಲಾ
ಭಿನ್ನವಿಟ್ಟು ನೋಡಿವದ್ಹೊಲ್ಲ ವಿಧಿ
ಚೆನ್ಹತ್ತಿ ಕಾಡಿತು ಬಿಡದಲ್ಲ ||1||
ಅದಕಾಗಿ ಹುಟ್ಟಿ ಬಂದಿರಬೇಕು ಅವ
ಯದಕ ಅಂಜೆನು ಧೈರ್ಯವಂದೆ ಸಾಕು
ಮುದುಕರಾದರು ಹುಟ್ಟಿ ಅವರು ಸಾಕು ಬಾಳ್ವೆ
ಬದಕು ಮಾಡಿ ಸತ್ತಂತವರು ಅನೇಕರು ||2||
ಶಿದ್ಧ ಶುದ್ಧ ಪ್ರಸಿದ್ಧ ತಾನು ಮಾಯಿನ
ಗೆದ್ದನಲ್ಲದೆ ಮತ್ತೊಬ್ಹಾನೇನೂ
ಬುದ್ಧಿವಂತರು ತಿಳಕೊಳ್ಳರೇನು ಆಶ
ಬದ್ಧರಾದ ಮೇಲೆ ಯಮ ಬಿಡುವನೇನೂ ||3||
ಯಾರು ಮಾಡಿದರ ಅವರುಂಡರು ಫಲ
ದೂರಿಲ್ಲ ಸುಖದುಃಖ ಸಮೀಪ ಕಂಡಾರು ||ಪ||
ಪುಣ್ಯ ಪಾಪ ಎರಡು ರೂಪಾಗಿ ಅವರ
ಬೆನ್ಹತ್ತಿ ಅನುದಿನ ಇರುತಿರ್ಪವಾಗಿ
ಇನ್ಯಾರು ಬಿಡಿಸುವರು ಹೋಗಿ ಯಮ
ಚೆನ್ನಾಗಿ ಉಣಿಸುವ ಪುಣ್ಯಪಾಪ ತೂಗಿ ||1||
ಪಾಪ ರೂಪಕ ತಾಪ ಬಹಳ ಅತಿ
ಕೋಪಕಲಾ ಪಾದಿಯಿರುವರು ಕೇಳಾ
ತಾಪತ್ರ ಬಹು ಜನ್ಮಗಳ ಕೆಟ್ಟ
ಆಪತ್ತು ಅತ್ತತ್ತು ಸಾಯಿವರು ನಾಳ ||2||
ಪುಣ್ಯ ರೂಪಕ ಪೂರ್ಣ ಜ್ಞಾನ ಭಕ್ತಿ
ಚನ್ನಾಗಿ ಮಾಳ್ಪರು ನಿತ್ಯ ಶಿವ ಧ್ಯಾನ
ಉನ್ನತ ಸುಖ ಸಾವಧಾನ ಅವರ
ಬೆನ್ಹತ್ತಿ ಗುರು ಸಿದ್ಧಲಿಂಗ ಇರುತಾನ ||3||
ಯಾರ ಸ್ವತಂತ್ರ ಯಿನಿತಿಲ್ಲ ಬಿಂಕ ಬೀರುತಾರ ಸುಳ್ಳೆ ಜಗವೆಲ್ಲಾ
ಘೋರ ದುಃಖದಿ ಮುಳುಗಿದರಲ್ಲಾ ಪಥ ತೋರದು ಗುರು ಶಿದ್ಧಲಿಂಗ ಬಲ್ಲ ||ಪ||
ಗುರುವು ಸ್ವತಂತ್ರಿಕನೆಂದರಿದೆ ತಾವೆ
ಹೋಗುವರು ಹೆಮ್ಮೆ ನಡಿ ನುಡಿ ಬರಿದೆ
ಗರವು ಅಹಂಕಾರ ಹೆಚ್ಚಿ ಏನು ಅರಿದೆ ಯಮನ
ಗುರಿಯಾ ಹೋದರೆಲ್ಲ ಆಶಿ ಹರಿದೆ ||1||
ಜ್ಞಾನ ಕ್ರಿಯದ ನೆಲಿ ತಿಳಿಲಿಲ್ಲ ಅ
ಜ್ಞಾನಿಗಳಿವರು ಕಂಡು ಮಾಳ್ಪರಲ್ಲಾ
ಸ್ವಾನುಭಾವದ ಸುಖ ದೊರಕಲಿಲ್ಲಾ ಭಕ್ತಿ
ಹೀನರಾಗಿ ವ್ಯರ್ಥ ಸತ್ತು ಹೋದರಲ್ಲಾ ||2||
ತಾನಾಗಿ ಶಿದ್ಧ ಭಕ್ತರ ಹೆಸರಿಡುವ ಭಕ್ತಿ
ಜ್ಞಾನ ವೈರಾಗ್ಯ ಮಾರ್ಗ ತೋರಿ ಕುಡುವ
ಖಾನೆ ತಾನಾಗಿ ನಲಿ ನಡಿದಾಡುವ ತನ್ನ
ಖೂನ ತೋರಿ ಬಯಲಿಗಿ ಬಯಲು ಮಾಡುವಾ ||3||
ಯಾತಕ ಶಿಕ್ಷ ಮಾಡುವದು|
ಗುರುನಾಥ ಮಾಡಿದಷ್ಟು ತಾನೆ ಆಗುವದು
ಜಾತಿ ಸ್ವಭಾವ ಬಿಡಗುಡದು
ಭೂತನಾಥ ನಿರ್ಮಿಸಿದಂತ ಗುಣ ಹೋಗಲರಿದೂ ||ಪ||
ಸುಜಾತರಾಗಿ ಬಂದವರು ಭಕ್ತಿ
ರಾಜದೊಳ್ ಮನಿ ಕಟ್ಟಿ ಸಂಸಾರ ಮಾಳ್ಪುವರು
ಸುಜನರ ಸಂಗದೊಳಿರುತಿಹರೊ ಲಿಂಗ
ಪೂಜೆ ಜಂಗಮಕ ದಾಸೋಹ ಮಾಡುವರು ||1||
ಆಡಿಜಾತರಾಗಿ ಬಂದವರು ಆಶಿ
ಹಿಡಿದು ಸಂಸಾರ ಮಾಡಿ ದುಃಖದೊಳಿಹರು
ನಡಿ ನುಡಿ ಶುದ್ಧಿಲ್ಲದವರು ನಿಂದಕ
ರೊಡಗೂಡಿ ಅನುದಿನ ಹೊತ್ತುಗಳಿಹುವರು ||2||
ಶಿದ್ಧಾಟ ಶಿವನಾಡಿಸಲ್ಕೆ ಇಲ್ಲಿ
ಬುದ್ಧಿ ಕಲಿಸುವರಾರು ಸುಳ್ಳೆ ಹೆಮ್ಮೆಕ್ಕೆ
ಬಿದ್ದು ಹೋದರು ಬಹು ಜನ್ಮಕ್ಕೆ ಪ್ರಮಥರ
ಸುದ್ದಿ ಸಿದ್ಧನೆ ಬಲ್ಲ ಅವರವರ ಮನಕೆ ||3||
ಯಾತರ ಶೀಲವೆ ನಿಂದು ಮಲ
ಮೂತ್ರದೇಹ ನಿನ್ನೊಳಗ ದುರ್ಗಂಧ ||ಪ||
ಕಾಲ ಕರ್ಮದ ಮೂಲ ಮಾಯಿ ಭವ
ಔಲದೊಳಗ ಹಾಕಿ ಬಿಡಿಸುವಿ ಬಾಯಿ
ಶೂಲ ಜನರ ಯದಿಗಾಯಿ ಯಮನ
ಪಾಲ ಮಾಡಿ ಬಿಡವಿ ಪಾಪಾತ್ಮ ನಾಯಿ ||1||
ಘಾಸಿ ಹಗ್ಗವ ಹಿಡದಿದ್ದಿ ವಿಷಯ
ದಾಸಿ ಹಿರಿಯರನೆಲ್ಲ ಯಳಸ್ಯಾಡು ತಿದ್ದಿ
ಹೇಸಿಕೆಯೊಳು ಬಿದ್ದಿ ಎದ್ದಿ ಜೀವ
ಫಾಸಿ ಮಾಡಿ ಬಿಡುವಿ ಬಲ್ಲೆನಾ ಸುದ್ದಿ ||2||
ತರವಲ್ಲ ಬಿಡು ನಿನ್ನ ಸೋಗು ಭಕ್ತಿ
ಪರದಲ್ಲಿ ಶರಣರ ಕಂಡು ಶಿರ ಬಾಗು
ಧುರಿತ ಗುಣಗಳೆಲ್ಲ ನೀಗು ನಮ್ಮ
ಗುರುವರ ಸಿದ್ಧನ ಕೂಡಿ ವಂದಾಗು ||3||
ಯಾರಿಗಿ ಸ್ಥಿರವಿದು ಜಗದಲ್ಲಿ ನಮ್ಮನ
ದೂರಿಕೊಂಬುವರು ಬಹಳ ಪರಿಯಲ್ಲಿ
ನೂರಾರು ದುರ್ಗುಣ ತಮ್ಮಲ್ಲಿ ಬಿಂಕ
ಬೀರುತಾರ ವೇಶ ಬಲದಲ್ಲಿ ||ಪ||
ಮಾಯಿ ಬಲಿಗೆ ಮೀರಿದವರಂತೆ ಈ
ದೇಹವು ನಿರ್ವಯಲಾದಂತೆ
ಬಾಯಿ ಬ್ರಹ್ಮದ ನುಡಿಯಿದರಂತೆ ಹೊರಗ
ನ್ಯಾಯ ಪೇಳ್ವರು ತಮ್ಮಲಿಲ್ಲದಂತೆ ||1||
ಭಕ್ತಿ ಜ್ಞಾನ ವೈರಾಗ್ಯವಿಲ್ಲ ವಿ
ರಕ್ತಿ ಸ್ಥಲಕ ನಾವೆಯಂಬರಲ್ಲಾ
ಮುಕ್ತಿದಾಯಕ ಸಿದ್ಧನ ವಲಿಸಲಿಲ್ಲಾ ಕು
ಯುಕ್ತಿಯಲಿ ಬಹಳ ಸಮರ್ಥರೆಲ್ಲ ||2||
ಯಾರ ಗಮನ ನನಗೇನು ಶ್ರೀಗುರುವಿನ ಸೇವೆದೊಳಿರುವೆನು
ಪರಮಾನಂದದ ಸುಖವನು ಫಲ ದೊರಕಿತು ಅನುದಿನ ಕೊಳುವೆನು ||ಪ||
ಗುರುವಿನ ಬಿರುದು ಯಂತಾದು ಮಿಗಿ
ಮೀರಿದವರ ಹಲ್ಲು ಮುರಿವಂತಾದು
ಗರವು ಪರಿಹಾರ ಮಾಡುವಂತದು
ಮೂರು ಪುರಸುಟ್ಟು ಬೂದಿ ಮಾಡಿದಂತಾದು ||1||
ಗುರುವಿನ ಬಲ ನಮಗಿರಲಿಕ್ಕೆ ಈ
ನರಗುರಿಗಳಿಗಂಜುವದ್ಯಾಕೆ
ಅರಿವಿನ ಆಯುಧ ಹಿಡಿಯಲಿಕೆ ಮಾಯ
ಮರವಿಗಳಿಗೆ ಹಿಂದಕ ಸರಿಯಲ್ಯಾಕೆ ||2||
ನಡಿ ನುಡಿ ವಂದಾಚರಿಸುವೆನು ಶಿದ್ಧ
ನಡಿ ಹಿಡಿದನುದಿನ ಭಜಿಸುವೆನು
ಬಡಿವರ ಯೆಂದಿಗಿ ಕಾಣೆನು ಭಕ್ತಿ
ಹಿಡಿದು ಬಂದದ್ದು ಬಿಡಲರಿಯೆನು ||3||
ಯಾರ ಮನಿಯಿದು ಯಾರ ಸಂಸರ
ಯಾರ ದೇಹ ಅಸ್ತಿರವು ಯಲ್ಲಾ
ಮಾರಹರ ಮಹಾ ಗುರುವಿನ ಪಾದಕ
ಮೂರು ವಪ್ಪಿಸಿ ಮುಕ್ತಿ ಪಡಿಯಲಾ ||ಪ||
ಹಿಂದ ಜನ್ಮ ಯಣಿಕಿಲ್ಲ ಎತ್ತುತಲಿ
ಬಂದಿ ತಂದರಿಲ್ಲಿಗಿ ಯಾರು ಯಲಾ
ಮುಂದುಗಾಣದೆ ಮೂರಾರು ಬಳಸಿ ನಮ್ಮ
ತಂದಿ ಶಾಂತಲಿಂಗನ ಮರದಿಯಲ್ಲಾ ||1||
ಸತಿ ಸುತ ತನು ಧನ ಮಿತಿವಿಲ್ಲದ ಪದವಿ
ನಿತು ಕೊಟ್ಟವರು ಯಾರು ಯಲ್ಲಾ
ಮತಿ ಮಸಣಿಸಿ ಮಾಯ ಮಮತೆಯೊಳ್ಮ
ರತು ನೀ ಗತಿ ಹೊಂದುವ ಪರಿ ಹ್ಯಾಂಗೊಯಲ್ಲಾ ||2||
ಹಿಂದ ಮುಂದ ಯಚ್ಚರಿಟ್ಟು ನೋಡ ಗುರು
ಬಂದು ಪೇಳಿದ ವಾಕ್ಯಯಲ್ಲಾ
ಬಂಧನ ಭವದುಃಖವೆಂದು ತಿಳಿದು ಶಿದ್ಧನ
ಹೊಂದಿಕೊಂಡು ಜನ್ಮ ನೀಗೆಯಲೊ ||3||
ಯಾರ ಕೈಯೊಳಗೇನುಯಿಲ್ಲ ಗುರು ಮೂರು ಲೋಕ ತಾನೆ ಕುಣಸ್ಯಾಡಬಲ್ಲ
ತೋರಿಸಿಕೊಳುವಾತನಲ್ಲ ಶೃತಿ ಸಾರುತದ ಹಿಂಗ ಭಕ್ತರ ಬಿಟ್ಟಿಲ್ಲ ||ಪ||
ಆತ ಮಾಡಿದ್ದೆ ಆಗುವದು ಸುಳ್ಳೆ
ಯಾತಕ್ಕೆ ಸಂಕಲ್ಪ ಹಂಚಿಕೊಂಬುವದು
ನೀತಿ ವಚನಾರ್ಥ ಹಿಂಗಿಹುದು ತಾ
ಸೋತಲ್ಲಿ ತನಗಷ್ಟು ವಶವಾಗುತಿಹುದು ||1||
ದುರಭಿಮಾನವದು ಬೇಡ ಎಚ್ಚರ
ಮರಿಯದೆ ಗುರುಪಾದ ಹೊಂದುವದು ಪಾಡ
ಪರಮ ಹರುಷವೆ ನಿನ್ನ ಜೋಡ ಮಾಯಾ
ಮರವಿಗಳೊಡಗೂಡಿ ಕಡದಾಡ ಬೇಡ ||2||
ಮನಸಾಕ್ಷಿಯಾಗಿ ನಡಿಯಲಿಕ್ಕೆ ಮಹ
ಘನವಸ್ತು ಗುರುಸಿದ್ಧ ಸಾರಥಿಯಾಗಲ್ಕೆ
ನಿನಗಾವ ಭಯ ಚಿಂತಿಸಲಿಕ್ಕೆ
ಶರಣರನುಗೂಡಿಯಿರು ಹೊಂದಿ ನಿಜ ಭಕ್ತಿ ಸ್ಥಲಕೆ ||3||
ಯಾರಿಲ್ಲದಂತೆ ಪರದೇಶಿ ಒಂದು
ಊರಿಲ್ಲ ಮನಿಯಿಲ್ಲ ಓರ್ವಸನ್ಯಾಸಿ
ಸೇರಾರು ಜನರು ಕಂಡ್ಹೇಸಿ ಮತ್ತಿ
ನ್ನಾರು ದೇವರೆ ಗತಿ ಮಾಡ ನರರಾಶಿ ||ಪ||
ಗುರುವೆ ನೀ ಗತಿಯೆಂದು ನಂಬಿ ಆಶಿ
ಹರಿದು ಹೊಂಟನು ಪರಮ ವೈರಾಗ್ಯ ತುಂಬಿ
ಶರಣರ ಮನಿಸೇವ ಸಿಂಬಿ ಚಿತ್ತ
ಪುರದಲ್ಲಿ ಇರುವಂತ ಅರಿವುಳ್ಳ ಬೊಂಬಿ ||1||
ಭಿಕ್ಷುಕನಾಗಿ ಸಕಲ ಒಂದೆಂದು ಕಂಡ
ಮೋಕ್ಷದ ಮಾರ್ಗ ಹಿಡಕೊಂಡ ನಿರಾ
ಪೇಕ್ಷಿಯಿಂದ ಬಂದ ಭೋಗ ಕೈಕೊಂಡ
ಎಲ್ಲಿದ್ದರೇನು ಶಿವಜ್ಞಾನಿ ಪ್ರಾಣ ||2||
ದೊಲ್ಲಬ ಗುರು ಶಿದ್ಧಲಿಂಗ ನಿಶಾನಿ
ಬಲ್ಲಿಟ್ಟುಕೊಂಡ ನಿಧಾನಿ ಜಗ
ದಲ್ಲೊಬ್ಬ ಸಂಗಯ್ಯ ಭಕ್ತರಭಿಮಾನಿ ||3||
ಶ್ರೀ ಗುರು ಬಸವಲಿಂಗಾಯ ನಮಃ
ಆ ಸ್ಥಲದ ಪದಂಗಳು
ಆಗೋದೆ ಆಗುವುದಲ್ಲ
ತನಗಾಗುವಲ್ಲದು ಆಗುವದಿಲ್ಲಾ
ಯೋಗಿ ಸಿದ್ಧ ಮಾಡಿದುದೆಲ್ಲ ದೇಹ
ಭೋಗದ ಸುಖ ದುಃಖ ಬಿಡದಲ್ಲಾ ||ಪ||
ದೇಹ ತಾಳಿ ಬಂದವರೆಲ್ಲ ಗುರು
ರಾಯನ್ನಾಗಿ ಮೀರಿ ನಡದಿಲ್ಲ
ಮಾಹರಾಯ ಪ್ರಮಥರಿಗೆ ಬಿಟ್ಟಿಲ್ಲಾ ||1||
ಅಂತಂತವರಿಗೆ ನಿಲಕಿಲ್ಲ ಖಾಲೆ
ಭ್ರಾಂತಿ ಬಸವ ಹಚ್ಚಿಕೊಳ್ಳಲಿಲ್ಲ
ಸಂತೋಷದ ಮಳಿ ಗರಿತಲ್ಲಾ
ನಿಶ್ಚಿಂತ ನಿಜ ಸುಖಿ ಭಯವಿಲ್ಲ ||2||
ಅಂಜಿಕೊಂಡರೇನಾಗುವದು ಮಾಯ
ರಂಜನಿ ಜಗ ಮುಳಿಗ್ಹೋಗುವದು
ಬಂಜಿಯ ಮಗವಂದುಳಿದಿಹುದು
ನಿರಂಜನ ಶಿದ್ಧನೆನಿಸುವದೂ ||3||
ಶರಣರ ದಿವಟಿಗಿ ಹಿಡಿಯಣ್ಣ ಗುರು
ಚರಣಕ ಹೋಗುವ ನಡಿಯಣ್ಣ
ಕರುಣಾಮೃತ ರಸ ಕುಡಿಯಣ್ಣ ಶಿವ
ಸ್ಮರಣೆಯಿಂದ ಭವ ಕಡಿಯಣ್ಣ ||ಪ||
ಕಾಯವೆ ಕೈಕೋಲು ಚಿತ್ತಣ್ಣ ಮೋಹ
ಮಾಯವೆ ಸುತ್ತಿದ ಪೊತ್ತಣ್ಣ
ಛಾಯವೆ ಚಂದ್ರಜೊತಿ ಮೊತ್ತಣ್ಣ ಪ್ರಭು
ರಾಯ ಪರಂಜೋತಿ ಗೊತ್ತಣ್ಣ ||1||
ಬೆಳಗಿನೊಳಗ ಸುಳಿದಾಡಣ್ಣ ನಿ
ನ್ನೊಳ ಹೊರಗೊಂದೆಯಿಟ್ಟು ನೋಡಣ್ಣ
ಸುಳಿ ಮೂರು ದಾಟಿ ಪ್ರಮಥರ ಕೂಡಣ್ಣ ಭಕ್ತಿ
ಬೆಳಿ ಮಾಡಿ ವಿರಕ್ತ ಗುಣ ನೀಡಣ್ಣ ||2||
ಇಹ ಪರ ಸುಖ ದುಃಖ ನೀಗಣ್ಣ ಗುರು
ರಾಯ ಸಿದ್ಧಗ ಶರಣಗ್ಹೋಗಣ್ಣ
ನ್ಯಾಯವೆ ನಿಜ ಮುಕ್ತಿ ಯೋಗಣ್ಣ
ನಿರ್ಮಾಯ ಬಸವಯೆಂದು ಕೂಗಣ್ಣ ||3||
ಶ್ರೀಗಂಧದಲ್ಲಿಹುದು ಸುಗಂಧ ಶ್ರೀಗುರುವಿಗೆ
ಬೇಕಾದುದು ಪ್ರೀತಿ ಆನಂದ ||ಪ||
ಸುಮ್ಮನೆ ಬೇಡಿದರ ಕುಡಲರಿದು ಪ್ರೀತಿ
ಯಮನಂತ ಪಾಶಣಕ ಹಾಕಿ ತಿಕ್ಕುವದು
ಒಮ್ಮನ ಸೋಸಿ ಉಕ್ಕುವದು ಪರ
ಬ್ರಹ್ಮ ಸಿದ್ದೇಶ್ವರಗ ನಿತ್ಯ ಬೇಕಿಹುದು ||1||
ಅರದರ ಅರಸಿಕೊಂಬುವದು ತನ್ನ
ಕೊರದರ ಬಹುಪರಿ ಕೊರಸಿಕೊಂಬುವದು
ಉರಿಯಲ್ಲಿ ಸುಡಸಿಕೊಂಬುವದು ಮೂರು
ತೆರದಲ್ಲಿ ಸದ್ಗಂಥ ವಂದೆ ತೋರುವದು ||2||
ಜ್ಞಾನ ಉಳ್ಳವರಿದರಂತೆ ಅ
ಜ್ಞಾನಿಯಾದವ ದೊಡ್ಡ ಕರಗಸಿನಂತೆ
ಖೂನವಿಲ್ಲದ ಕೊರಿವನಂತೆ ಶಿದ್ಧ
ತಾನಾದ ಬಸವಗ ನೊವಿಲ್ಲವಂತೆ ||3||
ಸಿದ್ಧರಾಮ ನಾಮಾ| ಮುದ್ದು ಬಸವಗ ಪ್ರೇಮಾ|
ರುದ್ಧಾತ್ಮ ಗಣಸ್ತೋಮ| ಭಜನಿ ಉದ್ಯೋಗವರ ನೇಮಾ ||ಪ||
ಮನವಪ್ಪಿ ಮಾಡುವರು| ವನಗೂಡಿ ಹಾಡುವರು
ಘನಸುಖ ಬೇಡುವರು| ಶಿವಾನುಭಾವದಿ ಕೂಡವರೂ ||1||
ಗುರುವಚನಾಮೃತಾ| ಸ್ಥಿರಕಾಲ ಸೇವಿಸುತ್ತಾ
ಹರನಾಮ ಜಪಿಸುತಾ| ಭಕ್ತಿ ಪರರಾಗಿ ಭಜಿಸುತಾ ||2||
ಆಶಿರಹಿತರಾಗಿ| ಸುಭಾಷಿಯಿಂದಲಿ ಕೂಗಿ
ಈಶ್ವರನ ಶರಣ್ಹೋಗಿ| ಪ್ರೇಮಾಸೂಸುತ ತಲೆ ಬಾಗಿ ||3||
ಅಷ್ಠಾವರ್ಣವ ಧರಿಸಿ| ದೃಷ್ಟಿ ಲಿಂಗದಿ ಬೆರಸಿ
ನಿಷ್ಟೆಯಿಂದಾಚರಿಸಿ| ಭವಗೆಟ್ಟುಹೋಯಿತು ಭಜಿಸಿ ಭಜಿಸಿ ||4||
ಸಿದ್ಧಯೆಂಬೊ ಕೂಸಾ| ಶಿವಭಕ್ತರಿಗವನ ಧ್ಯಾನಾ
ಯಿದ್ದ ತನುಮನಧನ| ವಪ್ಪಿಸಿಯಿದ್ದರು ಅನುದಿನಾ ||5||
ಸಿದ್ಧರಾಮರಾಮಾ ಸಿದ್ಧರಾಮೇಶ್ವರಾ
ಯಿದ್ದ ಸೊನ್ನಲಾಪುರ| ಮಾಡಿದ ಭಕ್ತಗುದ್ಧಾರ ||ಪ||
ಜಂಗಮ ಪಾದದಿಂದಾ| ಗಂಗಿ ಸ್ನಾನದಿಂದ
ಲಿಂಗ ದರುಶನದಿಂದಾ| ನಿರ್ಮಲ ಅಂಗ ಮಾಡಿದ ಛಂದಾ ||1||
ದಾನ ಧರ್ಮವ ಕುಡಿಸಿ| ಹೀನ ಗುಣಗಳ ಬಿಡಿಸಿ
ಜ್ಞಾನ ಮಾರ್ಗವ ಹಿಡಿಸಿ| ಅವರನು ಮಾನವ ಪರಿಹರಿಸಿ ||2||
ಅಷ್ಟಿಷ್ಟು ಯೆಣಿಕಿಲ್ಲಾ| ದೃಷ್ಟಿ ದೋಷವೆಲ್ಲ
ಬಿಟ್ಹೋದ ಉಳಿಲಿಲ್ಲ| ಹೋಮದಿ ಸುಟ್ಟುಬಿಟ್ಟನಲ್ಲಾ ||3||
ಯಿಷ್ಟಾರ್ಥ ಸಿದ್ಧಿಯನು| ಕೊಟ್ಟು ಪಾಲಿಸುವನು
ದೃಷ್ಟಾಂತ ನೋಡಿದೆನು| ಪ್ರತಿ ಸೃಷ್ಟಿಕರ್ತ ತಾನೂ ||4||
ಗುರುಸಿದ್ಧನಾಗ್ನಿಯಲಿ| ಜನಿಸಿದ ಭೂಮಿಯಲಿ
ಪ್ರಸಿದ್ಧ ಲೋಕದಲಿ| ಮಲ್ಲಿನಾಥ ಸೋಲಿಸಿದ್ದ ನಿಮಿಷದಲಿ ||5||
ಸಿದ್ಧನ ನಾಮ ಅಮೃತ ಸಾರ ಕೊಂಬುತಲಿದ್ದ ಬಸವ ಫಕೀರ ||ಪ||
ಯೆಲ್ಲಾರಂತೆ ಮಾಡುವ ಸಂಸಾರ
ಮನದಲ್ಲಿಲ್ಲಯಿರುವ ಕಾಂತಾರ| ಯಿಲ್ಲ ಯಿರುವಕಾಂತಾರ ||1||
ನಿಂದಾತ್ಮರಿಗೆ ಕುಡುವ ಸುಖಪೂರಾ
ಭಿಕ್ಷ ತಂದು ಉಂಬೊ ಗಂಭೀರ| ತಂದು ಉಂಬೊ ಗಂಭೀರ ||2||
ಜ್ಞಾನ ಪೂರ್ಣ ಸದಾ ಆಚಾರ
ಶಿವನ ಧ್ಯಾನ ಶರಣರ ಚಾಕಾರ| ಧ್ಯಾನ ಶರಣರ ಚಾಕಾರ ||3||
ಹಾದಿ ನೋಡುವದು ಪ್ರಮಥರ
ಬರೆಗಾಲ ಮಾನ್ವರಿಗೆ ದೂರಾ ||4||
ಗುರುಪಾದ ಸೇವೆಯಲ್ಲಿ ಯೆಚ್ಚರಾ
ಬಿಡದಂತಿರುವ ಸಿದ್ದನ್ಹೆಸರಾ| ಯಿರುವ ಸಿದ್ದನ ಹೆಸರಾ ||5||
ಸಿದ್ಧ ನಿಮ್ಮಯ ಬಿರಿದಿಂತಾದು ಬಡವರುದ್ಧಾರ ಮಾಡಿಡುವಂತಾದು
ಮುದ್ದು ಬಸವಗ ಪ್ರಾಣದಂತಾದು ಮಾಯಿನಗೆದಗದ್ದು
ಬಯಲಿಗೆ ಬಯಲಾದಂತಾದೂ ||ಪ||
ಗುರು ಶಿಕ್ಷವ ಮಾಡುವಂತಾದು
ಭಕ್ತಿ ವರವರದು ಗುಣ ನೋಡುವಂತಾದು
ಹರಿದ್ಹೊಪುವರ ಕೈಹಿಡಿವಂತಾದು
ಮುಕ್ತಿಪುರಕೊಯ್ದುಯಿಟ್ಟು ಬಿಡುವಂತಾದು ||1||
ಸೊಕ್ಕು ಮುರಿದು ಬಿಡುವಂತಾದು
ಶರಣ್ಹೊಕ್ಕರೆ ಕಾಯ್ದಿಡುವಂತಾದು
ದಿಕ್ಕುದಿಕ್ಕಿಗೆ ದಿಕ್ಕಾದಂತಾದು
ಮುಖ್ಯ ಹಕ್ಕಿ ಪಕ್ಕಿಗೆ ಅಹರಿಟ್ಟಂತಾದೂ ||2||
ಕಡ್ಡಿ ಗುಡ್ಡವ ಮಾಡುವಂತಾದು
ಅತಿ ಧಡ್ಡಗೈಶ್ವರ್ಯ ಕುಡುವಂತಾದೂ
ಗುಡ್ಡವಡದು ನೀರ್ತೆಗಿವಂತಾದು
ಗುರು ದೊಡ್ಡವನೆನಿಸಿ ಮೆರಿವಂತಾದು ||3||
ಅಷ್ಟವರ್ಣನೆ ಅಂಗಾದಂತಾದು
ಪ್ರೀತಿ ಸೃಷ್ಟಿ ಸ್ಥಿತಿಲಯ ಮಾಡುವಂತಾದು
ಯಿಷ್ಟಾರ್ಥ ಸಿದ್ಧಿ ಕುಡುವಂತಾದು
ಅದೃಷ್ಟ ಕಣ್ಣಿಗೆ ಕಾಣದಂತಾದೂ ||4||
ಅಣು ಮಹಾತ್ಮಗ ಬಲ್ಲಂತಾದು
ಸದ್ಗುಣ ಮಣಿ ಸಿದ್ಧನಾಮಿಂತಾದು
ಗಣಿತಕ್ ಮಿಗಿಲಾದಂತಾದು
ಪ್ರಮಥಗಣ ಸಂಗ ಸಮರಸದಂತಾದೂ ||5||
ಸಿದ್ಧಸಿದ್ಧರಿಗೆಲ್ಲ ಗುರುಸಿದ್ಧ ಅಧಿಕೆಂದು
ಯಿದ್ದೆ ಚೌಕರಿ ನಿನ್ನ ಬಿರುದು ಸಾರುತಲಿ
ಯುದ್ಧ ಮಾಡುವ ಸಮಯ ಅರಸು ಮುನಿದೋಡಿದರೆ
ಯಿದ್ದಾರೆ ನವಕರರು ಯಿರಲರಿಯದು ಗುರುವೆ ||ಪ||
ರಣದಲ್ಲಿ ಹೋಗುವಾಗ ಧಣಿ ಬೆನ್ನಿಗಿರಬೇಕು
ಕುಣಿಕುಣಿದು ಆಡಂತ ಚೇತನ ಕುಡುಬೇಕು
ಹೆಣದ ಮೇಲ್ಹೆಣವಟ್ಟಿ ಹಿಡಿದು ಹೊಡಗುಡಿಕಟ್ಟೆ
ಧಣಿಯದರ ತರಹುವರು ಶೂರರಾದವರು ||1||
ಆಳುವನೆ ರಾಜ್ಯವನು ಹೇಳದೋಡುವ ಹೇಡಿ
ಸೂಳಿ ಮಗನಾದವನು ಶೂರನಾಗುವನೆ ||2||
ಬಿರುದುಳ್ಳ ಗುರುಸಿದ್ಧ ಭರದಿ ಕರುಣಿಸಿ ಬಂದು
ಕರೆತಂದು ಕುಡು ವೀರ ರಸ ಬೆನ್ನಿಗಿ ನಿಂದು
ಪರವಾಧಿ ನಿಂದಕರ ಗರವು ಮುರಿದೊಟ್ಟುವೆನು
ಸರಿಯದಿರು ಹಿಂದಕ್ಕೆ ಹೊರದಿರು ಅಪಕೀರ್ತಿ ||3||
ಸಿದ್ಧ ನಿಮ್ಮ ನೆನಹಿನಲ್ಲಿ| ಇದ್ದ ಇರುಳು ಹಗಲ ಬಿಡದೆ
ಬಿದ್ದೆ ನಿಮ್ಮ ಪದರಿಗೆ ಸೋತು ನೀವೆ ಗತಿಯಂಬೆ
ಯಿದ್ದಿರಯ್ಯ ನೀವುಯನ್ನು
ಬುದ್ಧಿಯಲ್ಲಿ ಚೇತನವಾಗಿ
ಮುದ್ದು ಬಸವ ಬಾಲಕನಾಡ ನಿಮ್ಮ ಲೀಲೆಯೂ ||ಪ||
ನಿಮ್ಮ ನೆನವೆ ಹಸಿವಿಗ್ಹಾಲು
ನಿಮ್ಮ ನೆನವೆನೀತಕ ಅರಿವಿ
ನಿಮ್ಮ ನೆನವು ಯನ್ನ ಮನಕ ಸಕಲ ಸೌಭಾಗ್ಯ
ನಿಮ್ಮ ನೆನವಿನಲ್ಲಿ ನಡಿವೆ
ನಿಮ್ಮ ನೆನವಿನಲ್ಲಿ ನುಡಿವೆ ||1||
ನಿಮ್ಮ ನೆನವಿನಲ್ಲಿ ನಿತ್ಯ ಸಂಸಾರ ಮಾಳ್ಪೆನೂ
ನಿಮ್ಮ ನೆನವೆ ಹಾಸಿಕೊಂಡು
ನಿಮ್ಮ ನೆನವೆ ಹೊದ್ದುಕೊಂಡು
ನಿಮ್ಮ ನೆನವು ಎಂಬ ತೊಟ್ಟಿಲದಲ್ಲಿ ಮಲಗಿರ್ದೆ
ನಿಮ್ಮ ನೆನವೆ ತಾಯಿಯಾಗಿ
ನಿಮ್ಮ ನೆನವೆ ತಂದೆಯಾಗಿ
ನಮ್ಮ ಸಹ ಪರರ ಮೀರಿ ತೂಗುತೈದಾರೆ ||2||
ಅರಿವುಯಂಬೊ ನಿದ್ರಹತ್ತಿ
ಯಿರುವೆ ನಿಮ್ಮ ನೆನಹಿನಲ್ಲಿ
ಗುರುವು ಶಿದ್ಧಲಿಂಗ ತಾನೆ ಯತ್ತ ನೋಡಲೂ
ಸುರಿಯುತ್ತಿಹುದು ಸುಧಾರಸವ
ಹರಿಯುತ್ತಿಹುದು ಯನ್ನ ಮೇಲೆ
ಕೊರಿಯುತ್ತಿಹುದು ಜನನ ಬೇರು ಕೂಡಿ ಅಗಲದೆ ||3||
ಸಾಕು ಸಾಕು ಸಂಸಾರವಾದ ಮೇಲೆ
ಲೋಕನಾಥನ ಭಜಿಸು ಸ್ವಲೀಲೆ
ಸಾಕಾರಾಗಿ ಬರುವ ಕಪಾಲೆ
ಲೋಕದುಪಚಾರ ಬಿಡು ಭವಮಾಲೆ ||ಪ||
ಪತಿಸೇವ ಪರಮ ಸೌಭಾಗ್ಯವೆಂದು
ಅತಿ ಹರುಷ ನಿನ್ನ ಮನಸಿಗೆ ತಂದು
ವೃತ ನೇಮ ಯಿದೆ ಘಳಿಸಿಕೊ ಯಂದು
ಪತಿವಾಕ್ಯ ಮೀರಬ್ಯಾಡ ಯೆಂದೆಂದು ||1||
ಸತಿಪತಿಯಂಬೊನ್ಯಯವಿರುತಿರೆ
ಜತಿಯಾಗಿ ನಾವು ತಿರಗುವನು ಬಾರೆ
ಗತಿಮೋಕ್ಷ ಮಾರ್ಗ ಯಿದು ಸುವಿಚಾರೆ
ಸಿತಕಂಠನಂಘ್ರಿ ದೊರಕುವದು ನೀರೆ ||2||
ಯನ್ನಕಿ ನೀನು ಆದಮೇಲೆ
ಯನ್ಯಾಕೆ ಸೋಗು ಬಿಡುಯತಿ ಬಾಲೆ
ಚಿನ್ನದಾರತಿಯೆತ್ತು ಸುಶೀಲೆ
ಪನ್ನಗ ಧರನ ಪೂಜಿಗನಕೂಲೆ ||3||
ಹರಕ ಜೋಳಿಗಿ ಬಗಲಿಗಿ ಹಾಕು
ಮುರಕ ಕೋಲು ಕೈಯಲ್ಲಿರಬೇಕು
ಗುರು ಕಟಾಕ್ಷದ ಮಂತ್ರವೆ ಸಾಕು
ತಿರಕರಾಗಿ ತಿರಿದುಣಬೇಕು ||4||
ಅಷ್ಟವರ್ಣ ಭೂಷಿತರಾಗಿ
ಕಷ್ಟ ಜನ್ಮವು ಕಳಿವನು ಬೇಗೆ
ಶ್ರೇಷ್ಠ ಶ್ರೀಗುರು ಶಿದ್ಧಲಿಂಗ ಶಿವಯೋಗಿ
ದೃಷ್ಟಿಯಿಟ್ಟನು ಬಿಡಲರಿಯ ಸೂಗಿ ||5||
ಸಿಟ್ಟು ಬಿಟ್ಟು ಕುಡು ಸೌಭಾಗ್ಯವತಿ ಮಂಗ ಮಂದಮತಿ
ಕೆಟ್ಟು ಹೋದಿ ಮುಂದ ನಿನಗಯಿಲ್ಲ ಗತಿ ತಿಳಿವಲ್ಲೆ ಕೋತಿ ||ಪ||
ಶಾಂತವಾಗಿ ಸೇವೆ ಮಾಡು ಪತಿಭಕ್ತಿ ನಿನಗದೆ ಗತಿ
ಸಂತರಗೂಡ ಪಂಥ ಬ್ಯಾಡ ವ್ಯರ್ಥಸತ್ತಿ ಪಾಪ ಬೆನ್ನು ಹತ್ತಿ
ಮಾತು ಲಾಲಿಸೆಲೆ ಪ್ರಾಣಿ ಮನಕ ತಂದು ಯಿದು ಸತ್ಯವೆಂದು
ನೀತಿ ಹೇಳುತಿನಿ ಯನ್ನ ಸತಿಯೆಂದು ನೀನೆ ಗತಿಯಂದು ||1||
ಇಬ್ಬರಿಗೆ ಕಲಸಿಕೊಟ್ಟ ಗುರುರಾಯ ಸತಿಪತಿ ನ್ಯಾಯ
ಹಬ್ಬಮಾಡು ಹರುಷದಿಂದ ಜಯ ಜಯ ನಿನಗಿನ್ನಾವ ಭಯ ||2||
ಎತ್ತ ಹೋದರತ್ತ ನೀನು ಬೆನ್ನ ಹತ್ತಿ ಜ್ಞಾನ ಜ್ಯೋತಿಯೆತ್ತಿ
ಚಿತ್ತ ಶುದ್ಧ ಬೆಳಗು ಚಂದ್ರಧರನ ಸುತ್ತಿ ಸತಿ ವಿಮಲ ಮತಿ ||3||
ಗಂಡನಾಗ್ನಿ ಮೀರದಿರು ಕ್ರಿಯ ಶಕ್ತಿ ನಯ ಭಯ ಭಕ್ತಿ
ಪುಂಡ ಸಿದ್ಧಲಿಂಗ ಮೆಚ್ಚಿ ಕೊಡುವ ಮುಕ್ತಿ ಸಾಧಿಸಿದೆ ಯುಕ್ತಿ ||4||
ಸಮಯ ಬಂತು ತಮ್ಮ ಸಾಧಿಸಿಕೊಳ್ಳೊ ಪರಬ್ರಹ್ಮ
ಘಮಕದಿಂದ ಗತಿ ನಿಮಕಲ ಉಳಿಯದು
ಧುಮುಕಿಸು ಗುರುವಾಕ್ಯವೆಂದರಿತು ನೀ ||ಪ||
ಸಂಶ ಬ್ಯಾಡ ಮನಕ ಅಂಶಿಕನಾದರ ಈ ಕ್ಷಣಕ
ಹಂಸನಂತ ಹಾಲ್ಕುಡಿದು ನೀರು ಬಿಡು
ಅಂಶಿಕ ನಮ್ಮವನೆಂದು ನಾ ಹೇಳಿದೆ
ಜ್ಞಾನ ಮಾರ್ಗಯಿದನು| ಧ್ಯಾನಕ ತಂದು ಕೇಳೊ ನೀನು
ಖೂನ ಹೇಳಿ ಕುಡುವೆನು ನಾನು| ನಾನೀನೆಂಬುವದಳಿಯದೆ ನೀನು ||1||
ಗುರುವ ಸಿದ್ಧಲಿಂಗ ಅರಿವಿಸಿ ಕೊಟ್ಟ ಅಂತರಂಗ
ಪರ ಉಪಕಾರ ಹೇಳುವೆ ಹೀಂಗ| ಸ್ತಿರಕಾಲ ಬಾಳುವಿ ನಂಬು ಅದರ್ಹಾಂಗ ||2||
ಸಂಗ ಮಾಡುಬೇಕಿಂತಲ್ಲಿ ಸಿದ್ಧಲಿಂಗನಿಗೊಪ್ಪಾಗಂತಲ್ಲಿ
ಸಂಗನ ಶರಣರು ಇದ್ದಲ್ಲಿ ಅಂತರಂಗ ಬಿಚ್ಚುಬೇಕ್ಹೋಗಲ್ಲಿ ||ಪ||
ನಡಿನುಡಿ ವಂದಾಧವರಲ್ಲಿ ಆಶಿ
ಕಡಿದು ನಿರಾಶಿಕರಾದಲ್ಲಿ
ಬಡವರಿಗನ್ನ ಅರಿವಿ ಕುಡುವಲ್ಲಿ
ಬಿಡದೆ ನಡಿನುಡಿಗೆ ಬಸವಾ ಯಂಬಲ್ಲಿ ||1||
ಭಕ್ತಿ ಜ್ಞಾನ ಬಲಯಿದ್ದಲ್ಲಿ ವಿ
ರಕ್ತಿ ವೈರಾಗ್ಯದ ಸ್ಥಲದಲ್ಲಿ
ಮುಕ್ತಿ ಮಾರ್ಗ ಹಿಡಿದ್ಹೊಗಲ್ಲಿ ಮಾಯ
ಶಕ್ತಿ ನಮೋ ನಮೋಯಂಬಲ್ಲಿ ||2||
ನಯ ನುಡಿ ದಯಗುಣಯಿದ್ದಲ್ಲಿ
ಕಾಲಕರ್ಮ ಭಯಕ ಮೀರಿದವರಲ್ಲಿ
ಜಯ ಗುರುಸಿದ್ಧನ ಗೊತ್ತಲ್ಲಿ ಪ್ರಭು
ರಾಯನಂಶಿಕರು ತಿಳಿರಿಲ್ಲಿ ||3||
ಸಾಯಸ ಮಾಳ್ಪದು ಸದ್ಗುರುವಿನ ಕೃಪ
ಆಯಸ ವಿನಿತಿಷ್ಟಿಲ್ಲಣ್ಣ
ಪಾಯಸ ಉಣಿಸುವದು ಪರಮಾಮೃತರಸ
ಮಾಯ ಪ್ರಪಂಚಿಗಳರಿರಣ್ಣ ||ಪ||
ನರ ಜೀವಿಗಳೆಮ ಪುರದ ಸುಖದುಃಖ
ಗುರುಕರಜಾತರು ಸ್ಥಿರಪದ ನಿಜ ಸುಖ
ದರುವಿನಲ್ಲಿ ಇರುತಹರಣ್ಣ ||1||
ಅಶಬದ್ಧರಾಮೆಶವ ತೀರದೆ
ಕಸವಿಸಿಲಿ ಬಳಲುವರಣ್ಣ
ದಾಸರು ದೇವರ ಧ್ಯಾಸದೊಳಗ ಉ
ಲ್ಲಾಸರಾಗಿ ಇರುತಿಹರಣ್ಣ ||2||
ದುರಭೀಮಾನಕ ಬಿದ್ದು ಸತ್ತರು
ಪರಮ ಜ್ಞಾನ ಎಲ್ಲಿಹುದಣ್ಣ
ಹರಗುರು ಭಕ್ತರು ಅರಿಯರುಯಿಂತದು
ಶರಣ ಸ್ಥಲಕ ಹೊಂದಿಹರಣ್ಣ ||3||
ಅವರ ನಡಿ ನುಡಿ ಅವರಿಗೆ ಪ್ರೀತಿ
ಇವರಿಗೆ ಸೇರಿಕಿ ಬರದಣ್ಣ
ಶಿವ ಶರಣರು ಭಕ್ತಿ ಜ್ಞಾನ ವೈರಾಗ್ಯ
ಆವರಿಸಿ ಆಚರಿಸುವರಣ್ಣಾ ||4||
ಏಕೊ ಭಾವದ ನೆಲಿ ಲೋಕರಿಗೆಂತು
ಸಾಕರವಹುದು ಹೇಳಣ್ಣ
ಏಕೊ ದೇವ ಪರಬ್ರಹ್ಮ ಶಿದ್ಧನ ನಡಿ
ಸೋಕಲು ಆಲಸ್ಯ ಯಾಕಣ್ಣ ||5||
ಸೂಳಿ ಸೋಗಿನ ಡಂಬಕರೆಲ್ಲ ಲಂಚ
ಗೂಳಿಗಿ ಕೊಳಕ ಕ್ರಿಯಸ್ತರಾದರೆಲ್ಲ
ತಾಳಾರು ಶಾಂತಿ ಮನಕ ಕೇಳರು ಗುರು ವಾಕ್ಯ
ಹಾಳಗೋಷ್ಟಿಯಲಿ ಕಲಿತ ಮೂಳ ಹೊಲಿಯರು ಯಿಂತ ||ಪ||
ಭಕ್ತಿ ಜ್ಞಾನ ವೈರಾಗ್ಯವಿಲ್ಲ ನಿಜ
ಮುಕ್ತಿ ಮಾರ್ಗಯಿದೆಯೆಂದು ಪೇಳ್ವರಿಲ್ಲ
ಯುಕ್ತಿ ಹೀನರು ಮಾಯ ಶಕ್ತಿ ಬಲಿಯೊಳು ಬಿದ್ದು
ಭಕ್ತರು ನಾವೆಂಬ ಭ್ರಷ್ಟ ಹೊಲಿಯರು ಯಿಂತ ||1||
ವಕ್ಕ ಮಿಕ್ಕ ಪ್ರಸಾದ ಸ್ಥಲವ ಪ್ರೇಮ
ಉಕ್ಕಿದ ಶರಣಳವಡಿಸಿಕೊಳುವ
ಠಕ್ಕು ಠವಳಿ ಮದ ಸೊಕ್ಕಿದ ಮಾನ್ವರು
ದಕ್ಕಿಸಿ ಕೊಂಬರೆ ರಕ್ಕಸಿ ಮಕ್ಕಳು ||2||
ಅಂಸಿಭೂತರಾಗಿ ಬಂದವರು
ನಿಸ್ಸಂಶ ಪ್ರಸಾದ ಕೊಂಬುವರು
ಮಾಂಸ ಪಿಂಡ ಅಳಿದುಳಿದು ಸಿದ್ಧನ ಕೂಡಿ
ಸಂಸಾರ ಮಾಳ್ಪರು ಸಂಶಪ್ರಾಣಿಗಳಿಂತ ||3||
ಸತ್ಯ ಶರಣರ ಕಂಡು ಸುತ್ತಿ ಸುಳಿಯರು ಜನರು
ಕತ್ತಿ ಉಚ್ಚಿದರಣದಂತೆ ಮಾಯಿ ತ
ನ್ನತ್ತಲೆಳಿವಳು ಬಿಡದಂತೆ ಸಂಸಾರ
ಸುತ್ತಿಕೊಂಡಿಹುದು ಸರ್ಪನಂತೆ ಮಿಥ್ಯ ಭೋಗವ ನಚ್ಚಿ
ಸತ್ತು ಹೋಗುವ ಪ್ರಾಣಿ ಸದ್ಗತಿಗೆ ಅದು ಹೊಂದದಂತೆ ತ್ವಂಸಾರಿದೆ ||ಪ||
ಈಳಗಿತ್ತಿಯ ಸುತ್ತ ಬಹಳ ಜನ ನೆರೆದಿಹುದು
ಬಾಳಸ್ತರಿಲ್ಲ ಅದರಲ್ಲಿ ಹೆಂಡವನು
ಹೇಳಿ ಕೊಳುತಿಹರು ಪ್ರೀತಿಯಲಿ ಕುಡ ಕುಡದು
ಬೀಳುವರು ಉಚ್ಚ ಕೆಸರಲ್ಲಿ
ಘೂಳಿ ಬಸವನ ಕಂಡು ಜಾಳಿಸಿ ನುಡಿಹುವರು
ಕೊಳು ಹುವರೆ ಹಾಲು ಮೊಸರಲ್ಲಿ ತ್ವಂಸಾರಿದೆ ||1||
ಆಶ ಬದ್ಧರು ತಾವು ಈಶ ಲಾಂಛನ ತೊಟ್ಟು
ದೇಶಿಕರು ನಾವಧಿಕರೆಂದು ದೇಶದೊಳು ಫಾಸಿ ಹಾಕುತ
ಘಳಿಸಿ ತಂದು ಮಲತ್ರಯದ ಹಸಿಕಿಯ ಬಿಟ್ಟಿರರು ಎಂದು ದಾಸ
ಬಸವನ ಕಂಡು ದೂಷಣಿಯ ಮಾಡುವರು ಪರ
ದೇಶಿಯಂತಾಪುರೆಂದು ತ್ವಂ ಸಾರಿದೆ ||2||
ಭಕ್ತಿ ಹೀನರು ತಾವು ಭಕ್ತಿ ವೇಷವ ತೊಟ್ಟು
ಭಕ್ತರು ನಾವಧಿಕವೆಂದು ಆಸಿ ವಿ
ರಕ್ತನ ಮನಿಗೆ ಕರತಂದು ಉಪಚಾರ
ವ್ಯಕ್ತಾಗಿ ಮಾಡಿ ಶರಣೆಂದು ||3||
ಮುಕ್ತಿ ಬೇಡುವ ಯಿಂತ ಭ್ರಷ್ಟ ಹೊಲಿಯರು ತಾವು ನಿಜ
ಭಕ್ತರೆಂತಾ ಪರೆಂದು ತ್ವಂಸಾರಿದೆ
ಯಿಂತಪ್ಪ ಡಂಬಕರು ಅಂತಿಂತು ಯಣಕಿಲ್ಲ
ವಂತಿಗೆ ಲಿಂಗ ಧರಿಸಿದರು ಸಾಧು ||4||
ಸಂತರಿಗೆ ತಾವು ಹಳಿಹುವರು ಯಿದ
ರಂತೆ ದೋಷವನು ಘಳಿಸಿದರು
ಸಂತಿ ಸುದ್ದಿಯ ಕೇಳಿ ಭ್ರಾಂತರಾದರು ಜನರು
ಬಂತು ತಪ್ಪದು ಪ್ರಳಯ ಕಾಲ ತ್ವಂಸಾರಿದೆ ||5||
ಕುಲವಿಲ್ಲ ಪ್ರಮಥರಿಗೆ ಕೂಡಿ ಬಲಸಿದರೆಲ್ಲ
ಕುಲದಧಿಕಾರಿ ಬಸವಣ್ಣ ಜಂಗಮ
ಸ್ತಲವಿತ್ತು ಪ್ರಭುರಾಯಗಣ್ಣ ಬರುವ
ಛಲದಂಕ ಚನ್ನಬಸವಣ್ಣ ಬಲ್ಲವರು ಪೇಳುವಿರಿ
ಕುಲಸ್ತಲದ ನಿನ್ರ್ಯಾಯ ಅಲ್ಲಿರ್ಪಸಿದ್ದ ಮುಕ್ಕಣ್ಣ ತ್ವಂಸಾರಿದೆ ||6||
ಸಿದ್ಧ ನೀ ಮಾಡಿದ್ದಾಗುವದು ಸುಳ್ಳೆ
ಬುದ್ಧಿ ಹೀನರು ಭ್ರಾಂತರಾಗಿ ಬಳಲುವರು
ಗುದ್ಯಾಟ ಯಮ ಪುರ ಬಿಡದು ಭಕ್ತ
ರಿದ್ದವರು ನೀನೆ ಗತಿಯಂದು ನಂಬುವದು ||ಪ||
ನಿನ್ನಾಟ ತಿಳಿವರೆ ಜನರು ಕರ್ಮ
ಬೆನ್ನಟ್ಟಿ ಕಳೆವಿದಿ ಮಾಯಾದಿನರು
ಭಿನ್ನ ಭಾವದಲಿ ನೋಡುವರು ಭಕ್ತಿ
ಯಿನ್ನೆಲ್ಲಿ ಹುಟ್ಟುವದು ತಾಮಸ ಗುಣದವರು ||1||
ದಿನ ದಿನಕ ಆಸಿ ಹೆಚ್ಚುವದು ಕಷ್ಟ
ಅನುದಿನ ಮಾಡಿದರ ಹೊತ್ತು ಸಾಲಾದು
ಘನ ದುಃಖ ಪ್ರಾಪ್ತಿಗೊಂಡಿಹುದು ನಿಮ್ಮನ
ನೆನಿವೊಣಿನ್ನೆಂದಿಗೆ ಎಚ್ಚರ ತೋರಾದು ||2||
ಕರ್ಮ ಮಾರ್ಗವನು ಹಿಡದಿಹರು ನಿಮ್ಮ
ಮರ್ಮ ತಿಳಿಯದೆ ವಚನ ಓದಿ ಹಾಡುವರು
ನಿರ್ಮಲಾತ್ಮವ ಮಾಡಲರಿರು ಯಮ
ಧರ್ಮ ತಾ ಬಿಡಹುವನೆ ಬಿಟ್ಟಿ ಹೊರವುವರೂ ||3||
ತಮ್ಮ ಸುದ್ದಿಯ ತಾವರಿಯರು ಪರ
ಬ್ರಹ್ಮ ಪ್ರಸಂಗವು ಕಲಿತು ಆಡುವರು
ಹಮ್ಮು ಅಹಂಕಾರಿಗಳಿವರು ಸುಳ್ಳೆ
ತಮ್ಮ ಪೌರುಷವು ತಾವೆ ಪೇಳುವರು ||4||
ಯದಕಾಗಿ ಬಂದವರದಕ ಅನ್ನ
ವದು ಕೈಯಿಟ್ಟಿರಿ ಮೊದಲೆ ಸರ್ವ ಜೇವಕ್ಕ
ಪಾದುಕಿ ಹೊರುವ ಸೇವಕ ನಿಮ್ಮ
ಪಾದಕ್ಕ ಹೇಳುವೆ ಯಿಲ್ಲ ಸುಕ ದುಃಖ ||5||
ಸಿದ್ಧರಾಮನಿಗೆ ಸುದ್ದಿ ಹೇಳ ಹೋದಾ ಗುರುಶಿದ್ಧನ ವಿನೋದ
ಮುದ್ದು ಬಸವನಿಗೆ ಹೇಳಿದ ಗುರು ಬೋಧ ಶುದ್ಧಾತ್ಮನಾದ ||ಪ||
ದೇಶ ದೇಶ ನಿನ್ನ ಮೆರಸದೆ ಬಿಡೆನೆಂದ ನಿರಾಶಿಕನೆಂದ
ಶೇಷ ಭೂಷಣ ತಾ ಮಾಡಿದ ಈ ಫಂದ ದಾಸನಿಗಿನಿತೆಂದ ||1||
ಕೀರ್ತಿ ಅಪಕೀರ್ತಿ ಎರಡು ನಿನಗ ಕುಡುವೆ ನಿನ್ನ ಸಾರ್ಥಕ ಮಾಡುವೆ
ವಾರ್ತಿ ಲೋಕದಲಿ ತುಂಬಿಸಿ ಬಿಟ್ಟ ಕುಡುವೆ ನಾಸಾರಥಿ ಆಗಿರುವೆ ||2||
ಬಸವಾದಿ ಪ್ರಮಥರು ಬರುವ ಶೂಚನಿದನು ಸಿದ್ಧ ನಸುನಗುತ ಹೇಳಿದನು
ಕಸ ಹೊಡಿಸುವೆ ನೀ ಮಾಡಿದ ಕರ್ಮವನು ಕುಶಿಯದ ನನಗಿದನು ||3||
ಸಿದ್ಧ ಬಂದನಿ ಸಮಯಕ್ಕ ಮನ ಶುದ್ಧ ಮಾಡಿದ ನೆರದ ದಯವಕ್ಕ
ಉದ್ಧಾರ ಮಾಳ್ಪ ಅವರ ಭಾವಕ್ಕ ಪ್ರಸಿದ್ಧ ವೀರ ಮೂರು ಲೋಕಕ್ಕ ||ಪ||
ಶಿಕ್ಷಕರ್ತ ಸಿದ್ಧ ಶಿರೋಮಣಿ ಬ್ರಹ್ಮ
ರಾಕ್ಷಿನ ಹೊಡದನು ತತ್ಕ್ಷಣಿ
ಕಾಕ್ಷಿ ತೀರಿದು ಬಿಟ್ಟು ಹೋಯಿತು ಶನಿ
ಭಕ್ತ ದಿಕ್ಷವ ಕೊಟ್ಟನು ನಮ್ಮ ಧಣಿ ||1||
ಶರಣಾಗತ ರಕ್ಷಕ ತಾನು ಶಿವ
ಶರಣರ ಬಾಗಿಲ ಕಾಯುವನು
ಕಿರಣ ಕೋಟಿ ಪ್ರಭೆಯುಳ್ಳವನು|
ದಯ ಕರುಣಿ ತ್ರೈಜಗನಾಳುವನು ||2||
ಸೋತವರಿಗೆ ತಾ ಸೋಲುವನು
ಅಜಾತ ಅವಧೂತ ಮಾರ್ಗವನು
ಭೂತನಾಥ ಶಿದ್ಧನೆನಿಸುವನು|
ತಾಯಾತ್ಯಾತಕ ಸಿಗದಂತವನು ||3||
ಸತ್ಯ ಶರಣರ ಸೇವ ಮಾಡೊ ಅವರ
ತೊತ್ತಾಗಿ ಅನುದಿನ ಚಿತ್ತ ಅಲ್ಲಿಡೊ
ಬಿತ್ತುವರೊಚನ ಬೆಳೆ ಮಾಡೊ ಕರ್ಮ
ಕತ್ತಲಿ ಕಡಿವದು ಬೆಳಗುದಸಿ ನೊಡೊ ||ಪ||
ಹೇಸಿಕಿ ಮೂರನು ಕಳಿಯೆ ಮಾಯ
ಪಾಶಿ ಸಂಸಾರ ಮಿಥ್ಯಯೆಂಬುವದು ತಿಳಿಯೊ
ವಾಸನಮಯ ಅಳಿದುಳಿಯೊ ಭಕ್ತಿ
ದಾಸೋಹ ಮಾಡುತ ಜಗದೊಳು ಸುಳಿಯೊ ||1||
ನಡಿ ನುಡಿ ವಂದಾಗಬೇಕು ಸತ್ಯ
ಹಿಡಿದು ಬಿಡೆನೆಂಬ ಧೈರ್ಯವಿರೆ ಸಾಕು
ಷಡು ಶಕ್ತಯರು ಮುಚ್ಚ ಬೇಕು ಮುಕ್ತಿ
ಪಡಿವ ಸಾಧನ ನಿಜಸುಖವೇನು ಬೇಕು ||2||
ದಾನ ಧರ್ಮವ ಮಾಡಬೇಕು ಶಿವ
ಧ್ಯಾನ ಶಿದ್ಧನ ಪಾದ ಮೊರೆಯಿಡಬೇಕು
ಮಾನ ಒಪ್ಪಿಸಿ ಬಿಡಬೇಕು ಮಹ
ಜ್ಞಾನಿಯನಿಸಿ ಜನನ ಬೇರು ಸುಡಬೇಕು ||3||
ಸಂಶ ಬಾರದು ಮನಕ ಸಂಶ ತೊರೆದು
ಮಾಂಸ ಪಿಂಡವಳಿದು ಗುರುವು ಮಂತ್ರ ಪಿಂಡ ಮಾಡಿದ ಬಳಿಕ ||ಪ||
ತನವು ಶುದ್ಧಿಯು ಮಂತ್ರ ಮನಕ ಶಿದ್ಧಿಯೂ
ಘನತರವಾದ ವಸ್ತು ಗುರುವು ಅನಕೂಲ ಮಾಡಿ ಕೊಟ್ಟ ಬಳಿಕ ||1||
ತನುವೆ ಸಜ್ಜವೊ ತನ್ನ ಮನವೆ ಲಿಂಗವೊ
ನೆನವು ನಿಷ್ಪತ್ತಿಯಾಗಿ ನಿಜದ ಅನುವು ತಿಳಿದಳಿದುಳಿದ ಬಳಿಕ ||2||
ಅಂಗಲಿಂಗದ ಸಮರಸ ಸಂಗ ಹಿಂಗದ
ಮಂಗಳ ಸ್ವರೂಪ ಶಿದ್ಧ| ಜಂಗಮ ತಾನೆಯಾದ ಬಳಿಕ ಸಂಶ ಬಾರದು
ಮನಕ ಸಂಶ ತೊರದು ||3||
ಸೋಗ ಹಾಕಿದರೇನು ಶಿವಯೋಗಿ ಎನಬಹುದೆ
ಮ್ಯಾಗಿನ ಬಣ್ಣಯಿದನು ತಮ್ಮ
ಯೋಗಿ ಸಿದ್ಧೇಶ್ವರನ ನಿಜ ಭಕ್ತರನುದಿನ ದಾಸಿ
ಯೋಗದೊಳಿರ್ಪರೊ ತಮ್ಮ ||ಪ||
ಚಂದ ಬಣ್ಣಗಳಲ್ಲಿ ವಂದು ಬಯಸುವರಲ್ಲ
ಬಂದದ್ದು ಅತಿ ಗಳಿಯರೊ ತಮ್ಮ
ಮಂದಮತಿ ಜನರರಿದೆ ಸಂದೇಹದೊಳು ಬಿದ್ದು
ಬಂಧನ ದೊಳಗಾಪರೊ ತಮ್ಮ ||1||
ಬತ್ತೀಸ ಆಯುಧವನು ಹೊತ್ತು ತಿರಗಿದರೇನು
ಕತ್ತಿಯ ಸಮನಲ್ಲವೇ ತಮ್ಮ
ಸತ್ಯಸುರನು ಬೆನ್ನು ಹತ್ತಿದಾಕ್ಷಣ ಹೇಡಿ
ಕತ್ತಿಯಿಟ್ಟೆರಗುತಿಹರು ತಮ್ಮ ||2||
ಹುಟ್ಟುಗುರುಡನು ದೃಷ್ಟಿಯಿಟ್ಟು ನೋಡಿದೆನೆಂದು
ಘಟ್ಟಿ ಮಂಡಿಗಿಟ್ಟ ಹಾಂಗೆ ತಮ್ಮ
ಖೊಟ್ಟಿ ಗುಣ ಮನದೊಳಗಯಿಟ್ಟು ವೇಷವ ತೊಟ್ಟು
ಥಟ್ಯಾ ಮಾಳ್ಪರು ಸುಜನರಾ ತಮ್ಮ ||3||
ಹಲವು ವಚನವನೋದಿ ನೆಲೆಗಂಡೆವೆಂದರಿದು
ಮಲದೇಹ ತೊಳಿಯುತಿಹರೊ ತಮ್ಮ
ಫಲವಿಲ್ಲ ಪಥವಿಲ್ಲ ನೆಲೆಗಾಣದಾಡುವರು
ಹೊಲಗೇರಿ ಹಂದಿಯಂತೆ ತಮ್ಮ ||4||
ಹುಟ್ಟ ಬಣ್ಣಿದು ಅಲ್ಲ ಕೊಟ್ಟ ಬಣ್ಣ ಮಳೆ
ಪೆಟ್ಟಿಗೆ ತಾಳಬಹುದೆ ತಮ್ಮ
ದಿಟ್ಟ ಬಸವನ ಮನಕ ತಟ್ಟು ಮುಟ್ಟುಗಳಿಲ್ಲ
ಮುಟ್ಟದನು ಗುರುಸಿದ್ಧನೊ ತಮ್ಮ ||5||
ಹರಿವೆಣಾದಿತ ಶಷ್ಪ ಕಿತ್ತೊಣಾದಿತಾ
ಗುರುಕರ ಜಾತನೆಂದರಿಯದೆ ಗರ್ವಿಲಿ
ನರಗುರಿಗಳು ನೀವೆಲ್ಲರು ಕೂಡಿ ||ಪ||
ಗುರುವಿನ ಮಗ ತಾನು ದೇಹದ ಪರವಿ ಅವನಿಗೇನು
ನರಗುರಿಗಳ ನಡಿ ಲಕ್ಷಕ ತಾರನು
ಪರಮಾನಂದದ ಸುಖದೊಳಿರುವನು ||1||
ಕುಲ ಛಲದವನಲ್ಲ ಕುಠಿಲರ ಮೆಟ್ಟಿ ಸೀಳಬಲ್ಲ
ಹೊಲಿ ಮಾದಿಗರಿಗೆ ಅಂಜುವನಲ್ಲ
ಮಲಹರನಾಗ್ನಿಯ ಮೀರಲಿಕಿಲ್ಲ ||2||
ಕಾರಣೀಕನವನು ಮಹತ್ವ ತೋರ ಕಳಿಸಿದ ಶಿವನು
ಧೀರ ಬಸವ ವಿರಕ್ತ ಶಿದ್ಧನು
ಮೀರದವರ ಹಲ್ಲ ಮುರಿಯ ಬಂದೂ ||3||
ಹುಶಾರಿ ಹುಶಾರಿ ಗುರು ತರುತನ ಮಾರಿ
ಹುಶಾರಿ ಮನುಜರಿಗಿಶಾರಿ ಹೇಳುವೆ
ಮುಶಾರಿ ಕೊಟ್ಟರವರ ಮನಿಸುತ್ತ ಇರುತನ ||ಪ||
ಭಿಕಾರಿ ಭಿಕಾರಿ| ಸಾಧು ಲಂಗ ಫಕೀರಿ| ಭಿಕಾರಿ ಭಿಕಾರಿ
ಭಿಕಾರಿ ಜಗದೊಳು ಹಕಾರಿ ಹೊಡಿಯುತ
ನವಕಾರಿ ಮಾಡಿತಾನ ಶರಣರ ಪಾರಿ ||1||
ಸಂಸಾರಿ ಸಂಸಾರಿ| ಆಶ ಬವ ದುಃಖ ಭಾರಿ| ಸಂಸಾರಿ ಸಂಸಾರಿ
ಸಂಸಾರದೊಳು ಶಿವನಂಶಿಕವಿರುತಿರೆ
ಅಂಸಾರ ಕಾಲ ತಿಳಿದು ಆಶಿಹರಿದು ಕಡಿಗೆ ಬರ್ರಿ ||2||
ಆಚಾರಿ ಆಚಾರಿ| ಸಿದ್ಧ ನಿಷ್ಟಪಾರಿ| ಆಚಾರಿ ಆಚಾರಿ
ಆಚಾರ ಜನರಿಗೆ ವಿಚಾರ ತಿಳಿಸುತ
ಭೂಚಾರದೊಳು ದೇಶ ಸಂಸಾರ ಮಾಡುವನು ||3||
ಹಾದಿ ಹಸನ ಮಾಡುವೆ ಪ್ರಮಥರು ಬರುವ ಹಾದಿ ಹಸನ ಮಾಡುವೆ
ಹಾದಿಯೊಳಗ ಪರವಾದಿ ಪರಮಾದಿಗರೆಂಬೊ
ಗಾದು ಕಡಿದು ಯಮ ಬಾಧಿಗೆ ನೂಕುತ ||ಪ||
ಅರವಿನ ಆಯುಧವ ಶ್ರೀಗುರು ಯನ್ನ
ಕರದು ಕೊಟ್ಟನ ಧೈರ್ಯವ
ನರಗುರಿಗಳ ಗರ್ವ ಮುರಿದು ಮೂಲಿಗೆ ಹಾಕಿ
ಸ್ಥಿರವಾಗಿ ಬಾಳೆಂದು ಶಿರದ ಮೇಲ ಹಸ್ತವಿಟ್ಟು ||1||
ಯಿಕ್ಕುವೆನು ಮಂಡಿಗೆಯ ವಡಸುವೆ
ಮದ ಸೊಕ್ಕಿದ ಯದಿಗುಂಡಿಗಿಯ
ದಿಕ್ಕು ದಿಕ್ಕಿಗೆ ಬಿರಿದು ತಕ್ಕಷ್ಟು ಸಾರುವೇ
ಚಿಕ್ಕ ಚನ್ನಬಸವಣ್ಣ ಲೆಕ್ಕಕೇಳುತ ಬರುವ ||2||
ಭಕ್ತಿ ವರ್ಧನ ಮಾಡುತ ಶಿವಭಕ್ತರಿಗೆ
ಮುಕ್ತಿ ಪಥವ ತೋರುತ
ತಕ್ತದೊಡಿಯ ಶಿದ್ಧಲಿಂಗನ ಭಜಿಸುತ
ಯುಕ್ತಿದಿಂದಲಿ ಇಹಪರಕ ಮೀರಿ ನಿಂತು ||3||
ಜ್ಞಾನಿಯಾಗಿ ಸಂಚರಿಸೆನೆಂದಡೆ
ಘನಗುಣ ಸಂಪಾದಿಸಬೇಕು
ಮಹ ಅನಭಾವಿಕನಾಗಿ ಮತ್ತ
ನಾನೇನು ಅರಿಯನಂತನ ಬೇಕು ||ಪ||
ತೆಳಗ ಮೇಲ ಯಂಬ ಆಸನ ಭೇದ
ಕಾರಣೇನು ನಮಗೆ ಅನಬೇಕು
ಬಳಿಕ ಬಳಿಕ ನೀ ಬಾಬಾಯಂದರ
ಬಂದ ಚಿಂತಿ ಯಾಕನ ಬೇಕು
ಒಳಗ ಹೊರಗ ಯರಡೊಂದೆಂದು ಭಾವಿಸಿ
ಝಳಝಳ ಮನನಾಗಿರಬೇಕು ||1||
ಆಶಿರೊಷಯರಡಿಲ್ಲದ ತಾ ಪರದೇಶಿಯಾಗಿ ಚರಿಸಲಿ ಬೇಕು
ಮೀಸಲು ನುಡಿ ಉಲ್ಲಾಸಿ ಅನುದಿನ ಈಶನ ಧ್ಯಾನದೊಳಿರಬೇಕು
ಬ್ಯಾಸರಾಗದೆ ಶಿವ ಭಕ್ತರಿಗೆಲ್ಲ ಕೂಸಿನ್ಹಂಗ ಇರುತಿರಬೇಕು
ಓಡಿ ಮಾಡಿ ಬೊಳ್ಹ್ಯಂಗಿದ್ದರಯಿರಲಿ ನಡಿಸುತಿ ವಂದಾಗಿರಬೇಕು
ಕಡಿ ಮೊದಲಿಲ್ಲದೆ ಮೃಢ ಶಿದ್ಧೇಶನ ಬಿಡದೆ ಭಜನಿ ಮಾಡಲಿಬೇಕು
ತಡಿಯದೆ ಆಸರ ಹಿಡಿಯದೆ ಸಂಸರ
ಬಿಡಗಡಿ ಸ್ಥಳದಲಿರಬೇಕೂ ||2||
ಜ್ಞಾನದ ಮಾರ್ಗ ನಿನ್ನಲಿ ಅಜ್ಞಾನಿ
ಹೆಂಗುಸುಯೆಂದು ನಿ ತಿಳಿವಲ್ಲ
ಹೀನ ವಿಷಯ ಬುದ್ಧಿಯಲ್ಲಿ
ನಿನಗೇನು ದೊರಕಿತು ಗುರುಧ್ಯಾನ ಬಿಟ್ಟಲ್ಲಿ ||ಪ||
ದೋಷ ದುರ್ಗುಣ ಭಾವದವಳು ಅತಿ
ಆಸಿ ಪಾಸಿ ಹಾಕಿ ಮನಯಳಿಸುವಳು
ಭಾಷೆ ಪರಿಪರಿಯ ಕುಡುಹುವಳು
ಪ್ರಮಥರ ಕೂಸೆಂದು ಅರಿಯದೆ ಕೊಡೆನೆಂಬುವಳೂ ||1||
ಚಿತ್ತ ಪಲ್ಲಟ ಮಾಡಬ್ಯಾಡ ನಿನ್ನ
ಗೊತ್ತ ಬಿಟ್ಟು ಬಿಟ್ಟು ತಿರುಗುವದೆ ಕೇಡ
ಸತ್ಯವಂತರು ನಿನ್ನ ಜೋಡ ಪ್ರಭೆ
ತೊತ್ತಿನ ಮಾತಿಗೆ ಕಿವಿ ಕುಡುಬ್ಯಾಡ ||2||
ತಂದಿ ಮಕ್ಕಳನಗಲಿಸಿತ್ತು ವಿಧ
ವಂದು ಬಂದು ಈರ್ವರ ಮನಸು ಕೆಡಿಸಿತ್ತು
ಬಂಧನ ಬಲಿಯ ವಡ್ಡಿತ್ತು ಮಾಯಿ
ಯೆಂದು ಬಿರುದು ಸಾರಿ ಮುಂಡಿಗಿಕ್ಕಿತ್ತು ||3||
ಗುರು ಪುತ್ರನಂಜ ಬಲ್ಲಾನೆ ಗೊತ್ತು
ಅರಿತು ಅವಳ ಮೆಟ್ಟಿ ಸೀಳಿಬಿಟ್ಟಾನೆ
ಪರಿಪೂರ್ಣ ಜ್ಞಾನಿ ಮದ್ದಾನಿ ಸೊಕ್ಕು
ಮುರಿದು ದಿಕ್ಕಿನ ಪಾಲ ಮಾಡಿಬಿಟ್ಟಾನೆ ||4||
ಬಸವಾದಿ ಪ್ರಮಥರ ಆಳು ಭಕ್ತಿ
ರಸ ತುಂಬಿ ತುಳುಕೊತಯಿರುವ ಜಗದೊಳು
ಭಸಿತ ರುದ್ರಾಕ್ಷಿ ಕೊರಳೊಳು ಸಿದ್ಧನ
ಹೆಸರ ಹೇಳಿ ಮೆರಿವನು ದಶ ದಿಕ್ಕಿನೊಳು ||5||
ಜ್ಞಾನ ಹೀನರ ಸಂಗ ಏನು ಕೊಟ್ಟರ ಬ್ಯಾಡ
ಹಾನಿ ಬಪ್ಪದ ತಪ್ಪದೊ ಮರುಳೆ
ದಾನಿ ಶ್ರೀಗುರುಸಿದ್ಧ ನೀನೆ ಗತಿ ಎನಗೆಂದು
ಧ್ಯಾನವನು ಮಾಡು ಕಂಡ್ಯ ಮರುಳೆ ||ಪ||
ಸ್ವಾನುಭಾವದ ಸುಖವ ಜ್ಞಾನಿ ಬಲ್ಲನು ಉಂಡು
ಹೀನ ಮಾನ್ವರು ಬಲ್ಲರೇ ಮರುಳೆ
ಏನು ಪ್ರಾಪ್ತಿಯ ನಿನಗ ದೀನ ಪ್ರಾಣಿಗಳೊಡನೆ
ಖೂನ ಅರಿಯದೆ ಕೂಡ್ವರೇ ಮರುಳೆ ||1||
ಯಾರು ಬಲ್ಲರು ಇಂಥ ತ್ರಿಕೂಟ ಸಂಗಮವು
ಧೀರ ಶರಣರಿಗಲ್ಲದೇ ಮರುಳೇ
ಘೋರ ದುಃಖದಿ ಮುಳುಗಿ ಪಾರಾಗದಿಹ ಪ್ರಾಣಿ
ಬ್ಯಾರಿಟ್ಟು ನೋಡುತಿಹುದು ಮರುಳೆ ||2||
ದೃಢ ಭಕ್ತಿ ಉಳ್ಳವರು ನಡಿನುಡಿಗೆ ಒಪ್ಪಿಸುತ
ಬಿಡದೆ ಶಿದ್ಧನ ಕೂಡ್ವರು ಮರುಳೇ
ಬಡ ಪ್ರಾಣಿಗಳಿಗೆಂತು ದೃಢ ಭಕ್ತಿ ಹುಟ್ಟುವದು
ನಡಿ ನುಡಿ ಒಂದಾಗದೂ ಮರುಳೇ ||3||
ಅನ್ಯಾಯ ಕಾಲವಿದು| ಶ್ರೀಗುರು ಸಿದ್ಧ
ಅನ್ಯಾಯ ಕಾಲವಿದು ||ಪ||
ಅನ್ಯಾಯ ಕಾಲಕೆ-ಇನ್ನೇನು ಮಾಡಲಿ
ತನ್ನವರೇ ತನಗೆ-ಘನ ವೈರಿಯಾದರೊ ||ಅ.ಪ||
ಕೇಡು ಬಂದೊದಗಿದರೆ ಬಿಡಿಸುವರ್ಯಾರಿಲ್ಲ
ದೃಢವುಳ್ಳ ಭಕ್ತರೆ ಬಿಡದೆ ಭಜಿಸಿರೆಲ್ಲ ||1||
ಚಕ್ಕನೆ ಬಹು ಪ್ರೀತಿ ಸೊಕ್ಕಿದರೆ ಹಲ್ಲು ಮುರಿತಿ
ಲೆಕ್ಕ ನೋಡಿ ತಕ್ಕ ಶಿಕ್ಷೆ ಮಾಡಿನೀಬಿಡತಿ ||2||
ಧರೆಗೆ ಚಿಂಚೋಳಿ ಊರ ಸಿದ್ಧಲಿಂಗ ಗುರುಧೀರ
ಮರೆಯದೆ ಭಜಿಸಿದರೆ ಭವಮರಣ ದೂರ ||3||
ಆನಂದ ಘನವಾಗಲಿ| ಸದ್ಗುರುನಾಥ
ಆನಂದ ಘನವಾಗಲಿ
ಆನಂದ ಆನಂದ ಆನಂದ ಆನಂದ ||ಪ||
ಆರು ಮುಂದಿನ ಹರಿಸಿದೆ| ಸದ್ಗುರುನಾಥ
ಮೂರು ಮಂದಿನ ಚರಿಸಿದಿ
ಮತ್ತೇಳು ಮಂದಿ ಚೋರರನು ಹಿಡಿತಂದು
ಪೈರೆದೊಳಗೆ ಕೊಟ್ಟಿದಿ ||1||
ಎಂಟು ಮಂದಿನ ಕೊಲ್ಲಿದಿ| ಸದ್ಗುರುನಾಥ
ಒಂಟದರುವ ನಿಲಿಸಿದಿ
ಮೂಗಿನ ನೇರ ತಿಳಿದು ಹತ್ತು ಬೆಟ್ಟವನೇರಿ
ಪಟ್ಟಣವ ಸೇರಿಸಿದಿ ||2||
ಮಾಯಮೋಹನ ಹರಿಸಿದಿ| ಸದ್ಗುರುನಾಥ
ಮಡದಿ ಮಕ್ಕಳ ಹರಸಿದಿ
ಹರದಾಡುವಂಥ ಹಂಸನ ಪಕ್ಕವ ಮುರಿದು
ಮೂಲಿಯೊಳಗೆ ಹಾಕಿದಿ ||3||
ಬಯಲಿಗಿ ಬೈಲಾಗಿದಿ| ಸದ್ಗುರುನಾಥ
ಹುಲಿಕುಂಠಿ ಗಿರಿ ಏರಿದಿ
ಶ್ರೀಗುರು ಸಿದ್ಧನೆ ನಿಮ್ಮಯ ಕೃಪಾಲಿಂದೆ
ಶಾಂತನ ಓಡಗೂಡಿದಿ ||4||
ಆನಂದ ಭಜನಿಯ ಮಾಡೆಂದ
ಇನ್ನೊಬ್ಬರ ಗೊಡವಿ ಬ್ಯಾಡೆಂದ
ಯಾರ ಯಾತಕ ನಿನ್ನ ಜೋಡೆಂದ
ಶಿವನೊಬ್ಬನೆ ಸಾಕು ನೋಡೆಂದ ||ಪ||
ಪದ್ಮಾಸನ ಹಾಕಿ ಕೂಡೆಂದ
ನಿಜ ಶಿವ ಮಂತ್ರವು ನುಡಿ ಎಂದ
ಇಡಾ ಪಿಂಗಳನಾಡಿ ಜೋಡೆಂದ
ನಾಶಿಕ ಬಲಸಿ ನೀ ನೋಡೆಂದ ||1||
ಸೂಕ್ಷ್ಮದ ಮಾರ್ಗವ ಹಿಡಿ ಎಂದ
ಷಡು ಚಕ್ರವ ಶೋಧಿಸಿ ನೋಡೆಂದ
ಚೌದ ಭುವನ ತಿರುಗ್ಯಾಡೆಂದ
ಎಕವೀಸ ಸ್ವರ್ಗ ಏರಿ ನೋಡೆಂದ ||2||
ಅಮೃತ ಪಾನವ ಮಾಡೆಂದ
ಗಂಭೀರ ಹುಲಿಕುಂಠಿ ಮಠಚಂದ
ಶ್ರೀಗುರು ಸಿದ್ಧನ ದಯಲಿಂದ
ಶಾಂತನ ಚರಣವ ಪಿಡಿ ಎಂದ ||3||
ಇಟ್ಟಿಕೊಳ್ಳೊ ಇಟ್ಟಿಕೊಳ್ಳೊ ಇಟ್ಟಿಕೊಳ್ಳೊ| ನಿನ್ನ
ಬಿಟ್ಟು ಕೊಡಬ್ಯಾಡ ನಿನ್ನ ಮನದೋಳೊ
ಕೆಟ್ಟ ಸ್ಥಾನದಲ್ಲಿರುವ ಬ್ಯಾಡ ಮಳ್ಳೊ| ನೀ
ಕಷ್ಟಪಟ್ಟು ಮಾಡಿದೆಲ್ಲವ ಹಾಳೊ ||ಪ||
ಅರವು ಎಂಬತ್ತು ಕೋಟಿ ಮೊದಲಿಟ್ಟೆ
ಆತ್ಮದಲ್ಲಿ ಮನ ರಾಜನ ಭೇಟಿ
ಸರ್ವ ಜನರಿಗಾಗಿದಿ ಬೋಟಿ| ಅಲ್ಲಿ
ತಿಳಿದಿಕ್ಕಿ ಎಲ್ಲಿಂದ ರಂಗನಪ್ಯಾಟಿ ||1||
ಪ್ರವೃತ್ತಿ ದಾರಿಯ ಮೊದಲ್ಹಿಡಿದಿ
ಪ್ರಬಂಧ ಕಾಮರಾಜನ ಕರೆದಿ
ಸೃಣಿತ ಹಾದಿಗೆ ನೀ ಹೋದಿ| ಆ
ಸಂಬಂಧ ಸುಖ ಏನೇನು ಪಡದಿ ||2||
ನಿವೃತ್ತಿ ನೇಮವ ಹಿಡಿಬೇಕ
ಬುದ್ಧಿ ರಾಜನ ಸ್ತುತಿ ಮಾಡಿ ಕರಿಬೇಕ
ಖಾಸಿಕಿ ಚಿಂಚೋಳಿ ವಿಸ್ತಾರ ನೋಡಬೇಕ| ನಮ್ಮಾ
ಗುರು ಸಿದ್ಧಲಿಂಗನೋಳ್ ಕೂಡಬೇಕ ||3||
ಈ ಗೋಲಿ ಆಟ ತಿಳಿದು ಸುಗಣ ಆಡುವದೋ
ಜಗದೋಳೊ ಬಗಿಯನ್ನು ಬಿರಿಯದೋ ||ಪ||
ಅಗಣಿಸುವದೊ ಏಕ್ಕಲ ಖಾಜನಾದೊ
ದುಡ್ಡಿಗಿ ರಾಜ ಸುಗಣ ಸ್ವರೂಪನಿರದೊ
ತ್ರಿಗುಣ ಆತ್ಮ ತ್ರಿಣಮ್ಮ ಭೂಜದೊ
ಪರಿಯದಿ ಬಗ್ಗಿಯನ್ನು ಬಿರಿಯದೊ ||1||
ಚಾರಗಿ ಚೆಂಡುವೆ ಚಾರದೇಹಗೈದು
ಸಾರವ ಅರಿಯುದೊ ಪಾಂಚಗಿ ಪಂಡು
ನಿರ್ಣಯ ತತ್ವದ ಜರಿದು ಪೊಗುವದೊ
ಸಿಮನ ಜಂಡು ಬಗಿಯನ್ನು ಬಿರಿಯದೋ ||2||
ಸಾತಪಚೋಲ ಸಾಧಿಸಿ ಆಟಪ
ಜೊತ ಕಾಣವುದೊ ನಿತ್ಯ ನೌವ
ಟೊಲಿಗಿ ನೌಬತ ನೂಡಿವದೊ
ಸತ ತಾವ ಸಿದ್ಧನ ಪಾದವನ್ನು ನುಡಿವದೊ ||3||
ಎನ್ನ ಕರ್ಮದ ಕಥೆ ಕೇಳೊ ದೇವ ತೋರೊ ಮಾರ್ಗವ ||ಪ||
ಲಕ್ಷಚಾರ್ಯಾಂಶಿ ತಿರುಗಿ ಬಂದೆ
ಮೋಹಕ್ಕಾಗಿ ಮತ್ತೆ ನೊಂದೆ
ನನ್ನೊಳಗೆ ನಾನು ಮರೆದೆ-ಅದೇನೊ ಭೋಗಿ ||1||
ಜಲನಿಲ್ಲದ ಬಾವಿಯಂತೆ
ಫಲನಿಲ್ಲದ ವೃಕ್ಷದಂತೆ
ರುಚಿಯಿಲ್ಲದ ಕಬ್ಬಿನಂತೆ-ಆಯಿತೆನ್ನ ಜೀವ ||2||
ಸತ್ಸಂಗ ಮಾಡಲಿಲ್ಲ
ಹಿತ ಗುಣವ ಬಯಸಲಿಲ್ಲ
ಈ ಮಾನವ ದೇಹ-ಎಂದೂ ಸ್ಥಿರವಿಲ್ಲ ||3||
ಅಷ್ಟ ಮದಗಳನ್ನು ಕೆಡಿಸಿ
ದುಷ್ಟ ಗುಣದಿ ಬಿದ್ದೇನೊ ಫಾಸಿ
ಪೂರ್ವ ಸಂಚಿತ ಎನಗೆ-ಮಾಡಿತೊ ಫಾಸಿ ||4||
ಆರು ಮಂದಿನ ದೂರೀಕರಿಸಿ
ಮೂರು ಮಂದಿಲಿ ಮನವನು ಬೆರಸಿ
ಗುರು ಸಿದ್ಧಲಿಂಗ ಎನಗ-ಬಾಧಿಯ ಗೆಲಿಸೊ ||5||
ಏನು ಮಾಡಲಿ ಶೋಧ ಎನ್ನಾಗ ತಿಳಿವಲದು
ಮನವ ನಿಲ್ಲುವದು ಅಂತರ ಭೇದ ||ಪ||
ಸಂಸಾರದ ದ್ಯಾಸ ಹಗಲು ಹನ್ನೆರಡು ತಾಸ
ದೀವಿಗಿ ಹಚ್ಚಿತಾಸ ಬಿಡುವಲ್ದು ಆಶಾ ||1||
ಪುರಾಣ ಪುಸ್ತಕ ಓದಿ ತಪ್ಪಿ ನಡೆದರೆ ಹಾದಿ
ವ್ಯರ್ಥವು ಗುರು ಬೋಧಿ ಮರೆತು ಹೋದಿ ||2||
ಅರಿವು ಬರುವೋದಿಲ್ಲ ಗರುವ ಬಿಡೋದಿಲ್ಲ
ಪೂಜೆ ಮಾಡಿದ್ರೆ ಕಲ್ಲ ಓಲಿಯೊದಿಲ್ಲ ||3||
ಧರೆಯೋಳು ಚಿಂಚೋಳಿ ಗುರುಸಿದ್ಧ ಮಾದಾತ
ಅವರ ಚರಣಕೆ ಎರಗಿ ಆದೇನೊ ಮುಕ್ತ ||4||
ಓಂ ನಮ ಶಿವಾಯ ಹೇಳಿದ ಮಂತ್ರವು
ಮರಿಬಾರದು ಮರುಳೆ| ಗುರುವಿನ
ಮರಿಬಾರದು ಮರುಳೆ| ಪ್ರಭುನ
ಮರಿಬಾರದು ಮರುಳೆ ||ಪ||
ಆರು ಅಕ್ಷರದ ಗುರುತ ತೋರಿದ
ಮೂರು ಅಕ್ಷರದ ಮೂಲ ತಿಳಿಸಿದ
ಅರುವ ಕೊಟ್ಟು ಗರುವ ಕಳಿದಿದ
ಮೀರಿದ ಉನ್ಮನಿ ಮಾರ್ಗ ತೋರಿದ ||1||
ವಿಠ್ಠಲ ದೊರಿಲಾಕ ನೆಟ್ಟಾಕ ನಡಿಬೇಕೊ
ಅಷ್ಟ ಮದಗಳು ಸುಟ್ಟಿರಬೇಕೊ
ದೃಷ್ಟಿ ಬಲಸಿ ತಾ ನೋಡಿರಬೇಕೊ
ಶ್ರೇಷ್ಠ ಕೈಲಾಸವು ಕಂಡಿರಬೇಕೋ ||2||
ದೇಶಕಧಿಕ ಶ್ರೀವಾಸ ಚಿಂಚೋಳಿ
ಸಿದ್ಧಲಿಂಗ ಗುರು ಹಾಕಿದ ಸಾಲಿ
ಮರೆಯದೆ ತಿಳಿಬೇಕೊ ಮಾತಿನ ನೆಲಿ
ಮರೆತು ಕುಂತವರಿಗಿ ಹತ್ತಿತ ಹಳಾಳಿ ||3||
ಕಾಯಪೂರ ಜಾತ್ರಿದೊಳಗ
ನೋಡ ನೋಡುತ ಗೆಳೆಯಾ ಕಳದ್ಹೋಗಿದ ಕೈಯಾಗಿಂದ ||ಪ||
ನಾಲ್ಕು ಬಾಜಾರ ತಿರುಗಿ ನೋಡಿದಾ
ಸೋತು ಬಂದು ಸುಸ್ತಾಗಿ ಕುಂತಿದಾ
ಸತ್ತುಳ್ಳ ಮೈಲಾರಿ ಭೇಟಿ ಮಾಡಿದರೆ
ಎತ್ತಿದಷ್ಟು ಎಣ್ಣೆ ಅರಸಿಣ ಪೂಜಾ ||1||
ಹರಕಿ ಮಾಡಿನಾ ಮತ್ತ್ರ್ಯ ಸೇರಿದ
ತಿರುಗಿ ಸೋತು ರೇಲಗಾಡಿ ಏರಿದೆ
ತ್ರಿಪುರ ಸ್ಟೇಷನದೋಳ್ ಇಳಿದು ನೋಡಿದರೆ
ಬೆಳಕಿನಲ್ಲಿ ಭೆಟ್ಟಿಯಾಗಿದ ಗೆಳೆಯಾ ||2||
ಆರು ಮಂದಿನ ಬಿಟ್ಟುಕೊಟ್ಟಿದ
ಮೂರು ಮಂದಿನ ಸೊಬ್ತಿ ಮಾಡಿದ
ಹತ್ತು ಮಂದಿಗೆ ಗೊತ್ತು ಮಾಡಿಕೊಂಡು
ಮುತ್ತಿನ ಮೂಗುತಿ ಮೂಗಿನೊಳಗಿಟ್ಟೆ ||3||
ದೇಶದೊಳಗೆ ಚಿಂಚೋಳಿಯ ಊರ
ಸಿದ್ಧಲಿಂಗ ಗುರು ಹೇಳಿದ ಸಾರ
ಹರಿದಾಸವರ ಹಾಡಕಿ ಭಾರ
ಡಪ್ಪಿನ ಮ್ಯಾಲ್ಹಚ್ಚಿ ತುರಜರತಾಳ ||4||
ಕರೆದು ತಾರಮ್ಮಾ ಸ್ವಗುರುವಿನ
ಕರೆದು ತಾರಮ್ಮಾ ನೀನು ||ಪ||
ಕರೆದು ತಾರಮ್ಮಾ ನೀನು ಹರನಾ ನಿನ್ನ ಗುರವಿನ
ಸ್ವಗೂರವಿನ ಮುಲ ಪ್ರಣಮದಲ್ಲಿ ಮಾತ್ತು
ಮಾಡುತ್ತವನ ||1||
ಪಾರಬತಿ ಅಲ್ಲವನ ನೀಲಕಂಠ
ನಿಜರೂಪ ಶಿವನ ವಾಲಿ ಕಾಲವನಿಟ್ಟು
ವಜೀರ ಸಂಬನ ಸ್ಥಲ ಕಡಿದೊಳೊ ಸುಖದಿಂದೆ ಇರಹುವವನ
ಚತುರಂಗ್ ವರ್ಣನ ನಕ್ಷತ್ರದಾರಿ ಶೇರಿ ಕೊಡುವನ
ಸಲುವು ದೃಷ್ಟಿಯನಿಟ್ಟು ಸುಖ ತೋರುವನ ||2||
ಏರಿ ತ್ರಿಕೂಟದಾರಿ ತೋರಿಪನ್
ವರನಾ ಸಂಚಿದನಂದನ ನಿಜವ ತೋರಿ ನಿಮಗೆ
ಶಿವನ ಧರಿಯೊಳೊ ಚಿಂಚೋಳಿ ಹರಶಾಂತಲಿಂಗ
ಕರುಣದಿಂದಲ್ಲಿ ತಂದಿ ಗುರುಸಿದ್ಧಲಿಂಗ ||3||
ಗುರುವಿನ ಭಜಿಸೊ ಮನದಲ್ಲಿ| ಆ
ಗುರುವಿನ ಮರೆತು ನೀ ಇರುತಿದಾವಲ್ಲಿ ||ಪ||
ಗುರುವೆನೆಂಬುವ ಮೂರಕ್ಷರ| ಮೂರ-
ರಾರರೊಳಗೆ ಬಂದು ಸೇರಿಕೊಂಬುವರ
ಸೇರಿದವರು ಯಾರ್ಯಾರ| ಮೂವ
ತ್ತಾರರೊಳಗೆ ಬಂದು ಅರ್ಥ ಹೇಳುವರ ||1||
ಯರಡು ಬಾಣಿಲಿ ಕಮಲನಿಟ್ಟು| ತುದಿ
ನಾಶಿಕದಲ್ಲದು ದೃಷ್ಟಿಯನಿಟ್ಟು
ಗುಣಗಳೆಂಬುವ ಗುರಿಯನಿಟ್ಟು| ಆ
ಪಂಚಾತ್ಮರಿಗೆ ತಡಿಯದೆ ಮುಟ್ಟು ||2||
ಪಂಚ ಪಂಚವರೆಲ್ಲಾ ಕೂಡಿ| ಆ
ಪಸ್ತೀಸರೊಳಗಿವು ಹತ್ತಿ ಸರಿ ಮಾಡಿ
ಖಚಿತ ಚಿಂಚೊಳಿ ಖೂನ ನೋಡಿ| ನಮ್ಮ
ಘನ ಗುರುಸಿದ್ಧನ ಕೂಡಿ ಕೊಂಡಾಡಿ ||3||
ಗುರುವಿನ ಗುಪ್ತ ದಯಲಿಂದೆ| ಮನ
ನಿಜವನಾಯಿತು ಮಹಾಜ್ವಾಲಿಯಲಿಂದೆ ||ಪ||
ಅರು ಮನೆಯ ಸ್ತಂಭ ಹಿಡಿದು| ಮುಂದೆ
ಮೂರು ನದಿಯ ದಾಟಿ ಸಾಗಿ ಪೋಗುವದು
ಅರದ ಪಂತಿಯ ಸಾಗುವದು| ಮುಂದೆ
ಗುರುವೀನ ಕೂಡಿ ಪ್ರಸಾದ ಮುಗಿಯುವದು ||1||
ಕಿರ್ದ ಹಿರ್ದ ಉರ್ದ ಮೂರ| ಅದರ
ಮೂಲ ತಿಳಿದ ಮೇಲೆ ಕಡಿಗೆ ಹಾರುವದು
ಉರ್ದ ಕೈಸೆರೆ ಮಾಡುವದು| ಸರ್ವ
ಸಾಧನ ಮಾಡಿ ಮನ ಲೋಲಾಡಿಸುವದು ||2||
ಸಕಲ ಸಮಸ್ತನ ಕೂಡಿ| ಪ್ರೇಮ
ಅತಿ ಹಿಗ್ಗಿಲಿ ಎನ್ನ ಮನವು ಲೋಲಾಡಿ
ಶಾಂತಲಿಂಗನ ಧ್ಯಾನ ಮಾಡಿ| ನಮ್ಮ
ಘನ ಗುರುಸಿದ್ಧನ ಕೂಡಿ ಕೊಂಡಾಡಿ ||3||
ಗುರುವು ಬಿಟ್ಟು ಅಧಿಕಾರ ಯಾರು ಇಲ್ಲ| ಬಲ್ಲವನೇ ಬಲ್ಲ
ಗುರುವು ಬಿಟ್ಟು ಅಧಿಕಾರ ಯಾರು ಇಲ್ಲ ||ಪ||
ತಿಳಿಯಬೇಕೊ ಆತ್ಮದ ಮೊದಲನುಕೂಲ
ಮರೆ ತಿರಹುವರಲ್ಲ ||ಅ.ಪ||
ಆಕೃತಿ ತಾರಕ ಆರು ಸ್ಥಳದಲಿಟ್ಟಿ| ವರ್ಣ ಎಂಬತುಕೋಟಿ
ಭಕ್ತಿ ಸ್ಥಾನದಲಿ ಬ್ರಹ್ಮವರ್ಣ ಜಟ್ಟಿ
ಮೂಲ ಪ್ರಣಮದಲಿ ಖೂನ ಯಾವ ದಿಟ್ಟಿ…
ಆಗುಬ್ಯಾಡೊ ಲಟಪಿಟಿ ||1||
ಆರು ಎಂಬುವವು ಮೊದಲ ಸುರತಗಟ್ಟಿ| ನೋಡೊ ಮನಮುಟ್ಟಿ
ಚತುರು ವರ್ಣದ ಚಂದ್ರ ಹಾನೊಗಟ್ಟಿ
ಒಳಗೆ ನೀಲವರ್ಣದ ರಂಗನ ಪ್ಯಾಟಿ
ಪ್ರಭು ಆದರೂ ಭೇಟಿ ||2||
ಆತ್ಮನೆಂಬುವ ಮೊದಲ ಸಕಿಲ ಬಲ್ಲ| ಆ ತಿರುಹುವನಲ್ಲ
ಐದು ಆರು ಹನ್ನೊಂದು ಪೀಠದ ಮ್ಯಾಲ
ಗೊತ್ತಿಗೆ ಚಿಂಚೋಳಿ ಗುರ್ತ ಹೇಳುವರಲ್ಲ
ಸಿದ್ಧಲಿಂಗ ತಾ ಬಲ್ಲ ||3||
ಗುರುವೆ ನಿಮ್ಮ ಕೃಪಾ ಸಮುದ್ರ
ಕರ್ಣದೋಳುದಿರಿ ಮುಲ ಅಕ್ಷರ ||ಪ||
ಕರ್ಣ ಕುಂಡಲ ಹಿಡಿದು ಒತ್ತಿ
ಎರಡು ನೇತ್ರಗಳೊತ್ತಿ ಬೆಳ್ಳಾಗೈತಿ ಜೋತಿ
ಭ್ರುಕುಟದಲ್ಲಿ ದಿವ್ಯ ಬೆಳಗ ಆಯಿತಿ
ಸಂದು ಸಂಧಿಗೆ ನಿಮ್ಮ ಅಮೃತಧಾರ ಆಗಾಯಿತಿ ||1||
ನಾದದಿಂದೆ ಬಿಂದುವಿನಾಕಾರ
ಬಿಂದುವಿನೊಳೊ ಚಿದ್ರೂಪ ಬ್ಯಾರ ಬ್ಯಾರ
ನಾದ ದರ್ಪಣ ಕಿಡಿಯ ತರತಾರ
ಸುಷುಮ್ನ ಏದುರ ಏರುತ ಜನಸಿತ್ತೋ ಓಂ ಅಕ್ಷರ ||2||
ಘಟ್ಟಿಗೊಂಡಿತ್ತೊ ಪಿಂಡಾದ್ರಿ ಷಡುಚಕ್ಕರ
ಶಿಖ ಶೀರಧಾರಿಯ ನೋಡೊ ಚಕ್ರ
ದೇಶ ಧೋಳಧಿಕ ವಾಶ ಚಿಂಚೋಳಿಗಾರ
ಗುರು ಸಿದ್ಧಲಿಂಗನ ಮುಕ್ತಿಗೆ ಕರ ವೀರಭದ್ರ ||3||
ಗುರುತ ತೋರಿದ ಗುರವಿನ
ಮರೆತು ಇರಬ್ಯಾಡ ಮನಸು
ಆಶಾ ಪಾಶವ ಬಿಟ್ಟು ಲೇಸಾದ ಗುರುವಿನ
ಕೂಡಿಕೊಂಡಿರು ನೀನು ಮನಸು ||ಪ||
ಹಮ್ಮು ಬಿಮ್ಮನೆ ಬಿಟ್ಟು ಒಮ್ಮರ ಗುರುವಿನ
ನಾಮಕೊಂಡಾಡವೈ ಮನಸು ||1||
ಎಲ್ಲಾ ಚಿಂತನೆ ಬಿಟ್ಟು ಬಲ್ಲಿದ ಗುರುವಿನ
ಹೊಂದಿಕೊಂಡಿರವ್ವ ಮನಸು ||2||
ಧರೆಯೋಳು ಚಿಂಚೋಳಿ ಗುರು ಸಿದ್ಧಲಿಂಗನ
ಕೂಡಿ ಕೊಂಡಿರವ್ವ ಮನಸು ||3||
ಚಿಂತಿದೊಳಗ ಸಂತಿ ಭ್ರಾಂತಿ ಮಾಡಿರಿ
ಸುಳ್ಳೆ ಬಯಲೀಗಿ ಬಯಲಾದ ತಿಳಿರಿ
ಅರುವಿನ ಜನ್ಮಕೆ ಬಂದು ಎಚ್ಚರ ಹಿಡಿರಿ
ಗುರು ಮೆಚ್ಚಿದ ಮಾರ್ಗದಿ ನಡಿರಿ ||ಪ||
ಹುಡುಕುತ್ತ ಹೊಂಟೆವರಿ ದೂರಿಂದ ದಾರಿ
ಅಲ್ಲಿ ಬಿದ್ದವರಿ ಚೌರ್ಯಾಂಶಿ ಪೇರಿ
ಭಾಳ ದಿವಸಾಯಿತು ಹುಡುಕುತ್ತ ಹೊಂಟೆವರಿ
ಈಗ ಸಾಕಾಯಿತು ಮಂಡಲ ಜಾತರಿ ||1||
ಆರುಮೂರು ಒಂಬತ್ತು ದಾರಿ
ಮ್ಯಾಲಿ ನಂತರ ಚಂದ್ರನ ಗಿರಿ
ಅಲ್ಲಿ ನಡಿದಿತ್ರಿ ಮಹದೇವನದೈಶ್ವರಿ
ಹೂವಿನ ಬಾಗಶಾಯಿಲಿ ಮುಕ್ತಿ ಕಂಡೆಯವರಿ ||2||
ಧರೆಯೋಳು ಚಿಂಚೋಳಿ ಸಿಸ್ತ
ಅಲ್ಲಿ ಗುರು ಸಿದ್ಧಲಿಂಗ ಮಹದಾತ
ಆತನ ಪಾದಕೆ ಆದೆನೊ ನಮಿತ
ಆಯಿ ತಿಂದಿಗೆ ನರಜನ್ಮ ಸಾರ್ಥ ||3||
ತಿಳಿಬೇಕೊ ಗುರವಿನ ಕೀಲಿಯನು| ಅಲ್ಲಿ
ತಿಳಿದಾರೆ ಒಂದಾಗಿ ತೋರುವನು ||ಪ||
ಆನಂದಪುರವೆಂಬ ಪಟ್ಟಣಾದ| ಅಲ್ಲಿ
ಒಂದೊಂದು ಹಾದಿಗೆ ವರುವಾದ
ಚಂದಾಗಿ ಸೌಹಾದಿ ತೋರಿದ| ಅಲ್ಲಿ
ಕಂದನ ಬಾಗಿಲು ಕಡಿಲಾಗಿದ ||1||
ಕಂದನ ಬಾಗಿಲು ಕಡಿಲುಂಟೊ| ಅಲ್ಲಿ
ಹತ್ತಾರು ಒಳಗೆ ಹೊರಗ್ಹೊಂಟೊ
ನಿತ್ಯ ನಿತ್ಯ ಅಲ್ಲಿ ಹೋಗುವದುಂಟೊ| ಅಲ್ಲಿ
ಚಿತ್ತೈಸಿ ತಿಳಿದವನ ಎದೆಗಂಟೊ ||2||
ಒಂಬತ್ತು ವರುಷದ ಮ್ಯಾಲುಂಟೊ| ಅಲ್ಲಿ
ಹತ್ತು ತೂತಿಗೆ ಹವಳದ ಕಟ್ಟೊ
ನಿತ್ಯ ಚಿಂಚೋಳಿ ಹೊರಗ್ಹೊಂಟೊ| ನಮ್ಮ
ಗುರು ಸಿದ್ಧಲಿಂಗನ ನೆನಹುಂಟೊ ||3||
ತಿಳಿ ತಿಳಿ ತಿಳಿ ತಿಳಿ ತಿಳಿ ತಮ್ಮ| ಅದು
ತಿಳಿಯದೆ ಮರೆತಿರುಬ್ಯಾಡೊ ಸುಮ್ಮ
ಆತ್ಮನೆಂಬುವಾಶ್ರಮ ಧಾಮ ಅಲ್ಲಿ
ಸೋಸಿ ನೋಡೊ ಶಾರೀರ ಗ್ರಾಮ ||ಪ||
ಆಧಾರನೆಂಬುವಾಶ್ರಯ ಹಿಡಿದು| ಅಲ್ಲಿ
ಚಿದ್ರೂಪ ವರ್ಣವು ತೋರುವದು
ಥರ ಥರ ಥರ ಥರ ನಡಗುವದೊ…| ಆಗದು
ಧಿಮಿತ ಧಿಮಿತನಂತ ಕೊಡುವದೊ ||1||
ಒಂಬತ್ತು ಬಾಗಿಲ ಕದ ಮುಚ್ಚಿ| ಅಲ್ಲಿ
ಪ್ರೀತಿಲಿಂದೆ ಸಂಜೀವ ಹಚ್ಚಿ
ನೋಡೊ ನೋಡೊ ನೋಡೊ ಪರದಿಯ ಬಿಚ್ಚಿ… ಅಲ್ಲಿ
ಚಂದ್ರ ಜ್ಯೋತಿ ಸ್ವರೂಪ ಹಚ್ಚಿ ||2||
ನಾದನೆಂಬೊ ಶಬ್ದ ಮೊದಲ್ಹಿಡಿದು| ಆ
ನಾಥ ಪ್ರಭುನ ದಯ ಆಗುವದು
ಧರೆಗೆ ಚಿಂಚೊಳಿ ವರ್ಮವದು| ನಮ್ಮ
ಗುರು ಸಿದ್ಧಲಿಂಗನೋಳ್ ಕೊಡುವದು ||3||
ದೇವರ ಪೂಜೆ ಬ್ಯಾರುಂಟು
ನಿನ್ನ ದೇಹದೊಳಗೆ ಮನಿ ಮಾಡ್ಯಾದಗಂಟು ||ಪ||
ದೇವರೆಂಬುದು ನ್ಯಾಯ ಬಲ್ಲಿ| ನಿನ್ನ
ದೇಹದ ಮೂಲವ ಹೇಳಂದರವಲ್ಲಿ
ತಿಳಿಬೇಕೊ ತಾನು ತನ್ನಲ್ಲಿ| ತಾ
ತಿಳಿದರೆ ದೇವರು ಹಾನೋ ತನ್ನಲ್ಲಿ ||1||
ಕಲ್ಲು ದೇವರು ದೇವರಲ್ಲ| ತಾ
ಬಲ್ಲಿದು ಬಯಸಿದರೆ ತಿಳಿಯುವದಲ್ಲ
ತಿಳಿದರೆ ಉಳಿ ಆಗೊದಿಲ್ಲ| ಆ
ತಿಳಿ ಉಳಿದೊಳಗಿದು ಖಳಿಯಾಗಿತ್ತಲ್ಲ ||2||
ದೇವರ ಗವಿ ಸೇರಬೇಕೊ| ನಮ್ಮ
ಒಪ್ಪುಳ್ಳ ಚಿಂಚೋಳಿ ವರ್ಮ ಹಿಡಿಬೇಕೊ
ಸುಚಿತ ಶಾಂತನ ನೆನಿಯಬೇಕೊ| ನಮ್ಮ
ಘನ ಗುರುಸಿದ್ಧನ ಹೊಂದಿರಬೇಕೊ ||3||
ದಿನ ಸ್ವರೂಪಕೆ ಕಡಿಮಿಲ್ಲ| ನಿನ್ನ
ದೇಹದ ಅನುಕೂಲ ತಿಳಿಯಬೇಕಲ್ಲ ||ಪ||
ಕೊಚ್ಚಿ ಕೊಚ್ಚಿಯ ನೋಡಬೇಕೊ| ಮನ
ಸಚ್ಚಿತ ಅವು ಆರು ಕದ ಮುಚ್ಚಬೇಕೊ
ಪಶ್ಚಿಮ ಗಿರಿ ಏರಬೇಕೊ ||1||
ಮುಚ್ಚಿ ಮುಚ್ಚಿಯ ನೋಡಬೇಕೊ| ಮುಂದೆ
ಬಿಚ್ಚಿ ಹೇಳದು ಅದು ಯಾರಿಗೆ ಬೇಕೊ
ಮೂವತ್ತಾರು ತಿಳಿಯಬೇಕೊ| ಅದು
ಮೂಗಿನ ಕೊನೆಯಲ್ಲಿ ಮುಳುಗಾಡಬೇಕೊ ||2||
ಒಂದೆರಡು ಮೂರಾಕ್ಕೆಲ್ಲಾ| ಮನ
ಸಂದೇಹ ಲೆಕ್ಕ ಜಮ ಆಯಿತಲ್ಲ
ಬಂಧನ ಬಿಡಿಸಬೇಕಿಲ್ಲ| ನಮ್ಮ
ಧರೆಯೊಳು ಚಿಂಚೋಳಿ ಗುರುಸಿದ್ಧ ಬಲ್ಲ ||3||
ನೋಡಿರಿಕಿನ ಸೋಂಗ| ಮೆರೆವಾಳೊ
ಕುಂತು ಹುಲಿಯ ಮ್ಯಾಗ ||ಪ||
ಮೂರು ಲೋಕ ಮುರದ್ಹಾಕ್ಯಳೊ ಒಳಗ
ಮತ್ತೆ ಅಂಬುವಳೊ ಎನ್ನ ಮೂಗ ಮ್ಯಾಗ ||1||
ಕರಿಯ ಮಾರಿ ರಂಡಿ| ಈಕಿ ಒಳ್ಳೆ
ಬಲ್ಲವರಿಗಿ ಮಿಂಡಿ
ಈಕಿನಲ್ಲಿ ತುಂಬಿತ್ತೊ ಬ್ರಹ್ಮನ ಬಂಡಿ
ಸತ್ಪುರುಷರಿಗೆ ತೋರಿಸ್ಯಾಳೊ ಗುಂಡಿ ||2||
ನಾಜುಕ್ಹಾಳೋ ಹೆಣ್ಣ| ಈಕಿನಲ್ಲಿ
ಪಂಚ ರತ್ನದ ವರ್ಣ
ಈಕಿ ಹೋಗಿ ತುಂಬ್ಯಾಳೊ ಎಲ್ಲಾರ ಕಣ್ಣ
ಈಕಿನ ಮಾರಿ ಬೆಳಕ ಸೂರ್ಯನ ಕಿರಣ ||3||
ತೈಲ ನಿಲ್ಲ ಬಿತ್ತಿ| ದೀವಿಗಿ
ಹಚ್ಚಿದಾಳೊ ಜ್ಯೋತಿ
ಧರೆಯೊಳು ಚಿಂಚೋಳಿ ಗುರುಸಿದ್ಧನ ಸತಿ
ಗುರುಪುತ್ರರಿಗೆ ಈಕಿನಿಂದೆ ಮುಕುತಿ ||4||
ನಾ ಹುಟ್ಟಿ ಬಂದೆನೊ ಈ ಬ್ರಹ್ಮಪುರದಲ್ಲಿ
ಅನರ್ಥ ಆಯಿತಿಲ್ಲಿ| ಜನ್ಮದಲ್ಲಿ ||ಪ||
ನಾನಾ ಜನ್ಮವ ತಿರುಗಿ ತಿರುಗಿ ಮತ್ತೆ ಬಂದೆನೊ ಮೋಹದಲ್ಲಿ
ಮನವ ಸೋತು ಹೋದ ಮೇಲೆ ಕೊಡಬೇಕು ಯಾವಲ್ಲಿ ||ಅ.ಪ||
ಬ್ಯಾಸರಾಯಿತು ಮನ ಈ ಘಟ ಸ್ಥಳದಲ್ಲಿ
ಹೋಗಿ ಕೊಡಬೇಕಿಲ್ಲಿ ಸಂತರ ಬಲ್ಲಿ
ಅಲ್ಲಿ ಹೋಗಿ ಕುಂತಿದಾರೆ ಹೇಳಾತರ ಗುರುಕೀಲಿ
ಆ ಕೀಲಿ ತಕ್ಕೊಂಡು ಇಡಬೇಕಿಲ್ಲಿ| ಜತ್ತಿನಲ್ಲಿ ||1||
ಎಂಟು ಮದಗಳು ಬಿಟ್ಟು ಬಂಜೆಂಬ ಕುಂಡದಲ್ಲಿ
ಝಳಕ ಮಾಡಿದೆ ನಾನಲ್ಲಿ ಸಿದ್ದನಲ್ಲಿ
ಅಲ್ಲಿ ಝಳಕ ಮಾಡಿದರೆ ತೊಲಗಿತು ಭವ ಮರಣ
ಪಾವನ ಆದೆನೊ ಸಂತರ ಕರುಣೆಯಲ್ಲಿ| ಸಂಗದಲ್ಲಿ ||2||
ದೇಶಕಧಿಕವಾದ ವಾಸುಳ್ಳ ಚಿಂಚೋಳಿ
ಈಶ ಸಿದ್ದನ ಬಳಿಯಲ್ಲಿ ಕೂಡಿದೆ ನಲ್ಲಿ
ದೋಷ ಗುಣಗಳು ಬಿಟ್ಟು ವಿಷಯವಾಸನೆ ಬಿಟ್ಟು
ಹರಚರಣ ಕಂಡೆ ನಾನಿಲ್ಲ ಜನ್ಮದಲ್ಲಿ ||3||
ಮಾಡುವೆ ಪೂಜೆ ಮಾಡುವೆ| ಮನ
ನಿಜದ ಬೋಧವ ತಿಳಿದು ಮಹ ರಾಮಲಿಂಗನ ||ಪ||
ಅಷ್ಟಾವರಣದ ಆಚಾರದಿಂದೆ
ಸುಚಿತ ಪಂಚ ಇಂದ್ರಿಯ ಗೆಲದಿಂದೆ
ಮುಂಚಿನ ಕಿಂಚಿತ ಭೋಗ ಫಲದಿಂದೆ
ಸಚ್ಚಿತ ಕಂಡೆನೊ ಪಾದ ನಿಮಲಿಂದೆ ||1||
ಅಷ್ಟದಳದ ಕಮಲ ಐಶ್ವರ್ಯದಿಂದೆ
ತಿರಗುತ್ತ ತಿರಗುತ್ತ ಕಂಡೆ ನಿಮಲಿಂದೆ
ಹಸಿರು ಹಳದಿ ವರ್ಣ ಸುವರ್ಣದಿಂದೆ
ಹಸನಾಗಿ ಲಾಲಿಸು ಪೇಳೆನ್ನ ತಂದೆ ||2||
ಚತುರ ಕೋನಿ ಚೌಬಾಜಾಗಳಿಂದೆ
ಝಾಂಗಟಿ ಕೈತಾಳ ಗರ್ಜನದಿಂದೆ
ಧರೆಯೋಳು ಚಿಂಚೋಳಿ ಖೂನಕ ತಂದೆ
ಘನ ಗುರು ಸಿದ್ಧನ ಚರಣ ದಯದಿಂದೆ ||3||
ಮಾತಾಡ ಜನರೆಲ್ಲ ಯಾತಕ ಬಂದಿರಿ
ನೀತಿಯ ತಿಳಿಯಬೇಕಣ್ಣ
ಹೊತ್ತಿರುವ ಹಳೆ ಕೊಡ ಇತ್ತಲ್ಲೆ ಉಳಿಯಿತ್ತು
ಮತ್ತೆ ಹೊಳೆಯಲಿ ಸುರಿಬೇಕಣ್ಣ ||ಪ||
ಒಬ್ಬವಗ ನಾಲ್ಕಲ್ಲು ಒಬ್ಬವಗ ಆರ್ಹಲ್ಲು
ಒಬ್ಬವಗ ಹತ್ತು ಹಲ್ಲಣ್ಣ
ಒಬ್ಬವಗ ಹನ್ನೆರಡು ಒಬ್ಬವಗ ಹದಿನಾರು
ಒಬ್ಬವಗ ಯರಡು ಹಲ್ಲಣ್ಣ
ಒಬ್ವವಗ ಸಾವಿರ ಅನು ತಲೆ ಬೊಬ್ಬಿಟ್ಟು
ಭೂತಗಳು ಬೊಗಳುತಾವಣ್ಣಾ ||1||
ಹತ್ತು ಬಾಗಿಲ ಮನೆ ಹೊಕ್ಕು ನೋಡಿದರೊಮ್ಮೆ
ಚಿತ್ರವು ಕಾಣುತಾದಣ್ಣ
ಚಿತ್ರಾದ ಬೆಳಕೆಲ್ಲಾ ಕತ್ತಲೆ ನುಂಗಿತ್ತು
ಚುಕ್ಕಿಯ ಗುರುತು ಹೇಳಣ್ಣಾ
ಮತ್ತೆ ಆ ಚುಕ್ಕಿಯೋಳ್ ಛಾಯನ ಮಿಂಚ್ಹುಟ್ಟಿ
ಉತ್ತಮ ಚಂದ್ರ ನೋಡಣ್ಣ ||2||
ಖಸ ಖಸಿ ಕಿನ್ನ ಸಣ್ಣ ಅಗಸಿ ಬಾಗಿಲ ಪೊಕ್ಕು
ರಸಕಿಡಿ ಉದುರುತಾವಣ್ಣ
ಹುಸಿಯಲ್ಲ ಈ ಮಾತು ಪಸರಿಸಿ ಕಣ್ಣಿಗಿ
ಹಸಿವು ನೀಡಕಿ ಇಲ್ಲಣ್ಣ
ವಸುಧಿಗಿ ಚಿಂಚೋಳಿ ಗುರುವು ಸಿದ್ಧಲಿಂಗನ
ವಾಸಾಗಿ ಇರುತಿದ್ದರಣ್ಣ ||3||
ಯಾತಕ ಚಿಂತಿಯೋ ತಮ್ಮ| ನಿಜ
ಬ್ರಹ್ಮ ತಾನಾದ ಬಳಿಕ ಇರಬೇಕೊ ಸುಮ್ಮ ||ಪ||
ಚಿಂತಿ ಎಂಬುವದೊಂದೆ ಭಾವ| ಈ
ಆರು ಮನಿಯ ಮುರಿದು ನುಂಗಿತ್ತೊ ಜೀವ
ಆಚಾರ ಶಬ್ದದಿ ಜೀವಾ| ಜೀವ
ಝಂಕಾರಿಸುತಕ್ಕ ಜೀಯ ಹಿಡಿಸುವ ||1||
ನಾಲ್ಕು ದಳದ ನ್ಯಾಯ ತಿಳಿದು| ಸರ್ವ
ಸಂಗ್ರಹನೆಂಬುದು ಮೊದಲಿಗೆ ಹರಿದು
ತೆಗೆದ್ಹಾಕೊ ನಿನ್ನ ನೆಲೆ ತಿಳಿದು| ಮುಂದೆ
ನಿರ್ಭಯ ಆಗೊ ಮನ ಜ್ವಾಲಿಯ ಹರಿದು ||2||
ಕತ್ತಲೆಂಬುವ ಕಾಳಹರಿದು| ಮುಂದೆ
ಮುತ್ತಿನ ಜ್ಯೋತಿಯ ಬೆಳಗನೆ ತಿಳಿದು
ಸುತ್ತ ಚಿಂಚೊಳಿಯಲ್ಲುಳಿದು ನಮ್ಮ
ಗುರು ಸಿದ್ಧಲಿಂಗನ ಒಳಗೆ ಕೂಡುವದು ||3||
ಲಗು ಲಗು ನಡಿರೆವ್ವ ಗಾಡಿ ಬಂದದ ಓಡಿ
ಗಾಡಿ ಬಂದದ ಓಡಿ ನಿಂತದ ಠೇಷಾನ ನೋಡಿ ||ಪ||
ನೀರ ಕೊಳಸಿ ನಿಲ್ಲದ ಗಾಡಿ| ಬಂದಿತವ್ವ ಓಡಿ
ಹಸಿರು ಹಳದಿ ಬಣ್ಣದ ಗಾಡಿ| ಬಂದಿತವ್ವ ಓಡಿ ||1||
ಓಡುಲಾಕ ಹಾದಿನಿಲ್ಲ| ತಿರುಗುಲಾಕ ಗಾಲಿ ನಿಲ್ಲ
ಕೊಡುಲಾಕ ಜನರಿಲ್ಲ| ಬಂದಿತವ್ವ ಓಡಿ ||2||
ಗುರುಸಿದ್ಧ ಎಂಥಾದಾತ| ತಿಳಿಸಿ ಹೇಳಿದಾರೊ ಮಾತ
ಅವರ ಲಿಂದೆ ಆದೆನು ಮುಕ್ತ| ಬಂದಿತವ್ವ ಗಾಡಿ ||3||
ಶುದ್ಧವಾಗಿ ದೈವ ಗಳಿಯುವ ಕಾಲ
ಗುರು ಶಿಕ್ಷಣ ಬೇಕರಿ ಮೊದಲ ||ಪ||
ನೆತ್ತಿ ಮ್ಯಾಲೆ ಹೊತ್ತುಕೊಂಡು ಕಲ್ಲ
ಗುರು ನಿಲ್ಲದೆ ಮಾನವ ನಲ್ಲ
ಆರು ಶಾಸ್ತ್ರಗಳು ಓದಿದರಿಲ್ಲ
ಮಸುದ್ಯಾಗ ನಿಂತು ಒದರುವದಲ್ಲ ||1||
ತನ್ನ ಮುಖ ತಾನು ತೊಳಿಯುವದಿಲ್ಲ
ರಾಮ ರಹೀಮ ರಸೂಲಿಲ್ಲ
ಅಷ್ಟ ಮದಕ ಹಾಕಬೇಕೊ ಜೇಲ
ಎಷ್ಟು ಸಡಿಲ ಬಿಡುಬ್ಯಾಡ ಖುಲ್ಲಾ ||2||
ರಜತಮ ಗುಣ ಸತ್ವದ ಮೂಲ
ನಡೆದಿದ್ದಾವೊ ಗುರುವಿನ ಚೇಲ
ಬಳಸಿ ಬ್ರಹ್ಮಚಾರಿಯ ಬಾಲ
ಗುರು ಚಿಂಚೋಳಿ ಇರು ಸ್ಥಳ ||3||
ಶಂಬೊ ಹರನ ನಂಬಗಿ ಮ್ಯಾಲ
ಗುರು ಸಿದ್ಧನ ದಯ ಅದೊ ನ ಮ್ಯಾಲ
ನಂಬಗಿ ಇದ್ದಾರೆ ಆಗಿರೊ ಬಾಲ
ಗಳಿಯುವಾರೊ ಕಾಲಾನ ಕಾಲ ||4||
ಶ್ರೀಗುರುವಿನ ಪಾದವ ಪಿಡಿಕೊ| ಕರ
ಮುಗಿದು ನೀ ಶಿರ ಬಾಗಿ ಬೇಡಕೊ ||ಪ||
ಗುರುವಿನ ಮಾರ್ಗಕೆ ಗರುತಿಟ್ಟು ನಡಿಬೇಕೊ
ಅರುವಿನೋಳು ಸುಳಿದಾಡಿ ನೀ ನೋಡಕೊ
ದುಷ್ಟ ಗುಣಗಳು ಸುಟ್ಟು ಭಸ್ಮವ ಮಾಡಿಕೊ
ನೆಟ್ಟಕ ಹಾದಿ ನೀ ಹಿಡಿಕೊ ||1||
ಹುಚ್ಚ ಆಗೊಸ್ತನಕ ಎಚ್ಚರ ಬರೊದಿಲ್ಲ
ನೆಚ್ಚಕಿ ನಿಲ್ಲ ಈ ದ್ಯಾಹಕೊ
ಆರು ಗುಣಗಳನ್ನು ಆವರಿಸಿ ಹಿಡಕೊಂಡು
ಆತಮ್ದೊಳಗೆ ನೀ ನೋಡಕೊ ||2||
ಬುದ್ಧಿ ಹೇಳುವರ ಗೂಡ ಶುದ್ಧಾಗಿ ಇರಬೇಕೊ
ಬದ್ಧ ಗುಣಗಳು ಹೊರಿಯಾಕ ನೂಕೊ
ಶಿವನಾಮ ಶಬ್ದವು ಬಾಯಿಲಿ ನುಡಿಲಾಕೊ
ನೀ ಹೋಗಿ ಇನ್ನೊಬ್ಬನ ಹಿಡಕೊ ||3||
ನಾಲ್ಕು ಆರು ಹತ್ತು ಹನ್ನೆರಡು ಹದಿನಾರು
ಎರಡು ಅಕ್ಷರ ನಜರಿಡಕೊ
ನಾಶಿಕ ಕೊನೆಯಲ್ಲಿ ದೃಷ್ಟಿಯ ನಿಲಿಸೊ
ಮೀರಿದ ಉನ್ಮನಿ ಗವಿ ಸೇರಿಕೊ ||4||
ಏಳು ಸುತ್ತಿನ ಕೋಟೆ ಬಾಜಾರದೊಳಕೊ
ನೀಲಗನ್ನಡಿ ಛಾಯ ಸುತ್ತೆಲ್ಲಾ ಬೆಳಕೊ
ಉತ್ತರ ದಕ್ಷಿಣ ದ್ವಾರ ನಾದ ನೀ ಕೇಳಕೊ
ಝಾಂಗಟಿ ಕೈ ತಾಳ ಗರ್ಜನ ಲಾಕೊ ||5||
ಪಶ್ಚಿಮ ದಿಕ್ಕಿಗೆ ಹೆಚ್ಚಿದು ಪ್ರಬಲ
ಸಚ್ಚಿದಾನಂದನ ಚಿದ್ರೂಪ ತಿಳಕೊ
ಧರೆಯೋಳು ಚಿಂಚೋಳಿ ಗುರು ಸಿದ್ಧಲಿಂಗನ
ನಾಮವ ಧ್ಯಾನಿಸಿ ಸೇವದಲ್ಲಿ ದುಡಕೊ ||6||
ಶಿವ ಶಿವ ಅನು ತಂಗಿ ಸುಮ್ಮ| ಗುರು
ಭಜನಿ ಮಾಡಿದವರಿಗಿಲ್ಲವೊ ಕರ್ಮ ||ಪ||
ಅಜ್ಞಾನೆಂಬುವ ಕತ್ತಲಳಿದು| ಸು
ಜ್ಞಾನದ ದೀವಿಗಿ ಹಚ್ಚವ್ವ ತಿಳಿದು
ಮುಚ್ಚಿದ ಬಾಗಿಲು ತೆರೆದು| ತುದಿ
ಪಶ್ಚಿಮ ದಿಕ್ಕಿನಲ್ಲಿ ಕರೆದೊಯ್ದಾನೆಳೆದು ||1||
ನಾನಾ ರೀತಿಲಿಂದೆ ಹೇಳಿ| ನಿನ್ನ
ಕೊರಳಲ್ಲಿ ಕಟ್ಟಿದ ಮಾಸಿಯ ತಾಳಿ
ಗುರುಮಂತ್ರ ಕಿವಿಯಲ್ಲಿ ಹೇಳಿ| ತೋ
ರಡಗಿದ ಗುರುವಿನ ಮರತ್ಹ್ಯಾಂಗಹ ಸುಳಿ ||2||
ಕಾವಿ ಹಚ್ಚಡವನ್ನು ಹಚ್ಚಿ| ಆ
ನಂದ ಗುರು ಮನೆಯೊಳೆಳೆದೊಯಿದ ಮುಚ್ಚಿ
ಗುರು ಸಿದ್ಧನ ಮಗಳೆ ನೀ ಗಚ್ಚಿ| ಶಿವನ
ಧ್ಯಾನ ಮಾಡದೆ ಭವ ದೊಳಗ್ಹಾಂಗೆ ಇರತಿ ||3||
ಸ್ವತಾ ಹೊಲ ಮಾಡಿ ಹೋಡಿ ತಮ್ಮ ನೀ ಹಕ್ಕಿ
ಒಂದು ಭಾರಕ್ಕೆ ಬೇಲಿ ಮಾಡೋ ನೀ ಜೋಕಿ ||ಪ||
ಸ್ವತಾ ಕವಣಿಯೋಳೋ ಧೈರ್ಯದ ಕಲ್ಲಾ ಹಾಕಿ
ನಿಂತು ಹೊಡಿದರೆ ಮುರಿಯಬೇಕೋ ರೆಕ್ಕಿ ||1||
ನಾಲ್ಕು ದಿಕ್ಕಿಗಿ ಹಚ್ಚಣ್ಣಾ ಬೆಂಕಿ
ಕಷ್ಟ ಬಿಟ್ಟು ತೆಗಿಯಬೇಕೋ ಕರಕಿ
ದುಷ್ಟ ಗುಣಗಳ ನೂರಾರು ಹಕ್ಕಿ
ನಷ್ಟ ಮಾಡ್ಯಾವೊ ತಿಂದೆಲ್ಲಾ ಕಂಕಿ ||2||
ಇಪ್ಪತ್ತೊಂದು ಸಾವಿರದಾ ಆರುನೂರ ನೆಪಲಿಂದೆ ಗಳಿ ಪಡ್ಯಾ ಹಾಕುವರಾ
ಒಪ್ಪಲಿಂದೆ ಮಾಡೋ ಸಂಸಾರ
ಮುಂದೆ ಆಗುವದೋ ಉದ್ಧಾರ ||3||
ಧರಿಯಳೊ ಚಿಂಚೋಳಿ ಊರ ಸಿಸ್ತಾ
ಗುರು ಶಾಂತಲಿಂಗನ ಪಾದಕ್ಕೆ ಮಸ್ತಾ
ಹಗಲಿರುಳು ಮಾಡುವೆ ನಮಸ್ತಾ
ಕಾಯಬೇಕು ನಮ್ಮಗೆ ಸಮಸ್ತಾ ||4||
ಹೊತ್ತು ಗಳಿಯೋ ಚಿತ್ತಿನೊಳಗ
ಚಿತ್ತು ಚಿನ್ಮಯ ದೇವರು ಹಾರೊ ನಿನ್ನೊಳಗ ||ಪ||
ಆರು ಮಂದಿ ಹಾರೊ ಒಳಗ| ನಿನ್ನೊಳಗ
ಸುಳ್ಳೆ ಬಡದಾಡುತ್ಯಾಕೊ ಗಳಸೀದಿ ಹಿಂಗ ||1||
ಎಂಟು ಮಂದಿ ಸಂಗವ್ಯಾಕ-ಬಿಡುಬೇಕ
ತುಂಟ ಮೂವರು ಹಾರೊ ಜೀವ ಆತ್ಮರಿಗ ||2||
ಮೂಲ ಮಾಯದ ಬಲಿ ಹಾಕ್ಯಾರ ಬಿಡುವಲ್ಲರ
ಬಲಿ ಕಡಿದು ನೀ ಕಡಿಗಾಗೊ ಸಿಲುಕದೆ ಇದರಾಗ ||3||
ಧರೆಯೋಳು ಚಿಂಚೋಳಿ ಊರ-ವಿಸ್ತಾರ
ನಮ್ಮ ಗುರು ಸಿದ್ಧನ ಮರಿಬ್ಯಾಡ-ನುಡಿದ ನುಡಿಗಳಿಗೆ ||4||
ಹಿಂಗ ಸಿಗುವದೋ ಗುರು ಮಾರ್ಗ
ಮುಕ್ತಿ ಮಾರ್ಗ ಮನುಜ ಮುಕ್ತಿ ಮಾರ್ಗ ||ಪ||
ಸಂತರ ಸಂಗತಿ ಹಿಡಿಯಬೇಕೊ
ಸತ್ಯವನ್ನು ನುಡಿಯಬೇಕೊ
ಅಸತ್ಯವನ್ನು ಬಿಡಬೇಕೊ
ಭಕ್ತಿಯನ್ನೂ ನೀನೆ ಮಾಡಬೇಕೊ
ಮನುಜ ಭಕ್ತಿಲಿಂದೆ ಮುಕ್ತಿ ಮಾರ್ಗ ||1||
ಸ್ರಾವಣ ಮನಸ ನಿಧೀ ಧ್ಯಾಸ
ಸರ್ವರಿಗಿ ನೀ ಈದ್ಧಿ ಕೂಸ
ಭ್ರುಕುಟದಲ್ಲಿ ನಿನ್ನ ವಾಸ
ಯೋಗದಿಂದ ಕಂಡೆನೋ ಕೈಲಾಸ
ಮನುಜ ಭಕ್ತಿಲಿಂದೆ ಮುಕ್ತಿ ಮಾರ್ಗ ||2||
ಪ್ರಾಹಲದ ಹೆಂತ್ತ ಭಕ್ತನೊ
ಓಂ ನಾಮ ನುಡಿದಾನೊ
ವಿಷವನ್ನು ಕುಡಿದನೊ
ನಿಮಗೆ ಆದೆನೋ ನಾನು
ಮನುಜ ಭಕ್ತಿಲಿಂದೆ ಮುಕ್ತಿ ಮಾರ್ಗ ||3||
ಧರಿಯೋಳೋ ಚಿಂಚೋಳಿ ಊರ,
ಗುರು ಸಿದ್ಧಲಿಂಗ ಹಾರಾ ಧೀರಾ
ಗುರುವೇ ನಮಗೆ ಆಧಾರ
ಮಾನವ ಜನ್ಮವು ಉದ್ಧಾರ
ಮನುಜ ಭಕ್ತಿಲಿಂದೆ ಮುಕ್ತಿಮಾರ್ಗ ||4||
ಹೊಡಿಯಲಾರೆ ಈ ಊರೋಗಿನ ಗುಬ್ಬಿ ಹಗಲಿರುಳೆ
ಬೊಬ್ಬಿ ಹೊಡಿಯಲಾರೆ ಈ ಊರೊಳಾಗಿನ ಗುಬ್ಬಿ ||ಪ||
ಹೊಡಿಯಲಾರೆ ಎದೆ ಭುಗಿ ಭೂಗಿಲು ಅನುತ್ತಲೆ
ಹೊಡಿಯಲಾರೆ ಎದೆ ಭುಗಿ ಭೂಗಿಲು ಅನುತ್ತಲೆ
ಕವಣಿಯ ಪಿಡಿದು ಒದರಿಕೊಂಡ ಬೊಬ್ಬಿ
ಬರುತಾವಲ್ಲೊ ಗುಬ್ಬಿ ||1||
ಉದಯದಲೆದ್ದು ಮುನ್ನ ಹೋಗಿದ ಹೊಲಕ್ಕಾಗಿ ಬರುತಾವೊ ಅಲ್ಲೊ ಸಾಗಿ
ಸೆಸಿಯ ಮಿಂಚಿನಕಾಳು ಉದುರುಸುತ್ತಾವೊ ಬಾಗಿ
ಒದುಕೊಂದು ಮೇಲಾಗಿ ತಿತ್ತಾವೊ ಏನು ಭೇಗಿ
ಹೊಗುತ್ತಾವ ಲಗು ಭೇಗಿ ||2||
ಬರುತ್ತಾಲೆ ಬಂದು ಗುಬ್ಬಿ ಏರಿದಾವೊ ತೆನಿಯಾ
ಕಾಳಿನ ಕೊನಿ ಕೋನಿಯಾ ಅಂದ ಚಂದದಿಂದ
ಉದುರುಸುತ್ತಾವೊ ಗುನಿಯಾ ಹ್ಯಾರೈಡು ಗೆಣಿಯ
ಉಚ್ಚುತಾವೊ ಗುನಿಯಾ ||3||
ಇಂದಿನ ರಾತ್ರಿ ಹೊಂದಿಕೊಂಡಿದರೆ ಕೇಳುತ್ತಾವೊ ಧನಿಯಾ
ಹಾರೈಡೋ ಗೆಣಿಯ ಬರುತಾವೊ ಸನಿ ಸನಿಯಾ
ಒಂದುಕೊಂದು ಸನಿಯಾ ಮೇಲಿನ ದೇಶಿಯ
ಚಂದ್ರ ಸೂರ್ಯ ನತ್ತ ಗೆಣಿಯ ||4||
ಈ ಹೊಲ ಏನ್ನಾಗೆ ಬ್ಯಾಸರ ಆಗಿತ್ತಲ್ಲ ಮುಂದಕೆ ಸಾಗಣ್ಣ
ಸಂಹರ್ಸ ಲಿಂಗನ ಪಾದವು ನೋಡಲ್ಲಾ ಸಿದ್ಧಲಿಂಗ ತಾ ಬಲ್ಲ
ಊರೊಳಗೊಬ್ಬ ಬಸವೇಶನಲ್ಲಾ ಶರಣ ಹೋಗಿದೆನಲ್ಲಾ
ಶರಣ ಹೋದೆನಲ್ಲಾ ||5||
ಈಗ ಏನು ಪೇಳಲಿ ಗುರುರಾಯಾ
ನೋಡ ನೋಡುತ ಕಳದೆಲ್ಲೊ ಮಾಯಾ ||ಪ||
ತತ್ತ್ವಮಸಿ ಮಹಾಕಾವ್ಯ ಕೇಳಿ
ಹಾರಿ ಹೋಯಿತು ದ್ವೈತದ ಧೂಳಿ ||1||
ನಾನೇ ದೇಹ ಅಂಬೋದು ಇತ್ತು ಮರವು
ನೀನೇ ಬ್ರಹ್ಮ ಅಂದ ತೋರಿದಿ ಅರವು ||2||
ಮಾಣಿಕ ಪೆಸರು ಆಗಿ ಲೋಪಾ
ಉಳಿತು ಸಚ್ಚಿದಾನಂದ ಸ್ವರೂಪಾ ||3||
ಓ ಸಖಿ ಕಂಡೆ ನಾನು
ಸ್ವಾಮಿ ಸಂಗಮೇಶನೆ ||ಪ||
ಕೇತಕಿ ಪ್ರಿಯ ಕಮಲೋದ್ಭವ ದಾತಾ
ಕಲ್ಮಿಶನಾಶನ ಮಹೇಶನೆ ||1||
ಬಾಣಾ ಕೃತಿಸಿಹ ಅಂಬ ವಿರಾಜಿತ
ಭವ ಭಯನಾಶ ದಿನೇಶನೆ ||2||
ಸದಾನಂದ ಶಾಶ್ವತ ಶಿವ ಸರ್ವಾತ್ಮಕ
ಮಾಣಿಕ ಪ್ರಭು ಜಗದೀಶನೆ ||3||
ಕಂಡೆ ನಾ ನಮ್ಮ ರೇವಣಸಿದ್ಧಾ
ಕಂಡೆ ನಾ ನಮ್ಮ ರೇವಣಸಿದ್ಧಾ ||ಪ||
ನಿರ್ವಿಕಾರ ನಿರಂಜನ ನಿರ್ಗುಣ
ನಿರಾಲಂಬ ಸ್ವತಃಸಿದ್ಧ ||1||
ರೇವಗಿಪುರಿ ಗಿರಿ ವಾಸ ಮಾಡಿದಾ
ಜಗದೊಳಗೆ ಎಲ್ಲಾ ಪ್ರಸಿದ್ಧಾ ||2||
ಮಾಣಿಕ ಗುರು ಎನ್ನ ಮಾಯಾಕೆ
ಆದಳು ಚಿತ್ಸ್ವರೂಪ ತೋರಿಸಿದಾ ||3||
ಗುರುವಿಗೆ ಶರಣು ನಾ ಹೋದೆನೆ
ಸ್ವಯಂಮೇವ ಬ್ರಹ್ಮ ನಾ ಆದೆನೆ ||ಪ||
ಮರತಿದ್ದೇನೆ ನನ್ನ ನಾ ನನಗೆ
ಶ್ರೀಗುರು ತೋರಿದ ನನ್ನ ಒಳಗೆ ||1||
ಜೀವ-ಶಿವ ಎರಡು ಒಂದಾಯಿತೆ
ಜನನ ಮರಣ ಭ್ರಾಂತಿ ಹೋಯಿತೆ ||2||
ಅಜ್ಞಾನ ಕತ್ತಲ ಜ್ಞಾನದ ಬೆಳಗೆ
ಮಾಣಿಕ ತುಂಬ್ಯಾನ ಜಗದೊಳಗೆ ||3||
ಗೋಪಿ ನಿನ ಕಂದಾ ಬಾಲ ಮುಕುಂದಾ
ಹಿಂಗ ಮಾಡಿದರೆ ಏನು ಛಂದಾನೆ ||ಪ||
ಬಾಲ ಗೊಲ್ಲರ ಕುಡಿ ನಂದ ಕಿಶೋರಾ
ಹಾಲ ಮೊಸರು ಕೆನಿ ತಿಂದಾನೆ ||1||
ನಿನ್ನೆ ನನ್ನ ಸಣ್ಣ ಸೊಶಿವಯದಾನೆ
ಯಳದಿಕಶಿ ಭೋಗಿಸಿದಾ ಗೋವಿಂದಾನೆ ||2||
ಮಾಣಿಕ ಪ್ರಭು ಅವತಾರ ಗೋಕುಳದಲ್ಲಿ
ದುಷ್ಟ ಕಂಸನಿಗೆ ಕೊಂದಾನೆ ||3||
ಗೋಪೀ ಗೃಹೀ ದಧಿ ಚೋರಿ ಸೀದಾ
ನೋಡಿರಮ್ಮ ಎನ್ನಾ ||ಪ||
ಮಸ್ತಕದಲ್ಲಿ ಮುಗುಟ ಮುಖ ಕರದಲ್ಲಿ
ಮುರಲಿ ಕುಂಡಲ ಮಕರಾಕಾರಾ ||1||
ಕಸ್ತೂರಿ ತಿಲಕ ಕಂಠದಲ್ಲಿ ಪದಕಾ
ಶಂಖ ಚಕ್ರ ಗೋವರ್ಧನ ಧಾರಾ ||2||
ಮಾಣಿಕನೆ ಪ್ರಭು ಕಂಸವಿಧಾತಾ
ಪೀತವಸನ ನಂದಕಿಶೋರಾ ||3||
ಛೀಂ ಹೋಗೊ ನೀ ಮೂಢಾ ಇದೇನಿದು ತಿಳುವಳಿಕಿ
ದೃಶ್ಯ ದೇಹಗ ನೋಡಿ ನಾನೇ ದೇಹ ಅಂದು ಸೊಕ್ಕಿ ||ಪ||
ಬ್ರಹ್ಮ ಹುಲಿ ನೀ ಇದ್ದು ಮಾಯಿ ಕುರಿ ಹಿಂದ ಸಿಕ್ಕಿ
ಸುಖ ಸಾಮ್ರಾಜ್ಯ ನಿಧಿ ನೀ ಬಿಡು ಈ ವಿಷಮ ಸುಖ ಭಿಕ್ಕಿ ||1||
ಈ ಮಾಯಾ ಕೇಳೊ ಯಾರಕ್ಕಿ ತಾ ಶೂನ್ಯವಾಗಿ ಕಾಣಕ್ಕಿ
ನಿಜ ಆತ್ಮದಲ್ಲಿ ಹುಟ್ಟಕಿ ಶಿವಭಕ್ತರಿಗೆ ಸಣ್ಣಾಕಿ ||2||
ಅಜ್ಞಾನಿ ಜನಕೆ ದೊಡ್ಡಾಕಿ ಆಗಿ ಚಲವಕ್ಕಿ ಬೀಳತಾಳ ತಕ್ಕಿ
ಚಿನ್ಮಾರ್ತಾಂಡ ಬೆಳಗಿಗೆ ಮಾಯಿತೊ ಮಾಯದ ಚುಕ್ಕಿ ||3||
ನಿನ್ನ ಒಳಗೆ ನೀ ನಿನಗ ನೋಡೊ
ಎಲೊ ಅನುಮಾನಿಸಬ್ಯಾಡೊ ||ಪ||
ನಿರಾಕಾರ ನೀ ಆಕಾರನು ಅಲ್ಲಾ
ನಾ ದೇಹ ಭ್ರಾಂತಿ ಬಿಡೊ ||1||
ದೇಹ ಅಶಾಶ್ವತ ವಸ್ತುನೆ ಶಾಶ್ವತ
ಮೃತ್ಯು ಚಿಂತಿ ಬಿಟ್ಟು ಕೊಡೊ ||2||
ಮಾಣಿಕ ನಿನಗೆ ಈ ಮಾತ ತಿಳಿಲಿಕ್ಕೆ
ಸದ್ಗುರು ಸೇವಾ ನೀ ಮಾಡೊ ||3||
ನೀ ದಾರು ನನಗೆ ನಾ ಏನು ನಿನಗೆ
ನಾ ನೀ ಅಂಬೋದು ಪ್ರಕೃತಿ ಸ್ವಭಾವ ||ಪ||
ಪ್ರಥಮಲ್ಲಿ ಶಿವನು ಅವರಿಂದ ಜೀವನು
ಶಿವನು ಇಲ್ಲದಲಿ ಜೀವನು ಅಭಾವ ||1||
ಎಲ್ಲಿತ್ತು ಕಾಯಾ ಅಲ್ಲಾದೊ ಛಾಯಾ
ಕಾಯಾ ಇಲ್ಲದಲ್ಲಿ ಛಾಯಾನು ಅಭಾವಾ ||2||
ಮಾಣಿಕ ಹೆಸರಲ್ಲಿ ನೀ ನಾನು ಹುಟ್ಟಲ್ಲಿ
ದ್ವೈತಮಾರ್ಗ ಬಿಟ್ಟು ನೋಡ ಅನುಭವಾ ||3||
ಬಸವ ಬಸವ ಬಸವ ಬಸವ ಬಸವನೆಂಬಿನೆ
ಬಸವ ಬಸವ ಬಸವನೆನಿಸಿ ಬಸವನಾದೇನೆ ||ಪ||
ತಾಯಿ ಬಸವ ತಂದಿ ಬಸವ ಬಳಗ ಬಸವನೆ
ಮಿತ್ರ ಬಸವ ಗೋತ್ರ ಬಸವ ಸೂತ್ರ ಬಸವನೆ ||1||
ಅರಸ ಬಸವ ರಂಕ ಬಸವ ರೂಪಿ ಬಸವನೆ
ಕುರೂಪಿ ಬಸವ ಸ್ತ್ರೀನು ಬಸವ ಪುರುಷ ಬಸವನೆ ||2||
ನೀನು ಬಸವ ನಾನು ಬಸವ ಗುರು ಬಸವನೆ
ಶಿಷ್ಯ ಬಸವ ಜ್ಞಾನಿ ಬಸವ ಅಜ್ಞಾನಿ ಬಸವನೆ ||3||
ಹಿಂದ ಬಸವ ಮುಂದ ಬಸವ ಎಡಬಲಕೆ ಬಸವನೆ
ಮ್ಯಾಲ ಬಸವ ಕೆಳಗ ಬಸವ ನಡುವ ಬಸವನೆ ||4||
ಬೇಡು ಬಸವ ಕಾಡು ಬಸವ ಮಾತಾಡು ಬಸವನೆ
ವಿರಕ್ತಿ ಬಸವ ಶಾಂತಿ ಬಸವ ಭಕ್ತಿ ಬಸವನೆ ||5||
ಯೋಗಿ ಬಸವ ತ್ಯಾಗಿ ಬಸವ ಭೋಗಿ ಬಸವನೆ
ರೋಗಿ ಬಸವ ಆಗಿ ಬಸವ ಹೋಗಿ ಬಸವನೆ ||6||
ಜೀವನು ಬಸವ ಶಿವನು ಬಸವ ಮಾಯಾ ಬಸವನೆ
ಕಾಯಾ ಬಸವ ಪ್ರಾಣ ಬಸವ ಲಿಂಗ ಬಸವನೆ ||7||
ಅಯ್ಯಾ ಬಸವ ಕ್ರಿಯಾ ಬಸವ ನಡನುಡತಿ ಬಸವನೆ
ಪಾದೋದಕ ಬಸವ ಪ್ರಸಾದ ಬಸವ ಆನಂದ ಬಸವನೆ ||8||
ಪೃಥ್ವಿ ಅಪ್ ತೇಜ ವಾಯು ಆಕಾಶ ಬಸವನೆ
ನಿರ್ಗುಣ ಬಸವ ಸಗುಣ ಬಸವ ಮಾಣಿಕ ಬಸವನೆ ||9||
ಬ್ಯಾಗನೆ ಗುರುವಿಗೆ ಶರಣು ನೀ ಹೋಗೊ
ಬ್ಯಾಗನೆ ಗುರುವಿಗೆ ಶರಣು ನೀ ಹೋಗೊ ||ಪ||
ಹೃದಯ ಕಮಲದಲ್ಲಿ ಗುರು ಚರಣಕ್ಕೆ ಇಟ್ಟು
ಪ್ರೇಮಲಿ ಜೋಗುಳ ಜೋಗೊ ||1||
ಮಾಣಿಕನೆ ಗುರು ಶರಣಕ್ಕೆ ಹೋಗಿ
ಸ್ವಯಮೇವ ಬ್ರಹ್ಮನೀ ಆಗೋ ||2||
ಮುಕ್ತನಾಗಿದ್ಯೊ ಅಣ್ಣಾ ಮುಕ್ತ ನೀ ಇದ್ಯೋ ತಮ್ಮಾ
ನೀ ಮುಕ್ತ ನಾನು ಮುಕ್ತ ಜಗಸಹಿತ ಜಂಗಮ ಮುಕ್ತ ||ಪ||
ಪಂಚಭೂತಾದಿಗಳು ಸುಳ್ಳೇನೆ ಕಾಣವಂದು
ಊರು ಇಲ್ಲದೆ ಸೀಮಿ ಇಲ್ಲ ಕಾಣ್ಯಾದೊ ತಮ್ಮಾ ||1||
ವಂಧ್ಯಾನಾ ಪುತ್ರಗಳು ಮುಗಲ ಪುಷ್ಪವು ಹಾಕಿ
ಪ್ರಾಣ ಇಲ್ಲದೆ ಕಣಶಿ ರಾಜ್ಯಾ ಮಾಡ್ಯಾದೊ ತಮ್ಮಾ ||2||
ಅಜ್ಞಾನ ಕತ್ತಲದಲ್ಲಿ ನಾ ನೀನು ಬದ್ಧಾ ಮುಕ್ತಾ
ಜ್ಞಾನ ಮಾರ್ತಾಂಡ ಬಳಿಗಿ ಸುಮನೆ ನೀ ಆಗೊ ತಮ್ಮಾ ||3||
ವಸ್ತು ಅಲ್ಲಿಲ್ಲಾ ಇಲ್ಲಿಲ್ಲಾ
ಠಾವ ಠಿಕಾಣಿನೆ ಇಲ್ಲಾ ||ಪ||
ತೆಳಗೆ ಮ್ಯಾಲಿಲ್ಲಾ ನಡುವಿಲ್ಲಾ
ನೋಡಿದವನು ನೋಡಿಲ್ಲಾ ||1||
ರಕ್ತ ಶ್ವೇತಲ್ಲಾ ಶಾಮಲ್ಲಾ
ನೀಲಪೂರ್ಣ ಅದು ಅಲ್ಲಾ ||2||
ಮಾಣಿಕ ಹೆಸರಲ್ಲಾ
ಹಾನ ಇಲ್ಲಾ ತಾನೆ ಬಲ್ಲಾ ||3||
ವ್ಯಾಪಕ ಶಿವ ಹೀಂಗ ಅಂದವನು ತಾನೆ
ಮತ ಒಬ್ಬ ತಾನೇನು ರಂಕನು ತಾನೆ ||ಪ||
ಮೂಢನು ತಾನೆ ಚತುರನು ತಾನೆ
ಅರಸನು ತಾನೇನು ರಂಕನು ತಾನೆ ||1||
ರೂಪನು ತಾನೇನು ಕುರೂಪನು ತಾನೆ
ಬಲವಾನ ತಾನೇನು ನಿರ್ಬಲನು ತಾನೆ ||2||
ಸಣ್ಣವನು ತಾನೇನು ದೊಡ್ಡವನು ತಾನೆ
ಶ್ರೀಗುರು ತಾನೇನು ಶಿಷ್ಯನು ತಾನೆ ||3||
ಪಿಂಡಾಂಡ ತಾನೇನು ಬ್ರಹ್ಮಾಂಡ ತಾನೆ
ಮಾಣಿಕ ಹೆಸರ ಹೀಂಗ ಇಟ್ಟವನು ತಾನೆ ||4||
ಹೇ ಪ್ರಭು ದಯಾನಿಧೆ ನೀ ನಮಗೆ ಪಾಲಿಸು
ಜ್ಞಾನಹೀನ ನಮ್ಮ ಮತಿಗೆ ಬೆಳಕು ಕಾಣಿಸು ||ಪ||
ನಾನು ನೀನು ಅವಳು ಅವನು ಯಾರುಯೆಂಬುದು
ಹೇಗೆ ಏನೊ ಯಾಕೆ ಎಂದು ಏನು ತಿಳಿಯದು ||1||
ಯೋಗಲೇಸು ಧ್ಯಾನ ಲೇಸು ಭಕ್ತಿ ಲೇಸವೋ
ಹೀನದೀನ ಮಂದಮತಿಗೆ ಏನು ತೋಚದು ||2||
ಏನು ತತ್ವಜ್ಞಾನ ವೇದ ವಾಕ್ಯವೋ
ನೀ ಕರ್ಮ ಜಾತಿ ಧರ್ಮ ಏನು ಅರಿಯದು ||3||
ನೋಡಿ ನೋಡದೆ ಕಂಡು ಕಾಣದೆ ಸುಳ್ಳು ನುಡಿಯದು
ದೈವ ಜಾತ ಕಲಿಯಕಾಟ ಹೇಗೆ ಸಹಿಸದು ||4||
ನಾಕು ದಿಕ್ಕು ದಿಗಿಲು ಹೆಚ್ಚು ಹೇಗೆ ತಡಿಯದು
ಸಿದ್ಧನಾಗಿ ದಾರಿ ತೋರೊ ಪಾರವಾಗದು ||5||
ಅಂತಾ ಹಿಂಥಾದು ಎಲ್ಲಾ ಬರಲಿ
ಚಿಂತಿ ಎಂಬುದು ನಿಜವಾಗಿರಲಿ
ಅಂತಪುರ ಗುರುವೆ ನಿಮ್ಮ
ಅಂತಃಕರಣ ನಮ್ಮ್ಯಾಲ ಇರಲಿ| ||1||
ಉದ್ದಿಮೆ ವ್ಯಾಪಾರ ಹುಟ್ಟಿದಂಗ ಆಗಲಿ
ಬುದ್ಧಿ ಜ್ಞಾನ ಇಲ್ಲದಂಗ ಆಗಲಿ
ಮದ್ದು ಹಾಕಿ ಎನಗೆ ಕೊಲ್ಲಲಿ
ಹದ್ದು ಕಾಗಿ ಹರಕೊಂಡು ತಿನ್ನಲಿ| ||2||
ಹೆಂಡರು ಮಕ್ಕಳು ಬಿಟ್ಟುಕೊಟ್ಟ ಹೋಗಲಿ
ಗಂಡ ಸಂತಾನ ಇಲ್ಲದಂಗ ಆಗಲಿ
ಸಾಲಗಾರು ಬಂದು ಕುಂಡಿ ಕುಂಡಿ ಒದಿಲಿ
ಜಗದೊಳು ಭಂಡನಾಗಲಿ| ||3||
ವಿಷಯಪಂಥ ಗೆಲ್ಲಲದಂಗ ಆಗಲಿ
ವೇಶ್ಯಾ ಸೂಳಿ ಮಗನಾಗಲಿ
ದಾಸನಾಗಿ ಭಧ್ರೇಶ್ವರನಾ
ಧ್ಯಾಸ ಮರಿಯಲದಾಂಗಿರಲಿ| ||4||
ಅಂಬಾ ಅಂಬಾ ಆರುತಿ
ಬೆಳಗುವೆ ಕರ್ಪೂರದ ಜ್ಯೋತಿ
ಮೀರಿದ ಉನ್ಮನಿಯಲ್ಲಿ ಸೇರಿದ ಪ್ರಕೃತಿ| ||1||
ಪರಲೋಕದಲ್ಲಿ ನಿಮ್ಮ ಪಾರ್ಬತಿ ಎಂಬ ನಾಮ
ತೂಕಾ ತೂಕಾ ಅಂತಾರಮ್ಮ
ತುಳಜಾಪುರ ವಾಸ ನಿಮ್ಮ| ||2||
ಮಹಾನವಮಿ ನಿಮ್ಮ ತಿಥಿ
ಉಧೋ ಉಧೋ ಎಂಬ ಸ್ತುತಿ
ಮಾತಂಗನ ಮನಿಯೊಳಿರತಿ
ಮುರಳಿ ವೇಷ ತಾಳಿ ಬರತಿ| ||3||
ಅಹಂ ಸೋಹಂ ದಿವ್ಯ ಜ್ಯೋತಿ
ಮೂರು ಲೋಕದಲ್ಲಿ ಶೃತಿ
ನವಲಕ್ಷ ತಾರಾ ಆಕೃತಿ
ನಯನಕ ಅಕೃಷ್ಣ ಶಕ್ತಿ| ||4||
ಸುಷುಮ್ನದಲ್ಲಿ ಇರುತಿ
ಕಾರ್ಯಕಾರಣಕೆ ಬರುತಿ
ನಿಗಮಕೆ ನಿಲುಕದ ಮೂರ್ತಿ
ಸಂತರೊಳು ತೊತ್ತಾಗಿರುತಿ| ||5||
ನಿಡವಂಚಿ ಗ್ರಾಮದ
ಶಂಕರಲಿಂಗ ಸೇವಕನಾದ
ನಿಲಯದಿ ಗುರುಮಠ
ಆಲಯದೋಳು ಆಡಿದಂತೆ| ||6||
ಅಲಕ್ ನಿರಂಜನ ದತ್ತ ದಿಗಂಬರ
ದೀವಟಿಗಿ ಬೆಳಗುವ ದೀನ ದಯಾಳಗೆ| ||1||
ನಿಷ್ಕಳ ಮೂರುತಿ ನಿರ್ಮಲದಾರುತಿ
ದೀವಟಿಗಿ ಬೆಳಗುವೆ ದೀನದಯಾಳಗೆ| ||2||
ಸಂಗನ ಶರಣರ ಗಣಗಂಳ ಪಾದಕೆ
ದೀವಟಗಿ ಬೆಳಗುವೆ ದೀನದಯಾಳಗ| ||3||
ಉದಗಿರಿ ಈಶಗೆ ಉನ್ಮನಿ ವಾಸಗೆ
ದೀವಟಿಗಿ ಬೆಳಗುವೆ ದೀನದಯಾಳಗ| ||4||
ಅಲಲಲಾ ಏನ ತಾರೀಪಾ
ಬೈಲದೊಳಗೆ ಕಾನಸ್ತಾದ ಅಪರೂಪ
ನೀಲದೊರಣಕಪ್ಪ ಮೇಲೆ ಹಸರ ಬಿಳುಪ
ಇಲ್ಲೊ ಎನಕಡಿ ತಪ್ಪ ಬಲ್ಲವರಿಗೆ ತಿಳದೀತಪ್ಪ| ||1||
ನೋಡಿದವ ಹುಡಕೋದಿಲ್ಲ
ಗಡಬಡಿಸಿ ಹುಡುಕಿದರೆ ಸಿಗೋದಿಲ್ಲ
ಹಿಡದವಗ ಏನಿಲ್ಲ ಕಡದವಗ ಸಾವ ಪಲಾ
ಬಡದಾಟ ಗಾಳಿ ಮೇಲಾ ಸುಡುತಾದ ಬೆಂಕಿ ಬಿಸಲಾ| ||2||
ಗಾಳಿಗೆ ಮೊಟ್ಟಿ ಕಟ್ಟತಾರ
ಮಾಳಿಗಿ ಮ್ಯಾಲ ತುಳಸಿ ರಾಸಿ ಮಾಡತಾರ
ಜಾಳಗ್ಯಾಗ ತುಂಬತಾರ ಕೋಳಿ ಮ್ಯಾಲ ಹೇರತಾರ
ಹೇಳಿ ಕೇಳಿ ಮಾರತಾರ ತಾಳಿಕೋಟಿ ಬಾಜಾರ| ||3||
ಒಣಕಿ ಪೆಟ್ಟು ಬೀಳಲಿಲ್ಲಾ
ಸಣ್ಣಕ್ಕಿ ಥಳಿಸಿಕೊಂಡು ಹೋದಳಲ್ಲ
ಜಾಣತನ ಬಹಳ ಇಲ್ಲ ಕೋಣ ಸೂಳೆ ಮಕ್ಕಳವರಲ್ಲಾ
ಕಾಣಸಂತಾದ ದೂರಿಲ್ಲ ಕಣ್ಣು ತುಂಬ ನೋಡಿದೆನಲ್ಲ| ||4||
ಸೆಂಡಾ ಗುಂಡಾ ಬಸರಾಗಿ
ಪುಂಡಮಗ ಹುಟ್ಟಿದನೋ ಶಿವಯೋಗಿ
ಗಂಡ ಊರಿಗೆ ಹೋಗಿ ಪುಂಡ ಬಂದನೋ ತಿರಗಿ
ರಂಡೆರೆಲ್ಲಾ ಮುತ್ತೈದೇರು ಕಂಡವರೆಲ್ಲಾ ತೆಲಿಬಾಗಿ| ||5||
ಅಲಾಯಿ ಎಂಬುದು ಏನಿದು
ಯಾರ್ಯಾರಿಗೆ ಇದು ತಿಳಿದಿಲ್ಲಾ
ತಿಳಿದ ಮ್ಯಾಲ ಅವರುಳಿದಿಲ್ಲಾ
ಉಳಿದ ಮ್ಯಾಲ ಅವರಳಿದಿಲ್ಲಾ| ||1||
ಪೀರ್ ಪೈಗಂಬರ ಉಳಿದವರು
ಹಿಂದು-ಮುಸಲ್ಮಾನ ಆಗಿದರು
ರಾಮ ರಹೀಮ ಅವರಿಬ್ಬರು
ದೀನ ದಯಾಳ ಶರಣಂ| ||2||
ಶರಣರು ಕಲಮಾ ಓದಿದರು
ಮಾಯಿಗೆ ಉತ್ಪನ್ನ ಮಾಡಿದರು
ಮಾಯಿ ಹೊಟ್ಟಿಲೆ ಹುಟ್ಟಿದ ಮಾವಯ್ಯ
ಹೇಜಿಬನಂತ ಹೆಸರಿಟ್ಟಿದರು| ||3||
ಮಾಯಿಗೆ ಮದವಿ ಆಯಿತಲ್ಲ
ಚಿಕ್ಕ ಪ್ರಾಯ ವಯ ಬಂತಲ್ಲ
ಸದ್ಗುಣ ದುರ್ಗುಣ ಹುಟ್ಟಿದರಲ್ಲಾ
ಜನ್ಮ ಮರಣ ಅವರ ಹಿಂಬಲ| ||4||
ಸದ್ಗುಣ ಸತ್ಯ ಶರಣಂ
ದುರ್ಗುಣ ಮಿಥ್ಯ ಹೇಜಿತರು
ಸದ್ಗುಣದವರಿಗೆ ದುರ್ಗುಣದವರು
ಹೊಡಿದು ಯಾಲಿ ಧೂಲಾ ಆಡಿದರು| ||5||
ಯಾಲಿ ಧೂಲಾ ಅನ್ನುತ ಕುಣಿವರು
ಕುಣಿಯುತ ಸುತ್ತ ಕುಣಿದಾಡುವರು
ಸತ್ತವರ್ಯಾರು ಹೊತ್ತವರ್ಯಾರು
ಅತ್ತವರ್ಯಾರು ಹೇಳುವರ್ಯಾರು| ||6||
ಈ ಮಾತಿನ ಗುರುತಾ
ವೈರಿಗೆ ಕೇಳುತಿನಿ ಮಜಬೂತಾ
ಯಾರ ಅಲಾಯಿ ಯಾರ ಮಾಡತಾರ
ಜಲ್ದಿ ಕೇಳಿ ಹೇಳಿರಿ ಗುರ್ತಾ| ||7||
ಭಲೇ ಸಿಕ್ಕಿ ನಮ ಕೈಯಾಗ
ಕೌಡಿ ಪೇಣಸ್ತಿನಿ ಮೂಗಿನಾಗ
ಹುಡುಕಿ ನೋಡೋ ನಿನ್ನ ಕಿತಾಬದಾಗ
ಕರಕೊಂಡು ಬಾ ನಿನ್ನ ವಸ್ತಾದಗ| ||8||
ಕಿತಾಬದೊಳಗಿನ ಮಾತಲ್ಲಾ
ಹುಡುಕಿ ನೋಡಿದರೆ ಸಿಗೋದಿಲ್ಲಾ
ಕಣ್ಣಿನ ಕೊನಿ ಮ್ಯಾಲ ಕುಣಿದಾಡುವದಲ್ಲಾ
ಯ್ಯಾರ್ಯಾರಿಗೆ ಇದು ತಿಳಿದಿಲ್ಲ| ||9||
ಫಕೀರ ಬೇ ಫಿಕಿರೀ
ಅವನಿಗೆ ಅಂತಾರ ಪಯಂಬರಿ
ಎಲ್ಲರಿಗೆ ಅಂವ ಸಾಕ್ಷಾತ್ ಹಾನೋ
ಮಾಲಕ ಇದ್ದನೊ ಪರಭಾರಿ| ||10||
ಮಾಲಕ ಗುರು ಶಂಕರ ಭವಲಾ
ಅವರ ಹಸ್ತ ನಮ ತೆಲಿಮ್ಯಾಲ
ಮೂರು ಲೋಕ ಬೆಳಕ ಬಿದ್ದಿತಲ್ಲಾ
ಚಿನ್ಮಯ ಜ್ಯೋತಿ ಜಗಮೇಲಾ| ||11||
ಅರುವು ತೋರಿದ ಗುರುವಿಗೆ ಮರತ್ಯಾಂಗಿರಲಮ್ಮ
ತೋರಡಗಿದನಮ್ಮ| ||1||
ಒಳಗೆ ಹೊರಗೆ ತಾನೇ ನಿಂತು ಛಾಯಾ ತೋರಿದನಮ್ಮ
ಮಾಯಾ ಆದನಮ್ಮ| ||2||
ಶಿವನೊಳಗೆ ಜೀವ ರೂಪ ಜಂಗಮಾದನಮ್ಮ
ಸಂಗಮೇಶನಮ್ಮ| ||3||
ಖೂನಾ ಇಲ್ಲದಂತವರ ಖೂನಾ ತೋರಿದನಮ್ಮ
ಕೂಡಿ ಉಂಡೆನಮ್ಮ| ||4||
ನಾನು ನೀನು ಎಂಬುದು ಬಿಡಿಸಿ ತಾನೇವಾದನಮ್ಮ
ತನವು ಸಾಕ್ಷಿ ಬ್ರಹ್ಮ| ||5||
ಮಾನಾಪಮಾನ ಎರಡು ಪಾನ ಮಾಡಿದನ್ನ
ಪರಮ ಸುಖವಮ್ಮ| ||6||
ಜ್ಞಾನ ಮಾರ್ಗ ತೋರಿ ಮುಕ್ತಿ ಮೂಲ ತಿಳಿಸಿದನಮ್ಮ
ಹ್ಯಾಂಗ ಮರಿಯಲಮ್ಮ| ||7||
ನಾದ ಶಬ್ದದೊಳಗೆ ಮನವು ಮುಕ್ತಿ ಮೂಲ ತಿಳಿಸಿದನಮ್ಮ
ಲೀಲಾ ತೋರಿದನಮ್ಮ| ||8||
ಜಾತಿಗೆಡಿಸಿ ಭೀತಿ ಜ್ಯೋತಿ ರೂಪವಮ್ಮಾ
ಮುದ್ರದಲ್ಲಿ ತೋರಿದನಮ್ಮ| ||9||
ಕಂಡು ಮನಸು ನೆನಸಿದಲ್ಲಿ ನಿಲಕ್ಯಾಡಿದನಮ್ಮಾ
ನೀಲಕಂಠನಮ್ಮ| ||10||
ಆರು ಲಿಂದೊಳಗಿರುವ ಅರಿವು ತೋರಿದನಮ್ಮ
ಸ್ಥಿರವು ಮಾಡಿದನಮ್ಮ| ||11||
ಚಿತ್ತಿನೊಳಗೆ ಚಿನ್ಮಯವಾದ ರೂಪಾ ತೋರಿದನಮ್ಮ
ಚೆನ್ನಬಸವನಮ್ಮ| ||12||
ಮನದ ಕೊನೆಯ ಮೇಲೆ ಉಯ್ಯಾಲೆ ಉದಗಿರಿ ಕ್ಷೇತ್ರವಮ್ಮಾ
ಶಿಖರ ಏರಿ ನೋಡಿದೆನಮ್ಮಾ| ||13||
ಸಿದ್ಧರಾಮ ರಾಚೋಟೇಶ್ವರನ ಕೂಡಿಕೊಂಡೆವಮ್ಮಾ
ಬೈಲೊಳು ಬೈಲಾದರಮ್ಮ| ||14||
ಆಗತಾದರೊ ಬಾಬಾ ಆಗತಾದರೊ
ಮೂರು ಲೋಕದೊಳಗ ಮೃತ್ಯುದೇವಿ ಹಬ್ಬ ಆಗತಾದರೊ
ಕಾಡಿಗಿ ಹಚ್ಚಕೊಂಡವರೆಲ್ಲಾ ಕಣ್ಣ ತುಂಬಾ ನೋಡತಾರೊ
ಕನ್ಯ ಮುತ್ತೈದೆಯರು ಕಾರ ಮಿಂಚಿದಂಗರೊ| ||1||
ಹಸರ ತೇಜಿ ಏರಿ ನಿಂತಾದರೊ
ಕಲಕಿ ಅವತಾರ ಮುಂದ ಬರುತಾದರೊ
ಅರಸಿಣ ಹಚ್ಚಿಕೊಂಡು ಮದಿಮಗಳ ಆಗ್ಯಾದಾರೊ
ಹಂದರದೊಳಗೆ ಗೊಬ್ಬಿಕ್ಕುತ ನಡದಾರೊ| ||2||
ಅಕ್ಕ ತಂಗಿ ಏಳ ಮಂದಿ ಹೊಂಟಾರೊ
ಏಳ ದಿಕ್ಕು ಏಕಾಗಿ ಉರಿತಾದರೊ
ನಾಲ್ಕು ದೇಶ ನಾಶವಾಗಿ ಹೋಗತಾದರೊ
ನಾಶವಾದ ಮೇಲೆ ಈಶ ಬರುತಾನರೊ| ||3||
ನವರಂಗಿ ಬಾಜಿಗಳು ಆಗತಾವರೊ
ಧ್ವಜ ಹಚ್ಚಿ ಗಜವೇರಿ ಹೊಂಟಾದರೊ
ಗಜಿಬಿಜಿ ಆದತಾದಜಗದೊಳರ್ಯೊ
ಜಲ್ದಿ ತಿಳಿದು ಜಂಗಮಲಿಂಗನ ಭಜನಿ ಮಾಡರೊ| ||4||
ಯಮದೂತರು ಪೋತರಾಜರು ಕುಣಿತಾರೊ
ಜಗಮಾಯಿ ಜಾಣಿಯರೆಲ್ಲಾ ಆಡುತರೊ
ನರಕುರಿ ಮರಿಗಾವ ಹರಿತರೊ
ಕೊಲ್ಲಾಪುರ ಕೋಣಗಳು ಕಡಿತಾರೊ| ||5||
ಹಬ್ಬಾ ಉಂಡು ಗುಬ್ಬಿಯಾಗಿ ಹಾರತಾದರೊ
ಹೆಬ್ಬುಲಿಮ್ಯಾಲ ಕುಂತು ಬರುತಾದರೊ|
ಗುಡ್ಡ ಬಿಟ್ಟು ಗುಮ್ಮಟದೊಳಗೆ ಸೇರತಾದರೊ
ಶಿಖರದಲ್ಲಿ ಸಿಂಗಿ ಬಾಜಿ ಮಾಡತಾದರೊ| ||6||
ಕತ್ತಲ ಮನಿಯೊಳಗೆ ಬತ್ತಲೆ ನಿಂತಾದರೊ
ಕದ್ದು ಕಾಣದಾಂಗ ಇದ್ದು ಇಲ್ಲದಾಂಗದರೊ
ಭದ್ರಗಿರಿಯ ಮ್ಯಾಲ ನಿಂತಾದರೊ
ಗುಂಗಿ ಮನಿ ಮ್ಯಾಲ ಕಾಗಿ ಕುಂತಾದರೊ| ||7||
ಆರುತಿರೆ ಮಂಗಳಾರುತಿರೆ
ಗುರುಬಕ್ಕಯ್ಯ ಮಹಾಪ್ರಾಭುಗಾರುತಿರೆ
ಆರು ಲಿಂಗದೊಳಗಿರುತಿರೆ
ಗುರು ಸಾರಾಮೃತ ಸುರಿಯುತಿರೆ| ||1||
ಗೊಟ್ಟಂ ಗೊಟ್ಟಿ ಬಕ್ಕಯ್ಯನವರು
ಬ್ರಹ್ಮ ಧಾಟಿಯೊಳಗಿರುತಿರೆ
ಶ್ರೀ ಆಟ ವಿರಾಟ ಶೂರಾಟ ಗೊಲ್ಲಾಟ
ಮಂಗಳ ಮಹಾಪ್ರಭು| ||2||
ಉದ್ದನ ಚಿಲಮಿ ತನುಮನರೆ
ಶಿವಸಿದ್ಧನ ಪತ್ತಿ ಸೇದುತಿರೆ
ಶಿವ ಸಿದ್ಧ ಸಿದ್ಧ ಎಂದು ಕೂಗುತಿರೆ
ಶಿವ ಸಿದ್ಧನ ರೂಪವ ಕಾಣುತಿರೆ| ||3||
ಗುಡ್ಡದ ವಾರಿಗಿ ದುಡಿದೀರಿ
ಕರ್ಕನಳ್ಳಿ ಕೈಲಾಸದಲ್ಲಿ
ನಿಮ್ಮ ಚರಣ ಕಮಲಕರಿ
ಗುರು ಭದ್ರನಾಥನ ಕೂಡಿ ಕೋರಿ| ||4||
ಆರುತಿ ಎತ್ತಿರಿ ಮ್ಯಾಗೆ
ಆ ಶ್ರೀಗುರು ಭದ್ರಿನಾಥಗೆ| ||1||
ರನ್ನದಾರುತಿ ಚಿನ್ನದಾರುತಿ
ಕನ್ಯರೆತ್ತಿ ಬೆಳಗುವ ಜ್ಯೋತಿ| ||2||
ಮಂಗಳಮೂರ್ತಿ ಭಕ್ತವತ್ಸಲಗೆ
ನಿತ್ಯ ನಿರಂಜನ ನಿರ್ಗುಣನಿಗೆ| ||3||
ಭೇದರಹಿತನಿಗೆ ಭಾವ ಭಗುತಿಗೆ
ನೀಲಕಂಠ ನಿಗಮ ಗೋಚರನಿಗೆ| ||4||
ಸರ್ವೆಶ್ವರನಿಗೆ ಕರುಣಾಮಯಿಗೆ
ಪರಬ್ರಹ್ಮಪೂರಿಗೆ ಸದಾಶಿವಹರಗೆ| ||5||
ನಿಡವಂಚಿ ವಾಸಗೆ ಮುಕ್ತಿದಾತಗೆ
ಶ್ರೀಗುರು ರಾಚೋಟೆಶ್ವರ ಪಾದಪೂಜಿತಗೆ| ||6||
ಆರುತಿ ಮಂಗಳ ಮೂರುತಿಗೆ
ಮೂರುತಿ ಮಂಗಳ ಮಾರುತಿಗೆ
ಸದ್ಗುರು ಶಂಕರಲಿಂಗನಿಗೆ
ಜಯಹರ ಗುರು ಮುಕ್ತಾಂಗನಿಗೆ| ||1||
ಆರುತಿ ಸಂಗನ ಶರಣರಿಗೆ
ಮೂರುತಿ ಜಂಗಮ ಭಕ್ತರಿಗೆ
ಮಾರು ಮಹಾಲಿಂಗನಿಗೆ
ಶಂಕರ ಗುರು ಮುಕ್ತಾಂಗನಿಗೆ| ||2||
ಆರುತಿ ಕಲ್ಯಾಣ ಬಸವನಿಗೆ
ಮೂರುತಿ ಮಲ್ಲಿಕಾರ್ಜುನನಿಗೆ
ಮಾರುತಿ ಮನ್ಮಹಾದೇವನಿಗೆ
ಜಯಹರ ಗುರು ಮುಕ್ತಾಂಗನಿಗೆ| ||3||
ಆರುತಿ ಅನಂತ ರೂಪನಿಗೆ
ಮೂರ್ತಿ ಏಕೋ ದೇವನಿಗೆ
ಮೂರುತಿ ಉದಗಿರಿ ಶಂಕರಗೆ
ಜಯಹರ ಗುರು ಮುಕ್ತಾಂಗನಿಗೆ| ||4||
ಆಲಯ ಮೇಲಪ್ಪಾ ಆಲಯ ಕಾಲ ಮೇಲಪ್ಪಾ
ಆಲಯ ಮೇಲ್ಮನಿ ಮಧ್ಯದೊಳು
ಆನಂದ ತೊಟ್ಟಿಲದೊಳು ಮನಗಿಕೊಂಡಾದ| ||1||
ಕಾಲ ಮೇಲಪ್ಪಾ ಕಾಲದ ಕೀಲು ಮೇಲಪ್ಪಾ
ಕಾಲದ ಕೀಲು ಮನದ ಕೊನಿಯ ಮೇಲ
ಉಯ್ಯಾಲದೊಳು ಕುಂತು ವಯ್ಯಾರ ಮಾಡತಾದ| ||2||
ನಾನೇ ಮೇಲಪ್ಪಾ ನನ್ನೊಳು ತಾನೆ ಮೇಲಪ್ಪಾ
ತಾನೇ ತನ್ನೊಳು ಬೈಲೊಳಯ ಬಯಲಾಗಿ
ಹೊಯಿಲಿನೊಳಗೆತಾ ಸಯಿಲ ಮಾಡುತಾದ| ||3||
ದೇಶ ಮೇಲಪ್ಪಾ ಉದಗಿರ ಈಶ ಮೇಲಪ್ಪಾ
ಈಶ ರಾಚೋಟೇಶನೆ ಮೇಲು ತಾನೆ
ತನ್ನೊಳು ಶಂಕರ ಭದ್ರಿನಾಥ ಅದೆಪ್ಪಾ| ||4||
ಇದ್ದಾಂಗ ಆಗುವುದೊ
ಸಿದ್ಧನ ಮಗನಿಗೆ ತಿಳಿಯುವದೊ
ಸಿದ್ಧನ ಮಗನಿಗೆ ಶಿವನೆಂಬೊ ನಾಮ
ಮೂರು ಲೋಕ ತುಂಬಿ ಹೆಚ್ಚಾಯಿತಮ್ಮ| ||1||
ಉನ್ಮನಿ ಖಡಕಿ ನೋಡರೊ ಒಳಗಿನ ದಢಕಿ ನೋಡರೊ
ಖಟಪಿಟಿ ಲಟಪಿಟಿ ಝಟಪಿಟಿ ಆಗತಾದ
ಫಟಪುಟಿ ಆಗತಾದ ಘಟಕನೆ ಸಾಯತಾದ| ||2||
ಉರಕೋತ ಬರುತಾದೊ
ಊರೆಲ್ಲಾ ಮೆರಕೋತ ಬರುತಾದೊ
ಎರಕೋತ ಮರಕೋತ ಇಳಕೋತ ತಿಳಕೋತ
ಕರಕೋತ ತಿರುಕೋತ ತಾನೇ ಬರುತಾದ| ||3||
ನಿಡವಂಚಿ ಹಳ್ಳ್ಯಾದರೊ
ಶ್ರೀಗುರುಸಿದ್ಧನ ಮಗನ್ಹಾನರೊ
ಸಿದ್ಧನ ಮಗನಾದ ಶುದ್ಧ ಸೇವಕನಾದ
ಭವ ಗೆದ್ದು ಭದ್ರಿನಾಥ ಬೈಲಾದ| ||4||
ಇದ್ದಾಂಗ ಆಗುವದಕ ಈಡಿಲ್ಲ ಯಾರ್ಯಾರು
ಮೂರುಲೋಕದಲ್ಲಿ ಹುಚಧುಲಿ
ಬಿತ್ತಿದ್ದೆ ಬೆಳಿವದು ಅತ್ತಿದರೇನು ಆಗುವದು
ಗೊತ್ತ ಯಾಕ ತಿಳಿವಲ್ಲಿ ಹುಚುಧುಲಿ| ||1||
ಝಂಕಾರ ಜಾಂಗುಟಿ ಓಂಕಾರ ಭೃಕುಟಿ
ಮಧ್ಯವಾದ ತಿಳಿವಲ್ಲಿ ಹುಚಧುಲಿ
ನಾದವ ಕೇಳುತ ಸೋದವ ಮಾಡುತ
ಸಾಧುನ ಖೂನಾ ತಿಳಿವಲ್ಲ ಹುಚುಧುಲಿ| ||2||
ಇದ್ದ ಅಂಗವು ನೋಡುತ ಲಿಂಗವು ಕಾಣುತ
ಜಂಗಮನ ಖೂನಾ ತಿಳಿವಲ್ಲಿ ಹುಚುಧುಲಿ
ಆರು ಲಿಂಗದೊಳು ಅರ್ತು ಮೈಮರ್ತು
ಮರ್ತ್ಯಾದೊಳು ತಿಳಿವಲ್ಲಿ ಹುಚುಧುಲಿ| ||3||
ನಾನು ನೀನೆಂಬ ತಾನೇ ತಾನೊಬ್ಬ ತಿಳಿವಲ್ಲಿ
ನಯನದ ಕೊನೆಯಲ್ಲಿ ಹುಚುಧುಲಿ
ತಾರಕ ದಂಡಕ ಕುಂಡಲಿ ಮಧ್ಯದಿ
ಕೋಟಿ ಸೂರ್ಯನ ಬೆಳಕು ನೋಡಲ್ಲಿ ಹುಚುಧಲಿ| ||4||
ಈಡಾ ಪಿಂಗಳ ಮಧ್ಯ ಆಡುವವನ ಕಂಡು
ಸೋಂ ಎಂಬ ಅಕ್ಷರ ತಿಳಿವಲ್ಲಿ ಹುಚುಧುಲಿ
ನಿಡವಂಚಿ ಗ್ರಾಮದ ನಿಜಲಿಂಗ ಮೂರುತಿ
ರಾಚೋಟೇಶನ ತಿಳಿವಲ್ಲಿ ಹುಚುಧುಲಿ| ||5||
ಉದಗಿರಿ ಜಾತ್ರಿಗೆ ಹೋಗಾನು ಬೇಗನೆ ಬಾರೆ
ಶಂಕರಲಿಂಗನ ದರ್ಶನ ಮಾಡಮ್ಮ
ಓಂ ಶ್ರೀ ಶಂಕರಲಿಂಗಗಾ
ಮುಕ್ತಿ ಪದವಿ ಬೇಡಾನು ಬಾರಮ್ಮ| ||1||
ಆಧಾರ ಗಿರಿಯನೇರಿ ನಾಲ್ಕುದಳ ಮಧ್ಯದಲ್ಲಿ
ಆಚಾರ ಲಿಂಗನ ಕಂಡೆ
ಸ್ವಾದಿಷ್ಟ ಗಿರಿಯನೇರಿ ಷಡ್ದಳ ಮಧ್ಯದಲಿ
ಗುರುಲಿಂಗ ದರ್ಶನ ಕಂಡೆ| ||2||
ಮಣಿಪುರ ಗಿರಿಯನೇರಿ ದಶದಳ ಮಧ್ಯದಲ್ಲಿ
ಶಿವಲಿಂಗನ ದರ್ಶನ ಮಾಡಿದೆ
ಅನಾಹತ ಗಿರಿಯನೇರಿ ದ್ವಾದಶದಳ ಮಧ್ಯದಲ್ಲಿ
ಜಂಗಮಲಿಂಗನ ದರ್ಶನ ಮಾಡಿದೆ| ||3||
ವಿಶುದ್ಧಿ ಗಿರಿಯನೇರಿ ಸೋಡಶದಳ ಮಧ್ಯದಲ್ಲಿ
ಜಂಗಮಲಿಂಗನ ಕಂಡಿದೆ
ಇಂದ್ರಗಿರಿಯಲಿಂದೆ ನಾನು ಚಂದ್ರಗಿರಿಯನೇರಿ ನೋಡಿ
ಕೈಲಾಸ ಶಿಖರ ಕಂಡನೆ| ||4||
ಉನ್ಮನಿ ಉದಗಿರಿಯೊಳಗೆ ಚಿನ್ಮಯ ರಾಚೋಟೇಶ
ಸದ್ಗುರುನಾಥ ಕಂಡನೆ
ಓಂ ಶ್ರೀ ಶಂಕರಲಿಂಗಾ
ಮುಕ್ತಿ ಪದವಿ ಬೇಡಿಕೊಂಡನೋ| ||5||
ಊರ ದೇವತೆ ಮಾಡುತಾರಮ್ಮ
ನಮ್ಮೂರ ಒಳಗೆ ನೋಡಾನು ಬಾರಮ್ಮ| ||1||
ಕುಂಡಲೆಂಬ ಗುಡಿಯ ಮುಂದೆ
ಮಂಡಲೆಂಬ ಹಂದರ ಹಾಕಿ
ಚಿತ್ಶಕ್ತಿ ಮಹಾದೇವಿಗೆ
ತಿರುಗಿ ಭೂಚರಿ ಖೇಚರಿಯರಮ್ಮ| ||2||
ಕಾಯನೆಂಬ ಕೋಣ ಕಟ್ಯಾರೆ
ಆ ಮಹಾದೇವಿಗೆ ಕುಟಿಲನೆಂಬ
ಕುರಿಯ ಕಟ್ಯಾರೆ
ಕ್ರೋಧನೆಂಬ ಪೋತರಾಜ
ಮೋಹನೆಂಬ ಜಾಣಿ ಕುಣಿಸಿ
ಅನಾಹುತಯೆಂಬ ಡಪ್ಪ ಬಾಜಿ
ಸೋಹಂ ಎಂಬ ಸೋನೆಯಿ ಬಾಜಿ
ಓಂಕಾರನೆಂಬ ಸ್ತುತಿಯ ಹಿಡಿಸಿ
ಪೋತರಾಜನ ಕುಣಿಸಿದಾರಯ್ಯ| ||3||
ಆತ್ಮರಾಮ ಶೆಟ್ಟಿಕಾರನೆ
ಸ್ವಧರ್ಮವೆಂಬ ಕಟ್ಟಿಮ್ಯಾಲೆ ಏರಿ ಕುಂತಾನೆ
ಮನವೆಂಬ ಮಾದಿಗಿ ಕರೆಸಿ
ಧೈರ್ಯವೆಂಬ ಕತ್ತಿ ಹಿಡಿಸಿ
ಒತ್ತಿ ಕೋಣನ ನೆತ್ತಿ ಹಿಡಿಸಿ
ತೆಲಿಯ ಕೋಯ್ಸಿ ಪಲ್ಯಾ ಮಾಡಿಸಿ
ಮ್ಯಾಲೆ ಜ್ಯೋತಿ ದೀವಗಿ ಇಡಿಸಿ
ಮುಂದೆ ಜಾನಿನ ಮೈಯ ತುಂಬಿಸಿ
ಅಹಂ ಸೋಹಂ ನುಡಿಸದಾರಮ್ಮ| ||4||
ಆಶೆಯೆಂಬ ಕುರುಬನ ಕರೆಸಿ
ಸಂಶಯದ ಕುರಿಮರಿ ಕೈಯೊಳಗೆ ಹಿಡಿದು ಆಡಿಸಿ
ಚಂದ್ರ ಹಚ್ಚಿ ಪೋತರಾಜ
ಕಣ್ಣ ತೆರೆದು ಚಬಕ ಘಡಿಸಿ
ಗುಡಿಯ ಸುತ್ತ ಚವರಿ ತಿರುಗಿಸಿ
ಚೆಬಕ ಏರಿಸಿ ಬೆನ್ನ ಬಾರಿಸಿ
ಹಿಸುಕಿ ಕುರಿಯ ಮರಿಯ
ಗಾವ ಹರಿಸಿದಾರಮ್ಮ| ||5||
ಅಗಸಿ ಬಾಗಿಲದೊಳಗೆ ಭವರಮ್ಮ
ಹಮ್ ಎಂಬೋ ಹಂದಿ ಮರಿಯ ತಂದು ಹೂಳಿದಾರಮ್ಮ
ಅಷ್ಟಗುಣಗಳೆಂಬೋ ಕರುಗಳು
ಬಿಟ್ಟು ದನಗಳು ಕಟ್ಟಿ ಓಡಿಸಿ
ಸೂಕರ ಮ್ಯಾಲಿಂದೆ ಧಾಟಿಸಿ
ಸೀಮಿಕಲ್ಲು ಸುತ್ತಿ ಬರಿಸಿ
ಕಟ್ಟಿ ಬಂಧನ ಮಾಡಿ ಬಿಡಿಸಿ
ಸೂಕರೆಂಬುದು ಎತ್ತ ಹೋಯಿತಮ್ಮ| ||6||
ಕಲ್ಪನೆಂಬ ಕಳ್ಳ ಹೊಲಿಯರೊ
ಕದ್ದೋಡಿ ಬಂದು ಕೂಳವೆಲ್ಲಾ ತಾವೆ ತಿಂದಾರೊ
ಮಾಯೆ ಎಂಬ ಮೇತ್ರಿ ಹೊಲಿಯನ
ಮೇಲೆ ತೆಲಿಯ ಹೊದಿಸಿದಾರೊ
ರಾಚೋಟೇಶನ ಹಂತಿಲಿಟ್ಟು
ಆತ್ಮರಾಮನ ಭಜಸಿದಾರಮ್ಮ| ||7||
ಎಕ್ಕಲ ಖಾಜಾ ಸಾಕ್ಷಾತ್ ಶಿವನು
ಹಾನೋ ಆತ್ಮದೊಳಗೆ
ನಿನ್ನೊಳಗೆ ನೀ ತಿಳಿದು ನೋಡಿದರೆ
ಶಿವನ ಮಹಿಮಾ ಹೀಗೆ| ||1||
ದುಡ್ಡಿಗೆ ರಾಜಾ ದೊಡ್ಡ ಗುರು ತಾ
ಹಾನೋ ಶರೀರದೊಳಗೆ
ದೇವಾ ಹಾನೋ ಶರೀದೊಳಗೆ
ತ್ರೀಣಂಭೋಜಾ ಬ್ರಹ್ಮ ವಿಷ್ಣು ಮಹೇಶ್ವರೊಳಗೆ| ||2||
ಚಾರಿಕ ಚಂಡು ಚೌಕ ಮಧ್ಯದಿ
ಗುರುವಿನ ಮನಿ ಒಳಗೆ
ಪಾಚಿಗಿ ಪಂಡು ಪರಮೇಶ್ವರನು
ಇದೇ ಶರೀರದೊಳಗೆ| ||3||
ಸೀಮಾ ಝಂಡು ಷಣ್ಮುಕಸ್ವಾಮಿ
ಕುಂತ ಗದ್ದಗಿ ಮ್ಯಾಲೆ
ಸಟಾಪಟೋಲೆ ಸಪ್ತಋಷಿಗಳು
ತಿರುಗುತಿಹರು ಒಳಗ| ||4||
ಅಟಾಪನಲ್ಲಿ ಅಷ್ಟಪಲಕರು
ಎಂಟು ಕೋಣಿ ಒಳಗೆ
ನಮ್ಮನ ಬಿಟಿಲ್ಲಿ ನವಖಂಡ ಪೃಥ್ವಿ ||5||
ಇದೇ ಶರೀರದೊಳಗ|
ಅಟ ನಿಂತಿತೋ ನವಲ ಕಟ್ಟಿತೊ
ಎರಡು ಕೋಣೆ ಒಳಗೆ
ಭದ್ರಿನಾಥನ ಪಾದ ಪಿಡಿದು
ಮುಕ್ತಿ ಹೊಂದಿರಿ ಶಂಕರಗೆ| ||6||
ಎಡಾ ಕಣ್ಣು ಕುಣಕಿ ಚೋರಗಂಡಿ
ಷಂಢ ಮಾರ್ಗವಲ್ಲ ಇದು ಪ್ರಚಂಡ ಮಾರ್ಗ| ||1||
ಜಾಣ ಮುಖದಿಂದ ಜರಿದು ಪೋದ ಶರಣ
ಅನಂತ ಜನ್ಮದ ಪುಣ್ಯ ಅನಂತ ಜನ್ಮದ| ||2||
ಸಿದ್ಧರಾಮ ನಾಮ ರಾಚೋಟೇಶ ನಿಮ್ಮ
ಚರಣ ಕಮಲದಲ್ಲಿ ಐಕ್ಯವಾದ ಚರಣ ಕಮಲದಲ್ಲಿ| ||3||
ಕುಡಿಕೊಂಡ ತಾನು ತಾನೇ ತಾನಯ್ಯ
ತಾನೇ ತನಯ್ಯ ಶಂಕರ ಒಬ್ಬ ದೇವನಯ್ಯ| ||4||
ಬೈಲಿಗೆ ನಿರ್ಬೈಲು ಮಹಾ ಬಯಲು ಕಾಣೆನಯ್ಯ
ಆ ಬೈಲು ಅತ್ತೆತ್ತ ಸದ್ಗುರು ಸೊನ್ನಿಯ ಘನವಯ್ಯ| ||5||
ದಯವಾಗೊ ಶಂಕರ ಶಶಿಧರ ಸುಂದರ
ಭಾವಿಕ ಭಕ್ತರ ಕೂಡವೂ ಮುಕ್ತಿಯ ಮಂದಿರ ||6||
ಎನ್ನ ಇಚ್ಚಾ ತೀರಿಸಿದವರೆ ಎನ್ನವರು
ಅವರೆ ನಮ್ಮವರು
ಇಚ್ಚಾ ತೀರಿಸದವರೆ ಎನ್ನ ಶತ್ರುಗಳು| ||1||
ಎನ್ನ ಆನಂದ ಪಡಿಸಿದವರೆ ಎನ್ನ ಶತ್ರುಗಳು
ಅವರೆಂತಹ ಪುಣ್ಯವಂತರು
ಆನಂದಬಿಡಿಸಿದವರೆ ಎನ್ನ ಶತ್ರುಗಳು| ||2||
ಎನ್ನ ಗುರುತು ಹಿಡಿದವರೆ ಎನ್ನವರು
ಗುರುಪುತ್ರರವರು
ಗುರ್ತು ಹಿಡಿಯದವರೆ ಎನ್ನ ಶತ್ರುಗಳು| ||3||
ಕಾಯಾಪುರಕ ಅಧಿಪತಿ ಆದವರು
ಗ್ರಾಮದ ಗೌಡರವರು
ಗ್ರಾಮಕ ಅಧಿಪತಿಯಾದವರು ಮಹಾಪುರುಷರು| ||4||
ಎನ್ನ ಗುರುತು ಹಿಡಿದು ಶರಣು ಬಂದವರು
ನಿಜದ ಖೂನಾ ತಿಳಿದವರು
ನಿನ್ನ ಖೂನಾ ಮರ್ತು ಬಂದವರು ಮಾಯದಲ್ಲಿ ಸಿಲ್ಕಿದರು| ||5||
ದೇಶದೊಳು ವಾಸ ನಿಡವಂಚಿ
ಅದು ಶಿವಕಂಚಿ
ಮಠದೊಳು ಭದ್ರೇಶ್ವರ ಪಾದಕ ಶರಣಾದರು. ||6||
ಎಲೋ ನಂದಿನಾಥ ಮಾತಿನ ಗುಣವಂತ
ಮಹಾಲಕ್ಷ್ಮಿಸುತ ಕೇಳೊ ಮಹಾಲಕ್ಷ್ಮಿಸುತ| ||ಪ||
ಚಕೋರ ಎಂಬ ದೈತ್ಯ ಬಂದಾನೊ ಓಡುತ
ಮಹಾಪುಂಡ ಸಮರ್ಥ ದೇವಿನ ಹೊಡಿಬೇಕಂತ| ||1||
ಮಹಾದೇವಿ ಪ್ರಚಂಡ ತ್ರಿಶೂಲ ತಡಕೊಂಡ
ತೀವ್ರವಾಗಿ ಹೊಡೆದು ದೈತ್ಯನ ಹಾರಿಸಿದಾಳೋ ರುಂಡ| ||2||
ದಯವಾಗೆ ಶಂಕರಿ ಕಾಯೆನ್ನ ಓಂಕಾರಿ
ಭಕ್ತರ ಭವಹಾರಿ ಮುಕ್ತೇಶ್ವರಿ ಭಕ್ತರ ಭವಹಾರಿ| ||3||
ಏ ಎಪ್ಪಾ ಎಂಥದು ದಿನ ಬಂತೊ
ಮುದುಕರೆಲ್ಲಾ ರಂಡೆರ ಮಾಡ ಖ್ಯಾಲಾಯಿತೊ
ಡೊಂಬರ ಪಾತರದವರಿಗೆ ಕೇಳಲ್ದಾಂಗಾಯಿತೊ
ಹೆಂಡರ ಬಿಟ್ಟು ಕಂಡವರ ಮನಿ ಸೇರೋದಾಯಿತೊ| ||ಪ||
ಸುಂಬಳ ಸುರುಕಿ ಸೂಳಿ ಸಂಗಾ ಸವಿ ಆಯಿತೋ
ಸುಂದರಂಗಿ ಸತಿ ಸಂಗಾ ಹೀನಾಯಿತೊ
ಮಚ್ಚಿಲಿ ಹೊಡಿರೆಂಬ ಎಚ್ಚರ ಕಾಣದಾಯಿತೊ
ಕೆಚ್ಚಲದೊಲಗಿನ ಬಚ್ಚಲ ಮೋರಿ ಹುಳವಾಯಿತೊ| ||1||
ಮಾತಾಪಿತಾಗ ಮಚ್ಚಿಲಿ ಹೊಡಿಯುವ ಕಾಲ ಬಂತೊ
ನಾಚಿಗೆಟ್ಟು ಆಚಿ ಬೀಳೊದಾಯಿತೊ
ಹೆಚ್ಚಿನ ಮಾತು ಇದು ಒಂದು ಕೇಳುದಾಯಿತೊ
ಉಚ್ಚಿ ಕುಣಿಗಿ ಮೆಚ್ಚಿಕೊಂಡು ಹುಚ್ಚುನಾಯಿತೊ| ||2||
ಸೂಳಿತನ ಕಳ್ಳತನ ಹೆಚ್ಚಾಯಿತೊ
ಗುರು ಬಚ್ಚಿಟ್ಟ ಗಂಟು ಬೈಲಿಗೆ ಬಿತ್ತೊ
ಶರಣರಿಗೆ ಸತ್ಯಕಾಲ ಒದಗಿ ಬಂತೊ
ನಿಜ ಗೊತ್ತು ತಿಳಿದವರಿಗೆ ಮುಕ್ತಾಯಿತೊ| ||3||
ನಿಡವಂಚಿನೆಂಬುದು ಹಳ್ಳಾಯಿತೊ
ಶ್ರೀಗುರುವಿನ ಚೌದ ಅವತಾರ ಬಂತೊ
ಬದ್ಧನಡಿ ಜಗದಲ್ಲಿ ಬಹಳಾಯಿತೊ
ಗುರುಸಿದ್ಧನ ಮಗನಿಗೆ ತಿಳಿದಾಯಿತೊ| ||4||
ಏ ಎಪ್ಪಾ ಹದ್ದಿನ ಮಾರಿ ಹಕ್ಕಿ ನೋಡರೊ
ಹೆಣಾ ತಿಂದು ನೊಣ ಹಿಪ್ಪಿ ಭೀಟತಾದರೊ
ಆಕಾಶದ ಪಂಥಿಲಿಂದ ಇಳದಾದರೊ
ರಣದೊಳಗೆ ಬಿದ್ದು ಗೆದ್ದ ಜೈಸತಾದರೊ| ||1||
ಎಕವೀಸ ಸ್ವರ್ಗದ ಮೇಲೆ ಇರುತಾದರೊ
ಶವದ ವಾಸನೆ ಕಂಡು ಸರ್ರನೇ ಇಳಿತಾದರೊ
ಸಾರಕೊಂಡು ಮೀರಿ ಮೇಲಕ ಹಾರತಾದರೊ
ಸತ್ಯವಂತರೆಲ್ಲಾ ಗೊತ್ತು ತಿಳಿಕೊಳ್ಳಿರೊ| ||2||
ಹದ್ದಿನ ಮಾರಿ ಹಕ್ಕಿ ಎಂದರೆ ನಾರಾಯಣ
ಆತನ ಭಜನಿ ಮಾಡರೆಪ್ಪಾ ನಾಮಸ್ಮರಣ
ಮನದ ಕೊನಿಮ್ಯಾಲ ಅವರ ಠಿಕಾಣ
ದಿಟ್ಟಿಸಿ ನೋಡರೆಪ್ಪಾ ಹಿರಿಯ ಕಣ್ಣಾ| ||3||
ಭಕ್ತಿ ಮಾಡಿ ಮುಕ್ತಿ ಪಡಿಬೇಕೋ ಮುನ್ನ
ತಡಾವೇಕೆ ಸನಿ ಬಂತು ದಿನಮಾನ
ಇನ್ಯಾಕೆ ಮಾಡತಿರ ಅನುಮಾನ
ಏ ಎಪ್ಪ ಸರಲ ಮಾಡಿಕೊಳ್ಳಿರಿ ಭಾವನಾ| ||4||
ನಿಡವಂಚಿನೆಂಬುದು ನಿಜ ಲಿಂಗಿರೊ
ಗುರು ಭದ್ರಿನಾಥ ಮೂರುತಿ ನಿರಸಂಗಿರೊ
ನಿರ್ಮಲ ಮಂಗಳಾರುತಿ ಬೆಳಗಿರೊ
ನಿಶ್ಚಿಂತವಾಯಿತು ನಿಜಲಿಂಗಿರೊ| ||5||
ಏಕೋ ವಾಕ್ಯೆ ನಮ್ಮ ಸತ್ಯ ಶರಣರು ಬರುವಾಗ
ಉಕ್ಕಿನ ಹೂಜಿಗಳು ಕೈಯಾಗ
ಅಮೃತ ಕುಡಿಕುಡಿದು ಜಗವೆಲ್ಲಾ ಆಡುವಾಗ
ಸ್ತ್ರೀಯರ ಉಪದ್ರ ಹೆಚ್ಚು ಆವಾಗ| ||1||
ಹಾಂಗ ಹಾಂಗ ಮಳಗಾಲಾ
ಜಗವೆಲ್ಲಾ ಬಂತೊ ಅಳಿಗಾಲಾ
ಸೊಳ್ಳು ಹಾರಿ ಸ್ವಧರ್ಮ ಉಳಿದಿತ್ತು
ಈ ಮಳ್ಳ ಮಾನವರಿಗೆ ತಿಳಿಯಲ್ದಾಂಗ ಆದತ್ತು| ||2||
ಅಳಿಯನ ಸೋದರ ಮಾಂವಪ್ಪಾ
ಜಗದಪ್ಪಾ ನಮ್ಮಪ್ಪಾ ಚೆನ್ನಬಸವನಪ್ಪಾ
ಬರುವಾಗ ನಿಜಯೆಂಬೊ ನಿಶಾನಿಗಳು
ಸಾಲು ಸಾಲಾಗಿ ನಡಸ್ಯಾರುಛತ್ರ ಚಾಮರಗಳು| ||3||
ಆನಂದ ಪಿಂಗಳನಾಮ ಸಂವತ್ಸರ
ಆಶ್ವಿಜಯ ಶುದ್ದ ನವಮಿ ಆದಿತ್ಯ ವಾರ
ಮಧ್ಯಾಹ್ನಕಾಲ ಬಂದು ಎರಗುವಾಗ
ಸೂಚನೆಗಳು ಕೇಳಿ ಬರುವಾಗ| ||4||
ಬಿಂದುವಾದವ ನುಂಗಿ
ನಾದ ಕಳೆಗಳು ನುಂಗಿ
ನಿಜನುಂಗಿದಯೋಗಿ ಮುಕ್ತಿ ರಾಜ್ಯಕ್ಕೆ ಅರಸಾ
ಭದ್ರಿನಾಥನ ಬೆಡಗು ಬಿರುಸಾ ನುಡಿ ಸರಪಾ| ||5||
ಏನಾರ ಮಾಡಯ್ಯೋ ನೀನು
ಬಲ್ಲೆನೆಂಬವರ ಪಾದರಕ್ಷೆ ಆಗುವೆ ನಾನು| ||1||
ತಾಯಿಯು ನೀನು ಕೂಸೇ ನಾನು
ನೀ ಬಂದು ಮೋಹಿಸಿ ಪಾಲು ಕುಡಿಸೋ ಎನ್ನನು| ||2||
ಗರುವೆ ನೀನು ಜ್ನಾನದ ಭಾನು
ಗುರುತಾದ ಮಾತೊಂದು ಹೇಳಬೇಕು ನೀನು| ||3||
ಅಜ್ಞಾನಿ ಬಾಲಕ ನಾನು
ಸ್ವಾನುಭಾವದ ಜ್ಯೋತಿಯ ತೋರಬೇಕೊ ನೀನು| ||4||
ಪದವೊಂದು ಹಾಡುವೆ ನಾನು
ಪಾದ ನಟ್ಟಿದ ಸ್ಥಲದ ಹೇಳಬೇಕೊ ನೀನು| ||5||
ಸೋಮಶಂಕರ ಲಿಂಗವು ನೀನು
ನಿಮ್ಮ ಚರಣಕಮಲದಲ್ಲಿ ನಾ ಭೃಂಗಿ ಆಗುವೆನು| ||6||
ಒಬ್ಬನ ಮೆಚ್ಚಿಕೊಂಡು ಇರು ಲವಡಿ
ಇಬ್ಬರ ಮೆಚ್ಚಿಕೊಂಡು ಇರುಬ್ಯಾಡ ಹುಚ ಲವಡಿ
ಒಬ್ಬನ ಮೆಚ್ಚಕೊಂಡು ಇದ್ದರ
ಆಧಾರ ಏರಿ ಕುಂಭಕ ಸೇರಿ ಕೂಡ ಲವಡಿ
ಗುರಿ ನೋಡ ಲವಡಿ ಬಲು ಬಿರಿ ಲವಡಿ| ||ಪ||
ಹಟಯೋಗ ಮಾಡಿ ದಿಟ ಕಾಣ ಲವಡಿ
ರಾಜಯೋಗ ಮಾಡಿ ತೇಜಿ ಏರ ಲವಡಿ
ಹಟಯೋಗ ಮಾಡಿದರೆ ದಿಟವಾಗಿ ನಿಲ್ಲುವದು
ಏರಿ ಬ್ರಹ್ಮರ ಗುಂಪಾ ಸೇರ ಲವಡಿ
ಅಲ್ಲಿ ಬೆರಿ ಲವಡಿ ಬಲು ಬಿರಿ ಲವಡಿ| ||1||
ಏಕಾಂತ ಮನ ಸಾಧಿಸು ಲವಡಿ
ಲೋಕಾಂತ ಗಜಬಿಜಿ ಬ್ಯಾಡ ಲವಡಿ
ಏಕಾಂತ ಸಾಧಿಸಿಕೊಂಡರ
ಉನ್ಮನಿ ಖಿಡಕಿ ನೋಡ ಲವಡಿ
ಉನ್ಮನಿನಾಥ ಚರಣ ಕಮಲದಲ್ಲಿ ಐಕ್ಯ ಆಗ ಲವಡಿ| ||2||
ಸೋದರ ಮಾವನ ಕಾಲ ಜಪ್ಪಿಸಿ ಹಿಡಿ ಲವಡಿ
ಸ್ವಾನುಭಾವ ತಿಳಿದು ಗಪ್ಪಾಗ ಲವಡಿ
ಸೊದರ ಮಾವನ ಹಿಡಿದರೆ ಸ್ವಾತಿ ಮಳೆ ಸುರಿದಂಗ
ಶಂಕರಲಿಂಗನ ಪಾದ ಪಿಡಿದು ಬಾಗ ಲವಡಿ
ಐಕ್ಯ ಆಗ ಲವಡಿ ಭವ ನೀಗ ಲವಡಿ| ||3||
ಒಳ್ಳೆಯ ಮಾತುಗಳು ಆಡನು ಕಲಿರಿ
ಎಲ್ಲಾ ಬಲ್ಲವರಲ್ಲಿ ಕೂಡಿ ನಡಿಯಿರಿ
ಪರನಾರಿ ಸಂಗವನು ಬಿಟ್ಟುಬಿಡಿರಿ
ಪರಬ್ರಹ್ಮನ ಭಾವ ಇಟ್ಟು ತಿಳಿಯರಿ| ||ಪ||
ಪರತತ್ವವನು ಕೊಂಡಾಡಿರಿ
ಅನ್ಯಾಯದ ಬೆಂಬಲ ಬಿಡಿರಿ
ಹರಶರಣರ ಮಾರ್ಗವ ಹಿಡಿರಿ
ಅದ್ವೈತ ಖೂನವನು ತಿಳಿಯರಿ| ||1||
ಪ್ರಾಣಿದಯೆ ಮಾಡಿರಿ ಪರ ಉಪಕಾರಿ
ಗುರು ಚರಣದಲ್ಲಿ ಭಾವ ಇಡಿರಿ
ವಿರೂಪಾಕ್ಷನ ನುಡಿಗಳ ನುಡಿರಿ
ನರಜನ್ಮ ಉದ್ಧಾರ ಮಾಡಿಕೊಳ್ಳಿರಿ| ||2||
ನಿಡವಂಚಿ ನಿಜಲಿಂಗ ನೆನಿರಿ
ಭದ್ರಿನಾಥನ ಪಾದವ ಪಿಡಿರಿ
ಭೀಮರಾವ ಆತನ ಸೇವಾಧಾರಿ
ಭಾವಕ ಒಲಿದು ಮೇವಾ ಉಣಸ್ತಾನರಿ| ||3||
ಕನಸು ಮನಸಿನಲ್ಲಿ
ನೆನಸಿದಾಗಲೆ ನೆನುವಾಗಿ| ||1||
ಹಸರು ಹಳದಿ ಕೆಂಪು ತರತರದ ಬಣ್ಣಾಗಿ
ಬಣ್ಣ ಕರಗಿ ಬಯಲಾಗಿ ಬಲ್ಲವರ ಸವಿಯಾಗಿ| ||2||
ಸ್ವರ್ಗ ಮತ್ರ್ಯೆ ಪಾತಾಳ ಅಡಗಿ ಯಾರಿಗ ಕಾಣದಂತಾಗಿ
ನಿರ್ನಾಮ ನಿಜಯೋಗಿ ಶಂಕರಲಿಂಗ ರಾಚೋಟೇಶ್ವರ ತಾನಾಗಿ| ||3||
ಭದ್ರೀನಾಥ ಮಗನಾಗಿ ಬೇಡಿದ ಪಾದಕ್ಕೆರಗಿ
ಕರುಣಿಸಯ್ಯಾ ಮಹಾಯೋಗಿ ಸದ್ಗುರುವೆ ಎನಗಾಗಿ| ||4||
ಕನಸೊಂದ ಕಂಡೆನಮ್ಮ
ಎಂತ ಸೋಜಿಗಾಯಿತಮ್ಮ
ಬಿದಗಿ ಚಂದ್ರಮ ಮೂಡಿದಾನಮ್ಮ ||1||
ಈ ಕನಸಿನೊಳಗ|
ರಂಗಮಂಟಪದಲ್ಲಿ
ಬೆಳ್ಳಿಚುಕ್ಕಿ ಮೂಡಿತಮ್ಮ
ಬೆಳ್ಳನೆ ಬೆಳಗಾಯಿತಮ್ಮ
ಈ ಕನಸಿನೊಳಗ| ||2||
ಬೊಡ್ಡಿಯಿಲ್ಲದ ಮರದ ಮೇಲೆ
ಬಣ್ಣವಿಲ್ಲದ ಪಕ್ಷಿಯ ಕುಂತು
ಸಣ್ಣದೊಂದು ಗುಡ ಕಟ್ಟಿತೆ
ಈ ಕನಸಿನೊಳಗ| ||3||
ಗೂಡಿನೊಳಗೆ ಗುಡ್ಡವನಿಕ್ಕಿ
ಸುತ್ತಮುತ್ತ ಸುಳಿದಾಡುತಿತ್ತು
ಹೆಣ್ಣು ಗಂಡು ಅರಿಯೆನು ನಾನಮ್ಮ
ಈ ಕನಸಿನೊಳಗ| ||4||
ಲಕ್ಷ ಯೋಜನೆ ಮ್ಯಾಲಿರುತಿತ್ತು
ಲಕ್ಷವಿಟ್ಟರೆ ಅದು ಕಾಣಿಸುತಿತ್ತು
ಕಾಲಿಗಿ ದನಿ ಮಾಡಿ ಒದರತಿತ್ತಮ್ಮ
ಈ ಕನಸಿನೊಳಗ| ||5||
ಅಗಣಿತ ರೂಪವ ಕಂಡೆ
ಸೊಗಸಿನ ಮೂರುತಿ ಕಂಡೆ
ನಿಗಿನಿಗಿಸುವದು ನಿಜವಮ್ಮಾ
ಈ ಕನಸಿನೊಳಗ| ||6||
ನಿಡವಂಚಿ ಗ್ರಾಮದಲ್ಲಿ
ನಿಜಲಿಂಗ ಮುರುತಿ ಕಂಡೆ
ಭದ್ರಿನಾಥ ಗುರುವಿನ ಕಂಡೆ
ಮುಕ್ತಿ ಪಡೆದುಕೊಂಡೆ| ||7||
ಕರ್ಪೂರದಾರುತಿ ಮಂಗಳ ಮೂರುತಿ
ಜಯಹರ ಗುರು ಮುಕ್ತಾಂಗನಿಗೆ| ||1||
ಉದಗಿರಿ ಶಂಕರ ಉನ್ಮನಿ ಈಶ್ವರ
ಜಯಹರ ಗುರು ಮುಕ್ತಾಂಗನಿಗೆ| ||2||
ಸದ್ಗುರು ಶಂಕರ ಸಿದ್ಧ ರಾಚೋಟೇಶ್ವರ
ಜಯಹರ ಗುರು ಮುಕ್ತಾಂಗನಿಗೆ| ||3||
ಝೇಂಕಾರ ಓಂಕಾರ ಚರಣ ಕಮಲಾಕಕರ
ಮಧ್ಯೆ ಮಂಗಳಕರ ಮುಕ್ತಾಂಗನಿಗೆ| ||4||
ನಾಟಕ ಗುರುವಿನ ಆಟ ನೋಡಿರಿ
ಕಾಟದ ಕೊನಿ ಮ್ಯಾಲ ಆಡುವುದೊ| ||5||
ಕರವ ಮುಗಿದು ನಿನ್ನಾ ಶಿರ ಬಾಗುವೆ ನಾ
ವರವ ಕೊಡೊ ಎನ್ನ ವರದ ಹಸ್ತ| ||1||
ಹರನಹುದಂತೆ ನರನು ಅಲ್ಲಂತೆ
ಬಿರುದು ಸಾರುತೈತೆ ಮೂರು ಲೋಕ| ||2||
ಗುರುವಿನ ಆಜ್ಞೆಯನ್ನು ಮೀರಬಾರದಿನ್ನು
ಮೀರಿದ ಫಲವನ್ನು ಸೂತ್ರಧಾರಿ| ||3||
ಕ್ರಿಯಾ ಕರ್ಮ ರಹಿತಾ ಮಾಯಾವಿರಹಿತ
ಅದ್ಭುತ ನಿಮ್ಮ ಪಂಥ ಧೃತವಿಲ್ಲ| ||4||
ಯೋಗಿ ಭದ್ರಿನಾಥ ಜಗದೊಳು ಪ್ರಖ್ಯಾತ
ಜಂಗಮ ಜಗಭರಿತ ಲಿಂಗಮೂರ್ತಿ| ||5||
ಕಾಣಬೇಕಲೊ ಜಾಣ ಪಕ್ಷಿ
ಕಾಣದ ಮಾನವ ಕೋಣಿನ ಸಾಕ್ಷಿ| ||ಪ||
ಕರಿದು ಬಿಳಿದು ಕೆಂಪಾಗಿಹುದೊ
ಎರಡು ಪಂಕ ತೆರೆದರೆ ಮರಕೆ ಹಾರುವದೊ
ಕರೆದರೆ ಕೆಂಡ ಕಾರುವದೋ
ಗುರು ಹಿರಗೋಳು ಕರೆದಲ್ಲಿ ಸೇರಿಕೊಂಬುವದೊ| ||1||
ಅಂತರಾತ್ಮದಲ್ಲಿ ಆಡುವದೊ
ಅನಂತಮುಖ ಹಿಂದ ನಿಂಗು ನೋಡುವದೊ
ಶಾಂತ ಚಿಂತಿ ಮಾಡುವದೊ
ಕಂತು ಎಕ್ಕೇಳಿ ಬಸವನ ಹಂತಿಲಿ ಆಡುವದೊ| ||2||
ಭದ್ರಗಿರಿಯ ಮ್ಯಾಲ ಆಡುವದೊ
ತದ್ರೂಪ ನಿದ್ರಿ ಮಾಡುವದೊ
ಮುದ್ರಯೋಗಿಗಳಿಗೆ ಎದ್ದು ಬುದ್ದಿ ಹೇಳುವದೊ
ಗುರು ಶಂಕರಲಿಂಗನ ಕೂಡಿ ಕೊಂಬುವದೊ| ||3||
ಕುಲ ಕುಲ ಕುಲ ಕುಲ ಅಂತೀರಿ
ನಿಮದ್ಯಾವ ಕುಲ ನಮಗ ಹೇಳೀರಿ
ವರ್ಮಾ ತಿಳಿಲಾರದೆ ಕುಂತೀರಿ
ವರ್ಮಾವಗೆಟ್ಟು ಮರಣಾದಿರಿ| ||1||
ತಾಯಿ ಉದರದಲ್ಲಿ ಜನಿಸಿದಿರಿ
ಅಲ್ಲಿ ಯಾವ ಕುಲ ಇತ್ತು ಹೇಳೀರಿ
ಹೊರಗೆ ಬಂದು ನೀವು ವೇಷ ಧರಿಸೀರಿ
ಕುಲಛಲಕ ಹೊಡದಾಡುತೀರಿ| ||2||
ಎಲುವಿನ ಪಿಂಜರಿ ಮಾಡ್ಯಾನರಿ
ಹೊಲಸು ಮಾಂಸ ಒಲಗೆ ತುಂಬ್ಯಾನರಿ
ಚರ್ಮದ ಮುಚ್ಚಕಿ ಮಾಡ್ಯಾನರಿ
ಇದಕ ಯಾವ ಕುಲ ಅನಬೇಕರಿ| ||3||
ನಿಡವಂಚಿನೆಂಬುದು ಹಳ್ಯಾದರಿ
ಮಹಾದೇವನ ದಯಾ ನಮ್ಮ್ಯಾಲದರಿ
ಗುರು ಶಂಕರಲಿಂಗನ ಪಾದಕ
ನೆಂಬಿದ ಸೇವಕ ಭವಗೆದ್ದಾನರಿ| ||4||
ಕೂಡಲ ಸಂಗಮದೇವ
ಕೂಡಿಕೊ ಎನ್ನ
ಚರಣಕಮಲ ಮಧ್ಯ
ಮುಕ್ತಿ ಮಾಡೆನ್ನ| ||1||
ತ್ರೀವೇಣಿ ಸಂಗಮನಾ
ತ್ರಿನಯನ ಸ್ಥಾನಾ
ಗೋದಾವರಿ ತುಂಗಾ
ತ್ರಿಗಂಗಾ ಜಮುನಾ| ||2||
ಉದಗಿರಿನಾಥನ
ಚರಣ ಸೇವಕನಾ
ಸದ್ಗುರು ರಾಚೋಟೇಶನಾ
ಕೂಡಿಕೊ ಎನ್ನ| ||3||
ಕೆಂಪು ಮೂಗಿನ ಹಕ್ಕಿ ಎಂದರೆ ಫಿರಂಗಿ
ಹಚಕೊಂಡು ಬರುತಾನ ನವರಂಗಿ
ಗೆದ್ದುಕೊಂಡು ಹೋಗುತಾನ ಸುಂದರಾಂಗಿ
ಕದ್ದುಕೊಂಡು ಹೋಗುತಾನ ಸುಂದರಾಂಗಿ
ಕದ್ದು ಓಡಿ ಹೋಗುತಾನ ಕಾಣದಾಂಗೆ| ||1||
ದೊಡ್ಡ ಶರಣ ಬರುತಾನ ಉಳವಿಲಿಂದ
ಗುಡ್ಡ ಕರಗಿ ತಿಳಿಯಾಗಿ ಕಣ್ಬಂದ
ಶರಣ ಗಣಂಗಳೆಲ್ಲಾ ಅವರ ಹಿಂದಾ
ಹಂದ್ರ ಹಾಕಿದಾರೋ ಹಂಪಿ ದ್ವಾರ ಮುಂದಾ| ||2||
ಬಾವನ್ ಸುಬೇದಾರು ನೆರೆದು ಬಂದಾ
ಅರಸಿಣ ಹಚ್ಚುತಾರೊ ಬೀದರ ದ್ವಾರ ಮುಂದ
ಭೂರಜಗಲಿ ಹಾಕಿದರೊ ಬ್ರಹ್ಮಾನಂದಾ
ಶರಣಗ ಪಟ್ಟ ಗಟ್ಟುತಾರೊ ಇನ್ನು ಮುಂದ| ||3||
ಛಪ್ಪನ ಕೋಟಿ ರಾಜರೆಲ್ಲಾ ಬರುತಾರೊ
ಬಾವನ ಬಾಗೀಣೆಲ್ಲಾ ಹಂಚುತಾರೊ
ಸತ್ಯವಂತ ಶರಣರಲ್ಲಾ ಬರುತಾರೊ
ಗೊತ್ತಿನಲ್ಲೆ ಸತ್ತವರಿಗೆ ಕಾಣತಾರೊ| ||4||
ನಿಡವಂಚಿ ಎಂಬುದು ಹಳ್ಳಿಯಲ್ಲಾ
ನಿಜಲಿಂಗ ಗುರು ಸಕೀಲ ಸುಳ್ಳಲ್ಲಾ
ಶಂಕರ ಲಿಂಗನ ಪಾದ ಮುಟ್ಟಿ ಕೇಳಿಸಲ್ಲಾ
ಗುರು ರಾಚೋಟೇಶನಲ್ಲಿ ಬೈಲಾಗೋದೆಲ್ಲಾ| ||5||
ಕೇಳೊ ನಂದಿನಾಥ ಬಿಡಲೆಂಬ ದೈತ್ಯ
ಬಂದಾನೊ ಓಡುತ ದೇವಿನ ಕೊಂದು ಬಿಡುವೆನಂತ| ||1||
ದಂಡು ಬಂತೋ ಓಡಿ ಹತ್ತು ಖರ್ವ ಕೂಡಿ
ಮುತ್ತಿಗಿ ಹಾಕಿದಾರೋ ದೇವಿಸುತ್ತ ಮುತ್ತಗಿ ಹಾಕಿದಾರೋ| ||2||
ದೇವಿ ಕೋಪದಿಂದೆ ಚಕ್ರ ಬಾಣ ಬಿಡಲು
ಆರು ಮೂರಕ್ಷೋಣಿ ಮಡಿತೊ ಆರುಮೂರಕ್ಷೋಣಿ| ||3||
ದಯವಾಗೇ ಶಂಕರಿ ಕಾಯೆನ್ನ ಓಂಕಾರಿ
ಭಕ್ತರ ಭವಹಾರಿ ಮುಕ್ತೇಶ್ವರಿ ಭಕ್ತರ ಭವಹಾರಿ| ||4||
ಖಾತ್ಯಾದಾಗಿದ್ದಷ್ಟು
ಕೊಡಬೇಕು ಸಾವಕಾರನ ಗಂಟು
ಸಾವಕಾರನ ಗಂಟು ಸತ್ತರೆ ತಪ್ಪದು
ಸತ್ತು ಹುಟ್ಟಿ ಬಂದು ತೊತ್ತಾಗಿ ದುಡಿಬೇಕು| ||1||
ಸಾಲಾವು ಕೊಡಬೇಕು
ಸಂಗಾಟ ರೋಕ್ಯಾವು ಬರಬೇಕೊ
ರೋಕ್ಯಾ ಇದ್ದರೆ ನಿಮ್ಮ ಪಾಕಿ ಬರುತಾದೊ
ಪಾಕಿ ತೀರಿದ ಮ್ಯಾಲೆ ಪರಿಕಾನೆ ಹರಿತಾದ| ||2||
ಗಂಟೇನು ಕೊಡತಿರೊ
ಮ್ಯಾಗಿನ ಬಡ್ಡಿಯ ಕೊಡುವಲ್ಲರಿ
ಬಡ್ಡಿ ಏರಿ ಏರಿ ಗುಡ್ಡ ಆಗುತಾದ
ಗುಡ್ಡ ಹೊದಿಲಾರದೆ ಗುರುವಿನ ಬೈಯತಿರಿ| ||3||
ರಿಣದಾಗ ಸಿಲ್ಕಿರೊ
ಮಾಯಿ ಉಡಿದಾಗ ಬಿದ್ದಿರೊ
ಜೋಗುಳ ಹಾಡಿ ನಿಮ್ಮ ಜ್ವಾಕಿ ಮಾಡುತಾಳ
ಯಮರಾಜನ ಕೈಯಲ್ಲಿ ಒಯ್ದೊಯ್ದು ಕೊಡುತಾಳ| ||4||
ಗುರುವಿನ ಪಾದಾಕ ಶರಣಾಗಿರೊ
ಗುರುತಾವ ತಿಳಕೊಂಡು ಗಪ್ಪಾಗಿರೊ
ಗುರುತು ತಿಳಿದ ಮ್ಯಾಗ ಗಂಟು ತೀರುತಾದ
ಬಂಟಾ ಬಂದು ನಿಮ್ಮ ಸೊಂಟ ಮುರಿತಾನ| ||5||
ಧರಿಯೊಳು ನಿಡವಂಚಿ
ಶಂಕರನ ಪಾದಾವ ಹಿಡಿ ಗಚ್ಚಿ
ಪದ ಪಿಡಿದ ಮ್ಯಾಗ ಪಾಕಿ ತಿರುತಾದ
ಪಾಕಿ ತೀರಿದ ಮ್ಯಾಲೆ ಪರಿಕಾನೆ ಹರಿತಾದ| ||6||
ಗಂಡನ ಮಾಡಿಕೊಂಡವರೆಲ್ಲಾ
ಗರತೆರಾದಿರಿ ಪತವ್ರತೆರಾದಿರಿ
ಪತಿವ್ರತಾ ಖೂನಾ ಆರ್ತು ಗುರುತು ತೋರಿರಿ
ಧಿಮಾಕ ಬಿದ್ದವರು ನೋಡಿರಿ| ||1||
ಮಂತ್ರಬೋಧ ಮಾಡಿದಾನೋ ಕರ್ಣದಲ್ಲಿ
ಅದರ ಸುದ್ದಿ ತಿಳಿದವನಿಗೆ ಸುಕದಲ್ಲಿ
ಅಕ್ಷಯ ಪಾತ್ರಿ ಕೊಟ್ಟು ಕರದಲ್ಲಿ
ಸಾವು ಹುಟ್ಟು ತಪ್ಪಸಿದ ಕ್ಷಣದಲ್ಲಿ| ||2||
ಸತ್ತು ಇದ್ದು ಇಲ್ಲದಂಗ ಇರಬೇಕರಿ
ಐಕ್ಯಸ್ಥಲದ ಗುರುತು ಅರಿತುಕೊಳ್ಳಿರಿ
ಹಸ್ತ ಪ್ರಸಾದ ನೀವು ಬೆರೆತುಕೊಳ್ಳಿರಿ
ನೀವು ಉಂಡು ನೋಡಿರಿ ಮೇಲ ಕೊಂಡ ನೋಡಿರಿ| ||3||
ನೀಲಗಿರಿಯ ಮೇಲ ನಿಡವಂಚಿ
ಭಲೆ ಶಿವಕಂಚಿ ನಿಜಲಿಂಗ ಮೂರುತಿ ನಿಶ್ಚಿಂತಿ
ಮಾಡಿಕೊಂಡರೆ ಮನದಲ್ಲಿ ಕ್ರಾಂತಿ
ಹೋಯಿತೊ ಭ್ರಾಂತಿ ಆಯಿತೋ ಶಾಂತಿ| ||4||
ಗುರುತಾಯಿ ಗುಣವಂತಿ ಸದಾನಂದಮೂರ್ತಿ
ಸ್ವಾನುಭಾವ ಜ್ಯೋತಿ ವಿರಾಟಶಕ್ತಿ ಸ್ವಾನುಭಾವ ಜ್ಯೋತಿ| ||ಪ||
ಶಿವತ್ಯಾ ಜ್ಯೋತಿ ಲಿಂಗದೊಳು ಇರುತಿ
ಅಣುವಾಗಿ ಸಾಧುಸತಿ ಸಂತರ ಚಿತ್ತಿನಲ್ಲಿ ಬೆರತಿ| ||1||
ಚಿನ್ಮಯ ಮೂರುತಿ ಚಿದಾನಂದನ ಹೆಂಡತಿ
ಬಾರೇ ಅಚ್ಚಗರತಿ ಮೂಗಿನೋಳು ಮುತ್ತಿನ ಮೂಗುತಿ| ||2||
ದಯವಾಗೆ ಶಂಕರಿ ಕಾಯಿಎನ್ನ ಓಂಕಾರಿ
ಭಕ್ತರ ಭವಹಾರಿ ಮುಕ್ತೇಶ್ವರಿ ಭಕ್ತರ ಭವಹಾರಿ| ||3||
ಗುರುತು ಇಲ್ಲದ ಗುರುವಿನ ಅರತುಕೊಳ್ಳವ್ವ ತಂಗಿ
ನಾ ನೀ ಎಂಬುದು ಬಿಟ್ಟು ತಾನೆ ತನ್ನೊಳಗ ಕೂಡಿ
ಐಕ್ಯನಾಗವ್ವಾ ತಂಗಿ| ||1||
ಆಕಾರಿಲ್ಲದ ವಸ್ತು ನಿರಾಕಾರ ಇಲ್ಲವ್ವಾ ತಂಗಿ
ಝೇಂಕಾರ ಭ್ರಾಂತಿ ಅಳಿದು ಸಂತೋಷ ಆದ ಮೇಲೆ
ನಿಶ್ಚಿಂತ ಆಗವ್ವಾ ತಂಗಿ| ||2||
ಸಿರಸ್ಸಿನಲ್ಲಿರುವ ಶಿವ ಶಿವ ಸ್ಫಟಿಕ ಲಿಂಗ
ತಾನೇ ತಾನೆಂಬ ಗುರ್ತು ಬೈಲಿಗೆ ನಿರ್ಬೈಲಿನೊಳಗ
ಸಹಿಲ ಮಾಡವ್ವಾ ತಂಗಿ| ||3||
ಮಾತು ಮಾತಿನ ಗುರ್ತು ನೀತಿ ತಿಳಿಯವ್ವಾ ತಂಗಿ
ಭದ್ರಿನಾಥನ ಚರಣ ಪಿಡಿದು ಆ ಲಕ್ಷದೊಳಗೆ ಬೈಲಾದ ಮೇಲೆ
ಅಡಗಿ ಹೋಯ್ತವ್ವಾ ತಂಗಿ| ||4||
ಗುರುವಿನ ಮಾಡಿಕೊಳ್ಳಿರೊ
ಒಬ್ಬನ ಗುರುವಿನ ಮಾಡಿಕೊಳ್ಳಿರೊ
ಗುರುವು ಆದ ಮೇಲೆ ಅರವು ಆಗತಾದ
ಮರವು ಹರಿದು ಮಹಾಲಿಂಗನ ಕೂಡಿರೊ| ||1||
ಮರತು ಕುಂಡ್ರಬ್ಯಾಡರೊ ಗುರುವಿನ ಮಗನಾಗಿರಬೇಕರೊ
ಮಗನಾದ ಮೇಲೆ ತಗಾದಿನೆ ಹಾರುವದು
ಉಗಾದಿ ಮರದಿನ ತಗಾದಿ ಬರುತಾದರೊ| ||2||
ಆಸಿಯ ಅಳಿಬೇಕರೊ ನಿರಾಶಕನಾಗಬೇಕರೊ
ಆಶಿ ಅಳಿದ ಮೇಲ ಘಾಸಿ ಹರಿವದು
ಉಲ್ಲಾಸದೊಳಗೆ ನೀವು ಫುಲ್ಲಸತ್ ಕುಡಬೇಕರೊ| ||3||
ಜಗದೊಳಗಿರಬೇಕರೊ ಜಾತಿ ಜಂಗಮ ತಿಳಿಬೇಕರೊ
ಜಂಗಮ ತಿಳಿದರೆ ಝಲ್ಲನೇ ಹಾರುವದು
ಜೊಲ್ಲಿನ ಜಗವಿದು ಗಂಡ ಹೆಣ್ಣಿನಿಂದಾಯಿತರೊ| ||4||
ಲಿಂಗಮಧ್ಯ ಜಗವೊ ಮೂರು ಲೋಕ ಆಗಮವೊ
ಆಗಮ ತಿಳಿದರೆ ಲಗಾಮ ಹರಿವದು
ಬೇಗನೆ ಹೋಗಿ ನೀವು ಬೈಲೊಳಡಗಿರೊ| ||5||
ನಾ ನೀ ಅಳಿಬೇಕರೊ ತಾನೇ ತಾನಾಗಿರಬೇಕರೊ
ತಾನೆ ತಾನಾದ ಮೇಲೆ ತಂಟಾನೆ ಹರಿವುದು
ಗಂಟು ತೊಕೊಂಡು ಚೋರಗಂಡಿಯ ಧಾಟಿರೊ| ||6||
ನಿಡವಂಚಿ ಗ್ರಾಮ ಭದ್ರಿನಾಥ ರಾಮ ರಾಮ
ರಾಮನ ತಿಳಿದರೆ ಕಾಮನೆ ಹಾರುವದು
ಸೋಹಂ ತಿಳಿದು ಸ್ವರ್ಗಕ್ಕೆ ಮುಟ್ಟಿರೊ| ||7||
ಗುರುವೆ ನಿಮ್ಮ ನಾಮ ಸರ್ವರಿಗೆ ಪ್ರೇಮ
ಪರಮ ಮೋಕ್ಷ ಧಾಮ ಪರಮಾನಂದ| ||ಪ||
ಕಲ್ಪವೃಕ್ಷ ಖಣಿ ಪರುಷ ಚಿಂತಾಮಣಿ
ಸಾಧು ಮುಕುಟ ಧ್ವನಿ ನಾದ ಬ್ರಹ್ಮ| ||1||
ದೀಕ್ಷ ಮೋಕ್ಷದಾತ ರಕ್ಷಿಸೆನ್ನ ತಾತ
ಅಪರೋಕ್ಷ ಜ್ಞಾನವಂತ ಮಾನನಿಧಿ| ||2||
ಸಕಾಮ ನಿಷ್ಕಾಮ ರಾಜಾರಂಕ ಪ್ರೇಮ
ಏಕೋ ಪರಬ್ರಹ್ಮ ದೇವಾ ನೀನೆ| ||3||
ಪರಮ ಯೋಗಿ ಪುರುಷ ಕರ್ಮಲಿಖಿತ ಪ್ರೇಮ
ಏಕೋ ಪರಬ್ರಹ್ಮ ದೇವಾ ನೀನೆ| ||4||
ಯೋಗಿ ಭದ್ರಿನಾಥ ಜಗದೊಳು ಪ್ರಖ್ಯಾತ
ಜಂಗಮ ಜಗಭರಿತ ಲಿಂಗಮೂರ್ತಿ| ||5||
ಗುರುಲಿಂಗ ಜಂಗಮ ತ್ರೀವೇಣಿ ಸಂಗಮ
ಮಹಾತೀರ್ಥ ಮಹಾತ್ಮ ಶಂಕರಲಿಂಗ| ||ಪ||
ಆರು ಎಸಳ ಮಧ್ಯ ಸ್ವಾಲಿಂಗದ ಗುರುತ
ಕುಂಡಲಿಯ ಆಕೃತ ಶಂಕರಲಿಂಗ| ||1||
ಗುರುವಿಗೆ ಗುಣವಿಲ್ಲ ಲಿಂಗಕ್ಕೆ ನೆಲೆಯಿಲ್ಲ
ಜಂಗಮ ಭಕ್ತರಿಗೆ ಜಾತಿಯಿಲ್ಲ| ||2||
ಆಗಿಲ್ಲ ಹೋಗಿಲ್ಲ ಮ್ಯಾಗಿಲ್ಲ ಕೆಳಗಿಲ್ಲ
ತಾಗಿಲ್ಲ ತಪ್ಪಿಲ್ಲ ಲಿಂಗಕ್ಕೆ ದೇಗುಲ ಇಲ್ಲ| ||3||
ರಜ ತಮ ಸತ್ವ ಮೂರ ಅಕ್ಷರ ತಿಳಿದು
ಗುರುಪಾದವ ಪಿಡಿದು ಮುಕ್ತನಾಗೊ| ||4||
ಅನಂತ ರೂಪಗಳು ಅನಂತ ಅವತಾರಿ
ಅಂಗಲಿಂಗ ಶರಣರ ಶಂಕರಲಿಂಗ ಶ್ಯಾಮವರ್ಣ| ||5||
ದಯವಾಗೊ ಶಂಕರಾ ಶಶಿಧರ ಸುಂದರಾ
ಭಾವಿಕ ಭಕ್ತರ ಕೊಡುವೊ ಮುಕ್ತಿ ಮಂದಿರಾ| ||6||
ಗೌಡನಾಗಬೇಕಣ್ಣಾ ಊರಿಗೆ ಗೌಡನಾಗಬೇಕಣ್ಣಾ
ಗೌಡನ ಒಳಗೊಂದು ದೌಡ ಮಾಡುತಾದ
ದವಡನ ಹಿಡಿದು ದಂಡ ತಗೋಬೇಕು| ||ಪ||
ಕಾಯಾಪುರದ ಅಗಸಿ ಮುಂದ
ಮಾಯಾಪುರದ ಪ್ಯಾಟಿಯ ಚಂದ
ಪ್ಯಾಟಿಯ ಒಳಗೊಬ್ಬ ಪಠಾಣ ಇರುತಾನ
ಪಠಾಣಗ ಹಿಡಿದು ಪಟ್ಟತಗೋಬೇಕು| ||1||
ಪಂಚೇತಿ ಮಾಡಬೇಕಣ್ಣಾ
ಸಂಚಿತ ಶಾಸ್ತ್ರ ಓದಬೇಕಣ್ಣಾ
ಶಾಸ್ತ್ರದೊಳಗೊಬ್ಬ ಶತ್ರು ಇರುತಾನ
ಶತ್ರುನ ಹಿಡಿದು ಸಜಾ ಮಾಡಬೇಕು| ||2||
ನ್ಯಾಯ ಮಾಡಬೇಕಣ್ಣಾ
ನೇವರಿಸಿ ಲಂಚ ತಗೋಬೇಕಣ್ಣಾ
ಲಂಚ ತಗೊಂಡರ ಹಂಚಕಿ ಆಗುತಾದ
ಪಂಚ ಕಳ್ಳರ ಕೈದ ಮಾಡಬೇಕು| ||3||
ನಿಡವಂಚಿ ನಮ್ಮ ಜಾಗೀರಿ
ಠಾಣ್ಯನದು ಉದಗೀರಿ
ಠಾಣ್ಯದ ಮೇಲ ನಮ್ಮ ರಾಚೋಟಿ ಕುಂತನ
ಗುಲಾಮನಾಗಿ ಸಲಾಮ ಮಾಡಬೇಕು| ||4||
ಘೂಟಾ ಕಿತ್ತಿಕೊಂಡು ಓಡಿಹೋಯ್ತು ಕುದುರಿ
ಪಾವ ಬಂದ ಹರಿಕೊಂಡು ಪಾರಾಯ್ತು
ಶಿವಮಂದಿರದೊಳಗಿಂದ ಛಿಡದೋಯ್ತು
ಭವ ಗೆದ್ದು ಬಯಲೊಳು ಲಯವಾಯಿತು| ||1||
ಕುದುರಿ ಹೋಗಿ ನಾಲ್ಕು ದಿವಸಾಯಿತು
ಹುಡಕುತ್ತ ಹೊಂಟೆಂಟು ದಿವಸಾಯಿತು
ತಿರುಗಿ ತಿರುಗಿ ಬೇಸರ ಬಂದಿತ್ತೊ
ತೀಸ ರೋಜಗಿ ತಿರುಗಿ ತಾ ಬಂದಿತ್ತೊ| ||2||
ಖಡಿ ಖಡಿ ಮಧ್ಯಾಹ್ನ ಹೊತ್ತಾಯಿತೊ
ಕುದುರಿ ಬಂದು ಠಾವಿಗೆ ನಿಂತಾಯಿತೊ
ಕಟಲಿಕ್ಕೆ ಹೋದರ ಕಚ್ಚಲಿಕ್ಕೆ ಬರುತಾದ
ಮುಟಲಿಕ್ಕೆ ಹೋದರ ಕುದರಿ ಮುಕ್ತನಾಗತದ| ||3||
ನಿಡವಂಚಿನೆಂಬುದು ಹಳ್ಳಿಯಾಯಿತು
ಸಿದ್ಧನ ಕುದುರಿಯು ಸಿದ್ಧಾಯಿತೊ
ಭದ್ರಗಿರಿ ಮ್ಯಾಲಿಂದು ಸುಳುದ ಹೋಯಿತು
ಭದ್ರನಾಥನೊಳು ಐಕ್ಯಾಯಿತೊ| ||4||
ಚಂದನಾ ಸುಗಂಧಾ ಕೇತಕಿ ಮಕರಂದಾ
ಪಾರಿಜಾತ ತಂದು ಅರ್ಪಿಸುವೆನು| ||1||
ಏಕೋ ಭಾವದಿಂದಾ ಸೇವಕನಾಗಿ ಬಂದಾ
ಭಾವಕ ಒಲಿಯೋ ಚಂದಾ ಭದ್ರಿನಾಥ| ||2||
ಸಿದ್ಧಿಯೋಗಿ ಪುರುಷ ಸಾಧು ಮುಕಟ ಕಳಸಾ
ಆನಂದ ಉಲ್ಲಾಸಾ ನಿಜಾನಂದ| ||3||
ಚೈತ್ರಮಾಸದಲ್ಲಿ ನಿಮ್ಮ ಜಾತ್ರಿ ಆಗುತಲಿ
ನಿಡವಂಚಿ ಮಠದಲ್ಲಿ ನಿಜಲಿಂಗಾ| ||4||
ತುಕಾರಾಮ ಮಾಸ್ತಾರಾ ಭದ್ರೇಶ ಗುರುವರಾ
ಭೀಮರಾಯ ಬಾಂಧವರಾ ಇಬ್ಬರೂ ಕೂಡಿ| ||5||
ಯೋಗಿ ಭದ್ರಿನಾಥ ಜಗದೊಳು ಪ್ರಖ್ಯಾತ
ಜಂಗಮ ಜಗಭರಿತಾ ಲಿಂಗಮೂರ್ತಿ| ||6||
ಚೆಂಡಾಸುರನ ಹೊಡದಿ ಚೆಂಡಿ ಹೆಸರ ಪಡೆದಿ
ಮುಂಡ ದೈತ್ಯನ ಹೊಡದಿ ರಂಡಿ ಮುರಳಿ ಹೆಸರ ಪಡೆದಿ| ||ಪ||
ದುರ್ಗಾ ದೈತ್ಯನ ಹೊಡದಿ ದುರ್ಗಿ ಹೆಸರ ಪಡದಿ
ಜನಕನ ಮಾಡಿ ತಂದಿ ನೀನು ಜಾಹೀರ ಹೆಸರ ಪಡೆದಿ| ||1||
ಕಳ್ಳಗ ವರ ಕೊಟ್ಟಿ ಕಳಕ ಭವಾನಿ ಆದಿ
ಭಕ್ತರಿಗೆ ವರಕೊಟ್ಟಿ ದೇವಿ ಭವಾನಿ ಹೆಸರ ಪಡೆದಿ| ||2||
ದಯವಾಗೆ ಶಂಕರಿ ಕಾಯೆನ್ನ ಓಂಕಾರಿ
ಭಕ್ತರ ಭವಹಾರಿ ಮುಕ್ತೇಶ್ವರಿ ಭಕ್ತರ ಭವಹಾರಿ| ||3||
ಚೆಂಡಿನಾಟ ಆಡಬಾರಮ್ಮಾ
ಗೋಪಾಲರು ಕೂಡಿ ಚೆಂಡಿನಾಟ ಆಡಬಾರಮ್ಮ| ||ಪ||
ಚೆಂಡಿನಾಟ ಆಡಬನ್ನಿರಿ
ನಾವು ನೀವು ತಾವು ಕೂಡಿ
ನೀನೆ ಎಂಬುದು ಬೋಧ ಮಾಡಿ
ನಾನೇ ಎಂಬುದು ಫಣಿಯ ಮಾಡಿ
ತಾನೇ ಚಿತ್ತು ಚಿನ್ಮಯ
ಎಂಬೋ ಚೆಂಡು ಹೊಡಿಯಮ್ಮಾ| ||1||
ನಾವು ನೀವು ಹಿರಗಡಿಯಮ್ಮಾ
ತಾವು ನಾಲ್ಕು ಮಂದಿ ಕೂಡಿ ಕಟ್ಟಿಕೊಟ್ಟು ಬಾರಮ್ಮಾ
ಹಟ್ಟಿ ಬಿಟ್ಟೋ ಕರುಣಾ ಓಂಕಾರ
ಹಟ್ಟಿ ಬಿಟ್ಟ ಸೋಮಶೇಖರ
ಗಟ್ಟಿ ಪಾದಕೆ ಮುಟ್ಟಿ ಬರಬೇಕು
ಒಳ್ಳೆ ಮುತ್ತಿನ ಚೆಂಡ ಆಡಬಾರಮ್ಮ| ||2||
ಚಿತ್ತು ಪಟ್ಟು ಹಾರಿಸು ಬಾರಮ್ಮ
ನಾವು ನೀವು ಕೂಡಿ ಚಿತ್ತು ಪಟ್ಟು ಹಾರಿಸುವಾರಮ್ಮ
ಚಿತ್ತು ಬಿದ್ದರೆ ಚೆಂಡು ನಿಮದು
ಪಟ್ಟು ಬಿದ್ದರೆ ಫಣಿಯು ನಮದು
ಭಾವನೆಂಬೋ ಬೋಧಿನೊಳಗೆ
ಚೆಂಡು ಚೀಕಿ ಚುಮ್ಮನಾಡಮ್ಮಾ| ||3||
ಸಪ್ತ ಪಾದಕ ಫಾಜಾ ಮಾಡಮ್ಮ
ಇಲ್ಲಿಂದಲ್ಲಿಗೆ ಹಾರಿ ನಿಂತು ಘೂಟ ಹೊಡಿಯಮ್ಮ
ಒಮ್ಮೆ ಮುಂದ ಒಮ್ಮೆ ಹಿಂದ
ನೀವು ನಾವು ಕೂಡಿ ಆಡೋಣು
ಸಪ್ತ ಝಲ್ಲಾ ಏರಿ ಮೇಲಕ
ಕೈಲಾಸಕ ಹೋಗಬೇಕಮ್ಮಾ| ||4||
ನೆತ್ತಿ ಮೇಲೆ ಬುತ್ತಿ ಬರಬೇಕೋ
ಆ ಚೆಂಡು ಹೊಡಿದರೆ ಮೂಗಿನ ಚೆಂಡಿ ಮೇಲೆ ಇರಬೇಕೊ
ಅತ್ತ ಇತ್ತ ಒಲುಮೆನಾದರೆ
ಮತ್ತೆ ಹಿಂದಕೆ ದಬ್ಬುತೇವೊ
ಸರಿಗೆ ನಿಂತು ಸತ್ಯ ಹೊಡೆದರೆ
ಗೊತ್ತೆ ಬುತ್ತಿ ಸಿಗಬೇಕಮ್ಮಾ| ||5||
ಚೆಂಡು ನಿಮ್ಮಲ್ಲಿ ಫಣಿಯ ನಮ್ಮಲ್ಲಿ
ಇದು ನ್ಯಾಯ ಮಾಡಿರಿ ಯಾರು ಮುಂದ ಯಾರು ಹಿಂದಲಿ
ಎಡ ಹಸ್ತ ಚೆಂಡು ಹಿಡಿದು ಬಲಹಸ್ತ ಫಣಿಹಿಡಿದು
ಫಣಿಯ ಏರಿಸಿ ಚೆಂಡು ಹಾರಿಸಿ
ಎತ್ತಿ ಮೇಲಕೆ ಒತ್ತಿ ಹೊಡೆದರೆ
ಬ್ರಹ್ಮಲೋಕ ಸೇರಬೇಕಮ್ಮ| ||6||
ಎಡ ಮುಂಚ ಬಲಾ ಹೊಡಿಯಮ್ಮಾ
ಅಲ್ಲಿ ಅಚ್ಚಿಯಾದರೆ ಎದುರು ಗಿಚ್ಚಿ ಹೊಡೆಯಬೇಕಮ್ಮಾ
ಚು-ಚಾ ಓಂಕಾರ ಹಿಡಿಯಬೇಕು
ಒಂದೇ ಹೈ ಖೈಂ ಹೊಡಿಯಬೇಕು
ಸದ್ಗುರು ಫಾಜಕ ಮುಟ್ಟಬೇಕಮ್ಮಾ
ಸದ್ಗುರು ಶಂಕರಲಿಂಗನೊಳಗೆಲ್ಲ ಈಸಬೇಕಮ್ಮ| ||7||
ಛೀ ಛೀ ಮೂಳಿ ಸಂತರಿಗಿ ವಾಳಿ
ಪೊರ್ಗಳ ಸೂಳಿ ಗೈಯ್ಯಾಳಿ
ಪುಣ್ಯವಂತರ ಸಂಗಮ ಮಾಡಿ
ಮಾಯಾ ಹಚ್ಚಿ ಯಮಲೋಕ ಸೇರಿಸಿದಿ
ಅತತ ನಿಲ್ಲು ನೀ ಬಂಗಾಲಿ
ಬಹು ಛಿನಾಲಿ| ||ಪ||
ಕುದುರಿ ಕುಣಸ್ತಿ ಫೇರಿ ಹಾಕಸ್ತಿ
ಸರಕಾರದೊಳ ನೀ ಸರದಾರತಿ
ರಾಜರಗಿ ಒತ್ತಿ ನೀ ರಾಜನಾಳುತಿ
ನರಕದ ಕುಣಿಯೊಳು ನೂಕುಸ್ತಿ
ನಿನ್ನ ಬಿಟ್ಟ ದೂರಾದ ಮಹಾತ್ಮರಿಗಿ
ಕೊಟ್ಟು ಮುಕ್ತಿ ಭವ ದಾಟಸ್ತಿ| ||1||
ವೇಶ್ಯಾ ಸ್ತ್ರೀಯೊಳು ದೈವದ ಬಸವಿ
ಕಳ್ಳನ ಸೂಳಿ ಕಟ್ಟಾಳೀ
ವಲ್ಲ ವಲ್ಲ ಅಂದರ ಬೆನ್ನ ಹತ್ತಿ ಬರತಿ
ಬಾಜಾರ ಬಸವಿ ಬಂಗಾಲಿ
ಸಾಕು ಸಂಗತಿ ಬೇಕಿಲ್ಲ ಎನಗ
ಗುರುಪಾದಕ ನೀ ಅರ್ಪಿತ ತೆರಳಿ| ||2||
ಮಂಗ ರಂಡಿ ಸಂಗ ಮಾಡಿ
ಮಾಯಾ ಘಾಸಿ ಬಿದ್ದಿತು ಅಂವಗ
ಸಂಗನ ಶರಣರು ದೊಬ್ಬಿ ಹಾಕಿದರು
ಭವ ಗೆದ್ದು ಬೈಲಾದವಗ
ಸದ್ಗುರು ಶಂಕರಲಿಂಗನ ಪಾದಕ
ಅರ್ಪಿತನಾದೆನು ಮುಕ್ತಾಂಗಿ| ||3||
ಜಂಗಮ ಜಗ ಕರ್ತಾ ಲಿಂಗದಲ್ಲಿ ಭರಿತಾ
ಸ್ವಲಿಂಗ ಗುರುತಾ ಚಿನ್ಮಯ ಚಿತ್ತದಲ್ಲಿ ಬೆರಿತಾ| ||ಪ||
ಮಂಗಳ ಮಹಾದೇವಾ ಜಂಗಮ ಜಗದೇವ
ಸಂಗನ ಶರಣರ ಆಳಿನ ಆಳಾದೆನಯ್ಯ| ||1||
ಅಂಬಿಕೆ ಪತಿನಾಥ ಆತ್ಮದಲ್ಲಿ ಬೆರಿತಾ
ಶಂಭೋ ಶಮರಂತ ಕುಂಭಕೋಣೆಯಲ್ಲಿರುತ| ||2||
ನಂಬಿದ ಭಕ್ತರ ನೆನವಿನಲ್ಲಿ ಇರುತ
ಕುಂಬಿಣಿ ಭಕ್ತರ ಕುಂಬಾರ ಗುಮಟದಲ್ಲಿರುತ| ||3||
ಅಂಬುಕೇಶ್ವರಾ ಜಂಗಮ ಭಕ್ತರ
ಜಾತಿ ಜ್ಯೋತಿ ನೀತಿ ಮಾತಿನ ಭೇದ ತಿಳಿಸಯ್ಯ| ||4||
ದಯವಾಗೋ ಶಂಕರ ಶಶಿಧರ ಸುಂದರ
ಭಾವಿಕ ಭಕ್ತರ ಕೊಡುವೋ ಮುಕ್ತಿಯ ಮಂದಿರ| ||5||
ಜಮಾ ಮಾಡಿ ಇಕ್ಕಿರಿ ರೊಕ್ಕಾ
ನಾಳೆ ಸರಕಾರದವರುಕೇಳುತಾರೊ ಲೆಕ್ಕಾ
ಸಂತಿ ಬಾಜಾರ ತಿರುಗಿ ತಿರುಗಿ
ಭ್ರಾಂತಿಗೆಟ್ಟ ಭಾವ ಮರೆತ
ಚಿಂತಿಯೊಳಗೆ ಸಿಕ್ಕಿ ಬಿದ್ದು ಹಕ್ಕಿಪಕ್ಕಿನಾಗಬೇಡರಿ| ||ಪ||
ಅಣುರೇಣು ಅರಗುಂಜಿಯೊಳಗೆ
ಅರದಾ ಗುಣಿಸಿ ಭಾಗಿಸಿ ತಿಳಿಬೇಕೋ ತನ್ನೊಳಗೆ
ಆರು ಸೋಪಾನ ಏರಿ ನಿಂತು
ಮೇಲೇರಿ ಮುಂದಕ್ಕೆ ನೋಡಿದರೆ ಏಳರಾಚಿಗೆ ಏನು ಇಲ್ಲಾ
ಎತ್ತ ನೋಡಿದರತ್ತ ಬೈಲೇಬೈಲಾ ಹೇಳೆನೆಂದರೆ ಹೆಸರಿಲ್ಲಾ
ಆ ಬೈಲಿನೊಳಗಿನ ಹೊಯಿಲಾ ತಿಳಿದವನೇ ಬಲ್ಲಾ| ||1||
ವಟ ಬೀಜದೊಳು ಅಂಕುರಡಗಿ
ಆ ಅಂಕುರದೊಳಗೊಂದು ಅಸವಲದ ಮರನಾಗಿ
ಬಣ್ಣವಿಲ್ಲದ ಪಕ್ಷಿಯು ಬಂದು
ಮರದ ಕೊನೆ ಮೇಲೆ ಕುಂತು ಸಣ್ಣದೊಂದು ಗೂಡ ಕಟ್ಟಿ
ಗುಡ್ಡನಿಕ್ಕಿ ಸುಳಿಯುತಾದ ಪಕ್ಷಿ ಜಾತಿ ಹೆಣ್ಣ ಗಂಡು
ಆ ಪಕ್ಷಿಗೆ ಹೊಡೆದು ಗುಡ್ಡ ತಿಂದವನೇ ಮುಕ್ತಾ| ||2||
ಈಡಾ ಪಿಂಗಳ ನಾಡಿ ಬಲಿದು
ಸುಷುಮ್ನದೊಳಗೆ ಸುಳಿಯುವ ಅಕ್ಷರ ತಿಳಿದು
ಸಾವಧಾನದಿ ಸರ್ವವು ತಿಳಿದು
ಜಪದ ಜೀವ ಮೂಲನೆ ಅರಿದು ಮುಂದೆ ಬರುವ ಮೂಲನೆ ತಿಳಿದು
ಮೋಕ್ಷ ಪದವಿ ಕಾಣಬೇಕು ನಿಡವಂಚಿ ಗ್ರಾಮದ ರೊಕ್ಕ
ಗುರು ರಾಚೋಟೇಶ ಬಂದು ಮಾಡಿರುವ ಲೆಕ್ಕಾ| ||3||
ಜಯದೇವ ಮಂಗಳಾರತಿ
ರಾಚೋಟೇಶ ಗುರುಮೂರ್ತಿ
ನಿಮ್ಮ ಪಾದಕೆ ಮಾಡುವೆ ಸ್ಫೂರ್ತಿ
ಕೊಡು ಎನಗೆ ನೀ ಮುಕ್ತಿ| ||ಪ||
ನಾಲ್ಕಾರು ದಶ ದ್ವಾದಶ
ಷೋಡಶ ಮಾಡಿ ವಾಶಾ
ಅಲ್ಲಿ ಇರುವ ಜೀವ ಹಂಸ
ಬಲ್ಲಂತ ರಾಚೋಟೇಶ| ||1||
ಈಡಾ ಪಿಂಗಳ ಸುಷುಪ್ತಿ
ಆಧಾರ ಲೀಲಾ ಮಾಡುತ್ತಿ
ಹಂ ಕ್ಷೇಮ ದಿವ್ಯಜ್ಯೋತಿ
ಅಲ್ಲಿ ಮಹಾಲಿಂಗ ಮೂರುತಿ| ||2||
ತ್ರಿಲೋಕ ಚರಸ್ಯಾಡತಿ
ಚೌದ ಅಂತರದಲ್ಲಿ ಇರುತಿ
ಬೆಳಗುವೆ ಆತ್ಮಜ್ಯೋತಿ
ಭದ್ರಿನಾಥ ಬೇಡುವೆ ಮುಕ್ತಿ| ||3||
ಜಯ ಜಯ ಜಗದಂಬೆ
ಜಯ ಜಗ ಜನನಿ
ಜಯ ಜಯ ಕರುಣೆ ವರದಾಯಿನಿ| ||ಪ||
ಮಹೇಶ ಮರ್ಧಿನಿ
ಮಹಾಂಕಾಳಿ ಮಾನಿನಿ
ಶುಂಭ-ನಿಶುಂಭನ ಸಂಹರಿಸಿದಿ ನೀ| ||1||
ಶುಭ ಯೋಗವು ಸಾಧಿಸಿ ಕೊಟ್ಟಂತ ಜನನಿ
ನೀನೇ ಮಾಯಾ ನೀನೇ ತಾಯಾ
ನಿನ್ನ ಘನ ಮಹಿಮೆ ಅರಿಯಲಾರೆಯಾ| ||2||
ನೀ ನಿಜ ಭವಾನಿ
ತುಕಾ ತುಳಜಾಪುರ ವಾಸಿನಿ
ಉಘೇ ಎಂದು ನಿನ್ನ ಪಾದಕೆ ಎರಗುವೆ ಜನನಿ| ||3||
ನಿಡವಂಚಿ ನಿಲಯದೊಳು
ಭದ್ರಿನಾಥನ ಪಾದದೊಳು
ವಂದಿಸಿ ಬೇಡುವೆ ಪಾಲಿಸು ಜನನಿ| ||4||
ಜಯ ಜಯ ಮಂಗಳಾರುತಿ
ಕರಬಸಪ್ಪ ಗುರುಮೂರ್ತಿ
ನಿಮ್ಮ ಪಾದಕ ಮಾಡುವೆ ಶ್ರುತಿ
ಕೊಡು ಎನ್ನಗೆ ಮತಿ| ||ಪ||
ಜಲ್ಮಸ್ಥಾನ ಚಳಕಾಪುರ
ಹುಡಗಿಮಠಕ ಅಧಿಕಾರ
ಆರು ಶಾಸ್ತ್ರ ಓದಿದವರ
ಕಡಿಗಿ ಆದ ದಿಗಂಬರ| ||1||
ಕಡಗಂಚಿ ಮಡಿವಳ ಧೀರ
ಭಕ್ತಿ ಅವನ ಮ್ಯಾಲ ಪೂರಾ
ಬೋಧ ಮಾಡಿ ಮಂತರ
ಕಡಗಿ ಆದ ದಿಗಂಬರ| ||2||
ಮಹಾತ್ಮೆ ಮಾಡಿ ಚಿಟಗುಪ್ಪಿ ಊರಾ
ಗವಿ ಹೊಡಿಸಿ ಆಕಾರಾ
ಯಂಕಮ್ಮ ತಾಯಿ ಸತ್ಯಪೂರಾ
ತ್ಯಾಗ ಮಾಡ್ಯಾಳ ಸಂಸಾರಾ| ||3||
ನಿಡವಂಚಿ ನಿಜಲಿಂಗ
ಭದ್ರಿನಾಥ ಗುರುಲಿಂಗ
ಅಂಗಲಿಂಗ ಓದಿದವರಾ
ಕಡಿಗಾದ ದಿಗಂಬರಾ| ||4||
ಜಾತಿ ಭೇದ ಅಳಿದು ಜ್ಯೋತಿ ರೂಪ ತಿಳಿದು
ಪ್ರೀತಿ ವಿಷಯ ಕಳೆದು ಅಜಾತನಾದೆ| ||ಪ||
ತನು ಮನ ಧನದಿಂದೆ ಶರಣು ಆಗಿ ಬಂದೆ
ಕರುಣಿಸೆನ್ನ ತಂದೆ ಕರುಣಾ ಬೋಧಾ| ||1||
ನಿಮ್ಮ ಚರಣಾಮೃತ ಕೇವಲ ಅಮೃತಾ
ಜನ್ಮ ಮರಣ ರಹಿತಾ ಅದೇನಯ್ಯಾ| ||2||
ಪೂರ್ವ ಸುಕೃತ ಎನಗಾ ಒದಗಿ ಬಂತೋ ಈಗಾ
ಪುಣ್ಯದ ಫಲ ಯೋಗಾ ತೋರುತೈತೆ| ||3||
ಸಾಕೋ ಜನ್ಮ ಎನಗಾ ಬೇಕಿಲ್ಲ ಗುರುವೆ ನನಗಾ
ನಿಡವಂಚಿ ಗ್ರಾಮದ ನಿಜಲಿಂಗ ಮೂರುತಿ| ||4||
ಯೋಗಿ ಭದ್ರಿನಾಥ ಜಗದೊಳು ಪ್ರಖ್ಯಾತ
ಜಂಗಮ ಜಗಭರಿತ ಲಿಂಗ ಮೂರ್ತಿ| ||5||
ಜಾತ್ರಿಗೆ ಹೋಗಾನು ಬನ್ನಿರಿ
ಶಿವಶರಣರ ಜಾತ್ರಿ ನೋಡಾನು ಬನ್ನಿರಿ| ||ಪ||
ಅಂತರಂಗದ ಜಾತ್ರಿಯೊಳಗೆ
ಮಂತ್ರ ಬಾಜಿ ಆಗುತೈತೆ
ಚೌದ ಭವನದ ಮ್ಯಾಲೆ
ತೊಟ್ಟಿಲ ಕಟ್ಟಿ ತೂಗುವಂತ
ಶರಣರ ದರ್ಶನ ಮಾಡ ಬನ್ನಿರೊ| ||1||
ಕಾಯಪುರದ ಪ್ಯಾಟಿಯೊಳಗೆ
ಏಳು ಸುತ್ತಿನ ಕೋಟಿ ಒಳಗೆ
ಕಾಳದುರ್ಗಿಯ ಮನೆಯ ಹಿಂದೆ
ಕಳ್ಳ ಕುಂತನ ಜತ್ತನಣ್ಣಾ
ಕದ್ದು ಆಚೆಗೆ ಹೋಗಬೇಕಣ್ಣ| ||2||
ಬಲಕಿನ ಮಾರ್ಗವ ಹಿಡಿರೊ
ಎಡಕಿನ ಮಾರ್ಗವು ಯಮಪುರ ತಿಳೀರೊ
ಬ್ರಹ್ಮಪುರಿಯೊಳಗೆ
ಉನ್ಮನಿಯ ಚಿತ್ರ ಮಂಟಪದೊಳಗಾ
ಸಹಸ್ರ ಪೀಠ ಮಧ್ಯದಲ್ಲಿ| ||3||
ಶ್ರೇಷ್ಠ ರಾಚೋಟೇಶ್ವರನಿಗೆ
ಪಾದ ಪದ್ಮಗಳನು ಪಿಡಿದು
ಮುಕ್ತಿ ಪದವಿ ಬೇಡ ಬನ್ನಿರೊ
ನಿಡವಂಚಿ ಗ್ರಾಮದ ಮುಕ್ತರೊ
ಪದವಿ ಬೇಡಿಕೊಂಡಂಥ ಭಕ್ತರೊ| ||4||
ಡೊಂಗರ ಹೊಡಿವೆ ನಮ್ಮವರಿಗೆ ಹುಷಿಯಾರಿ
ಡಿಗ್ರಿ ಹುಕುಮ ಬರತಾದ ಸರಕಾರಿ
ಹುಕುಮ ತಂದು ಯಮ ಹುಕುಮ ಮಾಡತಾನ
ಜೋಕಮ್ ತಿಂದು ಜೇಲಖಾನಿಗಿ ಹೋದಿರಿ| ||ಪ||
ಸತ್ಯವು ತಿಳಿರಿ ಮಿಥ್ಯವು ಕಳಿರಿ
ಗೊತ್ತವ ತಿಳಿಕೊಂಡು ಗುರು ನೋಡಿರಿ
ಗುರಿಯ ನೋಡುತ ಮರಿಗೆ ನಿಂತು
ಮಾಟನಿಟ್ಟು ಮಹಾ ಬಗರಿನ ಹೊಡಿರಿ| ||1||
ವಾಸನ ಅಳಿರಿ ಈಶನ ತಿಳಿರಿ
ಫಾಸಿ ಗುಣಗಳು ಬಿಟ್ಟುಕೊಡಿರಿ
ಫಾಸಿ ಹರಿದ ಮೇಲೆ ಪೇಶಿ ಹಾರುವದು
ಈಶ ಪಂಚಾಕ್ಷರಿ ಜಪವ ಮಾಡಿರಿ| ||2||
ತ್ರಿಕೂಟದೊಳಗೊಂದು ಭೃಕುಟಿ ಮಧ್ಯರಿ
ಅಷ್ಟದಳ ತಿರುಗುತಾದರಿ
ನಾಶಿಕ ದಂಡಿ ನೋಡುತ ಚಂಡಿ
ಭಾನು ಪ್ರಕಾಶನ ನೀವು ಕಂಡಿರಿ| ||3||
ತಾರಕ ದಂಡಕ ಕುಂಡಲ ಮಧ್ಯರಿ
ಮಂಡಲದಾಚಿಗಿ ಓಡುವ ಚಿಗರಿ
ಅಧ್ವೈತ ಗುರು ರಾಚೋಟೇಶನ
ಚರದಲ್ಲಿ ನೀವು ಕೂಡಿರಿ| ||4||
ತಗಣಿಯ ಲಸ್ಕರ ಬಂತು
ಏನು ಮಾಡಿದಾ ಶಿವನಾ ತಂತು
ಜುರ್ರು ಜುರ್ರೆಂದು ನೆತ್ತರ ಗುಂಜುವದೆ
ಜಿಗಳಿ ಪರಿಯಂತೆ| ||ಪ||
ದೈತ್ಯರ ವಂಶದಲಿ ಹುಟ್ಟಿ
ಬಿಂದುವಿಗೆ ಕೋಟ್ಯಾನುಕೋಟಿ
ಸಾವಿರ ಸಂಖ್ಯೆಗೆ ಗಿಣಿತಿಲ್ಲಾ ಏನು ಹೇಳಲಮ್ಮ
ಸಾಯುತ ಸಂತತಿ ಹೆಚ್ಚವದೆ ಏನು ಹೇಳಲಮ್ಮ| ||1||
ಮನಗಿದಲ್ಲಿ ಮನಗಗೊಡದು
ಕುಂತಲ್ಲಿ ಕೂಡಗೊಡದು
ಮನಸಿಗೆ ಬ್ಯಾಸರವು ಬಂತೆ ಏನು ಹೇಳಲಮ್ಮ
ಮನಸಿಗೆ ಚಿಂತಿ ಬಹಳಾಯಿತು ಏನು ಹೇಳಲಮ್ಮ| ||2||
ಮಾತಂಗ ಪರ್ವತದಲ್ಲಿ
ಮಹಾತಾಯಿ ಹೊಟ್ಟಿಲಿ ಹುಟ್ಟಿ
ಮರ್ತ್ಯಾಕ ಕಳುಹಿದ ಯಮಧರ್ಮ ಏನು ಹೇಳಲಮ್ಮ
ಮಾತು ಮಾತ್ರಕ್ಕೆ ತಿಳಿಯದಮ್ಮ ಏನು ಹೇಳಲಮ್ಮ| ||3||
ಕರ್ಮ ಹೆಚ್ಚಾಯ್ತು ಮರ್ತ್ಯಾದ ಮ್ಯಾಲ
ವರ್ಮ ತಿಳಿಯರು ಈ ಜನರೆಲ್ಲಾ
ಖಜ್ಜಿ ಹೇನು ಹೆಚ್ಚಾದವೆಲ್ಲಾ ಏನು ಹೇಳಲಮ್ಮ
ಮಾತು ಮಾತ್ರಕ್ಕೆ ತಿಳಿಯಮ್ಮ ಏನು ಹೇಳಲಮ್ಮ| ||4||
ಕೃತಾಯುಗ ತ್ರೇತಾಯುಗ
ದ್ವಾಪರಯುಗ ಕಲಿಯುಗ
ಕಲಕಿ ಹುಟ್ಟುತಾದಮ್ಮ ಏನು ಹೇಳಲಮ್ಮ
ವಿನಾಶ ಕಾಲಕ ಬಂತಮ್ಮ ನುಡಿರಿ ರಾಮ ರಾಮ| ||5||
ದುರ್ಗುಣ ಹೆಚ್ಚಾಯಿತಲ್ಲಾ
ದುರ್ಗಿ ಬ್ಯಾನಿ ಮರ್ತ್ಯಾದ ಮ್ಯಾಲ
ಊರೂರಿಗೆ ಕೊಂಪಿಗಳು ಹಾಕ್ಯಾರೆ ಏನು ಹೇಳಲಮ್ಮ
ನಾಲ್ಕು ದಿಕ್ಕಿನ ಮೂಲಿ ಉರಿವದು ಎಷ್ಟು ತಾಳಲೆಮ್ಮ| ||6||
ಧರ್ಮದ ಮಾರ್ಗ ತಿಳಿರಿ
ಮನಸಿನ ಅವಗುಣ ಅಳಿರಿ
ಸದ್ಗುರುವಿನ ಪಾದಕ ಶರಣು ಹೋಗಿರಿ ಗುರ್ತು ತಿಳಿರಿ
ಮಹಾ ಗುರುವಿನ ಸೇವಾಮಾಡಿಕೊಳ್ಳಿರಿ ಮುಕ್ತಿಪಡಿರಿ| ||7||
ತಗಣಿ ತಾಯಿ ತನುವಾಯಿತಮ್ಮ
ಖಜ್ಜಿ ತಾಯಿ ಕರ್ಮಾಯಿತಮ್ಮ
ಹೇನೆಂಬುದು ಹೇಸಕಿ ನೋಡಮ್ಮ ಏನು ಹೇಳಲಮ್ಮ
ಸೀರಿನ ಸಂಖ್ಯಾ ಬಹಳಮ್ಮ ಏನು ನೋಡಲಮ್ಮ| ||8||
ಅಮ್ಮಾ ಎಂದು ಗುಮ್ಮಾಡವರು
ಅಕ್ಕಾ ಎಂದು ಹೊಕ್ಕಾಡುವರು
ತಂಗಿಯೆಂದು ದೆಂಗ್ಯಾಡುವರಮ್ಮ ಏನು ಹೇಳಲಮ್ಮ
ಇಂಥ ಅಧಮರು ಇವರಮ್ಮ ಇಚ್ಛಾ ಕೆಟ್ಟದಮ್ಮ| ||9||
ತಂದಿ ಮಗನಿಗೆ ಒಬ್ಬಾಕಿ ಹೆಣತಿ
ತಾಯಿ ಮಗಳಿಗೆ ಒಬ್ಬಾನೆ ಪತಿ
ಹೆಣತಿ ಮಗಳ ಸಂಗತಿ ಮಾಡುವರಮ್ಮ
ಬಲ್ಲವರು ಭವಿಸಂಗ ಮಾಡುವರಮ್ಮ ಏನು ಹೇಳಲಮ್ಮ| ||10||
ಇಂಥ ಕರ್ಮಾ ಫಲಿಸದೆ ಹೋಯಿತು
ಪ್ಲೇಗ ರೋಗ ಬ್ಯಾನಿಯ ಬಂತು
ಝಟಪಿಟಿ ಲಟಪಿಟಿ ಕೆಲಸಾ ಆಯಿತು ಕುಲ ನಾಶಯಿತಮ್ಮ
ಸಾಲ ಬಾಗಿ ರಥಾ ಓಡ್ಯಾಡುತಾ ಯಮಲೋಕ ಸೇರುವರಮ್ಮ| ||11||
ಇದರ ಗುರುತ ಮನಸಿಗೆ ಅರತು
ಗುಂಜಿ ತೂಕಾ ಬಂಗಾರ ಗಳಸಿ
ಚಿತಾಪುರ ಸಂತಿಗಿ ಒಯ್ಯಮ್ಮ ಬೆಲೆಯ ಕೇಳಮ್ಮ
ಸತ್ಯ ಚಿದಾನಂದ ಗುರುತಮ್ಮ ಗಚ್ಛಿ ಹಿಡಿಯಮ್ಮ| ||12||
ನಿಡವಂಚಿ ನಿಜಲಿಂಗ ಶಿವಕಂಚಿ ಸಿದ್ಧಲಿಂಗ
ಉದಗೀರ ಶಂಕರಲಿಂಗಮ್ಮ
ಚರಣ ಭಜಿಪೆನು ತಿರುಗಿ
ಬಾರದ ದಾರಿ ಹಿಡಿದೇನು ಮುಕ್ತಾದೆನಮ್ಮ| ||13||
ತನ್ನವರ್ಯಾರಿಲ್ಲ ಜಗದಲ್ಲಿ
ತಾನೆ ತಾನಾದವಂಗೆ ಈ ಕೀಲಿ
ಉತ್ಪತ್ತಿ ಸ್ಥಿತಿ-ಲಯ ತನ್ನಲ್ಲಿ
ತಾನೇ ಆಗುತಾದ ತಿಳಿವಲ್ಲಿ ||1||
ಕಾರಣ್ಯ ಕೈಲಾಸಪುರದಲ್ಲಿ
ನೌಬತ್ತು ಬಾಜೆ ಕೇಳಲ್ಲಿ
ಕಾಳಿ ಕರುಣಿ ಸಿಂಗು ಬುರುಗು
ವಾದ್ಯ ಭೇರಿ ಭ್ರೂ ಮಧ್ಯದಲ್ಲಿ| ||2||
ಸಾಸಿರ ದಳ ಮಧ್ಯ ಸ್ಥಲದಲ್ಲಿ
ಅರು ಇಟ್ಟು ಕೇಳಿರಿ ಗುರುತಲ್ಲಿ
ಇಪ್ಪತ್ತೊಂದು ಸಾವಿರ ಆರನೂರಲ್ಲಿ
ಜಪ ತಪ ಝಟ ಪಟ ಆಗುತಾವಲ್ಲಿ| ||3||
ಪಿಪಲೀಕಾ ಮಾರ್ಗದ ಕೊನೆಯಲ್ಲಿ
ಪ್ರಕೃತಿ ಪುರುಷನ ಮನೆಯಲ್ಲಿ
ಸಿದ್ಧನ ಮಗನಾದ ಭದ್ರಿನಾಥನಲ್ಲಿ
ಮೂಲ ತಿಳಿದು ಮುಕ್ತಿಪುರದಲ್ಲಿ| ||4||
ತಾನೇ ಒಬ್ಬ ಸದ್ಗರುನಾಥ
ನಿಶ್ಚಯಿಸೋ ಮಾತಾ
ಒಬ್ಬನೆಂದು ತಿಳಿದ ಮೇಲೆ
ಲಕ್ಷವಿಟ್ಟು ಸಾಯಬೇಕು
ಜಾತ ಮಲ್ಲಿಗಿ ಜ್ಯೋತಿ ರೂಪ
ತಾನೆ ತನ್ನನು ಕಾಣತೈತೆ| ||1||
ಕಾಣದೆಲ್ಲಾ ತನ್ನ ರೂಪಾಯಿತೆ
ಆಗುವದೆಲ್ಲಾ ಮಹಿಮಾ ಸೂಸತೈತೆ
ಜಗದ ಕ್ರಿಯೆ ತಾನೆ ಒಬ್ಬನು
ಜನನ ಮರಣ ಎಲ್ಲಿ ಉಳಿತೆ
ತನ್ನ ರೂಪ ತಾನೆ ಕಾಣುತೆ ||2||
ತನ್ನೋಳು ತಾನು ಐಕ್ಯವಾಯಿತೆ|
ತನ್ನ ಗುರುವಿಗೆ ತಾನೆ ಶರಣಾಗಿ
ತಿಳಿಯಬೇಕೋ ತನ್ನ ಅಂತರಂಗಿ
‘ನಾನೇ ನೀನು ನೀನೇ ನಾನು’
ತಾನೇ ತನ್ನನು ಬೋಧ ಮಾಡಿ
ನಾದ ಕೇಳಿಸಿ ನರ್ಕ ತಪ್ಪಿಸಿ
ತನ್ನೊಳು ತಾ ಕೂಡಿಕೊಂಡೈತೆ| ||3||
ತಿಳಿ ತಿಳಿ ತಿಳಿ ತಿಳಿ ಹುಚ್ಚಮುಂಡಾ
ತಿಳಿಯಲದವನಿಗೆ ಯಮಗಂಡಾ
ನಾಳೆ ಕೇಳುತಾ ನಿನ್ನ ಗಂಡಾ
ತಿಳಿದವನೆ ಗುರು ಪಾದ ಕಂಡ| ||1||
ನಾನು ನೀನೆಂಬುದು ಅಳಿ ಮುನ್ನಾ
ತಾನೇ ತಾನೆಂಬುದು ತಿಳಿ ಜ್ಞಾನ
ಅರವಿನ ಕಪನಿ ಪಡಿ ಇನ್ನ
ಮೋಕ್ಷಕ ಸಾಧನ ಗುರುಧ್ಯಾನ| ||2||
ಮನಸಿನ ಕಲ್ಪಿತ ಅಳಿ ಮುನ್ನಾ
ಮಾಡಿ ನಡಿಯೊ ಸುಖ ದುಃಖ ಸಮಾನಾ
ನಿದ್ರಿಯೊಳಗೆ ಗುರುವಿನ ಖೂನಾ
ಮುದ್ರಾದೊಳಗೆ ಆತನ ಠಿಕಾಣಾ| ||3||
ನಿಡವಂಚಿ ಎಂಬುದು ಹಳ್ಳ್ಯಾದರಿ
ಮಹಾದೇವ ದಯಾ ನಮ್ಮ್ಯಾಲದರಿ
ಶಂಕರಲಿಂಗನ ಮಗನಾಗರಿ
ಭವ ಗೆದ್ದು ನೀವೂ ಪಾರಾಗರಿ| ||4||
ತಿಳಿದು ನೋಡುವದು ಸುಜ್ಞಾನ
ಮನ ತೊಳಿದು ನೋಡುವದು ಮಹಾಜ್ಞಾನ
ತಿಳಿಯದೆ ತೊಳಿಯದೆ ಮೂರು ಮಲಗಳ
ಮುಳಿ ಮುಳಿದಾಡುವದಜ್ಞಾನ| ||5||
ಹುಟ್ಟಿ ಬಂದಿದಿ ಮುಟ್ಟಿನಲಿ ಮೂಲಾ
ಇಂದ್ರಿ ಘಟ್ಟಿಗೊಂಡು ಪಂಚ ತತ್ವ ಆಯಿತಲ್ಲ
ಸೃಷ್ಟಿಕರ್ತ ಬ್ರಹ್ಮ ವಿಷ್ಣು ಅಷ್ಟರೂಪ
ತಾನೇ ಆಗಿ ಆಟವಾಡುವದು ತಿಳಿತಲ್ಲಾ| ||6||
ಪಿಂಡ ಬ್ರಹ್ಮಾಂಡದಳತಿ ಒಂದೇ ತೂಕಾ
ನವಖಂಡ ಪೃಥ್ವಿ ಈರೇಳು ಲೋಕ
ಭಾನುಕೋಟಿ ಬೆಳಗುಪರ್ತಿ
ಮೂಲಮಂತ್ರ ಪ್ರಣವ ಸ್ವರೂಪ| ||7||
ತಾನೇ ಜನನ ಮರಣ
ತಾನೇ ತಾನಾದ ಮೇಲೆ ಏನಣ್ಣ
ನಿಡವಂಚಿನೆಂಬದು ಹಳ್ಳೆಣ್ಣಾ
ಭದ್ರಿನಾಥ ಗುರುಸೇವಾ ಮಾಡಣ್ಣ| ||8||
ತಿಳಿಬೇಕು ತಿಳಿಬೇಕು ಅಂತೀರಿ ತಮ್ಮ
ಎಲ್ಲಿತನಕ ತಿಳಿಬೇಕು ಅಂತೀರೋ
ಎಲ್ಲಿತನಕ ತಿಳಿದೀರಿ ಅಲ್ಲಿತನಕ ಹೇಳತೀರಿ
ಕಳ್ಳನ ಹಿಡಿದು ಕಟ್ಟಿದವರ್ಯಾರೋ| ||1||
ನನ್ನ ಖೂನಾ ನಿನಗಿಲ್ಲ ನಿನ್ನ ಖೂನಾ ನನಗೇನು
ತನ್ನ ಖೂನಾ ತಿಳಿದವರು ಯಾರಿಲ್ಲ
ನನ್ನಲ್ಲಿ ನಿನ್ನಲ್ಲಿ ತನ್ನಲ್ಲಿ ಆಗದ
ಕುಡ್ಡ ದಡ್ಡ ಮೊಂಡ ಮೂಕನೇ ಬಲ್ಲ| ||2||
ಶಕ್ತಿ ಉಳ್ಳವರು ಶಿವನ ಘಳಿಸಿ
ಯುಕ್ತಿಯುಳ್ಳವರು ಈಶನ ಘಳಿಸಿ
ಮುಕ್ತಿಯುಳ್ಳವರು ಮೂಲನೆ ತಿಳಿಸಿ
ಮೂರು ಲೋಕ ಮೀರಿ ಮನಗಿದವರ್ಯಾರೊ| ||3||
ನಾನೇ ಬ್ರಹ್ಮ ನೀನೇ ವಿಷ್ಣು
ಈಶ್ವರ ತಾನೇ ಜಂಗಮನು
ಶಂಕರಲಿಂಗ ರಾಚೋಟೇಶ್ವರನು
ಜಂಗಮಲಿಂಗ ಲೀಲೆಯೊಳಗಿದ್ದರೆ ಸಾಕೊ| ||4||
ತಿಳಿಬೇಕು ತಿಳಿಬೇಕು ತಿಳಿಬೇಕಪ್ಪಾ
ಜ್ಞಾನ ಸಿಂಧು ತಿಳಿಬೇಕಪ್ಪ
ತಿಳಿದರೆ ತೀರಿತು ಉಳಿದರೆ ಅಳಿದೀರು
ಕಳಿದರೆ ಕಟ್ಟಿ ಧಾಟಿ ಹೋದಿತಪ್ಪಾ| ||1||
ಸಿಂಧು ಅಂಬುದು ಹ್ಯಾಂಗಿರುವದಪ್ಪಾ
ಸುಷುಮ್ನದೊಳು ಸ್ವಪ್ನ ಬಿದ್ದಂಗಪ್ಪಾ
ಎದ್ದು ಎಚ್ಚರವಾಗಿ ತಿರುಗಿ ನೋಡಪ್ಪಾ
ಇದ್ದಲ್ಲೆ ಇರುವನು ಸಿದ್ಧ ತಾನಾಪ್ಪಾ| ||2||
ಸಿಂಧು ಎಂಬದು ಶಿವ ತಾನಪ್ಪಾ
ಶಿವನೊಳು ಜೀವರೂಪ ಜಂಗಮನಪ್ಪಾ
ಜಾತಿಯಿಲ್ಲ ಜ್ಯೋತಿಯಿಲ್ಲ ಮಾತಿಲ್ಲಪ್ಪಾ
ಜನನವಿಲ್ಲ ಮರಣವಿಲ್ಲ ಕಾಳ ಕಳಿಯಪ್ಪಾ| ||3||
ತನ್ನ ಖೂನಾ ತನಗಿಲ್ಲಾ ನನ್ನ ಖೂನಾ ನಿನಗಿಲ್ಲ
ಮನಿ ಖೂನಾ ಮರೆತು ಮರಗುವರಲ್ಲಾ
ತಿಳಿಬೇಕು ಅಳಿಬೇಕು ಕೇಳಬೇಕಲ್ಲಾ
ಮೂಲ ಕಾಲಜ್ಞಾನ ಕೀಲು ಬಲ್ಲವನೆ ಬಲ್ಲಾ| ||4||
ಉತ್ತರಖಾಂಡದೇಶ ಭಲೆ ದೊಡ್ಡದಪ್ಪಾ
ಉದಗಿರಿ ಕೈಲಾಸಗಿರಿಯಪ್ಪಾ
ಶಂಕರಲಿಂಗ ರಾಚೋಟೇಶನಪ್ಪಾ
ಪಾದ ಪಿಡಿದುಕೊಂಡು ಪಾರಾಗಪ್ಪಾ| ||5||
ತಿಳಿಯದೇನಪ್ಪ ತಿಳಿಯಬೇಕೆಂಬದು ಏನಪ್ಪ
ಯಾರು ಎಲ್ಲಿಂದ ಎಲ್ಲಿಗೆ ಬಂದರು
ಜಾಗ ಹಂಚಿಕೆ ನೋಡಿಕೊಳ್ಳಪ್ಪಾ| ||1||
ಸಾಧು ಏನಪ್ಪ ಸಾಧುಗ ಬಾಧಿ ಇನ್ಯಾಕಪ್ಪ
ಪೈ ಮಾತಾಡಿ ಪರಾಧೀನರಾದಿರಿ
ಅಯ್ಯ ಮಾಡಿದ ಪಾಪ ಕೈಮ್ಯಾಗ ಆಗತಾದ| ||2||
ಜಂಗಮೇನಪ್ಪ ಜಂಗಮನ ಹತ್ರ ಪರಹಮ್ಯಾಕಪ್ಪ
ಜಂಗಮ ಆದ ಮ್ಯಾಲ ಲಿಂಗ ಸ್ವರೂಪಿ
ಅಂಗ ಬಿಟ್ಟು ಲಿಂಗ ಲೀಲದೊಳು ಇರಬೇಕು| ||3||
ಮೂರುತಿ ಏನಪ್ಪ ಶಂಕರಲಿಂಗ ಮೂರುತಿ ಹಾನಪ್ಪ
ಶಂಕರಲಿಂಗ ರಾಚಯ್ಯಾ ಮೂರುತಿ ಪಾದ ಪಿಡಿದ ಮ್ಯಾಲ
ಈ ನಿಜ ಚಿತ್ತಿನೊಳಗಾದೆನಪ್ಪಾ| ||4||
ತ್ರಿಕೂಟ ಸ್ಥಾನದಲ್ಲಿ ಜ್ಯೋತಿ ಹೊಳೆಯುತ
ಮುತ್ತು ಮಾಣಿಕ್ಯದ ಬೆಲೆ ರತ್ನಾಂಕಿತ| ||ಪ||
ವಸ್ತು ಬಿಡುವ ಖೂನಾ ಪರವಸ್ತು ತಿಳಿಯೊ ನೀನಾ
ನಿಶ್ಚಿಂತ ಮಾಡೊ ಮನಾ ನಿಶ್ಚಿಂತನಾಗೊ| ||1||
ತಪ್ಪು ಅಪ್ಪೊ ಎನ್ನಾ ಒಪ್ಪಿಕೊಳ್ಳೊ ನೀನಾ
ಕೋಪ ಬೇಡಾ ಎನ್ನಾ ಕೃಪಾನಿಧಿ| ||2||
ಗುರುವೆ ನಿನ್ನ ಸರಿಯೆ ಯಾರು ಇಲ್ಲ ದೊರಿಯೆ
ಮೂರು ಲೋಕದ ದೊರಿಯೆ ಮುತ್ತು ರತ್ನ| ||3||
ಎಷ್ಟು ಮಾಡಲಿ ವರ್ಣಾ ವೇದಕ ನಿನ್ನ ಗುಣಾ
ತಿಳಿದಿಲ್ಲೋ ಸಂಪೂರ್ಣ ಶಾಸ್ತ್ರಕಿನ್ನಾ| ||4||
ಯೋಗಿ ಭದ್ರಿನಾಥ ಜಗದೊಳು ಪ್ರಖ್ಯಾತ
ಜಂಗಮ ಜಗ ಭರಿತ ಲಿಂಗ ಮೂರ್ತಿ| ||5||
ದಂಡು ಬಂತು ದಂಡು ಬಂತು
ಮೂಷಕನ ದಂಡು ಬಂತು
ದೇಶಕ ಬಂತು ಅಳಿಗಾಲ
ನೀವು ಕೇಳಿರಿ ಜನರೆಲ್ಲಾ| ||ಪ||
ಮನಕ ಬಂತು ಬ್ಯಾಸರವು ಬಂತೆ
ಜನಕ ತೋರಿತು ಚಿಂತೆ
ಗಂಡಸರಿಲ್ಲೇನು ಈಸುವಾರೆ
ಹೆಂಗಸರೇ ಹೆಚ್ಚಾಗ್ಯಾರೆ| ||1||
ಫಿರಂಗೆ ಬರುತಾನೆ
ಬೀದರಿಯ ಕೊಂಬುತಾನೆ
ಹಸರ ನಿಶಾನಿ ಹಚ್ಚಯಾನೆ
ಹರಕಿ ಬೇಡುತಾನೆ| ||2||
ಬೀದರಿಯ ಕೊಂಡು ಗೂಗಿ
ಕ್ಷೇತ್ರಪತಿ ರಾಜನಾಗಿ
ಫಿರಂಗಿಯ ಲಿಪಿಯ ಓದ್ಯಾನೆ
ಓಡಿಹೋಗ್ಯಾನೆ| ||3||
ಎಂಟು ದಿಕ್ಕಿನ ರಾಯರ ದಂಡು
ಆನಿ ಕುದುರಿ ತಂಡಿಗಿ ತಂಡು
ಬಿದರಿಯ ಸುತ್ತ ಸರಸೂರಿ
ರನ್ನ ಲಡಾಯಿ ರಣಭಾರಿ| ||4||
ಉತ್ತರ ದಿಕ್ಕಿನ ರಾಯರ ದಂಡು
ಮದಲಿಂಗನ ಕೂಡಿಕೊಂಡು
ಬೀದರ ಪಟ್ಟಣಕೆ ಬಂದಾರೆ
ಝಂಡಾ ನಡಿಸ್ಯಾರೆ| ||5||
ಆರ್ಯರ ಹೆಣ್ಣಮಗಳು ಹುಟ್ಟಿ
ಆಡುತ ಬರುವಳು ಬ್ಯಾಟಿ
ಶೀಖರ ತಲ್ವಾರ ಕಡಿ ಕಟ್ಟಿ
ಬಂದಳು ಬೀದರ ಕೋಟಿ| ||6||
ನೌಲಕ್ಷ ದಂಡು ಬಂತು
ನವರಂಗಿ ನಿಶಾನಿ ಬಿರುದು
ಬೀದರಿಗಿ ಅರಸಿಣ ಹಚ್ಚಾರೆ
ಬಂದು ನಿಬ್ಬಣಗೇರೆ| ||7||
ಹದಿನಾರು ವರ್ಷದ ಶರಣ
ಹಂಪಿಲಿಂದೆ ಬರುತಾರಣ್ಣಾ
ಹಮ್ಮು ಕಾಳಗ ಮೆರೆದತ್ತೆ
ಕೈ ಕಂಕಣ ಕಟ್ಟೆತ್ತೆ| ||8||
ಸತ್ಯ ಶರಣರು ನಿಬ್ಬಣಗೇರು
ಕಲ್ಲ ತೇರು ಎಳದಾರು
ಬಿದರಿ ಪಟ್ಟಣಕ್ಕೆ ಬಂದಾರೆ
ಬಿರುದು ಸಾರ್ಯಾರೆ| ||9||
ಸತ್ಯ ಶರಣರು ಬಂದು
ಲಗ್ನವು ಹಚ್ಚಿದಾರೆ
ಬಾವನ್ ರಾಜರ ಸಭೆ ನೆರೆದತ್ತೆ
ಬಾಗೀಣ ಹಂಚೆತ್ತೆ| ||10||
ದಶಾವತಾರ ಬರುತಾದೆ
ಕಲಂಕಿ ಹುಟ್ಟುತಾದೆ
ಕಲಿಯುಗದ ಆಟ ಕಡಿಯಾಟ
ಬಂತೆ ವೈಕುಂಠ| ||11||
ಬಾಳಿಯ ಬನದೋಳು
ಬಾಲಿ ಗರ್ಭಿಣಿ ತಾಳಿ
ಹಸುರ ತೇಜಿಯ ಹುಟ್ಟೆತ್ತೆ
ಮಾತನಾಡೆತ್ತೆ| ||12||
ನಿಡವಂಚಿ ಗ್ರಾಮದಲ್ಲಿ
ನಿಜಲಿಂಗನ ಮೂರುತಿ ಕಂಡೆ
ಭದ್ರಿನಾಥನ ಗುರುವಿನ ಕಂಡೆನೆ
ಬೈಲೊಳಗಾದೆನೆ| ||13||
ದಯಾನಿಧೆ ಶಂಕರ ಶಂಕರ
ಕೃಪಾನಿಧೆ ಶಂಕರ ಶಂಕರ ||ಪ||
ದೀನ ದಯಾಳ ಶಂಕರ ಶಂಕರ
ಭಕ್ತ ಅಭಿಮಾನಿ ಶಂಕರ ಶಂಕರ| ||1||
ಆದಿದೇವ ಶಂಕರ ಶಂಕರ
ಜಂಗಮದೇವ ಶಂಕರ ಶಂಕರ| ||2||
ವಿಶ್ವನಾಥ ಶಂಕರ ಶಂಕರ
ಮಂಗಳಮೂರ್ತಿ ಶಂಕರ ಶಂಕರ| ||3||
ಶಿವ ಮಹದೇವ ಶಂಕರ ಶಂಕರ
ಮಮ ಗುರುನಾಥ ಶಂಕರ ಶಂಕರ| ||4||
ರಾಚೋಟೇಶ ಶಂಕರ ಶಂಕರ
ಭದ್ರಿನಾಥ ಶಂಕರ ಶಂಕರ| ||5||
ಉದಗಿರಿ ವಾಸಾ ಶಂಕರ ಶಂಕರ
ಸದ್ಗುರು ಪಾದಾ ಶಂಕರ ಶಂಕರ| ||6||
ದೇಹವೆಂಬುದು ದೇವರ ಗುಡಿಯ ಕಟ್ಯಾರ ಏನ ಛಂದೋಜಿ
ಒಂಬತ್ತ ಬಾಗಿಲ ಖಿಡಕಿ ತೆಗೆದಾರೊ
ಮುಂದ ಟಾಕ ಛಂದೋಜಿ| ||ಪ||
ಪಂಚರತ್ನದ ಸಿಂಹಾಸನ ಮ್ಯಾಲೆ ಕುಂತಾರ ಮಹಾ ಲಿಂಗೋಜಿ
ಎಡಕ ಬಲಕ ನಂದಾದೀವಿಗಿ ಉರಿತಾವ ಜಗಜ್ಯೋತಿಜಿ
ಏಳಕೋಟಿ ಮೈಲಾರಲಿಂಗ ಕೈಲಾಸ ಪತಿಯೋಜಿ
ಅಷ್ಟದಳದ ಮೇಲೆ ಮೂರುತ ಮಾಡಿದ
ಸ್ವಾಮಿ ಮಲ್ಲಯ್ಯೋಜಿ| ||1||
ಅನಂತ ಅವತಾರ ಅನಂತ ರೂಪಾ ಸ್ವಾಮಿ ಮಲ್ಲಯ್ಯೋಜಿ
ಬಾರಜ್ಯೋತಿರ್ಲಿಂಗ ಎದರ ಗದ್ದಗಿ ಮ್ಯಾಲ ಕುಂತಾರ
ಭಕ್ತ ಬಸವೋಜಿ
ಎಣ್ಣಿ ಅರಸಿಣ ಪೂಜೆ ಮಾಡುತಾರ ಭಕ್ತರ ಭಾವಲಿಂಗೋಜಿ
ಗೊಗ್ಗೆನವರು ಮರುಳರೆಲ್ಲಾ ಕುಣಿತಾರ ಏನ ಛಂದೋಜಿ| ||2||
ಉಘೆ ಉಘೆ ಎಂದು ಕೂಗು ಹೊಡಿ
ಭಕ್ತರೆಲ್ಲಾ ಬಂದೋಜಿ
ಸವಲಕ್ಷ ನಿಶಾನಿ ಹಚ್ಯಾರ ಆತನ ಗುಡಿ ಮುಂದೋಜಿ
ನಗಾರಿ ನೌಬತ್ತ ನುಡಿತಾವ ಮ್ಯಾಲ ದಶನಾದಗಳಿಂದೋಜಿ
ಕರಡಿ ಸಮ್ಯಾಳ ಪಾಲಕಿ ಮೇಳ ಕುಣಿತಾವ ಆನಂದೋಜಿ| ||3||
ಬತ್ತೀಸರಾಗ ಗಾಯನ ಮಾಡುತಾರ
ಊರ್ವಶಿ ರಂಭೋಜಿ
ಭಾವನ ಮೆಚ್ಚಿ ಬಂಡಿ ಆಚಿಲಿ ಆಡುತಾಳೊ ನಾರಿಜಿ
ಸಮಯ ರಾತ್ರಿಯಲಿ ಸವಾರಿ ಹೊಂಟಿತೊ
ಶ್ಯಾಮಕರ್ಣ ಮೇಲೋಜಿ
ಛತ್ರಿ ಚಾಮರ ಚವರಿ ಆಪ್ತಗಿರಿ ಹಾರಸ್ತಾರ ಮಲ್ಲಯ್ಯೋಜಿ| ||4||
ಆನಿ ಅಂಬಾರಿ ಮೇಲೆ ಮೆರಸ್ತ ಬಂದಾರ
ಬಾರಾ ಜ್ಯೋತಿರ್ಲಿಂಗಗೋಜಿ
ಪಂಚಲಿಂಗ ಪಂಚ್ಯಾರತಿ ಬೆಳಗ್ಯಾರ
ಬಾರಾ ಜ್ಯೋತಿರ್ಲಿಂಗೋಜಿ
ಕಾಸ್ಟಕುದರಿ ಮ್ಯಾಲ ಕುಂತ ಬಂದಾರ
ನಾಥ ಶಂಕರ ಲಿಂಗೋಜಿ
ಆತನ ಚರಣಕ ಶರಣು ಮಾಡುತಾರ
ಭದ್ರಿನಾಥ ಲಿಂಗೋಜಿ| ||5||
ದೇವ ನಿನ್ನ ಗುರುತಿಲ್ಲ ಸ್ತ್ರೀ ಅಲ್ಲ ಪುರುಷ ಅಲ್ಲ
ನಪುಂಸಕ ನೀನಲ್ಲ ದೇವಿ ನಪುಂಸಕ ನೀನಲ್ಲ| ||ಪ||
ಜಾತಿ ಜ್ಯೋತಿವಿಲ್ಲ ಜನ್ಮ ಮರಣವಿಲ್ಲ
ರಂಗ ರೂಪವಿಲ್ಲ ದೇವಿ ಅನಂತ ನಿನ್ನ ಲೀಲಾ| ||1||
ಹಡೆದವರ ಹೆಸರಿಲ್ಲ ಪಡೆದವರು ಗುರುತಿಲ್ಲ
ನಾನು ನೀನು ಇಲ್ಲ ತಾನೇ ತನ್ನೊಳಗೆ ಎಲ್ಲ| ||2||
ದಯೆವಾಗೆ ಶಂಕರಿ ಕಾಯೆನ್ನ ಓಂಕಾರಿ
ಭಕ್ತರ ಭವಹಾರಿ ಮುಕ್ತೇಶ್ವರಿ ಭಕ್ತರ ಭವಹಾರಿ| ||3||
ದೇವಿ ಮನಕೆ ತಂದ ಮಾಯಾ ರೂಪದಿಂದ
ಕನ್ಯ ಪ್ರಾಣದ ಹೆಣ್ಣ ಸುಂದರಿಯಾಗಿ ಮೂರು ಬಣ್ಣ| ||ಪ||
ಹೇಮಾದ್ರಿ ಪರ್ವತ ಕೊಡಗಲ್ಲ ಮೇಲೆ ನಿಂತ
ನೋಡುತಾಳೊ ಸುತ್ತ ದೇವಿ ನೋಡುತಾಳೊ ಸುತ್ತ| ||1||
ಶುಂಭಾಸುರ ದೈತ್ಯ ಓಡಿ ಬಂದ ತುರುತ
ಮದುವೆ ಆಗುವೆನಂತ ಇಕಿನ ಮದುವೆ ಆಗುವೆನಂತ| ||2||
ದಯವಾಗೆ ಶಂಕರಿ ಕಾಯ ಎನ್ನ ಓಂಕಾರಿ
ಭಕ್ತರ ಭವಹಾರಿ ಮುಕ್ತೇಶ್ವರಿ ಭಕ್ತನ ಭವಹಾರಿ| ||3||
ದೇವಿಯ ಅವತಾರ ಬತ್ತೀಸ ಹತಿಯಾರ
ಕಟಿಕೊಂಡು ತೈಯಾರ ಹೊಡೆದು ದೈತ್ಯ ಸಂಹಾರ| ||ಪ||
ಲೆಕ್ಕವಿಲ್ಲದೆ ಹೆಣಾ ದಂಡು ಮಡಿತೊ ರಣಾ
ಪಿಶಾಚಿ ಲಗ್ಗಣ ಮಾಡುತಾರೊ ಪಿಶಾಚಿ ಲಗ್ಗಣ| ||1||
ಕಾಳಿ ಕರುಣಿ ಊದಿ ಸಿಂಗ ಸೊನಾಯಿ ಬಾಜಿ
ಕುಣಿಯುತಾವೋ ತೇಜಿ ಧಂಡ ರುಂಡ ಕುಣಿಯುತಾವೋ ತೇಜಿ| ||2||
ದಯವಾಗೆ ಶಂಕರಿ ಕಾಯೆನ್ನಾ ಓಂಕಾರಿ
ಭಕ್ತರ ಭವಹಾರಿ ಮುಕ್ತೇಶ್ವರಿ ಭಕ್ತರ ಭವಹಾರಿ| ||3||
ದೇಶದೊಳಗೆ ದೊಡ್ಡ ಶಹರಾ ಮಹಾತ್ಮೈ ಜಾಗ ಉದಗೀರಾ
ಉದಗೀರೊಳಗೆ ದೊಡ್ಡ ಸ್ವಾಮಿ ಅಪ್ಪ ರಾಚೋಟೇಶ್ವರಾ| ||ಪ||
ನಿತ್ಯ ನೇಮದಲ್ಲಿ ಪೂಜಿ ಜಪತಪ ಸಾಧನ
ನಾಮಸ್ಮರಣೆ ನಾರಾಯಣ ರಾತ್ರಿ ಹಗಲು ಭಜನ
ಭಕ್ತ ಜನರು ಬಂದು ಬಂದು ಮಾಡುತಾರೋ ದರ್ಶನ
ಟೆಂಗು ಬಾಳಿಹಣ್ಣು ಸಕ್ಕರಿ ಕಾಯಿ ಖಜೂರಿ ಲೋಬಾನ
ಧೂಪ ದೀಪ ಹೂವಿನ ಹಾರ ಕರ್ಪೂರದಾರುತಿ ಬೆಳಗ್ಯಾರ| ||1||
ಮುಂದೆ ಹೇಳತೀನಿ ಛಂದ ಚಿತ್ತವಿಟ್ಟು ಕೇಳಿರಿ
ಜ್ಞಾನೇಶ್ವರಿ ಪಾರಾಯಣ ರಾತ್ರಿ ಹಗಲು ಹರಿಹರಿ
ಆರು ಅಳಿದು ಮೂರು ತಿಳಿದು ಸಂತರೊಳಗೆ ಸಂಸಾರಿ
ಧೂಮ್ರಪಾನ ಮಾಡುತಾರೊ ಕೊಂಡು ಹಾಲು ಸಕ್ಕರಿ
ರೂಪ ಚಂದ್ರ ಬಹಳ ಸುಂದರ ಹುಟ್ಟಿ ವಿಷ್ಣು ಅವತಾರಿ| ||2||
ರಜತಮ ಸತ್ವಗುಣದಿಂದೆ ಮೂರು ಪುತ್ರರು
ಏನು ಹೇಳಲಿ ಬ್ರಹ್ಮ ವಿಷ್ಣು ರುದ್ರಮೂರ್ತಿ ಅವತಾರು
ಒಂದು ಎರಡು ಮೂರು ನಾಲ್ಕು ಐದನೇ ಸೋಪಾನ ಏರ್ಯಾರಾ
ಆರನೇ ಸೋಪಾನ ಮೇಲೆ ನಿಂತು ಏಳನೇ ಸೋಪಾನ ಕಂಡರಾ
ಪ್ರಣವ ಪಂಚಾಕ್ಷರಿ ಜಪವ ನಿತ್ಯ ಮೂರು ಸಾವಿರಾ| ||3||
ಆರು ಗುಣ ಅಳಿದು ಅಷ್ಟಗುಣ ತಿಳಿದು ನಡೆಯುತಾ
ಐದು ಐದು ಇಪ್ಪತೈದು ಪಂಚತತ್ವ ತಿಳಿಯುತಾ
ಆರು ಮೂರು ದ್ವಾರ ಮುಚ್ಚಿ ಆರು ಮನಿಯ ದಾಟುತಾ
ಗುಹೆ ಸೇರಿ ಗುಪ್ತನಾಗಿ ಗುರು ರೂಪ ಕಾಣುತಾ
ಯೋಗಸಿದ್ಧಿ ಸಾಧಿಸುವರೊ ಇಂಥ ಯೋಗಿ ಪುರುಷರಾ| ||4||
ವಾರ ವಾರ ಶಿಷ್ಯ ಜನ ಮಾಡುತಾರೊ ಗುರುವಾರಿ
ಮುಕ್ತಿವಾರ ಶುಕ್ರವಾರ ಮಹಾಶಿವರಾತರಿ
ಪಾಲಕಿ ಹೊರಕೆ ನಿಂತರಪ್ಪಾ ಎಡಕ ಬಲಕ ಭೂಯಾರಿ
ಚೌರಿ ಆಪ್ತಗಿರಿ ಬೆಳ್ಳಿ ಬೆತ್ತ ಮ್ಯಾಲ ಛತ್ತರಿ
ಬಾಳಗೋಪಾಳ ತಾಳ ಭಜನಿ ಮೇಳ ಝಮ್ಮರಾ| ||5||
ಸವಾರಿ ಬಂತು ಬಾಜಾರಕ ಬಾಜಿ ವಾದ್ಯ ಪರಿ ಪರಿ
ಡಂಕಾ ನಗರಿ ನೌಬತ್ತ ಬೂರುಗ ಭೇರಿ ಭಜಂತರಿ
ಢಕ್ಕಿ ಡೊಳ್ಳು ಭರಕಿ ಬುರುಕಿ ಕಾಳಿ ಕರುಜಿನ ಫೇರಿ
ಕರಡಿ ಸಮ್ಮೇಳ ಹಲಗಿ ಸಿಂಗು ಡಪ್ಪು ಬಾಜಿ ಪರಿಪರಿ
ಮೆರೆಸುತಾರೋ ಕೇರಿ ಕೇರಿ ತಿರುಗಿ ನಾಲ್ಕು ಬಾಜಾರಿ| ||6||
ಮೆರೆದು ಊರ ತಿರುಗಿ ಮನೆಗೆ ಬಂತು ಪಾಲಕಿ ಇಳಿಸುತಾ
ಬಂದ ಜನ ತಂದು ಕಾಯಿ ಕರ್ಪೂರಾರತಿ ಬೆಳಗುತಾ
ಧೂಪ ದೀಪ ನೈವೇದ್ಯ ಮಾಡಿ ನಮಸ್ಕಾರ ಹಾಕುತಾ
ರಾಮ ನಾಮ ಬಹಳ ಪ್ರೇಮದಲ್ಲಿ ತಾವು ನುಡಿಯುತಾ
ಹಂಚುತಾರೋ ಪಂಚಫಳಾರ ಸಕ್ಕರಿ ಕಾಯಿ ಖರ್ಜೂರಾ| ||7||
ವಾಶ ನಿಡವಂಚಿ ಪುರ ದೇಶಕಾದೋ ಜಾಹೀರಾ
ಮಹಾದೇವನ ಕರುಣಾದಿಂದೆ ಮಾಡಿದೇನೋ ಅಕ್ಷರಾ
ಎನ್ನಗುರು ರಾಚೋಟೇಶ ಹಾನೋ ದಯಾ ಸಾಗರ
ಭಕ್ತಿಲಿಂದೆ ಪಾದಕ ಹೊಂದಿ ಭಕ್ತ ಆದ ಉದ್ಧಾರಾ
ಬೇಡಿದಂತ ಭಕ್ತರಿಗೆ ಮುಕ್ತಿ ಕೊಡೊ ಶಂಕರಾ| ||8||
ದೊಡ್ಡಿದಾರು ಕಟ್ಟಿದಾರಲ್ಲಾ
ಈ ದೊಡ್ಡಿ ಕಟ್ಟಿದವರಿಗಿ ಗುರುತು ಹಿಡಿದಿಲ್ಲ
ದೊಡ್ಡಿ ಮ್ಯಾಲ ಇಟ್ಟು ಖ್ಯಾಲ
ಕಟ್ಟಿಸಿದನೊ ರಂಗಮಹಲ
ಕಟ್ಟ ಕಡಿಗಿ ಆಗೋದಿಲ್ಲ
ದುಷ್ಟ ಜನರಿಗೆ ತಿಳಿಯೋದಿಲ್ಲ| ||ಪ||
ಟಾಕು ಹೊಡೆದು ತೆಗೆದು ಬಾಗಿಲ
ಈ ಬಾಗಿಲಿಗೆ ಹತ್ತಿದಾವೋ ಮೂವತ್ತೆರಡು ಕಲ್ಲ
ದೊಡ್ಡ ಗಚ್ಚಿಂದು ಕಲ್ಲಿಂದಲ್ಲ
ಗಿಣತಿ ಯಾರು ಮಾಡಲಿಲ್ಲಾ
ಸಹಸ್ರ ರೂಪಾಯಿಗಾಗೋದಿಲ್ಲಾ
ಕಟ್ಟಕಡಿಗಿ ಆಗೋದಿಲ್ಲಾ| ||1||
ದೊಡ್ಡಿ ಬಾಗಿಲ ದರವಾಜಿ ಎದರ
ಖಿಡಕಿ ತೆಗದಿದಾನೊ ಚತುರಂಗ ಚಂದಿರ
ತೆಗೆದು ಮಾಯದ ಕೀಲಿ ಹಾಕಿ
ಕೀಲಿ ನಿನಗೆ ತೆರೆಯೋಣಿಲ್ಲ
ಅಣಕು ಬೆಳಕು ಕಾಣೋದಿಲ್ಲ
ನವದ್ವಾರದಲ್ಲಿ ಸುಳಿಯುವದಲ್ಲ| ||2||
ಸುತ್ತಮುತ್ತ ಕುಂಬೆದಾಕಾರಾ
ಈ ನಟ್ಟ ನಡುವೆ ಕುಂತಿದಾನೊ ಒಬ್ಬ ಪೈರಿಕಾರ
ಪೈರಿಕಾರ ಕುಂತು ಕೇಳುತಾನ
ಹೋಗ ಬರುವ ಗೆಳೆಯರಿಗೆ
ವಿಚಾರ ಮಾಡಿ ನಡಿಯಂತಾನ
ಈ ಹಾಳು ದೊಡ್ಡಿ ಬಿಡು ಅಂತಾನ| ||3||
ದೊಡ್ಡಿದು ಮಾಡೋ ನೀ ಖ್ಯಾಲ
ಮಾಡಲ್ದ ಹೋದರ ಆಗುತಾದ ಹಾಳ ಹಿತ್ತಲ
ಹಿತ್ತಲೊಳಗೆ ಕಾಗಿ ಗೂಗಿ
ಪಾಲ ಆಗಿ ಹೋಗೆತಲ್ಲಾ
ಭದ್ರಗಿರಿಯ ಮೇಲೆ ಉದಗಿರ್
ಸದ್ಗುರು ಶಂಕರಲಿಂಗ ಸರಕಾರ| ||4||
ನಂದಿನಾಥ ಕೇಳೊ ದೇವಿ ಮಹಾತ್ಮೆಗಳ
ದೈತ್ಯರ ಸೈನ್ಯಗಳ ಸಂಹರಿಸಿದಳೊ| ||ಪ||
ಆ ನೀಚ ಮಂದಿರಗಳು ಅಂದ ಮಾತು ಕೇಳೊ
ಈ ಮುಂಡ ಸ್ತ್ರೀಯಳ ಕೊಲ್ಲುವೆನು ಈ ಮುಂಡ ಸ್ತ್ರೀಯಳ| ||1||
ದೇವಿ ಖಡ್ಗ ಎತ್ತಿ ದೈತ್ಯ ಜಡಿ ಕಿತ್ತಿ
ಮುಂಡಗಳು ಕತ್ತರಿಸಿ ಕೊಯ್ದಿದಾಳೊ| ||2||
ದಯೆವಾಗೇ ಶಂಕರಿ ಕಾಯೆನ್ನ ಓಂಕಾರಿ
ಭಕ್ತರ ಭವಹಾರಿ ಮುಕ್ತೇಶ್ವರಿ ಭಕ್ತರ ಭವಹಾರಿ| ||3||
ನಡಿ ನಡಿ ನಡಿ ಝಟಕಾಸಿ
ಖಾಲಿ ಪ್ರಪಂಚಾ ಬಿಟಕಾಸಿ
ಮಹಾಗುರುವಿನ ಪಾದಾ ಮುಟ್ಟಿ ಕಾಸಿ
ಮುಕ್ತಿಪಡಿರಿ ಜೀವ ಇಟ್ಟಕಾಸಿ| ||ಪ||
ತಿಳಿ ತಿಳಿ ತಿಳಿ ತಿಳಿ ತನ್ನ ತಾನ
ಕಳಿ ಕಳಿ ಕಳಿ ಕಳಿ ಮನ ವಾಸನಾ
ಸುಡು ಸುಡು ಸುಡು ಸುಡು ನಿನ್ನ ಕಾಮನಾ
ಹಿಡಿ ಹಿಡಿ ಹಿಡಿ ಹಿಡಿ ನಿನ್ನ ಸೋಮನಾ| ||1||
ಸರಿ ಸರಿ ಸರಿ ಸರಿ ಹಿಂದಕಾ
ಬರ್ರಿ ಬರ್ರಿ ಬರ್ರಿ ಬರ್ರಿ ಮುಂದಕಾ
ಅರು ಇಡೊ ಗುರುವಿನ ಪಾದಕ
ಕರ ಹಿಡಿದು ಎಳಿವನು ಹಂತ್ಯಾಕಾ| ||2||
ಅರಿ ಅರಿ ಅರಿ ಅರಿ ಆತ್ಮಾ
ಅನಾಹುತದಲ್ಲಿ ಪರಮಾತ್ಮ
ಸಾಯುವದು ಹುಟ್ಟದು ಹುಕುಮಾ
ಹರ ಪ್ರಕಾರ ಬರುತಾನ ಹಕಿಮಾ| ||3||
ನೋಡೊ ನೋಡೊ ನೋಡೊ ನೋಡೊ ನಾಶಿಕ
ಭಾನು ಪ್ರಕಾಶ ತನ್ನ ಬೆಳಕಾ
ತ್ರಿಕೂಟ ಸಂಗಮನ ಝಳಕಾ
ಭೃಕುಟಿ ನೋಡೋ ನೀ ಮ್ಯಾಲಕಾ| ||4||
ಉದ-ಉದ-ಉದ-ಉದಗಿರಿ ಉತ್ತರಕಾ
ಸಿದ್ಧ ಶಂಕರ ಲಿಂಗನ ಮಠಕಾ
ಗುರು ರಾಚೋಟೇಶನ ಪಾದಕಾ
ಸೇವಕನಾಗುವದು ಕಡೆತನಕ| ||5||
ನಡಿ ನಡಿ ಮುಂದಕಾ ಪಶ್ಚಿಮ ದೇಶಕ
ಮುಕ್ತಿಯ ಬೇಡದಕಾ ಚರಣಕ ಮುಕ್ತಿಯ ಬೇಡದಕಾ| ||ಪ||
ಆರು ಮೂರು ಎರಡು ಕೂಡಿ ಒಂದರಲ್ಲಿ
ಕೂಗುತೈತಿ ಪಿಪಲಿ ದೇವಾ ಕೂಗುತೈತಿ ಪಿಪಲಿ| ||1||
ಕೂಗುತೈತಿ ಪಿಪಲಿ ಓಂಕಾರ ಸ್ವರದಿಂದಾ
ಮಹಾನಾದಗಳಿಂದ ದೇವಾ ಮಹಾನಾದಗಳಿಂದ ||2||
ಜಿಗಿ ರೋಮ ದ್ವಾರ ಜಿಗಿದು ಪೋದ ವೀರ
ಹಡದವಳೆಂಥವಳೊ ಅವನ ಪಡೆದವಳೆಂತವಳೊ| ||3||
ಹಾರಿ ಗೆದ್ದೆನೆಂಬಾ ಮೀರಿದ ಶರಣನ
ಪಾದಕ ಶರಣಾರ್ಥಿ ಅವನ ಚರಣ ಶರಣಾರ್ಥಿ| ||4||
ಹೇಳಬಾರದಯ್ಯಾ ಇದು ಕೇಳಬಾರದಯ್ಯಾ
ಹೇಳುವ ಬಗಿ ಬ್ಯಾರೆ ಹೇಳಿದು ಕೇಳುವ ಬಗಿ ಬ್ಯಾರೆ| ||5||
ಗುರು ಗೋಪ್ಯದ ಮಾತು ಗುಪಿತದಲ್ಲಿ ಇಟ್ಟು
ನುಡಿಸಿದ ತಕ್ಕಷ್ಟು ದೇವಾ ಕಲಮಿಲಿ ಬರದಷ್ಟು| ||6||
ಕುನ್ನಿ ಮನುಜಾ ನಾನು ಮನ್ನಿಸಯ್ಯಾ ನೀನು
ಸನ್ನಿಧಿ ಬಂದೇನು ಚರಣ ಸಮ್ಮುಖ ನಿಂದೇನು| ||7||
ತಪ್ಪು ಅಪ್ಪು ಎನ್ನಾ ಒಪ್ಪಿಕೊಳ್ಳೊ ಗುರುವೆ
ಎತ್ತಿಕೊಂಡು ಮುದ್ದಿಡು ಬಾಲನ ಎತ್ತಿಕೊಂಡು ಮುದ್ದಿಡು| ||8||
ದಯವಾಗೊ ಶಂಕರ ಶಶಿಧರ ಸುಂದರ
ಭಾವುಕ ಭಕ್ತರ ಕೊಡುವೊ ಮುಕ್ತಿಯ ಮಂದಿರ| ||9||
ನನ್ನ ಖೂನ ಹಿಡಿದವ ನನ್ನ ಭಕ್ತ
ನಿನ್ನ ಖೂನ ಹಿಡಿದವ ನಿಜ ಭಕ್ತ
ತನ್ನ ಖೂನ ತಿಳಿದವ ಗುರುಭಕ್ತ
ನಿತ್ಯ ಮುಕ್ತಿದಾಯಕ ವಡಿಯ ಸಾಕ್ಷಾತ್| ||ಪ||
ಹುಟ್ಟು ಕುರುಡನ ಕೈಯಾಗ ಕನ್ನಡಿ ಕೊಟ್ಟರೆ
ಕಾಣುವದೇನು ಅವನಿಗೆ ನಿನ್ನ ಖೂನ
ತನಗಿಲ್ಲ ನನ ಖೂನ ನಿನಗೇನು ಮನಿ ಖೂನಾ
ಮರ್ತು ಮರಗುತ ಕುಂತಿರಿ ಭಕ್ತರ| ||1||
ಜಂಗಮ ತಾನೇ ಜಗಭರಿತ
ಲಿಂಗ ಮಧ್ಯದೊಳು ತುಂಬಿರುತ
ತ್ರೀವೇಣಿ ಸಂಗಮದಲ್ಲಿರುತ
ಗುರಿತಪ್ಪಿತಲ್ಲೋ ಗುರುಭಕ್ತ| ||2||
ನಿನ್ನೊಳಗೆ ನಾ ಇದ್ದೇನೋ
ನಿನ್ನೊಳಗೆ ನೀ ನಂದೇನೊ
ಮರವಿನ ಅಂಗಿ ಕಳಿಬೇಕೊ
ಮಹಾ ಗುರುವಿನ ಪಾದ ಹಿಡಿಬೇಕೊ| ||3||
ಭಕ್ತ ಭಾವಲಿಂಗ ಸ್ಥಲದಲ್ಲಿ
ಜಂಗಮ ಪ್ರಾಣಿ ಲಿಂಗದಲ್ಲಿ
ಗುರುಮನಿ ಗುಪ್ತ ತಿಳಿ ಇಲ್ಲಿ
ಅರವಿನ ಕಪನಿ ಪಡಿ ಅಲ್ಲಿ| ||4||
ಕರಸಿಕೊಂಡ ಭಕ್ತಿ ಕನಿಷ್ಟ
ಮಾರಿಸಿಕೊಂಡ ಭಕ್ತಿ ಮಹಾಭ್ರಷ್ಟ
ಬೆರೆಸಿಕೊಂಡ ಭಕ್ತ ಮಹಾಶ್ರೇಷ್ಠ
ಬಂದು ಬಾರದಿರು ಗುರತಿಟ್ಟ| ||5||
ನಿಡವಂಚಿನೆಂಬುದು ನಿಜಲಿಂಗಾ
ನಿರಾಕಾರ ವಸ್ತು ನೀ ಸಂಗ
ಬಸವನ ಸಂಪ್ರದಾಯಕ ನೀನು
ಭಕ್ತಿ ಮಾಡಿ ಮುಕ್ತಿ ಪಡಿ ನೀನು| ||6||
ಸದ್ಗುರುನಾಥ ಶಂಕರಲಿಂಗ
ರಾಚೋಟೇಶ ಆತ್ಮಲಿಂಗ
ಚರಣಕ ನಂಬಿಕೊಂಡಿರಬೇಕು
ಚಂಚಲ ಗುಣಗಳು ಮರಿಬೇಕು| ||7||
ನನ್ನೊಳು ತಾನೆ ತಿಳಕೊಂಡೆನಮ್ಮ
ಎನಗೆ ಆಧಾರೆಂದು ನಂಬಿಕೊಂಡೆನಮ್ಮ| ||ಪ||
ಈತ ನಾನು ಕೂಡಿ ಸಂಸಾರ ಅಂಗಡಿ ಮಾಡಿ
ಬಿಟ್ಟು ನಡೆದೆಲ್ಲಾ ಖೋಡಿಉಳಿಯಲಿಲ್ಲಾ ಪ್ರೇಮ| ||1||
ನಾನಾ ಪರಿಯಲಿಂದ ಬಿಟ್ಟು ನನಗೆ ಹೋದ
ಗುರುತವ ತಿಳಿಯಲಾರದೆ ಆದೆನು ಬೇಫಾಮ| ||2||
ಶುಕ್ಲ ಶೋಣಿತದಿಂದ ದೇಹ ಮಣ್ಣಿಂದ
ಚೆಲ್ಲಿ ಹೋಗುವಾಗ ಆಯಿತು ಆ ಧರ್ಮ| ||3||
ಸೃಷ್ಟಿಯೊಳು ನಿಡವಂಚಿ ಗ್ರಾಮ ಭದ್ರಿದೇವರ ಪ್ರೇಮ
ನುಡಿಯುತೆ ನಿತ್ಯನೇಮ ಬೇಡೊ ಮುಕ್ತಿಧಾಮ| ||4||
ನಾಲಿಗೆ ಕೊಯ್ಯಿ ಎನ್ನ ನಾಯಿ ಗುಲಾಮನ
ಪೂರ್ಣ ಮಾತೊಂದು ಆಡುವ ಮೂಳನ
ಏಳಲಾರದ ಲಂಡ ಮೂಳನ| ||ಪ||
ರೇಚಕ ಪೂರಕ ಮಾಡದೆ ಪಟಿಸದೆ
ವಾಯು ಕುಂಭಕದೊಳು ನಿಲಿಸದೆ
ಮೂರು ಮಂಟಪ ಹೋಗದೆ ಬೆಳಗದೆ
ಮೂರಿದ ತತ್ವನಾಡುವಾ ಮೂಳನಾ| ||1||
ಆತ್ಮದ ಗುಣಗಳು ಬಂದಿಲ್ಲ
ಉಳಿದ ಗುಣಗಳು ಹೋಗಿಲ್ಲ
ಇಂಥ ನಿಜವು ತನಗಾಗದೆ
ಎಂಥೆಂಥ ತತ್ವ ನುಡಿಸಿದಾರು ಕಠಿಣ| ||2||
ಅಂತರದಲ್ಲಿ ದೃಷ್ಟಿಯ ನಿಲಿಸದೆ
ಅನಂತ ಕಳೆಗಳು ಸುಖಿಸದೆ
ತನ್ನ ಮನಸಿನೊಳು ಮುಕ್ತನಾದ ಮೇಲ
ಸದ್ಗುರು ಶಂಕರಲಿಂಗನಲ್ಲಿ ಆಗು ನಿರ್ಬೈಲ| ||3||
ನಿದ್ರಿ ಮಾಡಬೇಡಿರೊ
ತಮಗೊಳೆ ನಿದ್ರಿ ಮಾಡಬೇಡಿರೊ
ನಿದ್ರಿ ಮಾಡಿದರ ಸುದ್ದಿ ಹೋಗುತದ
ಸುದ್ದಿ ಕೇಳಿ ಕಳ್ಳ ಕದ್ದು ವೈತಾನ| ||ಪ||
ಜಾಗ್ರತ ಇರಬೇಕರೊ
ಜಗದೊಳಗೆ ಜ್ವಾಕೀಲಿ ನಡಿಬೇಕರೊ
ಜ್ವಾಕೀಲಿ ನಡೆದರೆ ಝೋಕಿ ಹೋಗುತದ
ತಾಕಿ ತಗಲಿ ನೀವು ತಟ್ಟಿ ಬಿದ್ದಿರಿ| ||1||
ಹುಚ್ಚಾಗಿರಬೇಕರೊ
ಜಗದೊಳಗೆ ಹೆಚ್ಚಿಸಿ ನಡಿಬೇಕರೊ
ಹೆಚ್ಚಗಿ ನಡೆದರೆ ಹಂಚಿಕಿ ಆಗುತಾದ
ಸಂಚಿತ ಭೋಗ ಇದ್ದಂತಾಗತಾದ| ||2||
ಜ್ಞಾನವ ತಿಳಿಬೇಕರೊ
ಗೌಡನ ಗೆಳೆತನ ಹಿಡಿಬೇಕರೊ
ಗೌಡನ ಗೆಳೆತಾನ ದೌಡು ಮಾಡುತದ
ನಿಡವಂಚಿ ಮಠದಾಗ ಹಟ ಮಾಡಿ ಅಳುತಾದ
ರಾಚೋಟೇಶನ ತೋಡಿ ಮ್ಯಾಲ ಆಡುತಾದ| ||3||
ಮುಂದ ಬರುವ ಸುದ್ದಿ
ಮನಸಿಗೆ ತಿಳಿದಿರಬೇಕು ಸಿದ್ಧಿ
ಸಿದ್ಧಿ ತಿಳಿದ ಮೇಲೆ ಶಿವ ದೊರಿತಾನ
ಭವ ಗೆದ್ದು ನೀವು ಜವಾನ ಆಗರಿ| ||4||
ನಿಡವಂಚಿ ಹಳ್ಳಿಯ
ಚೌಕಿಮಠದಲ್ಲಿ ಅದ ಸಾಲಿ
ಸಾಲಿ ಬರೆದು ನೀವು ಹೇಳಿ ಹೊಗರಿ
ಗುರು ಶಂಕರಲಿಂಗನ ಪರಂಚಿ ಕೊಡರಿ| ||5||
ನೀನೇ ತಾಯಿ ತಂದಿ ನೀನೆ ಸಕಲ ಸಿದ್ದಿ
ನಿನ್ನ ಪಾದಕ ಹೊಂದಿ ಮುಕ್ತನಾದೆ| ||ಪ||
ಗುರುವಿಲ್ಲವನ ಮುಖ ನೋಡಬಾರದು
ಶಾಸ್ತ್ರದ ಪ್ರಮಾಣ ಶೃತಿ ಸಾರುವದು| ||1||
ಶಿಕ್ಷೆ ದೀಕ್ಷೆ ಮೋಕ್ಷ ಲಕ್ಷ ಅಲಕ್ಷ
ನಿರ್ವಿಕಲ್ಪ ಸಾಕ್ಷ ಕಲ್ಪವೃಕ್ಷ| ||2||
ಅಗಾಧ ನಿನ್ನ ಮಹಿಮಾ ತಿಳಿದಿಲ್ಲೊ ಹರಿಬ್ರಹ್ಮ
ವಿಷ್ಣು ರುದ್ರ ನಿಮ್ಮ ಧ್ಯಾನಿಸುವರೊ| ||3||
ನೀನೇ ಜಗದಲ್ಲಿ ಜಗವೇ ನಿನ್ನಲ್ಲಿ
ಸಕಲ ಸ್ಥಳದಲ್ಲಿ ನಿನ್ನ ರೂಪಾ| ||4||
ಯೋಗಿ ಭದ್ರಿನಾಥ ಜಗದೊಳು ಪ್ರಖ್ಯಾತ
ಜಂಗಮ ಜಗಭರಿತ ಲಿಂಗಮೂರ್ತಿ| ||5||
ನೋಟಿಸು ಬರುತಾದೋ ಮಕ್ಕಳಿರಾ
ನಿಮ್ಮ ಲುಟಾಸಿ ವೈತಾರೋ ಮಕ್ಕಳಿರಾ
ಪೋಷಿಸಿ ಪ್ರರಬ್ರಹ್ಮನೊಳಗ ಆಗೋ ತನಕ
ನಿಟ್ಟಿಸಿ ನಿಜಲಿಂಗ ನಿಶ್ಚಯಿಸೊ ತನಕ| ||ಪ||
ಮುನ್ನ ಮಾಡಿದ ಕರ್ಮ ಅಳಿಯುವ ತನಕ
ಮನಸಿನ ಸಂಕಲ್ಪ ತಿಳಿ ಆಗೋ ತನಕ
ತನ್ನ ತಾ ತಿಳಕೊಂಡು ಉಳಿಯುವ ತನಕ
ಮಾಯಾ ಭ್ರಾಂತಿಗಳೆಲ್ಲಾ ಬೈಲಾಗೋ ತನಕ| ||1||
ಸದ್ಗುರುನಾಥ ಸೇವಾ ಮಾಡಿಕೊಂಬೋ ತನಕ
ನಡಿ ನಡಿ ಭಾವನಾ ಒಂದಾಗೋ ತನಕ
ಕಡಿ ನುಡಿ ಬುಡ ಇಲ್ಲ ನಿನಗೆಲ್ಲಿ ತೊಡಕ
ಅಡಿ ಪಿಡಿದು ಐಕ್ಯ ಪಡಿಕೊಂಬೋ ತನಕ| ||2||
ನಿಡವಂಚಿ ಗ್ರಾಮದಲ್ಲಿ ಇರುಹುವ ತನಕ
ಶಿವಕಂಚಿ ಸಿದ್ಧನ ಸುದ್ದಿ ತಿಳಿಯೋ ತನಕ
ಗುರು ಭದ್ರಿನಾಥನೊಳು ಬೈಲಾಗೋ ತನಕ
ಬೈಲಿಗಿ ಬೈಲ ನಿರ್ಬೈಲಾಗೋ ತನಕ| ||3||
ನೋಡಿ ಬಂದೆನಪ್ಪಾ ಸಂತಿ
ಸಂತ್ಯಾಗ ಕಂಡೆನು ಸುಂದರ ಕಾಂತಿ
ನೋಡಿದ ಘಳಗಿಗಿ ಹಿಡಿತೆನ್ನಗ ಭ್ರಾಂತಿ
ಹಗಲು ಇರಳು ನಿನ್ನ ಮರಿಲ್ಯಾಂಗ ಚಿಂತಿ| ||ಪ||
ಹೆಣ್ಣು ಕಾಣುಸ್ತಾಳ ಪೋರೀ
ಹರಿಯುತ ಬಂದಂಗ ಯೌವನ ನಾರಿ
ಪೋರಿಗಿ ಮಲಿಯೊಂದು ಇತ್ತಪ್ಪ ಭಾರಿ
ತುಂಬಿ ಹರಿದಂಗ ಹಾಲಿನ ತೊರಿ| ||1||
ನತ್ತೊಂದು ಇಟ್ಟಾಳ ನಾರೀ
ನತ್ತಿಗಿ ಮುತ್ತೊಂದು ಇತ್ತಪ್ಪ ಭಾರಿ
ಮುತ್ತಿನ ಬೆಳಕು ಸುತ್ತೆಲ್ಲಾ ಸಾರಿ
ಮೂರು ಲೋಕಕ ಮೀರಿ ಹೆಚ್ಚಾಯ್ತರಿ| ||2||
ನಿಡವಂಚಿ ಗ್ರಾಮದ ಪೋರೀ
ಸೀರವನಿಗಿ ಸಿಂತರಸಿ ಬಂದಾಳೊ ನಾರಿ
ಉದಗಿರಿ ಮಠದೊಳು ಮೇಲುಪ್ಪರಗಿರಿ
ರಾಚೋಟಿ ಬೆನ್ನಹತ್ತಿ ಬಂದಾಳೊ ಪೋರಿ| ||3||
ಪ್ರಚಂಡ ಸುರದೈತ್ಯ ಬಂದಾನೊ ಓಡುತಾ
ಸಿಂಹನ ಕಡಿಯುತ ಹಿಡಕೊಂಡು ಸಿಂಹನ ಕಡಿಯುತ| ||ಪ||
ದಂಡಿನ ಬಲವಂತ ಸಾವಿರ ಸೈನ್ಯ ಜತ್ತ
ಮುತ್ತಿಗಿ ಹಾಕಿದಾರೊ ದೇವಿ ಸುತ್ತ ಮುತ್ತಗಿ ಹಾಕಿದರೊ| ||1||
ಹಿಡಿದು ಜಡಿಯ ಕಿತ್ತಿ ರುಂಡ ಮೇಲಕೆತ್ತಿ
ತೆಲೆ ಕಾಯ್ದಿದಾಳೊ ದೇವಿ ತೆಲೆ ಕೊಯದಿದಾಳೊ| ||2||
ದಯವಾಗೆ ಶಂಕರಿ ಕಾಯೆನ್ನ ಓಂಕಾರಿ
ಭಕ್ತರ ಭವಹಾರಿ ಮುಕ್ತೇಶ್ವರಿ ಭಕ್ತರ ಭವಹಾರಿ| ||3||
ಬಂತು ನೋಡರೊ ಎಪ್ಪ ಬಂತು ನೋಡರೊ
ಕೆಂಪು ಮೂಗಿನ ಹಕ್ಕಿ ಹಾರಿ ಬಂತು ನೋಡರೊ
ಕಿಚ್ಚುಗಣ್ಣು ತೋರಿ ಕಿಡಿ ಕಾರತಾದರೊ
ಸ್ವಾಸ ಬಿಟ್ಟರೆ ತಿಸಗಾವೂದ ಹಾರತಾದರೊ| ||ಪ||
ಬೆಂಕಿ ಮಳಿ ಜಗವೆಲ್ಲಾ ಸುರಿತದರೊ
ಕಡಲಿ ಅವಾಳಿ ಹುರಿದು ಬುಕ್ಕತಾದರೊ
ದೊಡ್ಡ ಗುಡ್ಡ ಸವರಿ ಬಾಯೊಳಗ ಹಾಕತಾದರೊ
ನ್ಯಾರಿ ಮಾಡಿ ನೀರಕೊಂಡು ಆಡತಾದರೊ| ||1||
ಕಣ್ಣು ತೆರಿದ ಪಕ್ಷಿ ಜಗವ ನೋಡತಾದರೊ
ಮೂರು ಲೋಕ ಸುಟ್ಟು ಬೂದಿ ಮಾಡತಾದರೊ
ಈ ಮಾತಿನ ಗುರುತೊಂದು ತಿಳಕೊಳ್ಳರೊ
ಎಲ್ಲಾ ಅಳಿದು ತಾನೇ ಒಂದು ಉಳಿತಾದರೊ| ||2||
ನಿಡವಂಚಿನೆಂಬುದು ಹಳ್ಯಾದರೊ
ಭದ್ರಿನಾಥನ ಗುರುತ ಅರಿತು ಶರಣಾಗರೊ
ರಾಚೋಟೇಶನ ಅಡಿ ಹಿಡಿದುಕೊಳ್ಳಿರೊ
ಶಂಕರಲಿಂಗನ ಕೂಡಿ ಐಕ್ಯ ಆಗಬೇಕರೊ| ||3||
ಬಂದೆನು ಬಾರಯ್ಯ ಆದಿಯ ಮೂರುತಿ
ನಿಂದೆನು ನಿಲ್ಲಯ್ಯ ಜ್ಞಾನದ ಪುಂಜಿ ಗಣನಾಥ| ||ಪ||
ಆದಿಯ ದೈವತಾ ಆಧಾರದಲ್ಲಿರುತಾ
ಆತ್ಮದಲ್ಲಿ ಬೆರಿತಾ ಜ್ಞಾನಕ ಸಂಜೀವನು ಕರ್ತಾ| ||1||
ಗೌರಿಯ ಸುತನಾಥ ಮೊದಲ ಪೂಜಿವಂತ
ಬೇಡಿಕೊಂಬುವೆ ನಿಂತಾ ಭಜನಿಗಿ ದಯವಾಗೋ ಕರ್ತಾ| ||2||
ದಯವಾಗೋ ಶಂಕರ ಶಶಿಧರ ಸುಂದರ
ಭಾವಿಕ ಭಕ್ತರ ಕೊಡವು ಮುಕ್ತಿಯ ಮಂದಿರಾ| ||3||
ಬರಿಯ ಕಲಿರಿ ತಮ್ಮಾ
ಬ್ರಹ್ಮನ ಬರಿಯ ಕಲಿರಿ ತಮ್ಮಾ
ಬರಿಯ ಕಲಿತ ಮ್ಯಾಲ ಸರಿಯನಾಗುತದ
ಗುರುತಿಟ್ಟು ಗುಂಡ ಹೊಡಿಬೇಕು ತಮ್ಮಾ| ||ಪ||
ಈಡಾ ಪಿಂಗಳ ನಾಡಿ
ಸೂಕ್ಷ್ಮದಲಿ ಸಾಧನ ಮಾಡಿ
ಸಾಧನ ಮಾಡಿದರೆ ಶೋಧನ ಆಗುವದು
ನಾದ ತಿಳಿರಿ ನೀವು ನಾಳಿನ ಸುದ್ದಿ| ||1||
ಮುದ್ರ ಸಾಧನ ಮಾಡಿ
ತಿಳಿಬೇಕು ಮುಂದ ಬರುವ ಝಾಡಿ
ಝಾಡಿ ತಿಳಿದು ನೀವು ಝಪ್ಪನೆ ಓಡಿ
ಬಲ್ಲದ ಗುರುವಿನ ಪಾದವ ಪಿಡಿರಿ| ||2||
ಖೇಚರಿ ಭೂಚರಿ ಸಾಚರಿ
ಸನ್ಮುಖಿ ಸಾಂಬವಿ ತಿಳಿಯರಿ
ಅಗೋಚರ ಆ ಲಕ್ಷ ಸಾಧನ ಮಾಡಿ ನೀವು
ನಿಜಲಿಂಗ ಖೂನಾವ ತಿಳಿಬೇಕು ತಮ್ಮಾ| ||3||
ಬಾರಮ್ಮಾ ಜಗದಂಬಾ ಬಂದಾಳ
ಸಾಧು ಸಂಗಾತಿ ಮೇಳ
ಕುಣಿಯುತ ಗೆಜ್ಜೆ ಗುಳಗುಳ
ಆರುತಿ ಆಗ್ಯಾದೆ ಬಹಳ| ||ಪ||
ಕುಂಕುಮ ಕಸ್ತೂರಿ ಭಂಡಾರ
ನಾನಾ ಪರಿ ಜ್ಯಾಪರ
ಶಾವಂತಿ ಮಲ್ಲಿಗಿ ಪುಷ್ಪಹಾರ
ಮ್ಯಾಲೆ ಹಚ್ಚಾಳ ಸುಂದರ| ||1||
ಮಹಾಲಕ್ಷ್ಮಿ ಮಹಾಕಾಳಿ ಸರಸ್ವತಿ
ಮಾಡುವೆ ನಿಮ್ಮ ಸ್ಮೃತಿ
ಈ ಪರಿ ಸಲಹು ಎನ್ನಮ್ಮ
ಶರಣು ಬಂದೇವು ನಿಮ್ಮ| ||2||
ಕನ್ನಾಯಿ ಕುನ್ನಾಯಿ ಜಂಬಾಯಿ
ಮಹಿಷಾಸುರ ಮರ್ಧಿನಿ ಶುಂಭ ನಿಶುಂಬನ ಭವಾನಿ
ತುಳಜಾಪುರದ ದೇವಿ ನೀ|
ಎಷ್ಷಂತ ವರ್ಣಿಸಲೆ ತಾಯಿ
ಪರಶುರಾಮನ ಮಹಾತಾಯಿ
ಈ ದಿನ ಸುಖ ದಿನ
ತೂಕ ಮಾಡ್ಯಾಳ ಜ್ಞಾನ| ||3||
ಇಂದು ಕಂಡೇವೆ ನಿಮ್ಮಯ ದ್ವಾರ
ಸರ್ವ ಸಂಕಷ್ಟ ಪರಿಹಾರ
ಪೂರ್ವ ಪಶ್ಚಿಮ ದಕ್ಷಿಣ ಉತ್ತರ
ನಿಮ್ಮ ಪಾದಕ್ಕೆ ಭದ್ರಿನಾಥನ ಶಿರ| ||4||
ಬಾರಮ್ಮ ಬಾರಮ್ಮ ಮೋಹದ ಮಗಳೆ
ನೀತಿಯ ಮಾತೊಂದು ಕೇಳಮ್ಮ ಮಗಳೆ
ಪುರುಷನ ಸುಖ ತಾಳಬೇಕಮ್ಮ ಮಗಳೆ
ಹರುಷದಿಂದ ತಾಳಿ ಬಾಳಮ್ಮ ಮಗಳೆ| ||ಪ||
ಗಂಡನ ಒಲಿದರೆ ಜಗವೆಲ್ಲಾ ಒಲಿವುದು
ಗಂಡನು ಬಿಟ್ಟರೆ ಜಗವೆಲ್ಲಾ ಬಿಡುವುದು
ಕುಂದು ಬಂದ ಮೇಲ ಕೂಡಲಿಕ್ಕೆ ಜಾಗದಲ್ಲಿ
ಹೇಳಮ್ಮ ತಾಯಿ ಮೋಹದ ಮಗಳೆ| ||1||
ಮೋಹದ ಗಿಳಿಯೆ ಬಾರಮ್ಮ ಮಗಳೆ
ನೀತಿಯ ಮಾತೊಂದು ಕೇಳಮ್ಮ ಮಗಳೆ
ಮದುವೆ ಗಂಡನ ಒಲಿಸಿಕೊಳ್ಳಮ್ಮ ಮಗಳೆ
ಮುತ್ತಿನ ಮೂಗುತಿ ಜತನ ಮಗಳೆ| ||2||
ಮೂಗಿನಾಗಿನ ಮೂಗುತಿ ಮುತ್ತಿನ ಗಳಸಾ
ಗುರುತಿಟ್ಟು ನಡಿಯೆ ಗುರು ತಾಯಿ ಮಗಳೆ
ಮೋಹದ ಗಿಣಿಯೆ ಬಾರಮ್ಮ ಮಗಳೆ
ನೀತಿಯ ಮಾತೊಂದು ಕೇಳಮ್ಮ ಮಗಳೆ| ||3||
ಉದಗಿರಿನಾಥನ ನೆನಿತಿರು ಮಗಳೆ
ಬಂಗರ ತೊಟ್ಟಲು ತೂಗೆತ್ತು ಮಗಳೆ
ಓಂಕಾರ ಶಿಸುವಿನ ತೊಟ್ಟಿಲದೊಳಗೆ
ಹಾಕಿ ಸೋಹಂ ಜೋಗುಳ ಪಾಡಮ್ಮ ಮಗಳೆ| ||4||
ಕಾಲ ಭವಿಷ್ಯಾರ್ಥ ತಪ್ಪದು ಮಗಳೆ
ಸುಳ್ಳೆ ಸಾಹಸ ಯಾತಕ ಮಗಳೆ
ತನ್ನೊಳಗೆ ಹುಟ್ಟಿ ಮಾಯಾ ತನ್ನನ್ನೆ ತಿಳಿಗೊಡದು
ಇನ್ನೂ ಮಾಯಾ ಬ್ಯಾರುಂಟೆ ಮಗಳೆ| ||5||
ಏನು ಆದರೇನು ಶಾಂತನಾಗಿರಬೇಕು
ತನ್ನ ತಾ ತಿಳಿಬೇಕು ಮಗಳೆ
ಬಪ್ಪದು ಬಾರದು ಬಾರದು ಬಪ್ಪದು
ಮಿಡಕಲಿಕ್ಕೆ ಕೆಲಸವಿಲ್ಲಮ್ಮ ಮಗಳೆ| ||6||
ಅಹಂ ಹರಿಸಬೇಕು ಸೋಹಂ ಇರಸಬೇಕು
ಆತ್ಮರಾಮನ ಸ್ಮರಿಸಮ್ಮ ಮಗಳೆ
ಉದಗಿರಿನಾಥ ಸೇವಾ ನೀ ಮಾಡಿಕೊಳ್ಳೆ
ತಿರುಗಿ ಬಾರದ ಪದವಿ ಬೇಡಿಕೊಳ್ಳೆ ಮಗಳೆ| ||7||
ಬಾರೇ ಬಾರೇ ನನ್ನ ಸಂಕರಾತರಿ
ಅಹಂ ಎಂಬುದು ನಿನ್ನ ಹತಿಯಾರಿ
ಕೋಟಿ ಖೀಲ್ಲ್ಯಾದೊಳು ಬ್ಯಾಟಿ ಆಡುತಿ
ಕೊಂಕಣ ದೇಶದ ಬಿಂಕರಿ ನಾರಿ| ||ಪ||
ನೀ ಬಾರೇ ನನ್ನ ಕಿಂಕರಾತರಿ
ನಿಷ್ಕಲಂಕ ನಿನ್ನ ಅವತಾರಿ
ಅಲಯದೊಲಗೆ ಲೀಲಾ ಮಾಡುತಿ
ಅಲಕ್ಷದೊಳಗಿನ ಅಗೋಚರಿ| ||1||
ಸಂಕಲ್ಪ ಎಂಬುದು ಸಂಕರಾತರಿ
ವಿಕಲ್ಪ ಎಂಬುದು ನವರಾತರಿ
ಕಲ್ಪನಾ ಕಳೆದದ್ದು ಖತಲ್ರಾತರಿ
ನಾ ಸುಮ್ಮನೆ ಕುಂತಿದೆ ಶಿವರಾತರಿ| ||2||
ಸಂಕರಾತರಿ ಅಲ್ಲಲ್ಲಾ
ಕಿಂಕರಾತರಿ ಅಲ್ಲಲ್ಲಾ
ಸದ್ಗುರುನಾಥ ಶಂಕರ ಭೋಲಾನ
ಚರಣ ಕಮಲಕ ಗುರಿ ಅದೇನಲ್ಲಾ| ||3||
ಬಾರೊ ಬಾರೊ ಬಾವಗಿಪುರ ಭದ್ರಿನಾಥನೆ
ಬಾರೊ ಬಾರೊ ಮೂರು ಲೋಕದ ಬಸವರಾಜನೆ| ||ಪ||
ಆರು ಚಕ್ರದಲ್ಲಿ ಹಂಸನ ಸೇರಿಸಿದವನೆ
ನಾಸಿಕ ಕಮಲ ಮಧ್ಯದೊಳು ವಾಸುವಾದವನೆ| ||1||
ಲಿಂಗ ವಿಭೂತಿ ವಸ್ತ್ರ ಮಾರುತ ಜಂಗಮಯ್ಯನೆ
ಗಂಗಾ ಯಮುನಾ ಸರಸ್ವತಿ ಸಂಗಮೇಶನೆ| ||2||
ಲಕ್ಷ ತೊಂಬತ್ತಾರು ಸಾವಿರ ಲಿಂಗ ಭಕ್ತನೆ
ಸಾಧು ಸಂತ ಸತ್ಯ ಶರಣರ ಗಣಕ ಹಿರಿಯನೆ| ||3||
ದೇಶದೊಳಗೆ ವಾಸ ಉದಗಿರಿನಾಥ ಶಂಕರನೆ
ಕಾಷ್ಟ ಕುದುರಿ ಮ್ಯಾಗ ಕುಂತು ಓಡಿ ಬರುವವನೆ| ||4||
ನಿಲಯ ನಿಡವಂಚಿ ಗ್ರಮದಲ್ಲಿ ಇರುವವನೆ
ಆತ ಭದ್ರಿನಾಥ ಸದ್ಗುರು ರಾಚೋಟೇಶನೆ| ||5||
ಬೀದರ ನಾಡು ಸಣ್ಣ ಹಳ್ಳಿ ನಿಡವಂಚಿ ಶಿವಪುರ
ಚೌಕಿಮಠದಲ್ಲಿ ಮಹಾತ್ಮ ಭದ್ರಿನಾಥನ ಅವತಾರ| ||ಪ||
ಪರಮ ಯೋಗಿ ಮಹಾತ್ಯಾಗಿ ಸರ್ವಗುಣ ಸಾಗರ
ಪರಮಾನಂದ ಪರಿಪೂರ್ಣ ಭದ್ರಿನಾಥ ಅವತಾರ| ||1||
ಸಕಲ ಮತ ಉದ್ಧಾರಕ ಕುಲ ಛಲ ಪರಿಹಾರ
ಸರ್ವ ಶ್ರೇಷ್ಠ ಮಹಸಂತ ಭದ್ರಿನಾಥನ ಅವತಾರ| ||2||
ನವಕೋಟಿ ನಾರಾಯಣ ಗುಪ್ತಾಂಗ ಜಾಹೀರ
ನಿಜಲಿಂಗ ತಾನೇ ಆದ ಭದ್ರಿನಾಥನ ಅವತಾರ| ||3||
ಕಾಲಕೀಲ ಮೂಲ ತಿಳಿದು ಮುಕ್ತಿ ಮಾರ್ಗ ತೋರ್ಯಾರ
ಭವ ಗೆದ್ದು ಭಕ್ತನಾದ ಭದ್ರಿನಾಥನ ಅವತಾರ| ||4||
ಸಪ್ತಸಾಗರ ಈಸಿ ಬಂದ ಶಾಂತಿಮೂರ್ತಿ ಶಿವಹರಾ
ಶಂಕರಲಿಂಗ ರಾಚೋಟೇಶ ಭದ್ರಿನಾಥನ ಅವತಾರ| ||5||
ಅಷ್ಟದಿಕ್ಕು ಅರಿದು ಬಂದ ನವ ದ್ವಾರದ ವಿಸ್ತಾರ
ದಶಮ ಅಂಕಿ ದಾಟಿದಂಥ ಭದ್ರಿನಾಥನ ಅವತಾರ| ||6||
ದುರಿತ ಕರ್ಮ ದೂರ ಮಾಡೊ ನೀನೆ ಕರುಣ ಸಾಗರಾ
ಕೈಲಾಸವಾಶ ಮಹಾತ್ಮ ಭದ್ರಿನಾಥನ ಅವತಾರ| ||7||
ಚೈತ್ರ ಶುದ್ಧ ಏಕಾದಶಿ ಶುಭ ಯೋಗ ಗುರುವಾರ
ಯತ್ತಾ ಮುಗಿಸಿ ಗುಪ್ತನಾದ ಭದ್ರಿನಾಥನ ಅವತಾರ| ||8||
ನಿತ್ಯನೇಮ ನಿಮ್ಮ ನಾಮ ಭಜಿಸುವರು ಭಕ್ತರಾ
ಮುಕ್ತಿ ಮಾರ್ಗ ದಯಾ ತೋರೋ ಭದ್ರಿನಾಥನ ಅವತಾರ| ||9||
ಭಲಾ ಭಲಾ ನೀವು ಗೆದ್ದಿರೊ
ಬೇಮಳಗಿ ಊರಾಗ ಇದ್ದಿರೊ
ಗೂಗಿ ಮನಿ ಮೇಲ ಕಾಗಿ ಕುಂತಾದ
ಬಂದೂಕ ಹಿಡಿದು ಬೈಲಿಗೆ ನಿಂತು| ||ಪ||
ಗುರಿ ನೋಡುತ ಸರಿಗೆ ನಿಂತು
ಶಿಕಾರ ಹೊಡಿಬೇಕು ಸಿದ್ಧ ಪುರುಷನ
ಅಕಾರ ಉಕಾರ ಮಕಾರ ತಿಳಿಯದೆ
ಮಾಯದೊಳಗೆ ನೀವು ಸಿಲುಕಿದಿರೊ| ||1||
ಮಾಯೆನೆಂಬುದು ಮಹಾ ಪಾಂಚಾಲಿ
ತೇಜಿಯನೇರಿ ನಿಂತದರೊ
ಅನಂತ ರೂಪಾ ಅನಂತ ಅವತಾರ
ಅಂಗ ಲಿಂಗ ಜಂಗಮ ಶರಣರೊ| ||2||
ಕೈಲಾಸದಲ್ಲಿ ಇಟ್ಟಿದ ಕಣ್ಣಾ
ನಂಬಬ್ಯಾಡರಿ ನರಕಕ ಹೋದೀರಿ
ನಾಥನ ಭಜನಿ ಮಾಡುತ ನಡರೊ
ಮುಂದಿನ ದಿನಮಾನ ಸಂದೇಹ ಕಾಲ| ||3||
ಸತ್ತು ಹುಟ್ಟಿ ನೀವು ಬರಬ್ಯಾಡರೊ
ಹುಟ್ಟಿ ಸತ್ತು ನೀವು ಹೋಗಬೇಡರೊ
ಮರ್ತು ಹೋಗತೀರಿ ಮರ್ತು ಬರತೀರಿ
ಮರ್ತ್ಯದೊಳು ಬೀಳತಿರೊ ಹೊರಳಾಡುತೀರೊ| ||4||
ಜಲ್ದಿ ತಿಳಿದು ನೀವು ಜವಾನ ಆಗಿರೊ
ಜಂಗಮ ಲಿಂಗನ ಭಜನಿ ಮಾಡಿರೊ
ಶಂಕರಲಿಂಗನ ಚರಣ ಪಿಡಿರೊ
ಪೂಜಿ ಮಾಡಿ ನೀವು ನಿಜ ಕಾಣಿರೊ| ||5||
ಭಲಾ ಭಲಾ ನೀವು ಗೆದ್ದಿರೊ
ಸಿರಸಿಗಿ ಊರಾಗ ಇದ್ದಿರೊ
ಸಿರಸಿಗಿ ಊರಾಗ ಸಿದ್ಧಗೌಡನ
ಸಾಧನ ಮಾಡಿಕೊಳ್ಳಿರೊ| ||ಪ||
ಈಡಾ ಪಿಂಗಳ ಗೌಡ ಕುಲಕರ್ಣಿ
ಪೊಲೀಸ ಮನಿ ಕೆಲಸ ಮಾಡುವರು
ಪೊಲೀಸ ಗೌಡನೆಂಬ ಬ್ಯಾಡರಿ
ರಮ್ಮಿಸಿ ನಮ್ಮ ಕುತಗಿ ಕೊಯ್ಯತಾನರಿ| ||1||
ಮಾಲಿಗೌಡ ಹನಾಮಾಲಿಕ
ಮಗನ ತೆಲಿಯ ಮ್ಯಾಲ ಹಸ್ತಿಕ್ಕಾ
ಹಸ್ತ ಬಿಟ್ಟು ಗಸ್ತಿ ಹೇಳುತಾನ
ಬಿಸ್ತಿ ಉಚ್ಚಿಕ್ಕಿ ತಾನೇ ಬರುತಾನ| ||2||
ನಿಡವಂಚಿನೆಂಬುದು ಹಳ್ಯಾದರೊ
ಮಹಾದೇವ ದಯ ಹಮ್ಮ್ಯಲದರೋ
ಭದ್ರಿನಾಥನ ಮಗನಾಗರೊ
ಭವ ಗೆದ್ದು ನೀವು ಪಾರಾಗರೊ| ||3||
ಮಂಗಳ ಮೂರುತಿ ಮಹಾದೇವ ಗಣಪತಿ
ಆದಿ ಮಾಯಕರ್ತಿ ಸದ್ಗುರು ಆದಿ ಮಯಕಾತಿ| ||ಪ||
ಆಧಾರದಲ್ಲಿರುತಿ ಆತ್ಮದಲ್ಲಿ ಬೆರತಿ
ಬಾಹ್ಮಣಿ ದೇವಿ ನಿಜಗುಣ ಭಕ್ತರಿಗೆ ಒಳತಿ| ||1||
ನಾಲ್ಕು ದಳದಲ್ಲಿರುತಿ ಜ್ಯೋತಿ ನಾಲ್ಕು ಮುರ್ತಿ
ಹಸ್ತಿಣಿ ಚಿತ್ತಿಣಿ ಶಂಖಿಣಿ ಪದ್ಮಿಣಿ ಪರಶಕ್ತಿ| ||2||
ದಯವಾಗ ಶಂಕರಿ ಕಾಯ ಎನ್ನ ಅಭಯಂಕರಿ
ಭಕ್ತರ ಭವ ಹಾರಿ ಮುಕ್ತೇಶ್ವರಿ ಭಕ್ತರ ಭವಹಾರಿ| ||3||
ಮನಮಯ ಮಹಾಲಿಂಗ ಚಿನ್ಮಯ ಚರಲಿಂಗ
ಅನುಮಯ ಘನಲಿಂಗ ನಿಮ್ಮ ಚರಣದಲ್ಲಿ ಅಡಗಿ| ||ಪ||
ನಿಮ್ಮ ದಿವ್ಯ ಚರಣ ದಿವ್ಯ ಜ್ಯೋತಿ ರತ್ನ
ಇರಲಿ ಅಂತಃಕರಣ ಸದ್ಗುರುವೆ| ||1||
ಜಂಗಮ ಜಗ ಧಣಿ ಸಂಗಮ ತ್ರೀವೇಣಿ
ಪಾರ್ವತಿ ಕಲ್ಯಾಣಿ ಶಂಕರನ ಗುರು ಮುಕ್ತಾಂಗಿಣಿ| ||2||
ಭಾಗೀರಥಿ ಗಂಗಾ ಭೀಮ ಚಂದ್ರಭಾಗ
ಗೋದಾವರಿ ತುಂಗ ಭದ್ರ ಗೋದಾವರಿ ತುಂಗ| ||3||
ರಾತ್ರಿ ಶಿವರಾತ್ರಿ ಯಾತ್ರಿ ಶ್ರೀಶೈಲಾ
ಕ್ಷೇತ್ರದೊಳು ಅಧಿಕ ಕಾಶೀಕ್ಷೇತ್ರ| ||4||
ದಯವಾಗೊ ಶಂಕರ ಶಶಿಧರ ಸುಂದರಾ
ಭಾವಿಕ ಭಕ್ತರ ಕುಡುವೊ ಮುಕ್ತಿಯ ಮಂದಿರ| ||5||
ಮರ್ತ್ಯಕ ಬಂದು ದೇವರ ಕಂಡ ಸ್ವಾಮಿ ಮಲ್ಲಯ್ಯಾಜಿ
ಕೈಲಾಸದಲ್ಲಿ ಕುಂತಾನ ಸ್ವಾಮಿ ಶಿವಶಂಕರ ಲಿಂಗೋಜಿ| ||ಪ||
ಎಡಕ ಬಲಕ ಬ್ರಹ್ಮವಿಷ್ಣು ಗಂಗಾ ಮಹಾಲಕ್ಷ್ಮೀಜಿ
ಏನು ಹೇಳಲಿ ಶಿವನ ಮಹಿಮಾ ಯಾರಿಗೆ ತಿಳಿದಲ್ಲಾರಿ
ತೆತೀಸಕೋಟಿ ದೇವಗುಣಗಳು ಕುಂತಾನ ಬದಿಲೋಜಿ
ಮೂರು ಲೋಕದೊಳು ಮುಕ್ಕಣ ಶಿವನು
ಸ್ವಾಮಿ ಮಲ್ಲಯ್ಯಾಜಿ| ||1||
ಇಂಥಾ ಸ್ವಾಮಿ ಮರ್ತ್ಯಕ ಬಂದು ಮೈಲಾರ ಮಾಡಿದಾಜಿ
ಆನಿಮ್ಯಾಲ ಕುಂತಾರ ಸ್ವಾಮಿ ಮ್ಯಾಲ ನಂದಿಕೋಲಜಿ
ನಾಗ ಶಿಖರ ಟೊಪ್ಪಿಗ ನಾಗಬಂದ ಸುತ್ಯಾರ ತೆಲಿಮ್ಯಾಲಜಿ
ಭಾಲ ಬರಚಿ ಕೈದಾಗ ಹಿಡಿದಾರ ಬಂಗಾರದ ಚೀಲೋಜಿ
ಖಂಡ್ಯಾ ಮಲ್ಲ್ಯಾ ಎರಡು ಶ್ವಾನ ಅವರ ಹಂತಿಲೋಜಿ| ||2||
ಜೋಡ ಘಂಟಿ ಝಾಂಗಟಿ ಕೈತಾಳ ನುಡಿತಾವ ಏನ ಛಂದೋಜಿ
ಭಕ್ತರೆಲ್ಲಾ ಭಂಡಾರ ಖೊಬರಿ ಹಾರಸ್ತಾರ ಮುಂದೋಜಿ
ಲೆಕ್ಕ ಇಲ್ಲದ ತೀರ್ಥಗುಂಡಾ ಆವಾರ ಸುತ್ತಮುತ್ತಜಿ
ಸತ್ಯ ಶರಣರೆಲ್ಲಾ ಉಘೇ ಉಘೇ ಎಂದು ಏಳಕೋಟಿ ಲಿಂಗೋಜಿ
ಉಘೇ ಉಘೇ ಎಂದು ಮುಂದ ಕುಣಿತಾರ ಗೊಗ್ಗೆ ನವರೋಜಿ| ||3||
ಆತನ ಮಹಿಮಾ ತಿಳಿದಿಲ್ಲ ಯಾರಿಗೆ ಮರ್ತ್ಯಲೋಕದೊಳಗೋಜಿ
ಕಾಸಿ ಕೈಲಾಸ ಮಾಡಿದ ಪ್ರಭೊ ಮೈಲಾರ ಲಿಂಗೋಜಿ
ಉದಗೀರನಾಥ ಶಂಕರಲಿಂಗ ಕೈಲಾಶ ಪರಿಯೋಜಿ
ಮಹಾಗುರು ಮುರುತಿ ರಾಚಣ್ಣದೇವರು ಭದ್ರಿನಾಥ ಲಿಂಗೋಜಿ
ನಿಡವಂಚಿ ಮಾಲಕ ಶಿವಕಂಚಿ ಒಡೆಯ ತಾನೆ ತನೈಯ್ಯೋಜಿ| ||4||
ಮಹಾತ್ಮರು ಬಂದಾರು ಮರ್ತ್ಯಕ್ಕೆ ಹಿರಿಯರಿಯರು
ಬಲ್ಲವರು ತಿಳಿದಕೊಳ್ಳಿರಣ್ಣಾ| ||ಪ||
ಕರ್ತ ಶ್ರೀಗುರುಸಿದ್ಧ ನಿರ್ತ ನೋಡಲಿ ಬಂದ
ಮರ್ತ ಕುಂತಿರಬ್ಯಾಡಿರಣ್ಣಾ| ||1||
ಸಿದ್ಧರು ಬರುವಾಗ ಸುದ್ದಾಗಿ ಇರಬೇಕು
ಬದ್ಧರು ಬೈಲಾದರಣ್ಣಾ| ||2||
ಸಾವಿರ ಕಂಬದ ಮೇಲು ಮಧ್ಯ ಮನಿಯ
ನಿಲುಗನ್ನಡಿ ನೋಡಿರಣ್ಣಾ| ||3||
ಕನ್ನಡಿದೊಳಗೊಂದು ಚಿನ್ಮಯ ಮೂರುತಿ
ಜಿಗಿ ಜಿಗಿದಾಡುವದಣ್ಣಾ| ||4||
ತಾರಕ ದಂಡಕ ಕುಂಡಲ ಮಧ್ಯದಿ
ಕುಣಿ ಕುಣಿದಾಡುವರಣ್ಣಾ| ||5||
ಪಿಪಲಿಕಾ ಮಾರ್ಗದ ಕೊನೆಯಲ್ಲಿ ಮತ್ತೊಂದು
ಮಾವಿನಮರ ಹುಟ್ಟಿತಣ್ಣಾ| ||6||
ಬೊಡ್ಡಿಯಿಲ್ಲದ ಮರುವು ಹೂವುಯಿಲ್ಲದ ಕಾಯಿ
ತುಂಬಿಲ್ಲದ ಹಣ್ಣು ನೋಡಿರಣ್ಣಾ| ||7||
ಬಣ್ಣವಿಲ್ಲದ ಗಿಣಿಯ ಕಣ್ಣಿಲ್ಲದೆ ಕಂಡಿತು
ಪಕ್ಕನಿಲ್ಲದೆ ಹಾರಿತಣ್ಣಾ| ||8||
ಹಲ್ಲಿಲ್ಲದೆ ಹಣ್ಣು ಕಚ್ಚಿ ನೋಡಿತು ಗಿಣಿಯೆ
ನಾಲಿಗಿಲ್ಲದೆ ರುಚಿಯ ಕಂಡಿತಣ್ಣಾ| ||9||
ಅಜಾತವುಳ್ಳವಗ ಈ ಜ್ಯೋತ ದೊರಕುವದು
ಅಜಾತರೇನು ಬಲ್ಲರಣ್ಣಾ| ||10||
ಅಜಾತ ಈ ಜಾತ ಮಧ್ಯ ಮಂಟಪ ನಡುವೆ
ಸಿದ್ಧಲಿಂಗನ ಕೂಡಿರಣ್ಣಾ| ||11||
ಎಡ್ಡ ಗುಡ್ಡದ ನಡುವೆ ದೊಡ್ಡ ಗವಿಯನು ಸೇರಿ
ಗಣಪತಿ ಪೂಜೆ ಮಾಡಣ್ಣಾ| ||12||
ಗಣಪತಿಯೆಂಬಾತ ಜಗಪತಿ ತಾನಾದ
ರಾಚೋಟೇಶನ ಕೂಡಿರಣ್ಣಾ| ||13||
ಮಹಾದೇವ ಬಳಿ ಚಕ್ರ ಕೈಲಾಸ ಗಿರಿ ಶಿಖರ
ಉನ್ಮನಿಯಲ್ಲಿ ಸ್ಥಿರ ಶಿಖರೇಶ್ವರಾ ಉನ್ಮನಿಯಲ್ಲಿ ಸ್ಥಿರ| ||ಪ||
ಸುಳಿಯ ಮಧ್ಯಭಾಗ ಸೊನ್ನಿ ಸೇರಿದಾಗ
ಸ್ವಪ್ನದ ಅವಸರಾ ಅಲ್ಲಿ ಸ್ವಪ್ನದ ಅವಸರಾ| ||1||
ಶಿಖರದಲ್ಲಿ ಸೊನ್ನಿ ಸ್ಥಿರವಾಗಿ ನಿಂತಿತ್ತು
ನಾದ ನುಡಿತಿತ್ತು ಸಿಮಿ ಸ್ಥಿಮಿ ನಾದ ನುಡಿತಿತ್ತು| ||2||
ಮುಂದಕ ನೋಡಿದರೆ ಹಿಂದಕ ಕಾಣುವದು
ಹಿಂದಕೆ ನೋಡಿದರೆ ದೇವಾ ಮುಂದಕೆ ಕಾಣುವುದು| ||3||
ಮ್ಯಾಲಕೆ ನೋಡಿದರೆ ಕೆಳಕ್ಕೆ ಕಾಣುವುದು
ಕೆಳಕ್ಕೆ ನೋಡಿದರೆ ದೇವ ಮೇಲಕ್ಕೆ ಕಾಣವುದು| ||4||
ಬಾಜಿಗಿ ನೋಡಿದರೆ ಸೋಜಿಗ ಕಾಣುವದು
ನಿಜವಾಗಿ ನೋಡಿದರೆ ದೇವಾ ನಿರ್ಮಲ ಕಾಣುವುದು| ||5||
ಸತ್ಯ ಮಿಥ್ಯ ದೇವಾ ಮಿಥ್ಯ ಸತ್ಯ ಭಾವಾ
ಗೊತ್ತಿನಲ್ಲಿ ಸತ್ತೇ ನಾದ ಗೊತ್ತಿನಲ್ಲಿ ಸತ್ತೇ| ||6||
ದಯವಾಗೋ ಶಂಕರ ಶಶಿಧರ ಸುಂದರ
ಭಾವುಕ ಭಕ್ತರ ಕೊಡುವೊ ಮುಕ್ತಿ ಮಂದಿರ| ||7||
ಮಹಾಲಿಂಗನ ಮಠದೊಳಗೊಂದು
ಗೂಗಿ ಸೇರ್ಯಾದ ನೋಡಮ್ಮ
ಗುಮ್ಮಟದೊಳಗಿರುತಾದಮ್ಮ
ಗುಹೆದೊಳಗೆ ಗೂಡು ಕಟ್ಟಿ
ಗೂಗಿ ಸೇರ್ಯಾದ ನೋಡಮ್ಮಾ| ||ಪ||
ಸರಿ ರಾತ್ರಿ ಮಧ್ಯದೊಳಗೆ
ಮ್ಯಾಲಕ ಬಂದು ವದುರುತಾದೆ
ಮ್ಯಾಲೆ ಬಂದು ಒದರುತಾದೆ
ಬಾ ಅಂತ ಕರೆಯುತಾದೆ
ಬ್ರಹ್ಮಲೋಕಕ ನಡಿಯಂತಾದೆ
ಬೈಲಿನೊಳಗ ಆಗೆಂತಾದೆ| ||1||
ಈಡಾ ಪಿಂಗಳ ಗವಾಕ್ಷಿಯೊಳಗೆ
ಓಡ್ಯಾಡುತಾದ ನೋಡಮ್ಮ
ಅನಾಹತದಲ್ಲಿರುತಾದೆ
ಅಷ್ಟದಳ ತಿರುಗುತಾದೆ
ಅಷ್ಟರೊಳಗೆ ಶ್ರೇಷ್ಠರಾಗಿ
ತಾನೆ ತಾನಾಗಿರುತಾದೆ| ||2||
ಸಾಧು ಸಂತರು ಸಾಕುತಾರೆ
ಮುಕ್ತಿ ಪದವಿ ಬೇಡುತಾರೆ
ಕೈಲಾಸಕ ಹೋಗುತಾರೆ
ಮಹಾ ಗುರುದೇವನಮ್ಮಾ
ರಾಚೋಟೇಶನ ಕೂಡಿರುತಾದೆ| ||3||
ಮಾತು ಹೋಯಿತು ನೀತಿ ಉಳಿಯಿತು
ನೀಲಕಡಿ ಆಯಿತೊ ನಿಜ ನಿಂತಿತೊ
ತನ್ನ ಉಳದಿತೊ ನಾತಿ ಹತ್ತಿತೊ
ಪ್ರೀತಿ ಕೂಡಿತೊ ಜಾತಿ ಅಳದೀತೊ
ಜ್ಯೋತಿ ಉಳದೀತೊ ಜನ್ಮ ನೀಗಿ ಹೋಯಿತೊ| ||ಪ||
ಹಂಬಲಾಯಿತೊ ಹರಿಬ್ರಹ್ಮನಾ
ತಿಂದು ತಾಂಬೂಲ ಉಗಳಿದಾ ಬಿಂದುನಾ
ಶಂಭುಲಿಂಗ ಶಿವ ಸಾಂಬನಾ ಸ್ವಾತಿ ಹನಿ ಬಿದ್ದು ಜ್ಯೋತಿ ಮುತ್ತಿನಾ
ಮುಕ್ತನಾದೆನಾ ಐಕ್ಯನಾದೆನಾ| ||1||
ನೀಲಗಿರಿಯೆಂಬ ನಿಡವಂಚಿ
ಭಲೆ ಶಿವಕಂಚಿ ನಿಜಲಿಂಗ ಮೂರುತಿ ನಿಶ್ಚಿಂತಿ
ಚಿದಾನಂದ ಚಿನ್ಮಯ ಜ್ಯೋತಿ ಆಕೃತಿ ಸದ್ಗುರು ಶಂಕರಲಿಂಗ ಎನ್ನ ಪತಿ ||2||
ಸಂಸಾರ ಸಾಗರದಿಂದ ಆದೇನು ಮುಕ್ತಿ|
ಮುಡಿಯನ್ನು ಹಿಡಿದು ಎಳೆದೊಯ್ಯುವೆನೆಂದು
ಧೃವಲೋಚನ ಬಂದು ದೇವಿನ ಎಳೆದೊಯ್ಯುವೆನೆಂದು| ||ಪ||
ನನಗೂಡ ಯುದ್ಧ ಮಾಡಿ ಗೆದ್ದು ಹೋಗೆ ತ್ವರದಿ
ಅವನ ಪತಿಯಾದ ಪೃಥ್ವಿಗೆ ರಾಜಾ ಅವನ ಪತಿಯಾದ| ||1||
ಯುದ್ಧ ಮಾಡುವನೆಂದು ವೀರ ತಾಳಿ ಬಂದು
ಅಹಂಕಾರದಿಂದ ಭಸ್ಮಾದ ಅಹಂಕಾರದಿಂದ| ||2||
ದಯವಾಗೆ ಶಂಕರಿ ಕಾಯೆನ್ನ ಓಂಕಾರಿ
ಭಕ್ತರ ಭವಹಾರ ಮುಕ್ತೇಶ್ವರಿ ಭಕ್ತರ ಭವಹಾರಿ| ||3||
ಮೂಲ ಮಾಯಿ ಬಾರೆ ಮಿಗಿಲಾದ ಕುನ್ನಿಯರೆ
ಮೂರು ಲೋಕಕೆ ಮೀರಿ ಹೆಚ್ಚಾಗಿರುವಿ ಮೂರು ಲೋಕಕೆ ಮೀರಿ ||ಪ||
ನೀ ಹುಬ್ಬು ಏರಿಸಿದರೆ ಜಗವು ಕುಣಿಯುತದೆ
ನೀ ಹುಬ್ಬು ನಿಲ್ಲಿಸಿದರೆ ಜಗ ರಕ್ಷಣೆಯಾಗುತದೆ| ||1||
ನೀ ಕಣ್ಣು ಕುಣಿಸಿದರೆ ಜಗವು ಕುಣಿಯುತದೆ
ನೀ ಕಣ್ಣು ನಿಲ್ಲಿಸಿದರೆ ಜಗ ಲಯವಾಗುತದೆ| ||2||
ದಯವಾಗೆ ಶಂಕರಿ ಕಾಯೆನ್ನ ಓಂಕಾರಿ
ಭಕ್ತರ ಭವಹಾರಿ ಮುಕ್ತೇಶ್ವರಿ ಭಕ್ತರ ಭವಹಾರಿ| ||3||
ರಾಜಯೋಗಿ ಮಹಾರಾಜ ಸಲಾಮ
ಸದ್ಗುರು ಶಂಕರಲಿಂಗ ಸಲಾಮ| ||ಪ||
ಆದಿಶಂಕರಲಿಂಗಗೆ ಸಲಾಮ
ಮಚ್ಚೇಂದ್ರ ಶಂಕರಲಿಂಗಗೆ ಸಲಾಮ| ||1||
ಗೋರಾ ಶಂಕರಲಿಂಗಗೆ ಸಲಾಮ
ಗಹನಿ ಶಂಕರಲಿಂಗಗೆ ಸಲಾಮ| ||2||
ನಿವೃತಿ ಶಂಕರಲಿಂಗಗೆ ಸಲಾಮ
ದೇವಾ ಶಂಕರಲಿಂಗಗೆ ಸಲಾಮ ||3||
ಸೋಪಾನ ಶಂಕರಲಿಂಗಗೆ ಸಲಾಮ
ಗೋರಖ ಶಂಕರಲಿಂಗಗೆ ಸಲಾಮ| ||4||
ಜ್ಞಾನದೇವ ಶಂಕರಲಿಂಗಗೆ ಸಲಾಮ
ಏಕಾ ಶಂಕರಲಿಂಗಗೆ ಸಲಾಮ| ||5||
ತೂಕಾ ಶಂಕರಲಿಂಗಗೆ ಸಲಾಮ
ಓಂಕಾರ ಶಂಕರಲಿಂಗಗೆ ಸಲಾಮ| ||6||
ವಿಠಲ ಶಂಕರಲಿಂಗಗೆ ಸಲಾಮ
ಪುಂಡಲೀಕ ಶಂಕರಲಿಂಗಗೆ ಸಲಾಮ| ||7||
ವಾಕ ಶಂಕರಲಿಂಗಗೆ ಸಲಾಮ
ಬಾಕಾ ಶಂಕರಲಿಂಗಗೆ ಸಲಾಮ| ||8||
ರಾಕಾ ಶಂಕರಲಿಂಗಗೆ ಸಲಾಮ
ಚೊಕಾ ಶಂಕರಲಿಂಗಗೆ ಸಲಾಮ| ||9||
ಕಬೀರ ಶಂಕರಲಿಂಗಗೆ ಸಲಾಮ
ಕಾನಾ ಶಂಕರಲಿಂಗಗೆ ಸಲಾಮ| ||10||
ಸೈನಾ ಶಂಕರಲಿಂಗಗೆ ಸಲಾಮ
ಘೃಷಣಾ ಶಂಕರಲಿಂಗಗೆ ಸಲಾಮ| ||11||
ಸಾಧು ಶಂಕರಲಿಂಗಗೆ ಸಲಾಮ
ಸಜ್ಜನ ಶಂಕರಲಿಂಗಗೆ ಸಲಾಮ| ||12||
ಬೋಧಕ ಶಂಕರಲಿಂಗಗೆ ಸಲಾಮ
ಮಹಮ್ಮದ ಶಂಕರಲಿಂಗಗೆ ಸಲಾಮ| ||13||
ದಾಮಾ ಶಂಕರಲಿಂಗಗೆ ಸಲಾಮ
ಕಾಮಾ ಶಂಕರಲಿಂಗಗೆ ಸಲಾಮ| ||14||
ನರಹರಿ ಶಂಕರಲಿಂಗಗೆ ಸಲಾಮ
ಮುಕ್ತಾ ಶಂಕರಲಿಂಗಗೆ ಸಲಾಮ| ||15||
ದಾತಾ ಶಂಕರಲಿಂಗಗೆ ಸಲಾಮ
ಪಿತಾ ಶಂಕರಲಿಂಗಗೆ ಸಲಾಮ| ||16||
ಅನಂತ ಶಂಕರಲಿಂಗಗೆ ಸಲಾಮ
ಗುಂಡಾ ಶಂಕರಲಿಂಗಗೆ ಸಲಾಮ| ||17||
ವೀರ ಶಂಕರಲಿಂಗಗೆ ಸಲಾಮ
ಬೀರ ಶಂಕರಲಿಂಗಗೆ ಸಲಾಮ| ||18||
ಮಾಣಿಕ ಶಂಕರಲಿಂಗಗೆ ಸಲಾಮ
ಮಲ್ಲಾ ಶಂಕರಲಿಂಗಗೆ ಸಲಾಮ| ||19||
ಖಪಿಯಾ ಶಂಕರಲಿಂಗಗೆ ಸಲಾಮ
ಬೋದಲ್ಯಾ ಶಂಕರಲಿಂಗಗೆ ಸಲಾಮ| ||20||
ಪೀರಾ ಶಂಕರಲಿಂಗಗೆ ಸಲಾಮ
ಸದ್ಗುರು ಶಂಕರಲಿಂಗಗೆ ಸಲಾಮ| ||21||
ಭದ್ರಿನಾ ಗುರು ಪಾದಕೆ ಸಲಾಮ
ಸದ್ಗುರು ರಾಚೋಟೇಶನಿಗೆ ಸಲಾಮ| ||22||
ಉದಗಿರಿ ವಾಶನಿಗೆ ಸಲಾಮ
ನಿಡವಂಚಿ ದಾತನಿಗೆ ಸಲಾಮ| ||23||
ರಾಮನ ನುಡಿಯಲಿಬೇಕೊ
ಬಹು ಪ್ರೇಮಾನಂದದೊಳಿರಬೇಕೊ
ಕಾಮಿ ಗುಣಗಳು ಅಳಿಯಬೇಕೊ
ನಿಜ ಖೂನಾ ಪ್ರಾಣಾದೊಳಿರಬೇಕೊ| ||ಪ||
ಆಸಿ ಎಂಬುದು ಅಳಿಬೇಕು
ನಿರಾಸಿಕನಾಗಿ ಇರಬೇಕು
ಘಾಸಿ ಗುಣಾ ಬಿಟ್ಟಿರಬೇಕು
ಉಲ್ಲಾಸದೊಳು ತಾ ಮೆರಿಬೇಕೊ| ||1||
ಗುರು ಹಿರಿಯರಿಗೆ ಶರಣಾಗಬೇಕೊ
ಸದಾ ಗುರುಭಕ್ತಿಯೊಳು ತಾ ಇರಬೇಕು
ಯುಕ್ತಿಲಿಂದೆ ಸಾಧಿಸಬೇಕೊ
ತಾ ಮುಕ್ತಿ ಮಂದಿರದೊಳು ಇರಬೇಕೊ| ||2||
ಕೂಡುತ ರಾಮಾ ಏಳುತ ರಾಮಾ
ನಡಿಯುತ ರಾಮಾ ನುಡಿಬೇಕೊ
ಓಡುತ ರಾಮಾ ಆಡುತ ರಾಮಾ
ಮಾಡುತ ರಾಮಾ ಅನುಬೇಕೊ| ||3||
ಉದಗಿರಿನಾಥನ ನಂಬಿರಬೇಕೊ
ಸದ್ಗುರುವಿನ ಪಾದಕ ಹೊಂದಿರಬೇಕೊ
ಕಮಲಕ ಭೃಂಗಿ ಆಗಿರಬೇಕೊ
ಆತ್ಮಾರಾಮನ ಕೂಡಿರಬೇಕೊ| ||4||
ರಿದ್ಧಿ ಸಿದ್ಧಿ ನಿಮ್ಮ ಮಾಡುತಾರೊ ಧ್ಯಾನ
ವಂದಿತ ಸುರಗುಣ ಇಂದ್ರ ಚಂದ್ರ| ||ಪ||
ನಾನಾ ಜನ್ಮ ತಿರುಗಿ ಬಂದೆ ನಿನಗಾಗಿ
ಪಾವನ ಮಾಡೋ ಬೇಗಿ ಜ್ಞಾನಮೂರ್ತಿ| ||1||
ಸಗುಣ ಶಾಂತ ಮೂರ್ತಿ ನಿರ್ಗುಣ ಪ್ರಕೃತಿ
ಅಗಣಿತ ನಿನ್ನ ವರ್ತಿ ಮಾನನಿಧಿ| ||2||
ನಾಮ ರೂಪ ರಹಿತ ಪ್ರೇಮ ರಸಭರಿತ
ಕರ್ಮಿಕ ಫಲದಾತ ಕಾಮರಹಿತ| ||3||
ನು ನಿನ್ನ ಬಾಲ ಕುಡಿಸೊ ಎನಗೆ ಹಾಲ
ಧನ್ಯ ನಿಮ್ಮ ಲೀಲ ಜಗದಲ್ಲಿ| ||4||
ಯೋಗಿ ಭದ್ರಿನಾಥ ಜಗದೊಳು ಪ್ರಖ್ಯಾತ
ಜಂಗಮ ಜಗಭರಿತ ಲಿಂಗಮೂರ್ತಿ| ||5||
ವಾರೆ ವಾರೇ ನನ್ನ ಹುಳಗೆಡಕ ಹೆಣ್ಣಾ
ಬಾವನ್ನ ಅಕ್ಷರಕ ಹೆಚ್ಚಾದಿ ಹೆಚ್ಚಾದಿ
ಮಗನ ಸಂಗ ನೀ ಮಾಡಿದಿ
ಮಹದೇವನಂತ ಹೆಸರು ಇಟ್ಟಿದಿ| ||ಪ||
ತಾಯಿಯಾಗಿ ಮೊಲೆ ಕೊಟ್ಟವಳಾದಿ
ಹೆಂಡತಿಯಾಗಿ ಕಸಿಕೊಂಬವಳಾದಿ
ರಂಡಿಯಾಗಿ ಭಂಡ ಮಾಡುವಳಾದಿ
ಗಂಡನ ತೆಲಿ ಮೇಲ ಹಾದರ ಮಾಡಿ
ಗೌಡತಿ ಎನಸಿಕೊಂಡವಳಾದಿ| ||1||
ಹಾಲು ಕೊಂಡು ಹಾಟಾಯಿತು
ಹಾಟಲಿಂದ ಕೂಟಾಯಿತು
ಕೂಟಲಿಂದೆ ಕುರುಹಾಯಿತು
ಕುರುಹಿಲಿಂದೆ ಮರಿಯಾಯಿತು| ||2||
ಹೆಣ್ಣೆಂದರೆ ಹೆಣ್ಣಿಲ್ಲಪ್ಪಾ
ಆದಿಶಕ್ತಿ ಮೂಲ ಮಾಯಾವಪ್ಪಾ
ಗಂಡಲಿಂದೆ ಹೆಣ್ಣಾಯಿತಪ್ಪಾ
ಹೆಣ್ಣಿಲಿಂದೆ ಜಗವಾಯಿತಪ್ಪಾ| ||3||
ನಿಡವಂಚಿ ಎಂಬುದು ಹಳ್ಳೆಪ್ಪಾ
ಹಳ್ಳಿಯೊಳಗೆ ಹೆಣ್ಣ ಹಾಳಪ್ಪಾ
ಹೆಣ್ಣಿ ನೆಲಿ ಬಹುದೂರಪ್ಪಾ
ಗುರು ಶಂಕರಲಿಂಗನ ಮಗಳಪ್ಪಾ| ||4||
ಶಕ್ತಿಯ ಸಾಕಾರ ಮುಕ್ತಿಗೆ ಆಧಾರ
ಭಕ್ತಿಗೆ ಪ್ರಿಯಕರಾ ವಿರಕ್ತನಾದೆ| ||ಪ||
ಜಂಗಮ ಜಗದೇವ ಲಿಂಗದ ಅನುಭಾವ
ಮಂಗಳ ಮಹಾದೇವಾ ಜಂಗಮ ನೀನೆ| ||1||
ಗುರು ಎಂಬ ಅಕ್ಷರ ಜಪಿಸಿದಂತವರ
ಸಿದ್ಧಿಯ ಸಾಕಾರ ಆಗುವದು| ||2||
ಸತ್ಯ ನಿಮ್ಮ ವಾಣಿ ಮಿಥ್ಯವಿಲ್ಲೋ ಪ್ರಾಣಿ
ಪೂರ್ಣ ತತ್ವಜ್ಞಾನಿ ಪರಮಾನಂದ| ||3||
ಆರು ಚಕ್ರ ಮೂಲಾ ದಾರಿಗೆ ತಿಳಿದಿಲ್ಲಾ
ಗುರು ತಾನೆ ಬಲ್ಲಾ ಗುರುವಿನ ಕೀಲಾ| ||4||
ಯೋಗಿ ಭದ್ರಿನಾಥ ಜಗದೊಳು ಪ್ರಖ್ಯಾತ
ಜಂಗಮ ಜಗ ಭರಿತ ಲಿಂಗಮೂರ್ತಿ| ||5||
ಶರಣು ಶರಣು ಗುರುವೆ ಶಂಕರಾ
ಭಕ್ತರಿಗೆ ಕೊಡುವ ಮುಕ್ತಿ ಫಲಹಾರಾ| ||ಪ||
ಚರಣಕ ನಂಬಿಕೊಂಡ ಭಕ್ತರ
ಜನನ ಮರಣ ನೀಗಿ ಹೋದಾರ| ||1||
ಸದ್ಗುರುನಾಥ ಚಂದ್ರಶೇಖರಾ
ಭಕ್ತನ ಭಜನಿಗೆ ಜಯ ಜಯಕಾರ| ||2||
ಅಂಗ ಲಿಂಗ ಜನ್ಮ ಮರಣ
ಸಂಗನ ಶರಣರಿಗೆ ನಿಜ ಖೂನಾ| ||3||
ಜೀವ ಶಿವ ಭಾವ ಬೈಲಾಗಿ
ಘನಲಿಂಗ ಮೂರ್ತಿ ಅಣುವಾಗಿ| ||4||
ಚಕೋರ ಚಂದ್ರನ ಮೇಲೆ ಲಕ್ಷ
ಅಮೃತಕೊಂಬುವೆ ಮನ ಉಲ್ಲಾಸ ||5||
ನಿಮ್ಮ ಚರಣದಲ್ಲಿ ಚಿತ್ತ ಹಚ್ಚಿ
ಅಮೃತಕೊಂಬುವೆ ಜಿವ್ಹೆ ಚಾಚಿ| ||6||
ಸದ್ಗುರುವಾಥ ಸೋಮಶೇಖರ
ಭದ್ರಿನಾಥ ಒಲಿಯೋ ಪೂರಾ| ||7||
ಶ್ರವಣ ಮನನ ನಿಧಿಧ್ಯಾಸ ಮಾಡೊ
ತನ್ನ ತಾ ತಿಳಿದರೆ ತೀರಿತು ನೋಡೊ| ||ಪ||
ನಾ ಯಾರು ನೀ ಯಾರು ತಾ ಯಾರು ನೋಡೊ
ನಾ ಮಿಥ್ಯಾ ನೀ ಸತ್ಯ ನಿನ್ನಲ್ಲೆ ನೋಡೊ
ಮನವು ಚಿತ್ತಿನ ಬೆನ್ನ ಹಚ್ಚಿ ಕೂಡೊ
ಚಿನ್ಮಯ ಮೂರುತಿ ಗುರುತು ಗುರಿ ನೋಡೊ| ||1||
ಆಸನ ಬಲಿದು ವಾಸನೆ ಅಳಿದು
ಈಡಾ ಪಿಂಗಳ ನಾಡಿ ಕೂಡಿ ತಾ ನಡಿದು
ವಾಯುವಿನ ಬೆನ್ನ ಹತ್ತಿ ಒಳಕೆ ಪೋಗುವದು
ಆತ್ಮ ರಾಮನ ನಿಲ್ಲಿಸಿ ಮಾತಾಡುವದು| ||2||
ಭೂಚರಿ ಮಾಡೊ ಭೃಕುಟಿ ನೋಡೊ
ತ್ರಿಕೂಟ ಸಂಗಮ ಸ್ನಾನ ನೀ ಮಾಡೊ
ಸಾಸಿರದೊಳು ಸೇರಿ ಸಮಾಧಿ ಕೂಡೊ
ಈಶಾ ರಾಚೋಟೇಶನ ಚರಣ ಚಿತ್ತಹಚ್ಚಿ ನೋಡೋ| ||3||
ಶಿರವು ರುದ್ರ ಲೋಕಾ ಹೃದಯ ಬ್ರಹ್ಮಲೋಕ
ಪಾದವಿಷ್ಣು ಲೋಕಾ ಭೇದಾ ತಿಳಿದು| ||ಪ||
ಈಡಾ ಪಿಂಗಳಾ ನಾಡಿ ತಿಳಿಯಬೇಕೊ ಝಾಡಿ
ಸುಷಮ್ನಾ ಮಾರ್ಗ ಹಿಡಿ ನಡಿ ಮುಂದಕ| ||1||
ನಾಶಿಕ ಕೊನೆಯಲ್ಲಿ ದೃಷ್ಟಿಯ ಇಡುವಲ್ಲಿ
ಭಾನು ಪ್ರಕಾಶದ ಬೇಲಿ ತೋರುತೈತೆ| ||2||
ಆರು ಮೂರು ದ್ವಾರಾ ಮುಚ್ಚಿ ನೋಡೋ ಧೀರಾ
ದಶನಾದ ವಿಸ್ತಾರ ಆಗುತೈತೆ| ||3||
ಆರು ಸ್ಥಲದ ಮಹಿಮಾ ತಿಳಿದವನೆ ಬ್ರಹ್ಮಾ
ಬಿಡೊ ಮನದ ಹಮ್ಮಾ ಜಡ ದೇಹದ| ||4||
ಯೋಗಿ ಭದ್ರಿನಾಥ ಜಗದೊಳು ಪ್ರಖ್ಯಾತ
ಜಂಗಮ ಜಗಭರಿತ ಲಿಂಗ ಮೂರ್ತಿ| ||5||
ಶಿವನಾಮ ನುಡಿಬೇಕೇ ಹೇ ಮನವೆ
ಹರನಾಮ ನುಡಿಬೇಕೆ| ||ಪ||
ಶಿವನಾಮಾಮೃತ ಭಜನವು ಕೀರ್ತನ
ಕಿವಿಲಿಂದೆ ಕೇಳಬೇಕೆ ಹೇ ಮನವೆ| ||1||
ಭವಸಾಗರದೊಳು ಮುಣಗುತ ತೇಲುತ
ಬಹಳ ಬ್ಯಾಸರನಾದೆ ಹೇ ಮನವೆ ||2||
ಲಕ್ಷಚೌರ್ಯಾಐಂಸಿ ಯೋನಿ ತಿರಗಿ ತಿರಗಿ
ಮಾನವ ಜನ್ಮಕ ಬಂದೆ ಹೇ ಮನವೆ| ||3||
ಬಹು ದುರ್ಲಭವಾದ ಈ ನರಜನ್ಮವು
ಮತ್ತೊಮ್ಮೆ ಸಿಗಲಾರದೆ ಹೇ ಮನವೆ| ||4||
ದೇಶಕ್ಕೆ ಆದಿಯಾದ ನಿಡವಂಚಿ ಗ್ರಾಮ
ಭದ್ರಿನಾಥನ ನೆನಿಬೇಕೆ ಹೇ ಮನವೆ| ||5||
ಶಿವ ಶಿವ ಶಿವಲಿಂಗಾ ಮೂರುತಿ ಘನಲಿಂಗ
ಮಾರುತಿ ಮಹಾಲಿಂಗ ಸದ್ಗುರು ಶಂಕರ ನಿಜಲಿಂಗ| ||ಪ||
ಇಷ್ಟ ಪ್ರಾಣ ಭಾವ ಲಿಂಗದೊಳಗೆ ಅಡಗಿ
ಸಂಗನ ಶರಣರಿಗೆ ಲಿಂಗದ ಪೂಜೆಗೆ ಘನವಾಗಿ| ||1||
ಮಂಗಳ ಮಹಿಮಾನು ತಿಂಗಳ ಸೋಡಿದನು
ಗಂಗೆಯ ರಮಣನು ಗುರುವೆ ರಕ್ಷಿಸೊ ಎನ್ನನು| ||2||
ಬೇಡಿಕೊಂಬೆ ನಿಮ್ಮ ಭಕ್ತ ಭದ್ರಿನಾಥ
ಹಾಡಿಕೊಂಬೆ ನಿನ್ನಮ್ಮ ಶಿವಶಿವ| ||3||
ಕೂಡಿಕೊಂಬೆ ನಿಮ್ಮ ಚರಣ ಕಮಲದಲ್ಲಿ
ಆಡಿಕೊಂಬೆ ನಿಮ್ಮ ಆಲಯದೊಳು| ||4||
ದಯವಾಗೊ ಶಂಕರ ಶಶಿಧರ ವಸುಂಧರಾ
ಭಾವಿಕ ಭಕ್ತರ ಕೊಡುವೊ ಮುಕ್ತಿ ಮಂದಿರ| ||5||
ಸಹಗುಣ ಸೋಹಂ ನಿರ್ಗುಣ ನಿಜಲಿಂಗ ಮೂರುತಿ
ಬೆಳಗುವೆ ಮಂಗಳಾರತಿ
ಆರುತಿಕೀರ್ತಿ ಪೂರ್ಣಜ್ಯೋತಿ
ಪೂಜೆ ಬೆಳಗುವೆನು ಪಂಚಾರುತಿ| ||ಪ||
ಐಟ ಪೀಟ ತ್ರೀಕೂಟ ಮಧ್ಯ ಶಿಖರ ಏರಿ ಬನ್ನಿರಿ
ಅಲ್ಲಿ ಎರಡು ಜ್ಯೋತಿ ಬೆಳಗಿರಿ|
ಮಾತು ಮಾತ್ರಕೆ ಸ್ವಾನುಭಾವ ತಿಳಿದಿರಿ
ಭಾವಲಿಂಗದೊಳಗೆ ಅಲ್ಲಿ ನೀತಿ ತಿಳಿದಿರಿ| ||1||
ಬ್ರಹ್ಮ ಗುಂಪಿನೊಳಗೆ ಸೇರಿ ಬಯಲಾಗಿರಿ
ನಿರ್ಬೈಲಿನೊಳಗೆ ಅಡಗಿರಿ ನಿಶೂನ್ಯದಲ್ಲಿ ಐಕ್ಯನಾಗಿರಿ
ಅರವು ಮರವು ಅಡಗಿ ಓಂಕಾರ ಉಳದಿತರಿ
ಉನ್ಮನಿಯಾ ಬೈಲಿನೊಳಗೆ ಬೆರದಿತರಿ| ||2||
ದೇಶದಿಳಗೆ ವಾಸ ನಿಡವಂಚಿ ಗ್ರಾಮದವನು
ದಾಸ ಭದ್ರಿನಾಥ ಈಶ ರಾಚೋಟೇಶನು
ಸದ್ಗುರು ಶಂಕರಲಿಂಗ ತಾನೇ ತಾನು
ಆತನೆ ಈ ಜಗದ ಕರ್ತಾರನು| ||3||
ಸತ್ಯ ನಡಿ ಎಂದರ ಸಾಯಬ್ಯಾಡ ಮಗಳೆ
ಮಿಥ್ಯ ನಡಿ ಎಂದರ ಹಿಗ್ಗಬ್ಯಾಡ ಮಗಳೆ
ಗುರುತು ತಿಳಕೊಂಡು ಗಪ್ಪಾಗ ಮಗಳೆ
ಸತ್ ಚಿತ್ ಆನಂದ ಪಡಕೊಳ್ಳು ಮಗಳೆ| ||ಪ||
ಮಾತು ಕೊಟ್ಟು ತಪ್ಪಿ ನಡಿಬ್ಯಾಡ ಮಗಳೆ
ನೀತಿ ಹಿಡಿದು ನಾತಿಮ್ಯಾಲ ನಡಿ ಮಗಳೆ
ಶಾಂವಿಗಿ ಬಾನಾ ಉಣ್ಣು ಸವತಿಯ ಮಗಳೆ
ಕರ್ಚಿಕಾಯಿ ಊಣಬೇಕು ಗರ್ತಿಯ ಮಗಳೆ| ||1||
ಅಕ್ಕತಂಗಿ ಮಗಳು ಸೋದರ ಸೊಸಿ ನೀ ಮಗಳೆ
ಸತ್ಯ ನಡಿ ನುಡಿ ಪತಿವ್ರತಾ ಮಗಳೆ
ಗುರುತಿಟ್ಟು ನಡಿ ಗುರುಪುತ್ರ ಮಗಳೆ
ಅರ್ತು ಗುರುವಿನ ಚರಣ ಹೊಂದಿರು ಮಗಳೆ| ||2||
ನಿಡವಂಚಿ ಗ್ರಾಮದ ನಿಜಲಿಂಗ ಮಗಳೆ
ಭದ್ರಿನಾಥಪಾದ ಪಿಡಿದು ಸಾಯಿ ಮಗಳೆ
ಸಿದ್ದರಾಮನೊಳಗ ಐಕ್ಯನಾಗು ಮಗಳೆ
ಸಿದ್ಧ ಸಿದ್ಧ ಎಂದು ನೀ ಕೂಗು ಮಗಳೆ| ||3||
ಸದ್ಗುರುಮೂರ್ತಿ| ಸ್ಥಾವರದಲ್ಲಿರುತಿ|
ಅಯಾಚಾರ ಮೂರ್ತಿ| ಚರಣಾಮೃತ ಸಲ್ಲಿಡೋ ಮುಕ್ತಿ| ||ಪ||
ಎಪ್ಪತ್ತೆರಡು ನಾಡಿ ಏಳರಲ್ಲಿ ಕೂಡಿ
ಏಳು ಮೂರು ಎರಡು ನಿಮ್ಮ ಚರಣದಲ್ಲಿ ಅಡಗಿ| ||1||
ರೇಚಕ ಪೂರಕ ಮಧ್ಯ ಕುಂಭಕ ಕೋಣಿ
ಸೋಸುತೈತಿ ಸೊನ್ನಿ ಸೋಹಂ ಸೋಸುತೈತಿ ಸೊನ್ನಿ| ||2||
ಝಂಕಾರ ಓಂಕಾರಾ ದಶನಾದಗಳಾಗಿ
ಕೂಗುತಿಹದೊ ಮ್ಯಾಗ ಮೇಲಭಾಗ ಕೂಗುತಿಹದು| ||3||
ಕರ್ಣ ದ್ವಾರದಲ್ಲಿ ನಾದ ಸುನಾದ
ಕಾಳೀಯ ಸ್ವರದಿಂದ ಚೀರುತ ಕಾಳಿಯ ಸ್ವರದಿಂದ| ||4||
ನಾದವ ಕೇಳುತಾ ಸೋಧನ ಮಾಡುತ
ಸಾಧಿಸಿ ಕಂಡೆನು ಸೊನ್ನಿ ಸಾಧಿಸಿ ಕಂಡೆನು| ||5||
ಅಮರ ಕೋಣೆಯಲ್ಲಿ ಭ್ರಮರ ಗುಂಪು ಕಂಡೆ
ಭ್ರಮರ ಹಿಂಡಿನೊಳಗೆ ಅನಂತ ಬಾಜಿಗಳು| ||6||
ನಿಮ್ಮ ಚರಣ ಕಂಡು ಆನಂದದೊಳಗಾಡಿ
ತಿರುಗಿ ಬರದಂತೆ ಮಾಡೋ ಗುರುವೆ| ||7||
ಸತ್ಯರ ನಡೆ ತೀರ್ಥ ನಿತ್ಯರ ನುಡಿ ತೀರ್ಥ
ಉತ್ತಮರ ಸಂಗ ದೇವ ಮಹಾ ಕಾಶೀ ತೀರ್ಥ| ||8||
ದಯವಾಗೊ ಶಂಕರ ಶಶಿಧರ ಸುಂದರ
ಭಾವಿಕ ಭಕ್ತರ ಕೊಡುವೊ ಮುಕ್ತಿಯ ಮಂದಿರ| ||9||
ಸದ್ಗುರು ಕಂಡಾಡು ಮನಸೆ
ನಿನ್ನ ಕಣ್ಣಿಗಿ ಕಾಣದೆಲ್ಲಾ ಬೀಳದು ಕನಸೆ| ||ಪ||
ಈ ದೇಹ ಅಶಾಶ್ವತ ತಿಳಿದು
ನಿನ್ನ ಮನಸಿನ ಒಳಗಿನ ಸಂಕಲ್ಪ ತೋಳಿದು
ನಾನು ನೀನೆಂಬುದ ಅಳಿದು
ತಾನೇ ತಾನಾಗಿದ್ದರೆ ವಸ್ತು ನೀ ಹೌದು| ||1||
ಕಾಕು ಬುದ್ಧಿಗಳೆಲ್ಲಾ ಬಿಟ್ಟು
ಏಕೋ ಭಾವದಿ ಗುರುವಿನ ಪಾದ ನೀ ಮುಟ್ಟು
ತನು ಮನ ಧನ ಗುರುವಿಗೆ ಕೊಟ್ಟು
ಅವರು ಹೇಳಿದ ನುಡಿಯನು ನಡಿ ಭಕ್ತಿಯಿಟ್ಟು| ||2||
ನುಡಿ ಸರಿ ನಡೆದರೆ ನಿಂದು
ಜನ್ಮ ಪಾವನಾಗಿ ಭವಬಾಧಿ ತಪ್ಪುವದು
ನಿನ್ನ ರೂಪಾ ನಿನಗೆ ತೋರುವದು
ಮುಂದ ಆಗದು ನಿಂದ ನಿನಗೆ ತೋರುವದು| ||3||
ನಿಡವಂಚಿ ಗ್ರಾಮದಲಿಂದು
ಶ್ರೀಗುರು ಭದ್ರೇಶ್ವರನ ಪಾದಕ ಹೊಂದು
ಹೊಂದಿದ ಮೇಲೆ ಆನಂದ
ಜನ್ಮ ಸಾರ್ಥಕ ಆಗುವದು ನಿಮದು| ||4||
ಸದ್ಗುರು ಶಂಕರಲಿಂಗ ಪಾದಕ
ನಿವಾಳಿ ಬೆಳಗುವೆನೊ
ಶಂಕರ ನಿವಾಳಿ ಬೆಳಗುವೆನೊ| ||ಪ||
ಶಂಕರ ನಿರ್ಮಲ ಮನವಾಗಿ
ಓಂಕಾರ ನಿಷ್ಕಳ ರೂಪಾಗಿ
ಝೇಂಕಾರ ನಿವಾಳಿ ಆದೇನೊ| ||1||
ಉದಗಿರಿಯ ದೊರೆಯೆ
ಓಂಕಾರ ಕೈಲಾಸದ ಗಿರಯೆ
ಝೆಂಕಾರ ನಿವಾಳಿ ಆದೇನೊ| ||2||
ಶಿವ ಶಿವ ನಾಮ ಸಿದ್ಧಾಯಿತೊ
ಸದ್ಗುರು ಪಾದಕ ಹದ ಆಯಿತೊ| ||3||
ಸಮಯ ಹೋಯಿತೊ ಭಾರಿಗೆ
ಮರ್ತ್ಯಾಕ ಬಂದೀರಿ ಭಾರಿಗೆ
ಮರ್ತು ಕುಂತಿರೆಪ್ಪಾ ಸ್ವಾಮಿಗೆ
ನಿರ್ತು ತಪ್ಪಿರೆಲ್ಲೊ ಭಾರಿಗೆ| ||ಪ||
ಕುಲ್ಪಿ ಮದ್ದು ಹಾಕು ಸಮಯಕೆ
ಬಂದುಕು ಹಾರಿತು ಭಾರಿಗೆ
ಗುರಿ ತಪ್ಪಿಹೋಯಿತು ಗೂಗಿಗೆ
ಬಂದೂಕು ಭೀಟಿರಿ ಮೂಲಿಗೆ| ||1||
ಸುದ್ದಿ ಹತ್ತಿ ಸರಕಾರಿಗೆ
ಜಗ್ಗಿಕೊಂಡು ಒಯ್ಯುವರು ಕಚೇರಿಗೆ|
ಶಿಕ್ಷಾ ಮಾಡುತಾರ ನಾಳಿಗೆ
ಅಲ್ಲಿ ಬಿಡಿಸುವರ್ಯಾರಿಲ್ಲ ಭಾರಿಗೆ| ||2||
ಗುರುವರನ ಮರಿಯದವರಿಗೆ
ಬಿರುದಿನ ಬಟ್ಟಲು ಅವರಿಗೆ
ಸದ್ಗುರು ಶಂಕರಲಿಂಗನಿಗೆ
ಪುಟ್ಟಿದ ಫಲ ನೋಡು ಭಾರಿಗೆ| ||3||
ಸಾಪಿ ಹೋಯಿತೊ
ಚಿಲವಿದು ಸಾಪಿ ಹೋಯಿತೊ
ಸಾಪಿ ಹೋಯಿತೊ ಕೋಪದಿಂದಲಿ
ವ್ಯಾಪಕಾಯಿತೊ ಚಂಡೇ ಸ್ವರದಲಿ| ||ಪ||
ಗುರುವಿನ ದರ್ಶನ ಕೊಟ್ಟಿತು ಸಾಪಿ
ಆತ್ಮದೊಳಗೆ ಮಹಾತ್ಮ್ಯ ನಡಸಿತ್ತೊ ಸಾಪಿ
ಕುಂಡಲಿದೊಳಗೆ ಸೇರಿತೊ ಸಾಪಿ
ಕುಣಿ ಕುಣಿದಾಡಿತು ಕುಟಿಲದ ಸಾಪಿ| ||1||
ಅಂತರಂಗದಲಿ ಇರುತಿತ್ತೊ ಸಾಪಿ
ಆತ್ಮದೊಳಗೆ ಮಹಾತ್ಮ ನಡಸಿತ್ತೊ ಸಾಪಿ
ಕುಂಡಲಿದೊಲಗೆ ಸೇರಿತೊ ಸಾಪಿ
ಕುಣಿ ಕುಣಿದಾಡಿತು ಕುಟಿಲದ ಸಾಪಿ| ||2||
ನಿಡವಂದಿ ಗ್ರಾಮದೊಳು ಇರುತಿತ್ತು ಸಾಪಿ
ಗುರುವಿನ ದರ್ಶನಕ ಬರುತಿತ್ತು ಸಾಪಿ
ಉದಗಿರನಾಥನ ಚರಣ ಕಮಲಕ ಸಾಪಿ
ಕೂಡಿಕೊಂಡು ತಾ ಬೈಲಾದಿತು ಸಾಪಿ| ||3||
ಸ್ಥಿರವಿಲ್ಲದ ಕೊಂಪಿಗೆ ನಾನು
ತಿಳಿಯಲಾರದೆ ಬಂದೆನಮ್ಮಾ
ನಾಶವಾಗುವ ಕೊಂಪಿ
ಬೇಸರಾಯಿತೆ ಎನಗಾ| ||ಪ||
ತಾಯಿ ಹೊಟ್ಟಿಲಿ ಹುಟ್ಟಿ
ತವರಮನಿ ಎಂಬುದರಿಯೆ
ಆಶೆನೆಂಬುದು ಗಂಡನ
ಮದವಿ ಮಾಡಿಕೊಂಡೆನಮ್ಮ| ||1||
ತಿರುಗಿ ತಿರುಗಿ ಸ್ವರಗಿ ಸೋತು
ನಿದ್ರಿ ಹತ್ತಿ ಮನಗಿದೆನಮ್ಮ
ಗುರುವು ಬಂದು ಎಚ್ಚರ ಮಾಡಿ
ಆಶ್ಚರ್ಯ ತೋರಿದನಮ್ಮ| ||2||
ಮುದ್ರ ಹಚ್ಚಿ ಮೂಗುತಿನಿಟ್ಟು
ವಾಲಿ ಕೋಪು ಕಿವಿಯಲಿಟ್ಟು
ತಾನೇ ಬಂದು ಎನ್ನೊಳು ಕುಳಿತು
ಎನ್ನ ಎದುರಿಗೆ ನಿಂತಿದಾರಮ್ಮ| ||3||
ಈಡಾ ಪಿಂಗಳಾ ಸುಷುಮ್ನಾ
ಅಲ್ಲಿ ಸುಳಿವ ಅಕ್ಷರ ತಿಳಿಸಿ
ಅಕ್ಷರದೊಳಗೆ ತನ್ನ ಮಂತ್ರ
ತಿಳಿಸಿದಾರಮ್ಮ| ||4||
ನಿಡವಂಚಿ ಗ್ರಾಮದಲಿ
ನಿಜಲಿಂಗ ಮೂರುತಿ ಕಂಡೆ
ರಾಚೋಟೇಶ ಗುರು ಬಂದು
ತನ್ನಂತೆ ಮಾಡಿದಾರಮ್ಮ| ||5||
ಸಿದ್ಧಾ ಸೇದಾನು ಬನ್ನಿರೊ
ಶಿವನಿಗೆ ನೋಡಾನು ಬನ್ನಿರೊ
ರೇಚಕ ಪೂರಕ ಕುಂಭಕರೊ
ಕೂಡಿಕೊಂಡು ಮಾರ್ಗ ನಡಿಬೇಕರೊ| ||ಪ||
ಸ್ವಯಂ ಸಿದ್ಧಾನ ತಕ್ಕೊಳಿರೊ
ಅಹಂ ಎಂಬ ಕಸ ಕಡ್ಡಿ ಆಯಕೊಳ್ಳಿರೊ
ನೆನಹು ಎಂಬ ನೀರು ಹಾಯಿಕೊಳ್ಳಿರೊ
ಮನಸಿನ ಮೈಲಿಗಿ ತೊಳಕೊಳ್ಳಿರೊ| ||1||
ತಾ ಎಂಬ ತಂಬಾಕು ಹಾಯಿಕೊಳ್ಳಿರೊ
ತನುವೆಂಬ ಚಿಲವಿಯ ತುಂಬಿಕೊಳ್ಳಿರೊ
ಗುರುಮಂತ್ರ ಬೆಂಕಿ ಇಟ್ಟುಕೊಳ್ಳಿರೊ
ಜ್ಞಾನ ಎಂಬ ಹೊಗೆಸೊಪ್ಪು ಸೇದಿಕೊಳ್ಳಿರೊ| ||2||
ಮೇಲು ಮಧ್ಯದಲ್ಲಿ ಧ್ವನಿ ಕೇಳಿರೊ
ಸಾಸಿರದಳದಲ್ಲಿ ಮನಿಯಾದರೊ
ಉಯ್ಯಾಲಿ ಕಟ್ಯಾದ ನೋಡಿರೊ
ಜುಯ್ಯಾಲಿ ಹೊಡಿತಾದ ಜಾಣಿಸಿರೊ| ||3||
ನಿಡವಂಚಿ ಎಂಬುದು ಹಳ್ಯಾದರೊ
ಶ್ರೀಗುರು ಸಿದ್ಧನೇ ದೇವರಾದರೊ
ಭದ್ರಿನಾಥಲಿಂಗ ತಾನಾದರೊ
ಶ್ರೀಗುರು ಪಾದಕ ಶರಣಾದರೊ| ||4||
ಸೊನ್ನಿ ಅಂದರೆ ಪೂಜಿ
ಪೂಜಿ ಅಂದರೆ ನಾದ
ನಾದ ಅಂದರೆ ಬ್ರಹ್ಮ
ಬ್ರಹ್ಮ ಅಂದರೆ ಬಯಲು
ಬಯಲು ತಿಳಿ ಅದರ ಮೂಲ
ಮುಕ್ತಿಯ ಕೀಲು ಹಿಡಿ ಅದರ ಕಾಲು| ||ಪ||
ಅಣುರೇಣು ಅರಗುಂಜಿ ಅರ್ಧಾ
ಅರ್ಧಾ ಗುಣಿಸಿ ಭಾಗಿಸಿ ಹೇಳು ಮರ್ದಾ
ಅರ್ಧಾ ಕೂದಲ ಎಳಿಕಿನ್ನ ಕಿರ್ದಾ
ಈ ನವಖಂಡ ಪೃಥ್ವಿಯೊಳು ತುಂಬಿ ತುಳಕಿರ್ದಾ
ಘನ ಲಿಂಗದೊಳು ಬೆರತು| ||1||
ಘನಕ್ಕೆ ಘನವಾಯಿತ್ತು ಶಂಕರ
ನಿಮ್ಮ ಪಾದವೇ ಕೈಲಾಸದ ಗಿರಿ ಶಿಖರಾ
ನಿಮ್ಮಪಾದದ ನೆಲಿ ಹೇಳಿದವರುಂಟೆ
ಕೇಳಿದವರುಂಟೆ
ಹೇಳೀದೇನೆಂದವರ ನಾಲಗಿ ಸೀಳಿತ್ತು
ಕೇಳಿದೇನೆಂದವರ ಕಿವಿ ಕಿವುಡ ಬಿದ್ದಿತು| ||2||
ಹಿಡಿದೇನೆಂದವರ ಕೈ ಮುರಿದಿತ್ತು
ಓಡೆನೆಂದವರ ಕಾಲು ಮುರಿದಿತ್ತು
ಇಂತಪ್ಪ ಸೊನ್ನಿ ಬೆಡಗಿನ ಕೀಲಗಾರ
ನಿಡವಂಚಿ ಗ್ರಾಮದ ದೊಡ್ಡ ಸರಕಾರ| ||3||
ಬಿಂದು ನಾದವ ನುಂಗಿ ನಾದ ಕಳೆಗಳ ನುಂಗಿ
ನಿನ್ನ ನುಂಗಿದ ಯೋಗಿ ಮುಕ್ತಿ ರಾಜ್ಯಕ್ಕೆ ಅರಸಾ
ಭದ್ರಿನಾಥನ ಬೆಡಗು ಬಿರುಸಾ ನುಡಿ ಸರಸಾ| ||4||
ಹಂ ಎಂಬುದು ದುಃಖದಾಯಕ
ಸೋಹಂ ಎಂಬುದು ಸುಖದಾಯಕ
ಹಂ ಸೋಹಂ ಎರಡು ತಿಳಿಯಬೇಕ ತನ್ನ
ಬಾರೇ ಎನ್ನ ರತನ| ||ಪ||
ಬಾರೇ ಎನ್ನ ರತನ ಬ್ರಹ್ಮಪುರಿ ವತನ
ಬ್ರಹ್ಮಪೂರಿದೊಳಗ ಬಂಗಾರ ಬಾಜಿ ಆಗತಾವ|
ಹಂ ಸೋಹಮ ಎರಡು ಅಕ್ಷರ ತಿಳಿಬೇಕೆ
ಸುಖದುಃಖ ಸಮನಾಗಿ ನಡಿಯಬೇಕೆ ತನ್ನ|
ತನು ಎಂಬ ತವರುಮನಿಗೆ ಮನ ಎಂಬ ಮಾವ ಬಂದ
ಜ್ಞಾನ ಎಂಬ ಗಂಡನ ಮದುವೆ ಮಾಡಿಕೊಟ್ಟಾರೆ ಎನ್ನ| ||1||
ಆಶೆನೆಂಬುವ ಅತ್ತಿ ಮಾಯಾನೆಂಬುವ ಮಾವಾ
ಕಾಮ ಕ್ರೋಧ ಭಾವ ಮೈದುನ ಕಾಡುತ್ತಾರೆ ಎನ್ನ| ||2||
ಅನುಕೂಲಾದ ಅತಿಗಿ ಮಗ ಸನುಕೂಲಾದ ಸೋದರಳಿಯ
ನಾ ಎಂಬೋ ನಾದಿನಿಗ ನಾಚಿಕಿಲ್ಲೆ ತನ್ನ| ||3||
ಗರ್ವ ಎಂಬೋ ಗೌಡಕಿ ಕುಟಿಲ ಎಂಬೋ ಕುಲಕರ್ಣಿ
ಮನ ಎಂಬೋ ಮಜಕುರಿಗಿ ಪುರುಸೊತ್ತಿಲ್ಲ ತನ್ನ| ||4||
ಧೈರ್ಯ ಎಂಬ ದೇಶಮುಖ ಅಂಜಿಕೆಂಬ ದೇಶಪಾಂಡೆ
ಮಾಯೆ ಎಂಬ ಮಾಸಲ್ದಾರ ಬರದು ಬರದು ಕೆಡಸ್ತಾನ| ||5||
ಜ್ಞಾನದ ಗಂಡನ ತಮ್ಮ ಭಕ್ತಿಲಿಂದೆ ಭಾವ ಬಂದ
ಯುಕ್ತಿಲಿಂದೆ ಈಶ್ವರನ ತೋರಿಸ್ಯಾರೆ ಎನ್ನ| ||6||
ಗುರುವಿಗೆ ಗುಣವಿಲ್ಲ ಲಿಂಗಕ್ಕೆ ನೆಲೆಯಿಲ್ಲ
ಸಂನ್ಯಾಸಿ ಜಂಗಮನ ಕುಲವಿಲ್ಲ ತನ್ನ| ||7||
ಸಾವಿರದೊಳಗಿನ ಸರದಾರ ನಾಲ್ಕರದೊಳಗಿನ ನಾಯಿಕ
ಅಷ್ಟರೊಳ ಶ್ರೇಷ್ಠನಾಗಿ ಎಲ್ಲರೊಳಗೆ ತಾನೇ ಆದ| ||8||
ನಿಡವಂಚೆಂಬ ಹಳ್ಯಾದ ಗುರುಶಂಕರಲಿಂಗನ ಸಲ್ಯಾದ
ಬರದು ಬರದು ಪಾಠ ಮಾಡಿ ಹೇಳುತಾರೆ ಎನ್ನಗ| ||9||
ಹಂಗ್ಯಾಕ ಹಿಂಗ ಬರ್ರಿ ನೆಟ್ಟಕ
ಕೂಡಲೂರ ಮ್ಯಾಗಿಂದ ನೆಟ್ಟಕಾ
ತ್ರಿಕೂಟದೊಳಗಿಂದ ನೆಟ್ಟಕಾ
ಬ್ರಹ್ಮರಂದ್ರ ಘಾಟಕಾ ಉತ್ತರ ಖಿಡಕಿ ಖೋಲಕ| ||ಪ||
ನಿಧಾನ ಮಾಡಿರಿ ನಿಜಕ
ಸಾಧನ ಮಾಡಿರಿ ನಾಜೂಕ
ಸೋಧನ ಮಾಡಿರಿ ಸೋಮಕ
ಓಂನಮಃಶಿವಾಯ ಪ್ರಾಣಾಮಕ| ||1||
ಒಂದೊಂದು ಪೈರ್ಯಾ ಮುಂದಕ
ಚಂದನ ಚೌಕಿ ಆಚಾಕ
ಗುಡ್ಡದ ನಡುವಿನ ಗುಮ್ಮಟಕಾ
ಮಹಾಲಿಂಗ ಸ್ವಾಮಿಯ ಮಠಕ| ||2||
ಮುಂದಾದ ಮಾರ್ಗ ಪಿಪಲೀಕ
ಕಠಿಣ ಹಾದಿ ಕಡಿತನಕ
ಕೂದುಲ ಎಳಿಕಿಂತ ಖುರಕಾ
ಅಲ್ಲಿಗಿ ಹ್ಯಾಂಗ ಹೋಗತಿರಿ ಒಳಿಯಕ| ||3||
ಜಪ್ಪಿಸಿ ಹೋಗಬೇಕು ಒಳಿಯಾಕ
ತಪ್ಪಿಸಿ ಬಿದ್ದರೆ ತೆಳಿಯಕ
ತಾರಹಚರಚಿ ನೋಡಿರಿ ವಳಿಯಕ
ಚಿತ್ತಚಿನ್ಮಯ ಆತ್ಮನ ಬೆಳಕ| ||4||
ಮೀನ ಮಾರ್ಗ ಮುಂದಕ
ಕತ್ತಲ ಕಾಳ ಬಹಳ ಅಂಧಕ
ಚವಕುಸ್ತ ಬರುವುದು ತಾರಕ
ಪಶ್ಚಿಮ ದ್ವಾರವು ಹೋಗಬೇಕ| ||5||
ಮುದ್ರಗೋಚರಿ ಆ ಲಕ್ಷಕ
ಚಿದ್ರೂಪ ಮಹಾಶಿವ ಕೈಲಾಸಕ
ಕೈಲಾಸಪತಿ ಭದ್ರಿನಾಥ ಪಾದಕ
ಸೇವಕಾಗುವದು ಕಡಿತನಕ| ||6||
ಹಿಂತಾ ಸನ್ಯಾಸಿ ಹೋರಿ ನಾ ಕಾಯಲಾರೆ
ಹಗ್ಗ ಹರಕೊಂಡು ಹೋಗುತದ
ಹಗ್ಗ ಹರಕೊಂಡು ಹಾರಯಾಡುತಾದ
ಮೂಗರಾಣಿ ಕಡಿಕೊಂಡು ಛಿಡದಾಡುತಾದ| ||ಪ||
ಹೋರಿ ಅದ ಬಹಳ ಕುಲನಾಶ
ಮಣಕಿನ ಕಂಡರೆ ಉಲ್ಲಾಸ
ಮಣಕಿನ ಕಂಡರೆ ಢರಕಿನೆ ಹೊಡಿತಾದ
ಎಣಕಿಯಿಲ್ಲದ ಗಣಕಿ ಏರಿ ನೋಡುತಾದ| ||1||
ಕಬ್ಬಿಣ ಸಂಕಳಿ ಕಡಿತಾದ
ಕಣ್ಣು ಕೆಂಪಗೆ ಮಾಡಿ ನೋಡುತದ
ಹಿಡಿಲಕ್ಕೆ ಹೋದರ ಹೊಡಿಲಕ ಬರುತಾದ
ಖೋಡಿ ಮುಳ್ಳ ಗೋಡಿ ಹಾರಿ ಹೋಗತದ| ||2||
ಈ ಗುಣ ಇದಕ್ಯಾಂವ ಕಲಸ್ಥಾನ
ಸಂತಿ ಸೂಳಿಯ ಮಗ ಇದ್ದಾನ
ಸಂತಿ ಸೂಳಿಯ ಮಗ ಭ್ರಾಂತಿ ಭಾಡೆನ ಮಗ
ಚಿತ್ತದೊಳಗೆ ಕುಂತ ಜಿಗದಾಡುತಾದ| ||3||
ಕೊಯ್ಯಿಲಾಕ ಕೊಡಬೇಕ ಅಂತೀನಿ
ಕಳ ಕಳ ಮನಸಿಗಿ ಮಾಡತೀನಿ
ಕಳ ಕಳ ಮಾಡತೀನಿ ಬಳ ಬಳ ಅಳತೀನಿ
ಉಳುಳು ಮಾರಿ ನೋಡಿ ನಗತೀನಿ| ||4||
ಹಿಂದಕ್ಕೆ ಹತ್ತು ಮುಂದಕ್ಕೆ ಹನ್ನೊಂದು
ಒಂದಕ್ಕೆ ಮೂರು ಮೂರಕ್ಕೆ ಆರು
ಆರಕ್ಕೆ ಹನ್ನೆರಡು ಒಂದರೊಳು ಕೂಡಿಸಿ
ಹಿಂದಕ್ಕೆ ತಿರುಗಿ ನೋಡಿದರೆ ಹಿರಿಯರ ಕುರುಹ
ಕಾಣ ಬಂದಿತು ಸದ್ಗುರುನಾಥ ಶಂಕರನೇ ಬಲ್ಲ| ||ಪ||
ಶಾಸನ ಮಾತೊಂದು ಕೇಳಿರಿ ನೀವೀಗ
ನಮ್ಮ ಈಶನ ಶರಣರು ಬರುವಾಗ
ದೇಶವೆಲ್ಲಾ ನಾಶವಾಗುವದು
ನರನಾರಿ ಆದಂಥಾ ಮಹಾಮಾಯಿ
ಅನಂತ ರೂಪ ಅನಂತ ಅವತಾರ ತೋರಿ ಅಡಗುವಳು| ||1||
ಶ್ರೀ ಮನ್ಮಾಹದೇವರಿಗೆ ದೇವರಾದಂತಾ
ಜಗದ ಕರ್ತನು ಮರ್ತ್ಯಕ್ಕೆ ಇಳಿದಾನು
ಮೂರು ಲೋಕವ ನುಂಗಿ ನೀರ ಕುಡಿದಳೊ ರಂಗಿ
ಭವರಂಗಿ ನವರಂಗಿ ಜಗ ಅಂತರಂಗಿ
ಘನಲಿಂಗ ಮಹಾಲಿಂಗ ನಿರಸಂಗಿ ನಿರಮಾಯಾ| ||2||
ಬಿಂದು ನಾದವ ನುಂಗಿ ನಾದ ಕಳೆಗಳ ನುಂಗಿ
ನಿಜ ನುಂಗಿದ ಯೋಗಿ ಮುಕ್ತಿ ರಾಜ್ಯಕ್ಕೆ ಅರಸಾ
ಭದ್ರಿನಾಥನ ಬೆಡಗು ಬಿರಸಾ ನುಡಿ ಸರಸಾ
ಸದ್ಗುರು ರಾಚೋಟೇಶ್ವರನ ಪಾದಕ್ಕೆ ಶಿರಸಾ
ಶಂಕರಲಿಂಗನ ನಾಮ ಸದಾ ಕಾಲದಲ್ಲಿ ಸ್ಮರಿಸಾ| ||3||
ಅಪರಾಧ ಕ್ಷಮೆ ಮಾಡೊ ಶರಣು ನಾ ನಿಮಗೆ
ನಂಬಿದೆ ನಿಮ್ಮ ಚರಣ ಮರಿಬ್ಯಾಡೊ ಎನಗೆ ||ಪ||
ಆರು ಕೊಳ್ಳುವ ದಾಟಿ ಮೂರು ಕೊಳ್ಳಿಳಿದೇನೊ
ಆರು ಮೂರೊಂಬತ್ತು ನವನಾಳಳಿದೇನೊ ||1||
ಸಪ್ತ ವ್ಯಸನವೆಂಬೊ ತೆನೆ ಹಾಲ ಕುಟ್ಟಿ
ಆಶೆ ವಿಷಯವೆಂಬ ಕಂಗಳ ಕಟ್ಟಿ ||2||
ಜಡ ದೇಹದಾಸೆ ನಾ ಇಟ್ಟಿಲ್ಲೊ ಗುರುವೆ
ಇಷ್ಟು ದಿವಸ ಇದಿಮಾಯಿ ಹಾಕಿದಳೊ ಮರುವೆ ||3||
ನಿಮ್ಮ ಹಸ್ತ ಕೃಪಲಿಂದೆ ಕಂಡೇನೊ ಭೃಕುಟ
ಮಲ್ಲಿಕಾರ್ಜುನ ಛಾಯಾ ಉನ್ಮಯಿ ಪೀಠ ||4||
ಇದು ಏನು ಬಂತೋ ವಿಪರೀತಕಾಲ
ಇಂದು ಮುನಿದನೊ ಶ್ರೀಹರಿ ನಮ್ಮ ಮ್ಯಾಲ ||ಪ||
ನಾನು ಮಾಡಿದೆ ಪಂಥ ಭಾಗ್ಯುಳ್ಳವಾದೆನಂತ
ಪ್ರಾರಬ್ಧ ಸಂಚೀತ-ಬೆಳಕೋತ ನಡೆತ ||1||
ಧನವು ಬೆಳೆವಂಥ ಹೊಲ ಏನೇನು ಬೆಳಿಲಿಲ್ಲ
ಹೊಟ್ಟಿಗೆ ತಂದ ಸಾಲ ತಿರಿಗಿ ಕುಡುವೋದಿಲ್ಲ ||2||
ಧೀರ ಸದ್ಗುರು ನಾಥ ಮಲ್ಲಿಕಾರ್ಜುನ ದಾತ
ಧೈರ್ಯ ಬಿಡುಬಾರದಂತ ಹೇಳ್ಯಾರೊ ಮಾತ ||3||
ಎಚ್ಚರ ಆಗಿರಿ ಇನ್ನಾ ತಿರಗಿ ಬಾರದು ನರಜನ್ಮ ಕಠಿಣಾ ||ಪ||
ಲಕ್ಷ ಚೌರ್ಯಯಿಸಿಯ ಫಿರಕಿ ತಿನ್ನುವದು ಗಿರಕಿ
ಮುಣಗದು ಭವ ನರಕಿ ತಿಳಿ ಮನಸಿನ ಹಚಿಕಿ
ಗುರು ಚರಣದಲ್ಲಿ ಮನಸಿಕಿ ನವಖಂಡದೆಹ ಹುಡಕಿ
ನೋಡಬೇಕೊ ಮನಸಕ್ಕಿ ದಶಖಂಡದ ಖಿಡಕಿ ||1||
ಮುರುವರಿ ಮಳಾ ತೊಟಾ ಬೆಲಿ ಜಿಗಿದು ನಾಲ್ಕು ಪಾಡಗಳಿಟಾ
ಮುರುಠಿ ಕಾಣಾ ಹಸನಿಟಾ ಆರು ಹೊಡೆದು ಬಿಡೊದು ಕಷ್ಟ
ಮಧ್ಯ ಭಾವಿಯಲ್ಲಿ ತ್ರಿಕೊಟ, ಕಂಡೆನೋ ನಾ ಬ್ರುಕೂಟ
ಬಿತ್ತಿ ಬೆಳೆದು ಮಾಡಿಟ್ಟ ಸವಿ ಮಾಡಿರಿ ಊಟ ||2||
ಬೈಲೊಳೊ ಬಾಗಶಾಯಿ ನಾನಾ ತರಹದ ಹೂ ಕಾಯಿ
ಬೇಕಾಗಿಲ್ಲೊ ನಿನ್ನ ಕೈ ಕಲ್ಪವೃಕ್ಷದ ಬಾವಿ
ಪಂಚಾ ಅಮುೃತ ನೀಸವಿ ಯೋಗಿಗಳಗಿ ತೆರದ ಬಾಯಿ
ಗುರು ಮಲ್ಲಿಕಾರ್ಜುನ ಮಿಠಾಯಿ ಚಿಂಚೊಳಿಯಲ್ಲಿ ಸ್ಥಾಯಿ ||3||
ಓಂ ನಮೊ ಶ್ರೀ ಗುರುರಾಯ ನಿಮ್ಮ ಭಜಿಸುವೆನ್ನಯ್ಯಾ ||ಪ||
ಚಿದ್ರೂಪ ಚಿದಘನ ತೇಜ
ಮುಲ ಮಂತ್ರ ಪಂಚಾಕ್ಷರಿ ಬೀಜ
ಆದಿ ಪ್ರಾಣ ಮಾಡಿ ನಿಲಿಸಿ ಉತ್ತಮ
ಉತ್ತಮ ಮಧ್ಯ ಸೋಮ ಝಂಕಾರಣ ನಾಮ
ಪ್ರಜಿಸುವೆನು ನಿತ್ಯ ನೇಮ
ನುಡಿವುವದೊ ಝಂ ಸೊಂ ಕಾರಣನಾಮ ||1||
ಚವದ ಭವನ ಮಧ್ಯ ಭಾಗ
ಏಕವಿಸ ಸ್ವರ್ಗದ ಮೇಲೆ ಅದರ ಪೀಠದ ಭಾಗ
ಏರಡು ಮಧ್ಯದಿ ಸುಸುಮ್ನ
ಸುಸಂದಿಲೆ ಊಲ್ಲಟಾ ಮಾರ್ಗದಿ ವಾಯು ಸುಸಮ್ನ
ನಿಲಸಿ ಜೊತ ಕೂಡಿ ಸಂಗಮ
ತ್ರಿಕುಟದಲ್ಲಿ ನೊಡೊ ಲಿಂಗನ ಮಹಿಮಾ ||2||
ಸಹಸ್ರ ದಳದ ನಿಮ್ಮ ವಾಸ
ಚಂದ್ರ ಸೂರ್ಯ ಬಾನು ತೇಜ ಪ್ರಕಾಶ
ಝಗಾಟಿ ಜಂಗನಾ ಭೇರಿ ಖಡ ಖಡ
ನಾದ ಬಡ ವಾಧ್ಯ ಘಡ ಘಡ ಘಡ
ರೂಪ ಹರಿ ಹರ ಮನ ಸ್ಥಿರನಾಮ
ಗುರು ಮಲ್ಲಿಕಾರ್ಜುನ ನಾಮ ಚಿಂಚೊಳಿ ನೇಮ ||3||
ಓಮನೆಂದು ಕುಟ್ಟನು ಬಾರೆ
ಸೋಮನೆಂದು ಬೀಸನು ಬಾರೆ
ಓಮ ಸೋಮ ಎರಡು ತಿಳಿಯಬೇಕೆ ನಾರಿ
ಹಾಕವ್ವ ಯಾರಿ ||ಪ||
ಓಮ ಸೋಮ ಎರಡು ಅಕ್ಷರ ತಿಳಿದರೆ
ಗುರು ಕೀಲಿ ಆವಾಗ ದೊರದತ್ತೆ ನಾರಿ ||1||
ಗುರುಕೀಲಿ ದೊರೆದರೆ ದುರ್ಗಣ ಅಳಿಬೇಕೆ
ಮಾಯ ಪದ ಪಂಚ ಸುಡಬೇಕೆ ನಾರಿ ||2||
ಪರಪಂಚೆಂಬ ಕಳವಿ ಪರಮಾರ್ಥೆಂಬ ಅಕ್ಕಿ
ಜ್ಞಾನದ ಒಣಕಿಲಿ ಕುಟ್ಟಬೇಕೆ ನಾರಿ ||3||
ಕಲ್ಪನೆಂಬ ಉಸುಕ ನಾಯ್ಡು ಸೂಕ್ಷುವೆಂಬ ಅಕ್ಕಿ ತೆಗೆದು
ನಿಜವೆಂಬ ನೀರ ಎಸರಿಡಬೇಕೆ ನಾರಿ ||4||
ಅಂಗವನ್ನು ಹದವ ಮಾಡಿ ಗಡಗಿ ತೂಕವನ್ನು ನೋಡಿ
ಮೂರು ಕಲ್ಲಿನ ಒಲಿ ಹುಡಬೇಕೆ ನಾರಿ ||5||
ಕಾಮಕ್ರೋಧವೆಂಬ ಕಿಚ್ಚು ದುರುಳ ಬುದ್ಧಿ ಹುಲ್ಲ ಹಚ್ಚು
ಗುರು ಮಂತ್ರ ಬೆಂಕಿಯ ಹಚ್ಚಬೇಕೆ ನಾರಿ ||6||
ಜಂಗಮಗ ಎಡೆಯ ಮಾಡಿ ಮಹಲಿಂಗಗ ನೌದಿ ತೋರಿ
ಗುರುಹಸ್ತ ಪರಸಾದ ಮುಗಿಯಬೇಕೆ ನಾರಿ ||7||
ಅನುಮಾನೆಂಬ ಅಡಕಿ ಒಡೆದು ಸದಗುರು ಪಾದ ಪಿಡಿದು
ಸತ್ವದಿಂದೆ ಸಂತರ ಸಂಗ ಮಾಡಬೇಕೆ ನಾರಿ ||8||
ದೇಶಕೆ ಚಿಂಚೋಳಿ ವಾಸ ಸಿದ್ಧನ ಬಳಿ
ಗುರು ಮಲ್ಲಿಕಾರ್ಜುನಗ ನೆನಿಯ ಬೇಕೆ ನಾರಿ ||9||
ಗುರವಿಗಿ ಶರಣ್ಹೋಗೊ ಮರುಳೆ | ನಿನ್ನ
ದೇಹದ ಅನುಕೂಲ ತಿಳಿಸುವ ಕೇಳ್
ವ್ಯರ್ಥ ಕಾಡುಬ್ಯಾಡೊ ಸುಳ್ಳೇ ||ಪ||
ಕಂಡ ದೇವರದು ಬೀಳುತಿ ಕಾಲ | ಗುರು
ನಿನ್ನಲ್ಲಿ ಇರುಲಾಕೆ ನಿನಗರುವಿಲ್ಲ
ಮಾ ತಾಡ್ಯದೇನೋ ಕಲ್ಲ ||1||
ತೀರ್ಥ ಯಾತ್ರಾ ಮಾಡುವ ಭ್ರಾಂತಿ ನಿನ್ನಗ | ತ್ರೀ
ಸಂಗಮ ನಿನ್ನಲ್ಲಿ ತ್ರಿವೇಣಿ ಗಂಗ
ಅಲ್ಲಿ ಮುಳುಗ್ಯಾಗೋ ಗುಂಗ ||2||
ತೀರ್ಥ ಅನುವಾದೆ ಜ್ಞಾನದ ಗುಂಡ | ನಮ್ಮ
ಧರೆಯೋಳು ಚಿಂಚೋಳಿ ಮಲ್ಲೇಶ ಗೂಡ
ಆತನ ಚರಣ ಕೊಂಡಾಡ ||3||
ಗುರುದಯ ಕಮಿ ಆದಂಗೈತಾ | ಎನ್ನ
ಪ್ರಾರಬ್ಧ ದೊಳಗಿಲ್ಲ ಟೇಕಣಿ ತೀರ್ಥ
ನಾಕುಂತ ಮೈ ಮರತಾ …
ಗುರು ದಯ ಕಮಿ ಆದಂಗೈತಾ ||ಪ||
ಗುರು ತೋರಿದ ಸೂಚದ ಗುರುತ | ಭ್ರಾಂತಿ
ಅಜ್ಞಾನ ಕಮಿ ಇದು ಬಲತ್ರಾಯ ಬಿತ್ತ
ನಾ ಕುಂತ ಮೈ ಮುರತಾ ||1||
ನಯನ ಅಂಗುಷ್ಠ ಏಕಾದಂಗೈತಾ | ನಯನ
ನಾಶೀಕ ಸಮೀಪಿದ್ದು ಭೇಟಿ ಇಲ್ಲ ಧೊಯಿತ
ನಾಕುಂತ ಮೈ ಮರತಾ ||2||
ದೇಶದೋಳು ಚಿಂಚೋಳಿ ಸಿಸ್ತ| ಗುರು-
ಮಲ್ಲಿಕಾರ್ಜುನ ದಯ ಪರಿಪೂರ್ಣ ಇತ್ತ-
ನಾ ಕುಂತ ಮೈ ಮರತಾ . . . ||3||
ಗುರುವಿನ ಗುರುತವ ತಿಳಿಯಬೇಕೆ ಗೆಳದಿ| ತಿಳಿ
ಬೀಸಾನು ಗೋಧಿ ||ಪ||
ಬೀಸಾನು ಗೋಧಿ ಹಸನಾಗಿ ಹಾದಿ
ಹಾದಿದೊಳಗೆ ಮೂರು ಬೀದಿ ಕಲತಾವ ಗೆಳದಿ ||ಅ.ಪ||
ನೀರಿನೋಳು ಕೊಡ ತುಂಬಿ ಮಾಡಿ ಇಟ್ಟಾರ ಸಿಂಬಿ
ಕೊಡ ಬಿಟ್ಟು ಸಿಂಬೀನೆ ಒಯ್ದಾರೆ ಗೆಳದಿ ||1||
ಸುತ್ತಮುತ್ತ ಆವಾರಗೋಡಿ ನಟ್ಟ ನಡುವೆ ದೇವರ ಗುಡಿ
ಗುಡಿಯ ಮುಂದ ದೇವರಿಗಿ ಕೊಯ್ದಾರೆ ಗೆಳದಿ ||2||
ಕೊಯ್ದ ಮಾಡ್ಯಾರ ಅಡಗಿ ಅಡಗ್ಯಾಗ್ಹಾಕ್ಯಾರ ಗಡಗಿ
ಅಡಗಿ ಬಿಟ್ಟು ಗಡಗೀನೆ ಉಂಡಾರೆ ಗೆಳದಿ ||3||
ಚಿಂಚೋಳಿ ಊರ ಚಂದ ಪಗಡಿ ಬಾಜಾರ ಮುಂದ
ಗುರುಮಲ್ಲಿಕಾರ್ಜುನಗ ನೆನಿಯ ಬೇಕೆ ಗೆಳದಿ ||4||
ಧೀರಾ ಶ್ರೀಗುರು ಮಹರಾಜ್ಯ ಬಾರೊ ಕರುಣದಲ್ಲಿ
ನೀನು ಬಾರೋ ಕರುಣದಲ್ಲಿ
ವಿಶಾನೇತ್ರ ಇಂಗನಲ ನೀ ದೋಶವಾಗಿರುವೆ
ಕುಸಿನಂತೆ ಜಗದೋಳಾಡಿ ಈನಾಗಿರುವೆ ||ಪ||
ಅಷ್ಟಮದ ಇಂಗೆಲನೆ ಸುಟ್ಟು ದಿಟ್ಟನಾಗಿರುವೆ
ದೃಷ್ಟಿ ಭ್ರಷ್ಟರನೆಲ್ಲರ ಕೊಂದಿ ಶ್ರೇಷ್ಟನಾಗಿರುವೆ ||1||
ಮೈಸಾಸುರನ ಮರದಾನವಾ ಮಾಡಿ ಮಹಿಮೆ ಘನ ಉಂಡೆ
ಸಂಜನರ ಶ್ರೀ ಜಡಿರಾಯ ಆಗಿ ಆರು ಮುರು ಸರಿ ಉಂಡೆ ||2||
ಧಿರಾಶ್ರೀ ಗುರು ಮಲ್ಲಿಕಾರ್ಜುನ ಮಹರಾಜ
ಜಗದಲ್ಲಿ ಚಿಂಚೋಳಿ ವಾಸ ಗುರುರಾಜ್ಯ ||3||
ನಾ ಮೂಢ ಎನಗೊಲಿಸಮ್ಮ | ಬ್ರಹ್ಮ
ಹರಿಹರಗೆ ಹಡದಂಥ ಜನನಿ ತಾಯಮ್ಮ ||ಪ||
ಆದಿ ಅನಾದಿಯ ಮನ್ನ | ನಿಜ
ರೂಪಕ್ಕೆ ರೂಪಾಗಿ ಮುನ್ನ |ನಿಜ
ಪ್ರಥಮದಲ್ಲಿ ಪಂಚಗುಣ | ಇದ
ರಂತೆ ತ್ರಿಮೂರ್ತಿ ಬ್ರಹ್ಮ ವಿಷ್ಣು ಶಿವನ ||1||
ಆಕಾರ ಮಾಡಿದಿ ರಚನ | ಸ್ವರ್ಗ
ಮರ್ತ್ಯ ಪಾತಾಳ ಮೂರು ಜಗಚಾದ ಭುವನ
ಇದರಂತೆ ಸೃಷ್ಟಿಯ ರಚನ | ಪಿಂಡ
ಬ್ರಹ್ಮಾಂಡ ಭುವನಕ್ಕೆ ಆದಿ ಸಂಪೂರ್ಣ ||2||
ಎಷ್ಟೆಂತ ಮಾಡಲಿ ಸುತ್ತಿನಾ | ಎನ್ನ
ಬಾಲನ ಅಡಿನುಡಿಗೆ ಆಗಿ ಪ್ರಸನ್ನ
ಉನ್ಮಾನಿ ಗಿರಿವಾಸ ಸ್ಥಾನ | ನಮ್ಮ
ಧರೆಯೋಳು ಚಿಂಚೋಳಿ ಮಲ್ಲಿಕಾರ್ಜುನ ||3||
ನೋಡಿರಿಕಿನ ಸೋಂಗ್ ಮೆರೆವಾಳೊ
ಕುಂತು ಹುಲಿಯ ಮ್ಯಾಗ ||ಪ||
ಮೂರು ಲೋಕ ಮುರದಾಕ್ಯಳೊ ಒಳಗ
ಆರು ಲೋಕ ನೋಡಿದಾಳೊ ಮ್ಯಾಗ್
ಆರು ಮೂರು ನುಗ್ಗಿದಾಳೊ ಒಮ್ಮಿಗ್
ಮತ್ತೆ ಅಂಭುವಳೊ ಎನ್ನ ಮುಗ ಮ್ಯಾಗಾ ||1||
ಕರಿಯ ಮಾರಿ ರಂಡಿ ಈಕಿ
ಒಳ್ಳೆ ಬಲ್ಲವರಿಗೆ ಮಿಂಡಿ
ಈಕಿನಲ್ಲಿ ತುಂಬಿತೊ ಬ್ರಹ್ಮನ ಬಂಡಿ
ಸತ್ಪುರುಷರಿಗೆ ತೋರಸ್ಯಾಳೊ ಗುಂಡಿ ||2||
ನಾಜುಕ್ಹಾಳೋ ಹೆಣ್ಣಾ ಈಕಿನಲ್ಲಿ
ಪಂಚ ರತ್ನದ ವರ್ಣಾ
ಈಕಿ ಹೋಗಿ ತುಂಬ್ಯಾಳೊ ಎಲ್ಲರ ಕಣ್ಣಾ
ಈಕಿನ ಮಿರಿ ಬೆಳಕ ಸೂರ್ಯನ ಕಿರಣಾ ||3||
ತೈಲ ನಿಲ್ಲ ಬತ್ತಿ | ದೀವಿಗೆ
ಹಚ್ಚಿದಾಳೊ ಜೊತ್ತಿ
ಧರಿಯೋಳು ಚಿಂಚೋಳಿ ಗುರು ಮಲ್ಲಿಕಾರ್ಜುನ ಸತಿ
ಗುರು ಪುತ್ರರಿಗೆ ಈಕಿನಿಂದೆ ಮುಕ್ತಿ ||4||
ವ್ಯರ್ಥ ದಿನಗಳಿಬ್ಯಾಡ |
ಸದ್ಗುರುವಿನವಿ ಚರಣ ಪಾದವ ಬಿಡುಬ್ಯಾಡ
ನೀ ನೆನಿ ನೆನಿ ಮೂಢ ||ಪ||
ಪಾಪ ಕರ್ಮ ವಿಷಯ ಲುಬ್ದನಾದಿ | ಪರ
ಸ್ತ್ರೀಯರ ಕಂಡು ಮೋಹಕೆ ಮರುಳಾದಿ
ನೀ ಕಂಡ್ಯೊ ಯಮಬಾಧಿ ||1||
ಮೊದಲೆ ದುಷ್ಟ ಅಷ್ಟವ ಗುಣ ಅಳಿದು | ಕಷ್ಟ
ಬಿಟ್ಟು ಶ್ರೇಷ್ಟಾದಂಥ ಮೂಲವ ತಿಳಿದು
ಸಂಕಲ್ಪವ ತೊಳೆದು ||2||
ಮಾಡೊ ಸಾಧನ ನರ ಜನ್ಮಕ ಬಂದು | ಪರ-
ಬ್ರಹ್ಮ ಗೂಡಿದಾನೊ ನಿನ್ನಲ್ಲಿ ಬಂದು
ನೀ ನೊಡೊ ಕಣ್ಣ ತೆರೆದು ||3||
ಇಡಾ ಪಿಂಗಳ ಸ್ವರ ದಾರಿ ಹಿಡಿ | ಮುಂದೆ
ಆನಂದ ಆದಿಯ ಬ್ರಹ್ಮದ್ವಾರ ನೋಡಿ
ಮಹಾಲಿಂಗನ ಕೂಡಿ ||4||
ಮುಂದೆ ಕಾಣ್ವಾದೊ ರವಿಚಂದ್ರ ಬಿಂಬ | ತೇಜ
ಪ್ರಕಾಶ ಬೆಳಕಿನೋಳು ಬ್ರಹ್ಮಾಂಡ ಶೋಭ
ಗುರು ಮಲ್ಲೇಶ ಶಂಭ ||5||
ಶರಣು ನಾ ಹೋಗಿದನೇ | ಸದ್ಗುರುವಿಗಿ
ಶರಣು ನಾ ಹೋಗಿದನೆ
ಜನ್ಮ ಮರಣ ದೂರ ಮೂಡಿದಂಥವನಿಗಿ ||ಪ||
ಭ್ರಾಂತಿಯ ಹರಿಸಿದನೇ | ಮನಸಿನ
ಚಿಂತನೆಯು ಬಿಡಿಸಿದವನೇ
ಸಂಚಿತ ನೀಗ ಮನ ನಿಶ್ಚಿಂತನಾಗುವ
ಯುಕ್ತಿಯ ತೋರಿದವನೇ ||1||
ಮೊಟ್ಟ ಮೊದಲ ಕಷ್ಟ | ಷಟಸ್ಥಲ
ತಿಳಿದಿಳಿದವ ಶ್ರೇಷ್ಠ
ಭ್ರುಕೂಟ ಮೇಲೊಂದು ತ್ರಿಕೋಟ ನೋಡಿದೆ
ಆನಂದದ ಆಟ ||2||
ಮ್ಯಾಲೆ ಬ್ರಹ್ಮನ ಪೀಠ | ನೋಡಿದವಗೆ
ಕಾಣುವದು ವೈಕುಂಠ
ಶಿಖರ ಶಿವಾಲಯ ಪ್ರಭುದೇವಾಲಯ
ಕಂಡೆನೊ ನಜರಿಟ್ಟ ||3||
ದೇಶದೋಳು ಚಿಂಚೋಳಿ | ಈಶಗುರು
ಮಲ್ಲಿಕಾರ್ಜುನ ಬಳಿ
ಸಜ್ಜನ ಜನ ಆನಂದ ಮನಸಿನ
ಹಾಡಿನ ರುಚಿ ಕೇಳಿ ||4||
ಸ್ವಾಮಿ ಸದ್ಗುರು ಮಹಾದೇವಾ ನಮಿಸುವೆ
ನಿಮ್ಮಗೆ ನಮಿಸುವೆ ನಿತ್ಯ ನಮಿಸುವೆ ||ಪ||
ಮುರು ಮ್ಯಾಲ ಏಂಟ ಏಳು ಆರು ಸೇರುವರು ಯಮ್ಮಗೆ
ಎರಡು ಒಂದು ನಾಲ್ಕು ಐದು ಐದು ತೋರಿಸುವನ್ನೊ ಒಳಗೆ ||1||
ಗಂಗಾ ಯಮನಳೊ ಮಧ್ಯ ಸಮನುಂಟು ಸಂಗಮ ಅಗ್ನಿ ಒಳಗೆ
ರಂಗಾ ಮಂಟಪಾ ಸಹಸ್ರದೋಳೊಲಿಂಗ ಮುರುತಿಗೆ ||2||
ಸುಕ್ಷ್ಮ ಆದಿ ಅನಾಹುತ ಬಾಜು ಅಕ್ಷಯ ಗುಡಿಯದೊಳಗೆ,
ಸಾಕ್ಷಿ ಶ್ರೀಗುರು ಮಲ್ಲಿಕಾರ್ಜುನ ಮೋಕ್ಷದಾಂತನಿಗೆ ||3||
ಸರ್ವವೇಶಮ ಗುರು ಭಾವ ಭರಣ
ಶರಣಾಗ್ತಶಿರ ಇಡುವೆ ತಮ್ಮ ಚರಣ ||ಪ||
ಮದ ಮಚ್ಚರ ಇತ್ಯಿಂದಿ ಐಶ್ಚರ್ಯ ಸಮನ ಹೃದಯಾದಿ
ಬೋಧ ಸುಜ್ಞಾನ ನಯಾನದಿ ನಾಲ್ಕು ಆರು ವಶಾದ್ಯಾದಿ
ಸೇಗಣ ಅರಿಯಲಾರದು ಸೋಡಷಗಣರ ಪೂರ್ಣ ಆಗದು ಸ್ಮರಣ ||1||
ದ್ವಿದಳಾದಿ ದಳಾ ಮಧ್ಯ ಗಂಗಾದಿ ಯಮುನಾ
ನಡುಗರ್ಭ ಯೋಗಾಧಿ ಕಲಿಯುವ ಸುಸ್ಮನಾ
ಆಗುವೆ ಸಂಗಮ್ಮಾ ತ್ರಿವೇಣಿನಾ ಸತ್ಪುರುಷರು ಸ್ಪರ್ಶ ಮಾಡುವ ಸ್ಥಾನ ||2||
ಬ್ರಹ್ಮರಂಧ್ರ ಪೂರಾ ಚಂಕರ ಜೊತಿಯ ಪಾರಾ
ರವಿ ಕೂಡಿ ದ್ಪಿಪ್ತಿಯ ತೊರುವ ಪೈಪರಾ
ದಳ ಸಹಸ್ರ ಕಮಲದೋಳೊ ಕಿರಣಾ ಗುರು ಮಲ್ಲಿಕಾರ್ಜುನ ||3||
ಹಿರಾಗಡತಿ ನೀವು ಆಗಿ ಬಂದಿರಿ ಗೊಲಿ ಆಡದಕ
ಜರ ಸಂಭಾಳಸೊ ನಮ್ಮಾ ಗೊಲಿಯ ಚೋಟು ಬಂತೊ ತೆಲಿಯಮ್ಯಾಕ ||ಪ||
ಎಕ್ಕಲ ಖಜಾ ಎ ಓಂಕಾರ ಗೋಲಿ ಎಲ್ಲಿ ಇತ್ತೊ
ದುಡ್ಡಿಗಿ ರಾಜಾ ದುಡ ದುಡದು ಇಲ್ಲಗಿ ಹ್ಯಾಂಗ ಬಂತೊ
ತಿರಣಂ ಭೋಜ ತೀನ ತಾಳದಲಿ ಗೋಲಿ ತಿರಗುತ್ತಿತ್ತೊ
ಚಾರಿಗಿ ಚಂಡು ಚಾರ ಖಾನದಲಿ ಮೋಜ ಮಾಡುತಿತ್ತೊ
ಪಾಚಗಿಪಚಿಡು ಸ್ಪಷ್ಟ ಹೇಳತಿನಿ ಒಚಿದೆ ಫಾಜಕ ಇತ್ತೊ ||1||
ಸೀಮನ ದಂಡು ಸತ್ರಾ ಮಾತು ಹೇಳಭ್ಯಾಡ ಸುದ್ಧಿ
ಸಾತ ಪಟಾಲ ಸಪ್ತಪಾತಳ ಸ್ವರ್ಗಲೋಕ ತಂದಿ
ಆಟಪ ನಲ್ಲಿ ಆಟೊ ಪ್ರಹರ ಕಾಯುತ್ತಿತ್ತು ಮಂದಿ
ನಮ್ಮನ ಗೊಟ ನವಖಂಡ ಪ್ಲಥ್ವಿ ತಿರಗುತಿತ್ತು ನಂದಿ
ದಶಕಿ ಚೋಟು ದಶವತಾರ ಒಟ್ಟು ಎಷ್ಟು ಮಂದಿ ||2||
ಓ ಓ ನೆಂಬದು ಓದಿ ಹೇಳಿದ ವಿದ್ಯದ ಗುರು ನಮ್ಮ
ಹಲಗಿಯ ಪ್ರಜೆ ಮಾಡಿ ಹೇಳಿ ಕಲಿಸಿದ ಓ ನಾಮ ||3||
ಎಕ್ಕಲ ಖಜಾ ದಾವತಕೊಂಡು ಬಂದನೋ ಜನ್ಮಾಕ
ದುಡ್ಡಿಗಿ ರಾಜಾ ಆಕರಾಯಿತೊ ಕಾಯಪೂರ ಕೊಡುಲಾಕ
ತಿರಣಂಭೊಜ ತ್ರಿಹುಣಾಕಾರ ಕಲತವೋ ತ್ರಿಕೂಟಕ
ಚಾರಿಗಿ ಚಂಡು ನಾಲ್ಕು ದೇಹ ತಿರುಗಿ ನೊಡೊ ಅದಕ
ಪಾಚಾಗಿ ಪಚಿಡು ಪಂಚತತ್ವದ ಬೆಳಕ ಬಿತ್ತೊ ಮ್ಯಾಕ
ಸೀಮನ ದಂಡು ಷಡ್ವೀಕಾರ ಮಡಚ್ಯಾವೊ ಹಿಂದಕ ||4||
ಸಾತಪಟಾಲ ಸಪ್ತ ಪಾತಾಳ ವ್ಯಸನಗಳು ಎರಕ
ಆಟಪನಲ್ಲಿ ಅಷ್ಟಮದಗಳು ಕೂಡಿ ಬಿದ್ದವ ನೆಲಕ
ನಮ್ಮನ ಟಿಲ್ಲಿ ನವ ದರ್ವಾಜ ಮುಚ್ಚಿ ನೋಡ ಒಳಕ
ದಶಕಿ ಚೋಟು ಹ್ರೆಡಿಯೊ ನಿಶಾನಿ ಖಿಡಕಿ ಮುಂದೆ ಮ್ಯಾಕ
ಗುರು ಮಲ್ಲಿಕಾರ್ಜುನ ನಾಮಸ್ಮರಣೆ ರಾತ್ರಿ ಹಗಲು ಬೇಕ
ಗುರು ಪುತ್ರಾದವ ಗುರ್ತ ತಿಳಿತನ ಅನುಭಾವದ ತರಕ ||5||
ಆತ್ಮನ ಕಾಣದ ಮನುಜ ನೀನು
ನಿನ್ನೊಳು ಶಿವಹಾನ ತಿಳಿ ತಿಳಿ ||ಪ||
ಭ್ರಾಂತಿ ಬುದ್ಧಿ ನೀ ಅಳಿ ಅಳಿ
ಶಾಂತರೋಳು ಸದಾ ಉಳಿ ಉಳಿ ||ಅ.ಪ.||
ಬಾಲ ಪ್ರಾಯ ಮುಪ್ಪಾಗುವ ದೇಹದ
ಮೂಲ ತತ್ವ ನೀ ತಿಳಿ ತಿಳಿ
ಕಾಲನ ಕೈಯಲ್ಲಿ ಸಿಲುಕಿ ನೀನು
ಗೋಲ ತಿರಗುವದು ಹಳಿ ಹಳಿ ||1||
ಶ್ರೋತ್ರ ತ್ವಕ್ಕು ನೇತ್ರ ರಸನಿ
ನಾಶಿಕಾ ದೈಂದ್ರಿಗಳು
ಶಬ್ದ ಸ್ಪರ್ಶ ರೂಪ ರಸ ಗಂಧ
ವಿಷಯಕ್ಕೆ ಸಾಕ್ಷಿ ನೀನೆ ತಿಳಿ ||2||
ಮಾಯಾ ಮೋಹದ ಅಯವು ತಿಳಿದು
ಸಾಯಾಸದೊಳಗಿಂದ ಉಳಿ ಉಳಿ
ಕಾಯರಹಿತ ನಮ್ಮ ಗುರುಲಿಂಗ ಜಂಗಮ
ಅವರಲ್ಲಿ ಪರಶಿವ ಖಳಿ ಖಳಿ ||3||
ಆರು ತನಗೇನಂದರೇನೋ ಆಗೊ ಸಮಾಧಾನ ||ಪ||
ಚೋರತನದಿ ಮಾರಹರನ ಸಾರ ತಾನು ತಿಳದಿದಮ್ಯಾಲೆ ||ಅ.ಪ||
ದೀನನಾದ ಪುರುಷನಿಗೆ| ಮಾನದಭಿಮಾನೇನೋ
ಶ್ವಾನ ಶಬ್ದವು ಪಾನಗೈಯದ ಆನೆಯಂತೆ ತಾನು ||1||
ಹಾಲಿನೋಳು ತುಪ್ಪದಂತೆ| ಗಪ್ಪನಾಗೊ ನೀನು
ಮತ್ತೆ ತುಪ್ಪ ಹಾಲೊಳಗೆರೆದರೆ ಅಪ್ಪದಂತೆ ತಾನು ||2||
ಸಿಂಪಿಯೋಳು ಮುತ್ತು ಪುಟ್ಟಿದಂತೆ| ಗಟ್ಟಿಯಾಗೊ ನೀನು
ಮತ್ತೆ ಮುತ್ತು ಸಿಂಪಿಯೋಳಿಟ್ಟರೆ ಅಪ್ಪದಂತೆ ತಾನು ||3||
ದೇಶದೋಳು ವಾಸವಾದ| ಅಲ್ದಿ ಈಶನನ್ನು
ಧ್ಯಾಸವಿಟ್ಟು ವಿಷಯವ ಸುಟ್ಟು ಪಾದ ತಾನು ಮುಟ್ಟಿದ ಮ್ಯಾಲೆ ||4||
ಆತ್ಮಸಾಕ್ಷಿ ಆದವರಿಗೆ ಮತ್ತೆ ಭವ ಬಾಧೆಯಂಟೆ
ಮಿಥ್ಯವು ಅಳಿದವರಿಗೆ ಸತ್ಯದ ಅಭಾವವುಂಟೆ ||ಪ||
ಕತ್ತಲೆ ಬೆಳಕಿನಿಂದ| ಮತ್ತೆ ಆಕಾಶ ಅಳಕುವದೇನೋ
ತತ್ವಸಾಕ್ಷಿ ಆಗಿದ ಯೋಗಿ
ಕುಂತಿದರೇನು ನಿಂತಿದರೇನು ||1||
ನೀರಿನೊಳಗೆ ನೊರೆತೆರೆ ತೋರಿ ಅಡಗಿದಂತೆ
ಗುರುಲಿಂಗ ಸ್ವಾಮಿ ಶಿಷ್ಯರಿಗೆ
ಯೋಗಿ ಯಂದರೇನು? ಭೋಗಿಯಂದರೇನು? ||2||
ಆದಿ ಅನಾದಿ ಜಗಭರಿತ
ಮಹಾದೇವ ಮಾಹೇಶ್ವರ ದಾತ ||ಪ||
ಮೊದಲಿಗೆ ಶೂನ್ಯದೋಳು ಇದ್ದಿ
ಮಧ್ಯದಿ ನೀರೊಳು ಬಂದಿ
ಸದ್ಯ ಓಂಕಾರದೋಳು ಬೆರೆದಿ
ಮಹಾದೇವ ಮಾಹೇಶ್ವರ ದಾತ ||1||
ಆಸ್ತಿ ಭಾತಿ ಪ್ರಿಯ ನಾಮ ರೂಪ
ಜಾಸ್ತಿ ಕಡಿಮೆ ಇಲ್ಲ ನಿನ್ನ ಮಾಪ
ಸ್ತುತಿ ಇಲ್ಲ ದೇವ ತಿಳಿದವಗಪ್ಪ
ಮಹಾದೇವ ಮಾಹೇಶ್ವರ ದಾತ ||2||
ದೇಶ ಕಧಿಕ ಗುರುಲಿಂಗ ಜಂಗಮ
ನಿರ್ಗುಣ ನಿರ್ವಿಕಾರ ಬ್ರಹ್ಮ
ನಿಮ್ಮ ಶರಣರಿಗಿ ನಾಮದ ಪ್ರೇಮ
ಮಹಾದೇವ ಮಾಹೇಶ್ವರ ದಾತ ||3||
ಆಸೆ ಎಂಬ ಬೀಸುವ ಕಲ್ಲಿಗೇಸು ದಿನ ಬೀಸಲೆಮ್ಮ ||ಪ||
ಹೇಸಿತ್ತು ಎನ್ನ ಮನವು ಈಶನ ಧ್ಯಾಸಲಿಂದೆ ||ಅ.ಪ||
ಅರುವನೆಂಬ ಮೊರವ ಹಿಡಿದು
ಗರುವನೆಂಬ ಒರಳ ಒನಿದು
ಕ್ರೋಧಾದಿ ಧ್ಯಾನದ ಬೀಸಿ
ಗುರವೀನ ನೆನದೇ ನಮ್ಮ
ಬುದ್ಧಿ ವಂತಿ ಯಾದ ಮ್ಯಾಲ
ಬುಧವಾರ ಬೀಸಿ ತೆಗೆದೆ
ಮಧುರ ಅಮೃತ ಮಾಡಿ
ಮದನಳಿದೆಗೆಳದೆಮ್ಮ ||1||
ಮಾನ ಹೀನ ಜನರಿಗೆ ಅಂಜಿ
ಮೌನದಿಂದೆ ಬೀಸಲು ಕುಂತೆ
ಶ್ವಾನ ಸೂಕರಾದಿ ಜನ್ಮ
ನನಗಿಲ್ಲೇ ಗೆಳದೆಮ್ಮ ||2||
ತುತ್ತು ಮಾಡಿ ಉಣಿಸೇನೆಂದು
ಮತ್ತೆ ಅಲ್ದಿ ಗ್ರಾಮಕೆ ಹೋದೆ
ಹತ್ಯನಗಲಿ ಗುರು ಎನಗೆ
ಎತ್ತಿ ಮುದ್ದಾಡಿದರಮ್ಮ ||3||
ಆತ್ಮದ ಅನುಭವ ತಿಳಿ ಮಾತೆ ಗುಣವಂತೆ
ಮೋಹಕ್ಕೆ ಮನ ಸೋತೆ ||ಪ||
ಪಂಚತತ್ವ ಎಂಬುವ ದೇಹ ಮಾಡಿಟ್ಟ ಮಹಾರಾಯ
ನಿಜವಿಲ್ಲ ಅಸ್ಥಿರ ದೇಹ ಕಣ್ಣ ಮುಂದೆ ಕಾಣ್ವದು ಛಾಯಾ ||1||
ಪ್ರಾಯಂಬೊ ಮೋಹದ ಮಾಯಾ ಮಾಡಬ್ಯಾಡ ಅನ್ಯಾಯ
ಕನ್ನಡಿಯೊಳಗಿನ ದ್ರವ್ಯಾ ಕಂಡು ನೀ ತೆರಿಬ್ಯಾಡ ಬಾಯಾ
ಮನಸಿಗಿ ಸೋತಿ ಮರುಳಾಗಿ ಕುಂತಿ ||2||
ಮಲ ಮಾತ್ರ ಮಾಯದ ಹೊಲಸ ಅಲ್ಲಿದ್ದಿ ಏಸು ದಿವಸ
ಇದ್ದಿದಿಲ್ಲ ಇತ್ತಿನ ಧ್ಯಾಸ ಬಂದಿಖ್ಯಾನಗ ಆ ಕೂಸ ||3||
ಮಾಡುತ್ತಿತ್ತು ಈಶನ ಧ್ಯಾಸ ಹೇಳಲಾರೆ ವನವಾಸ
ತುಂಬಿತ್ತು ನವಮಾಸ ಪಂಚತತ್ವ ದೇಹವು ಸೋಸ
ಅಲ್ಲಿ ಕಾಂತಿ ಗೊತ್ತಿಲೆ ಕುಂತಿ ||4||
ಆತ್ಮ ರೂಪನಿಗೆ ಅಖಂಡ ವ್ಯಾಪಕಾದವಗೆ
ನಿತ್ಯದಿ ಆರತಿ ಎತ್ತಿ ಬೆಳಗಿರಿ ಮುಕ್ತಿದಾಯಕಗೆ ||ಪ||
ಅಂಗಜ ಭಂಗನಿಗೆ ಮಾಯಾ ಸಂಗರಹಿತನಿಗೆ
ಭೃಂಗ ಭಾವವುಳ್ಳ ಸುಜನರ ಅಂಗ
ಸಂಗದಿ ಮೆರೆಯುವಗೆ ||1||
ತೀತಾ ವಸ್ತುವಿಗೆ ತ್ರಿಮಲ ರಹಿತನಾದವಗೆ
ಅಖಿಳ ತತ್ವಗಳ ನಿಖಿಳವು ತಿಳಿಸಿದ
ಅಕಲಂಕ ಬ್ರಹ್ಮನಿಗೆ ||2||
ಮುಮುಕ್ಷು ಜನಗಳಿಗೆ ಭವಗಳ ನಾಶ ಮಾಡುವಗೆ
ಬ್ಯಾಲಹಳ್ಳಿಯಲಿ ವಾಸ ಮಾಡಿದ
ಗುರುಲಿಂಗ ಸ್ವಾಮಿಗೆ ||3||
ಊರ ಬಿಡಬೇಕರೋ ತಮ್ಮದೇರೆ
ಊರ ಬಿಡಬೇಕರೋ ||ಪ||
ಊರ ಬಿಡಬೇಕೊ ಬೀಮಾರಿಗಂಜಿ
ನಾರ ಇಲಿಗಳು ಜೋರಾಗಿ ಬಿದ್ದವ ||ಅ.ಪ||
ಎಂಟು ಹೆಗ್ಗಣ ಗಂಟು ಬಿದ್ದ
ಕೆದರುತಾವೋಮಣ್ಣ
ಥುಂಟತನಕ ಬಿದ್ದು ಗಂಟ ಕೆದರುತಾವ
ಭಂಟನಾಗಿ ತಾ ತಿರುಗಲಿ ಬ್ಯಾಡ ||1||
ಆರು ಇಲಿಗಳು ಅವು ತನ್ನ
ಇರುಬೇಕೊ ಆರಿನೊಳು
ಸಾರ ತಿಳಿದು ತಾ ಸಾಕಿರ ಬೇಕೊ
ಸರ್ವ ಸಾಕ್ಷಿತಾ ನಾಗಿರ ಬೇಕೊ ||2||
ಧರಿಯೊಳಗೆ ನಮ್ಮ ಅಲ್ದಿಯ
ಗುರುಲಿಂಗ ಜಂಗಮ ಧರಿಯೊಳಗೆ
ಪರಮ ಪಂಚಾಕ್ಷರಿ ಮಂತ್ರ ಪ್ರಣಮ
ಕರಬಸಪ್ಪಗೆ ಹೇಳ್ಯಾರೊ ತಮ್ಮ ||3||
ಎಲ್ಲಾರು ಮಾಡುವದು ಹೊಟ್ಟಿಗಾಗಿ
ಹೊಟ್ಟಿಗಾಗಿ ಗೇಣ್ ಬಟ್ಟಿಗಾಗಿ ತುತ್ತು ರೊಟ್ಟಿಗಾಗಿ ||ಪ||
ವೇದ ಆಗಮ ಪುರಾಣ ಶಾಸ್ತ್ರ
ಓದ್ಯೋದಿ ಹೇಳುವದು ಹೊಟ್ಟಿಗಾಗಿ
ಹಾದಿ ಕಾಣದೆ ಇವರು ಗಾದಿ ಮಾತುಗಳಾಡಿ
ವಾದ ಹಾಕುವದು ಹೊಟ್ಟಿಗಾಗಿ ||1||
ತನ್ನ ತಾನರಿಯದೆ ಅನ್ಯರನು ನಿಂದಿಸಿ
ಮನ್ನಣೆ ಬೇಡುವದು ಹೊಟ್ಟಿಗಾಗಿ
ತನುವ ತಾನೆಂಬುವ ಹೀನತ್ವ ನೀಗದೆ
ಘನ ಮಹಾತ್ಮನಾಗುವದು ಹೊಟ್ಟಿಗಾಗಿ ||2||
ಹಳ್ಳದ ದಡೆಯಲ್ಲಿ ಕಲ್ಲದೋಣಿ ಹಿಡಕೊಂಡು
ಕಳ್ಳತನ ಮಾಡುವದು ಹೊಟ್ಟಿಗಾಗಿ
ಕಳ್ಳತನ ಗೆಳೆತನ ಸುಳ್ಳುಹಾದಿ ಹಿಡಿತಾನ
ಒಳ್ಳೆವನಿದ್ದೆ ಅಂತಾನ ಹೊಟ್ಟಿಗಾಗಿ ||3||
ಧರಿಯೋಳು ಅಲ್ದಿವಾಸ ಗುರುಲಿಂಗ ಸರ್ವೇಶ
ಅರಿಯದೆ ಮಾಡುವದು ಹೊಟ್ಟಿಗಾಗಿ
ಅರಿತಿದ್ದು ಮರೆತಿದ್ದು ಗುರು ಪಾದಕರ್ಪಿಸಿ
ಕರಿಬಸವ ತಿರುಗುವದು ಹೊಟ್ಟಿಗಾಗಿ ||4||
ಎಂಥ ಗುರುರಾಯ ಎನಗೆ ದೊರೆದ ||ಪ||
ಪಂತಗಾರ ಇವನೆ ಕಂತುಹರ ಮಂತ್ರವನ್ನು
ಅಂತರಂಗದಿ ಪೇಳಿದಾನೇ ||ಅ.ಪ||
ಆರು ಗುಣ ಅಳಿಸಿದನೆ ಮೂರು ಗುಣ ತಿಳಿಸಿದನೆ
ಅಷ್ಟ ಮದಗಳನ್ನು ಸುಟ್ಟು ಅಂಗಕ್ಕೆ ತಾ ಧರಿಸಿದನೆ ||1||
ದಶ ಇಂದ್ರಿದೊಳು ಒಯ್ದು ಧರ್ಮಿಂದ್ರಿ ಪೇಳಿದನೆ
ಕಮೇಂದ್ರಿ ಕಡ್ಯಾಕ ನೂಕಿ ಕರ್ಮವನ್ನು ಕಳದಿದನೆ ||2||
ದೇಶದೋಳು ವಾಸವಾದ ಅಲ್ದಿಪುರ ಈಶನೆ
ಧ್ಯಾಸ ನಾನು ಮರಿಯಲಾರೆ ಮೂಲಮಂತ್ರ ಜಪಿಸಿದನೇ ||3||
ಓಂ ನಮಃ ಶಿವಾಯೆನುಮನ
ಓಂ ನಮಃ ಶಿವಾಯೆನು ಮನ ||ಪ||
ಅಂಗಕ್ಕೆ ಲಿಂಗವ ಧರಿಸಿ ಮಂಗನಾಂಗ ಹೋಗಬ್ಯಾಡ
ಮಂಗ ಮನಸು ಗುಂಗಾಗುವದೊ
ಅಂಗಾವೇ ಲಿಂಗವೆಂದು-ಸಂಗಾ ನೀ ಮಾಡಮನ ||1||
ಕಂತುಹರನ ಧ್ಯಾನ ಸಂತೋಷದಿಂದೆ ನೆನಿ
ಚಿಂತಿ ಪರಿಹಾರಾಗುವದೊ
ಕುಂತರ ನಿಂತರ ಮಂತರ ನೆನಿಮನ ||2||
ಆಸೆಯು ಹೋಗದೆ ರೋಷವು ನೀಗದೆ
ಮೋಸದಿ ಮೋಹದೋಳಾಡುವದೊ
ಖಾಸ ಪಂಚಾಕ್ಷರಿ ಧ್ಯಾಸ ನೀ ಮಾಡ ಮನ ||3||
ಮರವೆಯ ಸಂಸಾರ ವಿಪರೀತವೆಂದು ತಿಳಿ
ಸಂಪತ್ ಷಡಾಕ್ಷರಿ ನೆನಿಕಂಡ್ಯಾ
ಸತ್ಯದ ಗುರುಮನಿ ವ್ಯರ್ಥದ ಜನ್ಮ ಮರಣ ||4||
ದೇಶದೊಳಗೆ ನಮ್ಮ ವಾಸುಳ್ಳಲ್ದಿಯ ಗ್ರಾಮ
ಈಶ ಗುರು ಲಿಂಗ ಜಂಗಮ
ಆತನ ದಾಸನಾಗಿ ಸೋಸಿ ನೀ ನೋಡಮನ ||5||
ಕುಲವಾವುದು ಹೇಳಲಿ ಅಣ್ಣಾ
ಕುಲವಿಲ್ಲದವನೊಡಗೂಡಿ ಉಂಬುವೆನಣ್ಣಾ ||ಪ||
ಹಿಂದಿನ ಕರ್ಮದಿಂದೆ ಹೊಲೆಯೊಳು ಬಂದೆ
ಮರೆತು ಅನಂತ ಜನ್ಮ ತಿರುತಿರುಗಿ ನೊಂದೆ ||1||
ಆಸೆನಳಿದಲ್ಲದೆ ಅಲ್ದಿಗೆ ನಾ ಬಂದೆ
ಈಶ ಗುರುಲಿಂಗಯ್ಯ ಖಾಸ ಎನಗೆ ತಂದೆ ||2||
ಕರ್ಪೂರಾರತಿ ಬೆಳಗಿರೆ ಗುರುಲಿಂಗ ದೇವಸ್ವಾಮಿಗೆ ||ಪ||
ಕಾಯಪೂರ ಕಠಿಣವೆಂದು
ಕಡಿಯ ಧರಿಸಿದ ಯೋಗಿಗೆ
ಆರು ಹರಿಸಿದ ಐದು ಚರಿಸಿದ
ಮೂರು ಬೆರಸಿದ ದೇವಗೆ ||1||
ಆರು ಗುಣಗಳ ದೂರ ಮಾಡಿದ
ಮೀರಿದುನ್ಮನಿ ದಾರಿ ತೋರಿದ
ಅಷ್ಟ ಮದಗಳ ನಷ್ಟ ಮಾಡಿದ
ಹತ್ತು ಇಂದ್ರಿಯ ಗೊತ್ತಿಗ್ಹಚ್ಚಿದ ದೇವಗೆ ||2||
ಅಂಗ ಎಂಬ ಅಲ್ದಿ ಒಂದ
ಗುರುಲಿಂಗ ಎನಗೆ ದೊರೆದ
ಸರ್ವರೋಳು ತಾನೆ ಬೆರೆದ
ವಿಶ್ವ ಧರ್ಮದ ಬಿರುದ ತೋರಿದ ದೇವಗೆ ||3||
ಗುರುವಿನ ಮಹಿಮವು ಬ್ಯಾರಾ
ಬೋಧಿಸಿ ಮಾಡಿದ ಉದ್ಧಾರಾ ||ಪ||
ನಾ ದೇಹ ಎಂಬುದು ಮೊದಲಿತ್ತು ಮರವು
ನೀನೇ ಬ್ರಹ್ಮೆಂದು ತೋರಿದಿ ಅರವು
ಬ್ರಹ್ಮಾಸ್ಮೀ ಅಕ್ಷೇರಾ ||1||
ತಮಗುಣ ಎಂಬುದು ಅಹಂಕಾರ ಮೂಲ
ಮಮಕಾರೆಂಬುದು ಅಜ್ಞಾನ ಮಾಲ
ಹರಿದು ಹೋಯಿತು ಅಹಂಕಾರ ||2||
ರಜಗುಣ ಸಂಗ ಮಾಡಿತು ಮಂಗ
ಮಜ ಮಾಡಿ ಎನಗೆ ಹಿಡಿಸಿತು ಘುಂಗ
ಗೋಜ ಕಡಿಸಿದ ಗುರು ಧೀರಾ ||3||
ಸತ್ವದಿ ತತ್ವದ ವಿಚಾರ ಮಾಡೊ
ನಿತ್ಯದಿ ನಿರ್ಗುಣ ನಿಜ ಕೊಂಡಾಡೊ
ಮುತ್ಯ ಅಲ್ದಿಯ ಗುರು ಧೀರಾ ||4||
ಗುರಕೀಲ ಮಾತು ಗುರುತಿಟ್ಟು ಪೇಳಿರಿ ಗುರುವೆ
ಬಾಯಿ ಮಾತಲ್ಲಪ್ಪ ಸುಮ್ಮನೇ
ಅಜ್ಞಾನಿ ಜನರೀಗಿ ತಿಳಿಗೂಡದಂಥಾದು
ಮಾಡಿ ಇಟ್ಟಿರಿ ಪರಬ್ರಹ್ಮವೇ ||ಪ||
ಆಧಾರ ಸ್ಥಳದಲ್ಲಿ ನಾಲ್ಕು ದಳಗಳಿಟ್ಟು
ಲಿಂಗ ತೋರಿರಿ ಬೇರೆ ಬಣ್ಣವೇ
ಆಚಾರ ಲಿಂಗನ ಮರೆತು ವಿಚಾರ ಇಲ್ಲದೆ ಕುಂತೆ
ಖೂನ ತೋರಿರಿ ಪರಬ್ರಹ್ಮವೇ ||1||
ಸ್ವಾಧಿಷ್ಟ ಸ್ಥಳದಲ್ಲಿ ಆರು ದಳಗಳಿಟ್ಟು
ಲಿಂಗ ತೋರಿರಿ ಬೇರೆ ಬಣ್ಣವೇ
ಗುರುಲಿಂಗನ ಗುರುತು ಮರೆತು ಕುಂತಿದೆ
ಖೂನ ತೋರಿರಿ ಪರಬ್ರಹ್ಮವೇ ||2||
ಮಣಿಪೂರ ಸ್ಥಳದಲ್ಲಿ ಹತ್ತು ದಳಗಳಿಟ್ಟು
ಲಿಂಗ ತೋರಿರಿ ಬೇರೆ ಬಣ್ಣವೇ
ಶಿವಲಿಂಗನ ಮರೆತು ಸುಮನೆ ಕುಂತಿದೆ ಗುರುವೆ
ಖೂನ ತೋರಿರಿ ಪರಬ್ರಹ್ಮವೇ ||3||
ಅನುಹಾತ ಸ್ಥಳದಲ್ಲಿ ಹನ್ನೆರಡು ದಳಗಳಿಟ್ಟು
ಲಿಂಗ ತೋರಿರಿ ಬೇರೆ ಬಣ್ಣವೇ
ಜಂಗಮ ಲಿಂಗನ ಮರೆತು ಜಂಗಿಲಿ ಯಾಗಿದೆ ಗುರುವೆ
ಖೂನ್ ತೋರಿರಿ ಪರಬ್ರಹ್ಮವೇ ||4||
ವಿಶುದ್ಧಿ ಸ್ಥಳದಲ್ಲಿ ಹದಿನಾರು ದಳಗಳಿಟ್ಟು
ಲಿಂಗ ತೋರಿರಿ ಬೇರೆ ಬಣ್ಣವೆ ||5||
ಗುರು ಮುಟ್ಟಿ ಗುರುವಾಗಿ ಅರುವಿನೋಳರುವಾಗಿ
ಇಹದಾಸೆ ಎರವಾಗಿ ಯೋಗಿಯಾಗೊ ನೀನು
ಯೋಗಿಯಾಗೊ ತಮ್ಮ ನೀನು ತ್ಯಾಗಿಯಾಗೊ ನೀನು ||ಪ||
ಆಧಾರ ಸ್ಥಳದಲ್ಲಿ ನಾಲ್ಕು ದಳಗಳುಂಟು
ಶುಚಿರಲಿಂದೆ ಆಚಾರ ಲಿಂಗನ ವಿಚಾರ ಮಾಡೊ ನೀನು
ವಿಚಾರ ಮಾಡೊ ತಮ್ಮ ನೀನು ವಿಚಾರ ಮಾಡೊ ನೀನು ||1||
ಸ್ವಾದಿಷ್ಟ ಸ್ಥಳದಲ್ಲಿ ಆರು ದಳಗಳುಂಟು
ಗುಪ್ತಲಿಂದೆ ಗುರುಲಿಂಗನ ಗುರ್ತು ಮಾಡೊ ನೀನು
ಗುರ್ತು ಮಾಡೊ ತಮ್ಮ ನೀನು ಗುರ್ತು ಮಾಡೊ ನೀನು ||2||
ಮಣಿಪೂರ ಸ್ಥಳದಲ್ಲಿ ಹತ್ತು ದಳಗಳುಂಟು
ಸಿದ್ಧ ಆಸನ ಬಲಿಸಿ ನೀ ಶಿವಲಿಂಗ ನೋಡೊ
ಶಿವಲಿಂಗ ನೋಡೊ ತಮ್ಮ ಶಿವಲಿಂಗ ನೋಡಿ ||3||
ಅನುಹಾತ ಸ್ಥಳದಲ್ಲಿ ಹನ್ನೆರಡು ದಳಗಳುಂಟು
ಜಂಗಮ ಲಿಂಗ ಜಗಭರಿತ ಜಾಗ್ರನಾಗೊ ನೀನು
ಜಾಗ್ರನಾಗೊ ತಮ್ಮ ನೀನು ಜಾಗ್ರನಾಗೊ ನೀನು ||4||
ವಿಶುದ್ಧಿ ಸ್ಥಳದಲ್ಲಿ ಹದಿನಾರು ದಳಗಳುಂಟು
ಪ್ರಸಾದ ಲಿಂಗನ ಪ್ರಸಾದ ಸೇವಿಸಿ ಪ್ರಸಿದ್ಧನಾಗೊ ನೀನು
ಪ್ರಸಿದ್ಧನಾಗೊ ತಮ್ಮ ನೀನು ಪ್ರಸಿದ್ಧನಾಗೊ ನೀನು ||5||
ಅಜ್ಞಿಯ ಸ್ಥಳದಲ್ಲಿ ಎರಡು ದಳಗಳುಂಟು
ತ್ರಿಕೂಟ ದೋಳು ಮಿಂದು ಮಹಾಲಿಂಗ ನೋಡೊ
ಮಹಾಲಿಂಗ ನೋಡೊ ತಮ್ಮ ಮಹಾಲಿಂಗ ನೋಡೊ ||6||
ಬ್ರಹ್ಮ ಸ್ಥಳದಲ್ಲಿ ಸಾವಿರ ದಳಗಳುಂಟು
ಇಷ್ಟಾರ್ಥ ಕೊಡುವಂಥ ಇಷ್ಟಲಿಂಗ ನೋಡೊ
ಇಷ್ಟಲಿಂಗ ನೋಡೊ ತಮ್ಮ ಇಷ್ಟಲಿಂಗ ನೋಡೊ ||7||
ಶಿಖಾ ಸ್ಥಳದಲ್ಲಿ ಮೂರು ದಳಗಳುಂಟು
ಪ್ರಣಮಲಿಂದೆ ನೀನು ಪ್ರಾಣ ಲಿಂಗ ನೋಡೊ
ಪ್ರಾಣಲಿಂಗ ನೋಡೂ ತಮ್ಮ ಪ್ರಾಣಲಿಂಗ ನೋಡೊ ||8||
ಪಶ್ಚಿಮ ಸ್ಥಳದಲ್ಲಿ ಬಂದೇ ದಳಾ ಉಂಟು
ಭಾವ ಭಕ್ತಿಯಲಿಂದೆ ಭಾವಲಿಂಗ ನೋಡೊ
ಭಾವಲಿಂಗ ನೋಡೊ ತಮ್ಮ ಭಾವಲಿಂಗ ನೋಡೊ ||9||
ಆಶಾಪಾಶವ ಬಿಟ್ಟು ಅಲ್ದಿ ಗ್ರಾಮಕೆ ಮುಟ್ಟು
ಗುರುಲಿಂಗನಗುಪ್ತದ ಗಂಟು ಬಿಚ್ಚಿ ನೋಡೊ ನೀನು
ಬಿಚ್ಚಿ ನೋಡೊ ತಮ್ಮ ನೀನು ಬಿಚ್ಚಿ ನೋಡೊ ನೀನು ||10||
ಗಂಡನೇ ಗುರು ತಿಳಿರೆವ್ವ
ಪತಿಲಿಂದೇ ಮುಕ್ತಿ ಪಡಿರೆವ್ವ ||ಪ||
ಅನಸೂಯ ಎಂಥಾ ಭಕ್ತಿ ಸೋತಿದಾರೊ ತ್ರೀಮೂರುತಿ
ಗೌರಿಲಕ್ಷ್ಮೀ ಸರಸ್ವತಿ ಆಗಿದಾರೊ ಫಜೀತಿ
ಮೊಲೆ ಉಣಸಿ ಮಾಡಿ ಮೋಹವ ||1||
ಅನುಲಾಯಿ ಎಂಥಾಭಕ್ತಿ ಖೂನ ಗಂಡನ ಮ್ಯಾಲೆ ಪ್ರೀತಿ
ದೇವತರಿಂದಲಿ ಸ್ವತಾ ಗಂಡನಿಗೆ ಮಾಡಿ ಮುಕ್ತ
ಉದ್ಧಾರಾಗಿದ ಮಾಂಡವ ||2||
ಸತಿ ಸಾವಿತ್ರಿಯ ಕೀರ್ತಿಜಗದೋಳು ಸಾರುತೈತಿ
ಪ್ರಾಣ ಕೊಳ್ಳುದಕ್ಕೆ ಸ್ವತ ಬಂದು ನಿಂತ ಯಮ ದೂತ
ಸತ್ತ ಗಂಡನ ಮಾಡಿ ಸಂಜೀವ ||3||
ಕರಿಬಸವಗ ಮೀರಿತೊ ಗರ್ವ
ಗುರುಲಿಂಗಸ್ವಾಮಿ ಕೊಟ್ಟರೊವರವ
ನೀನೆ ಬ್ರಹ್ಮೆಂದು ತೋರಿದ ಅರುವ ||4||
ಗುರುವಿನ ಕೂಡಿದನೇ ಅರುವಿನ ಮನೆಯೋಳು
ನೂರೆಂಟು ನಾಯಿ ಬೊಗಳಿದರೇನ
ಗುರುವಿನ ಕೂಡಿದನೇ ||ಪ||
ಪಂಚರು ಐವರು ಸಂಚಿತಕಂಜುವರು
ಕಿಂಚಿತ ಭಯವು ಎನಗಿಲ್ಲಗೆಳದಿ
ಗುರುವಿನ ಕೂಡಿದನೇ ||1||
ಕಾಮಾದಿ ಆರು ಮಂದಿ ಬಿದ್ದು ಓಡ್ಯಾರ ಸಂದಿ
ಓಡಿಸಿಕೊಟ್ಟ ಸದ್ಗುರು ತಂದಿ
ಗುರವಿನ ಕೂಡಿದನೇ ||2||
ಎಂಟು ಮಂದಿಗೆ ನಾನು ಸೊಂಟದ ಮುರದೇನೇ
ಕಂಠ ಹರಿದು ಅದೇ ಘಂಟಾದೊಳಗೆ
ಗುರುವಿನ ಕೂಡಿದನೇ ||3||
ಆಶಾಪಾಶವ ಅಳಿದು ಅಲ್ದಿಗೆ ನಾ ಹೋದೆ
ಈಶ ಗುರುಲಿಂಗೇಶ ಕೈವಶನಾದ
ಗುರವಿನ ಕೂಡಿದನೇ ||4||
ಗುರುರಾಜ ಗುರುಲಿಂಗ ಸ್ವಾಮಿ ದಯಾಳಾ
ಬೆಳಗುವೆನಾರತಿಯಾ ||ಪ||
ಮರವಿನೊಳಗೆ ಬಿದ್ದು ಮೈ ಮರೆತಿರ್ಪಗೆ
ಅರವು ನೀ ತೋರಿದಿಯಾ
ಮೂಲಾಕ್ಷರದ ಮಂತ್ರವು ಹೇಳಿ
ಮುಪ್ಪುರದ ಗೆಲಸಿದಿಯಾ ||1||
ತತ್ವಮಸಿ ಮಹಾ ವಾಕ್ಯವ ಹೇಳಿ
ತತ್ವವ ತೋರಿದಿಯಾ
ಅತ್ಯಾಧಿಕ ಮನ ಪರಿಪೂರ್ಣಾತ್ಮನ
ಸತ್ವವ ತೋರಿದಿಯಾ ||2||
ಬಾಲಚಂದ್ರನಂತೆ ಲೀಲೆಯ ತೋರುತ
ಅಲದಿಗೆ ಬಂದಿದಿಯಾ
ಬಾಲ ಭಕ್ತರಿಗೆ ಮೂಲವ ಹೇಳಿ ಭವ
ಮಾಲೆಯ ಕಳದಿದಿಯಾ ||3||
ತನ್ನ ಬಿಟ್ಟು ದೇವರೇ ಇಲ್ಲ ಈ ಭೂಮಿಯ ಮ್ಯಾಲ
ತನ್ನ ಬಿಟ್ಟು ದೇವರೇ ಇಲ್ಲ ||ಪ||
ಬಂಡೆಗಲ್ಲಿಗಿ ಭಂಡಾರ ಬಡದು
ದೇವರಂತಿರಿ ಎಲ್ಲಕ ದೊಡದು
ಟೆಂಗಿನ ಕಾಯಿ ತಂದು ಮುಂದೊಡೆದು
ಪರಟಿ ಒಗಿತಿರಿ ಒಳಗಿನು ತಿಂದು ||1||
ಕುಲಕುಟಗ್ಯಾ ಕಲ ಬಸವಣ್ಣ ಕಟಿದು
ನೋಡಿರಿ ಬಾಜಾರದಾಗ ಮಾರುವದು
ಊದಾನ ಹಾಕಿ ಕಾಲ ಬೀಳುವದು
ಎತ್ತಿನ ಮ್ಯಾಲ ಕಲ್ಲೆತ್ತಿ ಹಾಕುವದು ||2||
ಕಬ್ಬಿಣ ಪಟ್ಟಿ ಕಂಬಾರ ಬಡದು
ಇಟ್ಟಾರ ಮಸೂದಿ ಒಳಗ ಒಯ್ದು
ಯಾರು ಮಾಡಿದರೆ ಏನಾಗುವದು
ಮುಲ್ಲ ಕೂಗಿದರೆ ಕಲ್ಲ ಒಡಿಬಹುದೆ ||3||
ಊರ ದೇವತೆ ಮೀರ್ಯಾಳ ಎಂದು
ನಂದಾದೀವಗಿ ಇಡ ತಿರಿ ತಂದು
ಜೀವದ ದೇವರಿಗಿ ಕೊಯಿತೀರಿ ತಂದು
ವೀರಶೈವರ ಧರ್ಮ ಅಲ್ಲ ಇದು ||4||
ಆಸೆ ರಹಿತನಾಗಿ ಅಲ್ದಿಗೆ ಹೋಗಿ
ಹೇಸಿ ದೇಹದ ದೋಷವ ನೀಗಿ
ಗುರುಲಿಂಗಯ್ಯನ ಪಾದಕೆ ಎರಿಗಿ
ಮತ್ತೆ ನೀ ಬರಬ್ಯಾಡ ಮರ್ತ್ಯಕೆ ತಿರುಗಿ ||5||
ತಿಳಿಯೊ ಅಳಿಯೊ ಉಳಿಯೋ ಭ್ರಷ್ಟ
ಕಳಿಯೊ ಜನ್ಮ ಮರಣದ ಕಷ್ಟ ||ಪ||
ಬಾಯಿ ಬ್ರಹ್ಮ ಓದುತಿ ಎಷ್ಟ
ಖರೆ ಇಲ್ಲೋ ಒಂದೆಳ್ಳಷ್ಟ ||ಅ.ಪ||
ನಾದ ಪ್ರಿಯ ಶಿವನೂ ಅಲ್ಲ
ವೇದ ಪ್ರಿಯ ಶಿವನೂ ಅಲ್ಲ
ಬೂದಿ ಹಾಕಿ ತುಳಿ ಬ್ಯಾಡೊಕಲ್ಲ
ಉದಿರ್ಯಾವೋ ಬತ್ತೀಸ ಹಲ್ಲ ||1||
ಸದ್ಗುರುವಿನ ಚರಣಕ್ಕಾಗಿ
ಸಾಧಕರು ಕುಂತರೊ ಗೂಗಿ
ಹಾದಿ ಹಾದಿ ಹುಡುಕುತ ಹೋಗಿ
ದೊರ್ದಿಲ್ಲೆಂದು ಗುರು ಅವರೀಗಿ ||2||
ವೇಶ ಭೂಷ ಪಲ್ಲಟ ಮಾಡಿ
ದೇಶ ದೇಶ ತಿರುಗಿದಿ ಖೋಡಿ
ಹೇಸಿ ಮನದ ಕಡಿ ನೀ ಬೇಡಿ
ಕುಂತಲ್ಲಾದೊ ಶ್ರೀಶೈಲ ಗುಡಿ ||3||
ಅಲ್ದಿ ಹಾದಿ ಹಿಡಿಯೊ ನೀ ಮತ್ತ
ದೊರದಿತಲ್ಲಿ ಗುರವಿನ ಗುರ್ತ
ಗುರುಲಿಂಗಯ್ಯ ಮಾಡಿದ ಮುಕ್ತ
ಇರಬೇಕೊ ಇದ್ದು ನೀ ಸತ್ತ ||4||
ತೇರೇ ಸೂರತ್ ತೂ ದೇಖ್ ಲೇನಾ
ತೂ ಹೋನಾ ಐನಾ ತೂ ಹೋನಾ ಐನಾ ||ಪ||
ಐನಾಮಿಲಾ ಐಸಾ ಶಾನ್ ದಾರ್
ಐನೇಕೆ ಅಂದರ್ ಸಾತೋಸಮಂದರ್
ಫಿರಕರ್ ದೇಖೇತೊ ವಜೂದ್ ಕೆ ಅಂದರ್ ||1||
ಅಲ್ದೀಕೆ ಆಲಮ್ ಸಿಖಲಾಯಾ ಇಲ್ಮ್
ಬಾತಿನ್ ಕಾ ರಾಜ್ ಗುರುಲಿಂಗ ಜಂಗಮ್
ಐನೇಮೇದೇಖೇತೊ ಆಪ್ ಹೀಮೇಕಲ್ಮ ||2||
ದೇವಿ ಎನ್ನ ತಾಯಿ| ಒಮ್ಮೆ
ಪಾಲಿಸೆ ಮಮ್ಮಾಯಿ ||ಪ||
ಮೂರು ಲೋಕಕೆ ಎನಿಸಿದಿ ಮಾಯಿ
ನಾ ಮೇಲಂದವಗೆ ತೆರಸಿದಿ ಬಾಯಿ
ನಂಬಿದವನಿಗಿ ಆಗಿದಿ ನಾಯಿ ||1||
ಸತ್ಯ ವಿಜಯಗ ಸಂಜೀವ ನೀನೇ
ಧರ್ಮ ಶೀಲನಿಗೆ ಧೈರ್ಯವು ನೀನೇ
ಎನ್ನ ಮುತ್ತೈದಿತಾನ ಕಾಯಕಿ ನೀನೇ ||2||
ಮಣಿಪೂರದಲಿ ವಾಸ ವಾದಕಿ ನೀನೇ
ನಂಬಿದವರ ದಾಸಾದಕಿ ನೀನೇ
ಅಲ್ದಿ ಈಶಗ ವಶ ಅದಕಿ ನೀನೇ ||3||
ನಿಜ ಹಿಡಿ ಗುರು ಮಂತ್ರವನು ತಿಳಿದರೆ
ಸೋಹಂ ಬ್ರಹ್ಮ ತಾನು ||ಪ||
ಅರಿಯದೇ ಬೀದಿಗಾದವನು ನೀ ಮಾಡೋ
ಗುರುಮನಿ ಶೋಧವನು
ಅರಿತುಕೋ ಮಂತ್ರದ ಭೇದವನು
ಅರಿದು ನೀಗೊ ಭವದ ಬಾಧೆಯನು ||1||
ನಿಃಶೂನ್ಯದಿಂದೆ ಶೂನ್ಯ ಜನಿಸಿ ಅದರಿಂದೆ
ನಿರಾಕಾರ ಎನಿಸಿ
ತ್ರಿಬಿಂದು ಲಿಂದೆ ಓಂಕಾರವ ನುಡಸಿ
ಅದರಿಂದೆ ಷಡಕ್ಷರಿ ಎನಿಸಿ ||2||
ಪಂಚ ಅಕ್ಷರದ ರಂಗ ಶೋಧಿಸಿ
ದವನೇ ಗುರು ಲಿಂಗ
ತಿಳಿಯದಿದ್ದರೆ ತಿಳಿ ಮಂಗ
ತಿಳಿದರೆ ಯಮಬಾಧೆ ನಿನಗ್ಹ್ಯಾಂಗ ||3||
ಖರೇ ಪರ ಬ್ರಹ್ಮ ನೀನಿದ್ದಿ ಕಂಡ
ಬಂಡಿಗೆ ಕಾಲ ಬಿದ್ದಿ
ಭಂಡ ವಿಷಯಕ್ಕೆ ನೀ ಬಿದ್ದಿ
ಷಂಡ ಭವದಾಸೆ ನೀ ಹಿಡದಿ ||4||
ಆಸೆ ಹಿಡದು ನೀ ನಡದಿ ಏಸೋ
ಜನ್ಮ ನೀ ಪಡದಿ
ಇರುವು ಮೊದಲು ಆನಿ ಕಡಿಯಾಗಿ
ಶ್ವಾನ ಸೂಕರ ನಂದದಿ ||5||
ಬರುಬಾರದೆ ನೀ ಬಂದಿ ಬಾರದು
ಎಲ್ಲಾ ನಂದಂದಿ
ತೊಳೆದುಕೊ ನಿನ್ನ ನಿಜ ಸಂದಿ
ಖಾಸ ಅಲ್ದಿ ಈಶನ ಹೊಂದಿ ||6||
ನಿನ್ನ ನಿಜವು ನೀನೇ ನೋಡೋ
ಅನು ಮಾನಿಸಲು ಬ್ಯಾಡೋ ||ಪ||
ತತ್ವ ಐದು ಐದ ಕೈ ದೈದು
ನಿತ್ಯ ನಿತ್ಯ ಭಾಗಿಸಿ ನೋಡೋ ||ಅ.ಪ||
ಕಾಮ ಕ್ರೋಧ ಶೋಕ ಮೋಹ
ಭಯ ಆಕಾಶದ ಅಂಶಗಳು
ಚಲನವಲನ ಧಾವನ ಪ್ರಸರಣ
ಆ ಕುಂಚನ ವಾಯು ಅಂಶಗಳು ||1||
ಹಸಿವು ತೃಷೆ ಆಲಸ್ಯ ನಿದ್ರಾ
ಕಾಂತಿ ತೇಜದ ಅಂಶಗಳು
ಶುಕ್ಲ ಶೋಣಿತ ಮೂತ್ರ ಲಾಲಾರಸ
ಶ್ವೇದ ಜಲದ ಅಂಶಗಳು ||2||
ಆಸ್ತಿ ಮಾಂಸ ನಾಡಿ ತ್ವಚ
ರೋಮ ಭೂಮಿಯ ಅಂಶಗಳು
ಅಳ್ಳಿಗೆ ಅಳ್ಳು ಪೂಜಿಗಿ ಪೂಜು
ಅಲ್ದಿ ಈಶನ ಬೋಧವೆ ಸಹಜು ||3||
ನಾನೆಂದು ಮರೆಯಲಾರೆ ಗುರುವೆ ನಿಮ್ಮುಪಕಾರವ
ನಾನೆಂದು ಮರೆಯಲಾರೆ ಗುರುವೆ ನಿಮ್ಮುಪಕಾರವ ||ಪ||
ಗುರುವೆ ನಿಮ್ಮುಪಕಾರವ ಸದ್ಗುರುವೆ ನಿಮ್ಮುಪಕಾರವ ||ಅ.ಪ||
ನಾ ನೀನೆಂಬುದು ಭ್ರಾಂತಿ ಬಿಡಸಿದಿ
ಪರಬ್ರಹ್ಮ ಪ್ರಕಾಶ ತೋರಿದಿ ||1||
ಮೂಜಗದೋಳು ನಿನ್ನ ಪ್ರಖ್ಯಾತ
ನಿರಂಕಾರ ನಿಜ ನಾಮ ಭರಿತ ||2||
ತತ್ವಮಸಿ ಮಹಾ ವಾಕ್ಯ ಹೇಳಿದಿ
ಜನ್ಮ ಮರಣವನು ದೂರ ಮಾಡಿಸಿ ||3||
ತೀತಾವಸ್ಥಾ ನಿನ್ನ ಸ್ವರೂಪ
ನಿನ್ನ ಪಾದದಲಿ ಆದೆನೊಲೋಪ ||4||
ಈ ಜಗದೋಳು ಅಲ್ದಿಯವಾಸ
ಕೃಪೆಯಿರಲಿ ಶ್ರೀಗುರು ಲಿಂಗೇಶ ||5||
ನರ ದೇಹದ ಧನ ಸ್ಥಿರ ಯಾರಿಗಿಹುದೋ
ಚರಮಗಣ್ಣಿಲಿ ನೋಡಿ ಮರೆಯಾಗುತಿಹುದೋ ||ಪ||
ಸತಿಯ ಸುತರು ತನ್ನ ಹಿತಕಾಗಿ ಬಂದವರು
ಗತಿಗೆಡಿಸಿ ಸನ್ಮತಿಗೆಡಿಸುವರು ||1||
ಹಲ್ಲು ಕಣ್ಣು ಕಿವಿ ಕೈಕಾಲು ಇಲ್ಲದಂತೆ ಆಗುವವು
ಬಲ್ಲಿದ್ದ ಜನರೆಲ್ಲ ಬೈಲಾಗುವರೊ ||2||
ಧರಿಯೋಳಧಿಕವಾದ ಪರತರಲ್ದಿಯೋಳು
ಗುರುಲಿಂಗ ಜಂಗಮ ಪಾದ ಮರಿಬ್ಯಾಡ ನಿನ್ನೋಳು ||3||
ನಮ್ಮ ಹೂಗಾರಣ್ಣಾ ಮನೆ ಮನೆಗೆ ಹುವ್ವಾ ಕುಡುತಾನ| ನಮ್ಮ ||ಪ||
ಮನೆ ಮನೆಗೆ ಹುವ್ವಾ ಕುಡುತಾನ ಕುಡುತಾನ| ಹೂಗಾರಣ್ಣ ||ಅ.ಪ||
ಭಕ್ತಿ ಎಂಬ ಭಾವ ಲಿಂಗ ಕೊಟ್ಟನ
ಯುಕ್ತಿ ಎಂಬ ಮಜ್ಜಾನ ಗೈದನ
ಮುಕ್ತಿ ಎಂಬ ನಿಜಪದವೀಗೊಯ್ದಾನ ಓಯ್ದಾನ |1||
ಚೌರ್ಯಾಂಶಿ ಲಕ್ಷ ಕುಲದ ಹುವ್ವ ತಂದನ
ಭವಬಾಧೆ ಎಂಬ ಹೂ ಮಾಲೆ ಮಾಡ್ಯನ
ಜವದಿ ಜನ್ಮ ಮರಣರಹಿತ ಮಾಡ್ಯಾನ ಮಾಡ್ಯಾನ ||2||
ಇಂದು ದಸರಿ ಹಬ್ಬ ಎಂದು ಹೇಳ್ಯನ
ಚಂದ ತಿಳಿಸಿ ಮುಂದೀನ ಸೂಚನ
ಮಂದ ಬುದ್ಧಿ ಸಂದಿಗೊಂದಿ ಬಳದಾನ ಬಳದಾನ ||3||
ಬಂಬತ್ತು ದಿವಸ ಪೂಜ ಮಾಡ್ಯನ
ಅಂಬಬಾಯಿಗೆ ನಂಬಿ ನಡದನ
ಢಾಂಭಿಕರ ಖಂಭ ಮುರದಾನ ಮುರದಾನ ||4||
ಅರಿವು ಎಂಬುವ ದೀವಗಿ ಹಚ್ಚ್ಯನ
ಮರವು ಎಂಬ ಕತ್ತಲೆ ಕಳದನ
ಗುರು ಅಲ್ದಿ ಈಶ ತಾನೇ ಆಗ್ಯಾನ ಆಗ್ಯಾನ ||5||
ನಾಗರತೆವ್ವ ನಾಗರತೆ ನಾಗರತೆ ಭಾಳ ಪತಿವರತೆ ||ಪ||
ಹಲವು ಮಾತಿನೊಳು ಹಾದರಗಿತ್ತೆ
ಸನಚ್ಚಿ ಕೊಳ್ಳೇ ಛೀನಾಲಿ ಕೋಕೆ ||ಅ.ಪ||
ಎನ್ನ ಮೇಲೆ ಮೂಗರಿದ್ದಾರೆ ಆರು ಮಂದಿನೇ
ನೂರಾರು ಮಂದಿಗೆ ಮುದ್ದು ಕೊಟ್ಟಿಬಿಟ್ಟೇನೇ
ತಪ್ಪಲದ್ಹಂಗ ಇಪ್ಪತ್ತೈದು ಮಂದಿಗ್ಹೋಗಿದೆನೇ
ಅಪ್ಪಟ್ಟ ಗರತಿ ಅಳಿಯನ ಸೂಳಿನಾನೆ ಆಗಿದೆನೇ ||1||
ಎಂಟು ಮಂದಿ ತಂಟ ಕಡೆದು ಬಿಟ್ಟುಬಿಟ್ಟೇನೇ
ತನುವು ಮನವು ಧನವು ಗುರುವಿಗೆ ಕೊಟ್ಟು ಬಿಟ್ಟೇನೇ
ಊರ ಒಳಗಿನ ಮುಂದೆದೇನು ಹೊಯ್ದು ಗಂಟೇನೇ
ಯಾರೆನಂದರೇನು ಶೆಂಟಾ ಅಂಜಕಿ ನನಗೇನೇ ||2||
ದೇಶದೋಳು ಅಲ್ದಿ ಈಶಗೆ ವಶವು ಆದೇನೇ
ಧ್ಯಾಸವಿಟ್ಟು ಮೋಸದಿಂದ ಮಾಡಿಕೊಂಡೇನೆ
ದೇಶ ದೇಶ ತಿರುಗುವಾಗ ಹಿಂಸಾ ಮಾಡ್ಯಾನೇ
ಫಾಸಿ ಮಾಡಿ ಗೋಶ್ಯದೊಳಗೆ ಎಳೆದು ಒಯ್ದಾನೇ ||3||
ನೆನೆದೇನೊ ಶ್ರೀ ಸದ್ಗುರುವಿಗ ಸಭೆದಾಗ
ನೆನೆದೇನೊ ಶ್ರೀ ಸದ್ಗುರುವಿಗ ||ಪ||
ಬ್ರಹ್ಮವಿಷ್ಣು ರುದ್ರರಿಗ -ತೆಂತೀಸ ಕೋಟಿ ದೇವತರಿಗ
ಪರಮಾನಂದ ದಾರಿ ತೋರಿದವಗ ||1||
ಆರು ಮಂದಿ ನೆರೆದೈತಯರಿಗ ಎಂಟು ಮಂದಿ ತಂಟಕಾರಿಗ
ಹತ್ತು ಮಂದಿಗೆ ಗೊತ್ತಿಗ್ಹಚ್ಚಿದವಗ ||2||
ಆರು ಮಂದಿ ದವಗ-ಐದು ಮಂದಿ ಚರಿಸಿದವಗ
ಮೂವರಿಗಿ ಮೋಹ ಮಾಡಿದವಗ ||3||
ಆರು ಎಂಬುವ ಅಲ್ದಿಯದೊಳಗ ಆರನೆ ಸ್ಥಲ ಏರಿದವಗ
ಗುರುಲಿಂಗ ಜಂಗಮರಿಗ ||4||
ನಮ್ಮ ಜಾತಿ ವಡ್ಡಾರ್| ನಮಗೆ
ಅಂಜಿಸುವ ರಿನ್ಯಾರ್ ||ಪ||
ಕಲ್ಲು ಒಡಿಲಕ ಬಲ್ಲವ ಬೇಕೋ
ಕುಲ್ಲ ಮನುಜರಿಗೆ ಹೇಳದು ಸಾಕೋ
ಮೂರೊರಿ ಕಲ್ಲಿಗೆ ಮನಿ ಮುಗಿಬೇಕೋ
ಅರುವಿನಲ್ಲಿ ಆರು ಥರವಿರಬೇಕೋ ||1||
ಮೂರು ಚಿಂಪುಗಳು ಮೂಲಿಗೆ ಹಾಕಿ
ಆರು ಕಲ್ಲಿಗೆ ಬಿದ್ದಿಲ್ಲ ಪಾಕಿ
ಪಂಚ ತತ್ವದ ಫಡತರ ಹಾಕಿ
ಕೈ ಜಜ್ಜಿತ್ತು ಕಲ್ ಒಡಿ ಜ್ವಾಕಿ ||2||
ಆನಂದ ಅಲ್ದಿಯ ಮನೆಯೊಂದು ಕಟ್ಟು
ತನುಮನ ಧನವನು ಗುರುವಿಗೆ ಕೊಟ್ಟು
ಮ್ಯಾಲಿನ ಸ್ಥಾನಕ್ಕೆ ಮಹಾಲಿಂಗ ನಿಟ್ಟು
ಗುರುಲಿಂಗಯ್ಯನ ಪಾದಕೆ ಮುಟ್ಟು ||3||
ಪಂಚತತ್ವ ದೇಹವಿದು ಪರ ಉಪಕಾರ| ಪರ
ಮಾಡಿ ನೋಡೋ ಜರಾ ||ಪ||
ಶಾಸ್ತ್ರದ ಸಾರ ಓದಿ ನೋಡೊ ಚದುರ
ತ್ರಿಜಗದಪೂರ ಗುರವಿನ ಆಧಾರ
ಕಾಮಧೇನು ಕಲ್ಪವೃಕ್ಷ ಪರ ಉಪಕಾರ
ಮಾಡಿ ನೋಡೋ ಜರಾ ||1||
ಮಹಲು ಮಂದಿರ ಗುಡ್ಡಗಂವ್ಹಾರ
ಕಬ್ಬಿನ ರಸಪೂರ ತನುವಿಗಾಧಾರ
ಊರ ಭಾವಿ ನೀರು ಆವ ಪರ ಉಪಕಾರ
ಮಾಡಿ ನೋಡೊ ಜರಾ ||2||
ಅಲ್ದಿಯ ಊರ ಧುರತನ ಹೆಸರ
ಗುರು ಸ್ಥಲದವರ ಗುರುಲಿಂಗಪ್ಪನವರ
ದೀಕ್ಷೆ ಕೊಡುವರು ಚದುರ ಪರ ಉಪಕಾರ
ಮಾಡಿ ನೋಡೊ ಜರಾ ||3||
ಬಾತಿನ್ ಮೇ ಮೈ ಮುಸಲ್ಮಾನ್ ಹೂಂ
ಜಾಹಿರ್ ಮೇ ಹಿಂದು| ಭಾಯಿ ಮೈ
ಜಾಹಿರ್ ಮೇ ಹಿಂದು ||ಪ||
ಅವ್ವಲ ಸಖತ್ ಬಾತ್ ನ ಕರನಾ
ಬಾದಸೆ ನರಮ್ ನ ಹೋಜಾನಾ
ಮುಸಲ್ಮಾನ್ ಕಾ ಲಾಜ್ ರಖನಾ ||1||
ಪಹಲೇತೋ ನರತನಕೋ ಪಾನಾ
ಮೈ ಕೌನ್ ಹೂಂ ಏಹಿ ಪಹಚಾನಾ
ಖೂಬ್ ಸೋಚಕರ್ ಸಮಝಲೇನಾ ||2||
ಮುರಷಿದ್ ಮಿಲನಾ ನಂಬರ್ ಪಹಲಾ
ತನಮೆ ಖುದಾಕೋ ಬತಾನೆ ವಾಲಾ
ದಿಲಸೇ ಕಲ್ಮಾ ಪಢಾನೆ ವಾಲಾ ||3||
ಜಾಹಿರ್ ಮೇ ತೋ ಆಳಂದ್ ಗ್ರಾಮ
ಬಾತಿನ್ ಮೇ ಗುರುಲಿಂಗ ಜಂಗಮ
ಮುಝೇ ಪಢಾಯಾ ಆಜ್ ಕಲ್ಮಾ ||4||
ಬರೆದ ಪ್ರಮಾಣ ಹರಿದು ಹೋಗೊತನ
ಸಂಸಾರವ ಮಾಡೊ
ಹರನ ಮರೆಯದೆ ಕೊಂಡಾಡೊ ಆಸ್ಥಿರ ಸಂಸಾರೀ ಡ್ಯಾಡೊ… ||ಪ||
ಆಧಿ ಆಧಾರದ ಶೋಧನೆ ಮಾಡೋ
ನಾದ ಬಿಂದು ಕಲೆ ನೀಗಿ ನೋಡೊ
ಭೇದ ರಹಿತ ಸದ್ಗುರವಿನ ಕೊಡೊ ||1||
ದಾರಿಕಾರಗೆ ಊಟ ಸಿಕ್ಕಂತೆ
ಸಾರಾಮೃತ ಸುಖ ಸವಿ ಉಂಡಂತೆ
ನಿರಾಳ ಮನಸಿಲಿ ತಾ ಹೋದಂತೆ ||2||
ಹಸಿದ ಹಕ್ಕಿ ಅಂಗಳ ಕಿಳಿದಂತೆ
ಖುಸಿಲಿಂದೆ ಕಾಳು ತಿಂದು ತೆರಳಿದಂತೆ
ಆಸೆ ಅಣು ಮಾತ್ರ ಇಡದಂತೆ ||3||
ಹುಡುಗಿಯರು ಮನಿ ಕಟ್ಟ್ಯಾಡಿದಂತೆ
ಅಡಗಿಯಲ್ಲಿ ಹೋಳಗಿ ಉಂಡಂತೆ
ಕೆಡಸಿ ಹೋಗುವರು ಇಡದಂತೆ ||4||
ಸುಣ್ಣದೊಳಗೆ ನೀರು ಕಲಿತಿದ್ದಂತೆ
ಬಣ್ಣ ಕೊಟ್ಟು ತಾ ಬಯಲಾದಂತೆ
ಮಣ್ಣಿನ ಕಾಯ ಮರೆಯಾದಂತೆ ||5||
ಧರಿಯೊಳು ನಮ್ಮ ಅಲ್ದಿಯ ಗ್ರಾಮ
ಮೆರೆಯುತಿರುವ ಗುರುಲಿಂಗ ಜಂಗಮ
ಪರಮ ಭಕ್ತರಿಗಿ ಮಾಡಿ ನಿಷ್ಕಾಮ ||6||
ಮಾಡೋ ಗುರು ಭಕ್ತಿಯನು| ನೀನು
ಮಾಡೋ ಗುರು ಭಕ್ತಿಯನು ||ಪ||
ಮಾಡೋ ಗುರು ಭಕ್ತಿಯನು ಹಾಡೊ ಗುರು ಕೀರ್ತಿಯನು
ರೂಢಿಯೊಳಗೆ ಮಾಡಿ-ನೀಡಿ ನೀಡಲದ್ಹಂಗೆ ತಾನು ||ಅ.ಪ||
ಗುರು ಭಕ್ತಿ ಮಾಡಿ ಉಡುತಣ್ಣ
ಹರ ನಿಂದೆ ವರ ಪಡದಾನ
ಮರಣ ರಹಿತ ಮುಕ್ತಿಯ ಸ್ಥಾನ
ಕರದೊಯ್ದನೊ ತನ್ನ ಗುರುವಿನ ||1||
ಗುರುಭಕ್ತ ರಾಮ ದೂತ
ದುರುಣಗಿರಿ ಎತ್ತಿ ಬಲವಂತ
ಹಾರಿಹೋಗಿ ತಂದನೋ ಸೀತ
ಚಿರಂಜೀವಿಯಾಗಿ ಕುಂತ ||2||
ಹೆಣ್ಣು ಹೊನ್ನು ಮಣ್ಣಿನ ಭಕ್ತಿ
ಜನುಮ ಮರಣ ಕಾರಣ ಐತಿ
ಗುರುಲಿಂಗ ಜಂಗಮ ಭಕ್ತಿ
ಘನ ಮುಕ್ತಿಗೆ ಸಾಧನ ಐತಿ ||3||
ಧರಿಯೋಳು ಅಲ್ದಿಯ ಗ್ರಾಮ
ಗುರುಲಿಂಗ ಜಂಗಮ
ತೋರಿದ ತನ್ನ ಮಹಿಮ
ಸಾರಿದ ಪ್ರಣಮ ||4||
ಮಾಡಿ ಭಕ್ತಿ ಪಡಿರಿ ಮುಕ್ತಿ
ನುಡಿದಂತೆ ನಡೆಯಿರಣ್ಣಾ ||ಪ||
ಅಡಿಗಡಿಗೆ ಗುರು ನಾಮವ ನುಡಿರಿ
ಮೃಢಹರ ನಡಿತಲಿ ದೃಢವೊಂದಿಡಿರಿ
ಬಡಿವಾರ ಭಜನೆ ಮಾಡದು ಬಿಡರಿ
ಕಡಿ ಜನ್ಮಕ್ಕೆ ಕಡಿಗೀಶನ ಕೂಡರಿ ||1||
ಬ್ರಹ್ಮರಲ್ಲಿ ಹುಟ್ಟಿದ ಬಸವಣ್ಣ
ಧರ್ಮ ಶಾಸ್ತ್ರ ಓದ್ಯೋದಿ ನೋಡ್ಯನ
ಕರ್ನಾಟಕ ಕಲ್ಯಾಣ ಸೇರ್ಯನ
ದುರ್ಳ ಬಿಜ್ಜಳನ ಗರ್ವ ಮುರದನ ||2||
ಶರಣ ಬಸವ ಹರಭಕುತಿ ಮಾಡ್ಯನ
ಸರಿಯಾಗಿ ದಾಸೋಹ ಸದಾ ನಡಸ್ಯನ
ಅರಿವಿನಿಂದೆ ಗುರು ಮನಿ ಸೇರ್ಯನ
ಗುರು ಮುಟ್ಟಿ ಗುರುವಾಗಿ ಕುಂತನ ||3||
ಶರೀರವೆಂಬುದು ಅಲ್ದಿಯ ಊರ
ಅರಿವು ಎಂಬ ಗುರುಲಿಂಗ ಜಂಗಮರ
ಪರಮ ಭಕ್ತರಿಗಿ ಕರೆದು ಹೇಳ್ಯರ
ಪರಮಾನಂದ ಪದವಿಯ ನೀಡ್ಯರ ||4||
ಮೂಡಲವಾಯಿತೆ ಮುರಲಿಧರನ ನೆನಿಯಮ್ಮ
ಹಾಡಿ ಬೀಸಾನು ಬಾರೆ ಜೋಡಿನ ಗೆಳದೆಮ್ಮ ||ಪ||
ಮೋಕ್ಷಕ್ಕೆ ನರಜನ್ಮ ಬಕ್ಷೀಸ ಪಡದೇವಮ್ಮ
ದೀಕ್ಷೆಯ ಪಡೆದು ನಾವು ಸಾಕ್ಷಿರೂಪ ತಿಳಿದೇವಮ್ಮ ||1||
ಪತಿಸೇವೆಯಲ್ಲಿ ನಾವು ಅತಿಜಾಗ್ರ ಇರಬೇಕಮ್ಮ
ಅತ್ತಿ ಮಾವರಭಿಮಾನ ಹಿತದಿಂದೆ ಕಾಯಿಬೇಕಮ್ಮ ||2||
ಊರೊಳು ಸೇರ್ಯಾರೆ ಆರುಮಂದಿ ದುರುಳಾರೆ
ಯಾರು ಅರಿಯದಂತೆ ನಾವು ಪರಮಾರ್ಥಗೆಲಿಬೇಕಮ್ಮ ||3||
ತೊಂಟರು ಎಂಟುಮಂದಿ ಗಂಟಗಳ್ಳರಿರುವಾರು
ಕಂಠ ಹರಿದು ಘಂಟದೊಳಗೆ ಎಂಟು ವರ್ಣಅರಿಯರಮ್ಮ ||4||
ದೇಶದೊಳಗೆ ನಮ್ಮ ವಾಸುಳ್ಳಲ್ದಿಯ ಗ್ರಾಮ
ಈಶ ಗುರುಲಿಂಗ ಜಂಗಮ ಸೋಸಿ ಹೇಳಿದರಮ್ಮ ||5||
ರಾಮಯ್ಯ ಕೇಳೊ ರಾಮಯ್ಯ
ಹಾದರ ಜನರಿಗೆ ಪ್ರೇಮಯ್ಯ ||ಪ||
ಗರತೆಯರಿಗೆ ನೀ ಗಂಡಯ್ಯ| ನಿನ್ನ
ಮರೆತವರಿಗೆ ನೀ ಷಂಡಯ್ಯ ||ಅ.ಪ||
ಬಲ್ಲವರಿಗೆ ನೀ ಬೆಲ್ಲಯ್ಯ| ನೀ
ಕುಲ್ಲ ಮನಜರಿಗೆ ಇಲ್ಲಯ್ಯ
ರೂಪನಾಮ ರಾಮ ಕೃಷ್ಣಯ್ಯ| ನೀ
ರಾಮ ನಾಮ ತಾಳಿದೆಯಯ್ಯ ||1||
ಆಶ ಕಂಡಿದವಗ ಈಶಯ್ಯ| ನೀ
ಅಲ್ದಿಯೊಳಗೆ ನಿವಾಸಯ್ಯ
ನಂಬಿದವಗ ನೀ ದಾಸಯ್ಯ| ನೀ
ಒಲಿದ ಗುರುಲಿಂಗ ಜಂಗಮಯ್ಯ ||2||
ಲಿಂಗಪೂಜೆ ಮಾಡಿ ಮುಕ್ತಾದೆ| ಈ ಭವದಿ ಬಂದು
ಲಿಂಗಪೂಜೆ ಮಾಡಿ ಮುಕ್ತಾದೆ ||ಪ||
ಲಿಂಗಪೂಜೆ ಮಾಡಿ ಮುಕ್ತನಾದೆ ನಾಲ್ಕು ದಳದೋಳು
ಆಚಾರಲಿಂಗ ಪೀತ ವರ್ಣ ಕ್ರಿಯಾಶಕ್ತಿ ಒಡಗೂಡಿ ||1||
ಲಿಂಗಪೂಜೆ ಮಾಡಿ ಮುಕ್ತನಾದೆ ಆರು ದಳದೋಳು
ಗುರುಲಿಂಗ ಶ್ವೇತವರ್ಣ ಇಚ್ಚಾ ಶಕ್ತಿ ಒಡಗೂಡಿ ||2||
ಲಿಂಗಪೂಜೆ ಮಾಡಿ ಮುಕ್ತನಾದೆ ಹತ್ತು ದಳದೋಳು
ಶಿವಲಿಂಗ ಕೆಂಪು ವರ್ಣ ಜ್ಞಾನ ಶಕ್ತಿ ಒಡಗೂಡಿ ||3||
ಲಿಂಗಪೂಜೆ ಮಾಡಿ ಮುಕ್ತನಾದೆ ಬಾರಾ ದಳದೋಳು
ಜಂಗಮ ಲಿಂಗ ಹರಿದ ವರ್ಣಆದಿ ಶಕ್ತಿ ಒಡಗೂಡಿ ||4||
ಲಿಂಗಪೂಜೆ ಮಾಡಿ ಮುಕ್ತನಾದೆ ಸೋಳಾ ದಳದೋಳು
ಪ್ರಸಾದಲಿಂಗ ಕಪ್ಪುವರ್ಣ ಪರಾಶಕ್ತಿ ಒಡಗೂಡಿ ||5||
ಲಿಂಗಪೂಜೆ ಮಾಡಿ ಮುಕ್ತನಾದೆ ಎರಡು ದಳದೋಳು
ಮಹಾಲಿಂಗ ಮಾಣಿಕ್ಯವರ್ಣ ಚಿತ್ ಶಕ್ತಿ ಒಡಗೂಡಿ ||6||
ಲಿಂಗಪೂಜೆ ಮಾಡಿ ಮುಕ್ತನಾದೆ ಅಲ್ದಿ ಗ್ರಾಮದೋಳು
ಆಸೆ ರಹಿತ ಗುರುಲಿಂಗ ಜಂಗಮರ ಒಡಗೂಡಿ ||7||
ಲಗ್ನ ತೀರಿದ ಮ್ಯಾಲೇ ವಿಘ್ನ ಬಾರಾದೆ ತಂಗಿ
ಸುಜ್ಞಾನಿಗಳಿಗೆ ಸತಿ ಪುರುಷ ಶೋಭಾನವೇ
ಈ ಶುಭ ಲಗ್ನ ಅಜ್ಞಾನಿಗಳಿಗೆ ತಿಳಿಯಗೂಡದು ||ಪ||
ಆಧಾರ ಸಾಶಿ ಕಟ್ಟಿ ವೇದ ಚೌಕಿಯ ಮೆಟ್ಟಿ
ನಾದ ಮೂರುತಿ ಕ್ರಿಯಾಶಕ್ತಿ ಶೋಭಾನವೇ
ಈ ಆಚಾರಲಿಂಗ ಜಂಗಮಗ ಎನಗೆ ಸೌಭಾಗ್ಯ ||1||
ಸ್ವಾದಿಷ್ಟ ಸಾಶಿ ಜಗುಲಿ ಷಡುವಾದ ಮೈದುನಿಯಲ್ಲಿ
ಅನುಭವದ ಭೂಮಕ ಕೂಡನು ಬಾರೆ ಶೋಭಾನವೇ
ಈ ಗುರುಲಿಂಗ ಜಂಗಮಗ ಎನಗೆ ಸೌಭಾಗ್ಯ ||2||
ಮಣಿಪೂರ ಮಂಟಪದಲ್ಲಿ ಗುಣಪೂರ ಜ್ಞಾನ ಶಕ್ತಿ
ಎಣಿಕೆಗೆ ದಶ ಕಳೆಯ ಚಿನ್ಹ ಶೋಭಾನವೇ
ಈ ಶಿವಲಿಂಗ ಜಂಗಮಗ ಎನಗೆ ಸೌಭಾಗ್ಯ ||3||
ಅನಾಹತ ಆದಿಶಕ್ತಿ ವನಪಿಗೆ ಬಸಿರು ಬಂಕಿ
ಎಣಕಿ ದ್ವಾದಶಿಯ ನೆನಿಯದಂಡಿ ಶೋಭಾನವೇ
ಈ ಜಂಗಮಲಿಂಗ ಜಂಗಮಗ ಎನಗೆ ಸೌಭಾಗ್ಯ ||4||
ಎತ್ತ ನೋಡಲೆ ತಂಗಿ ಸುತ್ಯಲ್ಲ ಮುತ್ತಿನ ಮಾಲೆ
ಬತ್ತೀಸಕೋಟಿ ಗಿಣತಿ ತಣಿಯೆ ಶೋಭಾನವೇ
ಈ ಪ್ರಸಾದಲಿಂಗ ಜಂಗಮಗ ಎನಗೆ ಸೌಭಾಗ್ಯ ||5||
ಅರುವೆಂಬ ಆಜ್ಞಿಯ ಕಟ್ಟಿ ದುರುಗುಣಗಳ ಮೆಟ್ಟಿ
ಗುರುವಿನ ಪಾದ ಹಿಡಿಯಿರಿ ಘಟ್ಟಿ ಶೋಭಾನವೇ
ಈ ಮಹಾಲಿಂಗ ಜಂಗಮಗ ಎನಗೆ ಸೌಭಾಗ್ಯ ||6||
ಆರು ಸ್ಥಲದ ನೇರಿ ಮೀರಿದುನ್ಮನಿ ಸೇರಿ
ಗುರುಲಿಂಗ ತೊರ್ಯರ ನಿಜ ದಾರಿ ಶೋಭಾನವೇ
ಈ ಅಲ್ದಿವಾಸ ಈಶಾಗ ಎನಗೆ ಸೌಭಾಗ್ಯ ||7||
ಶಿವಾಯ ನಮಃ ಓಂ ಹರಾಯ ನಮಃ ಓಂ
ನಮಃ ಶಿವಾಯ ಓಂ ನಮಃ ಶಿವಾಯ ||ಪ||
ಕಾಯದ ಸಂಗ ಮಾಡಿದರಿಂದ
ಆಯಿತೊ ಭವ ತಾಪ
ಸೋಹಂ ಸೋಹಂ ಸೋಹಂ ಎಂದು
ಕಳಕೊ ಭವ ತಾಪ ||1||
ಪಂಚ ವಿಂಶತಿ ತತ್ವಗಳಿಂದ
ಆಯಿತೊ ಈ ತನುವು
ಹಂಚಿ ಹಾಕಿ ಉಳಿದ ಚೈತನ್ಯ ತಿಳಿ
ನೀನೇ ಆ ಘನವು ||2||
ಮರದ ಮ್ಯಾಲಿನ ಹಕ್ಕಿ ಹಾರಿದಂಗ
ಹಾರುತೈತಿ ಈ ಮನವು
ಸ್ಥಿರದಿಂದೇ ಖರೆ ಅರಿವಿನಿಂದ ಪಿಡಿದು
ಬೆರಿಸೋನೀ ಘನವು ||3||
ಸನುಮತದಿಂದಲಿ ತನುಮನ ಧನವನು
ಗುರವಿಗಿ ಅರ್ಪಿಸೋ
ಘನ ತ್ರಿಪ್ರಸಾದವನ್ನೇ ಸವಿದು
ಚಿನುಮಯ ನಾಗಿ ಸೂಸೊ ||4||
ಧರಿಯೊಳಗಧಿಕ ಅಲ್ದಿಯ ವಾಸ
ಗುರುಲಿಂಗ ಸರ್ವೇಶ
ಪಾರು ಮಾಡುತನ ಧೀರತನದಿಂದ
ಸದಾ ಅವರ ದಾಸ ||5||
ಶರಣರ ಸೇವೆ ಮಾಡಿ ಮರಣರಹಿತನಾಗೊ
ಕಿಂಕರ ಭಾವದಿಂದ| ದಯಾವಂತ
ಶಂಕರನ ಒಲುಮೆಯಿಂದ ||ಪ||
ಆದಿ ಅನಾದಿಲಿಂದೆ ಸಾಧು ಸಂತ ಶರಣರು
ಶರಣಾಗಿ ನಡೆದಾರೆ ಮರಣವಿಲ್ಲೆಂದಿದಾರು
ವೇದ ವೇದಾಂತಿಗಳು ಬೋಧಿಸಿ ಹೇಳಿದರು ||1||
ಶರಣ ಮಹಿಮೆಯು ತಿಳಿದುಕೊಂಬದಕ