ಕೆಂಪುದೇವ ಕಣಿಗಲು (Plumeria rubra Linn Plumeria acutifolia Poir)

ಫ್ರಾನ್ಸಿನ ಸಸ್ಯಶಾಸ್ತ್ರಜ್ಞ ಛಾರ್ಲ್ಸ್ ಪ್ಲೂಮೀಯರ್‌ರವರ ಹೆಸರಿನಿಂದ ಪ್ಲುಮೇರಿಯ ಹೆಸರು ಬಂದಿದೆ. ಆಕ್ಯುಟಿಫೋಲಿಯ ಎಂಬುದು ಮೊನಚಾದ ತುದಿ ಇರುವ ಎಲೆಗಳನ್ನು ಸೂಚಿಸುತ್ತದೆ.ಇಂಗ್ಲೀಷ್ ಹೆಸರುಗಳು : ದಿ ಟೆಂಪಲ್ ಟ್ರೀ, ಪಗೋಟ ಟ್ರೀ, ಫ್ರಾಂಜಿಪನಿ.ಕನ್ನಡದ ಇತರ ಹೆಸರುಗಳು : ಕಾಡುಸಂಪಿಗೆ, ದೇವ ಕಣಿಗಲು, ಜೀವದ ಮರ, ದೇವಕಣಿಗಿಲೆ, ದೀಪಕಣಗಿಲೆ.ಭಾರತೀಯ ಹೆಸರುಗಳು : ಹಿಂದಿ : ಚಮೇಲಿ, ಗುಲಾಚಿನ್ ತಮಿಳು : ಪೆರುಂಗಲಿತೆಲುಗು : ಅರ್ಹತಗನ್ನೆರು ಮರಾಠಿ : ಖೇರ್ ಚಂಪಮಲಯಾಳಂ : ವೆಲ್ಲಚಂಪಕನ್, ಕ್ಷೀರ ಚಂಪ ಸಂಸ್ಕೃತ : ಕುಟುಂಬ : ಅಪೊಸಯನೇಸಿಲಭ್ಯತೆ : ನಮ್ಮ ದೇಶದ ಎಲ್ಲ ಕಡೆ ಬೆಳೆಯುತ್ತದೆ.

ಸಸ್ಯ ವಿವರಣೆ :

ಎತ್ತರ : ಸುಮಾರು 15 – 30 ಅಡಿಗಳಷ್ಟು. ಎತ್ತರ ಬೆಳೆಯಬಲ್ಲ ಶುಷ್ಕಪರ್ಣಿಕಾಂಡ : ವಕ್ರಕಾಂಡ. ಗಾಯವಾದರೆ ತೊಗಟೆಯಿಂದ ಬಿಳಿ ರಸ ವಸರುತ್ತದೆ. ಬೂದು ತೊಗಟೆ.ಎಲೆ : ಎರಡೂ ತುದಿಗಳು ಮೊನಚು. ಮಧ್ಯವಿಶಾಲ. ಈಟಿಯಾಕಾರ. ದೊಡ್ಡ ಎಲೆಗಳು. ನಾಳಗಳು ಬಲೆಯ ರೂಪದಲ್ಲಿ ವಿನ್ಯಾಸಗೊಂಡಿವೆ. ಎಲೆಗಳ ಉದ್ದ 1 ಅಡಿಗಳಷ್ಟು. ಎಲೆಗಳು ರೆಂಬೆಯ ತುದಿಯಲ್ಲಿ ಗುಂಪಾಗಿವೆ. ಎಲೆಗಳನ್ನು ಕಿತ್ತರೂ ಬಿಳಿ ರಸ ಬರುತ್ತದೆ.ಪುಷ್ಪಮಂಜರಿ : ಅನೇಕ ಬದಿಗೆ ಕವಲೊಡೆದ ಪುಷ್ಪಮಂಜರಿ.ಹೂವು : ಸುಗಂಧ ಭರಿತ ಮಧ್ಯ ಹಳದಿ ಕೇಂದ್ರಗಳನ್ನು ಹೊಂದಿದ ಕೆಂಪು ಹೂವುಗಳು.ಹೂವು ಬಿಡುವ ಕಾಲ : ಮಾರ್ಚಿ – ಏಪ್ರಿಲ್ ಹಾಗೂ ಜುಲೈ – ಅಕ್ಟೋಬರ್.ಫಲ : ಫಾಲಿಕಲ್‌ಗಳು. ಬೀಜಗಳಿಗೆ ರೇಷ್ಮೆಯ ಕುಚ್ಚು ಇದೆ. 20 ಸೆಮೀ ಉದ್ದದ ಕಾಯಿಗಳು.ವಂಶಾಭಿವೃದ್ದಿ : ರೆಂಬೆಗಳ ಗಣಿಕೆಗಳಿಂದ.

ಉಪಯೋಗಗಳು :

ಅಲಂಕಾರಿಕ : ಉಪವನಗಳಲ್ಲಿ ಬೆಳೆಸುತ್ತಾರೆ.ಔಷಧೀಯ : ತೊಗಟೆ ಜ್ವರವನ್ನು ನಿವಾರಿಸುತ್ತದೆ. ಗಾಯಗಳನ್ನು ಗುಣಪಡಿಸುತ್ತದೆ. ಅಂಟುಲೇಪದ ರೂಪದಲ್ಲಿ ಬಾವುಗಳನ್ನು ಕಡಿಮೆ ಮಾಡುತ್ತದೆ. ಪ್ರಭಲ ವಿರೇಚಕಕಾರಿಯಾಗಿ ವರ್ತಿಸುತ್ತದೆ. ಭೇದಿಗೆ, ಸಂಭೋಗದಿಂದಾದ ಹುಣ್ಣು ಮಾಯಿಸಲು ಉಪಯೋಗಿಸುತ್ತಾರೆ. ಹಾವಿನ ಕಡಿತಕ್ಕೆ ಒಳ್ಳೆಯದು.

ಲೇಖಕರು : ಸಿ. ಡಿ. ಪಾಟೀಲ