ಕೆಂಪು ಚಳ್ಳೆ (Cordia sebestena Linn)

ಕಾರ್ಡಿಯ ಎಂಬ ಹೆಸರು ವೆಲೇರಿಯಸ್ ಕಾರ್ಡಸ್ ಎಂಬ ಜರ್ಮನ್ ಸಸ್ಯಶಾಸ್ತ್ರಜ್ಞರ ಗೌರವಾರ್ಥವಾಗಿ ಇಟ್ಟಿರುವ ಹೆಸರು ಹಾಗೂ ಸೆಬಸ್ಟಿನ್ ಹತ್ತಿರದ ಸಬೆಸ್ಟ ನಗರದ ಸುತ್ತಲೂ ಬೆಳೆಯುವ ಸಪಿಸ್ತಾನ್ ಎಂಬ ಪರ್ಸಿಯನ್ ಪ್ರಭೇದದಿಂದ ಬಂದಿದೆ. ಸಬೆಸ್ಟನ್ಸ್‌ನಂತಹ ಕಾಯಿಗಳೂ ಎಂದು ಅರ್ಥಕೊಡುತ್ತದೆ.ಇಂಗ್ಲೀಷ್ ಹೆಸರುಗಳು : ದಿ ಸ್ಕಾರ್ಲೆಟ್ ಕಾರ್ಡಿಯಾ, ಅಲಾಯ್ ವುಡ್ಕನ್ನಡದ ಇತರ ಹೆಸರುಗಳು : ಚೆಳ್ಳೆ ಕೆಂದಾಳಭಾರತೀಯ ಹೆಸರುಗಳು : ಹಿಂದಿ : ಲಾಲ್ ಲಸೋರ್ ತಮಿಳು : ಈಚಿ ನರುವಿಡಿಹ್ಲಿತೆಲುಗು : ವಿರಿಗಿ ಮರಾಠಿ : ಮಲಯಾಳಂ : ಸಂಸ್ಕೃತ : ಕುಟುಂಬ : ಬೊರ್ಯಾಜಿನೇಸಿ ಲಭ್ಯತೆ : ಭಾರತದ ಎಲ್ಲೆಡೆ ಬೆಳೆಯುತ್ತದೆ.

ಸಸ್ಯ ವಿವರಣೆ : ಎತ್ತರ : 15 – 30 ಅಡಿಗಳಷ್ಟು ಎತ್ತರ ಬೆಳೆಯಬಲ್ಲ, ಶುಷ್ಕಪರ್ಣಿಕಾಂಡ : ಏಣುಳ್ಳ ಕಂದುಬಣ್ಣದ ತೊಗಟೆಎಲೆ : ದೊಡ್ಡ ಎಲೆಗಳು. ತುದಿಗಳು ಮೊಂಡ. ಪರ್ಯಾಯ ಜೋಡಣೆಯ ಸರಳ ಎಲೆಗಳು. ಒರಟು ರಚನೆಯ ಎಲೆಗಳು ಅಂಡಾಕಾರದಂತಿವೆ. ಜಾಲಬಂಧ ನಾಳ ವಿನ್ಯಾಸ ಎದ್ದು ಕಾಣುತ್ತದೆ. ಕಡು ಹಸಿರು ಬಣ್ಣ.ಪುಷ್ಪಮಂಜರಿ : ರೆಂಬೆಯ ತುದಿಗೆ ಗೊಂಚಲುಗಳುಂಟು.ಹೂವು : ಸುಂದರ ಕಿತ್ತಳೆ ಬಣ್ಣದ ಹೂವುಗಳು. ಗಂಟೆಯಂತಿವೆ.ಹೂವು ಬಿಡುವ ಕಾಲ : ಜನವರಿ – ಮಾರ್ಚಿಫಲ : ಚಿರಸ್ಥಾಯಿ ಪುಷ್ಪ ಪಾತ್ರೆಯಲ್ಲಿ ಮುಚ್ಚಿದ ಬಿಳಿ ಅಷ್ಟಿಫಲ (ಬೆರ್ರಿ)ವಂಶಾಭಿವೃದ್ದಿ : ಬೀಜ ಹಾಗೂ ಕಾಂಡದ ಗಣಿಕೆಗಳಿಂದ.

ಉಪಯೋಗಗಳು : ಅಲಂಕಾರಿಕ : ಅತ್ಯಂತ ಸುಂದರ ವೃಕ್ಷ. ಉದ್ಯಾನಗಳಲ್ಲಿ ಬೆಳೆಸುತ್ತಾರೆ.ಔಷಧೀಯ : ಇದರ ಎಲೆಗಳಲ್ಲಿ ಪ್ರೋಅಧಿಕವಿದ್ದು ಪಚನಕ್ರಿಯೆಗೆ ಸಹಾಯಮಾಡುತ್ತದೆ.ಆರ್ಥಿಕ : ಇದು ಒಂದು ಉತ್ತಮ ಮೇವಿನ ಬೆಳೆ.
ಲೇಖಕರು : ಸಿ. ಡಿ. ಪಾಟೀಲ