ಸಸ್ಯದ ಭಾಗಗಳು
ಸಸ್ಯ ಪ್ರಪಂಚದಲ್ಲಿ 3,94,000 ಸಸ್ಯ ಪ್ರಭೇದಗಳಿವೆ ಎಂದು ಸಸ್ಯಶಾಸ್ತ್ರಜ್ಞರು ಅಂದಾಜು ಮಾಡಿದ್ದಾರೆ. ಆದರೂ ಕೂಡ ಇನ್ನೂ ಗುರುತಿಸಬೇಕಾದ ಲಕ್ಷಾಂತರ ಸಸ್ಯಗಳಿವೆ. ಇವುಗಳನ್ನು ಶೈವಲ, ಪಾಮಾಜಿ ಸಸ್ಯಗಳು, ಪುಚ್ಛ ಸಸ್ಯಗಳು, ಅನಾವೃತ ಬೀಜಕಾರಿ ಸಸ್ಯಗಳು ಹಾಗೂ ಆವೃತ ಬೀಜಕಾರಿ ಸಸ್ಯಗಳೆಂದು ವಿಂಗಡಿಸಲಾಗಿದೆ.
ಆವೃತ ಬೀಜಕಾರಿ ಸಸ್ಯಗಳ ಗುಂಪಿಗೆ ಹೂಬಿಡುವ ಸಸ್ಯಗಳು ಸೇರುತ್ತವೆ. ಹೂವು ಸಂತಾನೋತ್ಪತ್ತಿಗಾಗಿ ಮಾರ್ಪಾಟುಗೊಂಡ ಪ್ರಕಾಂಡ. ಆವೃತ ಬೀಜಕಾರಿ ಸಸ್ಯಗಳು ಭೂಮಿಯ ಮೇಲೆ ಕಾಣಿಸಿಕೊಂಡಾಗಿನಿಂದ, ಭೂಮಿಯ ಹವಾಗುಣದಲ್ಲಿ ಬದಲಾವಣೆಗಳಾಗಿವೆ.
ಆವೃತ ಬೀಜಕಾರಿ ಸಸ್ಯಗಳು ಸಸ್ಯ ಸಾಮ್ರಾಜ್ಯದಲ್ಲಿಯೇ ಪ್ರಮುಖವಾದವುಗಳು. ಇವುಗಳಲ್ಲಿ ಅನೇಕ ಗಣ, ಕುಟುಂಬ ಹಾಗೂ ಜಾತಿಗೆ ಸೇರಿದ ಸುಮಾರು 2,50,000ಕ್ಕೂ ಹೆಚ್ಚು ಪ್ರಭೇದಗಳನ್ನು ಇದುವರೆಗೆ ಗುರುತಿಸಲಾಗಿದೆ. ಭೂಮಿಯ ಮೇಲೆ ವಿವಿಧ ರೀತಿಯ ಪ್ರದೇಶ ಹಾಗೂ ಪರಿಸರಗಳಲ್ಲಿ ಇವು ಬೆಳೆಯುತ್ತವೆ. ರಚನೆ, ಸ್ವಭಾವ ಹಾಗೂ ಜೀವನಕ್ರಮದಲ್ಲಿ ಇವು ಬಹು ವೈವಿಧ್ಯವನ್ನು ಪ್ರದರ್ಶಿಸುತ್ತವೆ. ಈ ಸಸ್ಯಗಳ ಆಕಾರ ಮತ್ತು ಗಾತ್ರದ ಮೇಲೆ ಇವುಗಳನ್ನು ಮೂಲಿಕೆ (ದಂಟುಳ್ಳ ಸಸ್ಯ), ಪೊದರು ಹಾಗೂ ಮರಗಳೆಂದು ವಿಂಗಡಿಸಿದ್ದಾರೆ. ಈ ಸಸ್ಯಗಳ ಬೀಜಗಳ ಸುತ್ತ ಆವರಣವಿರುವುದರಿಂದ ಇವುಗಳಿಗೆ ಆವೃತ ಬೀಜಕಾರಿ ಸಸ್ಯಗಳೆಂದು ಹೆಸರು. ಆವೃತ ಬೀಜಕಾರಿ ಸಸ್ಯದ ಹೂವಿನ ಅಂಡಾಶಯದೊಳಗಿರುವ ಅಂಡಕಗಳು ಗರ್ಭಾಂಕುರತೆ ಹೊಂದಿದನಂತರ ಬೀಜಗಳಾಗುತ್ತವೆ. ಅಂಡಾಶಯವು ಕಾಯಿಯಾಗಿ, ಅಂಡಾಶಯದ ಕವಚವು ಫಲಾವರಣವಾಗಿಯೂ ಮಾರ್ಪಾಟಾಗುತ್ತವೆ.
ಆವೃತ ಬೀಜಕಾರಿ ಸಸ್ಯಗಳನ್ನು ದ್ವಿದಳ ಸಸ್ಯಗಳು ಹಾಗೂ ಏಕದಳ ಸಸ್ಯಗಳೆಂದು ವಿಂಗಡಿಸಿದ್ದಾರೆ. ಈ ಸಸ್ಯಗಳು ಆರ್ಥಿಕ ಹಾಗೂ ಔಷಧೀಯ ದೃಷ್ಟಿಯಿಂದ ಬಹಳ ಮಹತ್ವವನ್ನು ಪಡೆದಿವೆ. ನಾವು ಸೇವಿಸುವ ತರಕಾರಿಗಳು, ಫಲಗಳು, ನಾರಿನ ಸಸ್ಯಗಳು, ಪಾನೀಯಗಳು, ಬೇಳೆಕಾಳುಗಳು, ಎಣ್ಣೆಕಾಳುಗಳು, ಧಾನ್ಯಗಳು ಈ ಸಸ್ಯಗಳಿಂದಲೇ ನಮಗೆ ದೊರೆಯುತ್ತವೆ.
ಆವೃತ ಬೀಜಕಾರಿ ಸಸ್ಯದ ದೇಹದಲ್ಲಿ ಮುಖ್ಯವಾಗಿ ಪ್ರಕಾಂಡ ವ್ಯವಸ್ಥೆ ಹಾಗೂ ಬೇರಿನ ವ್ಯವಸ್ಥೆ ಎಂಬ ಎರಡು ವ್ಯವಸ್ಥೆಗಳಿವೆ. ದ್ವಿದಳ ದಾನ್ಯಗಳಲ್ಲಿ ತಾಯಿಬೇರಿನ ವ್ಯವಸ್ಥೆಯನ್ನು ಹಾಗೂ ಏಕದಳ ಸಸ್ಯಗಳಲ್ಲಿ ತಂತುಬೇರಿನ ವ್ಯವಸ್ಥೆಯನ್ನು ಕಾಣುತ್ತೇವೆ.
ಸಸ್ಯದ ಪ್ರಕಾಂಡದ ಅಕ್ಷಕ್ಕೆ ಕಾಂಡ ಎಂದು ಹೆಸರು. ಇದರಲ್ಲಿ ಗಿಣ್ಣು ಹಾಗೂ ಅಂತರಗಿಣ್ಣುಗಳಿವೆ. ಗಿಣ್ಣಿನಿಂದ ಎಲೆಗಳು ಬೆಳೆಯುತ್ತವೆ. ಎಲೆಗಳಿಗೆ ವಿವಿಧ ಗಾತ್ರ, ಆಕಾರ ಹಾಗೂ ರಚನೆಗಳಿವೆ. ಎಲೆಯ ಕುಂಕುಳದಲ್ಲಿ ಕುಂಕುಳಮೊಗ್ಗು ಇರುತ್ತದೆ. ಈ ಮೊಗ್ಗು ಹೂವು, ಪುಷ್ಪಮಂಜರಿ ಅಥವಾ ರೆಂಬೆಯಾಗಿ ಬೆಳೆಯಬಹುದು. ಬೇರು ಹಾಗೂ ಕಾಂಡಗಳು ವಿವಿಧ ಉದ್ದೇಶಗಳಿಗಾಗಿ ಮಾರ್ಪಾಡಾಗುತ್ತವೆ.
ಅ. ಎಲೆ :
ಇದು ದ್ಯುತಿಸಂಶ್ಲೇಷಣೆಯಲ್ಲಿ ಪ್ರಮುಖ ಪಾತ್ರವನ್ನು ವಹಿಸುತ್ತದೆ. ಎಲೆಯನ್ನು ಎಲೆಯ ಬುಡ, ಎಲೆತೊಟ್ಟು ಹಾಗೂ ಎಲೆ ಪತ್ರ ಎಂದು ವಿಂಗಡಿಸಲಾಗಿದೆ (ಚಿತ್ರ 1).
i) ಎಲೆಯ ಬುಡ : ಎಲೆಯ ತೊಟ್ಟು ಹಾಗೂ ಕಾಂಡವನ್ನು ಜೋಡಿಸುವ ಭಾಗವೇ ಎಲೆಯ ಬುಡ. ಮಾವಿನ ಎಲೆಯಲ್ಲಿ ಉಬ್ಬಿದ ಎಲೆಬುಡವಿದೆ. ತೆಂಗಿನಲ್ಲಿ ಸುತ್ತುವರಿದ ಎಲೆಯ ಬುಡವಿದೆ.
ii) ಎಲೆ ತೊಟ್ಟು : ಎಲೆತೊಟ್ಟುಳ್ಳ ಎಲೆಯನ್ನು ತೊಟ್ಟುಸಹಿತ ಎಲೆ ಎನ್ನುತ್ತಾರೆ. ಉದಾ : ಮಾವು, ಆಲ. ತೊಟ್ಟುಗಳಿಲ್ಲದ ಎಲೆಗೆ ತೊಟ್ಟುರಹಿತ ಎಲೆ ಎನ್ನುತ್ತಾರೆ ಉದಾ : ಎಕ್ಕ, ಬಟ್ಟಲ ಹೂವು ಸಸ್ಯ.
iii) ಎಲೆಪತ್ರ : ದ್ಯುತಿ ಸಂಶ್ಲೇಷಣೆ ಕ್ರಿಯೆ ನಡೆಯುವ ಅಗಲವಾಗಿರುವ ಎಲೆಯ ತೆಳ್ಳನೆಯ ಹಸಿರು ಭಾಗ. ಎಲೆಯ ಆಕಾರ, ತುದಿ, ಅಂಚು ಹಾಗೂ ನಾಳ ವಿನ್ಯಾಸಗಳಲ್ಲಿ ವೈವಿಧ್ಯವಿದೆ
(ಚಿತ್ರ 1).
ಅನುಪರ್ಣಗಳು :
ಎಲೆಯ ಬುಡದ ಎರಡೂ ಪಾರ್ಶ್ವಗಳಲ್ಲಿ ಕಾಂಡಕ್ಕೆ ಸೇರಿಕೊಂಡು, ಕ್ಷೀಣವಾದ ಎಲೆಯಂತಹ ಅಂಗಗಳೇ ಅನುಪರ್ಣಗಳು. ಎಲೆಯಲ್ಲಿ ಅನುಪರ್ಣಗಳಿದ್ದರೆ ಅಂಥ ಎಲೆಗೆ ಅನುಪರ್ಣೀಯ ಎಲೆ ಅನ್ನುತ್ತಾರೆ. ಇರದಿದ್ದರೆ ಅನುಪರ್ಣರಹಿತ ಎಲೆ ಎನ್ನುತ್ತಾರೆ.
ಅನುಪರ್ಣಗಳ ಸ್ಥಾನ ಹಾಗೂ ರಚನೆಯನ್ನವಲಂಬಿಸಿ ವರ್ಗೀಕರಣ ಮಾಡಲಾಗಿದೆ (ಚಿತ್ರ 2).
ಪತ್ರಜೋಡಣೆ
ಕಾಂಡದ ಗಿಣ್ಣುಗಳಲ್ಲಿ ಎಲೆಗಳು ನಿರ್ದಿಷ್ಟ ಕ್ರಮದಲ್ಲಿ ಜೋಡಣೆಯಾಗಿರುತ್ತವೆ. ಇದಕ್ಕೆ ಪತ್ರಜೋಡಣೆ ಎನ್ನುತ್ತಾರೆ. ಇದರಿಂದ ಸಸ್ಯಕ್ಕೆ ಸರಿಯಾಗಿ ಗಾಳಿ, ಬೆಳಕು ಲಭ್ಯವಾಗುತ್ತವೆ.
ಪತ್ರ ಜೋಡಣೆಯಲ್ಲಿ ಮೂರು ವಿಧಗಳುಂಟು (ಚಿತ್ರ 3)
1. ಪರ್ಯಾಯ ಜೋಡಣೆ : ಒಂದೊಂದು ಗಿಣ್ಣಿನಲ್ಲಿ ಒಂದೊಂದು ಎಲೆ ಪರ್ಯಾಯ ರೀತಿಯಲ್ಲಿ ಜೋಡಣೆಯಾಗಿವೆ. ಉದಾ : ಮಾವು, ಬೇವು.
2. ಅಭಿಮುಖ ಜೋಡಣೆ : ಒಂದು ಗಿಣ್ಣಿನಲ್ಲಿ ಎರಡು ಎಲೆಗಳು ಎದುರು ಬದುರಾಗಿ ಜೋಡಣೆಯಾಗಿವೆ. ಉದಾ: ಎಕ್ಕ.
3. ಸುತ್ತು ಜೋಡಣೆ : ಒಂದು ಗಿಣ್ಣಿನಲ್ಲಿ ಎರಡಕ್ಕಿಂತ ಹೆಚ್ಚು ಎಲೆಗಳು ಬೆಳೆಯುತ್ತವೆ. ಉದಾ : ಸಪ್ತಪರ್ಣಿ.
ನಾಳವಿನ್ಯಾಸ :
ಎಲೆಯ ಪತ್ರದಲ್ಲಿ ಅನೇಕ ನಾಳಗಳಿವೆ. ಅವುಗಳ ಸಮೂಹಕ್ಕೆ ನಾಳವಿನ್ಯಾಸ ಎನ್ನುತ್ತಾರೆ. ಇದರಲ್ಲಿ ಎರಡು ವಿಧಗಳಿವೆ.
ಜಾಲಬಂಧ ನಾಳವಿನ್ಯಾಸ : ನಾಳಗಳು ಬಲೆಯ ರೂಪದಲ್ಲಿ ವಿನ್ಯಾಸಗೊಂಡಿದ್ದರೆ ಅದಕ್ಕೆ ಜಾಲಬಂಧ ನಾಳವಿನ್ಯಾಸವೆನ್ನುತ್ತಾರೆ. ನಾಳಗಳು ಸಮಾಂತರವಾಗಿ ವಿನ್ಯಾಸಗೊಂಡಿದ್ದರೆ ಅವಕ್ಕೆ ಸಮಾನಾಂತರ ನಾಳವಿನ್ಯಾಸ ಎನ್ನುತ್ತಾರೆ. (ಚಿತ್ರ 4).
ಎಲೆಗಳಲ್ಲಿನ ಬಗೆಗಳು
ಸರಳ ಎಲೆ : ಒಂದು ತೊಟ್ಟಿನ ಮೇಲೆ ಅಖಂಡವಾದ ಎಲೆಪತ್ರ ಇರುವ ಎಲೆಗೆ ಸರಳ ಎಲೆ ಎನ್ನುತ್ತಾರೆ.
ಸಂಯುಕ್ತ ಎಲೆ : ಅಖಂಡವಾದ ಎಲೆ ಪತ್ರ ಛಿದ್ರಛಿದ್ರವಾಗಿ ಒಡೆದು, ಪ್ರತಿಯೊಂದು ಭಾಗವೂ ತನ್ನದೇ ಆದ ತೊಟ್ಟಿನಿಂದ ಅಕ್ಷದಿಂಡಿಗೆ ಅಂಟಿಕೊಂಡಿದ್ದರೆ ಅದಕ್ಕೆ ಸಂಯುಕ್ತ ಎಲೆ ಎನ್ನುತ್ತಾರೆ. ಎಲೆಯ ಪ್ರತಿಯೊಂದು ಬಿಡಿಭಾಗಕ್ಕೆ ಕಿರುಪತ್ರ ಎನ್ನುತ್ತಾರೆ. ಸಂಯುಕ್ತ ಎಲೆಯಲ್ಲಿ ಗರಿರೂಪಿ ಹಾಗೂ ಹಸ್ತರೂಪಿ ಸಂಯುಕ್ತ ಎಲೆಗಳಿವೆ (ಚಿತ್ರ 5)
1. ಗರಿರೂಪಿ ಸಂಯುಕ್ತ ಎಲೆ : ಗರಿರೂಪಿ ಸಂಯುಕ್ತ ಎಲೆಯ ಅಕ್ಷದಿಂಡಿಗೆ ಕಿರು ಪತ್ರಗಳು ಎದುರುಬದುರಾಗಿ ಅಂಟಿಕೊಂಡಿರುತ್ತವೆ. ಅಕ್ಷದಿಂಡಿಗೆ ಕಿರುಪತ್ರಗಳು ನೇರವಾಗಿ ಅಂಟಿಕೊಂಡಿದ್ದರೆ ಅದಕ್ಕೆ ಏಕಗರಿರೂಪಿ ಸಂಯುಕ್ತ ಎಲೆ ಎನ್ನುತ್ತಾರೆ.
2. ದ್ವಿಗರಿರೂಪಿ ಸಂಯುಕ್ತ ಎಲೆ : ಕೆಲವು ಸಸ್ಯಗಳಲ್ಲಿ ಅಕ್ಷದಿಂಡುವಿನಿಂದ ಕವಲುಗಳು ಹೊರಟು ದ್ವಿತೀಯ ಅಕ್ಷದಿಂಡಿಗೆ ಕಿರುಪತ್ರಗಳು ಅಂಟಿಕೊಂಡಿರುತ್ತವೆ.
3. ತ್ರಿಗರಿರೂಪಿ ಸಂಯುಕ್ತ ಎಲೆ : ಕೆಲವು ಸಸ್ಯಗಳಲ್ಲಿ ಮುಖ್ಯ ಅಕ್ಷದಿಂಡು ಎರಡು ಸಲ ಕವಲೊಡೆದು ತೃತೀಯ ಕವಲುದಿಂಡಿನ ಮೇಲೆ ಕಿರುಪತ್ರಗಳು ಬೆಳೆಯುತ್ತವೆ. (ಚಿತ್ರ 5).
ಹಸ್ತರೂಪಿ ಸಂಯುಕ್ತ ಎಲೆ
ಇದರಲ್ಲಿ ಕಿರುಪತ್ರಗಳು ಎಲೆಯ ತೊಟ್ಟಿನ ತುದಿಗೆ ಸೇರಿಕೊಂಡು ಒಂದು ಸಾಮಾನ್ಯ ಬಿಂದುವಿನಿಂದ ಬೆರಳುಗಳಂತೆ ಹರಡಿರುತ್ತವೆ. ಇದರಲ್ಲಿ ಏಕಪರ್ಣಿಕೆ, ದ್ವಿಪರ್ಣಿಕೆ, ತ್ರಿಪರ್ಣಿಕೆ, ಚತುರ್ಥಪರ್ಣಿಕೆ ಹಾಗೂ ಬಹುಪರ್ಣಿಕೆ ಎಂದು ವಿಧಗಳುಂಟು (ಚಿತ್ರ 6).
ಬ. ಪುಷ್ಪಮಂಜರಿ :
ಹೂವುಗಳನ್ನು ತಳೆಯುವ ಕಾಂಡ ಅಥವಾ ರೆಂಬೆಯನ್ನು ಪುಷ್ಪಮಂಜರಿವೃಂತ ಎಂದು ಕರೆಯುತ್ತಾರೆ. ಇದರ ಮೇಲೆ  ಬೆಳೆದ ಹೂವುಗಳ ಸಮೂಹವನ್ನು ಪುಷ್ಪಮಂಜರಿ ಅಥವಾ ಹೂಗೊಂಚಲು ಎಂದು ಕರೆಯುತ್ತಾರೆ.
ವಿಧಗಳು :
ಅ) ಮಧ್ಯಾಭಿಸರ (ಅನಿಯತ)ಪುಷ್ಪಮಂಜರಿ: ಇದರಲ್ಲಿ ಪುಷ್ಪಮಂಜರಿವೃಂತದ ಬೆಳವಣಿಗೆಯು ಅನಿಯತವಾಗಿದ್ದು, ಹೊಸಹೊಸ ಹೂವಿನ ಮೊಗ್ಗುಗಳು ಮಂಜರಿವೃಂತದ ತುದಿಯಲ್ಲಿ ಅಥವಾ ಕೇಂದ್ರದಲ್ಲಿ ವೃದ್ದಿಹೊಂದುತ್ತಲೇ ಇರುತ್ತವೆ. ಇದರಲ್ಲಿ ಹೂವುಗಳು ಊರ್ದ್ವಗಾಮಿಯಾಗಿ ಅಥವಾ ಕೇಂದ್ರಭಿಗಾಮಿಯಾಗಿ ಅರಳುತ್ತವೆ.
1) ಸರಳ ಮಧ್ಯಾಭಿಸರ : ಇದರಲ್ಲಿ ಮಂಜರಿವೃಂತವು ನೀಳ ಹಾಗೂ ನೇರವಾಗಿರುತ್ತದೆ. ಮಂಜರಿವೃಂತದ ಮೇಲೆ ತೊಟ್ಟು ಇರುವ ಮೊಗ್ಗುಗಳು ಮೇಲ್ಮುಖವಾಗಿ ಅರಳುತ್ತವೆ. ಹೂವುಗಳಲ್ಲಿ ಸಮಾನತೊಟ್ಟುಗಳಿವೆ.
2) ನೀಳಛತ್ರ : ಅನಿಯತವಾಗಿ ಬೆಳೆಯುವ ಹಾಗೂ ನೇರವಾಗಿರುವ ಮಂಜರಿವೃಂತವಿದೆ. ಹೂವುಗಳು ಮೇಲ್ಮುಖವಾಗಿ ಅರಳುತ್ತವೆ. ಕೆಳಗಿನ ಹೂವುಗಳ ತೊಟ್ಟು ದೊಡ್ಡದಿದ್ದು ಮೇಲೆ ಹೋದಂತೆ ಚಿಕ್ಕವಾಗುತ್ತವೆ.
3) ಕದಿರು ಮಂಜರಿ : ಅನಿಯತವಾಗಿ ಬೆಳೆಯುವ, ನೀಳ ಹಾಗೂ ನೆಟ್ಟಗೆ ಬೆಳೆಯುವ ಮಂಜರಿವೃಂತದ ಮೆಲೆ ತೊಟ್ಟಿಲ್ಲದ ಹೂವುಗಳಿವೆ. ಇದರಲ್ಲಿ ಹೂವುಗಳು ಮೇಲ್ಮುಖವಾಗಿ ಅರಳುತ್ತವೆ.
4) ಲಾಳಗುಚ್ಛ : ಅಕ್ಷಸ್ತಂಭದ ಮೇಲೆ ತೊಟ್ಟು ಇಲ್ಲದ ಹೂವುಗಳಿವೆ. ಆವರಣ ಪತ್ರಕ ಹೂವುಗಳನ್ನು ಸಂರಕ್ಷಿಸುತ್ತದೆ.
5) ಪೀಠಛತ್ರ : ಇದರಲ್ಲಿ ತೊಟ್ಟು ಇರುವ ಮೊಗ್ಗುಗಳು ಮಂಜರಿವೃಂತದ ತುತ್ತತುದಿಯಲ್ಲಿ ಬೆಳೆದಿದ್ದು, ಅವುಗಳಲ್ಲಿ ಅರಳುವಿಕೆ ಕೇಂದ್ರದ ಕಡೆಗಿರುತ್ತದೆ.
6) ಚೆಂಡು ಮಂಜರಿ : ಇದರಲ್ಲಿ ಮಂಜರಿವೃಂತವು ಸಂಪೂರ್ಣವಾಗಿ ಸಂಕುಚಿತಗೊಂಡಿದ್ದು, ಚಪ್ಪಟೆಯಾಗಿರುತ್ತವೆ. ಇದರ ಮೇಲೆ ತೊಟ್ಟುರಹಿತ ಕಿರುಪುಷ್ಪಗಳಿರುತ್ತವೆ.
7) ಗೋಳಾಕಾರ ಮಂಜರಿ : ಇದರಲ್ಲಿ ಮಂಜರಿವೃಂತವು ಸಂಪೂರ್ಣ ಸಂಕುಚಿತಗೊಂಡು, ಗೋಲಾಕಾರದಂತೆ ಕಾಣುತ್ತದೆ. ಇದರಲ್ಲಿ ತೊಟ್ಟುರಹಿತ ಹೂವುಗಳಿವೆ.
ಬ) ಮಧ್ಯಾರಂಭಿ (ನಿಯತ) ಪುಷ್ಪಮಂಜರಿ : ಇದರಲ್ಲಿ ಪುಷ್ಪಮಂಜರಿ ವೃಂತವು ಮತ್ತು ಅದರ ಕವಲುಗಳೆಲ್ಲ ಒಂದೊಂದೇ ಹೂವಿನಲ್ಲಿ ಕೊನೆಗೊಳ್ಳುತ್ತವೆ. ಮೊಗ್ಗುಗಳ ಅರಳುವಿಕೆ ಕೇಂದ್ರದಿಂದ ವಿಮುಖವಾಗಿರುತ್ತವೆ.
1) ಒಂದೇ ಹೂವುಳ್ಳ ಪುಷ್ಪಮಂಜರಿ : ಇಲ್ಲಿ ಮಂಜರಿವೃಂತವು ಕವಲೊಡೆಯದೆ ಒಂದೇ ಒಂದು ಹೂವಿನಲ್ಲಿ ಕೊನೆಗೊಳ್ಳುತ್ತದೆ.
2) ಒಂದೇ ಬದಿ ಕವಲೊಡೆಯುವ ಪುಷ್ಪಮಂಜರಿ : ಇದರಲ್ಲಿ ಪ್ರಮುಖ ಮಂಜರಿವೃಂತವು ಒಂದೇ ಹೂವಿನಲ್ಲಿ ಕೊನೆಗೊಳ್ಳುತ್ತದೆ. ಅನಂತರ ಪ್ರತಿಸಲ ಒಂದೇ ಬದಿಯಲ್ಲಿ ಕವಲೊಡೆದು ಒಂದೊಂದೇ ಹೂವಿನಲ್ಲಿ ಕೊನೆಗೊಳ್ಳುತ್ತದೆ.
3) ಸರಳ ಮಧ್ಯಾರಂಭಿ : ಇದರಲ್ಲಿ ಪ್ರಮುಖ ಮಂಜರಿವೃಂತವು ಒಂದೇ ಹೂವಿನಲ್ಲಿ ಕೊನೆಗೊಳ್ಳುತ್ತದೆ. ಇದರ ಕೆಳಗೆ, ಎರಡು ಬದಿಗೆ ಎರಡು ಚಿಕ್ಕ ಮೊಗ್ಗುಗಳಿರುತ್ತವೆ. ಇದಕ್ಕೆ ಸರಳ ದ್ವಿಪಾರ್ಶ್ವ ಮಧ್ಯಾರಂಭಿ ಎಂದೂ ಕರೆಯುತ್ತಾರೆ.
4) ಎರಡು ಬದಿ ಕವಲೊಡೆಯುವ ಪುಷ್ಪಮಂಜರಿ : ಇದರಲ್ಲಿ ಮಂಜರಿ ವೃಂತವು ಒಂದು ಹೂವನ್ನು ತಳೆಯುತ್ತದೆ. ಅದು ಉಭಯ ಪಾರ್ಶ್ವಗಳಲ್ಲಿ ಕವಲೊಡೆದು ಮತ್ತೆ ಒಂದೊಂದು ಹೂವನ್ನು ತಳೆಯುತ್ತದೆ. ಅನಂತರ ಉಭಯ ಪಾರ್ಶ್ವದ ಕವಲುಗಳು ಮತ್ತೊಮ್ಮೆ ಇದೇ ರೀತಿ ಕವಲೊಡೆದು ಒಂದೊಂದು ಹೂವುಗಳನ್ನು ತಳೆಯುತ್ತವೆ.
5) ಬಹುಬದಿಗೆ ಕವಲೊಡೆಯುವ ಪುಷ್ಪಮಂಜರಿ : ಪ್ರಮುಖ ಮಂಜರಿವೃಂತವು ಒಂದು ಹೂವನ್ನು ತಳೆಯುತ್ತದೆ. ಅನಂತರ ಮೂರು ಅಥವಾ ಮೂರಕ್ಕಿಂತ ಹೆಚ್ಚು ಪಾರ್ಶ್ವಬದಿಗಳಲ್ಲಿ ಕವಲೊಡೆದು, ಪ್ರತಿಯೊಂದು ಕವಲಿನ ತುದಿಯಲ್ಲಿ ಒಂದೊಂದು ಹೂಗಳು ತಳೆಯುತ್ತವೆ.
ಕ) ವಿಶೇಷ ಪುಷ್ಪಮಂಜರಿ : ಇದರಲ್ಲಿ ಮಂಜರಿವೃಂತವು ರೂಪಾಂತರಗೊಂಡು ವಿಶಿಷ್ಟ ಆಕಾರ ಹಾಗೂ ವಿನ್ಯಾಸಗಳನ್ನು ಹೊಂದಿರುತ್ತದೆ.
1. ಹೈಪಂಥೋಡಿಯಂ ಪುಷ್ಪಮಂಜರಿ : ಇದರಲ್ಲಿ ಮಂಜರಿವೃಂತವು ಮೆಲೆ ರಂದ್ರವುಳ್ಳ ಮಡಿಕೆಯಾಕಾರವಾಗಿ ರೂಪಾಂತರಗೊಂಡಿದೆ. ಇದರ ಒಳಗಡೆಗೆ ತೊಟ್ಟುರಹಿತ ಗಂಡು, ಹೆಣ್ಣು ಹಾಗೂ ನಪುಂಸಕ ಹೂಗಳಿವೆ.
ಕ. ಹೂವು
ಇದು ಸಸ್ಯಗಳ ವಂಶಾಭಿವೃದ್ದಿ ಕಾರ್ಯವನ್ನು ನಿರ್ವಹಿಸುತ್ತದೆ. ಹೂವುಗಳಲ್ಲಿ ವೈವಿಧ್ಯ ಹೆಚ್ಚು. ಒಂದು ಮಾದರಿ ಹೂವಿನಲ್ಲಿ ಪುಷ್ಪವೃಂತ, ಪುಷ್ಪಪೀಠ, ಪುಷ್ಪಮಂಡಳಗಳು ಇವೆ.
ಪುಷ್ಪವೃಂತ : ಇದು ಸಂಕುಚಿತಗೊಂಡ ಹೂವಿನ ಅಕ್ಷಕಾಂಡ. ಇದರ ತುದಿಯಲ್ಲಿ ಪುಷ್ಪಮಂಡಳಗಳು ಬೆಳೆದಿರುತ್ತವೆ.
ಪುಷ್ಪಮಂಡಳಗಳು : ಇವುಗಳಲ್ಲಿ ಸಹಾಯಕ ಹಾಗೂ ಅವಶ್ಯಕ ಮಂಡಳಗಳಿವೆ. ಪುಷ್ಪಪಾತ್ರೆ ಹಾಗೂ ಪುಷ್ಪದಳ ಮಂಡಳ ಇವು ಹೂವಿನ ರಕ್ಷಣೆ ಹಾಗೂ ಪರಾಗಸ್ಪರ್ಶ ಕಾರ್ಯದಲ್ಲಿ ಸಹಾಯಮಾಡುತ್ತವೆ. ಕೇಸರ ಮಂಡಳ ಹಾಗೂ ಅಂಡಾಶಯ ಮಂಡಳ ಇವು ವಂಶಾಭಿವೃದ್ದಿಗೆ ಸಹಾಯಮಾಡುತ್ತವೆ.
ನಿಷೇಚನ : ಸಸ್ಯಗಳಲ್ಲಿ ಬೀಜ ಉತ್ಪತ್ತಿಯಾಗಲು ಕೇಸರದಿಂದ ಹೊರಬಂದ ಪರಾಗವು ಅಂಡಾಶಯ ಮಂಡಳದ ಶಲಾಕಾಗ್ರಕ್ಕೆ ತಗುಲಿ, ಪುರುಷಾಣು ಮತ್ತು ಅಂಡಾಣುಗಳ ಸಂಯೋಗವಾಗುತ್ತದೆ. ಇದೇ ನಿಷೇಚನ. ನಿಷೇಚನೋತ್ತರ ಬದಲಾವಣೆಗಳಲ್ಲಿ ಅಂಡಕವು ಬೀಜವಾಗುತ್ತದೆ. ಅಂಡಕಾವರಣಗಳು ಬೀಜದ ಕವಚಗಳಾಗುತ್ತವೆ. ಹಾಗೂ ಅಂಡಾಶಯವು ಫಲವಾಗಿ ರೂಪುಗೊಳ್ಳುತ್ತದೆ (ಚಿತ್ರ 14).
ಪುಷ್ಪದಳ ಮಂಡಳಗಳ ವಿನ್ಯಾಸಗಳು
1) ಪತಂಗರೂಪಿ : ಪ್ಯಾಪಿಲಿಯೋನೇಸಿ ಉಪಕುಟುಂಬದ ಹೂವುಗಳು
2) ಕೊಳವೆಯಾಕಾರ : ಸೂರ್ಯಪಾನದಲ್ಲಿಯ ಮಧ್ಯದ ಹೂವುಗಳು
3) ಆಲಿಕೆಯಾಕಾರ : ಗೆಣಸಿನ ಹೂವು
4) ಚಕ್ರಾಕಾರ : ಪಾರಿಜಾತ ಹೂವು
5) ಇರ್ಚುಟಿಯಾಕಾರ : ತುಳಸಿ ಹೂವು
ಪುಂಕೇಸರ ಮಂಡಳ
ಒಂದು ಮಾದರಿ ಕೇಸರದಲ್ಲಿ ಕೇಸರ ದಂಡ, ಸಂಬಂಧಕ ಹಾಗೂ ಪರಾಗಾಶಯಗಳಿವೆ.
ಕೇಸರಗಳ ಸಂಬದ್ಧತೆ ಸಾಮಾನ್ಯವಾಗಿ ಬಹುತೇಕ ಸಸ್ಯಗಳ ಹೂವುಗಳಲ್ಲಿ ಕೇಸರಗಳು ಬಿಡಿಬಿಡಿಯಾಗಿರುತ್ತವೆ. ಇಂತಹ ಕೇಸರ ಮಂಡಳಕ್ಕೆ ಬಿಡಿಕೇಸರ ಮಂಡಳವೆಂದು ಹೆಸರು. ಕೆಲವು ಸಸ್ಯಗಳ ಹೂಗಳಲ್ಲಿ ಕೇಸರಗಳು ಕೂಡಿಕೊಂಡಿರುತ್ತವೆ. ಇದಕ್ಕೆ ಕೇಸರ ಸಂಬದ್ಧತೆ ಎನ್ನುತ್ತಾರೆ.
ಅ) ಏಕಗುಚ್ಛೀಯ ಸಂಬದ್ಧತೆ : ಇಲ್ಲಿ ಎಲ್ಲ ಕೇಸರ ದಂಡಗಳು ಮಾತ್ರ ಕೂಡಿಕೊಂಡು ಒಂದೇ ಒಂದು ಕೇಸರ ಗುಚ್ಚವಾಗುತ್ತದೆ.
ಆ) ದ್ವಿಗುಚ್ಛೀಯ ಸಂಬದ್ಧತೆ : ಇದು ಪ್ಯಾಪಿಲಿಯೋನೇಸಿ ಉಪಕುಟುಂಬದ ಸಸ್ಯಗಳ ಹೂವಿನಲ್ಲಿ ಕಂಡುಬರುತ್ತದೆ. ಇದರಲ್ಲಿ ಒಂದು ಕೇಸರವನ್ನು ಬಿಟ್ಟು ಉಳಿದ ಒಂಭತ್ತು ಕೇಸರಗಳು ತಮ್ಮ ದಂಡಗಳಿಂದ ಸಂಬದ್ಧವಾಗಿ, ಒಟ್ಟು ಎರಡು ಗುಚ್ಛಗಳಾಗುತ್ತವೆ.
ಇ) ಬಹುಗುಚ್ಚೀಯ ಸಂಬದ್ಧತೆ : ಇಲ್ಲಿ ಕೇಸರ ಮಂಡಳಗಳು ಸಂಬದ್ಧತೆಹೊಂದಿ ಎರಡಕ್ಕಿಂತ ಹೆಚ್ಚು ಕೇಸರಗುಚ್ಛಗಳಾಗುತ್ತವೆ.
ಅಂಡಾಶಯ ಮಂಡಳ
ಒಂದು ಮಾದರಿ ಅಂಡಾಶಯ ಮಂಡಳವು ಅಂಡಾಶಯ, ಶಲಾಕೆ ಹಾಗೂ ಶಲಾಕಾಗ್ರಗಳಿಂದ ಕೂಡಿರುತ್ತದೆ.
ವಿಭಕ್ತ ಅಂಡಾಶಯಗಳು : ಇಲ್ಲಿ ಅಂಡಾಶಯ ಮಂಡಳಗಳು ಬಿಡಿಬಿಡಿಯಾಗಿರುತ್ತವೆ.
ಸಂಯುಕ್ತ ಅಂಡಾಶಯಗಳು : ಕೆಲವು ಹೂವುಗಳಲ್ಲಿ ಅಂಡಾಶಯ ಮಂಡಳಗಳು ಒಂದಕ್ಕೊಂದು ಸಂಬದ್ಧವಾಗಿ ಒಂದೇ ಒಂದು ಅಂಡಾಶಯದಂತೆ ಕಾಣುತ್ತದೆ.
ಒಂದು ಅಂಡಾಶಯ ಮಂಡಳ : ಫ್ಯಾಬೇಸಿ ಕುಟುಂಬದ ಹೂವುಗಳು
ಎರಡು ಅಂಡಾಶಯ ಮಂಡಳ : ಅಪೊಸೈನೇಸಿ ಕುಟುಂಬದ ಹೂವುಗಳು
ಮೂರು ಅಂಡಾಶಯ ಮಂಡಳ : ಈರುಳ್ಳಿ
ನಾಲ್ಕು ಅಂಡಾಶಯ ಮಂಡಳ : ದುರಂತ
ಐದು ಅಂಡಾಶಯ ಮಂಡಳ : ದಾಸವಾಳ
ಬಹುಅಂಡಾಶಯ ಮಂಡಳ : ಸಂಪಿಗೆ, ಸೀತಾಫಲ
ಇ. ಫಲಗಳು
1. ನೈಜಫಲ : ಸಾಮಾನ್ಯವಾಗಿ ಅಂಡಾಶಯ ಮಾತ್ರ ಫಲವಾಗಿ ರೂಪುಗೊಳ್ಳುವುದು (ಮಾವು, ಲಿಂಬೆ)
2. ಮಿಥ್ಯಫಲ : ಅಂಡಾಶಯ ಮಾತ್ರ ಫಲವಾಗಿ ರೂಪಗೊಳ್ಳದೆ, ಹೂವಿನ ಇತರ ಭಾಗಗಳೂ ವೃದ್ದಿಯಾಗಿ ಫಲದ ಒಂದು ಭಾಗವಾಗಬಹುದು. (ಗೋಡಂಬಿ, ಗೇರು, ಸೇಬು)
ಬಗೆಗಳು
I) ಸರಳ ಫಲ : ಒಂದು ಹೂವಿನಲ್ಲಿ ಒಂದೇ ಅಂಡಾಶಯವಿದ್ದು ಅದು ಒಂದು ಫಲವಾಗಿ ಪರಿವರ್ತನೆಗೊಳ್ಳುತ್ತದೆ.
1) ರಸಭರಿತ ಫಲಗಳು : ಈ ಫಲಗಳು ಪಕ್ವವಾದ ಮೇಲೆ ಹಸಿಯಾಗಿಯೂ ರಸಭರಿತವಾಗಿಯೂ ಇರುತ್ತವೆ (ಚಿತ್ರ 15)
ಅ) ಡ್ರೂಪ್ : ಇದು ಒಂದೇ ಒಂದು ಬೀಜವುಳ್ಳ ಫಲ. ಇದು ಒಂದು ಅಥವಾ ಒಂದಕ್ಕಿಂತ ಹೆಚ್ಚು ಅಂಡಾಶಯಗಳುಳ್ಳ ಮೇಲ್ಮುಖಿ ಅಧೋಸ್ಥಾಯಿ ಅಂಡಾಶಯದಿಂದ ವೃದ್ದಿಯಾಗುತ್ತದೆ. ಇದರ ಬಾಹ್ಯಾವರಣವು ತೆಳುವಾದ ಸಿಪ್ಪೆಯಂತೆ, ಮಧ್ಯಾವರಣವು ರಸಭರಿತವಾಗಿಯೋ ಅಥವಾ ನಾರಿನಂತೆಯೋ ಹಾಗೂ ಒಳಾವರಣವು ಬಲುಗಟ್ಟಿಯಾಗಿ ಕಲ್ಲಿನಂತಿರುತ್ತದೆ.
ಆ) ಬೆರ್ರಿ : ಇದೂ ಕೂಡ ಡ್ರೂಪ್‌ನಂತೆ ವೃದ್ದಿಗೊಳ್ಳುತ್ತದೆ. ಇದರ ಹೊರಾವರಣ ತೆಳುವಾಗಿರುತ್ತದೆ. ಮದ್ಯಾವರಣವು ರಸಭರಿತವಾಗಿರುತ್ತದೆ.
II) ಶುಷ್ಕ ಅಥವಾ ಒಣಫಲಗಳು : (ಚಿತ್ರ 16) ಇವು ಬಲಿತಾಗ ಫಲಾವರಣವು ಒಣಗಿ, ತಿನ್ನಲು ಯೋಗ್ಯವಾಗಿರುವುದಿಲ್ಲ.
ಅ) ಬಿರಿಯುವ ಫಲಗಳು : ಇವು ಒಣಗಿದ ಮೇಲೆ ಬಿರಿತು, ಬೀಜಗಳು ಹೊರಚೆಲ್ಲುತ್ತವೆ.
1) ಲೆಗ್ಯೂಮ್ (ಪಾಡ್) : ಇದು ಏಕ ಅಂಡಾಶಯದ ಸರಳ ಉಚ್ಛಸ್ಥಾಯಿ ಅಂಡಾಶಯದಿಂದ ಬೆಳೆದ ಫಲ. ಇದರಲ್ಲಿ ಒಂದೇ ಒಂದು ಕೋಣೆಯಿದೆ.
2) ಫಾಲಿಕಲ್ : ಇದು ಕೂಡ ಒಂದೇ ಅಂಡಾಶಯದ ಉಚ್ಛಸ್ಥಾಯಿ ಅಂಡಾಶಯದಿಂದ ಬೆಳೆದ ಫಲ. ಇದು ಒಂದೇ ಅಂಚಿನಿಂದ ಬಿರಿದುಕೊಳ್ಳುತ್ತದೆ.
3) ಸಂಪುಟ ಫಲ (ಕ್ಯಾಪ್ಸೂಲ್) : ಇವು ಎರಡಕ್ಕಿಂತ ಹೆಚ್ಚು ಅಂಡಾಶಯ ಮಂಡಳಗಳ ಮತ್ತು ಕೋಣೆಗಳಿಂದ ಕೂಡಿದ ಉಚ್ಛಸ್ಥಾಯಿ ಸಂಯುಕ್ತ ಮಾದರಿಯ ಅಂಡಾಶಯದಿಂದ ಬೆಳೆದ ಫಲಗಳು.
ಬ) ಒಣಗಿ ಬಿರಿಯದ ಫಲಗಳು : ಇವುಗಳಲ್ಲಿ ಫಲಾವರಣವು ಒಣಗಿ ತೆಳುವಾಗಿ ಇಲ್ಲವೆ ದಪ್ಪವಾಗಿರುತ್ತದೆ. ಇವು ಬಲಿತಾಗ ಒಡೆಯುವುದಿಲ್ಲ.
1) ಕರಟ (ನಟ್) : ಇದು ಅನೇಕ ಅಂಡಾಶಯಗಳುಳ್ಳ ಉಚ್ಛಸ್ಥಾಯಿ ಏಕ ಕೋಣೆಯ ಅಂಡಾಶಯದಿಂದ ಬೆಳೆದ ಫಲ. ತಳದಲ್ಲಿ ಅಂಟಿಕೊಂಡಿರುವ ಹಾಗೂ ಗಡಸು ಫಲಾವರಣವುಳ್ಳ ಬಿರಿಯದ ಒಣಫಲವಾಗಿದೆ. ಇದರಲ್ಲಿ ಪುಷ್ಪದಂಡಕವು ರಸಭರಿತವಾಗಿದ್ದು ಇದು ಒಂದು ಮಿಥ್ಯಫಲವಾಗಿದೆ.
ಕ) ಷೈಝೋಕಾರ್ಪಿಕ್ ಫಲಗಳು : ಇವು ಒಡೆಯುವ ಹಾಗೂ ಒಡೆಯದ ಫಲಗಳ ಮಧ್ಯೆ ಬರುವ ಫಲಗಳು. ಇದರಲ್ಲಿ ಇಡೀ ಫಲವು ಅನೇಕ ವಿಭಾಗಗಳಾಗಿ ಸೀಳುತ್ತದೆ. ಆದರೆ ಸೀಳಿದ ಪ್ರತಿಯೊಂದು ವಿಭಾಗದಲ್ಲಿ ಒಂದು ಅಥವಾ ಒಂದಕ್ಕಿಂತ ಹೆಚ್ಚು ಬೀಜಗಳಿರುತ್ತವೆ. ಈ ವಿಭಾಗಗಳಿಗೆ ಮರಿಫಲಗಳು ಎನ್ನುತ್ತಾರೆ. ಈ ಮರಿಫಲಗಳು ಒಡೆಯುವುದಿಲ್ಲ.
1) ಲೊಮೆಂಟಮ್ : ಇದೊಂದು ಲೆಗ್ಯೂಮ್ ಫಲದ ಮಾರ್ಪಾಡು. ಬೀಜಗಳ ಮಧ್ಯೆ ಫಲಾವರಣವು ಒಳಸರಿದಿದ್ದು ಮರಿಫಲದ ಒಂದೊಂದು ಫಲಾವರಣವು ಬೀಜಗಳಿರುವ ಅನೇಕ ವಿಭಾಗಗಳಾಗಿ ಒಡೆಯುತ್ತದೆ.
2) ಸಮಾರಾ : ಇದು ಎರಡು ಅಥವಾ ಮೂರು ಅಂಡಾಶಯಗಳ ಉಚ್ಛಸ್ಥಾಯಿ ಸಂಯುಕ್ತ ಅಂಡಾಶಯದಿಂದ ಬೆಳೆದ ಫಲ. ಇದರಲ್ಲಿ ಫಲಾವರಣವು ರೆಕ್ಕೆಗಳಾಗಿ ಮಾರ್ಪಾಡಾಗಿದೆ. ಫಲವು ಎರಡು ಅಥವಾ ಮೂರು ಭಾಗಗಳಾಗಿ ಬಿರಿದು ಪ್ರತಿಯೊಂದು ಭಾಗದಲ್ಲಿ ಒಂದು ಬೀಜವಿರುತ್ತದೆ.
III) ಪುಂಜಫಲಗಳು (ಸಾಮೂಹಿಕ ಫಲಗಳು): ಇವು ಒಂದೇ ಹೂವಿನಲ್ಲಿರುವ ಅನೇಕ ಬಿಡಿ ಅಂಡಾಶಯಗಳುಳ್ಳ ಅಂಡಾಶಯ ಮಂಡಳದಿಂದ ರೂಪುಗೊಳ್ಳುವ ಫಲಗಳು. ಮುಂದೆ ಫಲ ಪಕ್ವವಾದಾಗ ಒಂದೊಂದು ಅಂಡಾಶಯವೂ ಒಂದೊಂದು ಕಿರುಫಲವಾಗಿ ಬೆಳೆದು, ಎಲ್ಲ ಕಿರುಫಲಗಳು ಕೂಡಿಕೊಂಡು ಒಂದು ದೊಡ್ಡ ಸಾಮೂಹಿಕ ಅಥವಾ ಪುಂಜ ಫಲವಾಗುತ್ತದೆ.
IV) ಸಂಯುಕ್ತ ಫಲಗಳು : ಒಂದು ಪುಷ್ಪಮಂಜರಿಯಲ್ಲಿಯ ಎಲ್ಲ ಹೂಗಳ ಅಂಡಾಶಯಗಳು ಹಾಗೂ ಹೂವಿನ ಇತರ ಭಾಗಗಳು ಕೂಡಿಕೊಂಡು ಸಂಯುಕ್ತ ಫಲಗಳಾಗುತ್ತವೆ. ಇವು ಮಿಥ್ಯ ಫಲಗಳು.
1) ಸೈಕೋನಸ್ : ಇವು ಹೈಪಂಥೋಡಿಯಂ ಪುಷ್ಪಮಂಜರಿಯಿಂದ ಉಂಟಾಗುವ ಫಲಗಳು. ಇಲ್ಲಿ ಪುಷ್ಪತೊಟ್ಟು ಮತ್ತು ಹೂವಿನ ಇತರ ಭಾಗಗಳೆಲ್ಲವೂ ಸೇರಿಕೊಂಡು ರಸಭರಿತ ಫಲವಾಗುತ್ತದೆ. ಇದರ ಪುಷ್ಪಾಕ್ಷವು ಮೇಲೆ ಅಗಲವಾಗಿದ್ದು, ಕೆಳಗೆ ಕಿರಿದಾಗಿ, ಮಧ್ಯದಲ್ಲಿ ಪೊಳ್ಳಾಗಿರುತ್ತದೆ. ಪೊಳ್ಳುಭಾಗದಲ್ಲಿ ಅಸಂಖ್ಯಾತ ಹೆಣ್ಣು, ಗಂಡು ಹಾಗೂ ನಪುಂಸಕ ಹೂಗಳಿರುತ್ತವೆ. ಇದರ ಮೇಲ್ಭಾಗದಲ್ಲಿ ಒಂದು ರಂದ್ರವಿರುತ್ತದೆ.
2) ಸೊರೋಸಿಸ್ : ಇದು ಸ್ಪೈಕ್ ಅಥವಾ ಸ್ಪಾಡಿಕ್ಸ್ ಮಾದರಿಯ ಹೆಣ್ಣು ಪುಷ್ಪಮಂಜರಿಯಿಂದ ರೂಪುಗೊಳ್ಳುತ್ತದೆ. ಇದರಲ್ಲಿ ಪುಷ್ಪಾಕ್ಷ, ಹೂವಿನ ಇತರ ಭಾಗಗಳು, ಅಂಡಾಶಯದೊಂದಿಗೆ ಬೆಳೆದು ರಸಭರಿತವಾಗುತ್ತವೆ. ಫಲದ ಹೊರಮೈ ಮುಳ್ಳಿನಂತೆ ಬಿರುಸಾಗಿರುತ್ತದೆ. ಇದೂ ಮಿಥ್ಯಫಲವೇಯಾಗಿದೆ.

ಸಸ್ಯ ಪ್ರಪಂಚದಲ್ಲಿ 3,94,000 ಸಸ್ಯ ಪ್ರಭೇದಗಳಿವೆ ಎಂದು ಸಸ್ಯಶಾಸ್ತ್ರಜ್ಞರು ಅಂದಾಜು ಮಾಡಿದ್ದಾರೆ. ಆದರೂ ಕೂಡ ಇನ್ನೂ ಗುರುತಿಸಬೇಕಾದ ಲಕ್ಷಾಂತರ ಸಸ್ಯಗಳಿವೆ. ಇವುಗಳನ್ನು ಶೈವಲ, ಪಾಮಾಜಿ ಸಸ್ಯಗಳು, ಪುಚ್ಛ ಸಸ್ಯಗಳು, ಅನಾವೃತ ಬೀಜಕಾರಿ ಸಸ್ಯಗಳು ಹಾಗೂ ಆವೃತ ಬೀಜಕಾರಿ ಸಸ್ಯಗಳೆಂದು ವಿಂಗಡಿಸಲಾಗಿದೆ.ಆವೃತ ಬೀಜಕಾರಿ ಸಸ್ಯಗಳ ಗುಂಪಿಗೆ ಹೂಬಿಡುವ ಸಸ್ಯಗಳು ಸೇರುತ್ತವೆ. ಹೂವು ಸಂತಾನೋತ್ಪತ್ತಿಗಾಗಿ ಮಾರ್ಪಾಟುಗೊಂಡ ಪ್ರಕಾಂಡ. ಆವೃತ ಬೀಜಕಾರಿ ಸಸ್ಯಗಳು ಭೂಮಿಯ ಮೇಲೆ ಕಾಣಿಸಿಕೊಂಡಾಗಿನಿಂದ, ಭೂಮಿಯ ಹವಾಗುಣದಲ್ಲಿ ಬದಲಾವಣೆಗಳಾಗಿವೆ.ಆವೃತ ಬೀಜಕಾರಿ ಸಸ್ಯಗಳು ಸಸ್ಯ ಸಾಮ್ರಾಜ್ಯದಲ್ಲಿಯೇ ಪ್ರಮುಖವಾದವುಗಳು. ಇವುಗಳಲ್ಲಿ ಅನೇಕ ಗಣ, ಕುಟುಂಬ ಹಾಗೂ ಜಾತಿಗೆ ಸೇರಿದ ಸುಮಾರು 2,50,000ಕ್ಕೂ ಹೆಚ್ಚು ಪ್ರಭೇದಗಳನ್ನು ಇದುವರೆಗೆ ಗುರುತಿಸಲಾಗಿದೆ. ಭೂಮಿಯ ಮೇಲೆ ವಿವಿಧ ರೀತಿಯ ಪ್ರದೇಶ ಹಾಗೂ ಪರಿಸರಗಳಲ್ಲಿ ಇವು ಬೆಳೆಯುತ್ತವೆ. ರಚನೆ, ಸ್ವಭಾವ ಹಾಗೂ ಜೀವನಕ್ರಮದಲ್ಲಿ ಇವು ಬಹು ವೈವಿಧ್ಯವನ್ನು ಪ್ರದರ್ಶಿಸುತ್ತವೆ. ಈ ಸಸ್ಯಗಳ ಆಕಾರ ಮತ್ತು ಗಾತ್ರದ ಮೇಲೆ ಇವುಗಳನ್ನು ಮೂಲಿಕೆ (ದಂಟುಳ್ಳ ಸಸ್ಯ), ಪೊದರು ಹಾಗೂ ಮರಗಳೆಂದು ವಿಂಗಡಿಸಿದ್ದಾರೆ. ಈ ಸಸ್ಯಗಳ ಬೀಜಗಳ ಸುತ್ತ ಆವರಣವಿರುವುದರಿಂದ ಇವುಗಳಿಗೆ ಆವೃತ ಬೀಜಕಾರಿ ಸಸ್ಯಗಳೆಂದು ಹೆಸರು. ಆವೃತ ಬೀಜಕಾರಿ ಸಸ್ಯದ ಹೂವಿನ ಅಂಡಾಶಯದೊಳಗಿರುವ ಅಂಡಕಗಳು ಗರ್ಭಾಂಕುರತೆ ಹೊಂದಿದನಂತರ ಬೀಜಗಳಾಗುತ್ತವೆ. ಅಂಡಾಶಯವು ಕಾಯಿಯಾಗಿ, ಅಂಡಾಶಯದ ಕವಚವು ಫಲಾವರಣವಾಗಿಯೂ ಮಾರ್ಪಾಟಾಗುತ್ತವೆ.ಆವೃತ ಬೀಜಕಾರಿ ಸಸ್ಯಗಳನ್ನು ದ್ವಿದಳ ಸಸ್ಯಗಳು ಹಾಗೂ ಏಕದಳ ಸಸ್ಯಗಳೆಂದು ವಿಂಗಡಿಸಿದ್ದಾರೆ. ಈ ಸಸ್ಯಗಳು ಆರ್ಥಿಕ ಹಾಗೂ ಔಷಧೀಯ ದೃಷ್ಟಿಯಿಂದ ಬಹಳ ಮಹತ್ವವನ್ನು ಪಡೆದಿವೆ. ನಾವು ಸೇವಿಸುವ ತರಕಾರಿಗಳು, ಫಲಗಳು, ನಾರಿನ ಸಸ್ಯಗಳು, ಪಾನೀಯಗಳು, ಬೇಳೆಕಾಳುಗಳು, ಎಣ್ಣೆಕಾಳುಗಳು, ಧಾನ್ಯಗಳು ಈ ಸಸ್ಯಗಳಿಂದಲೇ ನಮಗೆ ದೊರೆಯುತ್ತವೆ.ಆವೃತ ಬೀಜಕಾರಿ ಸಸ್ಯದ ದೇಹದಲ್ಲಿ ಮುಖ್ಯವಾಗಿ ಪ್ರಕಾಂಡ ವ್ಯವಸ್ಥೆ ಹಾಗೂ ಬೇರಿನ ವ್ಯವಸ್ಥೆ ಎಂಬ ಎರಡು ವ್ಯವಸ್ಥೆಗಳಿವೆ. ದ್ವಿದಳ ದಾನ್ಯಗಳಲ್ಲಿ ತಾಯಿಬೇರಿನ ವ್ಯವಸ್ಥೆಯನ್ನು ಹಾಗೂ ಏಕದಳ ಸಸ್ಯಗಳಲ್ಲಿ ತಂತುಬೇರಿನ ವ್ಯವಸ್ಥೆಯನ್ನು ಕಾಣುತ್ತೇವೆ.ಸಸ್ಯದ ಪ್ರಕಾಂಡದ ಅಕ್ಷಕ್ಕೆ ಕಾಂಡ ಎಂದು ಹೆಸರು. ಇದರಲ್ಲಿ ಗಿಣ್ಣು ಹಾಗೂ ಅಂತರಗಿಣ್ಣುಗಳಿವೆ. ಗಿಣ್ಣಿನಿಂದ ಎಲೆಗಳು ಬೆಳೆಯುತ್ತವೆ. ಎಲೆಗಳಿಗೆ ವಿವಿಧ ಗಾತ್ರ, ಆಕಾರ ಹಾಗೂ ರಚನೆಗಳಿವೆ. ಎಲೆಯ ಕುಂಕುಳದಲ್ಲಿ ಕುಂಕುಳಮೊಗ್ಗು ಇರುತ್ತದೆ. ಈ ಮೊಗ್ಗು ಹೂವು, ಪುಷ್ಪಮಂಜರಿ ಅಥವಾ ರೆಂಬೆಯಾಗಿ ಬೆಳೆಯಬಹುದು. ಬೇರು ಹಾಗೂ ಕಾಂಡಗಳು ವಿವಿಧ ಉದ್ದೇಶಗಳಿಗಾಗಿ ಮಾರ್ಪಾಡಾಗುತ್ತವೆ.
ಅ. ಎಲೆ : ಇದು ದ್ಯುತಿಸಂಶ್ಲೇಷಣೆಯಲ್ಲಿ ಪ್ರಮುಖ ಪಾತ್ರವನ್ನು ವಹಿಸುತ್ತದೆ. ಎಲೆಯನ್ನು ಎಲೆಯ ಬುಡ, ಎಲೆತೊಟ್ಟು ಹಾಗೂ ಎಲೆ ಪತ್ರ ಎಂದು ವಿಂಗಡಿಸಲಾಗಿದೆ (ಚಿತ್ರ 1).i) ಎಲೆಯ ಬುಡ : ಎಲೆಯ ತೊಟ್ಟು ಹಾಗೂ ಕಾಂಡವನ್ನು ಜೋಡಿಸುವ ಭಾಗವೇ ಎಲೆಯ ಬುಡ. ಮಾವಿನ ಎಲೆಯಲ್ಲಿ ಉಬ್ಬಿದ ಎಲೆಬುಡವಿದೆ. ತೆಂಗಿನಲ್ಲಿ ಸುತ್ತುವರಿದ ಎಲೆಯ ಬುಡವಿದೆ.ii) ಎಲೆ ತೊಟ್ಟು : ಎಲೆತೊಟ್ಟುಳ್ಳ ಎಲೆಯನ್ನು ತೊಟ್ಟುಸಹಿತ ಎಲೆ ಎನ್ನುತ್ತಾರೆ. ಉದಾ : ಮಾವು, ಆಲ. ತೊಟ್ಟುಗಳಿಲ್ಲದ ಎಲೆಗೆ ತೊಟ್ಟುರಹಿತ ಎಲೆ ಎನ್ನುತ್ತಾರೆ ಉದಾ : ಎಕ್ಕ, ಬಟ್ಟಲ ಹೂವು ಸಸ್ಯ.iii) ಎಲೆಪತ್ರ : ದ್ಯುತಿ ಸಂಶ್ಲೇಷಣೆ ಕ್ರಿಯೆ ನಡೆಯುವ ಅಗಲವಾಗಿರುವ ಎಲೆಯ ತೆಳ್ಳನೆಯ ಹಸಿರು ಭಾಗ. ಎಲೆಯ ಆಕಾರ, ತುದಿ, ಅಂಚು ಹಾಗೂ ನಾಳ ವಿನ್ಯಾಸಗಳಲ್ಲಿ ವೈವಿಧ್ಯವಿದೆ(ಚಿತ್ರ 1). ಅನುಪರ್ಣಗಳು :ಎಲೆಯ ಬುಡದ ಎರಡೂ ಪಾರ್ಶ್ವಗಳಲ್ಲಿ ಕಾಂಡಕ್ಕೆ ಸೇರಿಕೊಂಡು, ಕ್ಷೀಣವಾದ ಎಲೆಯಂತಹ ಅಂಗಗಳೇ ಅನುಪರ್ಣಗಳು. ಎಲೆಯಲ್ಲಿ ಅನುಪರ್ಣಗಳಿದ್ದರೆ ಅಂಥ ಎಲೆಗೆ ಅನುಪರ್ಣೀಯ ಎಲೆ ಅನ್ನುತ್ತಾರೆ. ಇರದಿದ್ದರೆ ಅನುಪರ್ಣರಹಿತ ಎಲೆ ಎನ್ನುತ್ತಾರೆ.ಅನುಪರ್ಣಗಳ ಸ್ಥಾನ ಹಾಗೂ ರಚನೆಯನ್ನವಲಂಬಿಸಿ ವರ್ಗೀಕರಣ ಮಾಡಲಾಗಿದೆ (ಚಿತ್ರ 2). ಪತ್ರಜೋಡಣೆಕಾಂಡದ ಗಿಣ್ಣುಗಳಲ್ಲಿ ಎಲೆಗಳು ನಿರ್ದಿಷ್ಟ ಕ್ರಮದಲ್ಲಿ ಜೋಡಣೆಯಾಗಿರುತ್ತವೆ. ಇದಕ್ಕೆ ಪತ್ರಜೋಡಣೆ ಎನ್ನುತ್ತಾರೆ. ಇದರಿಂದ ಸಸ್ಯಕ್ಕೆ ಸರಿಯಾಗಿ ಗಾಳಿ, ಬೆಳಕು ಲಭ್ಯವಾಗುತ್ತವೆ.ಪತ್ರ ಜೋಡಣೆಯಲ್ಲಿ ಮೂರು ವಿಧಗಳುಂಟು (ಚಿತ್ರ 3)1. ಪರ್ಯಾಯ ಜೋಡಣೆ : ಒಂದೊಂದು ಗಿಣ್ಣಿನಲ್ಲಿ ಒಂದೊಂದು ಎಲೆ ಪರ್ಯಾಯ ರೀತಿಯಲ್ಲಿ ಜೋಡಣೆಯಾಗಿವೆ. ಉದಾ : ಮಾವು, ಬೇವು.2. ಅಭಿಮುಖ ಜೋಡಣೆ : ಒಂದು ಗಿಣ್ಣಿನಲ್ಲಿ ಎರಡು ಎಲೆಗಳು ಎದುರು ಬದುರಾಗಿ ಜೋಡಣೆಯಾಗಿವೆ. ಉದಾ: ಎಕ್ಕ.3. ಸುತ್ತು ಜೋಡಣೆ : ಒಂದು ಗಿಣ್ಣಿನಲ್ಲಿ ಎರಡಕ್ಕಿಂತ ಹೆಚ್ಚು ಎಲೆಗಳು ಬೆಳೆಯುತ್ತವೆ. ಉದಾ : ಸಪ್ತಪರ್ಣಿ. ನಾಳವಿನ್ಯಾಸ :ಎಲೆಯ ಪತ್ರದಲ್ಲಿ ಅನೇಕ ನಾಳಗಳಿವೆ. ಅವುಗಳ ಸಮೂಹಕ್ಕೆ ನಾಳವಿನ್ಯಾಸ ಎನ್ನುತ್ತಾರೆ. ಇದರಲ್ಲಿ ಎರಡು ವಿಧಗಳಿವೆ. ಜಾಲಬಂಧ ನಾಳವಿನ್ಯಾಸ : ನಾಳಗಳು ಬಲೆಯ ರೂಪದಲ್ಲಿ ವಿನ್ಯಾಸಗೊಂಡಿದ್ದರೆ ಅದಕ್ಕೆ ಜಾಲಬಂಧ ನಾಳವಿನ್ಯಾಸವೆನ್ನುತ್ತಾರೆ. ನಾಳಗಳು ಸಮಾಂತರವಾಗಿ ವಿನ್ಯಾಸಗೊಂಡಿದ್ದರೆ ಅವಕ್ಕೆ ಸಮಾನಾಂತರ ನಾಳವಿನ್ಯಾಸ ಎನ್ನುತ್ತಾರೆ. (ಚಿತ್ರ 4). ಎಲೆಗಳಲ್ಲಿನ ಬಗೆಗಳುಸರಳ ಎಲೆ : ಒಂದು ತೊಟ್ಟಿನ ಮೇಲೆ ಅಖಂಡವಾದ ಎಲೆಪತ್ರ ಇರುವ ಎಲೆಗೆ ಸರಳ ಎಲೆ ಎನ್ನುತ್ತಾರೆ. ಸಂಯುಕ್ತ ಎಲೆ : ಅಖಂಡವಾದ ಎಲೆ ಪತ್ರ ಛಿದ್ರಛಿದ್ರವಾಗಿ ಒಡೆದು, ಪ್ರತಿಯೊಂದು ಭಾಗವೂ ತನ್ನದೇ ಆದ ತೊಟ್ಟಿನಿಂದ ಅಕ್ಷದಿಂಡಿಗೆ ಅಂಟಿಕೊಂಡಿದ್ದರೆ ಅದಕ್ಕೆ ಸಂಯುಕ್ತ ಎಲೆ ಎನ್ನುತ್ತಾರೆ. ಎಲೆಯ ಪ್ರತಿಯೊಂದು ಬಿಡಿಭಾಗಕ್ಕೆ ಕಿರುಪತ್ರ ಎನ್ನುತ್ತಾರೆ. ಸಂಯುಕ್ತ ಎಲೆಯಲ್ಲಿ ಗರಿರೂಪಿ ಹಾಗೂ ಹಸ್ತರೂಪಿ ಸಂಯುಕ್ತ ಎಲೆಗಳಿವೆ (ಚಿತ್ರ 5)
1. ಗರಿರೂಪಿ ಸಂಯುಕ್ತ ಎಲೆ : ಗರಿರೂಪಿ ಸಂಯುಕ್ತ ಎಲೆಯ ಅಕ್ಷದಿಂಡಿಗೆ ಕಿರು ಪತ್ರಗಳು ಎದುರುಬದುರಾಗಿ ಅಂಟಿಕೊಂಡಿರುತ್ತವೆ. ಅಕ್ಷದಿಂಡಿಗೆ ಕಿರುಪತ್ರಗಳು ನೇರವಾಗಿ ಅಂಟಿಕೊಂಡಿದ್ದರೆ ಅದಕ್ಕೆ ಏಕಗರಿರೂಪಿ ಸಂಯುಕ್ತ ಎಲೆ ಎನ್ನುತ್ತಾರೆ.2. ದ್ವಿಗರಿರೂಪಿ ಸಂಯುಕ್ತ ಎಲೆ : ಕೆಲವು ಸಸ್ಯಗಳಲ್ಲಿ ಅಕ್ಷದಿಂಡುವಿನಿಂದ ಕವಲುಗಳು ಹೊರಟು ದ್ವಿತೀಯ ಅಕ್ಷದಿಂಡಿಗೆ ಕಿರುಪತ್ರಗಳು ಅಂಟಿಕೊಂಡಿರುತ್ತವೆ.3. ತ್ರಿಗರಿರೂಪಿ ಸಂಯುಕ್ತ ಎಲೆ : ಕೆಲವು ಸಸ್ಯಗಳಲ್ಲಿ ಮುಖ್ಯ ಅಕ್ಷದಿಂಡು ಎರಡು ಸಲ ಕವಲೊಡೆದು ತೃತೀಯ ಕವಲುದಿಂಡಿನ ಮೇಲೆ ಕಿರುಪತ್ರಗಳು ಬೆಳೆಯುತ್ತವೆ. (ಚಿತ್ರ 5).
ಹಸ್ತರೂಪಿ ಸಂಯುಕ್ತ ಎಲೆಇದರಲ್ಲಿ ಕಿರುಪತ್ರಗಳು ಎಲೆಯ ತೊಟ್ಟಿನ ತುದಿಗೆ ಸೇರಿಕೊಂಡು ಒಂದು ಸಾಮಾನ್ಯ ಬಿಂದುವಿನಿಂದ ಬೆರಳುಗಳಂತೆ ಹರಡಿರುತ್ತವೆ. ಇದರಲ್ಲಿ ಏಕಪರ್ಣಿಕೆ, ದ್ವಿಪರ್ಣಿಕೆ, ತ್ರಿಪರ್ಣಿಕೆ, ಚತುರ್ಥಪರ್ಣಿಕೆ ಹಾಗೂ ಬಹುಪರ್ಣಿಕೆ ಎಂದು ವಿಧಗಳುಂಟು (ಚಿತ್ರ 6). ಬ. ಪುಷ್ಪಮಂಜರಿ :ಹೂವುಗಳನ್ನು ತಳೆಯುವ ಕಾಂಡ ಅಥವಾ ರೆಂಬೆಯನ್ನು ಪುಷ್ಪಮಂಜರಿವೃಂತ ಎಂದು ಕರೆಯುತ್ತಾರೆ. ಇದರ ಮೇಲೆ  ಬೆಳೆದ ಹೂವುಗಳ ಸಮೂಹವನ್ನು ಪುಷ್ಪಮಂಜರಿ ಅಥವಾ ಹೂಗೊಂಚಲು ಎಂದು ಕರೆಯುತ್ತಾರೆ. ವಿಧಗಳು :  ಅ) ಮಧ್ಯಾಭಿಸರ (ಅನಿಯತ)ಪುಷ್ಪಮಂಜರಿ: ಇದರಲ್ಲಿ ಪುಷ್ಪಮಂಜರಿವೃಂತದ ಬೆಳವಣಿಗೆಯು ಅನಿಯತವಾಗಿದ್ದು, ಹೊಸಹೊಸ ಹೂವಿನ ಮೊಗ್ಗುಗಳು ಮಂಜರಿವೃಂತದ ತುದಿಯಲ್ಲಿ ಅಥವಾ ಕೇಂದ್ರದಲ್ಲಿ ವೃದ್ದಿಹೊಂದುತ್ತಲೇ ಇರುತ್ತವೆ. ಇದರಲ್ಲಿ ಹೂವುಗಳು ಊರ್ದ್ವಗಾಮಿಯಾಗಿ ಅಥವಾ ಕೇಂದ್ರಭಿಗಾಮಿಯಾಗಿ ಅರಳುತ್ತವೆ.1) ಸರಳ ಮಧ್ಯಾಭಿಸರ : ಇದರಲ್ಲಿ ಮಂಜರಿವೃಂತವು ನೀಳ ಹಾಗೂ ನೇರವಾಗಿರುತ್ತದೆ. ಮಂಜರಿವೃಂತದ ಮೇಲೆ ತೊಟ್ಟು ಇರುವ ಮೊಗ್ಗುಗಳು ಮೇಲ್ಮುಖವಾಗಿ ಅರಳುತ್ತವೆ. ಹೂವುಗಳಲ್ಲಿ ಸಮಾನತೊಟ್ಟುಗಳಿವೆ.2) ನೀಳಛತ್ರ : ಅನಿಯತವಾಗಿ ಬೆಳೆಯುವ ಹಾಗೂ ನೇರವಾಗಿರುವ ಮಂಜರಿವೃಂತವಿದೆ. ಹೂವುಗಳು ಮೇಲ್ಮುಖವಾಗಿ ಅರಳುತ್ತವೆ. ಕೆಳಗಿನ ಹೂವುಗಳ ತೊಟ್ಟು ದೊಡ್ಡದಿದ್ದು ಮೇಲೆ ಹೋದಂತೆ ಚಿಕ್ಕವಾಗುತ್ತವೆ.3) ಕದಿರು ಮಂಜರಿ : ಅನಿಯತವಾಗಿ ಬೆಳೆಯುವ, ನೀಳ ಹಾಗೂ ನೆಟ್ಟಗೆ ಬೆಳೆಯುವ ಮಂಜರಿವೃಂತದ ಮೆಲೆ ತೊಟ್ಟಿಲ್ಲದ ಹೂವುಗಳಿವೆ. ಇದರಲ್ಲಿ ಹೂವುಗಳು ಮೇಲ್ಮುಖವಾಗಿ ಅರಳುತ್ತವೆ.4) ಲಾಳಗುಚ್ಛ : ಅಕ್ಷಸ್ತಂಭದ ಮೇಲೆ ತೊಟ್ಟು ಇಲ್ಲದ ಹೂವುಗಳಿವೆ. ಆವರಣ ಪತ್ರಕ ಹೂವುಗಳನ್ನು ಸಂರಕ್ಷಿಸುತ್ತದೆ.5) ಪೀಠಛತ್ರ : ಇದರಲ್ಲಿ ತೊಟ್ಟು ಇರುವ ಮೊಗ್ಗುಗಳು ಮಂಜರಿವೃಂತದ ತುತ್ತತುದಿಯಲ್ಲಿ ಬೆಳೆದಿದ್ದು, ಅವುಗಳಲ್ಲಿ ಅರಳುವಿಕೆ ಕೇಂದ್ರದ ಕಡೆಗಿರುತ್ತದೆ.6) ಚೆಂಡು ಮಂಜರಿ : ಇದರಲ್ಲಿ ಮಂಜರಿವೃಂತವು ಸಂಪೂರ್ಣವಾಗಿ ಸಂಕುಚಿತಗೊಂಡಿದ್ದು, ಚಪ್ಪಟೆಯಾಗಿರುತ್ತವೆ. ಇದರ ಮೇಲೆ ತೊಟ್ಟುರಹಿತ ಕಿರುಪುಷ್ಪಗಳಿರುತ್ತವೆ. 7) ಗೋಳಾಕಾರ ಮಂಜರಿ : ಇದರಲ್ಲಿ ಮಂಜರಿವೃಂತವು ಸಂಪೂರ್ಣ ಸಂಕುಚಿತಗೊಂಡು, ಗೋಲಾಕಾರದಂತೆ ಕಾಣುತ್ತದೆ. ಇದರಲ್ಲಿ ತೊಟ್ಟುರಹಿತ ಹೂವುಗಳಿವೆ.ಬ) ಮಧ್ಯಾರಂಭಿ (ನಿಯತ) ಪುಷ್ಪಮಂಜರಿ : ಇದರಲ್ಲಿ ಪುಷ್ಪಮಂಜರಿ ವೃಂತವು ಮತ್ತು ಅದರ ಕವಲುಗಳೆಲ್ಲ ಒಂದೊಂದೇ ಹೂವಿನಲ್ಲಿ ಕೊನೆಗೊಳ್ಳುತ್ತವೆ. ಮೊಗ್ಗುಗಳ ಅರಳುವಿಕೆ ಕೇಂದ್ರದಿಂದ ವಿಮುಖವಾಗಿರುತ್ತವೆ. 1) ಒಂದೇ ಹೂವುಳ್ಳ ಪುಷ್ಪಮಂಜರಿ : ಇಲ್ಲಿ ಮಂಜರಿವೃಂತವು ಕವಲೊಡೆಯದೆ ಒಂದೇ ಒಂದು ಹೂವಿನಲ್ಲಿ ಕೊನೆಗೊಳ್ಳುತ್ತದೆ. 2) ಒಂದೇ ಬದಿ ಕವಲೊಡೆಯುವ ಪುಷ್ಪಮಂಜರಿ : ಇದರಲ್ಲಿ ಪ್ರಮುಖ ಮಂಜರಿವೃಂತವು ಒಂದೇ ಹೂವಿನಲ್ಲಿ ಕೊನೆಗೊಳ್ಳುತ್ತದೆ. ಅನಂತರ ಪ್ರತಿಸಲ ಒಂದೇ ಬದಿಯಲ್ಲಿ ಕವಲೊಡೆದು ಒಂದೊಂದೇ ಹೂವಿನಲ್ಲಿ ಕೊನೆಗೊಳ್ಳುತ್ತದೆ.3) ಸರಳ ಮಧ್ಯಾರಂಭಿ : ಇದರಲ್ಲಿ ಪ್ರಮುಖ ಮಂಜರಿವೃಂತವು ಒಂದೇ ಹೂವಿನಲ್ಲಿ ಕೊನೆಗೊಳ್ಳುತ್ತದೆ. ಇದರ ಕೆಳಗೆ, ಎರಡು ಬದಿಗೆ ಎರಡು ಚಿಕ್ಕ ಮೊಗ್ಗುಗಳಿರುತ್ತವೆ. ಇದಕ್ಕೆ ಸರಳ ದ್ವಿಪಾರ್ಶ್ವ ಮಧ್ಯಾರಂಭಿ ಎಂದೂ ಕರೆಯುತ್ತಾರೆ. 4) ಎರಡು ಬದಿ ಕವಲೊಡೆಯುವ ಪುಷ್ಪಮಂಜರಿ : ಇದರಲ್ಲಿ ಮಂಜರಿ ವೃಂತವು ಒಂದು ಹೂವನ್ನು ತಳೆಯುತ್ತದೆ. ಅದು ಉಭಯ ಪಾರ್ಶ್ವಗಳಲ್ಲಿ ಕವಲೊಡೆದು ಮತ್ತೆ ಒಂದೊಂದು ಹೂವನ್ನು ತಳೆಯುತ್ತದೆ. ಅನಂತರ ಉಭಯ ಪಾರ್ಶ್ವದ ಕವಲುಗಳು ಮತ್ತೊಮ್ಮೆ ಇದೇ ರೀತಿ ಕವಲೊಡೆದು ಒಂದೊಂದು ಹೂವುಗಳನ್ನು ತಳೆಯುತ್ತವೆ.5) ಬಹುಬದಿಗೆ ಕವಲೊಡೆಯುವ ಪುಷ್ಪಮಂಜರಿ : ಪ್ರಮುಖ ಮಂಜರಿವೃಂತವು ಒಂದು ಹೂವನ್ನು ತಳೆಯುತ್ತದೆ. ಅನಂತರ ಮೂರು ಅಥವಾ ಮೂರಕ್ಕಿಂತ ಹೆಚ್ಚು ಪಾರ್ಶ್ವಬದಿಗಳಲ್ಲಿ ಕವಲೊಡೆದು, ಪ್ರತಿಯೊಂದು ಕವಲಿನ ತುದಿಯಲ್ಲಿ ಒಂದೊಂದು ಹೂಗಳು ತಳೆಯುತ್ತವೆ.ಕ) ವಿಶೇಷ ಪುಷ್ಪಮಂಜರಿ : ಇದರಲ್ಲಿ ಮಂಜರಿವೃಂತವು ರೂಪಾಂತರಗೊಂಡು ವಿಶಿಷ್ಟ ಆಕಾರ ಹಾಗೂ ವಿನ್ಯಾಸಗಳನ್ನು ಹೊಂದಿರುತ್ತದೆ.1. ಹೈಪಂಥೋಡಿಯಂ ಪುಷ್ಪಮಂಜರಿ : ಇದರಲ್ಲಿ ಮಂಜರಿವೃಂತವು ಮೆಲೆ ರಂದ್ರವುಳ್ಳ ಮಡಿಕೆಯಾಕಾರವಾಗಿ ರೂಪಾಂತರಗೊಂಡಿದೆ. ಇದರ ಒಳಗಡೆಗೆ ತೊಟ್ಟುರಹಿತ ಗಂಡು, ಹೆಣ್ಣು ಹಾಗೂ ನಪುಂಸಕ ಹೂಗಳಿವೆ.
ಕ. ಹೂವುಇದು ಸಸ್ಯಗಳ ವಂಶಾಭಿವೃದ್ದಿ ಕಾರ್ಯವನ್ನು ನಿರ್ವಹಿಸುತ್ತದೆ. ಹೂವುಗಳಲ್ಲಿ ವೈವಿಧ್ಯ ಹೆಚ್ಚು. ಒಂದು ಮಾದರಿ ಹೂವಿನಲ್ಲಿ ಪುಷ್ಪವೃಂತ, ಪುಷ್ಪಪೀಠ, ಪುಷ್ಪಮಂಡಳಗಳು ಇವೆ.ಪುಷ್ಪವೃಂತ : ಇದು ಸಂಕುಚಿತಗೊಂಡ ಹೂವಿನ ಅಕ್ಷಕಾಂಡ. ಇದರ ತುದಿಯಲ್ಲಿ ಪುಷ್ಪಮಂಡಳಗಳು ಬೆಳೆದಿರುತ್ತವೆ.
ಪುಷ್ಪಮಂಡಳಗಳು : ಇವುಗಳಲ್ಲಿ ಸಹಾಯಕ ಹಾಗೂ ಅವಶ್ಯಕ ಮಂಡಳಗಳಿವೆ. ಪುಷ್ಪಪಾತ್ರೆ ಹಾಗೂ ಪುಷ್ಪದಳ ಮಂಡಳ ಇವು ಹೂವಿನ ರಕ್ಷಣೆ ಹಾಗೂ ಪರಾಗಸ್ಪರ್ಶ ಕಾರ್ಯದಲ್ಲಿ ಸಹಾಯಮಾಡುತ್ತವೆ. ಕೇಸರ ಮಂಡಳ ಹಾಗೂ ಅಂಡಾಶಯ ಮಂಡಳ ಇವು ವಂಶಾಭಿವೃದ್ದಿಗೆ ಸಹಾಯಮಾಡುತ್ತವೆ.ನಿಷೇಚನ : ಸಸ್ಯಗಳಲ್ಲಿ ಬೀಜ ಉತ್ಪತ್ತಿಯಾಗಲು ಕೇಸರದಿಂದ ಹೊರಬಂದ ಪರಾಗವು ಅಂಡಾಶಯ ಮಂಡಳದ ಶಲಾಕಾಗ್ರಕ್ಕೆ ತಗುಲಿ, ಪುರುಷಾಣು ಮತ್ತು ಅಂಡಾಣುಗಳ ಸಂಯೋಗವಾಗುತ್ತದೆ. ಇದೇ ನಿಷೇಚನ. ನಿಷೇಚನೋತ್ತರ ಬದಲಾವಣೆಗಳಲ್ಲಿ ಅಂಡಕವು ಬೀಜವಾಗುತ್ತದೆ. ಅಂಡಕಾವರಣಗಳು ಬೀಜದ ಕವಚಗಳಾಗುತ್ತವೆ. ಹಾಗೂ ಅಂಡಾಶಯವು ಫಲವಾಗಿ ರೂಪುಗೊಳ್ಳುತ್ತದೆ (ಚಿತ್ರ 14). ಪುಷ್ಪದಳ ಮಂಡಳಗಳ ವಿನ್ಯಾಸಗಳು1) ಪತಂಗರೂಪಿ : ಪ್ಯಾಪಿಲಿಯೋನೇಸಿ ಉಪಕುಟುಂಬದ ಹೂವುಗಳು2) ಕೊಳವೆಯಾಕಾರ : ಸೂರ್ಯಪಾನದಲ್ಲಿಯ ಮಧ್ಯದ ಹೂವುಗಳು3) ಆಲಿಕೆಯಾಕಾರ : ಗೆಣಸಿನ ಹೂವು4) ಚಕ್ರಾಕಾರ : ಪಾರಿಜಾತ ಹೂವು5) ಇರ್ಚುಟಿಯಾಕಾರ : ತುಳಸಿ ಹೂವು ಪುಂಕೇಸರ ಮಂಡಳಒಂದು ಮಾದರಿ ಕೇಸರದಲ್ಲಿ ಕೇಸರ ದಂಡ, ಸಂಬಂಧಕ ಹಾಗೂ ಪರಾಗಾಶಯಗಳಿವೆ.ಕೇಸರಗಳ ಸಂಬದ್ಧತೆ ಸಾಮಾನ್ಯವಾಗಿ ಬಹುತೇಕ ಸಸ್ಯಗಳ ಹೂವುಗಳಲ್ಲಿ ಕೇಸರಗಳು ಬಿಡಿಬಿಡಿಯಾಗಿರುತ್ತವೆ. ಇಂತಹ ಕೇಸರ ಮಂಡಳಕ್ಕೆ ಬಿಡಿಕೇಸರ ಮಂಡಳವೆಂದು ಹೆಸರು. ಕೆಲವು ಸಸ್ಯಗಳ ಹೂಗಳಲ್ಲಿ ಕೇಸರಗಳು ಕೂಡಿಕೊಂಡಿರುತ್ತವೆ. ಇದಕ್ಕೆ ಕೇಸರ ಸಂಬದ್ಧತೆ ಎನ್ನುತ್ತಾರೆ.ಅ) ಏಕಗುಚ್ಛೀಯ ಸಂಬದ್ಧತೆ : ಇಲ್ಲಿ ಎಲ್ಲ ಕೇಸರ ದಂಡಗಳು ಮಾತ್ರ ಕೂಡಿಕೊಂಡು ಒಂದೇ ಒಂದು ಕೇಸರ ಗುಚ್ಚವಾಗುತ್ತದೆ.ಆ) ದ್ವಿಗುಚ್ಛೀಯ ಸಂಬದ್ಧತೆ : ಇದು ಪ್ಯಾಪಿಲಿಯೋನೇಸಿ ಉಪಕುಟುಂಬದ ಸಸ್ಯಗಳ ಹೂವಿನಲ್ಲಿ ಕಂಡುಬರುತ್ತದೆ. ಇದರಲ್ಲಿ ಒಂದು ಕೇಸರವನ್ನು ಬಿಟ್ಟು ಉಳಿದ ಒಂಭತ್ತು ಕೇಸರಗಳು ತಮ್ಮ ದಂಡಗಳಿಂದ ಸಂಬದ್ಧವಾಗಿ, ಒಟ್ಟು ಎರಡು ಗುಚ್ಛಗಳಾಗುತ್ತವೆ.ಇ) ಬಹುಗುಚ್ಚೀಯ ಸಂಬದ್ಧತೆ : ಇಲ್ಲಿ ಕೇಸರ ಮಂಡಳಗಳು ಸಂಬದ್ಧತೆಹೊಂದಿ ಎರಡಕ್ಕಿಂತ ಹೆಚ್ಚು ಕೇಸರಗುಚ್ಛಗಳಾಗುತ್ತವೆ. ಅಂಡಾಶಯ ಮಂಡಳಒಂದು ಮಾದರಿ ಅಂಡಾಶಯ ಮಂಡಳವು ಅಂಡಾಶಯ, ಶಲಾಕೆ ಹಾಗೂ ಶಲಾಕಾಗ್ರಗಳಿಂದ ಕೂಡಿರುತ್ತದೆ.ವಿಭಕ್ತ ಅಂಡಾಶಯಗಳು : ಇಲ್ಲಿ ಅಂಡಾಶಯ ಮಂಡಳಗಳು ಬಿಡಿಬಿಡಿಯಾಗಿರುತ್ತವೆ.ಸಂಯುಕ್ತ ಅಂಡಾಶಯಗಳು : ಕೆಲವು ಹೂವುಗಳಲ್ಲಿ ಅಂಡಾಶಯ ಮಂಡಳಗಳು ಒಂದಕ್ಕೊಂದು ಸಂಬದ್ಧವಾಗಿ ಒಂದೇ ಒಂದು ಅಂಡಾಶಯದಂತೆ ಕಾಣುತ್ತದೆ.ಒಂದು ಅಂಡಾಶಯ ಮಂಡಳ : ಫ್ಯಾಬೇಸಿ ಕುಟುಂಬದ ಹೂವುಗಳುಎರಡು ಅಂಡಾಶಯ ಮಂಡಳ : ಅಪೊಸೈನೇಸಿ ಕುಟುಂಬದ ಹೂವುಗಳುಮೂರು ಅಂಡಾಶಯ ಮಂಡಳ : ಈರುಳ್ಳಿನಾಲ್ಕು ಅಂಡಾಶಯ ಮಂಡಳ : ದುರಂತಐದು ಅಂಡಾಶಯ ಮಂಡಳ : ದಾಸವಾಳಬಹುಅಂಡಾಶಯ ಮಂಡಳ : ಸಂಪಿಗೆ, ಸೀತಾಫಲ ಇ. ಫಲಗಳು1. ನೈಜಫಲ : ಸಾಮಾನ್ಯವಾಗಿ ಅಂಡಾಶಯ ಮಾತ್ರ ಫಲವಾಗಿ ರೂಪುಗೊಳ್ಳುವುದು (ಮಾವು, ಲಿಂಬೆ)2. ಮಿಥ್ಯಫಲ : ಅಂಡಾಶಯ ಮಾತ್ರ ಫಲವಾಗಿ ರೂಪಗೊಳ್ಳದೆ, ಹೂವಿನ ಇತರ ಭಾಗಗಳೂ ವೃದ್ದಿಯಾಗಿ ಫಲದ ಒಂದು ಭಾಗವಾಗಬಹುದು. (ಗೋಡಂಬಿ, ಗೇರು, ಸೇಬು)
ಬಗೆಗಳುI) ಸರಳ ಫಲ : ಒಂದು ಹೂವಿನಲ್ಲಿ ಒಂದೇ ಅಂಡಾಶಯವಿದ್ದು ಅದು ಒಂದು ಫಲವಾಗಿ ಪರಿವರ್ತನೆಗೊಳ್ಳುತ್ತದೆ.1) ರಸಭರಿತ ಫಲಗಳು : ಈ ಫಲಗಳು ಪಕ್ವವಾದ ಮೇಲೆ ಹಸಿಯಾಗಿಯೂ ರಸಭರಿತವಾಗಿಯೂ ಇರುತ್ತವೆ (ಚಿತ್ರ 15)ಅ) ಡ್ರೂಪ್ : ಇದು ಒಂದೇ ಒಂದು ಬೀಜವುಳ್ಳ ಫಲ. ಇದು ಒಂದು ಅಥವಾ ಒಂದಕ್ಕಿಂತ ಹೆಚ್ಚು ಅಂಡಾಶಯಗಳುಳ್ಳ ಮೇಲ್ಮುಖಿ ಅಧೋಸ್ಥಾಯಿ ಅಂಡಾಶಯದಿಂದ ವೃದ್ದಿಯಾಗುತ್ತದೆ. ಇದರ ಬಾಹ್ಯಾವರಣವು ತೆಳುವಾದ ಸಿಪ್ಪೆಯಂತೆ, ಮಧ್ಯಾವರಣವು ರಸಭರಿತವಾಗಿಯೋ ಅಥವಾ ನಾರಿನಂತೆಯೋ ಹಾಗೂ ಒಳಾವರಣವು ಬಲುಗಟ್ಟಿಯಾಗಿ ಕಲ್ಲಿನಂತಿರುತ್ತದೆ.ಆ) ಬೆರ್ರಿ : ಇದೂ ಕೂಡ ಡ್ರೂಪ್‌ನಂತೆ ವೃದ್ದಿಗೊಳ್ಳುತ್ತದೆ. ಇದರ ಹೊರಾವರಣ ತೆಳುವಾಗಿರುತ್ತದೆ. ಮದ್ಯಾವರಣವು ರಸಭರಿತವಾಗಿರುತ್ತದೆ.
II) ಶುಷ್ಕ ಅಥವಾ ಒಣಫಲಗಳು : (ಚಿತ್ರ 16) ಇವು ಬಲಿತಾಗ ಫಲಾವರಣವು ಒಣಗಿ, ತಿನ್ನಲು ಯೋಗ್ಯವಾಗಿರುವುದಿಲ್ಲ.ಅ) ಬಿರಿಯುವ ಫಲಗಳು : ಇವು ಒಣಗಿದ ಮೇಲೆ ಬಿರಿತು, ಬೀಜಗಳು ಹೊರಚೆಲ್ಲುತ್ತವೆ.1) ಲೆಗ್ಯೂಮ್ (ಪಾಡ್) : ಇದು ಏಕ ಅಂಡಾಶಯದ ಸರಳ ಉಚ್ಛಸ್ಥಾಯಿ ಅಂಡಾಶಯದಿಂದ ಬೆಳೆದ ಫಲ. ಇದರಲ್ಲಿ ಒಂದೇ ಒಂದು ಕೋಣೆಯಿದೆ.2) ಫಾಲಿಕಲ್ : ಇದು ಕೂಡ ಒಂದೇ ಅಂಡಾಶಯದ ಉಚ್ಛಸ್ಥಾಯಿ ಅಂಡಾಶಯದಿಂದ ಬೆಳೆದ ಫಲ. ಇದು ಒಂದೇ ಅಂಚಿನಿಂದ ಬಿರಿದುಕೊಳ್ಳುತ್ತದೆ.3) ಸಂಪುಟ ಫಲ (ಕ್ಯಾಪ್ಸೂಲ್) : ಇವು ಎರಡಕ್ಕಿಂತ ಹೆಚ್ಚು ಅಂಡಾಶಯ ಮಂಡಳಗಳ ಮತ್ತು ಕೋಣೆಗಳಿಂದ ಕೂಡಿದ ಉಚ್ಛಸ್ಥಾಯಿ ಸಂಯುಕ್ತ ಮಾದರಿಯ ಅಂಡಾಶಯದಿಂದ ಬೆಳೆದ ಫಲಗಳು.ಬ) ಒಣಗಿ ಬಿರಿಯದ ಫಲಗಳು : ಇವುಗಳಲ್ಲಿ ಫಲಾವರಣವು ಒಣಗಿ ತೆಳುವಾಗಿ ಇಲ್ಲವೆ ದಪ್ಪವಾಗಿರುತ್ತದೆ. ಇವು ಬಲಿತಾಗ ಒಡೆಯುವುದಿಲ್ಲ.1) ಕರಟ (ನಟ್) : ಇದು ಅನೇಕ ಅಂಡಾಶಯಗಳುಳ್ಳ ಉಚ್ಛಸ್ಥಾಯಿ ಏಕ ಕೋಣೆಯ ಅಂಡಾಶಯದಿಂದ ಬೆಳೆದ ಫಲ. ತಳದಲ್ಲಿ ಅಂಟಿಕೊಂಡಿರುವ ಹಾಗೂ ಗಡಸು ಫಲಾವರಣವುಳ್ಳ ಬಿರಿಯದ ಒಣಫಲವಾಗಿದೆ. ಇದರಲ್ಲಿ ಪುಷ್ಪದಂಡಕವು ರಸಭರಿತವಾಗಿದ್ದು ಇದು ಒಂದು ಮಿಥ್ಯಫಲವಾಗಿದೆ.ಕ) ಷೈಝೋಕಾರ್ಪಿಕ್ ಫಲಗಳು : ಇವು ಒಡೆಯುವ ಹಾಗೂ ಒಡೆಯದ ಫಲಗಳ ಮಧ್ಯೆ ಬರುವ ಫಲಗಳು. ಇದರಲ್ಲಿ ಇಡೀ ಫಲವು ಅನೇಕ ವಿಭಾಗಗಳಾಗಿ ಸೀಳುತ್ತದೆ. ಆದರೆ ಸೀಳಿದ ಪ್ರತಿಯೊಂದು ವಿಭಾಗದಲ್ಲಿ ಒಂದು ಅಥವಾ ಒಂದಕ್ಕಿಂತ ಹೆಚ್ಚು ಬೀಜಗಳಿರುತ್ತವೆ. ಈ ವಿಭಾಗಗಳಿಗೆ ಮರಿಫಲಗಳು ಎನ್ನುತ್ತಾರೆ. ಈ ಮರಿಫಲಗಳು ಒಡೆಯುವುದಿಲ್ಲ.1) ಲೊಮೆಂಟಮ್ : ಇದೊಂದು ಲೆಗ್ಯೂಮ್ ಫಲದ ಮಾರ್ಪಾಡು. ಬೀಜಗಳ ಮಧ್ಯೆ ಫಲಾವರಣವು ಒಳಸರಿದಿದ್ದು ಮರಿಫಲದ ಒಂದೊಂದು ಫಲಾವರಣವು ಬೀಜಗಳಿರುವ ಅನೇಕ ವಿಭಾಗಗಳಾಗಿ ಒಡೆಯುತ್ತದೆ.2) ಸಮಾರಾ : ಇದು ಎರಡು ಅಥವಾ ಮೂರು ಅಂಡಾಶಯಗಳ ಉಚ್ಛಸ್ಥಾಯಿ ಸಂಯುಕ್ತ ಅಂಡಾಶಯದಿಂದ ಬೆಳೆದ ಫಲ. ಇದರಲ್ಲಿ ಫಲಾವರಣವು ರೆಕ್ಕೆಗಳಾಗಿ ಮಾರ್ಪಾಡಾಗಿದೆ. ಫಲವು ಎರಡು ಅಥವಾ ಮೂರು ಭಾಗಗಳಾಗಿ ಬಿರಿದು ಪ್ರತಿಯೊಂದು ಭಾಗದಲ್ಲಿ ಒಂದು ಬೀಜವಿರುತ್ತದೆ. III) ಪುಂಜಫಲಗಳು (ಸಾಮೂಹಿಕ ಫಲಗಳು): ಇವು ಒಂದೇ ಹೂವಿನಲ್ಲಿರುವ ಅನೇಕ ಬಿಡಿ ಅಂಡಾಶಯಗಳುಳ್ಳ ಅಂಡಾಶಯ ಮಂಡಳದಿಂದ ರೂಪುಗೊಳ್ಳುವ ಫಲಗಳು. ಮುಂದೆ ಫಲ ಪಕ್ವವಾದಾಗ ಒಂದೊಂದು ಅಂಡಾಶಯವೂ ಒಂದೊಂದು ಕಿರುಫಲವಾಗಿ ಬೆಳೆದು, ಎಲ್ಲ ಕಿರುಫಲಗಳು ಕೂಡಿಕೊಂಡು ಒಂದು ದೊಡ್ಡ ಸಾಮೂಹಿಕ ಅಥವಾ ಪುಂಜ ಫಲವಾಗುತ್ತದೆ. IV) ಸಂಯುಕ್ತ ಫಲಗಳು : ಒಂದು ಪುಷ್ಪಮಂಜರಿಯಲ್ಲಿಯ ಎಲ್ಲ ಹೂಗಳ ಅಂಡಾಶಯಗಳು ಹಾಗೂ ಹೂವಿನ ಇತರ ಭಾಗಗಳು ಕೂಡಿಕೊಂಡು ಸಂಯುಕ್ತ ಫಲಗಳಾಗುತ್ತವೆ. ಇವು ಮಿಥ್ಯ ಫಲಗಳು. 1) ಸೈಕೋನಸ್ : ಇವು ಹೈಪಂಥೋಡಿಯಂ ಪುಷ್ಪಮಂಜರಿಯಿಂದ ಉಂಟಾಗುವ ಫಲಗಳು. ಇಲ್ಲಿ ಪುಷ್ಪತೊಟ್ಟು ಮತ್ತು ಹೂವಿನ ಇತರ ಭಾಗಗಳೆಲ್ಲವೂ ಸೇರಿಕೊಂಡು ರಸಭರಿತ ಫಲವಾಗುತ್ತದೆ. ಇದರ ಪುಷ್ಪಾಕ್ಷವು ಮೇಲೆ ಅಗಲವಾಗಿದ್ದು, ಕೆಳಗೆ ಕಿರಿದಾಗಿ, ಮಧ್ಯದಲ್ಲಿ ಪೊಳ್ಳಾಗಿರುತ್ತದೆ. ಪೊಳ್ಳುಭಾಗದಲ್ಲಿ ಅಸಂಖ್ಯಾತ ಹೆಣ್ಣು, ಗಂಡು ಹಾಗೂ ನಪುಂಸಕ ಹೂಗಳಿರುತ್ತವೆ. ಇದರ ಮೇಲ್ಭಾಗದಲ್ಲಿ ಒಂದು ರಂದ್ರವಿರುತ್ತದೆ.2) ಸೊರೋಸಿಸ್ : ಇದು ಸ್ಪೈಕ್ ಅಥವಾ ಸ್ಪಾಡಿಕ್ಸ್ ಮಾದರಿಯ ಹೆಣ್ಣು ಪುಷ್ಪಮಂಜರಿಯಿಂದ ರೂಪುಗೊಳ್ಳುತ್ತದೆ. ಇದರಲ್ಲಿ ಪುಷ್ಪಾಕ್ಷ, ಹೂವಿನ ಇತರ ಭಾಗಗಳು, ಅಂಡಾಶಯದೊಂದಿಗೆ ಬೆಳೆದು ರಸಭರಿತವಾಗುತ್ತವೆ. ಫಲದ ಹೊರಮೈ ಮುಳ್ಳಿನಂತೆ ಬಿರುಸಾಗಿರುತ್ತದೆ. ಇದೂ ಮಿಥ್ಯಫಲವೇಯಾಗಿದೆ.