ಅಧಿಕಾರ

ನಾವು ಸಸ್ಯದ ವೈಜ್ಞಾನಿಕ ಹೆಸರಿನ ಕೊನೆಯಲ್ಲಿ Linn, DC, Roxb ಎಂದು ಬರೆಯುತ್ತೇವೆ. ಆ ಮೂರನೆಯ ಹೆಸರು, ಆ ಸಸ್ಯದ ನಿಯೋಜಿತ ಅಧಿಕಾರವನ್ನು ಪಡೆದ ಅಧಿಕಾರಿಯ ಹೆಸರು. ಸಾಮಾನ್ಯವಾಗಿ ಆ ಕಾರ್ಯಕರ್ತನ ಹೆಸರನ್ನು ಸಸ್ಯದ ಹೆಸರಿನ ಮುಂಭಾಗದಲ್ಲಿ ಒಂದು ನಿರ್ಧಿಷ್ಟ ಸಂಕೇತಾಕ್ಷರದಿಂದ ಸೂಚಿಸುತ್ತಾರೆ.

ಉದಾ : ಗುಲಗಂಜಿ (Abrus precatorius Linn.), ಸೀಗೆ (Acacia concinna DC.), ಬೆಳ್ಳುಳ್ಳಿ (Allium sativum Linn.), ಹೆಸರು (Phaseolus aurens Roxb.) ಇತ್ಯಾದಿ.

ಇಲ್ಲಿ `Linn’ ಎಂಬುದು ಲಿನೆಯಸ್ ಎಂಬವನ, DC. ಎಂಬುದು Casimir de Candolle ಎಂಬವನ ಹಾಗೂ Roxb. ಎಂಬುದು Roxburgh ಎಂಬವನ ಸಂಕೇತಾಕ್ಷರವಾಗಿದ್ದು ಅದು ಆ ಸಸ್ಯವನ್ನು ಕುರಿತ ಲೇಖನ ಅಥವಾ ಹೆಸರಿನ ಮೇಲೆ ಅವನಿಗಿರುವ ಹಕ್ಕನ್ನು (copyright) ಸೂಚಿಸುತ್ತದೆ.

ಸಸ್ಯದ ನಿಯೋಜಿತ ಅಧಿಕಾರವನ್ನು ಪಡೆದ ಅಧಿಕಾರಿಗಳು

1. Anders (on)
2. Bail(ey)
3. Benth(am)
4. B(entham) ಮತ್ತು H(ooker)
5. Bl(ume)
6. Berg(ius)
7. Boeck(eler)
8. Br(aun, own)
9. C.D.C., (Casimir de Candolle)
10. Champ(an)
11. Engl(er)
12. Gard(ner)
13. Gaud(in
14. Gilb(ert)
15. Griff(ith)
16. H(oo)k(er), Hook(er)
17. Huch(on)
18. L(innaeus)
19. Lam(arck)
20. Lamb(ert)
21. Lindl(ey)
ಲೇಖಕರು : ಸಿ. ಡಿ. ಪಾಟೀಲ