ಅಡಿಕೆ ಮರ (Areca catechu Linn)
ಇಂಗ್ಲೀಷ್ ಹೆಸರುಗಳು : ಬಿಟಲ್ ನಟ್ ಪಾಮ್, ಅರೆಕಾ
ಕನ್ನಡದ ಇತರ ಹೆಸರುಗಳು : ಅಡಿಕೆ, ಬೆಡ್ಡಿ, ಪುಗ
ಭಾರತೀಯ ಹೆಸರುಗಳು :
ಹಿಂದಿ : ಸುಪಾರಿ ತಮಿಳು : ಕಮುಗು
ತೆಲುಗು : ಪೋಕಾವಕ್ಕಾ ಮರಾಠಿ : ಸುಪಾರಿ
ಮಲಯಾಳಂ : ಅಡಕ್ಕ ಮರಂ,ಗುಬಕ್,ತಂತುಸರ ಸಂಸ್ಕೃತ :
ಕುಟುಂಬ : ಅರೆಕೇಸಿ
ಲಭ್ಯತೆ : ಪಶ್ಚಿಮ ಘಟ್ಟಗಳು, ಸಮುದ್ರ ತೀರಗಳು, ದಕ್ಷಿಣ ಭಾರತ.
ಸಸ್ಯ ವಿವರಣೆ :
ಎತ್ತರ : 100 ಅಡಿಗಳ ವರೆಗೆ ಎತ್ತರ ಬೆಳೆಯುತ್ತದೆ. ಸದಾಪರ್ಣಿ.
ಕಾಂಡ : ರೆಂಬೆ ಕೊಂಬೆಗಳಿಲ್ಲದ 30 ಸೆಮಿ ವ್ಯಾಸದ ಕಾಂಡ
ಎಲೆ : ಪರ್ಯಾಯ ಜೋಡಣೆಯ ಸುಮಾರು 4 – 6 ಅಡಿ ಉದ್ದದ ಹಾಗೂ 1 – 2 ಅಡಿ ಅಗಲದ ಏಕಗರಿ ರೂಪಿ ಸಂಯುಕ್ತ ಎಲೆ. ಕಾಂಡದ ತುದಿಗೆ.
ಪುಷ್ಪಮಂಜರಿ : ಲಾಳಗುಚ್ಛ
ಹೂವು : ಚಿಕ್ಕ ಹೂವುಗಳು. ತೊಟ್ಟುರಹಿತ, ಪರಿಮಳಯುಕ್ತ, ಏಕಲಿಂಗಿ
ಹೂವು ಬಿಡುವ ಕಾಲ :
ಫಲ : ಒಂದು ಬೀಜದ ಡ್ರೂಪ್ ಫಲ
ವಂಶಾಭಿವೃದ್ದಿ : ಬೀಜದಿಂದ
ಉಪಯೋಗಗಳು :
ಔಷಧೀಯ : ಇದರ ರಸಕ್ಕೆ ಕ್ರಿಮಿನಾಶಕದ ಗುಣವಿದೆ. ಅಡಿಕೆ ಪುಡಿಗೆ ಭೇದಿ, ಮೂತ್ರದ ಸಮಸ್ಯೆ ಹಾಗೂ ಸುಖವಿರೇಚಕ ಗುಣವಿದೆ. ವೃಣ ಹಾಗೂ ತ್ವಚೆರೋಗಕ್ಕೆ ಅಡಿಕೆ ಪುಡಿಯನ್ನು ಹಚ್ಚುತ್ತಾರೆ. ಅಡಿಕೆ ಪುಡಿಯಿಂದ ದಂತಚೂರ್ಣ ಮಾಡಿ ತಿಕ್ಕಿದರೆ ವಸಡುಗಳು ಗಟ್ಟಿಯಾಗುತ್ತವೆ. ಎಲೆಗಳಿಂದ ಕೆಮ್ಮು, ಶ್ವಸನೀ ಸಮಸ್ಯೆಗಳನ್ನು ಗುಣಪಡಿಸಬಹುದು. ಗರ್ಭಸ್ರಾವಕ್ಕೆ ಉಪಯೋಗಿಸುತ್ತಾರೆ. ಬೇರಿನ ಕಷಾಯವನ್ನು ತುಟಿಗಳು ಒಡೆದರೆ ಹಾಗೂ ಯಕೃತ್ತು ಸರಿಯಾಗಿ ಕೆಲಸ ಮಾಡುವಂತೆ ಉಪಯೋಗಿಸುತ್ತಾರೆ.
ಆರ್ಥಿಕ : ವೀಳ್ಯದೆಲೆಯ ಜೊತೆ ಮೆಲ್ಲುತ್ತಾರೆ. ಜುಬ್ಬರದಿಂದ ಕಾಗದ ಮತ್ತು ಕಟ್ಟುವ ಕಾಗದ ತಯಾರಿಸುತ್ತಾರೆ. ಕಾಂಡವನ್ನು ಕಂಬದಂತೆ ಹಾಗೂ ಗುಡಿಸಲುಗಳಿಗೆ ಉಪಯೋಗಿಸುತ್ತಾರೆ. ಅಡಿಕೆ ಆಹಾರವನ್ನು ಜೀರ್ಣಮಾಡಲ ಸಹಾಯ ಮಾಡುತ್ತದೆ. ಅಡಿಕೆ ಹಾಳೆಯಿಂದ ಬಟ್ಟಲು, ಪ್ಲೇಟು ತಯಾರಿಸುತ್ತಾರೆ.
ಲೇಖಕರು : ಸಿ. ಡಿ. ಪಾಟೀಲ