25. ಬಸರಿ ಮರ (Ficus infectoria Roxb.)
ಇದು ದಕ್ಷಿಣ ಅರೇಬಿಯಾ ದೇಶದಿಂದ ಬಂದಿದ್ದು.
ಲ್ಯಾಟಿನ್ ಭಾಷೆಯಲ್ಲಿ ಫೈಕಸ್ ಎಂದರೆ ಅಂಜೂರ.
ಇಂಗ್ಲೀಷ್ ಹೆಸರುಗಳು : ವೇವ್ ಲೀವ್ಡ್ ಫಿಗ್‌ಟ್ರೀ
ಕನ್ನಡದ ಇತರ ಹೆಸರುಗಳು : ಕರಿ ಬಸರಿ, ಕಬ್ಬಸರಿ, ಬಸರಿ, ಜುವ್ವಿ
ಭಾರತೀಯ ಹೆಸರುಗಳು : ಜಾವಿ, ಕತ್ಲಾಳ
ಹಿಂದಿ : ಪ್ಲಕ್ಷ, ಕಹಿಮಲ್ ಜಾವಿ, ಕತ್ಲಾಳ ತಮಿಳು : ಜೋವಿ
ತೆಲುಗು : ಬಡಿಜುವ್ವಿ ಮರಾಠಿ : ಧೆಡುಂಬರ್, ಬಸ್ಸರಿ
ಮಲಯಾಳಂ : ಬಕ್ರಿ, ಚಕ್ಕಿಲ ಸಂಸ್ಕೃತ: ಅಶ್ವತ್ಥ, ಜಟ, ಶ್ರಿಂಗಿ
ಕುಟುಂಬ : ಮೋರೇಸಿ
ಲಭ್ಯತೆ : ಎಲ್ಲ ಕಡೆ ಹರಡಿದೆ.
ಸಸ್ಯ ವಿವರಣೆ :
ಎತ್ತರ : 13 ಮೀ.ಗಳಷ್ಟು ಎತ್ತರ ಬೆಳೆಯಬಲ್ಲ ನಿತ್ಯಹರಿದ್ವರ್ಣಿ
ಕಾಂಡ : ಹಸಿರು ಬೂದು ಬಣ್ಣದು ನುಣ್ಣನೆಯ ತೊಗಟೆ.
ಎಲೆ : ಪರ್ಯಾಯ ಜೋಡಣೆಯ, ಮೊನಚಾದ ತುದಿಯ, ಅಂಡಾಕಾರದ, ಜಾಲಬಂಧ ನಾಳವಿನ್ಯಾಸವುಳ್ಳ ಸರಳ ಎಲೆಗಳು. ಎಲೆಯ ಉದ್ದ 9 – 12.5 ಸೆಮೀ. ಹಾಗೂ ಅಗಲ 5 – 6.3 ಸೆಮೀ.
ಪುಷ್ಪಮಂಜರಿ : ಹೈಪಂಥೋಡಿಯಂ
ಹೂವು : ತೊಟ್ಟು ರಹಿತ ಗಂಡು, ಹೆಣ್ಣು ಹಾಗೂ ನಪುಂಸಕ ಹೂವುಗಳು ಹೈಪಂಥೋಡಿಯಂನಲ್ಲಿವೆ.
ಹೂವು ಬಿಡುವ ಕಾಲ : ಏಪ್ರಿಲ್ – ಜೂನ್
ಫಲ : ಸೈಕೋನಸ್
ವಂಶಾಭಿವೃದ್ದಿ : ಬೀಜದಿಂದ, ರೆಂಬೆಗಳಿಂದ
ಉಪಯೋಗಗಳು :
ಅಲಂಕಾರಿಕ : ರಸ್ತೆಗೆ ಸಾಲು ಮರವಾಗಿ ಬೆಳೆಸುತ್ತಾರೆ. ಇದೊಂದು ಅತ್ಯುತ್ತಮ ನೆರಳಿನ ಮರ.
ಆರ್ಥಿಕ : ಮರದ ತೊಗಟೆಯಿಂದ ಗಟ್ಟಿಯಾದ ಹಗ್ಗಗಳನ್ನು ತಯಾರಿಸುವರು. ಉದುರಿ ಬಿದ್ದ ಎಲೆಗಳು ಮಣ್ಣಿನೊಡನೆ ಸೇರಿ ಒಳ್ಳೆಯ ಗೊಬ್ಬರವಾಗುತ್ತದೆ. ದನಕರು ಹಾಗೂ ಆನೆಗಳಿಗೆ ಎಲೆ ಒಳ್ಳೆಯ ಮೇವು. ಮರ ಉರುವಲಿಗೆ ಹಾಗೂ ಇದ್ದಲಿ ತಯಾರಿಸಲು ಬರುತ್ತದೆ. ಮರದಿಂದ ಕಾಗದ ರಸ (ಪಲ್ವ) ತಯಾರಿಸುತ್ತಾರೆ. ತೊಗಟೆಯಿಂದ ಸ್ರವಿಸುವ ಹಾಲಿನಂಥ ರಸದಿಂದ ರಬ್ಬರ್ ತಯಾರಿಸುತ್ತಾರೆ. ಇದು ಲ್ಯಾಕ್ (ಅರಗು) ಹುಳುವಿಗೆ ಆಹಾರ.
ಔಷಧೀಯ : ತೊಗಟೆಯ ಕಷಾಯವನ್ನು ಹುಣ್ಣುಗಳನ್ನು ತೊಳೆಯುವುದಕ್ಕೆ ಹಾಗೂ ಬಾಯಿ ಮುಕ್ಕಳಿಸಲಿಕ್ಕೆ ಉಪಯೋಗಿಸುತ್ತಾರೆ. ಈ ಮರದ ಚಕ್ಕೆಯನ್ನು ಹಾಲಿನಲ್ಲಿ ಅರೆದು ಉದರಶೂಲಿಯಾದಾಗ ಕುಡಿಯುತ್ತಾರೆ.
ಲೇಖಕರು : ಸಿ. ಡಿ. ಪಾಟೀಲ