ಆಕಾಶ ಮಲ್ಲಿಗೆ (Millingtonia hortensis Linn)
ಇಂಗ್ಲೀಷ್ ಸಸ್ಯಶಾಸ್ತ್ರಜ್ಞ ಟಿ. ಮಿಲ್ಲಿಂಗ್ಟನ್ ರವರ ಹೆಸರಿನಿಂದ ಮಿಲ್ಲಿಂಗ್ಟೋನಿಯ ಎಂಬ ಹೆಸರು ಬಂದಿದೆ. ಹಾರ್ಟಿನ್ಸಿಸ್ ಎಂಬುದು ತೋಟಕ್ಕೆ ಸಂಬಂಧಿಸಿದ್ದು ಎಂಬ ಲ್ಯಾಟಿನ್ ಪದದಿಂದ ಬಂದಿದೆ. ತೊಗಟೆಯಿಂದ ಕೆಳದರ್ಜೆಯ ಕಾರ್ಕನ್ನೂ ತಯಾರಿಸುತ್ತಾರೆ. ಆದ್ದರಿಂದ ಕಾರ್ಕ ಟ್ರೀ ಎಂಬ ಹೆಸರು ಬಂದಿದೆ.
ಇಂಗ್ಲೀಷ್ ಹೆಸರುಗಳು : ದಿ ಇಂಡಿಯನ್ ಕಾರ್ಕ್ ಟ್ರೀ, ದಿ ಜಸ್ಮಿನ್ ಟ್ರೀ.
ಕನ್ನಡದ ಇತರ ಹೆಸರುಗಳು : ಗಗನ ಮಲ್ಲಿಗೆ, ಸೀಸೆ ಬಿರುಟು ಮರ, ಬಿರುಟು.
ಭಾರತೀಯ ಹೆಸರುಗಳು :
ಹಿಂದಿ : ನೀಮ್ ಚಮೇಲಿ ತಮಿಳು : ಮಾರಮಲ್ಲಿ
ತೆಲುಗು : ಕವುಕ ಮರಾಠಿ : ಆಕಾಸ್ ನಿಂಬ್
ಮಲಯಾಳಂ : ಕಟೇಸಂ ಸಂಸ್ಕೃತ: ಆಕಾಶ ನಿಂಬೂ
ಕುಟುಂಬ : ಬಿಗ್ನೋನಿಯೇಸಿ
ಲಭ್ಯತೆ : ನಮ್ಮ ದೇಶದ ಎಲ್ಲೆಡೆ ಬೆಳೆಯುತ್ತದೆ.
ಸಸ್ಯ ವಿವರಣೆ :
ಎತ್ತರ : 80 ಎಡಿಗಳಷ್ಟು ಎತ್ತರ ಹಾಗೂ ನೇರವಾದ ನಿತ್ಯ ಹರಿದ್ವರ್ಣ ವೃಕ್ಷ.
ಕಾಂಡ : ನೇರವಾದ ಅಗ್ರಭಾಗ ಹಾಗೂ ಹಳದಿ ಬೂದುಬಣ್ಣದ ಕಾರ್ಕಿನಂತಹ ತೊಗಟೆ.
ಎಲೆ : ಪರ್ಯಾಯ ಜೋಡಣೆಯ, ದ್ವಿಗರಿರೂಪಿ ಸಂಯುಕ್ತ ಎಲೆಗಳಿವೆ. ಕಿರು ಪತ್ರಗಳು 2.5 – 7.5 ಸೆಮೀಗಳಷ್ಟು ಉದ್ದ. ಜನವರಿ – ಮಾರ್ಚಿಗಳ ಮಧ್ಯೆ ಎಲೆಗಳು ಉದುರುತ್ತವೆ.
ಪುಷ್ಪಮಂಜರಿ : ಫ್ಯಾನಿಕಲ್ ಹೂಗೊಂಚಲು
ಹೂವು : 5 – 10 ಸೆಮೀ ಉದ್ದವಾದ, ಕೊಳವೆಯಾಕಾರದ, ಬೆಳ್ಳಿ ಬಿಳುಪಿನ, ರಾತ್ರಿ ಮಾತ್ರ ಸುವಾಸನೆ ಬೀರುವ ಹೂವುಗಳು.
ಹೂವು ಬಿಡುವ ಕಾಲ : ನವೆಂಬರ್ – ಡಿಸೆಂಬರ್ ಹಾಗೂ ಏಪ್ರಿಲ್ – ಜೂನ್.
ಫಲ : ಉದ್ದವಾದ, ಚಪ್ಪಟೆಯಾದ ಕೋಶಫಲ (ನಮ್ಮ ದೇಶದಲ್ಲಿ ಈ ಸಸ್ಯ ಕಾಯಿ ಬಿಡುವುದಿಲ್ಲ)
ವಂಶಾಭಿವೃದ್ದಿ : ಬೇರು ಚಿಗುರಿನಿಂದ, ರೆಂಬೆಗಳಿಂದ.
ಉಪಯೋಗಗಳು :
ಅಲಂಕಾರಿಕ : ಅಗಲವಾದ ರಸ್ತೆಯ ಎರಡೂ ಬದಿಗೆ ಬೆಳೆಸುತ್ತಾರೆ.
ಆರ್ಥಿಕ : ಮರದಿಂದ ಪೀಠೋಪಕರಣ ಹಾಗೂ ಶೃಂಗಾರದ ಕೆಲಸಕ್ಕೆ ಮತ್ತು ಬೆರಟು ತಯಾರಿಸಲು ಉಪಯೋಗಿಸುತ್ತಾರೆ. ತೊಗಟೆಯಿಂದ ಕೆಳದರ್ಜೆಯ ಕಾರ್ಕ್ ತಯಾರಿಸುತ್ತಾರೆ.
ಲೇಖಕರು : ಸಿ. ಡಿ. ಪಾಟೀಲ