ಆನೆ ಹುಣಸೆ (Adansonia digitata Linn.)

ಫ್ರೆಂಚ್ ಸಸ್ಯಶಾಸ್ತ್ರಜ್ಞ ಅಡಾನ್ಸನ್‌ರವರ ನೆನಪಿನಾರ್ಥ ಅಡಾನ್ಸೋನಿಯಾ ಎಂಬ ಹೆಸರು ಬಂದಿದೆ. ಡಿಜಿಟೇಟ ಎಂಬುದು ಬೆರಳಿನಂತೆ ಕಾಣುವ ಕಿರು ಎಲೆಗಳನ್ನು ಸೂಚಿಸುತ್ತದೆ. ಗೋರಖ್ ಬಿಂಚ್ ಎಂಬ ಹೆಸರು ಗುರು ಗೊರಖ್‌ನಾಥರವರ ಜ್ಞಾಪಕಾರ್ಥವಾಗಿ ಇಟ್ಟ ಹೆಸರು. ಈ ಮರದಡಿಯಲ್ಲಿ ತಮ್ಮ ಶಿಷ್ಯರಿಗೆ ಉಪದೇಶ ಮಾಡಿದರಂತೆ.ಇಂಗ್ಲೀಷ್ ಹೆಸರುಗಳು : ಬ್ಯಾಬಬ್ ಟ್ರೀ, ಮಂಕಿ ಬ್ರೆಡ್ ಟ್ರೀ, ಕ್ರೀಮ್ ಆಫ್ ಟಾರ್ಟಾರ್ ಟ್ರೀಕನ್ನಡದ ಇತರ ಹೆಸರುಗಳು : ಓಕಹೊಟ್ಟೆ ಮರ, ಮುಗ್ಗಿವಾಮು, ಭ್ರಾಮ್‌ಲಿಕಾಭಾರತೀಯ ಹೆಸರುಗಳು :ಹಿಂದಿ : ಗೋರಕ್ ಆಮ್ಲಿ, ಗೋರಕ್ ಇಮ್ಲಿ, ಹಾಥಿ ಕಥಿಯನ್ತಮಿಳು : ಆನೈ ಪುಲಿಯ ಮರಂ, ಪಪರ್ ಫುಳಿಯ, ಪೆರೂಕತೆಲುಗು : ಭ್ರಹ್ಮಂಲಿಕ, ಮಗ್ಗಿವಾಮು, ಸೀಮಚಿಂತಕಾಯಮರಾರಿ : ಗೋರಖ್ ಬಿಂಚ್ಮಲಯಾಳಂ : ಸಂಸ್ಕೃತ : ಕುಟುಂಬ : ಬಾಂಬಕೇಸಿಲಭ್ಯತೆ : ಔರಂಗಾಬಾದ್, ಚೆನ್ನೈ, ಜಮಖಂಡಿ, ಸವಣೂರು ಇತ್ಯಾದಿ.

ಸಸ್ಯ ವಿವರಣೆ : ಎತ್ತರ : ಸುಮಾರು 60 ಅಡಿಗಳಷ್ಟು ಎತ್ತರ ಬೆಳೆಯಬಲ್ಲ ಶುಷ್ಕಪರ್ಣಿ. ಕಾಂಡ ಗಿಡ್ಡ ಸುಮಾರು 80 ಅಡಿಗಳಷ್ಟು ಸುತ್ತಳತೆ ಮುಟ್ಟಬಲ್ಲದು. ಕಾಂಡ ಶೀಸೆಯಂತೆ ಕಾಣುತ್ತದೆ.ಕಾಂಡ : ನುಣ್ಣನೆಯ ತೊಗಟೆಎಲೆ : ಪರ್ಯಾಯ ಜೋಡಣೆಯಲ್ಲಿರುವ ಬಹುಪರ್ಣಿಕೆ. ಚಿಕ್ಕ ಸಸ್ಯಗಳಲ್ಲಿ ಕಿರುಎಲೆಗಳ ಸಂಖ್ಯೆ 3. ಸಸ್ಯ ಬೆಳೆದಂತೆ ಕಿರು ಎಲೆಗಳ ಸಂಖ್ಯೆ 5-7. ಎಲೆಗಳ ವಿಸ್ತಾರ ಸುಮಾರು 5 x 12.5 ಸೆಮಿಗಳು.ಪುಷ್ಪಮಂಜರಿ : ಒಂದೇ ಹೂವುಳ್ಳ ಪುಷ್ಪಮಂಜರಿ.ಹೂವು : ಸುಮಾರು 15 ಸೆಮೀ ವ್ಯಾಸದ ಹೂಗಳ ಬಣ್ಣ ಕೆನೆಯ ಬಣ್ಣ. ಮಧ್ಯರಾತ್ರಿಯಲ್ಲಿ ಹೂವುಗಳು ಅರಳುತ್ತವೆ ಮತ್ತು ಮಾರನೆ ದಿನ ಮಧ್ಯಾಹ್ನದ ಹೊತ್ತಿಗೆ ಬಾಡಿಹೋಗುತ್ತವೆ.ಹೂವು ಬಿಡುವ ಕಾಲ : ಜುಲೈಫಲ : ಸೋರೆಕಾಯಿಯಂತೆ ಕಾಣುವ ಕ್ಯಾಪ್ಸೂಲ್. 20 – 30 ಸೆಮೀ ಉದ್ದ ಹಾಗೂ 10 ಸೆಮೀ ಸುತ್ತಳತೆ. ಬಹಳ ಗಟ್ಟಿ ತಿರುಳು. ಬಿಳಿ / ಹಳದಿ / ಕಂದು ಅಥವಾ ಕಪ್ಪು ಬಣ್ಣದ ಹೊಳೆಯುವ ಅವರೆಯಂತಹ ಬೀಜಗಳು. ಹೊರಗವಚ ದಪ್ಪ.
ಉಪಯೋಗಗಳು : ಔಷಧೀಯ : ಉರಿಯುವಿಕೆಯ ಶಮನಕ್ಕೆ ಹಾಗೂ ಸ್ಕರ್ವಿಯನ್ನು ಗುಣಪಡಿಸಲು ಹಣ್ಣುಗಳನ್ನು ಉಪಯೋಗಿಸುತ್ತಾರೆ. ಅದು ಹೊಟ್ಟೆಯ ಅಸ್ವಸ್ಥತೆಯನ್ನು ಗುಣಪಡಿಸುತ್ತದೆ. ಎಲೆಯನ್ನು ಕಿವಿನೋವಿಗೆ ಎಲೆ ಹಾಗೂ ಹೂವುಗಳನ್ನು ಶ್ವಾಸೋಚ್ಛಾಸ ಹಾಗೂ ಪಚನಕ್ರಿಯೆ ತೊಂದರೆ ವಾಸಿಮಾಡಲು ಬಳಸುತ್ತಾರೆ. ಹಣ್ಣಿನಲ್ಲಿ ಕ್ಯಾಲ್ಸಿಯಂ ಹಾಗೂ ವಿಟಾಮಿನ್ `ಬಿ‘ಗಳಿವೆ. ಹಣ್ಣು ತಿನ್ನುವುದರಿಂದ ಹಸಿವು ಹೆಚ್ಚುತ್ತದೆ ಹಾಗೂ ತಿರುಳನ್ನು ಅಸ್ತಮಾ, ಅಲರ್ಜಿಗೆ ಬಳಸುತ್ತಾರೆ. ಬೀಜವನ್ನು ಹಲ್ಲು ನೋವಿಗೆ ಬಳಸುತ್ತಾರೆ. ಸಿಂಕೋನ ತೊಗಟೆಯ ಬದಲಿಗೆ ಇದರ ತೊಗಟೆಯನ್ನು ಬಳಸುತ್ತಾರೆ.ಆರ್ಥಿಕ : ತೊಗಟೆಯಿಂದ ಹಗ್ಗ ಹಾಗೂ ಹುರಿಗಳನ್ನು ಮಾಡುತ್ತಾರೆ. ಆಮ್ಲೀಯ ತಿರುಳನ್ನು ತಿನ್ನಬಹುದು ಹಾಗೂ ಪಾನೀಯಗಳನ್ನು ತಯಾರಿಸಬಹುದು. ಗುಜರಾತಿನಲ್ಲಿ ಮೀನು ಹಿಡಿಯುವವರು ಹಣ್ಣುಗಳನ್ನು ಅವರ ಬಲೆಗಳಿಗೆ ತೇಲು ಬುರುಡೆಗಳಾಗಿ ಉಪಯೋಗಿಸುತ್ತಾರೆ. ಚಿಗುರೆಲೆಗಳನ್ನು ಆಫ್ರಿಕೆಯ ಜನರು ತಿನ್ನುತ್ತಾರೆ. ದನಕರುಗಳೂ ಎಲೆಗಳನ್ನೂ ತಿನ್ನುತ್ತವೆ. ಇದರ ಬೀಜಗಳಿಂದ ಕೊರಳಿನ ಸರ ಮಾಡುತ್ತಾರೆ. ಬೀಜದಿಂದ ಸೋಪನ್ನು ತಯಾರಿಸುತ್ತಾರೆ. ತೊಗಟೆಯನ್ನು ಗಾಯಗೊಳಿಸಿದರೆ ಬಿಳಿಗೋಂದು ಸ್ರವಿಸುತ್ತದೆ. ಹಳೆಯದಾದಂತೆ ಕೆಂಪು – ಕಂದು ಬಣ್ಣಕ್ಕೆ ತಿರುಗುತ್ತದೆ. ಎಳೆ ಬೇರನ್ನು ಆಹಾರವಾಗಿಯೂ ಸೇವಿಸಬಹುದು. ತೊಗಟೆಯ ನಾರಿನಿಂದ ಹಗ್ಗ, ಚೀಲ, ಆನೆ ಕಟ್ಟುವ ಹಗ್ಗ, ಕುದುರೆಯ ಛಡಿ, ಬುಟ್ಟಿ, ಚಾಪೆ, ಇತ್ಯಾದಿ ತಯಾರಿಸುತ್ತಾರೆ. ಸಾಧುಗಳು ಒಣ ಚಿಪ್ಪನ್ನೂ ನೀರು ಸಂಗ್ರಹಿಸಲು ಬಳಸುತ್ತಾರೆ.

ಲೇಖಕರು : ಸಿ. ಡಿ. ಪಾಟೀಲ