28. ಬ್ರಹ್ಮವೃಕ್ಷ (Butea frondosa Roxb.)

ಸಸ್ಯಶಾಸ್ತ್ರದಲ್ಲಿ ವಿಧಾಯಕ ಶಕ್ತಿ ಪಡೆದಿದ್ದ ಹಾಗೂ ಬ್ಯೂಟ್‌ನ ಅರ್ಲಿ ಆಗಿದ್ದ ಜಾನ್ ಸ್ಟುವರ್ಟ್‌ರವರ ಗೌರವಾರ್ಥ ಈ ಮರಕ್ಕೆ ಬ್ಯೂಟಿಯ ಎಂಬ ಹೆಸರು ಕೊಡಲಾಗಿದೆ. ಫ್ರಾಂಡೋಸಾ ಎಂದರೆ ಎಲೆಯಂತಿರು ಎಂದರ್ಥ. ಮನೋಸ್ಪರ್ಮಾ ಎಂದರೆ ಒಂದೇ ಬೀಜದ್ದು ಎಂದರ್ಥ. ಸಂಸ್ಕೃತದಲ್ಲಿ ಕಿಂಶುಕ ಎಂದರೆ ಗಿಳಿಯಂತೆ ಎಂದರ್ಥ.

ಇಂಗ್ಲೀಷ್ ಹೆಸರುಗಳು : ಫ್ಲೇಮ್ ಆಫ್ ದಿ ಫಾರೆಸ್ಟ್, ಪ್ಯಾರಟ್ ಟ್ರೀ, ಬಾಸ್ಟರ್ಡ್‌ಟ್ರೀ, ಬೆಂಗಾಲ್ ಕಿನೊ, ಬ್ಯೂಟಿಯಾಗಮ್. ಕನ್ನಡದ ಇತರ ಹೆಸರುಗಳು : ಮುತ್ಲುಗ, ಮುತ್ತುಗ, ಮುತ್ತಗದ ಮರ, ಮುತ್ತಲ, ಪಲಸಾ.ಭಾರತೀಯ ಹೆಸರುಗಳು :ಹಿಂದಿ : ಪಲಾಶ್, ಕಂತ್ರೀ ತಮಿಳು : ಕಟ್ಟು ಮುರುಕ್ಕು, ಚರಸುತೆಲುಗು : ಮೊಡುಗಾ ಮರಾಠಿ : ಕಕ್ರಾಚಮಲಯಾಳಂ : ಶಮತ, ಬ್ರಹ್ಮವೃಕ್ಷರಿ, ಪಲಸಿ ಸಂಸ್ಕೃತ : ಕಿಂಶುಕ, ರಕ್ತಪುಷ್ಟಕ, ಸುಪರ್ಣಿಕುಟುಂಬ : ಫ್ಯಾಬೇಸಿಉಪಕುಟುಂಬ : ಪ್ಯಾಪಿಲಿಯೋನೇಸಿಲಭ್ಯತೆ : ನಮ್ಮ ದೇಶದ ಎಲ್ಲ ಕಡೆ ಬೆಳೆಯುತ್ತದೆ.

ಸಸ್ಯ ವಿವರಣೆ :ಎತ್ತರ : 10 – 15 ಮೀ.ಗಳವರೆಗೆ ಬೆಳೆಯಬಲ್ಲದು. ಶುಷ್ಕಪರ್ಣಿ.ಕಾಂಡ : ತೊಗಟೆ ನಾರಿನಿಂದ ಕೂಡಿದ್ದು ತಿಳಿಗಂದು ಅಥವಾ ಬೂದು ಬಣ್ಣದ್ದು.ಎಲೆ : ಪರ್ಯಾಯ ಜೋಡಣೆಯ ತ್ರಿಪರ್ಣಿಕೆ. ಎಲೆ ದೊಡ್ಡದು. ಕಿರುಎಲೆಗಳು ಒಂದೇ ಗಾತ್ರದವು. ಕಿರು ಎಲೆಯ ತುದಿ ಮೊಂಡು. ಜಾಲಬಂಧ ನಾಳವಿನ್ಯಾಸ. ಎಲೆಯ ಬುಡ ಹಾಗೂ ಕಿರುಎಲೆಯ ಬುಡ ಉಬ್ಬಿದೆ.ಪುಷ್ಪಮಂಜರಿ : ಮಧ್ಯಾಭಿಸರ ಪುಷ್ಪಮಂಜರಿ. 15 ಸೆಮೀ. ಉದ್ದ.ಹೂವು : ಪ್ರಜ್ವಲಿಸುವ ಕಿತ್ತಳೆ ಬಣ್ಣದ ಹೂವುಗಳು. ಪತಂಗರೂಪಿ ದಳಗಳು. ಕಪ್ಪು ಪುಷ್ಪ ಪಾತ್ರೆ ಇದೆ.ಹೂವು ಬಿಡುವ ಕಾಲ : ಫೆಬ್ರುವರಿ – ಮಾರ್ಚಿ.ಫಲ : 12.5 – 20 ಸೆಮೀ ಉದ್ದದ 2.5 — 5 ಸೆಮೀ. ದಪ್ಪದ ಪಾಡ್‌ಗಳು. ಎಳೆಪಾಡ್‌ಗಳು ಹಸಿರಾಗಿರುತ್ತವೆ. ಬಲಿತಂತೆ ಹಳದಿ ಬೂದು ಬಣ್ಣಕ್ಕೆ ತಿರುಗುತ್ತವೆ. ಚಪ್ಪಟೆಯ ಬೂದು ಬಣ್ಣದ ಬೀಜಗಳಿವೆ.ವಂಶಾಭಿವೃದ್ದಿ : ಬೀಜದಿಂದ.

ಉಪಯೋಗಗಳು :ಅಲಂಕಾರಿಕ : ಇದರ ಹೂವುಗಳಿಗಾಗಿ ಉದ್ಯಾನವನಗಳಲ್ಲಿ ಬೆಳೆಸುತ್ತಾರೆ.ಔಷಧೀಯ : ತೊಗಟೆಯಿಂದ ಬರುವ ಬೆಂಗಾಲ್ ಕಿನೋ ಎಂಬ ಗೋಂದು ಉತ್ತೇಜಕಕಾರಿಯಂತೆ ಕೆಲಸಮಾಡುತ್ತದೆ. ತೊಗಟೆ ಇರುಳುಗಣ್ಣುಗಳನ್ನು ವಾಸಿಮಾಡುತ್ತದೆ. ಆನೆಕಾಲು ರೋಗಕ್ಕೂ ಇದನ್ನು ಉಪಯೋಗಿಸುತ್ತಾರೆ. ತೊಗಟೆ ಅಲ್ಸರ್‌ಹುಣ್ಣಿಗೆ ಉಪಯೋಗಿ.ಆರ್ಥಿಕ : ತೊಗಟೆಯಿಂದ ಚರ್ಮಹದ ಮಾಡುತ್ತಾರೆ. ಇದು ಒಳ್ಳೆ ಸೌದೆಯೂ ಹೌದು. ಎಲೆಗಳಿಂದ ತಟ್ಟೆ ತಯಾರಿಸುತ್ತಾರೆ. ಹೂವುಗಳಿಂದ ಬಣ್ಣವನ್ನು ತೆಗೆಯುತ್ತಾರೆ. ಬೇರುಗಳ ನಾರಿನಿಂದ ಹಗ್ಗಗಳನ್ನು ತಯಾರಿಸುತ್ತಾರೆ. ಬೀಜದಿಂದ ಎಣ್ಣೆ ತೆಗೆಯುತ್ತಾರೆ. ಬಣ್ಣವನ್ನು ಬಟ್ಟೆಗಳಿಗೆ ಕೊಡುತ್ತಾರೆ. ಪೆಟ್ಟಿಗೆಗಳಿಗೆ ಮತ್ತು ಮುದ್ರಣಾ ಕಾಗದದ ತಯಾರಿಕೆಗೆ ಇದು ಯೋಗ್ಯ ಮರ.

ಲೇಖಕರು : ಸಿ. ಡಿ. ಪಾಟೀಲ