ಆನೆಕಾಯಿ ಮರ (Kigelia pinnata D.C.)
ಕಿಜಿಲಿಯ ಮರದ ಸ್ಥಳದ (ಆಫ್ರಿಕಾ) ಹೆಸರಿನಿಂದ ಬಂದಿದೆ. ಪಿನ್ನೇಟ ಎಂಬುದು ಎಲೆಗಳ ಪಿನ್ನೇಟ ಆಕೃತಿಯನ್ನು ಸೂಚಿಸುತ್ತದೆ.
ಇಂಗ್ಲೀಷ್ ಹೆಸರುಗಳು : ದಿ ಸಾಸೇಜ್ ಟ್ರೀ
ಕನ್ನಡದ ಇತರ ಹೆಸರುಗಳು : ಮರ ಸವತೆ
ಭಾರತೀಯ ಹೆಸರುಗಳು :
ಹಿಂದಿ : ತಮಿಳು :
ತೆಲುಗು : ಮರಾಠಿ :
ಮಲಯಾಳಂ : ಸಂಸ್ಕೃತ :
ಕುಟುಂಬ : ಬಿಗ್ನೋನಿಯೇಸಿ
ಲಭ್ಯತೆ : ಉದ್ಯಾನವನಗಳಲ್ಲಿ ಬೆಳೆಸುತ್ತಾರೆ.
ಸಸ್ಯ ವಿವರಣೆ :
ಎತ್ತರ : 30 – 45 ಅಡಿಗಳಷ್ಟು ಎತ್ತರ ಬೆಳೆಯಬಲ್ಲ ಸದಾಪರ್ಣಿ ವೃಕ್ಷ.
ಕಾಂಡ :
ಎಲೆ : ಗರಿರೂಪಿ ಸಂಯುಕ್ತ ಎಲೆಗಳು. 10 – 12 ಸೆಮೀ ಉದ್ದ ಹಾಗೂ 5 – 6 ಸೆಮೀ. ಅಗಲವುಳ್ಳ ಎಲೆಗಳು. ತೊಗಲಿನಂತಹವು.
ಪುಷ್ಪಮಂಜರಿ : ಮಧ್ಯಾಭಿಸರ ಪುಷ್ಪಮಂಜರಿ
ಹೂವು : ಬಟ್ಟಲಿನಾಕಾರದ ದಟ್ಟ ನಸುಗೆಂಪು ಚುಕ್ಕೆಗಳಿದ್ದ ನೀಲಿ ಬಣ್ಣದ ದೊಡ್ಡ ಹೂವುಗಳು. ಅರಳುವುದು ರಾತ್ರಿ. ದುರ್ಗಂಧ ಸೂಸುತ್ತವೆ.
ಹೂವು ಬಿಡುವ ಕಾಲ : ಏಪ್ರಿಲ್ – ಮೇ.
ಫಲ : ಭಾರವಾದ ದೊಡ್ಡ ಕಾಯಿಗಳು, ಸವತೆಕಾಯಿಯಂತೆ ಕಾಣುತ್ತವೆ. ಉದ್ದನೆಯ ಹುರಿಯಂತಹ ತೊಟ್ಟುಗಳಿಗೆ ಅಂಟಿಕೊಂಡು ನೇತಾಡುತ್ತವೆ. ಕಾಯಿಗೆ ಕೆಟ್ಟ ವಾಸನೆ ಇದೆ.
ವಂಶಾಭಿವೃದ್ದಿ : ಬೀಜಗಳಿಂದ
ಉಪಯೋಗಗಳು :
ಅಲಂಕಾರಿಕ : ಉದ್ಯಾನವನಗಳಿಗೆ ಸೂಕ್ತವಾದ ಮರ.
ಔಷಧೀಯ :
ಆರ್ಥಿಕ : ಹೂವುಗಳಲ್ಲಿ ಅಂಥೊಸೈನಿನ್ ಇರುತ್ತದೆ. ತೊಗಟೆಯಲ್ಲಿ ಟ್ಯಾನಿಕ್ ಆಮ್ಲ ಸಿಗುತ್ತದೆ. ಇದರ ಬೀಜಗಳನ್ನು ಹುರಿದು ತಿನ್ನುವುದುಂಟು. ಇದರ ಹಣ್ಣುಗಳನ್ನು ಹುಣ್ಣುಗಳಿಗೆ, ಸಿಫಿಲಿಸ್ ಹಾಗೂ ವಾಯುರೋಗಗಳಿಗೆ ಔಷಧಿಯಾಗಿ ಉಪಯೋಗಿಸುತ್ತಾರೆ. ತೊಗಟೆಯನ್ನು ಕೂಡ rheumatism, ಅತಿಭೇದಿ ಹಾಗೂ ಲೈಂಗಿಕ ರೋಗಗಳಿಗಾಗಿ ಉಪಯೋಗಿಸುತ್ತಾರೆ.

ಲೇಖಕರು : ಸಿ. ಡಿ. ಪಾಟೀಲ