ಈಚಲು ಮರ (Phoenix sylvestris Roxb.)

ಇಂಗ್ಲೀಷ್ ಹೆಸರುಗಳು : ಟಾಡಿ ಪಾಮ್, ವೈಲ್ಡ್ ಡೇಟ್ ಪಾಮ್, ಡೇಟ್ ಶುಗರ್ ಪಾಮ್ಕನ್ನಡದ ಇತರ ಹೆಸರುಗಳು : ಶಿಂದೀ ಮರಭಾರತೀಯ ಹೆಸರುಗಳು : ಹಿಂದಿ : ಖಜೂರ್, ಖಜೂರಿ ತಮಿಳು : ಇಚ್ಚಮ್ ಪನ್ನೈತೆಲುಗು : ಪೆದ್ದ ಇಟಾ ಮರಾಠಿ : ಶಿರಧಿ, ಸೆಂಧ್ರಿಮಲಯಾಳಂ : ಕಟ್ಟಂಟಾ ಸಂಸ್ಕೃತ : ಕಪಿಲ, ರೋಷಣ, ಖರ್ಜೂರಿ ಕುಟುಂಬ : ಅರೆಕೇಸಿ ಲಭ್ಯತೆ : ನಮ್ಮ ದೇಶದ ಎಲ್ಲ ಶುಷ್ಕ ಪ್ರದೇಶದಲ್ಲಿ ಕಾಣಸಿಗುತ್ತದೆ.

ಸಸ್ಯ ವಿವರಣೆ : ಎತ್ತರ : ಸುಮಾರು 30 – 50 ಅಡಿಗಳಷ್ಟು ಎತ್ತರ ಬೆಳೆಯುತ್ತದೆ. ಸದಾಪರ್ಣಿ.ಕಾಂಡ : ಕವಲೊಡೆಯದ ಕಾಂಡ. ಎಲೆಗಳ ಬುಡ ಕಾಂಡಕ್ಕೆ ಅಂಟಿಕೊಂಡಿವೆ.ಎಲೆ : ಕಾಂಡದ ತುದಿಯಲ್ಲಿ 7 – 15 ಅಡಿಗಳಷ್ಟು ಉದ್ದದ ಏಕಗರೀ ರೂಪಿ ಎಲೆಗಳುಂಟು. ಕಿರು ಎಲೆಗಳ  ತುದಿಗಳು ಚೂಪು. ಮುಳ್ಳಿನಂತೆ.ಪುಷ್ಪಮಂಜರಿ : ಲಾಳಗುಚ್ಚ, 90 ಸೆಮೀ. ಉದ್ದಹೂವು : ಪರಿಮಳದ ಗಂಡು ಹೂವುಗಳು ಬಿಳಿ, ದುಂಡಗಿನ ಹೆಣ್ಣು ಹೂವುಗಳು, ಹಸಿರು ಬಣ್ಣದವು. ಹೆಣ್ಣು ಗಂಡು ಹೂವುಗಳು ಬೇರೆ ಬೇರೆ ಮರದಲ್ಲಿರುತ್ತವೆ.ಹೂವು ಬಿಡುವ ಕಾಲ : ಬೇಸಿಗೆ ಕಾಲಫಲ : ಬೆರ್ರಿ. ಕಿತ್ತಳೆ – ಹಳದಿ. 2.5 – 3 ಸೆಮೀ ಉದ್ದ. ಬೀಜದ ಉದ್ದ 1.7 ಸೆಮೀ.ವಂಶಾಭಿವೃದ್ದಿ : ಬೀಜದಿಂದ.

ಉಪಯೋಗಗಳು : ಆರ್ಥಿಕ : ಗಿಡಕ್ಕೆ ಕಚ್ಚುಹಾಕಿ ಮಡಿಕೆ ಕಟ್ಟಿ ರಸ ತೆಗೆದು ಕುಡಿಯುತ್ತಾರೆ. ಅದಕ್ಕೆ ನೀರಾ ಎನ್ನುತ್ತಾರೆ. ಹುಳಿಯಾದ ರಸಕ್ಕೆ ಶೇಂದಿ ಎನ್ನುತ್ತಾರೆ. ರಸದಿಂದ ಬೆಲ್ಲವನ್ನೂ ತಯಾರಿಸುತ್ತಾರೆ. ಎಲೆಗಳಿಂದ ಬೀಸಣಿಕೆ, ಚಾಪೆ, ಬುಟ್ಟಿ, ಕಸಬರಿಕೆ ತಯಾರಿಸುತ್ತಾರೆ. ಗುಡಿಸಲುಗಳಿಗೆ ಹೊದಿಕೆಯಂತೆಯೂ ಉಪಯೋಗಿಸುತ್ತಾರೆ. ಬಡ್ಡೆಯನ್ನು ತೊಲೆಗಳಾಗಿಯೂ ಬಳಸುತ್ತಾರೆ. ಈಚಲು ಹಣ್ಣನ್ನು ತಿನ್ನುತ್ತಾರೆ. ಹಣ್ಣುಗಳಿಂದ ಮುರಬ್ಬಿ ರಸಾಯನಗಳನ್ನು ಹಾಗೂ ಹುಳಿ ರಸವನ್ನೂ ಮಾಡಬಹುದು. ಎಲೆಗಳಿಂದ ಹುರಿ, ಹಗ್ಗಗಳನ್ನು ತಯಾರಿಸುತ್ತಾರೆ. ಕಾಂಡವನ್ನು ಗುಡಿಸಲುಗಳ ಕಂಬವಾಗಿ ಉಪಯೋಗಿಸುತ್ತಾರೆ. ಈಚಲಗರಿಗಳಿಂದ ಒಳ್ಳೆ ಗಟ್ಟಿಯಾದ ಕಾಗದವನ್ನು ತಯಾರಿಸುತ್ತಾರೆ.

ಲೇಖಕರು : ಸಿ. ಡಿ. ಪಾಟೀಲ