ಕತ್ತಿಕಾಯಿ ಮರ (Delonix regia Ref.) (Poinciana regia Bojer)

ಸಸ್ಯಶಾಸ್ತ್ರದಲ್ಲಿ ಉತ್ಸಾಹಿತರಾಗಿದ್ದ ವೆಸ್ಟ್ ಇಂಡೀಸ್‌ನ ರಾಜ್ಯಪಾಲರಾಗಿದ್ದ ಎಮ್.ಡಿ. ಪಾಯನ್ಸಿಯವರ ಮೇಲೆ ಪಾಯನ್ಸಿಯಾನ್ ಎಂಬ ಹೆಸರಿಡಲಾಗಿದೆ. ಲ್ಯಾಟಿನ್‌ನಲ್ಲಿ ರೀಜಿಯ ಎಂದರೆ ರಾಜಯೋಗ್ಯ ಎಂದರ್ಥ. ಮೋಹರ್ ಎಂದರೆ ನವಿಲು, ಗುಲ್ ಎಂದರೆ ಹೂವು ಎಂದರ್ಥ.ಇಂಗ್ಲೀಷ್ ಹೆಸರುಗಳು : ದಿ ಗುಲ್‌ಮೊಹರ್, ಪಿಕಾಕ್ ಫ್ಲಾವರ್, ಗೋಲ್ಡ್ ಮೊಹರ್, ಫ್ಲಾಮ್ ಬಂತೂಂಟ್, ಮೇಫ್ಲವರ್ ಕನ್ನಡದ ಇತರ ಹೆಸರುಗಳು : ದೊಡ್ಡರತ್ನಗಂಧಿ, ಸೀಮೆ ಸಂಕೇಶ್ವರ, ಚನ್ನಕೇಶರಿಭಾರತೀಯ ಹೆಸರುಗಳು :ಹಿಂದಿ : ಗುಲ್‌ಮೊಹರ್ ತಮಿಳು : ಮಯೂರಂ.ತೆಲುಗು : ಶೀಮಸಂಕೇಸುಲು ಮರಾಠಿ : ಗುಲ್‌ಮೊರ್ಹಮಲಯಾಳಂ : ಅಲಸಿಪ್ಪು ಸಂಸ್ಕೃತ :ಕುಟುಂಬ : ಫ್ಯಾಬೇಸಿಉಪಕುಟುಂಬ : ಸಿಸಾಲ್ಪಿನೇಸಿಲಭ್ಯತೆ : ಭಾರತದ ಎಲ್ಲೆಡೆ ಬೆಳೆಯುತ್ತದೆ.

ಸಸ್ಯ ವಿವರಣೆ :

ಎತ್ತರ : 25 – 35 ಅಡಿಗಳಷ್ಟು ಎತ್ತರ ಬೆಳೆಯಬಲ್ಲ ಶುಷ್ಕಪರ್ಣಿಕಾಂಡ :ಎಲೆ : ಪರ್ಯಾಯ ಜೋಡಣೆಯ ದ್ವಿಗರಿರೂಪಿ ಸಂಯುಕ್ತ ಎಲೆ. 20 – 30 ಕಿರುಎಲೆಗಳುಂಟು.ಪುಷ್ಪಮಂಜರಿ : ನೀಳಛತ್ರ ಪುಷ್ಪಮಂಜರಿ.ಹೂವು : ಕೇಸರಿಗೆಂಪಿನ ಹೂವುಗಳು. ಚಮಚೆಯಾಕಾರದ ದಳಗಳು. ಒಂದು ದಳದಲ್ಲಿ ಹಳದಿ ಬಣ್ಣದ ಗೆರೆಗಳಿವೆ. 10 ಉದ್ದನೆಯ ಕೇಸರಗಳು.ಹೂವು ಬಿಡುವ ಕಾಲ : ಏಪ್ರಿಲ್ – ಜೂನ್ಫಲ : 12 – 14 ಅಂಗುಲ ಉದ್ದ 2 1/2 ಅಂಗುಲ ಅಗಲವಾದ, ಕತ್ತಿಯಂತೆ ಕಾಣುವ ಕಾಯಿ. ಬಲಿತ ಮೇಲೆ ಕಪ್ಪಾಗುತ್ತದೆ.ವಂಶಾಭಿವೃದ್ದಿ : ಬೀಜಗಳಿಂದ, ರೆಂಬೆಕೊಂಬೆಗಳ ತುಂಡಿನಿಂದ.

ಉಪಯೋಗಗಳು :

ಆರ್ಥಿಕ : ಮರ ಮೆತು ಹಾಗೂ ಹಗುರವಾಗಿರುವುದರಿಂದ ಪೆಟ್ಟಿಗೆಗಳ ತಯಾರಿಕೆಗೆ ಉಪಯೋಗವಾಗುತ್ತದೆ. ಮರ ಬಾಳಿಕೆ ಬರುವುದಿಲ್ಲ. ಅಲಂಕಾರಿಕ : ಸುಂದರ ಕೆಂಪು ಹೂವುಗಳನ್ನು ಹಾಗೂ ನೆರಳನ್ನು ಕೊಡುವುದರಿಂದ ಉದ್ಯಾನವನಗಳಲ್ಲಿ ಹಾಗೂ ರಸ್ತೆ ಬದಿಗೆ ಬೆಳೆಸುತ್ತಾರೆ. ಬೇಸಿಗೆಯಲ್ಲಿ ಮರದ ತುಂಬ ಹೂವುಗಳು ಮಾತ್ರವಿದ್ದು ನೋಡಲು ಬಹಳ ಸುಂದರ ಕಾಣುತ್ತದೆ.

ಲೇಖಕರು : ಸಿ. ಡಿ. ಪಾಟೀಲ