ಮರ
ಮರ ಅಂದರೇನು? ಅದಕ್ಕೆ ಬೇರು, ಕಾಂಡ, ರೆಂಬೆ, ಎಲೆ, ಹೂ, ಕಾಯಿಗಳಿದ್ದರೆ ಸಾಕೆ? ಕೆಲವು ಮರಗಳಿಗೆ ಈ ಎಲ್ಲ ಭಾಗಗಳು ಇರುವುದಿಲ್ಲ. ಕೆಲವು ಮರಗಳು ಒಂದೊಂದು ಕಾಲದಲ್ಲಿ ಹೂ, ಕಾಯಿಗಳನ್ನು ಬಿಡುತ್ತವೆ. ಅನೇಕ ಮರಗಳು ಬೇರೆ ಬೇರೆ ಬಣ್ಣದ ಹೂಗಳನ್ನು ಬಿಡುತ್ತವೆ. ಸಸ್ಯಗಳು ಕೇವಲ ಸಸ್ಯಗಳಲ್ಲ. ಅವು ಭೂಮಿಯ ಮೇಲಿನ ಸಮಸ್ತ ಜೀವಿಗಳ ಜೀವಾಳ. ಸಸ್ಯಗಳಿಲ್ಲದೇ ಭೂಮಿಯ ಮೇಲೆ ಯಾವ ಜೀವಿಯೂ ಬದುಕಲು ಸಾಧ್ಯವಿಲ್ಲ. ಕಾರಣ ಗೊತ್ತೆ? ಈ ಹಸಿರು ಸಸ್ಯಗಳು ಸೂರ್ಯನ ಬೆಳಕನ್ನು ಹೀರಿಕೊಂಡು ನೀರು ಮತ್ತು ಇಂಗಾಲದ ಡೈ ಆಕ್ಸೈಡ್ ಅನಿಲದ ಜೊತೆಗೆ ಸೇರಿ ಆಹಾರವನ್ನು ತಯಾರಿಸಿ ಸಮಸ್ತ ಜೀವರಾಶಿಗಳಿಗೆ ಕೊಡುತ್ತವಲ್ಲದೇ, ಈ ಕ್ರಿಯೆಯಲ್ಲಿ ಎಲ್ಲ ಜೀವರಾಶಿಗಳಿಗೆ ಅತ್ಯವಶ್ಯವಾಗಿ ಜೀವಿಸಲು ಬೇಕಾದ ಪ್ರಾಣವಾಯುವನ್ನು ಕೊಡುತ್ತವೆ. ಭೂಮಿಯ ಮೇಲೆ ಸುಮಾರು 3,94,000 ಬಗೆಯ ಸಸ್ಯಗಳಿದ್ದು ಅವುಗಳಲ್ಲಿ 300ಕ್ಕೂ ಮಿಕ್ಕಿ ಬೇರೆ ಬೇರೆ ತರಹದ ಮರಗಳಿವೆ. ಈ ಎಲ್ಲ ಮರಗಳನ್ನು ನೆನಪಿಡುವುದು ಕಷ್ಟಸಾಧ್ಯವಾಗಬಹುದು. ನಮಗೆ ಅವುಗಳ ಮೇಲೆ ಪ್ರೀತಿ ಇದ್ದರೆ ಹಾಗೂ ನಮಗೆ ಅವುಗಳ ಬಗ್ಗೆ ತಿಳಿಯುವ ಮನಸ್ಸಿದ್ದರೆ ಅದು ಸುಲಭಸಾಧ್ಯ.ಪುರಾತನ ಕಾಲದಲ್ಲಿ ಸಸ್ಯಗಳನ್ನು ಅವುಗಳ ಎತ್ತರಕ್ಕನುಗುಣವಾಗಿ ಮರ, ಕಂಟಿ, ಮತ್ತು ಮೂಲಿಕೆಗಳನ್ನಾಗಿ ವಿಂಗಡಿಸಿದ್ದರು. ಅನಂತರ ಹೂ ಬಿಡುವ ಹಾಗೂ ಹೂ ಬಿಡದ ಸಸ್ಯಗಳೆಂದು ವರ್ಗೀಕರಿಸಿದರು. ಅನಂತರ ಸ್ವೀಡಿಷ್ ಪ್ರಕೃತಿ ವಿಜ್ಞಾನಿ ಕ್ಯಾರೋಲಿಸ್ ಲಿನೆಯಸ್ (1707 – 1778) ಪ್ರಪ್ರಥಮವಾಗಿ ಜೀವಿಗಳಿಗೆ ರೂಢಿಯಲ್ಲಿರುವ ಸಾಮಾನ್ಯ ಹೆಸರಿನ ಬದಲು ದ್ವಿಪದ ನಾಮಕರಣ (Binomial nomenclature) ಪದ್ಧತಿಯನ್ನು ಬೆಳಕಿಗೆ ತಂದನು. ಈ ಹೆಸರಿನಲ್ಲಿ ಅಸ್ತಿತ್ವ ಸೂಚಕವು ಆ ಜೀವಿಯ ಜಾತಿ ಸೂಚಕ ಹೆಸರೆಂದೂ (Generic name) ಗುಣವಾಚಕವು ಪ್ರಭೇದಸೂಚಕ (Specific name) ಎಂದೂ ತಿಳಿಯಪಡಿಸಿದನು.ಉದಾಹರಣೆಗೆ : ಆಲ, ಅರಳೆ, ಅತ್ತಿ ಮತ್ತು ರಬ್ಬರ್ ಮರಗಳನ್ನು ಫೈಕಸ್ (Ficus) ಎಂಬ ಜಾತಿ ಸೂಚಕ ನಾಮದಿಂದ ಕರೆದು, ಆಲವನ್ನು `ಫೈಕಸ್ ಬೆಂಗಾಲೆನ್ಸಿಸ್‘ (Ficus bengalensis) ಎಂದೂ ಅರಳೆಯನ್ನು `ಫೈಕಸ್ ರಿಲಿಜಿಯೋಸಾ‘ (Ficus religiosa) ಎಂದೂ, ಅತ್ತಿಯನ್ನು `ಫೈಕಸ್ ಎರಿಕಾ‘ (Ficus erica) ಎಂದೂ ರಬ್ಬರನ್ನು `ಫೈಕಸ್ ಇಲಾಸ್ಟಿಕ‘ (Ficus elastica) ಎಂದೂ ಪ್ರಭೇದ ಸೂಚಕ ನಾಮದಿಂದ ಕರೆಯುತ್ತಾರೆ. ಇಲ್ಲಿ ಫೈಕಸ್ ಜಾತಿ ಸೂಚಕ. ಬೆಂಗಾಲೆನ್ಸಿಸ್, ರಿಲಿಜಿಯೋಸಾ, ಎರಿಕಾ, ಇಲಾಸ್ಟಿಕಾಗಳು ಪ್ರಭೇದಸೂಚಕ ಹೆಸರುಗಳೂ ಆಗಿವೆ.ಸಸ್ಯದ ವೈಜ್ಞಾನಿಕ ಹೆಸರಿನ ಕೊನೆಯಲ್ಲಿ ಬರೆದ ಹೆಸರನ್ನು ಆ ಸಸ್ಯದ ನಿಯೋಜಿತ ಅಧಿಕಾರವನ್ನು ಪಡೆದ ಅಧಿಕಾರಿ ಎಂದು ಗಣನೆಗೆ ತೆಗೆದುಕೊಳ್ಳುತ್ತಾರೆ. ಉದಾಹರಣೆಗೆ `L’ ಅಥವಾ `Linn’ ಎಂಬುದು ಲಿನೆಯಸ್ ಎಂಬುವನ ಹೆಸರನ್ನು, `Willd’ ಎಂಬುದು ವಿಲ್‌ಡೋನೊವ್ ಎಂಬವನ ಹೆಸರನ್ನು, `Roxb’ ಎಂಬುದು ರಾಕ್ಸ್‌ಬರ್ಗ್‌ನ ಹೆಸರನ್ನು ಸೂಚಿಸುತ್ತವೆ

.

22. Linn(aeus)
23. Laud(on)
24. Mill(er)
25. Mull(er)
26. Oilv(er)
27. Pers(oon)
28. R(obert), Br(own)
29. Red(oute)
30. Rich(ard)
31. Roth(ert)
32. Roxb(urgh)
33. Salisb(ury)

34. Scheff(er)
35. Sm(ith)
36. Thoms(on)
37. Thunb(erg)
38. Torr(ey)
39. Wall(ich)
40. Sod(rio)
41. Willd(enow)
42. Wult(eniun)

ಲೇಖಕರು : ಸಿ. ಡಿ. ಪಾಟೀಲ