ಆಟ ಮುಗಿಯುವ ಮುನ್ನ
ಕರೆಯ ಬೇಡೆನ್ನ!
ಆಟ ಮುಗಿಯಲು ನಾನೆ
ಬರುವೆನಮ್ಮಾ !

ಇದ್ದರೂ ಸವಿಯೂಟ
ಬೇಡವೆನಗೀಗ;
ಪೂರೈಸಲೀ ಆಟ
ಬರುವೆನಾಗ!

ಆಟ ತೊಲಗುವುದಲ್ಲಾ
ಎಂದಳುವುದಿಲ್ಲ;
ಆಟ ಮುಗಿಯಲು ನಾನೆ
ಬರುವೆನಮ್ಮಾ !

ಬರಲೆನಗೆ ಭಯವಿಲ್ಲ;
ಸಂದೇಹವಿಲ್ಲ;
ತಾಯೆ ನಿನ್ನಾನಂದ.
ನಿನ್ನ ಕಂದ!

೨೬-೧೦-೧೯೨೬