ಅವ್ವಾ, ಅಪ್ಪನ ನೀನೇಕೆ
‘ಅಪ್ಪಾ’ ಎನ್ನುವುದಿಲ್ಲವ್ವಾ?
ಅಪ್ಪನ ‘ಅಪ್ಪಾ’ ಎನ್ನದಿರೆ
‘ಕೆಟ್ಟವನಾಗುವೆ ನೀ’ನೆಂದೆ!
ಕೆಟ್ಟವಳಲ್ಲವೆ ನೀನವ್ವಾ;
ಅಪ್ಪನ ‘ಅಪ್ಪಾ’ ಎನ್ನವ್ವಾ !

ಸುಮ್ಮನೆ ಕುಳಿತಹೆ ಏಕವ್ವಾ?
ಉತ್ತರವೀಗಲೆ ಬೇಕವ್ವಾ !
ಮುತ್ತಿಡೆ ಬಿಡುವೆನೆ ಹೇಳವ್ವಾ?
ನಕ್ಕರೆ ಬಿಡುವೆನೆ ಹೇಳವ್ವಾ?
ಬುದ್ಧಿಯ ಹೇಳುವೆ ನನಗವ್ವಾ,
ಬುದ್ಧಿಯು ನಿನಗೇ ಇಲ್ಲವ್ವಾ !

ಸೋತೇ ಸೋತೇ ಸೋತೇ ನೀನ್‌ !
ಗೆದ್ದೇ ಗೆದ್ದೇ ಗೆದ್ದೇ ನಾನ್ !
ಸೋತೇ ನೀನ್‌! ಗೆದ್ದೇ ನಾನ್ !

೨೫-೦೭-೧೯೨೬