ಏನು ಬಯವಣ್ಣ | ಮತ್ಯರ್ಥದೊಳಗೆ | ನಮಗೇನು ಬಯವಣ್ಣ || ತಾನೆ ಶ್ರೀ ಗುರು ಕೊಟ್ಟ ಜ್ಞಾನವೆಂಬುವ ಕಣ್ಣಾ || ಭವ ಮೂಲೆ ತೊಲಗಿತ ಭಯವೆಲ್ಲಾ ಪೋದಿತು || ಜವನ ಸೆರೆಯು ತಪ್ಪಿ || ಅವನಿಯೋಳ್ ನಿಂದ ಮೇಲೆ || ಏನು || ಮೆರೆದಿದ ತನ್ನ ತಾನರಿಯೇ ಮುಕ್ತಿಯಿಂದ ಆರುವಿನ ಕುರುಹನು ಶ್ರೀ ಗುರುರಾಯ ನಿತ್ತ ಮೇಲೆ || ಏನು ಬಯವಣ್ಣ ಮತ್ಯರ್ಥದೊಳಗೆ | ನಮಗೇನು ಬಯವಣ್ಣ || ಕರಣ ಸಿದ್ಧಗಳಿಂದ | ವರಸಿದ್ಧಿ ಪೆಡೆಯುತೇ || ಈ ನರ ಜನ್ಮದ ತಾಪ || ಪರಿಹಾರವಾದ ಮೇಲ್ || ಏನು || ಸುರತರು ಮೊದಲಾದ ಪರವಸ್ತುಗಳಿಗೆಲ್ಲಾ ಪೊರೆದಾತ ಶ್ರೀ ಗುರು | ಬೆರೆತ ಮೇಲ್ || ಏನು || ದರೆಯೋಳ್ ಅಧಿಕರಂಭಾ ಪುರದೋಳ್ ನೆಲೆಸಿಹ || ಪರಮ ಸದ್ಗುರು ರೇಣುಕನ ಚರಣದೋಳ್ ಬೆರೆತ ಮೇಲ್ || ಏನು ಬಯವಣ್ಣ ಮತ್ಯಾರ್ಥದೊಳಗೆ ನಮಗೇನು ಬಯವಣ್ಣ ||
ಮರ್ತ್ಸದೊಳಗೆ ನಮಗೇನು ಭಯವಣ್ಣ
By kanaja|2011-08-21T14:38:42+05:30August 21, 2011|ಕನ್ನಡ, ಜಾನಪದ, ಪದ್ಯ ಸಾಹಿತ್ಯ ಪ್ರಕಾರ - ೧೪, ಸಮಗ್ರ ಕನ್ನಡ ಜನಪದ ಮತ್ತು ಯಕ್ಷಗಾನ ಸಾಹಿತ್ಯಮಾಲೆ - ೨೬|0 Comments
Leave A Comment