ಮರ ಮರದ ನೆರಳಿನ ಕೆಳಗೆ ವಿರಹಿಗಳ ಶೃಂಗಾರ !
ಇಗೊ ಬಂತು ಮಾರ್ಚಿ – ಫೆಬ್ರವರಿ ಮುಗಿದು.
ಈ ಮಾರ್ಚಿ ಬಲು ಕೆಟ್ಟ ತಿಂಗಳು ನಲ್ಲೆ,
ಬಂತೋ ಬಂತು ಪರೀಕ್ಷೆ.
ಉಂಡದ್ದನ್ನೆಲ್ಲ ಕಾಗದದ ಮೇಲೆ ಕಾರಿದ ಮೇಲೆ
ಕಾಲೇಜಿನಂಗಳ ಬಿಕೋ.
ಅಲ್ಲಿಂದಾಚೆ ಬಾಯಿ ಮುಚ್ಚಿರುವ ಬಾಗಿಲಿನಾಚೆ
ಮರಮರದ ಕೆಳಗೆ ಸೀಯುವ ನೆರಳು.
ಮೂರು ತಿಂಗಳ ದೀರ್ಘ ವಿರಹ ವೈಶಾಖ.
ಪರೀಕ್ಷೆ ಬಂದಿದೆ ಹುಡುಗಿ, Good bye
ಮತ್ತೆ ಭೆಟ್ಟಿಯಾಗೋಣ
ಮರದ ನೆರಳಿನ ಕೆಳಗೆ ಮಾತನಾಡೋಣ.