ಸಾಮಾಜಿಕ ಹಾಗೂ ಸಾಂಸ್ಕೃತಿಕ ಕೊಡುಗೆಗಳು

ಡಾ. ಸೂರ್ಯನಾಥ ಕಾಮತರ ಅಭಿಪ್ರಾಯದಂತೆ ಬೇಲೂರು ಬಲಂ ನಾಯಕರ ಸಾಮಾಜಿಕ ಹಾಗೂ ಸಾಂಸ್ಕೃತಿಕ ಇತಿಹಾಸ ರಚನೆಗೆ ಶಾಸನಗಳು, ಡಾಬ್ಸ್ ನೆನಪುಗಳು, ಮೆಕೆಂಜೀ ಸಂಗ್ರಹಗಳು

[1] ಕೊಡಗಿನ ನೆನಪುಗಳು ಸಹಕಾರ ನೀಡುತ್ತವೆ. ರಾಜಕೀಯ ಬಿಕ್ಕಟ್ಟಿನ ಪರಿಸ್ಥಿತಿಯಲ್ಲಿ ಇರುವ ಅಲ್ಪ ಕಾಲಾವಧಿಯಲ್ಲಿಯೇ ಸಾಧಿಸಿದ ಈ ನಾಯಕರ ಸಾಮಾಜಿಕ ಹಾಗೂ ಸಾಂಸ್ಕೃತಿಕ ಕೊಡುಗೆಗಳು ಗಮನಾರ್ಹವಾದುದು. ಈ ಪಾಳೆಯ ಪಟ್ಟಿನ ಶಾಸನಗಳ ಮೇರೆಗೆ ೧೫೬೬ರಲ್ಲಿ ವೆಂಕಟಾದ್ರಿನಾಯಕನು ನಾಗನಾಯಕನ ಮಂಟಪದ ಮುಂದಿನ ಗರುಡಗುಡಿಯನ್ನೂ ಹಾಗೂ ೧೫೮೦ ರಲ್ಲಿ ವಸಂತೋತ್ಸವಕ್ಕಾಗಿ ಉಯ್ಯಾಲೆ ಮಂಟಪವನ್ನು ನಿರ್ಮಿಸಿದನು. ಹೊಳಲ್ಕೆರೆ ೧೧೨ ನೆಯ ಶಾಸನದ ಮೇರೆಗೆ ಎರ‍್ರ ಕೃಣಪ್ಪನಾಯಕನ ಪ್ರತಿನಿಧಿಯು ೧೫೦೪ ರಲ್ಲಿ ಬೇಗೂರಿನ ಹೊರಪೇಟೆ ನಿರ್ಮಿಸಿ ಅದಕ್ಕೆ ‘ಕೃಷ್ಣಾಪುರ’ ಎಂದು ನಾಮಕರಣ ಮಾಡಿದನು. ಜಗಳೂರು ಶಾಸನ ನಂ.೨ರ ಪ್ರಕಾರ ಎರ‍್ರ ಕೃಷ್ಣಪ್ಪನಾಯಕನು ತನ್ನ ಆಳ್ವಿಕೆಗೆ ಒಳಪಟ್ಟಿದ್ದ ಜಗಳೂರು ಸೀಮೆಯ ಬಿಳಿಚೋಡು ಗ್ರಾಮದ ಕುರುಬರು ನೀಡಬೇಕಾಗಿದ್ದ “ಕುರಿದೆರೆ” (ಕುರಿಗಳ ಮೇಲೆ ವಿಧಿಸಿದ ತೆರಿಗೆ)ಯನ್ನು ೧೫೫೪ ರಲ್ಲಿ ತೆಗೆದು ಹಾಕಿದನು. ಲಕ್ಷ್ಮಪ್ಪನಾಯಕನು ತಾಯಿ ಪದ್ಮಾಜಮ್ಮಗೆ ಪುಣ್ಯವಾಗಲೆಂದು ದಿ ೮-೫-೧೬೦೫ ರಲ್ಲಿ ಲಕ್ಷ್ಮೀಪುರದ ಅಮ್ಮನವರಿಗೆ ಲಕ್ಷ್ಮೀಪುರ ಗ್ರಾಮವನ್ನು ನಿರ್ಮಿಸಿದ ಬಗ್ಗೆ ಹೊಳೆ ನರಸೀಪುರದ ೧೪೫ ನೆಯ ಶಾಸನವು ಹೇಳಿದೆ.

ಧಾರ್ಮಿಕ ಕೊಡುಗೆಗಳು

೧೫೫೮ ರಲ್ಲಿ ಇಮ್ಮಡಿ ಕೃಷ್ಣಪ್ಪನು ಕಾಮಸಮುದ್ರದ ವೀರಭದ್ರದೇವರ ಪೂಜೆಗೆ ಭೂಮಿಯನ್ನು (ಚಳ್ಳಕೆರೆ ಶಾ.ನಂ.೪೭), ೧೫೫೯ ರಲ್ಲಿ ಇಮ್ಮಡಿ ವೆಂಕಟಾದ್ರಿಯು ಗುಂಡೇರಿ ಚೆನ್ನಕೇಶವ ದೇವರಿಗೆ ನರಸಾಪುರ (ವೆಂಕಟಪುರ)ವನ್ನೂ (ಹೊಲ್ಲಕೆರೆ ಶಾ.ನಂ. ೨೧), ೧೫೬೧ ರಲ್ಲಿ ವೆಂಕಟಾದ್ರಿಯ ಮಗ ಮುಮ್ಮಡಿ ಕೃಷ್ಣಪ್ಪನಾಯಕನು ದಾವಣಗೆರೆ ತಾಲೂಕಿನ ಕಾಡಜ್ಜಿ ಗ್ರಾಮವನ್ನು ಹರಿಹರೇಶ್ವರ ದೇವಾಲಯದ ಛತ್ರಕ್ಕೂ (ದಾವಣಗೆರೆ ಶಾ.ನಂ. ೧೮), ಹರಿಹರ ದೇವಾಲಯದ ಲಕ್ಷ್ಮಿ ಮತ್ತು ಪಾರ್ವತಿ ದೇವಿಯರ ರಥೋತ್ಸವಕ್ಕೆ ಗಂಗನರಸಿ ಗ್ರಾಮವನ್ನು, ೧೫೬೨ ರಲ್ಲಿ ನೀರ್ಥಡಿ ಅಹೋಬಳನರಸಿಂಹ (ರಂಗನಾಥ ದೇವಾಲಯ) ದೇವರಿಗೆ ಭೂಮಿಯನ್ನು ದತ್ತಿ ನೀಡಿದರು. ೧೫೮೮ ರಲ್ಲಿ ರಂಗನಾಥ ಹಾಗೂ ಏಣಿ ನರಸಿಂಹ ವಿಗ್ರಹಗಳಿಗೆ ಒರಟಾದ ಗುಡಿ ಇದ್ದುದನ್ನು ತೆಗೆಸಿ ಹಾಕಲಾಯಿತು. ೧೬೨೬ ರಲ್ಲಿ ವೆಂಕಟಾದ್ರಿಯ ಕಾಲದಲ್ಲಿ ೨೬ ಅಂಕಣದ ಕೈಸಾಲೆ ಮಂಟಪವನ್ನು ಉತ್ತರ ಪ್ರಾಕಾರದ ಹತ್ತಿರ ನಿರ್ಮಿಸಲಾಯಿತು. ಬೇಲೂರಿನ ಹೊನ್ನಾಜಿಯಮ್ಮನು ವಿಜಯನಗರ ಚಕ್ರವರ್ತಿ ಶ್ರೀರಂಗರಾಯನ ಆಳ್ವಿಕೆಯಲ್ಲಿ ೧೬೭೨ ರಲ್ಲಿ ಕಲ್ಲಿನ ಮಂಚವನ್ನು ದಾನ ಮಾಡಿದಳು. ಚನ್ನರಾಯಪಟ್ಟಣದ ಗದ್ದೆ ರಾಮೇಶ್ವರಗುಡಿ, ಗೊರೂರಿನಲ್ಲಿ ತ್ರಿಕೂಟಾಚಲ ವಾಸುದೇವ ದೇವಸ್ಥಾನದ ನದಿಯ ಸನಿಹದಲ್ಲಿರುವ ನರಸಿಂಹ ದೇವಾಲಯಗಳು ೧೫೮೩ ರಲ್ಲಿ ಈ ಪಾಳೆಯಗಾರರಿಂದ ನಿರ್ಮಿಸಲ್ಪಟ್ಟಿರುವುದು ವ್ಯಕ್ತಪಡುತ್ತದೆ. ೧೬೭೫ ರಲ್ಲಿ ವೆಂಕಟಾದ್ರಿನಾಯಕನು ಬೇಲೂರು ಸೀಮೆಯ ಲಕುಂದ ನಾಡಿನ ಗುಮ್ಮನ ಹಳ್ಳಿಯನ್ನು ಪುಟ್ಟಯ್ಯನಿಗೆ ನೀಡಿದ ಬಗ್ಗೆ ದಾನ ಶಾಸನವೊಂದಿದೆ. ಕೊಡಗಿನ ೧೮ನೆಯ ಶಾಸನದಲ್ಲಿ ೧೬೯೩ ರಲ್ಲಿ ನಾಲ್ಕನೆಯ ಕೃಷ್ಣಪ್ಪನಾಯಕನು ಯೋಗಪೈಯನಿಗೆ ಹಿರುಮನಹಳ್ಳಿ, ಕಟ್ಟೆಪುರ ಗ್ರಮಗಳನ್ನು ನೀಡಿದುದನ್ನು ಹೇಳಿದೆ. ೯೪ನೆಯ ಶಾಸನವು ೫ನೆ ಕೃಷ್ಣಪ್ಪನಾಯಕನು ಕೈವಲ್ಯಯೋಗಿಗೆ ಮೂದ್ರವಳ್ಳಿ ಗ್ರಾಮ ಹಾಗೂ ಆನೆಯನ್ನು ನೀಡಿದ ಉಲ್ಲೇಖವಿದೆ. ೧೭೩೬ ರಲ್ಲಿ ವೆಂಕಟಾದ್ರಿನಾಯಕನು ಬೇಲೂರಿನ ಚೆನ್ನಕೇಶವ ದೇವಾಲಯಕ್ಕೆ ಗೋಪುರ ನಿರ್ಮಿಸಿ ಶಿಖರ (ಕಳಸ) ಸ್ಥಾಪಿಸಿರುವುದನ್ನು ಬೇಲೂರಿನ ೬೪ನೆ ಶಾಸನ ಉಲ್ಲೇಖಿಸುತ್ತದೆ. ೧೭೦೫-೧೭೩೪ರಲ್ಲಿ ಶೃಂಗೇರಿಯ ಶ್ರೀ ಸಚ್ಚಿದಾನಂದ ಭಾರತಿಗಳು ಬೇಲೂರು ಮಂತ್ರಿಗಳ ವಿಶೇಷ ಆಹ್ವಾನದಂತೆ ಸುಬ್ರಹ್ಮಣ್ಯಕ್ಕೆ ಹೋಗುವ ಮಾರ್ಗದಲ್ಲಿ ಭೇಟಿಯಿತ್ತುದು ಕಂಡುಬರುತ್ತದೆ. ನಂ. ೭೯ರ ಶಾಸನದಲ್ಲಿ ಸುಬ್ರಮಣ್ಯ ಮಠಕ್ಕೆ ದಾನ ಶಾಸನ ನೀಡಿದ ವಿವರವಿದೆ. ಹೊಳೆನರಸಿಪುರ ೨೦ರ ಶಾಸನದಲ್ಲಿ ಹೊಳೆನರಸೀಪುರದ ಗರುಡಸ್ವಾಮಿ ದೇವಾಲಯ ಪ್ರತಿಷ್ಠೆ, ಹಾಸನ ೨೧೪ನೇ ಶಾಸನದಲ್ಲಿ ವಿರೂಪಾಕ್ಷ ದೇವರಿಗೆ ಬಿಟ್ಟ ಉಂಬಳಿ ಹಾಗೂ ಶಾಸನ ೨೦೯ನೆಯ ಶಾಸನದಲ್ಲಿ ದಿ. ೧೨-೬-೧೭೭೪ ರಲ್ಲಿ ಕೃಷ್ಣಪ್ಪನಾಯಕನು ಅಗಚೀಗದ್ದೆಮಾನಿಯಲ್ಲಿ ವಿರಕ್ತ ಮಠ ನಿರ್ಮಿಸಿದ ವಿವರಗಳಿವೆ.

ಕ್ರಿ.ಶ. ೧೬೨೬ ರಿಂದ ೧೬೪೩ ರವರೆಗೆ ಆಳಿದ ವೆಂಕಟಾದ್ರಿನಾಯಕನ ಕಾಲದಲ್ಲಿ ಕರಣಿಕ ತಿಮ್ಮ ಮಂತ್ರಿಯ ಮಗ ಸೂರ್ಯನು ಕವಿ ಕಂಠಹಾರ ಕನ್ನಡ ನಿಘಂಟನ್ನು ರಚಿಸಿದ್ದಾನೆ. ಈತನಿಗೆ “ಉಭಯ ಭಾಷಾ ಕವಿತಾನೂತನ ಪದರಚನಾ ವಿಖ್ಯಾ” ಎಂಬ ಬಿರುದು ಇತ್ತು.[2]

ಉಪಸಂಹಾರ

ಮಧ್ಯಕಾಲೀನ ಭಾರತದ ದೇಶೀಯ ಸಂಸ್ಥಾನದ ಪಾಳೆಯಪಟ್ಟಿನ ಇತಿಹಾಸದಲ್ಲಿ ಬೇಲೂರೂ ಒಂದಾಗಿದೆ. ಈ ಇತಿಹಾಸದ ಅಧಯ್ಯನ ನಡೆಸಲು ಅರಕಲಗೂಡು, ಕೊಡಗು, ಕೆಳದಿ ಹಾಗೂ ಮೈಸೂರಿನ ಸಮಗ್ರ ಇತಿಹಾಸಗಳನ್ನು ಅರಿಯುವುದು ಅತ್ಯಗತ್ಯ. ಈ ಇತಿಹಾಸದ ಮೂಲಪುರುಷರ ಕುರಿತು ಹಡಪದ, ಎರ‍್ರ, ಬಾಲಂ ಐಗೂರು ಮುಂತಾದ ನಾಮಾಂಕಿತವೂ ಜಿಜ್ಞಾಸೆಗೊಳಪಡುತ್ತವೆ. ಮೆಕೆಂಜಿ ಸಂಪುಟ ೩೩೨ನೆಯ ವಸುಧಾರೆ ಗ್ರಾಮದ ಕೈಫಿಯತ್ತು ಬೇಲೂರು ನಾಯಕರು ಮೂಲ ತೆಲುಗ ಬಣಜಿಗರು ಎಂದು ಹೇಳಿದೆ.[3] ಕೆಳದಿ ನೃಪವಿಜಯದಲ್ಲಿ ಕವಿ ಲಿಂಗಣ್ಣನು ಉಲ್ಲೇಖಿಸಿದಂತೆ ಕೆಳದಿ ಅರಸರು ತಮ್ಮ ಶತ್ರುಗಳನ್ನು ಅವರು ಯಾರೇ ಆಗಿದ್ದರೂ ಮೊರೆ ಹೊಕ್ಕಾಗ ರಕ್ಷಿಸುವಂತೆ ಬೇಲೂರನ್ನು ರಕ್ಷಿಸಿ ಅಧಿಕಾರವನ್ನಿತ್ತು ಕಾಪಾಡಿದುದು ಗಮನಾರ್ಹವಾದುದು.[4] ಹಲವು ಸಂಗತಿಗಳು ಬೇಲೂರಿನ ಮೂಲಪುರುಷ ರಾಮದಾಸನೆಂದು ಹೇಳುತ್ತವೆ. ೧೯೩೧ರ ಮೈಸೂರ್ ಪುರಾತತ್ವ ವರದಿಯಲ್ಲಿಯೂ ಇದರ ಪ್ರಸ್ತಾಪವಿದ್ದು ಇವರ ವಂಶೀಕರಾದ ರಾಮದಾಸರವರಲ್ಲಿ ಅಪಾರವಾದ ಪುರಾತನ ಸಾಹಿತ್ಯ ಸಾಮಗ್ರಿಗಳಿದ್ದುದನ್ನು ಹೇಳಲಾಗಿದೆ.

ಕೆಳದಿ ಇತಿಹಾಸ ಸಂಶೋಧನಾಲಯದಲ್ಲಿಯೂ ‘ವೇಲ್‌ಪುರಿ ಕೇಶವನೀತಿ ಗೀತಾ’ ಎಂಬ ಓಲೆಗರಿ ಹಸ್ತ ಪ್ರತಿಯೊಂದು ನನ್ನ ಓಲೆಗರಿ ಸಮೀಕ್ಷಾ ಸಂಶೋಧನೆಯಲ್ಲಿ ಚಿಕ್ಕನಾಯಕನ ಹಳ್ಳಿಯಲ್ಲಿ ಲಭಿಸಿದ್ದು ಪರಿಶೋಧನೆಯಲ್ಲಿದೆ.[5]

ಸಂಸ್ಥಾನದ ಇತಿಹಾಸದಲ್ಲಿ ಜನಸಾಮಾನ್ಯರನ್ನು ಕುರಿತು ತಿಳಿಯಲು ಪಾಳೆಯಪಟ್ಟಿನ ಇತಿಹಾಸಾಧ್ಯಯನವು ಜರೂರು ಅಗತ್ಯಗಳಲ್ಲಿ ಒಂದಾಗಿದೆ. ಪಿ.ಹೆಚ್.ಡಿ. ಮಟ್ಟದಲ್ಲಿ ಸಶಾಸ್ತ್ರೀಯವಾಗಿ ಬೇಲೂರು ನಾಯಕರ ಶಾಸನಗಳ ಸಾಂಸ್ಕೃತಿಕ ಅಧ್ಯಯನ ಕೈಗೊಳ್ಳಲು ಅವಕಾಶಗಳಿವೆ. ಈ ದಿಸೆಯಲ್ಲಿ ಕ್ಷೇತ್ರ ಕಾರ್ಯವೂ ಅಗತ್ಯ. ಈ ಇತಿಹಾಸಕ್ಕೆ ಆಕರಗಳಿರುವ ಕೆಳದಿ ನೃಪವಿಜಯ, ಶಿವತತ್ವರತ್ನಾಕರ, ಮೆಕೆಂಜಿ ಸಂಗ್ರಹಗಳನ್ನು ಈ ವರೆಗೆ ವಿದ್ವಾಂಸರು ಬಳಸಿಕೊಳ್ಳದಿರುವುದು ಕಂಡುಬರುತ್ತದೆ. ಇದಕ್ಕೆ ಪೂರಕವೆಂಬಂತೆ ಬೇಲೂರು ಪಾಳೆಯಪಟ್ಟಿಗೆ ಸೇರಿದ ಅವಶೇಷಗಳೂ ಕಣ್ಮರೆಯಾಗುತ್ತಿದ್ದು ಪುಟ್ಟಣದ ಮ್ಯೂಜಿಯಂಗಳಲ್ಲಿ ಸೇರಿವೆ. ಸಾಕಷ್ಟು ಪೂರ್ವದಲ್ಲಿನ ತಜ್ಞರಾದ ಎಂ.ಎಸ್. ಪುಟ್ಟಣ್ಣನವರ ಸಂಶೋಧನೆಯಲ್ಲಿ ಬೇಲೂರು ಕೈಬಿಟ್ಟಿರುವುದು ಆಶ್ಚರ್ಯವೇ ಸರಿ!

ಅನುಬಂಧ – ೧

ಮೆಕೆಂಜೀ ಸಂಗ್ರಹದಲ್ಲಿ ಬೇಲೂರು ನಾಯಕ ಪರಂಪರೆ

ನಂ. ಮೆಕೆಂಜಿ ಸಂಪುಟ ಸಂಖ್ಯೆ ಕೈಫಿಯತ್ತುಗಳು
೧. ೧೬೨ ಅಂಕನಾಥಪುರದ ಅರ್ಕೇಶ್ವರಸ್ವಾಮಿ ಕೈಫಿಯತ್ತು
೨. ೧೬೧ ಚಿಕ್ಕಮಗಳೂರು ಕೈಫಿಯತ್ತು
೩. ೩೩೨ ವಸುಧಾರೆ ಗ್ರಾಮದ ಕೈಫಿಯತ್ತು
೪. ಕೆ.ಎ.೪೦೦/೫ ಹಳೇಬೀಡ ಕೈಫಿಯತ್ತು
೫. ೩೫೧ ಜಮಲಾಬಾದು ಕೈಫಿಯತ್ತು
೬. ೩೫೩ ಮರದಾಳ ಕೈಫಿಯತ್ತು

ಆಕರ : ಕರ್ನಾಟಕದ ಕೈಫಿಯತ್ತುಗಳು ಸಂ : ಪ್ರೊ. ಎಂ.ಎಂ. ಕಲ್ಬುರ್ಗಿ

ಅನುಬಂಧ – ೨

ಲೆಟರ್ಸ್‌ಆಂಡ್‌ಡಿಸ್ಪ್ಯಾಚೆಸ್ ಆಫ್‌ಡ್ಯೂಕ್‌ಆಫ್ ವೆಲ್ಲಿಂಗ್ ಟನ್‌ ನಲ್ಲಿ ಬೇಲೂರು ನಾಯಕರ ಕುರಿತು ಪತ್ರ ಆರ್ಥರ್ ವೆಲ್ಲೆಸ್ಲಿಯಿಂದ

Tellicherry
April 10th, 1800

My dear Colonel,

I received last night the accounts of colonel Tolfrey’s defeat, and sent off expresses ot make the following arrangement to remedy it. The flank companies of the 77th are on their march towards chiltledroog, and as they are nearest to the Bal country, and have all their equipments prepared, I have ordered them to Quscota. I have ordered from Seringapatam, Arrack, Provisions, and ammunition Grain, and, and I have desired that the 4 companies of the 4th Regiment under Major Capper many be sent with these articles as an escort. I have no doubt but that the Europeans will settle all matters without difficulty, and from the accounts received I am at a loss to guess from what cause they failed in forcing a Barrier to which they could march in three columns, one of them in companies and upon which they could bring their guns to bear. Colonel Tolfrey has quited Munserabad, and if he has not thrown into it a proper supply of provisions for the garrison, that fort will be lost; as it may be depended upon that Kistnapah Naig1 will occupy all the barriers between Munserabad and Ouscota, which it will not be am easy matter to force after what has happened, and I dont expect that the Europeans will reach Onscota till the 20th at soonest.

The Post at Arrakeery, at which Col. Tolfrey failed, does not lie towards The Bissolee Ghant but is situated on the right of the road from Onscota to munserabad, and is apparently between the road, and the Hyawuthy. The Co-operation from Kanara Therefore, if it were possible, would ot answer for some time, at least not till the post at Arakeery shall be forced, and the detachment from this side shall be prepared toforce the post which Kistnapah Naig2 has on the Bissolee Ghaut. But the fact is that there is not a soldier either in Canara or Malabar who can be moved. There are 300 Sepoys and 120 Europeans at Mangalore; of the latter there will be 400 more in about tendays, when they will have reached that place from Rence. I will order them forward to the Sobramany Pagoda;3 and when the Bissolee Ghat comes to be attacked on our side, they can operate from theirs. There is nothing at cannanore nothing here, not nearer to Mangalore than calicut. They can march thither sooner than they can go by sea at this time of the year, and if they could move immediately the rains would set in before they would arrive at the scene of operations. We must make the best of it and depend upon the bayonets of the Europeans; but I acknowledge myself to be much disappointed and vexed at this failure of 1000 Sepoys and 1,600 of the Rajah’s Troops, against not a larger number of Ryots, in a country by no means difficult, and from which the same people were driven llike sheep, and their Fort taken from Them, in September last by a simmilar body of troops.

I went this morning to Cotaparmba which is a neat little mud redoubt about miles from Rhence, It contains buildings which will hold a large quantity of provisions and ammunitions with which please God they shall be filled in a few days. The road making goes on well and has not been interrupted. On the day after tomorrow I shalloccupy Pyche fort, On the Montana Road and Monanderry Pagoda4 On that leading to Canonte, and I hope in a few days afterwards to be able to take possession of the posts which will be constructed at Montans and Canonte.

I propose to return to Caunannore on the day after tomorrow, Mr. Spencer comes here in the mornign which detains me till and I shall be at Seringapatam I hopeon the 22nd,

Believe me, yours most Sincerely, Arthur Wellesley,

Lt Col Close,

Col, Montresor will join the Detachment with the Flank Companies of the 77th and will command it; and after what has happened I don’t Think That will do us any harm.

ಅನುಬಂಧ -೩

08_270_MAM-KUH 

೧. ಈತನಿಗೆ ಕ್ರಿ. ೧೭೧೫-೧೭೪೦ ರಲ್ಲಿ ಕೆಳದಿ ಇಮ್ಮಡಿ ಸೋಮಶೇಖರನು ಬೇಲೂರು ಪಾಳೆಯಪಟ್ಟಿಗೆ ನಾಯಕನ್ನಾಗಿ ನಿಯಮಿಸಿದನು.

೨. ಈತನು ಕುಟುಂಬ ಸಹಿತನಾಗಿ ಕೊಡಗರ ವೀರರಾಜರ ಮೇಲು ಪರಾಂಬರಿಕೆಯ ಮೇಲೆ ಮೈಸೂರದ ಸೀಮೆಯಲ್ಲಿದ್ದ ಮೊಳಲಿ ಮಟ್ಟಿಸಾಗರ ಎಂಬ ಸ್ಥಳದಲ್ಲಿದ್ದನು.

೩. ಈತನಿಗೆ ಉನ್ಮಾದಾವಸ್ಥೆಯಿದ್ದುದರಿಂದ ಕೆಳದಿ ಸೋಮಶೇಖರನಾಯಕನು ನಾಯಕನ ಆರೈಕೆಯ ಬಗ್ಗೆ ಬಿದನೂರಿನ ಅರಮನೆಯಲ್ಲಿರಿಸಿದ್ದನು.

೪. ಈತನು ಕುಹಕಿಗಳ ದುರ್ಬೋಧೆಗೊಳಗಾಗಿ ಮೈಸೂರು ಒಡೆಯರಲ್ಲಿ ಸೇರಿಕೊಂಡು ಕೆಳದಿ ಮೇಲೆ ವಿರೋಧವುಂಟು ಮಾಡಿದನು. ಈ ವಿರೋಧದಲ್ಲಿ ಆನೆಯನ್ನು ತಿರುಗಿ ಕೊಡಲಿಲ್ಲವೆಂಬ ಕಾರಣದಿಂದ ೩ ವೆಂಕಟಾದ್ರಿನಾಯಕನು ಮೈಸೂರವರಿಂದ ಕೊಲ್ಲಲ್ಪಟ್ಟನು.

೫. ಕೃಷ್ಣಪ್ಪನಾಯಕನು ಕೊಡಗರ ಉಪಟಳದಿಂದ ನೊಂದು ಕೆಳದಿಯ ಮೊರೆ ಹೋಗಲಾಗಿ ಈತನನ್ನು ರಕ್ಷಿಸಲು ರಾಯಸದ ಶಂಕರ ನಾರಾಯಣನೊಂದಿಗೆ ಸೈನ್ಯ ಕಳುಹಿಸಿ ಕೊಡಗಿನ ವೀರರಾಜನನ್ನು ನಯಭಯೋಕ್ತಿಗಳಿಂದ ಒಡಂಬಡಿಸಿ ಈತನನ್ನು ಬೇಲೂರು ಸಂಸ್ಥಾನದ ರಾಜತ್ವಕ್ಕೆ ಕೆಳದಿ ಅರಸನು ನಿಲ್ಲಿಸಿದನು.

ಬೇಲೂರು ನಾಯಕರ ವಂಶಾವಳಿ

09_270_MAM-KUH

ಅನುಬಂಧ-೩

ಅರಕಲಗೋಡ ಕೃಷ್ಣಪ್ಪನಾಯಕನ ಕುಮಾರ ವೆಂಕಟಾದ್ರಿನಾಯಕನ ಪತ್ನಿ ಗೊಣವೂರ ಲಿಂಗಮ್ಮ ನೆಂಬಾಕೆಗೆ ಗೃಹೀತ ಪುತ್ರನಾದ ಮೂಲಪುರುಷ, ಬೇಲೂರು ವೆಂಕಟಾದ್ರಿನಾಯಕನ ಪಟ್ಟದ ಪ್ರಥಮ ಸ್ತ್ರೀಯಲ್ಲು ಜನಿಸಿದ ಕೃಷ್ಣಪ್ಪನಾಯಕನ ಕುಮಾರನಾದ ಕುಮಾರ ವೆಂಕಟಪ್ಪರಸರ ಪುತ್ರನಾದ ಕುಮಾರ ಕೃಷ್ಣಪ್ಪನಾಯಕನು ವಾರೆದೆಗೆಸೆ ಮೂಲಪುರುಷ ಬೇಲೂರ ವೆಂಕಟಾದ್ರಿನಾಯಕನ ತೃತೀಯ ಸ್ತ್ರೀಯಲ್ಲು ಜನಿಸಿದ ರಂಗಪ್ಪನಾಯಕನ ಕುಮಾರನಾದ ದೊಡ್ಡಯ್ಯರಸನ ಪುತ್ರನಾದ ಕೃಷ್ಣಪ್ಪನಾಯಕನು ಬೇಲೂರ ಸಂಸ್ಥಾನದ ರಾಜತ್ವಕ್ಕೆ ನಿಲಿಸಿದಂ.

ಇನ್ನು ವೆಂಕಟಾದ್ರಿನಾಯಕನ ಪತ್ನಿಯಾದ ಗೊನವೂರ ಲಿಂಗಮ್ಮಗೆ ಗೃಹೀತ ಪುತ್ರನಾದ ಕುಮಾರ ಕೃಷ್ಣಪ್ಪನೆಂದೊಡಾರೆಂಬುದಂ ವಿವರಣಮಾಗಿ ಪೇಳ್ವೆನದೆಂತೆಂದೊಡೆ: ಮೂಲಪುರುಷ ಬೇಲೂರ ವೆಂಕಟಾದ್ರಿನಾಯಕರಿಗೆ ಮೂವರ್ ಸ್ತ್ರೀಯರ್, ಅವರೊಳ್ ಪಟ್ಟದ ಪ್ರಥಮ ಸ್ತ್ರೀಯಲ್ಲಿ ಜನಿಸಿದ ಪುತ್ರನ ಹೆಸರು ಕೃಷ್ಣಪ್ಪನಾಯಕ; ಆ ಕೃಷ್ಣಪ್ಪನಾಯಕನ ಮಗ ಕುಮಾರ ವೆಂಕಟಪ್ಪರಸರು; ಆ ಕುಮಾರ ವೆಂಕಟಪ್ಪರಸರ ಮಗನ ಹೆಸರು ಕುಮಾರ ಕೃಷ್ಣಪ್ಪನಾಯಕ; ಆ ಕುಮಾರ ಕೃಷ್ಣಪ್ಪನಾಯಕನು ಕುಟುಂಬ ಸಮೇತನಾಗಿ ಕೊಡಗರ ವೀರರಾಜನ ಮೇಲುಪರಾಂಬರಿಕೆಯ ಮೇಲೆ ಮೈಸೂರವರ ಸೀಮೆಯೊಳಗಣ ಮೊಳವಿ ಮಟ್ಟಿಸಾಗರವೆಂಬ ಸ್ಥಳದಲ್ಲಿ ಇರುತ್ತಿರ್ದರು; ಇನ್ನು ಬೇಲೂರು ವೆಂಕಟಾದ್ರಿನಾಯಕನ ದ್ವಿತೀಯ ಸ್ತ್ರೀಯಲ್ಲಿ ಜನಿಸಿದ ಕುಮಾರನ ಹೆಸರು ಅರಕಲಗೋಡ ಕೃಷ್ಣಪ್ಪನಾಯಕ, ಆ ಕೃಷ್ಣಪ್ಪನಾಯಕಗೆ ಮೂವರು ಕುಮಾರರು, ಅವರಾರೆಂದೊಡೆ ಜೇಷ್ಠಪುತ್ರ ವೆಂಕಟಾದ್ರಿನಾಯಕ, ದ್ವಿತೀಯ ಪುತ್ರನ ಹೆಸರು ಗೋಪಾಲನಾಯಕ, ತೃತೀಯ ಪುತ್ರನ ಹೆಸರು ಬೇಲೂರಯ್ಯ; ಹಾಗೆ ಮೂವರು ಪುತ್ರರು; ಆ ಮುವ್ವರು ಕುಮಾರರೊಳಗೆ ಗೋಪಾಲ ನಾಯಕ ಬೇಲೂರಯ್ಯನೆಂಬ ಇಬ್ಬರಿಗೂ ಸಂತಾನವಿಲ್ಲ; ಈ ಇಬ್ಬರೊಳಗಾ ಗೋಪಾಲ ನಾಯಕನೆಂಬಾತನಂ ಹಿರಿಯ ಬಸವಪ್ಪನಾಯಕರ ಜ್ಯೇಷ್ಠಪುತ್ರನಾದ ಸೋಮಶೇಖರ ನಾಯಕರು ಬೇಲೂರ ರಾಜಾಧಿಕಾರಕ್ಕೆ ನಿಲಿಸೆ ಆತನ ಅಣ್ಣ ವೆಂಕಟಾದ್ರಿನಾಯಕನು ಉನ್ಮದಾವಸ್ಥೆಯಿಂದ ವರ್ತಿಸುತ್ತಿರಲಾಗಿ ಆತನಂ ಬಿದರೂರಿಗೆ ಕರೆಸಿಕೊಂಡು ಇಟ್ಟುಕೊಂಡು ಈ ಪ್ರಕಾಮಿರುತ್ತು ಮಿರಲಾಗಿ ಅರಕಲಗೂಡ ಚೌಡಯ್ಯನ ಅಳಿಯ ಮಲ್ಲಣ್ಣನೆಂಬಾತನು ಆ ವೆಂಕಟಾದ್ರಿನಾಯಕನ ಕಿರಿಯ ತಮ್ಮನಾದ ಬೇಲೂರಯ್ಯ ನೆಂಬಾತನಂ ಕೂಡಿಕೊಂಡು ಮೈಸೂರವರ ಬಳಿಗೆ ಹೋಗಿ ಬೇಲೂರಯ್ಯನ ಕಾಣಿಸಿಕೊಟ್ಟು ಆತನಂ ಅವರ ಬಳಿಯಲ್ಲಿ ಇಟ್ಟು ತಾನು ವೇಣುಪುರದಲ್ಲು ಇದ್ದ ವೆಂಕಟಾದ್ರಿನಾಯಕನ ಬಳಿಗೆ ಬಂದು ನಿನಗೆ ರಾಜ್ಯ ಪಟ್ಟಮಂ ಕಟ್ಟಿಸುತ್ತೇನೆ ನೀನು ಸುಮ್ಮನೆ ಈ ಸ್ಥಳದಲ್ಲಿ ಯಾಕೆ ಇರುತ್ತಿದ್ದೀಯೆಂದು ಕುಬೋಧೆಯಂ ಬೋಧಿಸಿ ರಜತ್ವದ ದುರಾಸೆಯಂ ಪುಟ್ಟಿಸಿಪಟ್ಟಣಕ್ಕೆ ತೆರಳಿಸಿಕೊಂಡು ಹೋಗಿ, ಅರಸನಂ ಕಾಣಿಸಿ ಕೆಳದಿ ದೊರೆಗಳು ರಾಜತ್ವಕ್ಕೆ ನಿಲಿಸಿದ ಗೋಪಾಲನಾಯಕನಂವಾರೆದೆಗೆಸಿ ಪಿರಿಯನಾದ ಈ ವೆಂಕಟಾದ್ರಿನಾಯಕನನ್ನೇ ರಾಜಾಧಿಕಾರಕ್ಕೆ ನಿಲಿಸಿಕೊಡಬೇಕೆಂದು ಬಹು ವಿಧದಿಂದ ಮೈಸೂರವರ ನೊಡವಡಿಸಿ, ಆ ಮಲ್ಲಣ್ಣನು ವೆಂಕಟಾದ್ರಿನಾಯಕನೊಡನೆ ಮೈಸೂರವರ ಪೌಜುಸುಬೇದಾರ ಕೊಣನೂರ ಸುಬ್ಬರಾಯನೆಂಬಾತನಂ ಸಹ ತೆರಳಿಸಿಕೊಂಡು ಬಂದು ಐಗೂರ ಸಮೀಪದಲ್ಲು ಕೊಡಲಿಪೇಟೆ ಎಂಬ ಸ್ಥಳದಲ್ಲು ಪಾಳ್ಯವನಿಳಿದು ಮಸಲತಿಯಾದಲ್ಲಿ ಆ ವರ್ತಮಾನವನ್ನು ಗೋಪಾಲ ನಾಯಕಂ ಬಿನ್ನಹವಂ ಮಾಡಿ ಕಳುಪಲಾಗಿ ಆಗ ಗೋಪಾಲನಾಯಕಗೆ ಸಹಾಯವಾಗಿ ರಾಯಪಾಳ್ಯದ ಬೈದೂರ ಚನ್ನವೀರಪ್ಪನ ಸಂಗಡ ಸೈನ್ಯಮಂ ಕೊಡಿಸಿ ತೆರಳ್ಚಿಸಿ ಕಳುಪಲಾಗಿ ಆ ಉಭಯ ಸೈನ್ಯಕ್ಕೂ ಕೈಗಲಸಿ ಮಸಲತ್ತಿಯಲ್ಲು ಸಹಾಯಕ್ಕೆ ಬಂದ ಮಾಯಾವಿಗಳ ಸೈನ್ಯವು ಪಲಾಯನಂ ಬಿಡೆದು ಹೋಗಲಾಗಿ ಆಗಲಾ ವೆಂಕಟಾದ್ರಿನಾಯಕ ಮಲ್ಲಣ್ಣನೆಂಬವ ಸಹಾ ಮೈಸೂರವರ ಸೀಮೆಯೊಳಗಣ ಗೊರವೂರೆಂಬ ಸ್ಥಳದಲ್ಲು ಇರುತ್ತಿದ್ದಲ್ಲಿ, ವೆಂಕಟಾದ್ರಿಯನಾಯಕನ ಹವಾಲೆಯಲ್ಲು ಇರುವೆ ಹೀಗೆ ಮಾಯಾವಿಗಳು ಒಂದು ಆನೆಯ ಹಾಕಿ ಕೊಟ್ಟದ್ದರು, ಹೀಗಿರುತ್ತಿದ್ದು ಕೆಲವು ದಿವಸದ ಮೇಲೆ ತಾವು ಹವಾಲೆಗೆ ಹಾಕಿಕೊಟ್ಟ ತಮ್ಮ ಬಹ ಆನೆಯನ್ನು ತಿರುಗಿ ತರಹೇಳಿ ಗುರು ಮನುಷ್ಯರ ಕಳುಹಲಾಗಿ ವೆಂಕಟದ್ರಿನಾಯಕನು ಆ ಆನೆಯಂ ಕೊಡದೆ ಚಂಡಿಸಲಾಗಿ ಆ ವೆಂಕಟಾದ್ರಿನಾಯಕನಂ ಕೋವಿ ಗುಂಡಿನಲ್ಲು ಇಡಿಸಿ ಕೊಲಿಸಿ ತಮ್ಮ ಬಗೆ ಆನೆಯನ್ನು ತೆಗೆದುಕೊಂಡು ಹೋಗಲಾಗಿ ಆಗ ಮಾಯಾವಿಗಳು ಈ ವತ್ಮಾನಮಂ ಕೇಳ್ದು ಈ ವೆಂಕಟಾದ್ರಿನಾಯಕನು ಹೇಗಾದರೂ ತಮ್ಮ ಹೊಂದಿದವನು ಈತನು ದುರ್ಬೋಧೆ ಕೇಳಿ ದುರ್ಬುದ್ಧಿಯಿಂ ಮೃತವಾದನು, ಈಕೆಗೆ ಸಂತಾನವಿಲ್ಲವೆಂಬುದಂ ತಿಳಿದು ಆ ವೆಂಕಟಾದ್ರಿನಾಯಕನ ಪತ್ನಿ ಗಣಗೂರ ಲಿಂಗಮ್ಮನೆಂಬಾಕೆಗೆ ಒಳಗೆ ಬರೆದ ವಿವರ ಪ್ರಕಾರ ಮೂಲಪುರುಷ ಬೇಲೂರ ವೆಂಕಟಾದ್ರಿನಾಯಕನ ಪಟ್ಟದ ಸ್ತ್ರೀಯಲ್ಲು ಜನಿಸಿದ ಕೃಷ್ಣಪ್ಪ ನಾಯಕನ ಮೊಮ್ಮಗನಾದ ಕುಮಾರ ಕೃಷ್ಣಪ್ಪನಾಯಕನೆಂಬಾತನಂ ಗಣಗೂರು ಲಿಂಗಮ್ಮಗೆ ಸಾಕು ಕೊಡಿಸಿ ಆಕೆಗೆ ಗೃಹೀತ ಪುತ್ರನಂ ಮಾಡಿಸಿ ಮೇಲುಪರಾಂಬರಿಕೆ ಮೇಲೆ ಇಟ್ಟುಕೊಂಡು ಇದ್ದರು. ಇನ್ನು ಮೂಲಪುರುಷ ಬೇಲೂರು ವೆಂಕಟಾದ್ರಿನಾಯಕನ ತೃತೀಯ ಪತ್ನಿಯಲ್ಲು ಜನಿಸಿದ ಪುತ್ರನ ಹೆಸರು ರಂಗಪ್ಪನಾಯಕ; ಈ ರಂಗಪ್ಪನಾಯಕನು ಉಚ್ಚಂಗಿಯೆಂಬ ಸ್ಥಳದಲ್ಲು ಮಸಲತಿಯನ್ನು ಕೋವಿಗುಂಡಿನ ಗಾಯದಿಂದ ಮೃತನಾದನು. ಆ ರಂಗಪ್ಪನಾಯಕನ ಮಕ್ಕಳ ಹೆಸರು, ಹಿರಿಯ ಮಗನ ಹೆಸರು ದೊಡ್ಡಯ್ಯರಸು ಕಿರಿಯ ಮಗನ ಹೆಸರು ವೆಂಕಟಾದ್ರಿನಾಯಕ; ಆ ರಂಗಪ್ಪನಾಯಕಗೆ ಹಾಗೆ ಇಬ್ಬರು ಮಕ್ಕಳು; ಆ ಇಬ್ಬರೊಳಗೆ ವೆಂಕಟಾದ್ರಿನಾಯಕಗೆ ಸಂತಾನವಿಲ್ಲ. ಈ ವೆಂಕಟಾದ್ರಿನಾಯಕನ ಅಣ್ಣನಾದ ದೊಡ್ಡಯ್ಯರಸನ ಮಕ್ಕಳ ಹೆಸರು, ಹಿರಿಯಮಗನ ಹೆಸರು ಕೃಷ್ಣಪ್ಪನಾಯಕ ಚಿಕ್ಕ ಮಗನ ಹೆಸರು ಕುಮಾರಸ್ವಾಮಿ; ದೊಡ್ಡಯ್ಯರಸಗೆ ಹೀಗೆ ಇಬ್ಬರು ಜನಿಸಿ ಬಲವಂತರಾಗಿ ಇರುತ್ತ ಭಲ್ಯದಲ್ಲು ಇದ್ದು ರಾಜ್ಯಂಗೆಯ್ಯುತ್ತಿರ್ಪ ಗೋಪಾಲನಾಯಕಂ ಬಹು ಮೂತ್ರವ್ಯಾಧಿಮೂಲದಿಂ ಮೃತನಾಗಲಾಗಿ ಆ ತರುವಾಯ ರಂಗಪಪ್ನಾಯಕನ ಕನಿಷ್ಠ ಪುತ್ರನಾದ ವೆಂಕಟಾದ್ರಿ ನಾಯಕನುರಾಜ್ಯಾಧಿಕಾರಮಂ ವಹಿಸಿ ಭಲ್ಯದಲ್ಲು ಇರುತ್ತಿದ್ದಲ್ಲಿ ಆ ವೆಂಕಟಾದ್ರಿನಾಯಕನ ಅಣ್ಣ ದೊಡ್ಡಯ್ಯರಸಿನ ಕುಮಾರನಾದ ಕೃಷ್ಣಪ್ಪನಾಯಕನು ಧಾತು ಸಂವತ್ಸರದ ಭಾದ್ರಪದ ಬಹುಳದಲ್ಲು ತನ್ನ ಚಿಕ್ಕಪ್ಪನಾದ ವೆಂಕಟಾದ್ರಿನಾಯಕನ ಕಯ್ಯಾರ ಘಾತವ ಮಾಡಿ ತಾನು ತನ್ನ ತಮ್ಮ ಕೃಷ್ಣಸ್ವಾಮಿ ಸಹಾ ಭಲ್ಯದಲ್ಲು ರಾಜತ್ವಕ್ಕೆ ನಿಲ್ಲಲಾಗಿ ಈ ವರ್ತಮಾನಮಂ ಕೊಡಗಿನ ವೀರರಾಜಂ ಕೇಳ್ದು ಈ ಕೃಷ್ಣಪ್ಪನಾಯಕಂ ಸ್ವಾಮಿದ್ರೋಹಿ ಇವನಂ ವಾರೆದೆಗಿಸೆ ಮೂಲಪುರುಷ ಬೇಲೂರ ವೆಂಕಟಾದ್ರಿನಾಯಕನ ಪಟ್ಟದ ಸ್ತ್ರೀ ಸಂತಾನ ಪರಂಪರೆಯಲ್ಲು ಜನಿಸಿದ ಗಣಗೂರ ಲಿಂಗಮ್ಮಗೆ ಗೃಹೀತ ಪುತ್ರನಾಗಿ ಇರುತ್ತಮಿದ್ದ ಕುಮಾರ ಕೃಷ್ಣಪ್ಪನಾಯಕನಂ ರಾಜತ್ವಕ್ಕೆ ನಿಲಿಸಬೇಕೆಂದಾಳೋಚಿಸಿ ಭಲ್ಯಮಂ ವೇಡೈಪುದೆಂದು ಸೈನ್ಯಮಂ ಕಳುಪಿ ಈ ಪ್ರಕಾರ ಪ್ರಯತ್ನಮಂ ಮಾಡುತ್ತಿರಲಾಗಿ ಆ ಕೃಷ್ಣಪ್ಪನಾಯಕನು ಭಲ್ಯದಲ್ಲು ವಿಸ್ತರಿಸಲಾರದೆ ಪಲಾಯನಂಬಡೆದು ಬಂದು ಕುಟುಂಬ ಸಹ ಕಳಸಿದ ಕೋಟೆಯಲ್ಲು ನಿಂತು ತನ್ನ ವೃತ್ತಾಂತಮಂ ಚನ್ನಬಸವಪನಾಯಕರ್ಗೆ ರಾಯಸಮಂ ಬರೆಸಿ ನಿಮ್ಮ ಹೊಂದಿದ ಪುತ್ರಮನೆತನದವನಾದೆನ್ನಂ ರಾಜತ್ವಕ್ಕೆನಿಲ್ಲಿಸಬೇಕೆಂದು ಬಿನ್ನವಿಸಿ ಕಳುಪಲ್ತಮ್ಮ ಮರೆಪೊಕ್ಕವನು ಅವನೆಂತವನಾಗಿರ್ದೊಡಂ ಅವನ ಉದ್ಧಾರ ಮಾಡಬೇಕೆಂದು ಆಳೋಚಿಸಿ ರಾಯಸದ ಶಂಕರನಾರಣಯ್ಯನೊಡನೆ ಭೂರಿ ಸೈನ್ಯಮಂ ಕಳುಪಿ ಭಲ್ಯಮಂ ವೇಢೈಸಿದ ಕೊಡಗು ಸೈನ್ಯಮಂ ವಾರೆ ದೆಗೆಸಿ ಕೊಡಗಿನ ವೀರರಾಜನಂ ನಯಭಯೋಕ್ತಿಗಳಿಂದೊಡಂಬಡಿಸಿ ಕುಮಾರ ಕೃಷ್ಣಪ್ಪನಾಯಕನಂ ಭಲ್ಯದಿಂ ಹೊರದೆಗಿಸಿ ತಮ್ಮಂ ಮರೆವೊಕ್ಕ ಕೃಷ್ಣಪ್ಪನಾಯಕನಂ ಬೇಲೂರ ಸಂಸ್ಥಾನದ ರಾಜತ್ವಕ್ಕೆ ನಿಲಿಸಿ ಪರಮಪ್ರಖ್ಯಾತಿಯಂ ಪಡೆದ ನಂತುಮಲ್ಲದೆಯುಂ.

ಆಕರ ಗ್ರಂಥಗಳು

೧. ಕೆಳದಿ ನೃಪವಿಜಯ ಲಿಂಗಣ್ಣಕವಿ (ಅನುವಾದ: ಕೆ.ಗುಂ.ಜೋ. ಕ.ಸ.ಪ. ೧೯೭೭)

೨. ಶಿವತತ್ವರತ್ನಾಕರ – ಕೆಳದಿ ಬಸವರಾಜ ಅನುವಾದ: ಪ್ರೊ. ಮಲ್ಲೇಪುರಂ ಜಿ. ವೆಂಕಟೇಶ, ಪ್ರಕಟಣೆ: ಕನ್ನಡ ವಿಶ್ವವಿದ್ಯಾಲಯ, ಹಂಪಿ, ೧೯೯೯. Critical study in English, Dr. Radhakrishna Murthy, Pune, keladi’ Museum and Historical Research, Keladi’.., Karnataka st.

೩. ಲ್ಯೂಯಿ ರೈಸ್‌ರವರ ಎಫಿಗ್ರಾಫಿಯ ಕರ್ನಾಟಕ ಶಾಸನ ಸಂಪುಟ V ಭಾಗ II ಹಾಗೂ ಪುನರ್ಮುದ್ರಣ ಸಂಘಟನೆಗಳು.

೪. ಕರ್ನಾಟಕ ಕೈಫಿಯತ್ತುಗಳು. ಸಂ : ಪ್ರೊ.ಎಂ.ಎಂ.ಕಲ್ಬುರ್ಗಿ. ಕನ್ನಡ ವಿಶ್ವವಿದ್ಯಾಲಯ, ಹಂಪಿ, ೧೯೯೪.

. Vijayanagara Inscriptions; Dr. B.R.Gopal, 3 Volumes; Directorate of Archacology and Museums, Mysore, 1985

೬. ಕನಕಸಿರಿ, ಕನ್ನಡ ಸಾಹಿತ್ಯ ಪರಿಷತ್ತು, ಬೆಂಗಳೂರು ೧೯೯೯.

೭. ಸಾರಂಗ ಶ್ರೀ: ವೀರಶೈವ ಅರಸುಮನೆತನಗಳ ಅಧ್ಯಯನ.

೮. History of Mysore; Hayavadana Rao, 3 Volumes.

೯. Letters and Despatches of Duke of Wellington (೧೭೦-೧೮೦೫)

೧೦. Karnataka *Gazetteer* (Hassan)

೧೧. QJMS. Quarterly Journal of Mythic Society LVII ಮತ್ತು VIII ಸಂಚಿಕೆಗಳು.

೧೨. Modern Mysore by M. Shama Rao.

೧೩. ಶ್ರೀಮನ್ಮಹಾರಾಜರವರ ವಂಶಾವಳಿ ಭಾಗ I : ಬಿ. ರಾಮಕೃಷ್ಣರಾವ್ (ಅರಮನೆ) ೧೯೧೬.

೧೪. ತಿರುಪತಿ ‘ಸಪ್ತಪದಿ’ ಸಂಚಿಕೆಗಳು

೧೫. ಕಹವಸೂ, ಮೈಸೂರು ವಿಶ್ವವಿದ್ಯಾಲಯ ಸಂ. I

೧೬. Bulletin of The Deccan Collage Research Institute Vol XXXI, Poona Pt. ೧೯೭-೭೧ PtII ೧೯೭-೭೨ ಲೇಖನ : ಚಿಟ್ನೀಸ್, ಪೂನಾ.

ಬೇಲೂರು ನಾಯಕರನ್ನೊಳಗೊಂಡ ಶಾಸನಗಳ ಅನುಸೂಚಿ

ವೇಲಾಪುರ

(1) MAR 1934 No. 34;
(2) MAR 1933 No. 29;
(3) MAR 1934 No. 35;
(4) ECHn 40; VIII (Rev) A1 26;
(5) EC V B1 3; ARISE 1909 2 Nos 5-55; EC IX (Rev)
(6) EC B1 56; IX (Rev) B1 10;
(7) MAR 1937 No 22; EC IX (Rev) B 1 93.
(8) EC XV B1 57; IX (Rev) B1 11.
(9) EC V B1 22; IX (Rev) B1 146.
(10) EC V/XV B1 80; IX (Rev) B1 173
(11) EC XI. B1 294; IX (Rev) B1 176
(12) EC XI B1 296; (14) EC V B1 196.
(15) EC V Hn 39 VIII (Rev) A1 47.

ಹಡಪದ ಬಯ್ಯಪ್ಪನಾಯಕ

(1) EC XI Kd 26;
(2) EC XI Dg 18; Hd No 42;
(3) EC XI Dg 30; DD No 43;
(4) EC XI HK 49;
(5) EC XI HK 48;
(6) EC XI HK 21
(7) EC XI HK 11-114;
(8) EC XI HK 132
(9) EC V B1 4; IX (Rev) B1 37;
(10) EC V B1 12; IX (Rev) B1 66.
(11) EC V B1 68 IX (Rev) B1 66.
(12) EC V (Rev 1976) Kn 104 IV (1 ledn,) Yd 59.
(13) MAR 1932., No.2.

ಯರ‍್ರ ಕೃಷ್ಣ್ಪನಾಯಕ

(1) EC 11 C1 37; (2) EC XI Dg 18; (3) EC XI Dg 83; (4) EC XI Dg 18; HD. No. 42;(5) E.C. XI Dg 30; HD.No. 43; (6) EC XI J1 2; (7) EC V Hn 41; VIII (Rev) A1 1. (8) EC V Ag 9; (9) EC V Ag 83; VIII (Rev) Ag 8. (10) EC V Ag 57; VIII (Rev) Ag 79. (11) EC V B1 4; IV (Rev) B1 37; (12) EC V B1 22; IX (Rev) B1 146 (13) EC XV B1 237; IX (Rev) B1 180 (14) MAR 1934 No.3. (15) EC V Hn 7; VIII (Rev) Hn 9 (16) Ec V Hn 2; VIII (Rev) Hn 2. (17) EC V Hn 103; VIII (Rev) Hn 77; (18) MAR 1935 1935 No. 8; EC VIII (Rev) Hn 79; (19) EC V Hn 15; VIII (Rev) Hn 122 (20) Ec V Hn2; (21) EC V Mj 9 (22) EC VI Cm 79; (23) EC XI CI 47 47 (24) EC XI Dg 22; HD No 41; (25) EC VI Cm 124; (26) EC VI TK 91 (27) EC XI HK 21L (28) EC XI HK 110 : (29) MAR 1932 No 2; (30) ARSIE 1904 No 85; SII IX Pt II No 641; SII XVII No 96 (31) ARSIE 1918 No 260 SII IX Pt II No. 626 (32) ARSIE 1918 No 270; SII IX Pt II No 666 (33) ARSIE 1906 No 71; SII IX Pt II No 640; SII XVII No 79; (34) ARSIE 1925 No 305 and 306; SII IX Pt II No. 647.

ವೆಂಕಟಾದ್ರಿನಾಯಕ
(1) EC IX HK 21; (2) EC V Hn 41; VIII (Rev) A1 1 (3) EC V Ag 9 (4) EC V Ag 83; VIII (Rev) Ag 8 (5) EC V B1 128; IX (Rev) B1 128; IX (Rev) B1 128; (6) EC V B1 1 ; IX (Rev) B1 109 (7) EC V B1 12 ; IX (Rev) B1 66. (8) EC V B1 22; IX (Rev) B1 146 ; (9) EC XV B1 237 ; IX (Rev) B1 180 ; (10) EC V Hn 2 ; (11) EC V Mj 9

***

MAR : Mysore Archaeological Reports
EC : Epigraphia Carnatica

—-
(ಸಂಖ್ಯಾಗೊಂದಲ / ಚುಕ್ಕಿ ಚಿಹ್ನೆಯ ಗೊಂದಲ ಇರುವುದರಿಂದ ಈ ಅಧ್ಯಾಯದ ಕೆಲವು ಅಡಿಟಿಪ್ಪಣಿಗಳನ್ನು ನಮೂದಿಸಿಲ್ಲ)

 

[1]ಶಾಸನಗಳು ಹಾಗೂ ಮೆಕೆಂಜೀ ಸಂಗ್ರಹಗಳನ್ನು ಅನುಬಂಧದಲ್ಲಿ ಪ್ರತ್ಯೇಕವಾಗಿ ನೀಡಲಾಗಿದೆ.

[2]ಕ.ಕ.ಚ. ಸಂ. II ಪು. ೩೨೪-೩೨೫; ಕಹವಸೂ ಸಂ. I ಪು ೨೬೪.

[3]ಡಾ. ಎಂ.ಎಂ.ಕಲ್ಬುರ್ಗಿ: ಸಂ: ಕರ್ನಾಟಕ ಕೈಫಿಯತ್ತುಗಳು, ಪು. ೧೧೮.

[4]ಇಂತಹ ಉದಾಹರಣೆಗಳು ಕೆಳದಿ ಅರಸರ ಚರಿತ್ರೆಯಲ್ಲಿ ಸಾಕಷ್ಟಿವೆ.

[5]ಹಲವು ಕೀರ್ತಿನೆಗಳು ತಿರುಪತಿ ‘ಸಪ್ತಗಿರಿ’ಯಲ್ಲಿ ಪ್ರಕಟವಾಗಿವೆ. ಇದರಲ್ಲಿ ಬೇಲೂರು ವೈಕುಂಠದಾಸರ ಕೀರ್ತಿನೆಗಳೂ ಸಮ್ಮಿಳಿತಗೊಂಡಿವೆ.