ವಸು: ಸಾರ್, ನನಗೆ ಒಂದು ಪ್ರತಿಕ್ರಿಯೆಯನ್ನು ಸೂಚಿಸಬೇಕು ಅನಿಸ್ತು. Its very interesting. ಆದರೆ ಕೆಲವು ಬಾರಿ ಎಲ್ಲಿ ನಿಂತು ಮಾತಾಡುತ್ತಿದ್ದೀವಿ ಅಂತ. No text is reginal ಅಂತ ನಾವು ಹೇಳಿದರೆ ಒಂದು ಪ್ರಾದೇಶಿಕ ಸಾಸಂಸ್ಕೃತಿಕ ಹಿನ್ನೆಲೆಯಲ್ಲಿ ನಾವು ಒಂದು ಪಠ್ಯಕ್ಕೆ ಒದಗಿಸಬೇಕಾದ ನ್ಯಾಯ ತಪ್ಪುವ ಸಾಧ್ಯತೆ ಇರುತ್ತೆ ಮತ್ತು ಮಹಾಭಾರತ ಕಾವ್ಯದ ಓಪನ್ನೆಸ್ ಅನ್ನು ಇಲ್ಲಿ ಜನಪದ ಕಾವ್ಯದ ಹಿನ್ನೆಲೆಗೆ ಹೋಲಿಸುವಾಗ ಮಹಾಭಾರತಕ್ಕೆ ಒಂದು ಪ್ಯಾನ್ ಇಂಡಿಯನ್ ಸ್ಕೋಪ್ ಇದೆ. ಈಗಾಗಲೇ ಅದು ಅಷ್ಟು ವಿಸ್ತರಿಸಿ ಬೆಳೆದಿರುವಂತ ಕಾವ್ಯ ಆಗಿದೆ. ಪ್ರಾದೇಶಿಕ ಹಿನ್ನೆಲೆಯಲ್ಲಿ ಬೆಳೆದಂತಹ ಮಲೆಮಹಾದೇಶ್ವರ ಅಥವಾ ಮಂಟೇಸ್ವಾಮಿಯನ್ನ ಯಾತಕ್ಕೆ ಇಲ್ಲಿ ವಿಸ್ತರಿಸಿಲ್ಲ ಅನ್ನೋ ಪ್ರಶ್ನೆ ರೀಜನಲ್ ಆಗಿ ಕಾಣ್ತಿದೆ. ಅದೇ ರೀತಿಯ ಕಥೆಗಳು ದೇಶಾದ್ಯಂತ ಇರುವ ಸಾಧ್ಯತೆ ಇದೆ. ಯಾಕೆಂದರೆ ಭಾರತದ ಹಿನ್ನೆಲೆಯ ಬದುಕಿನಲ್ಲಿ ಇಂತದೇ ಸಾಂಸ್ಕೃತಿಕ ಬದುಕನ್ನ ಸಾಗಿಸುತ್ತಿರುವಂತ ಜನ ಇದ್ದಾರೆ ಮತ್ತು ಅಲ್ಲಲ್ಲೇ ಹುಟ್ಟಿಕೊಂಡಿರುವಂತ ನಾಯಕರು ಇದಾರೆ. ಹಾಗಂದಾಕ್ಷಣಕ್ಕೆ ಮಲೆ ಮಾದೇಶ್ವರ ಈ ಸ್ಥಳದ ಹಿನ್ನೆಲೆಯಲ್ಲಿ ಬಂದವನು ಅಲ್ಲ ಅಥವಾ ಅವನನ್ನು ಎಲ್ಲ ಕಡೆಯೂ ನೋಡಬಹುದು ಅಂತ ಕರೆದರೆ ನನಗೆ ಬಹಳ  ತೀವ್ರವಾಗಿ ಅನಿಸ್ತಿರೋದು ಬಹುಶಃ ಸೋಲಿಗರ ಬದುಕನ್ನ ನಾವು ಮೀರುತ್ತಾ ಮತ್ತೇಲ್ಲೋ ಅದನ್ನು ವಿಸ್ತರಿಸಿ ಅಲ್ಲಿ ಕಾಣಬೇಕಾದಂತಹ, ನಾವು ಹುಡುಕಲೇ ಬೇಕಾದಂತಹ ಕೆಲವಾದರೂ ಚಾರಿತ್ರಿಕ ಅಂಶಗಳನ್ನು ಮೀರುತ್ತಾ ಇದೀವಿ ಅಂತ ಅನಿಸುತ್ತೆ ಮತ್ತು ಮಹಾಭಾರತದ ಟೆಕ್ಟ್  ಎಷ್ಟರ ಮಟ್ಟಿಗೆ ಓಪನ್ ಎಂಡೆಡ್ ಅನ್ನೋವಾಗ ನನಗೆ ಕಾಣಿಸಿದ್ದು ಹೀಗೆ. very interesting discription. ಇದು ಮಹಾಭಾರತದ ಓಪನ್ ಎಂಡೆಡ್‌ನೆಸ್ ಅಥವಾ ಅಲ್ಲ ಅನ್ನೋವಾಗ ನನಗೆ ಕಾಣಿಸಿದ ಅಂಶ ಮಹಾಭಾರತದ ಶಾಸ್ತ್ರೀಯ ಅಥವಾ ಕ್ಲಾಸಿಕ್ ಅನ್ನುವ ಒಂದು ಟೆಕ್ಸ್ಯ್ ಇದೆ. ಜನಪದ ಹಿನ್ನೆಲೆಯಲ್ಲಿ ಬಂದ ನೂರಾರು ಕಾವ್ಯಗಳು ನೂರಾರು ಕಥೆಗಳು. ಒಬ್ಬ ಮಹಾಕವಿಯ ಆಶಯದ ಒಳಗೆ ಅಥವಾ ಮಹಾಕವಿಯ ಒಂದು ಧೋರಣೆಯಿಂದ ಒಂದು ಚೌಕಟ್ಟನ್ನು ಪಡೆದುಕೊಂಡಂತಹ ಕಾವ್ಯ ಆದಾಗ ಅದು ಕ್ಲಾಸಿಕ್ ಆಗಿರುತ್ತೆ. ಅಥವಾ ಒಬ್ಬ ಕವಿಯಲ್ಲದಿದ್ದರೂ. ಒಂದು ಸಮುದಾಯ ತನಗೆ ಹೇಳಬೇಕಾದಂತಹ ಮೌಲ್ಯಗಳನ್ನು ಆ ಕಾವ್ಯದಲ್ಲಿ ತಂದಿದೆ. ಆದರೆ ಅದೇ ಕಾವ್ಯಕ್ಕೆ ಓಪನ್ ಎಂಡೆಡ್‌ನೆಸ್ ಕೂಡ ಇದೆ. ಯಾವಾಗ ಅಂದರೆ, ಆ ಮಹಾಭಾರತ ಕಾವ್ಯ ಪ್ಯಾನ್ ಇಂಡಿಯನ್ ಆಗಿ ಕ್ಲಾಸಿಕ್ ಆದ  ನಂತರವೂ ಜನಪದರು ಮತ್ತೆ ಆಕಾವ್ಯವನ್ನು ತೆಗೆದುಕೊಂಡು ತಮ್ಮದಾಗಿಸಿಕೊಳ್ತಾರೆ. ಈಗ ದ್ರೌಪದಿ ಕರಾವಳಿಯ ತೀರದ ದ್ರೌಪದಿಯಾಗಿ ಪಗಡೆಯಾಟದಲ್ಲಿ ಚಾಲೆಂಜ್ ಮಾಡುವಂತ ಕಥೆ ಸೃಷ್ಟಿಯಾಗುತ್ತೆ. ಅಂದರೆ ದ್ರೌಪದಿ ಎಲ್ಲ ಕಡೆ ಇದ್ದಾಳೆ. ಆದ್ದರಿಂದ ಎಲ್ಲಾ ಕಡೆಯೂ ಸೃಷ್ಟಿಯಾದ ಕಥೆ ಆಗಬೇಕಿಲ್ಲ ಒಂದು ಕ್ಲಾಸಿಕ್ ಕಾವ್ಯ ಪ್ಯಾನ್ ಇಂಡಿಯನ್ ಆದ ಸಂದರ್ಭದಲ್ಲಿ ಇಡೀ ಭಾರತವನ್ನು ಆವರಿಸ್ತು. ಆ ಕಥೆ ಜನಪದ ಮೂಲದಲ್ಲಿ ಹುಟ್ಟಿ ಶಾಸ್ತ್ರೀಯ ಚೌಕಟ್ಟನ್ನು ಪಡಕೊಳ್ತಾ ಮತ್ತೊಮ್ಮೆ ಜನಪದರನ್ನು ಮುಟ್ಟಿದಾಗ ಪ್ರತಿ ಊರಲ್ಲೂ ರಾಮ ಕಾಣಿಸಿಕೊಳ್ತಾನೆ. ಸೋ ಇಲ್ಲಿ ನಾವು ಮೂರು ಹಂತದಲ್ಲಿ ಮಹಾಭಾರತ ಅಥವಾ ರಾಮಾಯಣವನ್ನು ನೋಡಬೇಕಾಗಿದೆ. ಅದು ಶಾಸ್ತ್ರೀಯ ಚೌಕಟ್ಟನ್ನು ಪಡಕೊಂಡಾದ ಸಂದರ್ಭದಲ್ಲಿ ಅದರ ಮೌಲ್ಯಗಳು ಒಂದು ಕ್ಲೋಜ್ ಕಾವ್ಯ ಆಗಿ ಅದು ನಿಂತುಕೊಳ್ಳುತ್ತೆ. ಯಥಾ ಪ್ರಕಾರ ವಾಪಸ್ ಅದನ್ನು ಜನಪದರು ಸ್ವೀಕರಿಸಿ ತಮ್ಮ ನೆಲೆಯ ಆ ಭಾಗದ ಆಶಯಗಳನ್ನು ಆ ಕಥೆಗೆ ಸೇರಿಸ್ತಾ ಹೋಗುವಾಗ ಅದು ಮತ್ತೊಮ್ಮೆ ಓಪನ್ ಎನ್‌ಡೆಡ್‌ನೆಸ್ ಆಗಿದೆ ಅಂತ ಕಾಣಿಸ್ತಿದೆ.

ಪ್ರೊ. ಬೋರಲಿಂಗಯ್ಯ ಅವರು ಮಾತಾಡುವಂತ ಸಂದರ್ಭದಲ್ಲಿ Spirutual leader ಅನ್ನೋ  ಪದವನ್ನು ಬಳಸಿದಿರಿ. Spirutual ಅನ್ನೋ ಪದವನ್ನು ಅಂದರೆ ಅದರ ಅರ್ಥವನ್ನು ಎಷ್ಟರ ಮಟ್ಟಿಗೆ what is a scope for spirutual leader ಅನ್ನೋದನ್ನ ನನಗೆ ತಿಳಕೊಳ್ಳಬೇಕು ಅನಿಸ್ತು. ಯಾಕೆಂದರೆ ಒಬ್ಬನ್ನ ಕಲ್ಚರಲ್ ಲೀಡರ್ ಅನ್ನೋ ಪದವನ್ನು ಬಳಸ್ತಾ ಇದೀವಿ. ರೀಲೀಜಿಯಸ್ ಲೀಡರ್ ಅನ್ನೋ ಅರ್ಥದಲ್ಲಿ ಕೆಲವರನ್ನ ಕರೆತೀವಿ. ಕೆಲವರನ್ನ political leader, ನನಗೆ ಇಲ್ಲಿ ಕಾಣಿಸಿದ್ದು ಇಷ್ಟೇ ಬಹುಶಃ political leader ಅಲ್ಲಿ ಅಂತ ರಾಜಕೀಯ ನಾಯಕ ಅಲ್ಲ ಅನ್ನೋ ಕಾರಣಕ್ಕಾಗಿ ಒಂದಷ್ಟು ಧಾರ್ಮಿಕ ಗೊಂಡಿರುವುದರಿಂದ spirutual ಅಂತ ಪದವನ್ನು ಬಳಸ್ತಾ ಇದೀರಾ ಅನ್ನೋದು. ಯಾರನ್ನ ನಾವು ಸ್ಪಿರೀಚುವಲ್ ಅಂತ ಕರೀಬೇಕು ಅನಿಸ್ತು, ಯಾಕೆಂದರೆ ಜನಪದರನ್ನ ಆಧ್ಯಾತ್ಮಿಕ ನಾಯಕ ಎಂದಾಗ, ಆಧ್ಯಾತ್ಮಿಕ ಪದವೇ ನನಗೆ ಎಷ್ಟೋ ಬಾರಿ ಹೊರೆಯಾಗಿದೆ ಅನಿಸುತ್ತೆ. ಅದನ್ನ ಬೇರೆ ಬೇರೆ ನೆಲೆಯಲ್ಲಿ ಮಾತಾಡೋದಕ್ಕೆ ಸಾಧ್ಯ ಇದೆ. but ನಮ್ಮನ್ನ ನಾವು ಎಲ್ಲೋ ಸ್ಪಿರೀಚುವಲ್ ಲೀಡರ್ ಅಂತ ಕರೀವಾಗ ನಾವು ಒಂದು ಡಿಫೈನ್ ಮಾಡಬೇಕಾ ಅಂತ ಅನಿಸ್ತು.

ಹಿ.ಚಿ.ಬೋ: ನನ್ನ ದೃಷ್ಟಿನಲ್ಲಿ ಮಲೆ ಮಾದೇಶ್ವರ ಮತ್ತು ಮಂಟೇಸ್ವಾಮಿ ಇಬ್ರೂವೇ ಈಗಾಗಲೇ ಪ್ರತಿಸ್ಟಾಪಿಸಲ್ಪಟ್ಟ ಧರ್ಮ, ಮತ್ತೆ ಜಾತಿ ಅಂತ ಏನು ಹೇಳ್ತೀವಿ ಅದನ್ನ ಮೀರಿದವರು ಅಂತ. ಅಂದರೆ ಅದಕ್ಕೆ ಅಂಟಿಕೊಂಡವರು ಅಲ್ಲ. ಅದರ ಆಚೆಗೆ ಏನನ್ನೋ ಸಾಧಿಸಬೇಕು ಅಂತ ಹೊರಟವರು ಆದ್ದರಿಂದ ಅವರನ್ನು ಸ್ಪಿರಿಚ್ಯುಚಲ್ ಲೀಡರ್ಸ್‌ ಅಂತ ಕರೀಬಹುದು ಅಂತ ಹೇಳಿದ್ದೇನೆ. ಆದರೆ ಲೋಹಿಯಾ, ರಾಮ, ಮತ್ತೆ ಶಿವ, ಕೃಷ್ಣ ಇವರೂ ಕೂಡ ಸ್ಪಿರಿಚ್ಯುವಲ್ ಲೀಡರ್ಸ್‌ ಅಂತಾನೇ ಹೇಳ್ತಾರೆ. ಆದರೆ ಐತಿಹಾಸಿಕವಾದಂತ ವಿಶ್ಲೇಷಣೆ ಕೊಡುವ ಅಂಬೇಡ್ಕರ್ ಇದನ್ನು ಒಪ್ಪುವುದಿಲ್ಲ. ಆದರೆ ಇಲ್ಲಿ ಮಲೆಮಹಾದೇಶ್ವರ ಮತ್ತು ಮಂಟೇಸ್ವಾಮಿ ಆ ರೀತಿಯ ಸ್ಪಿರಿಚ್ಯುವಲ್ ಲೀಡರ‍್ಸ ಆಗಬಲ್ಲರು ಅನ್ನುವ ಕಾರಣಕ್ಕಾಗಿ ನಾನು ಅದನ್ನ ಹೇಳಿದೆ. ಯಾಕೆಂದರೆ ಜಾತಿಯನ್ನು ಮೀರಿದ್ದಾರೆ, ಈಗ ಬಸವಣ್ಣನನ್ನು ಸ್ಪಿರಿಚ್ಯುವಲ್ ಲೀಡರ್ ಅಂತ ಕರೀಬೇಕೋ ಬೇಡವೋ? ಬಸವಣ್ಣನನ್ನು ಕರೀಬಹುದಾದರೆ, ಮಲೆಮಹಾದೇಶ್ವರ ಮತ್ತು ಮಂಟೇಸ್ವಾಮಿಯನ್ನು ಆ ರೀತಿ ಕರೀಬಹುದು ಅನ್ನೋ ದೃಷ್ಟಿಯಲ್ಲಿ ನಾನು ಹೇಳ್ದೆ.

ಕಿಕ್ಕೇರಿ: ಒಂದು ಸೆಂಟೆನ್ಸ್ ಅಷ್ಟೆ. ನೋ ಡಿಸ್ಕೋರ್ಸ್‌ ಇಸ್ ಅಪಲಿಟಿಕಲ್.

ರಹಮತ್ : ಕುಕ್ಕರಹಳ್ಳಿಯವರ ಪೇಪರ್‌ಗೆ ನನ್ನ ಪ್ರತಿಕ್ರಿಯೆ. ಒಂಥರಾ ಗೊಂದಲದ ಅಸ್ಪಷ್ಟತೆಯ ದಾಟಿಯಲ್ಲಿ ಮಾತಾಡಿದ್ದೀರಿ. ಅದು ಬಹಳ ಮೀನಿಂಗ್‌ಫುಲ್ ಅದ್ಕೊಂಡಿದ್ವೀ. ಅಂದರೆ ಸ್ಕಾಲರ್‌ಶಿಪ್‌ಗೆ ಎಲ್ಲ ಕ್ಲಿಯರ್ ಆಗಿ ಒಂದು ಥೀಸೀಸ್ ಕ್ರಿಯೇಟ್ ಮಾಡೋ ಒಂದು ಮಾದರಿ ಇದೆ. ಆದರೆ ವೈಯಕ್ತಿಕವಾಗಿ ಅದನ್ನು ಮುಖಾಮುಖಿ ಮಾಡುವಾಗ ಒಂದು ಸಮುದಾಯದ ಭಾಗವಾಗಿ ಇರೋ ದ್ವಂದ್ವಗಳಿದೆಯಲ್ಲ ಅವುಗಳ ಮೂಲಕವೂ ನಾವು ಟೆಕ್ಸ್ಟ್‌ಗಳಿಗೆ ಪ್ರವೇಶ ಮಾಡಬೇಕಾಗಿದೆ. ಆ ದಾರೀನೂ ಓಪನ್‌ ಅಫ್ ಆಗಬೇಕಾಗಿದೆ. ಆದ್ದರಿಂದ ಗುಡ್ಡರನ್ನ ಕ್ರಿಯೇಟ್ ಮಾಡಬೇಕೋ ಅಥವಾ ಹೋರಾಟಗಾರರನ್ನು ಕ್ರಿಯೇಟ್ ಮಾಡಬೇಕೋ ಅನ್ನೋ ಗೊಂದಲ ಇದೆ ಅಂದರಲ್ಲ ಅದು ಇದೆ. ಆದರೆ ಅದು ವೈಚಾರಿಕ ಹೋರಾಟಗಳಲ್ಲಿ ಇದ್ದ ಕಾಲದಲ್ಲಿ ಇವುಗಳೆಲ್ಲ ಬಿಟ್ಟುಕೊಟ್ಟಿದ್ದೇವಲ್ಲ ಇದಕ್ಕೆ ರಿಪೆಂಟ್ ಅಪಾಲಿಜಿಟಿಕಲ್ ಆಗಿ ಇರಬೇಕಾಗಿಲ್ಲ, ಅಂದರೆ ಪಶ್ಚಾತ್ತಾಪ ಪಡಬೇಕಾಗಿಲ್ಲ. ಅದೊಂದು ಪ್ರೋಸೆಸ್ ಅಥವಾ ವೈಚಾರಿಕವಾಗಿ ಈ ಸಮಾಜವನ್ನು ಅರ್ಥಮಾಡಿಕೊಂಡು ಅದರ ವಿರುದ್ಧ ಹೋರಾಟ ಮಾಡುತ್ತಾ ಅದರ ಜೊತೆಗೆ ಅನುಸಂಧಾನ ಮಾಡೋ ವಿಧಾನ ಪಾಸ್ ಮಾಡಿ ಬಂದಿರೋದ್ರಿಂದಲೇ ಈ ಕಾವ್ಯಗಳ ಮೂಲಕ ಚೈತನ್ಯ ಹ್ಯಾಗೆ ಪಡಕೋಬೇಕು ಅನ್ನೋ ವಿವೇಕ ಬಂದಿರೋದು. ನಮಗೆ ಅದೊಂದು ಪ್ರೋಸೆಸ್ ಕನ್ನಡದ ಕಳೆದ ಮೂವತ್ತು ವರ್ಷದಲ್ಲಿ ಸಂಸ್ಕೃತಿ ಚಿಂತನೆಗಳಲ್ಲಿ ನಡೆದು ಬಂದಿರೋ ಪ್ರೋಸೆಸ್ ಅದು. ಅದರಿಂದ ಮೊದಲನೇ ಘಟ್ಟ ಏನಿದೆಯಲ್ಲ ಅದನ್ನ ಬಹಳ ಅದ್ಭುತವಾಗಿ ಕುಸುಮಬಾಲೆ ಹೇಳುತ್ತೆ. ಆ ಪ್ರೊಸೆಸ್ ಬಗ್ಗೆ ಏನು ರಿಪೆಂಟ್ ಬೇಕಾಗಿಲ್ಲ ಆದರೆ ಆ ಪ್ರಶ್ನೆಗಳಿವೆಯಲ್ಲ ಅದು ಬಹಳ ಮೂಲಭೂತವಾದ ಪ್ರಶ್ನೆ. ಅಂದರೆ ಈ ಪ್ರಶ್ನೆಗಳು ಎಲ್ಲಿಗೆ ಎಳೆದುಕೊಂಡು ಹೋಗುತ್ತವೆ ಅಂದರೆ ನಮ್ಮ ಸಮುದಾಯಗಳನ್ನು ಆರ್ಥಿಕವಾಗಿ, ಸಾಮಾಜಿಕವಾಗಿ ಮುನ್ನಡೆಸಬೇಕು. ಆರೋಗ್ಯಪೂರ್ಣ ಸಮಾಜದ ಕಡೆ ಕರೆದುಕೊಂಡು ಹೋಗಬೇಕಾದ ಚಳುವಳಿಗಳು. ಮತ್ತೆ ಈ ಕಾವ್ಯಗಳನ್ನು ಕೇವಲ ಈತರ ಏಸ್‌ಥಿಟಿಕ್ಸ್‌ಗಾಗಿಯೇ ಅಥವಾ ಲಿಂಗದೇವರು ಅವರು ಬೆಳಿಗ್ಗೆ ನಾನು ಹೇಳಿದ್ದನ್ನೇ ಹೇಳಿದ್ದರು. ಓ.ಬಿ.ಸಿ. ಪೋಲಿಟಿಕ್ಸ್ ಅಂತ. ಆ ತರದ ಕಾರಣಕ್ಕಾಗಿ ಸ್ವಲ್ಪ ನಮಗೆ ಬೇಕಾದ ರೀಡಿಂಗ್ ಮಾಡಿಕೊಳ್ಳೋಂತ ಒಂದು ಇಕ್ಕಟ್ಟಿನಲ್ಲಿ ನಾವು ಇದೀವಿ ಅಂತಲೇ ನನಗೆ ಅನಿಸೋದು. ಆದ್ದರಿಂದ ಈ ಕಾವ್ಯಗಳ ನೋಡೋಕೆ ಒಂದು ಹೊಸ ಹಾದಿ ಇದೆ, ಇನ್ನೂ ಇದೆ ಅಂತ ಅಷ್ಟು ಕ್ಲಿಯರ್ ಆಗಿ ನಮಗೆ ಅದು ಕಾಣದೆ ಹೋಗಬಹುದು. ಆದರೆ ಆ ಇಕ್ಕಟ್ಟುಗಳನ್ನು ಧ್ಯಾನ ಮಾಡೋದು ಕೂಡ ಬಹಳ ಇಂಪಾರ್‌ಟೆಂಟ್. ಅದನ್ನ ನಾನು ಗೊಂದಲ ಅಂತ ಕೂಡ ಅನ್ಕೊಂಡಿಲ್ಲ ಮತ್ತೆ ವೈಚಾರಿಕವಾಗಿ ಇದ್ದ ಆ ಕಾಲವನ್ನ ದುಃಖದಿಂದ ನೋಡಬೇಕಾಗಿಲ್ಲ. ಪ್ರೋಸೆಸ್ ಅದು. ಎರಡನೆಯದು ನನಗೆ ಈ ಹರವೆಯವರು ಹೇಳಿದ್ದರ ಮೇಲೆ ಒಂದು ಆಕ್ಷೇಪ ಇದೆ. ಏನೆಂದರೆ ಮೊದಲನೆಯ ಭಾಗದ ಉಪನ್ಯಾಸದಲ್ಲಿ ಇದುವರೆಗೆ ಕಟ್ಟಿದ ನಮ್ಮ ಶಿಕ್ಷಣ ವ್ಯವಸ್ಥೆಯಲ್ಲಿ ಚಾಲ್ತಿಗೊಳಿಸಿರುವ ಕ್ಲಾಸಿಕಲ್ ಹಿಸ್ಟರಿ ಇದೆಯಲ್ಲ ಅದನ್ನ ಪ್ರಶ್ನಾತೀತವೆಂದು ಒಪ್ಪಿಕೊಂಡು ಅಲ್ಲಿಂದ ಮಾದರಿಗಳನ್ನ ತಂದು ಈ ಕಾವ್ಯಕ್ಕೆ ಅಪ್ಲೇ ಮಾಡ್ತಾ ಇದ್ದೀರಿ. ನೀವು ಬಳಸಿದ ಪದಗಳು ಈ ‘ಮಧ್ಯಕಾಲೀನ’ ‘ಮುಸ್ಲಿಂ ದಾಳಿ’ ಆ ತರದ್ದು. ಅದು ಎಷ್ಟರ ಮಟ್ಟಿಗೆ ಅಂದರೆ ಈ ಟೆಕ್ಸ್ಟ್ ಮೂಲಕವೇ ಒಂದು ಹಿಸ್ಟರಿ ಕ್ರಿಯೇಟ್ ಮಾಡೋ ಇನ್ನೊಂದು ಹಾದಿ ಇದೆಯಲ್ಲ ಅದನ್ನ ನಾವೇ ರಿಜೆಕ್ಟ್ ಮಾಡಿಕೊಂಡಂಗಲ್ವ ಅಂತ.

ವಸು : ಸಾರ್ ಅದಕ್ಕಿಂತ ಮುಂಚೆ ನಾನು ತರೀಕೆರೆಯವರ ಜೊತೆಗೆ ಪೂರಕವಾಗಿ react ಮಾಡೋಕೆ ಇಷ್ಟಪಡ್ತೀನಿ. ನೀವು ಅಪ್ಪಾ ದೊರೈಯವರು ಹೇಳಿದ ಹಿನ್ನೆಲೆನಲ್ಲಿ ಜಾತಿ ವ್ಯವಸ್ಥೆಯನ್ನು ಗಿಲ್ಟ್ಸ್ ಅನ್ನೋ ರೀತಿಯಲ್ಲಿ ಕೋಟ್ ಮಾಡಿದ್ದೀರಿ. ಆಮೇಲೆ ಅದರ ಹಿನ್ನೆಲೆ ಒಳಗಡೇನೆ ಮಾದೇಶ್ವರನ ಸಂದರ್ಭದ ಜಾತಿ ವ್ಯವಸ್ಥೆಯನ್ನು ರೀಲೇಟ್ ಮಾಡಿದ್ರೆ ಅದನ್ನ ಅವರು ಕೊಶ್ಚನ್ ಮಾಡ್ತಿದಾರೆ. ಅಪ್ಪಾ ದೊರೈ ಅವರು ಒಂದು ಜಾತಿ ವ್ಯವಸ್ಥೆ ಅದರ ಒಳಗಡೆ ಯಾವ ಬಿಕ್ಕಟ್ಟು ಇರಲಿಲ್ಲ ಸೌಹಾರ್ದ ಇತ್ತು ಅಂತ ಹೇಳುವಾಗ, ಇತಿಹಾಸಕಾರರೊಬ್ಬರ ನೆಲೆ ಭಿನ್ನ ಇದೆ. ಅಪ್ಪಾದೊರೈ ಅವರು ಹೇಳಿದಾಕ್ಷಣಕ್ಕೆ, ನಾವು ಮಧ್ಯಕಾಲೀನ ಯುಗದ ಜಾತಿವ್ಯವಸ್ಥೆಯೊಳಗಡೆ ನೋವಿರಲಿಲ್ಲ ಅನ್ನೋದನ್ನ ಒಪ್ಪಿಕೊಳ್ಳಬೇಕಿಲ್ಲ. ಯಾಕೆಂದರೆ ಇತಿಹಾಸಕಾರರು ಈ ಹೊತ್ತು ಯಾಕೆ ಬರೀತಿದ್ದಾರೆ ಅನ್ನೋದನ್ನ ನಾವು ಕೊಶ್ಚನ್ ಮಾಡಬೇಕಾದ ಅಂಶ. ಆಮೇಲೆ ನೀವು ಬೇರೆ ಯಾವುದೋ ಒಂದನ್ನ ಕೋಟ್ ಮಾಡಿದಿರಿ. ಮೈಸೂರು ಗೆಜೆಟಿಯರ್ ಅಥವಾ ಮದ್ರಾಸ್ ರೀಪೋರ್ಟ್ ಅನ್ನ ಮೆನ್‌ಷನ್ ಮಾಡಿದಿರಿ. ಸೌತ್ ಇಂಡಿಯನ್ ಎಫಿಗ್ರಾಪಿ ಮದ್ರಾಸ್ ರಿಪೋರ್ಟ್ ಬ್ರಿಟೀಷರ ಕಾಲದಲ್ಲಿ ದಾಖಲಾಗುವಾಗ ಭಾರತದ ಇತಿಹಾಸವನ್ನು ನೋಡ್ತಾ ಇದ್ದ ಒಂದು ಕ್ರಮ ಇದೆ. ಆ ಜಾತಿ ಸಂದರ್ಭಕ್ಕೆ ಬಂದಾಗ ಭಾರತೀಯ ಸಮಾಜದಲ್ಲಿ ಯಾವತ್ತೂ ನೋವು ಇದೆ. ಆದರೆ ಅದನ್ನ ಅನಿವಾರ್ಯ ಕಾರಣಗಳಿಗಾಗಿ ಒಪ್ಪಿಕೊಂಡ ಮಾತ್ರಕ್ಕೆ ನಾವು ಅವರ ನಡುವೆ ನೋವು ಇಲ್ಲ ಅಂತ ಭಾವಿಸಬೇಕಾಗಿಲ್ಲ. ಯಾಕೆಂದರೆ ಈ ಜಾತಿಯ ಕಾರಣಕ್ಕಾಗಿ ಭಾರತದ ಒಳಗಡೆಯ ಎಲ್ಲಾ ಸುಧಾರಕರು, ಅದನ್ನ ವಿರೋಧಿಸುತ್ತಾ, ಪ್ರತಿಭಟಿಸುತ್ತಾ ಬೇರೆ ಬೇರೆ ರೀತಿಯ ಪ್ರತಿಕ್ರಿಯೆಯನ್ನು ಸೂಚಿಸುತ್ತಾ ಬಂದಿದ್ದಾರೆ. ಹಾಗಾಗಿ ಅಪ್ಪಾದೊರೈ ಅವರು ಹೇಳಿದ ಒಂದು ಯಾರೋ ಒಬ್ಬ ಇತಿಹಾಸಕಾರನ ನೆಲೆಯಲ್ಲಿ ನಾವು ಮಧ್ಯಕಾಲೀನ ಯುಗದ ಗ್ರಾಮೀಣ ಸಮಾಜದ ಜಾತಿ ವ್ಯವಸ್ಥೆಯನ್ನ ಅಷ್ಟು ಪಾಜಿಟಿವ್ ಆಗಿ ನೋಡೋಕೆ ಸಾಧ್ಯ ಇಲ್ಲ ಅನಿಸುತ್ತೆ. ಆಮೇಲೆ ಗಿಲ್ಸ್ಟ್ ಮತ್ತು ಜಾತಿ ವ್ಯವಸ್ಥೆಯನ್ನ ರೀಲೇಟ್ ಮಾಡುವ ಕಾರಣ ಬೇರೆ ಇದೆ. ಗಿಲ್ಸ್ಟ್ ಅನ್ನ ನಾವು ಯಾವಾಗಲೂ ವ್ಯಾಪಾರಿ ಹಿನ್ನೆಲೆಯಲ್ಲಿ ಚರ್ಚೆ ಮಾಡ್ತಾ ಹೋಗ್ತೀವಿ. ಇತಿಹಾಸವನ್ನು ಕಟ್ಟುವ ಬೇರೆ ಬೇರೆ ನೆಲೆಗಳು ಇವೆ. ಹೇಗೆಂದರೆ ಒಂದು ಸಂದರ್ಭದ ಇತಿಹಾಸವನ್ನ ಕಟ್ಟುವಾಗ ಈಗ ಎಸ್ಟಾಬ್ಲಿಷ್ ಹಿಸ್ಟರಿಯಲ್ಲಿ ಇರುವಂತಹ ಒಂದು ಶಿಷ್ಟವರ್ಗವನ್ನು ಸೂಚಿಸುತ್ತಿರುವಾಗ ಇದ್ದ ವ್ಯಾಖ್ಯೂಮ್ ಅನ್ನು ಇದು ತುಂಬುಸ್ತಾ ಇದ್ದರೆ ನಾವು ಇದನ್ನ ಅಲ್ಲಿಗೆ ಎಳೆದುಕೊಂಡು ಹೋಗಬೇಕಾಗಿದೆ. ಪ್ಯಾರರಲ್ ಒಂದು ಹಿಸ್ಟರಿಯನ್ನು ಕ್ರಿಯೇಟ್ ಮಾಡುವುದು ಅಥವಾ De-construct ಮಾಡದೇ ಇರುವಂತ ಇತಿಹಾಸವನ್ನು De-construct ಮಾಡಿ ಇನ್ನೊಂದು Historyಯನ್ನು ಕಟ್ಟುವ ಸಾಧ್ಯತೆ ಇದೆ ಅಥವಾ ಈಗಾಗಲೆ establish ಆಗಿರುವ ಇತಿಹಾಸದಲ್ಲೇ ಇರುವ ವ್ಯಾಖ್ಯೂಮ್ ಅನ್ನ ಈ ಕಾವ್ಯಗಳ ಮೂಲಕ ತುಂಬುವುದಕ್ಕೆ ಸಾಧ್ಯ ಇದೆ ಅನ್ನೋದನ್ನು ನಾವು ಹುಡುಕಬೇಕಿದೆ.

ಹರವೆ : ಸಾರ್ ಜಾತಿ ಅನ್ನುವಂತದ್ದು ಚಾತುರ್ವರ್ಣದ ನೆಲೆಯಲ್ಲಿ ನಾವು ನೋಡಿಕೊಂಡು ಬಂದಾಗ ಅಲ್ಲಿ ಒಂದು ಶ್ರೇಣೀಕೃತ ವ್ಯವಸ್ಥೆಯನ್ನ ಕಾಣುತ್ತೇವೆ. ಆದರೆ ನಾನು ಪಣಕಟ್ಟಿನ ವಿಚಾರ ಅಥವಾ ಈ ಬಣ್ಣಾಂತರ ಅಂತ ಹೇಳಿದ್ನಲ್ಲಾ ಅಲ್ಲಿ ಒಂದು ಸಮುದಾಯ ಪ್ರಜ್ಞೆ ಒಬ್ಬರು ಮತ್ತೊಬ್ಬರಿಗೆ ಸಹಾಯಕವಾಗಿ ಮತ್ತೆ ಒಬ್ಬರು ಎಲ್ಲರಲ್ಲೂ ಒಂದಾಗಿ ಇರತಕ್ಕಂತ ಒಂದು ಸಹಬಾಳ್ವೆಯ ಒಂದು ನೆಲೆಗಟ್ಟಿನಲ್ಲಿದೆ. ಹಾಗಾಗಿ ಅಲ್ಲಿ ಅವಮಾನದ ಸಂಕೇತ ಬರೋದಿಲ್ಲ. ಅಲ್ಲೇನಾಗುತ್ತೆ ಅಂತಂದ್ರೆ ಪ್ರತಿಯೊಬ್ಬನೂ. ಕೂಡ ಆ ಸೇವಾ ಮನೋಭಾವದಲ್ಲಿರುತ್ತಾನೆ. ಅಂದರೆ ತನ್ನ ಗ್ರಾಮದಲ್ಲಿರಬಹುದು ಅಥವಾ  ಇನ್ನೊಬ್ಬ ವ್ಯಕ್ತಿ ಜೊತೆ ಇರಬಹುದು. ಈ ಅರಿವು ಆ ಕಾಲದಲ್ಲಿ ಇತ್ತು. ಬಹಳ ಹಿಂದಿನಿಂದಲೂ ಇತ್ತು ಅಂತ. ಆದರೆ ಈ ಚಾತುರ್ವರ್ಣದ ಕಾನ್‌ಸೆಟ್ಟ್ ಬಂದಂತಹ ಸಂದರ್ಭದಲ್ಲಿ ಏನಾಗುತ್ತೆ ಅಂತಂದ್ರೆ ಜಾತಿ ಅನ್ನೋದು ಅವಮಾನದ ಸಂಕೇತವಾಗುತ್ತದೆ. ಈ ವಚನಕಾರರ ಸಂದರ್ಭದಲ್ಲಿ ನಾವು ಬಂದಾಗ ಕೂಡ ನಾವು ಅಲ್ಲಿ ಗಮನಿಸುವಂತದು ಅಲ್ಲಿ ಪ್ರತಿಯೊಬ್ಬರೂ ಕೂಡ ಅವರವರ ಕಾಯಕವನ್ನು ಮಾಡುವಂತ ಸಂದರ್ಭದಲ್ಲಿ ಯಾವಾಗಲೂ ಕೂಡ ಆ ಕಾಯಕಕ್ಕೆ ಮಾನ್ಯತೆ ಗೌರವ ಇರುತ್ತಾ ಇತ್ತು. ಯಾವುದೇ ಕಾಯಕ ಕೂಡ ತುಚ್ಫವಾಗಿ ಕಂಡಿಲ್ಲ.

ವಸು : ಇಲ್ಲ, ನೀವು contradict ಮಾಡಿಕೊಳಾತಾ ಇದರೀರಿ ಅನಿಸುತ್ತೆ. ವಚನ ಮೂಮೆಂಟ್ ಅವರ ವೃತ್ತಿಯ ಒಳಗಡೆ ಕಾಯಕದಲ್ಲಿದ್ದ ಅವಮಾನವನ್ನ ಮೀರೋದಕ್ಕಾಗಿ ನಡೆದದ್ದು. Divinity in Labour ಅಥವಾ Dignity of labour ಅನ್ನೋ ಮೂಮೆಂಟ್ ಆಗಿ ಕಾಣಿಸುತ್ತೆ. Dignity of labour ತರಾನೇ ಹೋರಾಟ. ಕಾಯಕ್ಕೆ ಗೌರವ ಸಿಕ್ತಿರಲಿಲ್ಲ. ಅದರಿಂದ ಗೌರವ ತರುವುದಕ್ಕಾಗಿ ನಡೆದ ಹೋರಾಟ.

ಹರವೆ : ಇಲ್ಲ, ಪ್ರತಿಯೊಬ್ಬರ ಕಾಯಕಕ್ಕೆ ಕೂಡ ಗೌರವ ಇರ್ತಿತ್ತಂತೆ.

ವಸು : ಅಲ್ಲ, ನಾವು ಹಾಗೆ ರೀಡ್ ಮಾಡಿಬಿಟ್ಟರೆ ವಚನ ಮೂಮೆಂಟ್‌ನ ಬಸವಣ್ಣನವರನ್ನ ನಾವು ಹೋರಾಟಗಾರನೇ ಅಲ್ಲ ಅಂದಾಗೆ ಆಗುತ್ತೆ.

ಲಿಂಗದೇವರು ಹಳೇಮನೆ : ಪ್ರತಿಯೊಂದು ಕಾಯಕಕ್ಕೆ ಗೌರವ ಇತ್ತು ಅಂತ ಪ್ರತಿಪಾದಿಸೋ ಪ್ರಮೇಯ ಇದೆಯಲ್ಲ ಅದು ಸ್ವಲ್ಪ ಹೆಚ್ಚಿನ ಪ್ರಮೇಯ ಅದು. ಪ್ರತಿಯೊಂದು ಕಾಯಕಕ್ಕೂ ಗೌರವ ತಂದುಕೊಡಬೇಕು ಎನ್ನುವ ಆಶಯಗಳಿದ್ದವು. ಬಹಳ ಸೂಕ್ಷ್ಮವಾದಂತಹ ವ್ಯತ್ಯಾಸವನ್ನ ನಾವು ಅಲ್ಲಿ ಮಾಡಬೇಕಾಗುತ್ತೆ. ಯಾಕೆಂದರೆ ನಾವು ಇಲ್ಲಿಯವರೆಗೆ ವಚನ ವಾಙ್ಞಯದಲ್ಲಿ ಓದುತ್ತಾ ಇರೋದು ವಚನಕಾರರು ಬರೆದಿರುವಂತ ವಚನಗಳನ್ನೇ ಹೊರತು ಅವರ ವಿರೋಧಿಗಳು ಮಾಡಿದಂತ ಯಾವುದೇ ಕಾಮೆಂಟ್ ನಮಗೆ ಸಿಕ್ತಿಲ್ಲ ಒಂದು. ಎರಡನೇದು ಆ ಇಡೀ ವಚನ ವಾಙ್ಮಯ ಅಥವಾ ವಚನ ಚಳುವಳಿಯ ಸಂದರ್ಭದಲ್ಲಿ ಇದ್ದಂತಹ ಅನೇಕ ಬಿರುಕುಗಳಿದ್ದಾವಲ್ಲ ಅವುಗಳನ್ನು ನಾವು ಸರಿಯಾಗಿ ಶೋಧಿಸಿಲ್ಲ.

ಕ್ಷೀರಸಾಗರ : ರಹಮತ್ ಅವರು ಹೇಳಿದ ಮಾತುಗಳನ್ನ ಮುಂದುವರೆಸ್ತಾ ನಾನು ಅಂದುಕೊಂಡಿದ್ದೇನೆಂದರೆ ಬಸವರಾಜ ಅವರು ಮಾತಾಡುವಾಗ ಆ ಗುಡ್ಡರು ಹೇಳಿದ ಕಥೆಗಳನ್ನ ಅನುಭವಿಸಿಕೊಂಡು ಅವರು ಪಡೆದುಕೊಳ್ಳುತ್ತಾ ಇದ್ದಂತ ಒಂದು ರೀತಿಯ ಅನುಭೂತಿ ಇದೆಯಲ್ಲ ಅದಕ್ಕೂ ಈಗ ನಾವು ಕಾವ್ಯಗಳ ಮೂಲಕ ಪಡೆದುಕೊಳ್ಳುವ ಅನುಭೂತಿಗೂ ವ್ಯತ್ಯಾಸವಿದೆ. ಅಂದರೆ ಅವರದು ಮನಸ್ಸು ನಮ್ಮದು ವಿಚಾರ ಎನ್ನುವ ಅಹಂಕಾರ ಇದೆ. ನನಗೆ ಅನಿಸೋದು ಏನೆಂದರೆ ಅವರ ಜತೆ ಬೆರೀತಾ ಅನುಭವಿಸುತ್ತಾ ಅವರ ಜೊತೆ ಜೊತೆ ಮಾತಾಡುತ್ತಾ ಹೋಗೋದು ಒಂದು ಒಳ್ಳೆ ವಿಧಾನ ಅನಿಸುತ್ತೆ. ಅಂದರೆ ಇಂಥ ಕಮ್ಮಟಗಳಿಗೆ ಆ ಲಿಮಿಟೇಷನ್ ಇದ್ದೇ ಇದೆ. ಆದರೆ ಬಸವರಾಜ ಮಾತಾಡುತಾ ಇದ್ದಾಗ ನಮಗೆ ಆಸೆ ಹುಟ್ಟಿಸಿದ್ದು ಏನೆಂದರೆ ನಾವು ಆ ಲೋಕಕ್ಕೆ ಹೋಗಬೇಕು ಅನ್ನೋ ಆಸೇನೂ ಹುಟ್ಟಿಸ್ತು ಅನ್ನೋದು ಮುಖ್ಯ.

ಇಂದ್ವಾಡಿ : ವಿದ್ಯಾಶಂಕರವರಿಗೆ ನನ್ನ ಪ್ರತಿಕ್ರಿಯೆ. ಮಾದೇಶ್ವರ ವೀರಶೈವ ಎನ್ನುವುದಕ್ಕೆ ನೀವು ‘ನಿರಂಜನವಂಶ ರತ್ನಾಕರ’ ‘ಸುತ್ತೂರು ಪೀಠಪರಂಪರೆ’ ಮುಂತಾದ ಆಕರಗಳನ್ನು ಬಳಸುತ್ತೀರಿ. ಆ ಗಳಿಗೆಯಲ್ಲಿ ಜನಪದರು ಹೇಳುವ ‘ಮಾದಾರಿ’ ಮಾದಿಗ ಎಂಬುದನ್ನು ನಿರಾಕರಿಸುತ್ತೀರಿ. ಆದರೆ ಅವನೊಬ್ಬ ಸಮಾಜ ಸುಧಾರಕ ಎಂದು ಕರೆಯಲು ಮಾತ್ರ ಜನಪದ ಪಠ್ಯವನ್ನು ಬಳಸುತ್ತೀರಿ. ಜನಪದ ಪಠ್ಯ ಎಲ್ಲೂ ಸುಧಾರಕ ಎಂಬ ರೀತಿ ಬರೋದೆ ಇಲ್ಲ. ಅವನು ಒಕ್ಕಲಾಗದಿದ್ದವರಿಗೆ ಕಾಟ ಕೊಡುವ, ಹಿಂಸೆ ಕೊಡುವ ವ್ಯಕ್ತಿಯಾಗಿದ್ದಾನೆ. ಇದರಲ್ಲಿ ಸಮಸ್ಯೆ ಇಲ್ಲವೆ?

ವಸು : ಶೈವಿಜಂ ಈಗ ಬೇರೆ ರೂಪಗಳಲ್ಲಿ ಇದೆ. ಜನಪದರ ಶಿವ, ಶಿಷ್ಟ ಶಿವ ಎಂದು ಮೇಲು ನೋಟಕ್ಕೆ ಕಾಣುತ್ತದೆ. ಜನಪದರು ಈಗಾಗಲೇ ಸ್ಥಾಪಿತವಾದ ಶಿವನನ್ನು ಸ್ವೀಕರಿಸುತ್ತಾ ತಮ್ಮದಾಗಿಸಿಕೊಂಡಿರುತ್ತಾರೆ. ಯಾತಕ್ಕೆ ಈ ಚರ್ಚೆ ಮುಖ್ಯವಾಗ್ತಿದೆ ಅಂತಂದ್ರೆ ಕರ್ನಾಟಕದಲ್ಲಿ ಕ್ರಿ.ಪೂ. ೩ನೇ ಶತಮಾನಕ್ಕೆ ಬೌದ್ಧ ಧರ್ಮ ಬರುವಾಗಲೇ ನಮ್ಮಲ್ಲಿ ಮೊಗಲಿತಿಕ್ ಕಲ್ಚರ್ ಇತ್ತು. ಬೌದ್ಧ ಧರ್ಮದ ಸೂಫಗಳನ್ನು ಕಟ್ಟಿ ಸಮಾಧಿಯನ್ನೇ ಆರಾಧಿಸುತ್ತಿದ್ದರು. ಈ ತರದ ಒಂದು ಸಂಸ್ಕೃತೀಕರಣ ಪ್ರಭಾವ ಏಕೆ ಜನಪದರನ್ನು ಕಾಡಿದೆ ಎಂಬುದು ನನ್ನ ಪ್ರಶ್ನೆ.

ಹಳೇಮನೆ : ತಮಾಷೆಯ ಆರ್‌ಗ್ಯೂಮೆಂಟ್‌ಗಳಾದರೂನೂ ಬಹಳ ಅರ್ಥಪೂರ್ಣವಾದ ಆರ್‌ಗ್ಯೂಮೆಂಟ್ ಅಂತ ನನಗೆ ಅನಿಸುತ್ತೆ. ಈ ಹೊತ್ತು ವೀರಶೈವರಲ್ಲಿ ೧೨ನೇ ಶತಮಾನದ ವೀರಶೈವರು ಪ್ರತಿಪಾದಿಸಿದ ಯಾವುದೇ ಪ್ರಭಾವ ಇಲ್ಲದೆ ಇರುವ ಶಿವನನ್ನು ಪ್ರತಿಪಾದಿಸುವ, ಶಿವನನ್ನು ಆರಾಧಿಸುವ, ಶಿವನನ್ನು ಕಲ್ಪಿಸಿಕೊಳ್ಳುವ ಜನ ಜಾಸ್ತಿ ಇದಾರೆ. ೧೨ನೇ ಶತಮಾನದ ಶಿವನನ್ನು ಆರಾಧಿಸುವ ವೀರಶೈವರು ರಿಟೈರ್ಡ್ ಇಂಜಿನಿಯರುಗಳು, ಐ.ಎ.ಎಸ್. ಆಫೀಸರ್‌ಗಳು, ಅವರು ತಮ್ಮ ಇಡೀ ಜೀವನದುದ್ದಕ್ಕೂ ಮಾಡಿದ ಪಾಪವನ್ನು ತೊಳೆದುಕೊಳ್ಳಲಿಕ್ಕೆ ಪರಿಹಾರ ಮಾಡಿಕೊಳ್ಳಲಿಕ್ಕೆ ಇನ್ನೊಂದು ಮಾರ್ಗವನ್ನು ಮಾಡಿಕೊಂಡಿದ್ದಾರೆ ಹೊರತು ನಮ್ಮ ಗ್ರಾಮೀಣ ಪ್ರದೇಶದಲ್ಲಿ ೧೨ನೇ ಶತಮಾನದ ಬಸವ ಆಗಲಿ, ಅಲ್ಲಮ ಆಗಲಿ, ಅಕ್ಕ ಆಗಲಿ, ಯಾವ ರೀತಿ ಪ್ರಭಾವವನ್ನು ಬೀರಿಲ್ಲ. ಅವರಲ್ಲಿ ಒಬ್ಬ ಪ್ರಾಚೀನ ಶಿವ ಈ ಹೊತ್ತಿಗೂ ಅತ್ಯಂತ ವೈಭವಪೂರ್ಣವಾಗಿ, ಜೀವಂತವಾಗಿದ್ದಾನೆ. ಅದನ್ನ ನಾನು ಹೇಳ್ತಾ ಇರೋದು.

ವೆಂಕಟೇಶ್ ಇಂದ್ವಾಡಿ : ಈ ಎರಡು ಜನಪದ ಮಹಾಕಾವ್ಯಗಳ ಸ್ವರೂಪದಲ್ಲಿ ಒಂದು ಗಮನಿಸಬೇಕಾದ ಚಲನೆಯಿದೆ. ಅದು ಉತ್ತರ ದೇಶದಿಂದ ಕತ್ತಲ ರಾಜ್ಯಕ್ಕೆ ಪ್ರಯಾಣ. ಮಾದಪ್ಪ ಭೀಮನಕೊಲ್ಲಿಯಿಂದ ನಾಗಮಲೆಯವರೆಗೆ ಚಲಿಸುತ್ತಾನೆ. ಇದರಲ್ಲಿ ಸೋಲಿಗರು, ಕಂಪಣ ಬೇಡರು ಮುಖ್ಯ ಸಮುದಾಯಗಳಾಗಿ ಕಂಡುಬರುತ್ತಾರೆ. ಈ ವೀರಶೈವರ ಪಾತ್ರ ಆಂಶಿಕವಾಗಿ ಬರುತ್ತದೆ. ಸಂಕಮ್ಮ, ಕಾರಯ್ಯ, ಬಿಲ್ಲಯ್ಯ, ಬೇವಿನಟ್ಟಿ ಕಾಳಮ್ಮ ಜುಂಜೇಗೌಡನ ತರದಲ್ಲಿ ಯಾವುದೇ ಪ್ರಧಾನ ವೀರಶೈವ ವ್ಯಕ್ತಿಯ ಕ್ಯಾರೆಕ್ಟರ್ ಇಲ್ಲ. ಆದ್ದರಿಂದ ಈ ಕಾಡು ದೈವಕ್ಕೆ ಕಾಲಾಂತರದಲ್ಲಿ ಪ್ರಾಶಸ್ತ್ಯ ಬಂದಾಗ ಈ ವೀರಶೈವ ತಳುಕಾಕಿಕೊಂಡ ಹಾಗೆ ಇದೆ. ಏಕೆಂದರೆ ಚಾಮರಾಜನಗರದ ಈ ಭಾಗದಲ್ಲಿ ಸಿದ್ಧಲಿಂಗಯತಿಗಳು ಬಹಳ ದೊಡ್ಡ ಸ್ಥಾಪಿತ ವೀರಶೈವ ಮೂಮೆಂಟನ್ನು ಕಟ್ಟುವ ಪ್ರಯತ್ನ ಮಾಡಿದ್ದಾರೆ. ದಲಿತರನ್ನು ಹೊರತುಪಡಿಸಿದರೆ ಜನಸಂಖ್ಯೆ ದೃಷ್ಟಿಯಿಂದ ವೀರಶೈವರು ಎರಡನೇ ಸ್ಥಾನದಲ್ಲಿ ಇದ್ದಾರೆ. ಇವರು ಈ ಕಾಡುಶಿವನನ್ನು, ವೀರಶೈವ ಶಿವನಾಗಿ ಮಾಡುವ ಪ್ರಯತ್ನ ಮಾಡಿದ್ದಾರೆ. ಒಟ್ಟು ಕಾವ್ಯದ ಬಂಧದಲ್ಲಿ ಈ ವೀರಶೈವರ ಮಠಗಳ ಪಾತ್ರವೇ ಒತ್ತಡದಿಂದ ಬಂದು ಸೇರ್ಪಡೆಯಾದ ಭಾಗವಾಗಿದೆ.

ಬಸವರಾಜ್ : ಇವರೆಲ್ಲರು ತಮ್ಮ ಬೌದ್ಧಿಕ ಚರ್ಚೆಯನ್ನು ಉತ್ತರದಲ್ಲಿ ಮಾಡಿರುವಂತೆ ಕಾಣಿಸ್ತದೆ. ಉತ್ತರ ದೇಶದ ಸಿದ್ಧರಿಂದ ನಾಟಿವೈದ್ಯ, ಮಾಟ ಮಂತ್ರ ವಿದ್ಯೆಗಳನ್ನು ಕಲಿತು ಇವುಗಳ ಪ್ರಯೋಗಕ್ಕೆ ದಕ್ಷಿಣದ ಈ ಕತ್ತಲ ರಾಜ್ಯವನ್ನು ಆಯ್ಕೆ ಮಾಡಿಕೊಂಡಿದ್ದಾರೆ.

ಇಂದ್ವಾಡಿ : ಬಸವರಾಜ್, ಅದು ನಾವು ಗೊತ್ತೋ ಗೊತ್ತಿಲ್ಲದೆಯೋ ಮಂಟೇಸ್ವಾಮಿಯಲ್ಲಿ ಉತ್ತರದೇಶ ಅನ್ನೋದನ್ನ ಉತ್ತರ ಕರ್ನಾಟಕ ಅಂತ ವ್ಯಾಖ್ಯಾನ ಮಾಡಿಕೊಂಡು ಬಿಟ್ಟಿದೀವಿ. ಆದರೆ ಮಾದೇಶ್ವರ ಪ್ರಾಬ್ಲೆಮ್ ಅಂತಂದ್ರೆ ನೀವು ಭೀಮನ ಕೊಲ್ಲಿಯಿಂದ ಆಚೆಗೆ ಅವನ ಯಾವ ಹೆಜ್ಜೆಗಳ ಗುರುತು ಸಿಗಲ್ಲ. ಉತ್ತರದೇಶ ಅನ್ನೋದು ಮಾದಪ್ಪನಲ್ಲಿ ಮೆಟಾಫರ್‌ಗಿ ಬಳಕೆ ಆಗ್ತಾ ಇದೆ.

ವಸು : ಉತ್ತರದೇಶ ಅನ್ನೋದಿಕ್ಕೆ ಪ್ರತಿಕ್ರಿಯಿಸುತ್ತಾ, ಈಗಾಗಲೇ ಬಂದಿರುವಂತ ಸಾಕಷ್ಟು ಶಾಸನಗಳಲ್ಲಿ, ಆ ರಾಜವಂಶಗಳ ಮೂಲಗಳನ್ನು ಹೇಳುವಲ್ಲಿ ಉತ್ತರವನ್ನು ಟ್ರೇಸ್ ಮಾಡುತ್ತಾ ಇರುತ್ತಾರೆ. ಸಾಕಷ್ಟು ಜನಪದ ಕತೆಗಳಲ್ಲೂ ರಾಜಕೀಯ ನಾಯಕರ ಸಂದರ್ಭದಲ್ಲೂ ವಂಶಾವಳಿಗಳನ್ನು ಹೇಳುವಾಗ ಉತ್ತರವನ್ನು ಹೇಳ್ತಾ ಬರುತ್ತಾರೆ. ಉತ್ತರ ನಾಡಿನಿಂದ ಬಂದವರು ಅಂತ. ಇದು ಒಂದು ರೀತಿಯ ಜನಪದ ಕವಿಸಮಯ ಅಂತ ನಾವು ಕರೆದುಕೊಳ್ಳಬಹುದು ಅನಿಸುತ್ತೆ. ಅಂದರೆ ಮೂಲವನ್ನು ಹೇಳುವಾಗ ಇಂತದು ಸಾಕಷ್ಟು ಇದೆ ಈ ಕಾವ್ಯದಲ್ಲಿ. ಅಂತದು ಒಂದು ಅಧ್ಯಯನ ಕೂಡ ಆಗುತ್ತೆ. ಒಂದು ಕಥೆ ಆರಂಭದಲ್ಲಿ ರಚನೆಯಾಗಿ ಅದು ಒಂದು ರೋಲ್ ಮಾಡೆಲ್ ಆಗುತ್ತೆ, ರೋಲ್ ಮಾಡೆಲ್ ಆದ ಮೇಲೆ ಉಳಿದ ಕಥೆಗಳಿಗೆ ಅದು ಒಂದು ರೀತಿಯ ಕವಿಸಮಯದಂತೆ ಬಳಸುತ್ತಾ ಬರುತ್ತಾರೆ. ಈಗ ಕವಿಸಮಯ ಅಂದ್ರೆ ವಸಂತದಲ್ಲಿ ಅದನ್ನು ಕೋಗಿಲೆ ಹಾಡುತ್ತೆ ಅಂತಲೋ ಅಥವಾ ಸ್ವಾತಿಮಳೆ ಬಂದಾಗ ಚಿಪ್ಪು ಮುತ್ತಾಗುತ್ತೆ ಅಂತ ಬಳಸುತ್ತೀವಲ್ಲ ಹಾಗೆ. ಮಹಾಕಾವ್ಯಗಳಲ್ಲಿ ಸಾಮಾನ್ಯವಾಗಿ ಅಷ್ಟಾದಶವರ್ಣನೆಗಳು ಇತ್ಯಾದಿ ಬರುವಂತೆ, ಈ ಉತ್ತರ ದೇಶದಿಂದ ಬರುವುದು ಎಲ್ಲರನ್ನೂ ನಾವು ಟ್ರೇಸ್ ಮಾಡೋದಿಕ್ಕೆ ಸಾಧ್ಯವಿಲ್ಲ. ಅದು ಸಹಜವಾಗಿ ಈಗ ಏಳು ಮಲೆ ಏಳು ಬೆಟ್ಟ ಹುಡುಕಿಕೊಂಡು ಹೋಗೋದಲ್ಲ. ಏಳುಮಲೆ ಅನ್ನುವಂತದು ಏಳು ಅನ್ನುವ ಪದ ಜನಪದರ ಬಹಳ ಪ್ರಿಯವಾದಂತಹ ಸಂಖ್ಯೆಯಾಗಿ ಅದು ಬಳಕೆಯಾಗಿದೆ. ಅದನ್ನ ಲಕಣ್ ತೆಲಗಾವಿ ಅವರ ‘ಏಳು ಎಪ್ಪತ್ತೇಳು’ ಅನ್ನುವ ಒಂದು ಬಹಳ ದೀರ್ಘವಾದ ಲೇಖನದಲ್ಲಿ ಬಹಳ ಚರ್ಚೆ ಮಾಡಿದ್ದಾರೆ. ಏಳು ಒಂದು ಫ್ಯಾನ್ಸಿ ನಂಬರ್ ಆಗಿ ಅದನ್ನ ಸರಳವಾಗಿ ಬಳಸುತ್ತಾ ಹೋಗ್ತಾರೆ. ಹಾಗಂತ ಏಳೇ ಜನ ಸಹೋದರರು ಇದ್ದರಾ ಅನ್ನುವ ಚರ್ಚೆ ಸಹ ಮಾಡಿದ್ದಾರೆ. ಕೆಂಪೇಗೌಡನ ಇತಿಹಾಸದಲ್ಲಿ ಇಂತಹ ಒಂದು ಕಥೆಯನ್ನ ತೆಗೆದುಕೊಂಡು ಏಳು ಜನ ಸಹೋದರರಿಗೆ ಕಡೆಯ ಮಗ ಅನ್ನುವಾಗ ಏಳು ಜನ ಯಾರಿದ್ದರು ಅನ್ನುವ ಹೆಸರು ಸಹ ಇತಿಹಾಸಕಾರರು ಟ್ರೇಸ್ ಮಾಡೋ ಪ್ರಯತ್ನ ಮಾಡಿದರು. ಆದರೆ ಅದು ಏಳು ಅನ್ನುವ ಸಂಖ್ಯೆ. ಅದು ಕವಿ ಸಮಯದಂತೆ ಬರುತ್ತಾ ಹೋಗುತ್ತೆ. ಅದೇ ರೀತಿ ಉತ್ತರದೇಶ ಅನ್ನೋದು ಇರಬೇಕು.

ಸಿ.ನಾಗಣ್ಣ : ಕಿಕ್ಕೇರಿಯವರಿಗೆ ಪ್ರಶ್ನೆ ಇದು. Senciblity is all trade from genaration to genaration but only man of genious can alter exprision ಅಂತ ಟಿ.ಎಸ್. ಎಲಿಯಟ್‌ನ ಮಾತು ಬಹಳ ಜನಜನಿತವಾದ್ದು. ಇದನ್ನು ಈ ಜನಪದ ಕಾವ್ಯದ ಸಂದರ್ಭದಲ್ಲಿ ನಾವು ಜುಂಜಪ್ಪನ ಕಾವ್ಯ, ಮೈಲಾರನ ಕಾವ್ಯ, ಮಂಟೇಸ್ವಾಮಿ ಕಾವ್ಯ, ಮಾದೇಶ್ವರನ ಕಾವ್ಯ ಈ ರೀತಿ ಜನಪದ ಕಾವ್ಯಗಳ ಸಂದರ್ಭದೊಳಗಡೆ ಅರ್ಥ ಮಾಡಿಕೊಳ್ಳುವಾಗ ಭಾಷೆ ದೃಷ್ಟಿಯಿಂದ ಒಂದು ಐರಾರ‍್ಕಿ ಇದೆಯಾ ಅಂತ? ಆ ಪ್ರಶ್ನೆ ಕೇಳುವಾಗ ನನಗೆ ಎರಡು ಅಂಶಗಳು ಮನಸ್ಸಿನಲ್ಲಿ ಇದಾವೆ. ಒಂದು The extant of verbal space, ಅದು ಒಂದು ಕಾವ್ಯದ ಐರಾರ‍್ಕಿನ ಮೇಲ್ಮಟ್ಟಕ್ಕೆ ಇಡೋಕೆ ಐರಾರ‍್ಕಿಯಲ್ಲಿ ಸಹಾಯ ಮಾಡುತ್ತಾ ಅಥವಾ ಕಾವ್ಯದ ಒಳಗಡನೇ ಅಂತರ್‌ಗತವಾಗಿ ಒಂದು ಗುಣಮಟ್ಟದ ಭಾಷೆ ಇರುತ್ತಾ? ಯಾವುದು ಡಿಸೈಡ್ ಮಾಡೋದು, ಈ ಪ್ರಶ್ನೆ ಕೇಳುವಾಗ ಶಿಷ್ಟ ಕಾವ್ಯ A man of genious ಅಂತ ಎಲಿಯಟ್ ಹೇಳುವ ಸಂದರ್ಭದಲ್ಲಿ ಒಬ್ಬ ವ್ಯಕ್ತಿಯ ಕಡೆಗೆ ಅವನು ಬೆರಳು ಮಾಡುತ್ತಿದ್ದಾನೆ. ಆದರೆ ನಮಗೂ, ನಿಮಗೂ ಎಲ್ಲ ಗೊತ್ತಿರುವ ಹಾಗೆ ಜನಪದ ಕಾವ್ಯ ಒಂದು ಸಮುದಾಯದ ಸೃಷ್ಟಿಯಾಗಿದೆ ನಿಜ. ಹಾಗಿದ್ದೂ ಕೂಡ ನಾವು verbal space ಮತ್ತು quality of the language ಎರಡನ್ನೂ ಗಮನದಲ್ಲಿಟ್ಟುಕೊಂಡು ಆ ಐರಾರ್ಕಿನಲ್ಲಿ ಬೇರೆ ಬೇರೆ ಕಾವ್ಯಗಳನ್ನು, ಬೇರೆ ಬೇರೆ ಸ್ಟಾಲ್‌ನಲ್ಲಿ ಇಡೋಕೆ ಸಾಧ್ಯವಾ ಅಂತ?

ಕಿಕ್ಕೇರಿ : ಬಹಳ ಸಂಕೀರ್ಣವಾದ ಪ್ರಶ್ನೆ. ಆದರೆ ಒಂದು ಆಗ್ತಾ ಇರುತ್ತೆ. ನಾವು ಮಲೆಮಾದೇಶ್ವರ ಕಾವ್ಯದ ಭಾಷೆಯನ್ನು ನೋಡಿದರೆ ಅದು ನನಗೆ ಸಾಮಾನ್ಯವಾಗಿ ಮಲೆಮಾದೇಶ್ವರನ ಭಕ್ತರು ಮಾತನಾಡುವ ಭಾಷೆಯಾಗಿ ಮಾತ್ರ ಕೇಳಲ್ಲ, ಅಥವಾ ಆ ಒಕ್ಕಲಿನ ಭಾಷೆಯಾಗಿ ಮಾತ್ರ ಕೇಳಲ್ಲ. ಆದರೆ ಅದರಲ್ಲಿ ಏನಿರುತ್ತೆ. ವಿಶಿಷ್ಟ ರೀತಿಯ ಆಯ್ಕೆ ಮತ್ತು ಸಂಯೋಜನೆಗಳು ಅದರಲ್ಲಿ ನಡೀತಾ ಇರುತ್ತೆ. ಎಂತದೋ ಒಂದು ಸಂಸ್ಕೃತ ಪದ ತಂದು ಹಾಕ್ತಾನೆ. ಆದರೆ ಸಂಸ್ಕೃತ ಪದದ ಮೂಲ ಅರ್ಥ ಅಲ್ಲಿ ಇರೋಲ್ಲ. ಇವನು ಯಾವುದೋ ಒಂದು ಅರ್ಥದಲ್ಲಿ ಅದನ್ನ ಚೇಂಜ್ ಮಾಡಿಕೊಂಡು ಬಳಸುತ್ತಾ ಇರ‍್ತಾನೆ. gemaration ನಿಂದ genarationಗೆ ಇದು ಏನಾಗುತ್ತೆ ಒಂದು ರೀತಿಯ ಸಂಸ್ಕರಣವೂ ಆಗ್ತಾ ಇರುತ್ತೆ ಭಾಷೆ, ಕೆಲವು ಬಿಟ್ಟು ಹೋಗುತ್ತೆ ಮತ್ತೆ ಕೆಲವು ಸೇರಿಕೊಳ್ಳುತ್ತೆ, ನೀವು ಯಾವುದೇ ಕಾವ್ಯದಲ್ಲಿ ಇಂಗ್ಲೀಷಿನ ಪದಗಳು ತಟ್ಟಂತ ಸೇರಿಕೊಳ್ಳೋದು ಇವೆಲ್ಲ ಆಗ್ತಾ ಇರುತ್ತೆ. ಆದರೆ ಒರಿಜಿನಲ್ ಲಾಂಗ್ವೇಜ್ ತರಾನೇ ಇದೆಯ? ಸಂಸ್ಕೃತದ ತರಾನೇ ಈ ಕನ್ನಡ ಪದ ಇದೇನಾ ಅಂತಂದ್ರೆ ಇರಲ್ಲ. ಆದರೆ ಪರಿಕಲ್ಪನೆಯ ಮಟ್ಟದಲ್ಲಿ ಅದು ಪರಿಷ್ಕೃತವಾಗ್ತಾನೆ ಹೋಗ್ತಾ ಇರುತ್ತೆ. ಹೊಸ ಆಯಾಮವನ್ನು ಆ ಪದ ಪಡುಕೊಳ್ಳುತ್ತಾ, ಹೋಗುತ್ತಾ ಇರುತ್ತೆ. ಇದರಿಂದ ಉದಾಹರಣೆ ಕೊಡೋದಾದರೆ ಬೇಂದ್ರೆಯವರ ಯಾವುದೇ ಕಾವ್ಯದ ‘ಮುಗಿಲ ಮಾರಿಗೆ ರಾಗರತಿಯ ನಂಜಾ ಏರಿತ್ತಾ, ಆಗ ಸಂಜೆಯಾಗಿತ್ತಾ.’ ನೋಡಿ ಮುಗಿಲು ಅನ್ನುವ ಪಾಲಿಟಿಕಲ್ ಲಾಂಗ್ವೇಜ್‌ನಿಂದ ಒಂದು ಸೆಲೆಕ್ಟ್ ಮಾಡಿಕೊಂಡ ಪದ, ಮಾರಿ ಅನ್ನೋದು ಡೈಲೆಕ್ಟ್, ಮುಖ ಅನ್ನೋದಕ್ಕೆ ಧಾರವಾಡದಲ್ಲಿ ಹೆಚ್ಚು ಪ್ರಚಲಿತ ‘ಮಾರಿಗೆ’, ‘ರಾಗರತಿ’ ರಾಗ ಅಂತ ಸಂಸ್ಕೃತ ಪದ ಇದೆ. ‘ರತಿ’ ಅಂತ ಸಂಸ್ಕೃತ ಪದ ಇದೆ. ಇವೆರಡು ಒಟ್ಟಿಗೆ ಬೆಳೆದಿರುವಂತದ್ದು ಇವರು ತಂದು ಹಾಕಿದ್ದಾರೆ ಇಲ್ಲಿಗೆ. ರಾಗರತಿಗೆ ನಂಜ ಏರಿತ್ತ. ‘ನಂಜು’ ಅನ್ನೋದು ನಾವು ತಗೋಳ್ಳೋದು Negetive aspect ಆಗಿ. ಆದರೆ ಇವರು positive ಆಗಿ ತಗೊಂಡಿದ್ದಾರೆ. ‘ನಂಜು’ ಅಂದರೆ ಕಲರ್ ಅನ್ನೋ ಅರ್ಥದಲ್ಲಿ ಮಾತ್ರ ತಗೊಂಡಿದ್ದಾರೆ. ಆಗ ಸಂಜೆಯಾಗಿತ್ತಾ. you see, ಈ ರೀತಿ ಭಾಷೆ ಆಯ್ಕೆ ಮತ್ತು ಸಂಯೋಜನೆಯಲ್ಲಿ ಇದು ನಡೀತಾ ಇರುತ್ತೆ. ಇದು ಮಹಾಕಾವ್ಯದಲ್ಲಿ ಯಾವಾಗಲೂ ನಡೀತಾ ಇರುತ್ತೆ. ಅದಕ್ಕೋಸ್ಕರ ಕೆಲವನ್ನ ಸೆಲೆಕ್ಟ್ ಮಾಡಿಕೊಳ್ತಾರೆ, ಕೆಲವನ್ನ ಬಿಡ್ತಾ ಇರ‍್ತಾರೆ. ಉದಾಹರಣೆಗೆ ಈಗ ಆದಿ ಪರಾಶಕ್ತಿಯನ್ನ ಇವರು ಮಲೆ ಮಾದೇಶ್ವರ ಕಾವ್ಯದವರು ಬಳಸಿಕೊಂಡಿರುವುದಕ್ಕೂ ಇನ್ನೊಂದು ಕಡೆ ನಮಗೆ ಸಿಗುವ ಆದಿ ಪರಾಶಕ್ತಿ ಇದಾಳಲ್ಲ ಅವಳಿಗೂ ತುಂಬಾ ವ್ಯತ್ಯಾಸ ಇದೆ. ಆದರೆ ಆದಿಪರಾಶಕ್ತಿ ಅಂತ ಇವರೂ ಉಪಯೋಗಿಸ್ತಾರೆ. ಹೆಸರೇ ಆದಿಪರಾಶಕ್ತಿ ಕೌಟ್ಲು ಅಂತ ಹೇಳ್ತಾರೆ. ಅಂದರೆ ಅರ್ಥ ಏನು? ಅಲ್ಲಿ ಆದಿಪರಾಶಕ್ತೀನ ಇವರು ಕನ್‌ಸಿವ್ ಮಾಡಿಕೊಂಡೋರ ರೀತೀನೇ ಬೇರೆ. ಆದರೆ ಅವರಿಗೆ ಭಾಷೆ ಇರೋದು ಏನು ಸಂಸ್ಕೃತದಿಂದಲೋ ಎಲ್ಲೋ ಇದ್ದುದ್ದನ್ನೋ ತಗೊಳ್ಳಬೇಕಾಗುತ್ತೆ. ತಗೊಂಡು ಆ ರೀತೀನೇ ಉಪಯೋಗಿಸಲ್ಲ ಅವರು ಪರಿಕಲ್ಪನೆಯಲ್ಲಿ ಅದನ್ನ ಬದಲಾವಣೆ ಮಾಡಿಕೊಂಡು ತಮ್ಮದಾಗಿ ಮಾಡಿಕೊಂಡಿರುತ್ತಾರೆ. ಭಾಷೆ ಯಾವಾಗಲೂ ಹೀಗೆ ಕೆಲಸ ಮಾಡುತಾ ಇರುತ್ತೆ. ಅದಕ್ಕೋಸ್ಕರ ನಾನು ಮಾದೇವನ ‘ಕುಸುಮಬಾಲೆ’ನ ನಂಜನಗೂಡು ಕನ್ನಡ ಅಂದರೆ ಬರೀ ನಂಜನಗೂಡು ಕನ್ನಡ ಅಲ್ಲ. ನಂಜನಗೂಡಿನೋರಿಗೆ ಓದಿದರೂ ಅದು ಅರ್ಥ ಆಗಲ್ಲ. ಯಾಕೆಂದರೆ ಅದು ಬೇರೆ ಬೇರೆ ರೀತಿಯ ಭಾಷೆಗಳ ಕಾಕು ಧ್ವನಿ ಇವುಗಳ ಎಲ್ಲ ಮಿಶ್ರಣ ಹೀಗೆ ಒಬ್ಬ ಮಾಡ್ತಾನೆ. ಇದನ್ನ ಪರಂಪರೆಯಿಂದ ಮಾಡಿಕೊಂಡು ಬರ‍್ತಾ ಇರ‍್ತಾರೆ. ಆದ್ದರಿಂದ ಅದಕ್ಕೆ ಒಂದು ಹೊಸ ರೀತಿಯ ಹೊಸ ಭಾಷೆಯಾಗಿ ಉಪಯೋಗ ಇದೆ. ಬೇರೆ ಬೇರೆ ರೀತಿಯಲ್ಲಿ ಅದನ್ನು ಆಯ್ಕೆ ಮತ್ತು ಸಂಯೋಜನೆಯಲ್ಲಿ ಒಳಗೊಳ್ಳುವಂತೆ ಮಾಡಿ ಒಂದು ಹೊಸ ರೀತಿಯ ಆದರೆ ಸಂಪೂರ್ಣವಾಗಿ ಹೊಸದಲ್ಲ ನಿಮಗೆ ಆದಿ ಪರಾಶಕ್ತಿ ಸಂಪೂರ್ಣವಾಗಿ ಹೊಸದಲ್ಲ ಯಾವುದೋ ಒಂದು ಕಾನ್‌ಸೆಪ್ಟ್ ಆಗ್ಲೇ ಇದೆ ಅದನ್ನ ಮುರಿದಿರ‍್ತಾರೆ. ಇದನ್ನೇ ನಾನು ಒಳಗಡೆಯಿಂದ ಮುರಿದಿರುವಂತದ್ದು ಅಂತ ಕರೀತೇನೆ.