.ಎಲ್. ನಾಗಭೂಷಣ ಸ್ವಾಮಿ: ಸ್ನೇಹಿತರೆ ಬೆಳಗಿನಿಂದ ಜನಪದದ ಬಗ್ಗೆ ಮಾತನಾಡೋದು ಕೇಳಿಸಿಕಳ್ತಾ ನನ್ನ ಮನಸ್ಸಿನಲ್ಲಿ ಹುಟ್ಟಿದ ವಿಚಾರ. ಇದು ಯಾರಿಗೂ ನಿರ್ದಿಷ್ಟವಾದ ಪ್ರಶ್ನೆಯಲ್ಲ. ಎಲ್ಲರೂ ಸೇರಿ ಚರ್ಚೆ ಮಾಡಬಹುದು ಅಂದ್ಕೊಂಡಿದ್ದೀನಿ. ಅದು ಜನಪದ ಟೆಕ್ಸ್ಟ್‌ಗಳ ಸ್ವರೂಪವನ್ನು ಕುರಿತದ್ದು ಮತ್ತು ಅದನ್ನು ನೋಡೋದನ್ನ ಕುರಿತ ಪ್ರಶ್ನೆ.

ಬಹಳ ಸರ್ತಿ ನಾವು ಈ ಜನಪದ ಮಹಾಕಾವ್ಯಗಳು ಅಂತ ಕರೆಯೋದನ್ನ ರಾಮಾಯಣ ಮತ್ತು ಮಹಾಭಾರತದ ಜೊತೆ ಹೋಲಿಸಿ ಅದಕ್ಕಿಂತ ಹ್ಯಾಗೆ ಭಿನ್ನ ಅಂತ ಇತ್ಯಾದಿಯೆಲ್ಲ ಮಾತಾಡ್ತೀವಿ. ಜನಪದ ಟೆಕ್ಸ್ಟ್‌ಗಳನ್ನು ಮುಕ್ತ ಪಠ್ಯಗಳು ಅಂತೆಲ್ಲ ಕರೀತೇವೆ. ಆದರೆ ಕೆಲವು ಸಾರ್ತಿ ಅನ್ಸುತ್ತೆ, ರಾಮಾಯಣ, ಮಹಾಭಾರತಗಳು ಒಂದು ಭಾಷೆಯಾಗಿ ಬೆಳೆದುಕೊಂಡು ಬಿಟ್ಟವು. ಅದು ಎಷ್ಟರ ಮಟ್ಟಿಗೆ ಅಂದರೆ ಒಂದೊಂದು ಮಹಾಭಾರತದ ಕಥನದಲ್ಲಿ ಒಂದೊಂದು ರಾಮಾಯಣದ ಕಥನದಲ್ಲಿ ಹೀರೋಗಳೆಲ್ಲ ವಿಲನ್‌ಗಳಾಗೊಕೂ ಸಾಧ್ಯವಿದೆ. ರಾಮನನ್ನು ಪ್ರಶ್ನಿಸುವ ಅಥವಾ ಅವನ ನೈತಿಕತೆಯನ್ನು ಅಲ್ಲಾಡಿಸುವ ಅಥವಾ ಅವನ ನಿಲುವನ್ನು ತಿರಸ್ಕರಿಸುವ ಅವಕಾಶಗಳನ್ನು ಮಹಾಭಾರತ, ರಾಮಾಯಣ ಅಂತ ಕ್ಲಾಸಿಕ್‌ಗಳು ತಮ್ಮೊಳಗೆ ಒಂದು ಸ್ಪೇಸ್ ಅನ್ನು ಕ್ರಿಯೇಟ್ ಮಾಡಿಕೊಳ್ತವೆ. ಅದನ್ನಿಟ್ಟುಕೊಂಡು ಬೇರೆ ಬೇರೆ ಕಥನಗಳು ರಾಮಾಯಣ ಮತ್ತು ಮಹಾಭಾರತದಲ್ಲಿ ಹುಟ್ಟಿಕೊಳ್ತವೆ. ಅಂದರೆ ನಾವು ಯಾವುದನ್ನು ಕ್ಲಾಸಿಕ್ ಅಂತ ಕರಿತೇವೋ ಆ ಟೆಕ್ಸ್ಟ್‌ಗಳು ಒಂದು ನಿಜವಾದ ಅರ್ಥದಲ್ಲಿ ತುಂಬಾ ಓಪನ್ ಟೆಕ್ಸ್ಟ್‌ಗಳು. ಆದರೆ ಈ ಮೇಲೆ ಮಾದೇಶ್ವರ – ಮಂಟೇಸ್ವಾಮಿ ಇಂತ ಯಾವುದೇ ಜನಪದ ಮಹಾಕಾವ್ಯಗಳಲ್ಲಿ, ವಿವರಗಳಲ್ಲಿ ವ್ಯತ್ಯಾಸ ಇರುತ್ತೆ. ಆದರೆ ಕಥೆಯ ಮೂಲ ದ್ರವ್ಯ ಇದೆಯಲ್ಲ. ಕಥೆಯ ನಾಯಕ ಪಾತ್ರ ಇದೆಯಲ್ಲ ಅವು They are always fixed. ನಾನು ಹೇಳಿದ್ದು ಸ್ಪಷ್ಟ ಆಯಿತು ಅನ್ಕೊಂಡಿದೀನಿ. ಹಾಗಾಗಿ ಈ ಕೃತಿಗಳಲ್ಲಿ ವಿವರಗಳಲ್ಲಿ ಮಾತ್ರ ವ್ಯತ್ಯಾಸವಿರುವ, ಆದರೆ ಮೂಲ ದ್ರವ್ಯದಲ್ಲಿ, ಮೂಲ ಪಾತ್ರಗಳಲ್ಲಿ ಸ್ಥಗಿತತೆಯನ್ನು ಹೊಂದಿರುವ ಕೃತಿಗಳನ್ನು ನಿಜವಾಗಿ ಓಪನ್  ಟೆಕ್ಸ್  ಅಂತ ಕರೆಯೋದಿಕ್ಕೆ ಸಾಧ್ಯವೆ ಅನ್ನೋದು ನನ್ನನ್ನು ಕಾಡ್ತಾ ಇರೋ ಒಂದು ಪ್ರಶ್ನೆ.

ಎರಡನೆಯದು ನನ್ನ ತಲೆಗೆ ಬಂದ ಇನ್ನೊಂದು ಮಾತು ಅಂತ ಅಂದರೆ, ಇದು ಮಾತು ಕೇಳಿಸ್ತಾ ಹುಟ್ಟಿಕೊಂಡ ಪ್ರತಿಕ್ರಿಯೆ. ಇದನ್ನು ಪ್ರೂವ್ ಮಾಡೋದಿಕ್ಕಾಗ್ಲಿ, ಡಿಸ್‌ಪ್ರೂವ್ ಮಾಡೋದಿಕ್ಕಾಗ್ಲಿ ನನಗೆ ಗೊತ್ತಿಲ್ಲ. ಬೋರಲಿಂಗಯ್ಯನವರು ಮಾತಾಡ್ತಾ ಮಾದಪ್ಪನ ಪಾತ್ರದ ಬಗ್ಗೆ ಹೇಳಿಕೊಂಡು ಹೊರಟರಲ್ಲ, ಆಗ ಮಾದಪ್ಪ ಕೂಡ ಜನಪದರು ಸೃಷ್ಟಿಸಿಕೊಂಡ ಕೃಷ್ಣ ಪಾತ್ರ ಇರಬಹುದಾ ಅಂತ ಅನಿಸೋಕೆ ಶುರುವಾಯಿತು. ಗೊತ್ತಿಲ್ಲ ಸುಮ್ಮನೆ ಹೇಳ್ತಿರೋದು. ಆಮೇಲೆ ಮೌಲ್ಯ, ಒಡೆತನ, ಸಾಮ್ರಾಜ್ಯ, ಸ್ಪಿರಿಚುವಲ್, ಹಿಸ್ಟಾರಿಕಲ್  ಈ ಮಾತುಗಳನ್ನು ಹೇಳಿದರಲ್ಲ. ಹೀಗೆ ನೋಡುವ ಕ್ರಮ ಇದೆಯಲ್ಲಿ ಒಂದು ಜನಪದ ಕಾವ್ಯಾನ, ಇದು ನಮ್ಮ ಕ್ಲಾಸಿಕ್‌ಗಳನ್ನು ನೋಡುವ ದೃಷ್ಟಿಯ ಇನ್ನೊಂದು ವಿಸ್ತರಣೆ ಅಷ್ಟೆ ಅಲ್ವಾ? ಇದೇ ಮಾತುಗಳನ್ನು ರಾಮಾಯಣಕ್ಕೂ, ಮಹಾಭಾರತಕ್ಕೂ ಅಪ್ಲೈ ಮಾಡಬಹುದು. ಅಲ್ಲಿ ಮೌಲ್ಯದ ಪ್ರಶ್ನೆ ಇದೆ. ಒಡೆತನದ ಪ್ರಶ್ನೆ ಇದೆ. ಸಾಮ್ರಾಜ್ಯದ ಪ್ರಶ್ನೆ ಇದೆ. ಸ್ಪಿರಿಚುವ್ಯಾಲಿಟಿ ಪ್ರಸ್ನೆ ಇದೆ. ಹಿಸ್ಟಾರಿಕಲ್ ಪ್ರಶ್ನೆ ಇದೆ. ಅಂದರೆ ನಾವು ಜನಪದ ಅಂತ ಕರೆಯುವ ಪಠ್ಯಗಳಿದ್ದವಲ್ಲ. ಅವನ್ನ ನೋಡುವ ಕ್ರಮ ಕೂಡ  ನಾವು ಈಗಾಗಲೇ ಸಿದ್ಧವಾಗಿರೋ ಕ್ರಮಗಳಿಂದ ಬಿಡಿಸಿಕೊಳ್ಳಲಿಕ್ಕೆ ಹಾಗೆ ಇಲ್ಲವೇನೋ ಅನ್ನಿಸಲಿಕ್ಕೆ ಶುರುವಾಯಿತು. ಸೋ ಇಷ್ಟು ನಾನು ಹೇಳಬೇಕಂತಿರೋ ಪ್ರಶ್ನೆಗಳು. ಯಾರನ್ನೂ ನಿರ್ದಿಷ್ಟವಾಗಿ ಉದ್ದೇಶಿಸಿದ ಪ್ರಶ್ನೆಗಳಲ್ಲ ಈ ಬೆಳಗಿನಿಂದ ಮಾತು ಕೇಳುತ್ತಾ ಬಂದ ಪ್ರಶ್ನೆಗಳು.

ಹಿ.ಚಿ. ಬೋರಲಿಗಯ್ಯ : ನಾಗಭೂಷಣಸ್ವಾಮಿಯವರು ಇದನ್ನು ಜನಪದ ಕಾವ್ಯ ಅಂತ ಯಾಕೆ ಕರೀತೀರಿ – ಅಂತನೆ ಮೊದಲಿನಿಂದಲೂ ಅವರು ಕೇಳುತ್ತಾ ಇರುವ ಮೂಲಭೂತವಾದ ಪ್ರಶ್ನೆ. ಕನ್ನಡ ವಿಶ್ವವಿದ್ಯಾಲಯದಲ್ಲಿ ನಾವು ಅನೇಕ ಸಲ ಅದರ ಬಗ್ಗೆ ಚರ್ಚೆಯನ್ನು ಮಾಡಿದ್ದೀವಿ. ಜನಪದ ಕಾವ್ಯ ಅದನ್ನು ಮೀರಿ ನಾವು ಬುಡಕಟ್ಟು ಕಾವ್ಯ ಅಂತ ಕೂಡ ಕರೆದ್ವೀ. ಸ್ವಾಮಿಯವರು ಹೇಳುವುದರಲ್ಲಿ ನಿಜವಾದ ಅರ್ಥ ಇದೆ. ಯಾಕೆಂದರೆ ಜನಪದ ಕಾವ್ಯ ಅಂತಾನೆ ಕರೆಯುವ ಮೂಲಕ ಅದಕ್ಕೊಂದು ಸೀಮಿತತೆಯನ್ನ ನೀವು ಮಾಡುತಾ ಇದ್ದೀರಿ ಅಂತಾನೇ ಸ್ವಾಮಿಯವರು ಎಷ್ಟೋ ಸಲ ಹೇಳಿದ್ದಾರೆ. ಆದರೆ ಎಲ್ಲೋ ಒಂದು ಕಡೆಗೆ ಐಡೆಂಟಿಟಿಯ ಕ್ರೈಸಿಸ್ ಇತ್ತಲ್ಲ ನಮಗೆ ಅಥವಾ ನಮಗೆ ಅನ್ನುವುದಕ್ಕಿಂತ ಈ ಜನಪದ ಜಗತ್ತಿಗೆ, ಆ ಐಡೆಂಟಿಟಿಯ ಕ್ರೈಸಿಸ್‌ನಿಂದ ಬಹುಶಃ ನಾವು ಹಾಗೆ ಕರೆದ್ವೀ ಅಂತ ನನಗೆ ಅನಿಸ್ತಿದೆ. ಹಾಗೆ ಕರೆದದ್ದನ್ನು ಸರಿ ಅಂತ ನಾನು ಒಪ್ಪೋದಿಲ್ಲ. ಆದರೆ ರಾಮಾಯಣ ಮಹಾಭಾರತಕ್ಕೆ ಇರುವ ಒಂದು ರೀತಿಯ ಮರ್ಯಾದೆ ನಮಗಿಲ್ವಲ್ಲ ಅನ್ನೋ ಕಾರಣಕ್ಕಾಗಿ… ಆ ಐಡೆಂಟಿಟಿಯ ಕಾರಣಕ್ಕಾಗಿ, ನಾವು ಬುಡಕಟ್ಟು ಕಾವ್ಯ ಎಂದು ಕರೆದ್ವಿ, ಇದರಲ್ಲಿ ಅಕಾಡೆಮಿಕ್ ಪೊಲಿಟಿಕ್ಸ್ ಇರಬಹುದು. ಇನ್ನೊಂದು ತಾವು ಹೇಳಿದ ಹಾಗೆ ಈ ರೀತಿಯ ಐತಿಹಾಸಿಕ ವಿಶ್ಲೇಷಣೆಯಿಂದ ರಾಮಾಯಣ, ಮಹಾಭಾರತಗಳಲ್ಲಿ ಮಾಡಿರುವ ಹಾಗೇನೇ ಜನಪದ ಕಾವ್ಯಕ್ಕೂ ಮಾಡಬಹುದು ಅನ್ನೋ ಕಾರಣಕ್ಕಾಗಿ ಹೇಳಿದೆ. ಅಂದರೆ ರಾಮಾಯಣ, ಮಹಾಭಾರತವನ್ನು ಮೌಲ್ಯಮಾಪನ ಮಾಡೋದಿಕ್ಕೆ ನಾವು ಯಾವ ಯಾವ ಕ್ರಮಗಳನ್ನು ಬಳಸುತ್ತೀವಿ ಅಂತ ಎಲ್ಲ ಕ್ರಮಗಳನ್ನು ಕೂಡ ಇಲ್ಲಿಯೂ ಬಳಸಿದಾಗ ಅದನ್ನು ಸಾಂಸ್ಕೃತಿಕ ವಿಶ್ಲೇಷಣೆ ಮಾಡಿದಂಗೆ ಆಗುತ್ತದೆ. ಯಾಕೆಂದರೆ ಇಲ್ಲಿಯವರೆಗೆ ಕೇವಲ ಪ್ರಸ್ತಾವನೆಗಳಲ್ಲಿ ಕಲಾವಿದರ ಬಗ್ಗೆ ಹಾಗೂ ಕಷ್ಟ ಸುಖಗಳ ಬಗ್ಗೆ ಹೇಳಿಕೊಳ್ಳುತ್ತಿದ್ದೇವಲ್ಲ ಅದನ್ನು ಈ ರೀತಿ ವಿಸ್ತರಿಸೋಕೆ ಸಾಧ್ಯತೆ ಇದೆಯೇನೋ ಮತ್ತು ಅದು ಈಗಾಗಲೇ ನಡೀತಾ ಇರುವಂತದೂ ಕೂಡ. ಓಪನ್ ಟೆಕ್ಸ್ , ಅನ್ನುವ ವಿಚಾರದಲ್ಲಿ ಬಹುಶಃ ನಿಮಗೇ ಚೆನ್ನಾಗಿ ಗೊತ್ತಿದೆ ನಮ್ಮೆಲ್ಲರಿಗಿಂತ.

.ಎಲ್.ಎನ್.: ಒಂದೇ ಒಂದು ಸಣ್ಣ ಉದಾಹರಣೆ ಹೇಳ್ತೀನಿ. ಇತ್ತೀಚೆಗೆ ‘ಬ್ಯಾರಿ ರಾಮಕೃಷ್ಣ’ ಅಂತ ಒಂದು ನೋಡಿದೆ. ಮಲಯಾಳಂನಿಂದ ಕನ್ನಡಕ್ಕೆ ಅನುವಾದ ಆಗಿದೆ. ಅದರಲ್ಲಿ ಸೀತೆಯನ್ನು ಮತ್ತೆ ರಾಮ ಕಾಡಿಗೆ ಕಳಿಸೋದಿಕ್ಕೆ ಕಾರಣ ಆಗೋರು ರಾಮನ ಅಮ್ಮ ಮತ್ತು ಚಿಕ್ಕಮ್ಮ ಕೌಸಲ್ಯ, ಸುಮಿತ್ರೆ, ಇವರಿಬ್ಬರು ಸೀತೆಯ ಹತ್ತಿರ ಚಿತ್ರ ಬರೆಸಿಕೊಂಡು ರಾಮನ ಎಲೆ ಅಡಿಕೆ ತಟ್ಟೆ ಕೆಳಗಿಟ್ಟು ಅವನಿಗೆ ಅನುಮಾನ ಬರುವ ಹಾಗೆ ಸೀತೆ ಮೇಲೆ ಚಾಡಿ ಹೇಳಿ ಇವಳ ಕಟ್ಟಿಕೊಂಡು ಏನು ಸುಖಪಟ್ಟೆ, ಅಂತ ಅವನು ಮನಸ್ಸು ಕೆಡಿಸಿ ಕಾಡಿಗೆ ಓಡಿಸುತ್ತಾರೆ. ಅಂದರೆ ರಾಮಾಯಣದಂತಾ ಒಂದು ಕಾವ್ಯ ಇಡೀ ಇಂಡಿಯಾ ದೇಶದ ಒಂದು ಕಥನದ ಭಾಷೆ ಆದಾಗ ಏನಾಗುತ್ತದೆ ಎಂದರೆ ಕೆಲವು ಕಡೆ ಅಗಸ ಆ ಕೆಲಸ ಮಾಡ್ಯಾನು. ಕೆಲವು ಕಡೆ ಇನ್ನಾರೋ ಕೊರವಂಜಿ ಬಂದು ಮಾಡಿಯಾಳು. ಇನ್ನೆಲ್ಲೋ ಕೆಲವು ಕಡೆ ಅತ್ತೆಯರು ಆ ಕೆಲಸ ಮಾಡಿಯಾರು. ಅಲ್ಲಿ ಮಾಡಿಕೊಳ್ಳೋ ವ್ಯತ್ಯಾಸಗಳಿಂದ ಆ ರಾಮಾಯಣದ ಕಥೆಗೆ ಎಂಥ ಓಪನ್ನೆಸ್ ಬಂದು ಬಿಡುತ್ತದೆ ಅಂದರೆ, ನಾವು ಯಾವುದನ್ನು ಮೂಲ ರಾಮಾಯಣ ಅನ್ನುತ್ತೀವೋ ಅದರ ವಿರುದ್ಧವೇ ಜಗಳ ಆಡೋಕೆ ಶುರು ಮಾಡಿಕೊಳ್ಳುತ್ತವೆ. ಹಾಗೆ ಈ ಜನಪದ ಕಾವ್ಯಗಳು ಅಂತ ಕರೆಯೋ ಟೆಕ್ಸ್ ಗಳಿದಾವಲ್ಲ ಇವುಗಳಲ್ಲಿ ಟೆಕ್ಸ್ ನ ವಿರುದ್ಧವೇ ಅಥವಾ ಅದಕ್ಕೆ ಇನ್ನೊಂದು ಡೈರೆಕ್ಷನ್ ಹೋಗುವಂತ ರೀತಿಯಲ್ಲಿ ಈ ಕಾವ್ಯಗಳನ್ನು ಭಾಷೆಯಾಗಿ ಬಳಸಿಕೊಂಡು ಬೇರೆ ಬೇರೆ ಪಾಠಗಳು ಹುಟ್ಟಿಕೊಂಡಿಲ್ಲ ಅಂತ ಅನಿಸುತ್ತೆ. ವಿವರಗಳಲ್ಲಿ ವ್ಯತ್ಯಾಸ ಇರುತ್ತೆ but ಅಷ್ಟರ ಮಟ್ಟಿಗೆ ಇವು Fixed textಗಳಿರಬಹುದಾ? ಆದರೆ ಹಾಗೆ ಆಗೋಕೆ ಕಾರಣ ಏನಿರಬಹುದು? ಅನ್ನೋದು ಯೋಚನೆ ಮಾಡೋಕೆ ಹೊರಟರೆ, ನಮ್ಮ ಸಾಂಸ್ಕೃತಿಕ ಸನ್ನಿವೇಶ ಇತ್ಯಾದಿ ಏನೇನೋ ಅದರಲ್ಲಿ ತುಳುಕಾಕಿ ಕೊಂಡಿರಬಹುದು. ನನಗೆ ಉತ್ತರ ಗೊತ್ತಿಲ್ಲ. ಒಂದು ಪ್ರಶ್ನೆ ಮಾತ್ರ ತಮ್ಮೆದುರಿಗೆ ಇಡ್ತಾ ಇದ್ದೀನಿ.

ಹಿ.ಚಿ.ಬೋ: ಅದು ಸರಿ. ಅದು ಯೋಚನೆ ಮಾಡಬೇಕಾಗಿರುವಂತದ್ದು. ಏಕೆಂದರೆ ಆ ದೃಷ್ಟಿಯಿಂದನೇ ಲೋಹಿಯಾ ಹೇಳೋದು ಎಷ್ಟು ರಾಮಾಯಣಗಳಿವೆ, ಎಷ್ಟು ಜನ ರಾಮರಿದ್ದಾರೆ ಅದನ್ನು ಈ ರೀತಿ ಹೇಳಿ ಬಿಟ್ಟರೆ ಹ್ಯಾಗೆ, ಐತಿಹಾಸಿಕ ದೃಷ್ಟಿಯಿಂದ ಅಂತ.

.ಎಲ್.ಎನ್: ಅಂದರೆ ಎಷ್ಟು ಮಲೆ ಮಾದೇಶ್ವರ ಪಠ್ಯಗಳಿದ್ದರೂನು ಮಲೆ ಮಾದೇಶ್ವರ ಒಬ್ಬನೇ ಇರುತ್ತಾನೆ. ಚೇಂಜ್ ಆಗೋಲ್ಲ ಅವನು.

ಹಿ.ಚಿ.ಬೋ: ಆದರೆ ಅದಕ್ಕೂ ಬಹುಶಃ ಕಾರಣ ಹಿಂಗಿರಬಹುದಾ ಅಂತ. ಒಂದು ಈ ಮಲೆ ಮಾದೇಶ್ವರ ಅನ್ನುವಂತದ್ದೂ ಒಂದು ‘ಪ್ಯಾನ್ ಇಂಡಿಯನ್ ಟೆಕ್ಸ್ ’ಗೂ ಇಲ್ಲಿರತಕ್ಕಂತ ಒಂದು ಸ್ಥರ್ಳಯವಾದ ಕಾವ್ಯಕ್ಕೂ ವ್ಯತ್ಯಾಸಗಳಿವೆ. ಅಂಗೊಂದು ಸ್ಥಳೀಯವಾದ ಒಂದು ನಿರ್ದಿಷ್ಟ ಪ್ರದೇಶದ ಮತ್ತು ಕೆಲವು ಸಮುದಾಯಗಳಷ್ಟೇ ಮಾಡುವಂತ ಸಂದರ್ಭದಲ್ಲಿ ಓಪನ್ನೆಸ್ ಆಗಲಿಕ್ಕೆ ಅದಕ್ಕೆ ಅದರದ್ದೇ ಆದಂತಹ ಒಂದು ಸಾಮಾಜಿಕವಾದ ಕಾರಣಗಳಿರುತ್ತವೆ ಅಂತ ನನಗೆ ಅನಿಸುತ್ತೆ.

ಕಿಕ್ಕೇರಿ ನಾರಾಯಣ : ನನಗೆ ಅನಿಸೋದು ಜನಪದ ಮತ್ತು ಶಿಷ್ಟಪಠ್ಯಗಳಲ್ಲಿ ಇರುವ ಸಂಬಂಧವನ್ನು ನಾವು ನೋಡಬೇಕಾದರೆ ಜನಪದ ಪಠ್ಯ ಹೇಗಿರುತ್ತದೆ ಎಂದರೆ, ಪ್ರತಿ ಬಾರಿಯೂ ಅದನ್ನು ಒಬ್ಬ ಗಾಯಕನೋ ಯಾರೋ ಅದನ್ನು ಸೃಷ್ಟಿ ಮಾಡಬೇಕು. ಪ್ರತಿ ಬಾರಿ ಮಾಡುತ್ತಾ ಇರುತ್ತಾನೆ ಅವನು. ಅದರ ಜೊತೆಗೆ ಬರಿ ಆ ಟೆಕ್ಸ್  ಅಲ್ಲ ಉತ್ಪತ್ತಿಯಾಗೋದು. ಅದರ ಜೊತೆಗೆ ರಿಚುವಲ್ಸ್ ಇರುತ್ತೆ. ಯಾರೂ ಹೇಳೋಕಾಗಲ್ಲ ಅದನ್ನು ಯಾರೋ ಒಬ್ಬ ಹಾಡೋದಕ್ಕೆ ಸಮಾಜ ಒಂದು ರೀತಿಯ ತರಬೇತಿಯನ್ನು ಕೊಟ್ಟಿರುತ್ತೆ. ಅವನ ದೇಹವನ್ನು ದಂಡಿಸಿಕೊಂಡು, ಉಪವಾಸ ಮಾಡಿಕೊಂಡು ಅದನ್ನ ಕಲಿಯಬೇಕಾಗುತ್ತೆ. ಹೇಳುತ್ತಾ ಹೋಗಬೇಕಾಗುತ್ತೆ. ಮಾಡುತ್ತಾ ಇರಬೇಕಾಗುತ್ತೆ. ಆ ದೃಷ್ಟಿಯಲ್ಲಿ ಟೆಕ್ಸ್  ಪಿಕ್ಸ್ ಆಗಿಲ್ಲ. ಆಮೇಲೆ ನನಗೆ ಬಂದ ಅನುಭವ ಟೆಕ್ಸ್  ಬಗ್ಗೆ ಇನ್ನೊಂದು ಬಹಳ ಇಂಪಾರ್‌ಟೆಂಟ್ ಅಂದರೆಈ ಮಲೆ ಮಾದೇಶ್ವರ ಕಾವ್ಯದ ಪಠ್ಯವನ್ನು ಬೇರೆ ಬೇರೆ ರೀತಿಯಲ್ಲಿ ಉಪಯೋಗಿಸುವಂತದು ಬಹಳ ಮುಖ್ಯ ನಮಗೆ. ಎಲ್ಲಿ ಟೆಕ್ಸ್  ಏನಾಗುತ್ತೆ ಅಂತಂದರೆ… ‘ಒಬ್ಬ ಆಕೆ ಸತ್ತಿದಾಳೆ, ಹತ್ತನೇ ದಿವಸದ ಕಾರ್ಯಕ್ಕೆ ‘ತಂಬೂರಿ ಮಹಾದೇವಯ್ಯ ಅಂತ ನಿಮಗೂ ಗೊತ್ತು ಅವರನ್ನ ಕರೆಸ್ತೀವಿ. ನೀವು ಬನ್ನಿ ಅಲ್ಲಿ ಅಂತ ಹೇಳಿದರು’ ಆವಾಗ ನಾನು ಹೋಗಿ ನೋಡಿದೆ. ಅಲ್ಲಿ ಬಹಳ ಇಂಟ್ರೆಸ್ಟಿಂಗ್ ಆಗಿತ್ತು. ಅವರು ಹೇಳಿದ್ದು, ಎಲ್ಲಿಂದ ಶುರು ಮಾಡಲಿ ಅಂತ ಕೇಳಿದರು. ಆವಾಗ ಅವರು ಹೇಳಿದರು ಸಂಕಮ್ಮನ ಸಾಲಿಂದ ಶುರುಮಾಡಿ ಅಂತ. ಈಗ ನೋಡಿ, ಹಾಡುವವರಷ್ಟೆ ಟೆಕ್ಸ್  ಬಗ್ಗೆ ತಿಳುಕೊಂಡಿರೋರು ಅಲ್ಲಾ ಕೇಳುಗರು ಬೇಕಾದಷ್ಟು ಇದ್ದಾರೆ. ಸಂಕಮ್ಮನ ಸಾಲೇ ಏಕೆ ಅಂದರೆ ಅಲ್ಲಿ ಸತ್ತಿದ್ದು ಒಬ್ಬ ಹೆಣ್ಣು ಮಗಳಾದ್ದರಿಂದ, ತಾಯಿಯಾದ್ದರಿಂದ. ಸತ್ತವರು ಪರಿಚಯ ಇದ್ದುದ್ದರಿಂದ ಅಥವಾ ಬೇರೆಯವರಿಂದ ಕೇಳಿ ತಿಳುಕೊಂಡಿದ್ದರಿಂದ ಆ ಹೆಣ್ಣಿನ ಬಗ್ಗೆ ಅವಳನ್ನು ಸಮೀಕರಿಸಿ ಒಂದು ಟೆಕ್ನ್ನ ಅಲ್ಲೇ ಕ್ರಿಯೇಟ್ ಮಾಡಿದ. So it become present also. It is not some thing past. ಈಗಲೂ ಆ ಟೆಕ್ಸ್  ಅವತಾರ ಎತ್ತುತ್ತಾ ಇರುತ್ತೆ. ಆದ್ದರಿಂದ ಟೆಕ್ಸ್  is very open.

ಇನ್ನೊಂದು ಬಹಳ ಮುಖ್ಯವಾದ್ದು ಏನೆಂದರೆ ಜನಪದ ಟೆಕ್ಸ್  ಅಲ್ಲಿ ಒಂದು ಅಪಾಲಜಿ ಕೊಡಬೇಕಾದರೆ ಭೂಮಿ ಮತ್ತು ಸೂರ್ಯ, ಭೂಮೀನೂ ಸುತ್ತುತ್ತಾ ಇರುವ ಹಾಗೆ ಸೂರ್ಯನೂ ಸುತ್ತುತ್ತಾ ಇರುವ ಹಾಗೆ ಇರುವಂತ ಒಂದು ಟೆಕ್ಸ್  ಏಕೆಂದರೆ ನಾವು ಬರೆದ ಟೆಕ್ಸ್ ನಲ್ಲಿ ಈಗ ‘ರಾಮಾಯಣ ದರ್ಶನಂ’ ಅಂತ ಕುವಂಪು ಬರೆದು ಟೆಕ್ಸ್ ನಲ್ಲಿ ನಾವು ಏನು ಚೇಂಜ್ ಮಾಡೋಕೆ ಹೋಗಲ್ಲ. ನಾವು ಅದನ್ನು ಓದಿ ವ್ಯಾಖ್ಯಾನಗಳನ್ನ ಕೊಡಬಹುದು. ಆದರೆ ಟೆಕ್ಸ್ ನ್ನ ಒಂದು ಅಕ್ಷರ ಬದಲಾಯಿಸಲ್ಲ. ‘ರಾಮಾಯಣ ದರ್ಶನಂ’ ಪಿಕ್ಸ್ ಟೆಕ್ಸ್  ಆಗಿರುತ್ತೆ. ಆದರೆ ಜನಪದದಲ್ಲಿ ಟೆಕ್ಸ್ ನ ಸೃಷ್ಟಿ ಮಾಡೋನು ಮತ್ತು ಟೆಕ್ಸ್ ನ ಕೇಳೋನೂ, ಇಬ್ಬರೂನೂ ಆ ಸಂದರ್ಭದಲ್ಲಿ ಬದಲಾವಣೆಗೆ ಒಳಗಾಗುತ್ತಾ ಇರುತ್ತಾರೆ ಅನ್ನುವುದು ಬಹಳ ಮುಖ್ಯ. ಆಮೇಲೆ ಓಪನ್ ಎಂಡೆಡ್ ಅಲ್ಲ ಅಂದ್ರೆ It is highly open ended. ಏಕೆಂದಂದ್ರೆ  ನಾವು ಮತ್ತೆ ಸಾಹಿತ್ಯದ ಟೆಕ್ಸ್  ಪ್ರಕಾರ ಟ್ರೀಟ್ ಮಾಡೋಕೆ ನೋಡತೀವಿ, ಏಕೆಂದರೆ ರಿಚ್ಯುವಲ್ ಮತ್ತೆ ಅದಕ್ಕೆ ಸಂಬಂಧಪಟ್ಟಂತಹ ಸಂದರ್ಭ, ಇವುಗಳನ್ನು ನಾವು ನೋಡಿಕೊಳ್ಳದಿದ್ದರೆ ಪ್ರಾಯಶಃ ಜನಪದ ಟೆಕ್ಸ್ ನ್ನು ನಾವು ಪೂರ್ಣವಾಗಿ ಅರ್ಥಮಾಡಿಕೊಳ್ಳಲಿಕ್ಕೆ ಆಗೋಲ್ಲ ಅನ್ನುವಂತಾದ್ದು.

ಇನ್ನೊಂದು ಚರಿತ್ರೆಗೆ ಸಂಬಂಧಪಟ್ಟ ಹಾಗೆ ನೀವು ಮಾತನಾಡಿದ್ರಲ್ಲ. ಚರಿತ್ರೆ ಅನ್ನೋದು ಮಾದೇಶ್ವರ ಯಾವ ಜಾತೀಲಿ ಹುಟ್ಟಿದ ಅನ್ನೋದಲ್ಲ ಚರಿತ್ರೆ. ಆದರೆ ಟೆಕ್ಸ್ಟ್‌ಗಳೇನಾಗುತ್ತಾ ಇರುತ್ತೆ ಅಂತಂದ್ರೆ ನೀವು ಹೇಳಿದ ಹಾಗೆ ಸೇರಿಸಿಕೊಳ್ಳುತ್ತಾ ಇರುತ್ತೆ. ಸೇರಿಸಿಕೊಳ್ಳುವುದರ ಜೊತೆಗೆ ಬಿಡ್ತಾನೂ ಇರುತ್ತೆ. ಎಷ್ಟೋ ಭಾಗಗಳನ್ನು ಬಿಡುತ್ತೆ ಮತ್ತೆ ಎಷ್ಟೋ ಭಾಗಗಳನ್ನು ಸೇರಿಸಿಕೊಳ್ಳುತ್ತೆ. ರಾಜಶೇಖರ ಅವರು ಸಂಗ್ರಹ ಮಾಡಿದ ವೀರಮಹಾಕಾವ್ಯ ಇದೆಯಲ್ಲ ‘ಪಿರಿಯಾಪಟ್ಟಣ ಕಾಳಗ’ ಟೆಕ್ಸ್ ಗಳ ಅನೇಕ ಸ್ತರಗಳನ್ನು ಸೇರಿಸಿರುವಂತಹದನ್ನ ತುಂಬಾ ಚೆನ್ನಾಗಿ ಗುರುತಿಸಬಹುದು. ಪಿರಿಯಾಪಟ್ಟಣ ಕಾಳಗದಲ್ಲಿ ನೂರುವರ್ಷ ಹಳೆಯದಾಗಿರುವಂತ ‘ಕ್ಲಾಕ್ ಟವರ್’ ಬರುತ್ತೆ. ಅಂದರೆ ಅದನ್ನ ಸೇರಿಸಿಕೊಳ್ತಾನೆ. Text is so open there. ಅವನಿಗೆ ಬೇಕಾದಾಗ ಅವನು ಸೇರಿಸಿಕೊಳ್ಳುತ್ತಾನೆ. ಹೊಸ ರೀತಿಯ ಮಿಥ್ ಸೃಷ್ಟಿಸೋದಿಕ್ಕೆ ಶುರು ಮಾಡುತ್ತಾನೆ. ಅವರ ಕಾವ್ಯ ಒಂದು ಮಿಥ್‌ನಿಂದ ಶುರುವಾಗುತ್ತೆ. ಕ್ರಿಯೇಷನ್ ಮಿಥ್‌ನಿಂದ ಎಂಡ್ ಆಗೋದು ಎಲ್ಲಿ ಅಂತಂದ್ರೆ ಇಂದಿರಾ ಗಾಂಧಿ ಮೀಸೆ ಇಲ್ಲದವಳು ರಾಜ್ಯ ಆಳಿದೋಳು. Its a reaction to the present also. ಮಿಥ್ ಯಾವಾಗಲೂ It is a reaction to the past, present and future ಅದು ಮಿಥ್. ಚರಿತ್ರೆಯನ್ನು ನೋಡುವ ಜನಪದ ರೀತಿ ಇದು. ಅದನ್ನು ನಾವು ಅರಿತುಕೊಳ್ಳದೆ ಇದ್ದರೆ ಪ್ರಾಯಶಃ ನಾವು ಚರತ್ರೆಯನ್ನು ಆ ತರದಲ್ಲಿ ನೋಡೋಕೆ ಆಗೋಲ್ಲ. ಇದು ಹುಟ್ಟಿನ ಬಗ್ಗೆ ಚರಿತ್ರೆಯಲ್ಲ ಟೆಕ್ಸ್  ಬೆಳೆದು ಬಂದ ಬಗೆಯ ಚರಿತ್ರೆಯಾಗಿರುತ್ತೆ. ಅದಕ್ಕೋಸ್ಕರ ಏನಾಗಿರುತ್ತೆ ಚರಿತ್ರೆಯಲ್ಲಿ ಕೆಲವು ಬಿಟ್ಟೋಗಿರುತ್ತೆ ಅದನ್ನು ಸೇರಿಸಬೇಕಾಗುತ್ತದೆ. ಈಗ ಶ್ರವಣನ ಬಗ್ಗೆ ಬಂದಾಗ ಅವನು ಆ ಕಾಲದವನಾಗಿಲ್ಲದಿರಬಹುದು ಶ್ರವಣನದು ಇನ್ನೂ early year.  ಆದರೆ ಅವರು ಯಾಕೆ ತಗೊಂಡು ಬಂದ್ರು. ನೋಡಿ ಅನಾಲಾಜಿ ಎಷ್ಟು ಚೆನ್ನಾಗಿ ಇದೆ. ರಾವಣ ತರಾನೇ ಇರ‍್ತಾನೆ ಅವನು. ಶ್ರವಣ, ರಾವಣ ಇಬ್ಬರೂ ಒಂದೇ ತರ ಇರುತ್ತಾರೆ. ಮಿಥ್ ಮಾಡುವ ಪ್ರೋಸಸ್ ಇದು. ಅವರಿಗೆ  ಡೇಟೆಡ್ ಹಿಸ್ಟರಿ ಇಂಪಾರ್‌ಟೆಂಟ್ ಅಲ್ಲ. ಅದು ಮನಸ್ಸಿಗೆ ಸಂಬಂಧಪಟ್ಟ ಚರಿತ್ರೆಯಾಗಿರಬೇಕು. ಈ ಲೀನಿಯರ್ ಹಿಸ್ಟರಿ. ಮುಖ್ಯವಲ್ಲ ಮಿಥಿಕಲ್ ಹಿಸ್ಟರಿ ಮುಖ್ಯವಾಗುತ್ತೆ. ಅದಕ್ಕೋಸ್ಕರ ಅಲ್ಲಿ ಒಂದು ಮಹಾಕಾವ್ಯದಲ್ಲಿ ಇವೊತ್ತಿನ ರಿಯಾಕ್ಷನ್ ಅದರೊಳಗಡೆ ಸೇರಿಕೊಂಡಿರಬಹುದು. Its highly open text. ಈಗ ರಾಮಾಯಣದಲ್ಲಿ ಸ್ಟ್ಯಾಂಡರ್‌ಡೈಜೇಷನ್ ಒಂದು ವರ್ಷನ್ ಎಲ್ಲಿರುತ್ತೆ. ಇಲ್ಲ. ರಾಮಾಯಣದಲ್ಲಿ ಸಾವಿರಾರು ವರ್ಷನ್ ಇದೆಯಲ್ಲ. ಯಾವ ವರ್ಷನ್ ನಾವು ಹೇಳಾಕೋಗ್ತೀವಿ ಆ ವರ್ಷನ್‌ಗಳು ನಮಗೆ ಮುಖ್ಯ ಆಗುತ್ತೆ. ಅಲ್ಲಿ ಪ್ರತಿ ಒಂದು ಟೆಕ್ಸ್ ನಲ್ಲ ಪಠ್ಯದಲ್ಲೂ ಈ ರೀತಿ ಕುರುಡುದಾಣಗಳಿರುತ್ತೆ. ಆ ಕುರುಡುದಾಣವನ್ನು ಪ್ರತಿ ಸಲವೂ ಎಕ್ಸ್‌ಪ್ಲೋರ್ ಮಾಡುತ್ತಾ ಇರುತ್ತಾನೆ. ಹಾಡೋನು. ಆ ಸಮಾಜಗಳ ಪರಂಪರೆಯೇ ಅಲ್ಲಿ ಬರುತ್ತಾ ಇರುತ್ತೆ ಮಹಾಕಾವ್ಯದಲ್ಲಿ.

ಇನ್ನೊಂದು ನೀವು ಹೇಳಿದಿರಲ್ಲ ಇವರು ಯಾವಾಗಲೂ ಮೂವ್ ಆಗುತ್ತಾ ಇರ‍್ತಾ ಇದ್ದರು ಅಂತ, ಒಂದು ಕಾಲದಲ್ಲಿ ಮೂವ್ ಆಗುತ್ತಾ ಇದ್ರು ಹೌದು ಚಲಿಸುತ್ತಾ ಇದ್ದರು. ನೋಮ್ಯಾಡ್ಸ್ ತರ ಇದ್ರು. ಯಾರು ಈ ಹೀರೋಗಳು. ಮಲೆ ಮಾದೇಶ್ವರ ಅವನಿಗೆ ಒಂದು ಮಠ ಸ್ಥಾಪಿಸಿಕೋಬೇಕು ಅಂತಂದ್ರೆ ನೂರೆಂಟು ವಿಘ್ನಗಳು, ಅದಕ್ಕೋಸ್ಕರ ಹೋಗಿ ಜಮೀನು ಕಿತ್ಕೊಂಡು ಬರ‍್ತಾನೆ. ಅದಕ್ಕೋಸ್ಕರ ಹೊಡೀತಾನೆ, ಬಡೀತಾನೆ, ಅವನಿಗೆ ಇರೋ ಆಸೆ ಆಕಾಂಕ್ಷೆಗಳೆಲ್ಲ ಎಂತದು. ಯಾರು ಈ ವಿಷ್ಣು ದೇವರಿಗೆ ಇಷ್ಟೊಂದು ಕೊಟ್ಟಿದ್ದಾರಲ್ಲ ನನಗೆ ಕೊಟ್ಟಿಲ್ವಲ್ಲ. ನಾನುಇದೆಲ್ಲ ತೊಗೋಬೇಕು ಅಂತ ಮನುಷ್ಯ ತರಾನೆ ಅವನಿಗೂ ಇರೋ ಆಸೆ ಆಕಾಂಕ್ಷೆಗಳು. ಆಮೇಲೆ ಅವನ ಕಷ್ಟ, ಯಾರೋ ಬರ‍್ತಾರೆ ಆ ಮಲೆಯಿಂದ ಆಚೆ ಕಡೆ ಬರ್ತಾರೆ. ಕಿಚ-ಪಿಚ ಅಂತ ಮಾತಾಡ್ತಾರೆ. ನನಗೆ ಅವರ ಮಾತು ಅರ್ಥ ಆಗೋದಿಲ್ಲ. ಅವನಿಗೆ ನೆತ್ತಿಗೆ ಎಣ್ಣೆ ಹಾಕೋರೊಬ್ಬರು ಬೇಕಾಗಿರುತ್ತೆ. ಇದನ್ನು ನಾವು ಈ ತರದಲ್ಲಿ ಓದಿದಾಗ ಮಾತ್ರ ನಮಗೆ ನಿಜವಾಗಿ ಅವರು ಆ ಹೋರಾಟ, ಡೆವಲಪ್‌ಮೆಂಟ್ ಈ ಎಲ್ಲವನ್ನು ನಾವು ಕಾಣ್ತಾ ಇರ‍್ತೀವಿ. ಇದು ಪ್ರಾಯಶಃ ಜನಪದ ಪಠ್ಯಕ್ಕೆ ಮಾತ್ರ ಸಾಧ್ಯವಾಗುತ್ತೆ ಅಂತ ಕಾಣ್ಸುತ್ತೆ. ಆದ್ದರಿಂದ ನಾವು ಪಠ್ಯವನ್ನು ಬೇರೆ ರೀತಿಯಲ್ಲಿ ನೋಡಿಬೇಕು. Its a discontinus history ಅಂತಾನೆನೋಡಬೇಕಾಗುತ್ತೆ. continus history ಅಲ್ಲ, ಅದು past, present, future ಯಾವ ಕಾಲದಲ್ಲಾದರೂ ನಡೆದಿರಬಹುದು. ಆದರೆ ಒಂದಂತೂ ನಿಜ. there is a basic text. ಅದನ್ನು ಬಿಟ್ಟು ಅವರು ಆಚೆ ಈಚೆ ಹೋಗಲ್ಲ. ಒಂದು Frame work ಇರುತ್ತೆ. ಈ ಕ್ಯಾರೆಕ್ಟರ್ ಹೀಗೆ, ಈ ಕ್ಯಾರೆಕ್ಟರ್ ಹೀಗೆ ಅಂತ ಆ ವ್ಯಾಕರಣ ಇಟ್ಟುಕೊಂಡು ಅದನ್ನು ಬದಲಾಯಿಸಿಕೊಳ್ತಾ ಹೋಗ್ತಾ ಇರ‍್ತಾರೆ. ಅದನ್ನು ನಾವು Indises ಅಂತಲೂ ಹೇಳಬಹುದು. ನಮ್ಮ ರಾಜಶೇಖರ್ ಕಲೆಕ್ಟ್ ಮಾಡಿರೋ ಟೆಕ್ಸ್  ಮಾಡಿರೋ ಟೆಕ್ಸ್  ನೋಡಿ ಅದರಲ್ಲಿ ಮೊದಲು ಆದಿಶಕ್ತಿ ಬಹರುತ್ತಾಳೆ. ಆದಿಶಕ್ತಿ ಕವಟ್ಲು ವಂಡರ್ಫುಲ್ ಕವಟ್ಲು ಅದು. ಹೆಣ್ಣು ಗಂಡಿನಿಂದ ಕಿತ್ತುಕೊಳ್ಳುವಂತ ಪವರ್, ನಾಲೆಡ್ಜ್, ಸೆಕ್ಸ್‌ವ್ಯಾಲಿಟಿ, ಮೂರು ಇದೆ. ಲಿಂಬೆ ಹಣ್ಣಿನಂತ ಯೌವ್ವನ ತನ್ನ ಕಾಮವನ್ನು ಮಟ್ಟ ಮಾಡಿಕೊಳ್ಳಲು ಅವಳೇ ಸೃಷ್ಟಿ ಮಾಡಿಕೊಳ್ಳುವ ಹುಡುಗರು, ಮಕ್ಕಳು ಕನೆಗೆ ಅವಳಿಗೆ ತಿರುಗಿ ಬಿದ್ದಾಗ ಏನು ಮಾಡ್ತಾಳೆ. ತ್ರಿಮೂರ್ತಿಗಳ ಪವರನ್ನು ಕಿತ್ತುಕೊಳ್ಳುತ್ತಾಳೆ. ವಿಷ್ಣುವಿನಿಂದ ಚಕ್ರ, ಶಿವನಿಂದ ಬೆತ್ತ ಇತ್ಯಾದಿ.

ಆ ಕಂಸಾಳೆ ಅದು ಯಾತಕ್ಕೆ ಬಂತು, ಯಾತಕ್ಕೆ ಅದನ್ನು ಮಾಡುತ್ತಾರೆ, ಅದು ಯಾರು ಮಾಡ್ತಾರೆ. ಎಲ್ಲರೂ ಮಾಡಬಹುದಾ ಪರ್ಟಿಕುಲರ್ ವ್ಯಕ್ತಿಗಳು ಮಾಡಬಹುದಾ? ಇದನ್ನೆಲ್ಲ ಅಧ್ಯಯನ ಮಾಡಬೇಕು. ಆಮೇಲೆ ಆ ಬಾಡಿ ಲಾಂಗ್ವೇಜ್ ನೋಡಿ ಹುಲಿ ಸಿಂಹಗಳಿಂದ ಅಥವಾ ಹಾವುಗಳಿಂದ ರಕ್ಷಿಸಿಕೊಳ್ಳುವಂತ ಬಾಡಿಲಾಂಗ್ವೇಜ್ ಕ್ರಿಯೇಟ್ ಆಗಿರುತ್ತೆ. ಥ್ಯಾಂಕ್ಯು.

ವೆಂಕಟೇಶ್ ಇಂದ್ವಾಡಿ : ಓ.ಎಲ್.ಎನ್. ಸಾರ್ ಹೇಳ್ತಿರೋದು ಮಾದೇಶ್ವರ ಪಠ್ಯ ಮಾದೇಶ್ವರ ಒಬ್ಬ ಅನ್ನೋ ವಿಷಯಕ್ಕಾದರೂ ಪಿಕ್ಸ್  ಆಗಿಲ್ವ ಅಂಥಾ. ನನಗೂ ಮೊದಲು ಅಲ್ಲಿ ಒಬ್ಬ ಮಾದೇಶ್ವರ ಇಲ್ಲ ಅಂಥಾನೆ ಅನ್ಸಿದ್ದು. ಹದಿನೈದನೇ ಶತಮಾನದ ಅಲ್ಲಮನನ್ನ ಎಟುಕಿಸಬೇಕಾದರೆ ಅಲ್ಲಮ ಮತ್ತೊಬ್ಬ ಮಂಟೇಸ್ವಾಮಿಯಾಗಿ ಹುಟ್ಟುತ್ತಾನೆ. ಮತ್ತೆ ಅವನ ಮುಂದೆ ೧೯ನೇ ಶತಮಾನದಲ್ಲಿ ಇನ್ನು ಯಾವನೋ ಆ ಆಶಯಗಳನ್ನು ಈಡೇರಿಸಿಕೊಂಡು ಬರುತ್ತಾ ಇದ್ದಾಗ ಮೊದಲು ಹುಟ್ಟಿದ ಅಲ್ಲಮ ಬೇರೆ ರೂಪಗಳಲ್ಲಿ ಹೊರ ಹೋಗಿರ‍್ತಾನೆ. ಆದರೆ ಈ ಹಿಸ್ಟಾರಿಸೈಜ್ ಮಾಡ್ತೀವಲ್ಲ ಇದರ ಸಮಸ್ಯೆ ಏನೆಂದರೆ, ಮಿಥ್‌ಗಳನ್ನು ಮಾಡಿದರೆ ಸಮಸ್ಯೆ ಇಲ್ಲ. ಅದನ್ನ ಇತಿಹಾಸೀಕರಿಸೋ ಪ್ರಯತ್ನದ ಹಿಂದೆ ಒಂದು ಬಹುದೊಡ್ಡ ಒಂದು ಪೊಲಿಟಿಕ್ಸ್ ನಡೀತದೆ. ಅಂದರೆ ಜನಪದರು ಇತಿಹಾಸವನ್ನು ಪುರಾಣೀಕರಿಸುವ ಪ್ರಯತ್ನ ಮಾಡುತ್ತಾರೆ. ಆದರೆ ಪ್ರಭುತ್ವದ ಸಂಬಂಧ ಇರತಕ್ಕಂತವರೆಲ್ಲ ಪುರಾಣವನ್ನು ಇತಿಹಾಸೀಕರಿಸುವ ಪ್ರಯತ್ನ ಮಾಡುತ್ತಾರೆ. ಉದಾಹರಣೆಗೆ ರಾಮಜನ್ಮ ಭೂಮಿ, ಬಾಬಾಬುಡನ್‌ಗಿರಿ ಇವೆಲ್ಲ ಏನಾಗಿವೆ? ಈಗ ಚರಿತ್ರೆಯ ದಾಖಲೆಗಳನ್ನು ಗುರುತಿಸಿ ಅದನ್ನು ಹಿಂದಕ್ಕೆ ಎಳೆಯುವ ಪ್ರಯತ್ನ ಮಾಡುತ್ತಿದ್ದಾರೆ. ಅಥವಾ ಈ ಚರಿತ್ರೀಕರಣಗೊಳಿಸುವ ಹಿಂದಿನ ಪೊಲಿಟಿಕ್ಸ್‌ಗಳಿದಾವಲ್ಲ ಇವುಗಳ ಬಗ್ಗೆಯೂ ನಾವು ಬಹಳ ಎಚ್ಚರಿಕೆ ವಹಿಸಬೇಕಾಗುತ್ತದೆ. ಹಿಸ್ಟಾರಿಸೈಜ್ ಮಾಡೋದು ಅನ್ನೋದಾದರೆ ಅದನ್ನ ಪೊಲಿಟಿಕ್ಸ್‌ನ ಜೊತೆ ಸೇರಿಸಿಕೊಳ್ಳೋ ಒಂದು ಪ್ರಕ್ರಿಯೆ ನಡೀತಿದೆ. ಜನಪದ ಅಭಿವ್ಯಕ್ತಿ ಮಾಧ್ಯಮಕ್ಕೆ ಆ ಒತ್ತಡ ಇಲ್ಲ. ಜನಪದಕ್ಕೆ ಬಹಳ ದೊಡ್ಡ ಸ್ಕಿಲ್ ಇರೋದೂ ಅದು ಎಲ್ಲವ್ನು ಪುರಾಣೀಕರಣಗೊಳಿಸುವ ಎಲ್ಲವನ್ನು ಒಳಗೊಂಡು ನೋಡುವ ಒಂದು ಸ್ಪೇಸ್ ಅಲ್ಲಿರುತ್ತೆ ಇದು ನನಗೆ ಬಹಳ ಮುಖ್ಯ ಅನ್ಸುತ್ತೆ.

ಕಿಕ್ಕೇರಿ ನಾರಾಯಣ : ಆ ಇದು ಬಹಳ ಮುಖ್ಯ. ನಾವು Folklorist ಆಗಿ ರಾಮಜನ್ಮಭೂಮಿ ಬಗ್ಗೆ ನಾವು ರಿಯಾಕ್ಟ್ ಮಾಡಿದಿವಾ ಅಂತ. ನೀವು ಹಿಸ್ಟಾರಿಸೈಜ್ ಮಾಡೋದು ಅಂತಾ ಹೇಳ್ತಾ ಇದೀರಲ್ಲ ಅದು ಹಿಸ್ಟಾರಿಸೈಜ್ ಮಾಡೋದಲ್ಲ. ಅದು ಏನ್ ಮಾಡ್ತಾ ಇದ್ದರಾ ಅಂತಂದ್ರೆ ಒಂದು ರೀಡಿಂಗ್ ಮಾತ್ರ ಕೊಡ್ತಾ ಇದಾರೆ. ಅದು ಫಂಡಮೆಂಟಲಿಸ್ಟ್ ರೀಡಿಂಗ್, ಯಾಕೆಂದರೆ ರಾಮ ಇಲ್ಲೇ ಹುಟ್ಟಿದ ಅನ್ನುವಂತದು. ಜನಪದರು ರಾಮ ಮೈಸೂರಲ್ಲಿ ಹುಟ್ಟಿದ್ದು. ಹಂಪೆನಲ್ಲಿ ಹುಟ್ಟಿದ್ದು. ಕಿಕ್ಕೇರಿನಲ್ಲೂ ಹುಟ್ಟಿದ್ದು. ಆಗ ಎಲ್ಲ ಬರ‍್ತಾದೆ. ಸೀತೆ ಬರ‍್ತಾಳೆ ಸೀತೆ ಸೆರಗು ಅಂತ ಇದೆ ಎಲ್ಲ ಊರುಗಳಲ್ಲೂ ಸಿಗುತ್ತೆ. ಇದನ್ನು ಮಲ್ಟಿಪಲ್ ಟೆಕ್ಸ್  ಅನ್ನುವಂತದ್ದು ಮಲ್ಟಿಪಲ್ ಪೊಜಿಷನ್ ಅನ್ನುವಂತಾದ್ದು. ಇದರಿಂದ ಜನಪದದಿಂದ ನಾವು ಕಲಿಯುವಂತಾದ್ದು ಇದು ನೀವು ಯಾವಗ ಒಂದು ಟೆಕ್ಸ್  ಮಾತ್ರ ಅಂತ ಬಾಬ್ರಿಮಸೀದಿಯಲ್ಲಿ ರಾಮ ಹುಟ್ಟಿದ ಅಂತ ತಿಳೀಬೇಕಾಗುತ್ತೆ. ಈ ಫಂಡಮೆಂಟಲಿಜಮ್  ನಾವು ಎದುರಿಸಬೇಕಾದರೆ ಮಲ್ಟಿಪಲ್ ಟೆಕ್ಸ್  ಕಾನ್‌ಸೆಪ್ಟನ್ನು ಉಪಯೋಗಿಸಿ ಎದುರಿಸಬೇಕಾಗುತ್ತದೆ. ಆದ್ದರಿಂದ ಹಿಸ್ಟರಿ ಅನ್ನೋದನ್ನು ಆ ತರ ಎಲ್ಲ ನೋಡುವಂತಾದ್ದು. ಒನ್ ಮೀನಿಂಗ್, ಒನ್ ಹಿಸ್ಟರಿ ಇಲ್ಲ. There are ಹಿಸ್ಟರೀಸ್ ಅಂತ ನೋಡೋದರಿಂದ ಮಾತ್ರ ಇದಾಗುತ್ತೆ. ಜನಪದ ಕಾವ್ಯಗಳೂ ನಮಗೆ ಕೊಡುವ ದೊಡ್ಡ ಕೊಡುಗೆ ಏನು ಅಂತಂದ್ರೆ ಮಲ್ಟಿಪಲ್‌ಸಿಟಿ, ಮಲ್ಟಿಪಲ್ ಮೀನಿಂಗ್.

.ಎಲ್.ಎನ್: ಒಂದು ನಿಮಿಷ ನಾರಾಯಣ, ಹಾಗೆ ನೋಡೋಕೆ ಹೋದರೆ ಇಲ್ಲಿ ಮಾದಪ್ಪನ ಕತೆಯಲ್ಲಿ ಬರುವ ಎಲ್ಲ ಊರುಗಳು, ಆ ಊರಲ್ಲಿದ್ದ ಮುಖಂಡರು, ಆ ಊರಲ್ಲಿ ಮಾಡಿದ ಮಾದಪ್ಪನ ಸಾಹಸಗಳು, ಇವೆಲ್ಲ ಆರ್ ದೇ not regidly Fixed than the story of Ramayana. ನೀವು. ಹೇಳಿದ ಹಾಗೆ ದೇಶದಲ್ಲೆಲ್ಲ ರಾಮಾಯಣ ಇದೆ ಅನ್ನೋ ಹಾಗೆ ಈ ಕತೆಯನ್ನು ಮಾಡಿಕೊಳ್ಳೋದಿಕ್ಕೆ ಸಾಧ್ಯವೇ ಇಲ್ಲ ಅನ್ನೋ ಹಾಗೆ ಆಗಿಬಿಟ್ಟಿದೆ.

ಕಿಕ್ಕೇರಿ : ಇಲ್ಲ, ಮಹಾಕಾವ್ಯಗಳಲ್ಲಿ ಹಾಗೆ ಆಗುತ್ತೆ. ಏಕೆಂದರೆ ಇರೋನು ಹಾಗೆ ಇರಬೇಕಾದಿಲ್ಲ. ನಮಗೆ ಯಾಕೆ ಕನ್‌ಪ್ಯೂಜನ್ ಅಂದರೆ ಯಾವುದೋ ಒಂದು ಕೆಟ್ಸ್ಟನ್ನು ಹಿಡಿದುಕೊಂಡು ನೋಡೋದರಿಂದ ಈ ಊರಿನ ಸ್ಥಳ ಆಯಿತು.

.ಎಲ್.ಎನ್. ಅಲ್ಲ. ಫೋಕ್ ಡಿರವೇಷನ್ ಬಗ್ಗೆ ನಾನು ಹೇಳ್ತಿಲ್ಲ. ಈಗ ಮಂಟೇಸ್ವಾಮಿ ಕೊಡೇಕಲ್ಲು ಕಲ್ಯಾಣದಿಂದ ದಕ್ಷಿಣಕ್ಕೆ ಬಂದ ದಾರಿ ಊರುಗಳು ಆ ಊರುಗಳಲ್ಲಿ ಇರುವ ಅವರ ಗದ್ದುಗೆಗಳು. ಇವೆಲ್ಲವೂ ಕೂಡ They are more Historically  Fixed that the story of Ramayana. ಹಾಗಾಗಿ ರಾಮಾಯಣ ಇಡೀ ದೇಶದಲ್ಲಿ ರಾಮ ಇಲ್ಲಿ ಬಂದ, ಇಲ್ಲಿ ವನವಾಸ ಮಾಡಿದ ಹೇಳಿಕೋಬಹುದು. ಆದರೆ ಮಂಟೇಸ್ವಾಮಿ, ಮಲೆ ಮಾದೇಶ್ವರನ ಹಾಗೆ ನೀವು ಆ ಪ್ರದೇಶದಿಂದ, ಆ ಊರಿನಿಂದ  ಆ ನೆಲದಿಂದ ಕಿತ್ತುಕೊಂಡು ಬರೋದು ಕಷ್ಟ ಆಗುತ್ತೆ. ಆ ಭಾಗದಲ್ಲೇ ಕೂಡ ಫಿಕ್ಸ್ ಅಲ್ವಾ ಅವು.

ಕಿಕ್ಕೇರಿ : ಇಲ್ಲ ಇಲ್ಲ, ಏಕೆಂದರೆ ನಾವು ಇನ್ನೊಂದು ಮಹಾಕಾವ್ಯವನ್ನು ರೇಕಾರ್ಡ್ ಮಾಡಿದ್ವೀ. ಡೋಮ್ಯಾಸ್ಟಿಕ್ ವರ್ಷನ್ ಯಾವುದು ಅಂದರೆ ವೀರರಾಜನ ಕಾವ್ಯ ಬರುತ್ತಲ್ಲ ‘ಪಿರಿಯಾ ಪಟ್ಟಣದ ಕಾಳಗ’ ದಲ್ಲಿ ಯಾವುದು ನೀವು ಹೇಳಿದಾಗೆ ಕಥೆ ಹಳ್ಳಿಗಳಲ್ಲಿ ಬರುತ್ತೆ. ಮೈಸೂರಿಂದ ಹಿಡಿದು ಪಿರಿಯಾಪಟ್ಟಣದವರೆಗೆ ಹೆಸರುಗಳು ಬರುತ್ತೆ, ಅದು ಏನಾಗಿರುತ್ತೆ ಅಂದ್ರೆ But once again historise ಆಗಿರುತ್ತೆ. ಅದನ್ನ ಬೇರೆ ಬೇರೆಯಾಗಿ ಇಂಟರ್‌ಪ್ರಿಟ್ ಮಾಡಬಹುದು: It is never a manolithic text in any sence of the term.

ಲಿಂಗದೇವರು ಹಳೇಮನೆ: ಈಗ ನಾಗಭೂಷಣ ಸ್ವಾಮಿ ಎತ್ತಿದ ಪ್ರಶ್ನೆ ಮತ್ತು ನಾರಾಯಣ ಅವರು ಹೇಳಿದ ವಿವರಣೆ ಇವುಗಳ ಬಗ್ಗೆ ವಿಚಾರಣೆ ಮಾಡಬೇಕಾದ ಕೆಲವಾರು ಅಂಶಗಳಿದಾವೆ. ಒಂದು ಜನಪದ ಟೆಕ್ಸ್  ಅನ್ನುವಂತಹದು ವರ್ಟಿಕಲ್ ಆಗಿ ಬೆಳೆಯೋದಿಕ್ಕೂ, ಲೀನಿಯರ್ ಆಗಿ ಬೆಳೆಯೋದಿಕ್ಕು ವ್ಯತ್ಯಾಸಗಳಿದಾವೆ. ರಾಮಾಯಣ, ಮಹಾಭಾರತದಂತ ಟೆಕ್ಸ್ ಗಳು ಭಾರತದಾದ್ಯಂತ ಬೆಳೆಯೋದಿಕ್ಕೂ ಮಂಟೇಸ್ವಾಮಿ  ಮತ್ತು ಮಾದೇಶ್ವರ ಕಾವ್ಯಗಳು ಯಾವುದೋ ಒಂದು ಸೀಮಿತ ಜೀಯೋಗ್ರಾಫಿಕಲ್ ಏರಿಯಾದಲ್ಲಿ ಬೆಳೆಯೋದಿಕ್ಕೂ ವ್ಯತ್ಯಾಸಗಳು ಖಂಡಿತಾ ಇದಾವೆ. ಅವೆರಡೂ ಒಂದೇ ರೀತಿಯ ಮುಕ್ತವಾದ ಟೆಕ್ಸ್  ಅಂತ ಹೇಳಿ ಭಾವಿಸೋದಕ್ಕೂ ಬರೋದಿಲ್ಲ. ಇದು ಮೊದಲನೇ ಪಾಯಿಂಟ್. ಎರಡನೆಯದು ಈ ಎರಡೂ ಟೆಕ್ಸ್ ಗಳಿಗೆ ಇರುವಂತ ವ್ಯಾಪ್ತಿ ಇದೆಯಲ್ಲ ಆ ವ್ಯಾಪ್ತಿ ಕಾಲ ದೃಷ್ಟಿಯಿಂದನೂ ಇರಬಹುದು ಅಥವಾ ಸ್ಥಳದ ಅವಕಾಶದ ದೃಷ್ಟಿಯಿಂದನೂ ಇರಬಹುದು. ಅದಕ್ಕೆ ಅದರದೇ ಆದ ಇಂಪಾರ್‌ಟೆನ್ಸ್ ಇದೆ. ಆದರೆ ಅದಕ್ಕೆ ವ್ಯಾಪ್ತಿ ಬಹಳ ಸೀಮಿತವಾಗಿದೆ. ಹಾಗಾಗಿ ಇಲ್ಲಿ ಬರುವಂತ ಜಾಗಗಳು ಏನು ವಿವರಗಳನ್ನು ಕೊಡ್ತಾ ಹೋಗ್ತಾರೆ ಒಂದು ರೋಡ್ ಮ್ಯಾಪಿಂಗ್ ಖಂಡಿತಾ ಮಾಡೋದಿಕ್ಕೆ ಸಾಧ್ಯ ಇದೆ. ಅವರು ಉತ್ತರದಿಂದ ದಕ್ಷಿಣಕ್ಕೆ ಬರುವಾಗ ಯಾವ್ಯಾವೆಲ್ಲ ರೋಡ್ ಮ್ಯಾಪಿಂಗ್ ಆಯ್ತು. ಕಡೆಗೆಲ್ಲಿ ಅವರು ಸ್ಥಿರವಾಗಿ ನಿಂತರು ಅನ್ನೋದು. ಆ ರೋಡ್ ಮ್ಯಾಪಿಂಗ್‌ನ ಜಾಗಗಳನ್ನೇ ನಾವು ನಮ್ಮ ಕುತೂಹಲಕ್ಕೆ ರಿಪ್ಲೇಸ್ ಮಾಡೋಣ ಅಂತ ಇಟ್ಕೊಳ್ಳೋಣ ಯಾವುದೋ ಒಂದು ಉತ್ತರ ಕರ್ನಾಟಕದ ಬೀದರ್, ಗುಲಬರ್ಗಾ, ಬಿಜಾಪುರವೋ ಈ ಹೆಸರುಗಳನ್ನು ಹಾಕಿ ನಾವು ಆ ಇಡೀ ಕಾವ್ಯವನ್ನು ಹಾಡೋದಿಕ್ಕೆ ಶುರು ಮಾಡಿದರೆ ಅಲ್ಲಿನ ಜನಪದರು ಅದನ್ನ ಹೇಗೆ ಸ್ವೀಕರಿಸುತ್ತಾರೆ ಅನ್ನೋದು ಮುಖ್ಯ. ಬಹುಶಃ ಅದು ಏನಾಗಿದೆ ಅಂತಂದ್ರೆ ಈ ಒಂದು ಭೌಗೋಳಿಕ ಪ್ರದೇಶದಲ್ಲಿ ಸ್ಥಿರೀಕರಣಗೊಳ್ತಾ ಬೆಳೀತಾ ಬಂದಿದೆ. over a period of time ಅನ್ನುವಂತದು ಅಷ್ಟರಮಟ್ಟಿಗೆ ಅದರ ಮುಕ್ತತೆ ಇದೆಯೇ ಹೊರತು ಅದರಿಂದ ಆಚೆಗೆ ಅದರ ವ್ಯಾಪ್ತಿ ಇನ್ನೂ ತಲುಪ್ತಾ ಇಲ್ಲ ಅನ್ನುವಂತದು ಒಂದು ಸಮಸ್ಯೆ.

ಕಿಕ್ಕೇರಿ : ನನಗನಿಸೋದು ನೋ ಟೆಕ್ಸ್ ಈಜ್ ಎ ರೀಜನಲ್. ಏಕೆಂದರೆ ನೀವು ಯಾವುದೇ ಇಂತಹ ಮಲೆ ಮಾದೇಶ್ವರನಂತಹ ಹೀರೋನ ಇಡೀ ಇಂಡಿಯಾದಲ್ಲಿ ತಗೊಳ್ಳಿ, ನನ್ನ ಫ್ರೆಂಡ್ ರಣಜಿತ್ ಇದ್ರೆ ಹೇಳಬಹುದಾಗಿತ್ತು. ಇದರಲ್ಲಿ ಬಂದಂತ ಇಂತದೇ ನಾಯಕರುಗಳಿದಾರಲ್ಲ ಫೋಕ್ ನಾಯಕರುಗಳು ಪಂಜಾಬ್‌ನಲ್ಲಿ, ಅವರು ಸಹ ಇದೇ ತರ ಇರೋರು. See the same mind is creating the text ಇಲ್ಲಿರೋ ಜನರಿಂದ ಇಲ್ಲಿ ಊರು ಹೇಳಿಕೊಳ್ತಾರೆ. But the model is the same. ಅದನ್ನು ವಿಸ್ತೃತವಾದ ಒಂದು ನಮ್ಮ ಗ್ರಹಿಕೆಯ ಸ್ಥಿತಿಯನ್ನ ನಾವು ತಂದುಕೊಳ್ಳದೆ ಇದ್ದರೆ ಪ್ರಾಯಶಃ ರಿಜೀನಲ್ ಅಂತೀವಿ, ಯೂನಿವರ್ಸಲ್ ಆಗಿರುತ್ತೆ. at the same it is Local also. Mind is univercel Description is local. ಇದನ್ನು ನಾವು ಗ್ರಹಿಸಿಕೊಳ್ಳದೆ ಇದ್ದರೆ ಅಥವಾ ಅಸ್ಸಾಂನ ಹೀರೋಗಳು ಬೇಕಾದಷ್ಟು ಜನ I have penty of text ಅಸ್ಸಾಂನ ಎಷ್ಟು ಜನ ಹೀರೋಗಳು ಇದೇ ತರ ಬೆಳೆದು ಬಂದಿರೋರು. ಒಬ್ಬರ ಮೇಲೆ ಒಬ್ಬರು ಅಲ್ಲಿ, ಅಲ್ಲಿಯ  ಊರಿನ ಹೆಸರುಗಳನ್ನ ಕೊಟ್ಟಕೊಳ್ತಾರೆ. ಆ ಅರ್ಥದಲ್ಲಿ ನಾವು ನೋಡಿದರೆ ಈತರ ಓರಲ್ ಟೆಕ್ಸ್  ಆಗುವ ಕ್ರಿಯೆ ಇದೆಯಲ್ಲ It is more univercell ಕಲೆವಾಲ ಇನ್ನೆಂತದ್ದು. ನೋಡಿ ಬೇರೆ ಯಾವುದೇ ಈತರದ ಟೆಕ್ಸ್ ಗಳನ್ನು ನೋಡಿ Discription may be restricted to the same place. But how it got mold. What kind of mind that created the kind of text is very importent. ಅದನ್ನು ನೋಡದೆ ಇದ್ದರೆ ನಾವು ಸಿಕ್ಕಿಹಾಕಿಕೊಳ್ತೇವೆ. ಮತ್ತೆ ಇನ್ನು restrict ಮಾಡಿಕೊಳ್ತೀವಿ ಅಂತ ನನಗನಿಸುತ್ತೆ.