ಅಂಜನ ೮೩, ೧೩೦
ಮಾಟಕ್ಕೆ ಬಳಸುವ ಕಪ್ಪು

ಅಂಬಲಿ ೫೬, ೨೪೧, ೨೪೪
ರಾಗಿ ಹಿಟ್ಟಿನಿಂದ ಸಿದ್ಧಪಡಿಸಿದ ಗಂಜಿ           

ಅಂಡ್ಬುಟ್ಟು – ೧೭೬
ಚೆಲ್ಲುವುದು / ಹರಡುವುದು

ಅಂಬಿಗ್ವಾರ – ೫೪, ೩೪೮, ೩೫೭,      ೩೫೮
ಮೈಮೇಲೆಲ್ಲಾ ಕಾಣಿಸಿಕೊಳ್ಳುವ ಗುಳ್ಳೆಗಳು / ಸಿಡುಬು

ಅಗ್ಗಮ್ಮ – ೧೮೬, ೨೨೦
ಅಗ್ನಿ

ಆಗ್ಬೇದು – ೨೧೦
ಆಗಬಹುದು

ಅನ್ನಕ್ಕೆ ಆರುಬಟ್ಟೆಯಾಗಿ ಚಿನ್ನಕ್ಕೆ ಮೂರು ಬಟ್ಟೆಯಾಗಿ – ೫೬
ತಿನ್ನಲು ಅನ್ನ, ಉಡಲು ಬಟ್ಟೆ ಇಲ್ಲದ ಕಡು ಬಡತನದ ಸ್ಥಿತಿ

ಅಮಾವಾಸೆ ಪೂಜೆ – ೧೧೮
ಮಾದೇಶ್ವರನಿಗೆ ಪ್ರತಿ ತಿಂಗಳು ಸಲ್ಲುವ ವಿಶೇಷ ಪೂಜೆ

ಅಮ್ಮರಿದೋ – ೧೬೬
ಘರ್ಜಿಸಿದೊ

ಅಮ್ಲಿ ೧೨
ಅಂಬಲಿ

ಅರಗಣ್ಣು ಕಿರುಗಣ್ಣು -೧೪, ೧೭೧,೨೦೯, ೨೨೯, ೨೩೦……..
ತೀಕ್ಷ್ಣ ದೃಷ್ಟಿಯಿಂದ

ಅರಗಳಿಗೆ -೧೦೩
ಹತ್ತು – ಹನ್ನೆರಡು ನಿಮಿಷಗಳ ಅವಧಿ ಅರೆಕಲ್ ೧೮೧, ೨೦೬, ೩೩೩, ೩೪೪
ಬಂಡೆ

ಅರವಾಗಲಿ – ೨೧೮
ತಿಳಿಯಲಿ

ಅರ್ವಾಗ್ಬುಡ್ತು ೨೧೬, ೨೧೮
ಅರಿವಾಯಿತು, ತಿಳಿಯಿತು

ಅವ್ತುಕೊಂಡಿದ್ದೀಯ – ೧೮೩
ತಲೆ ಮರೆಸಿಕೊಂಡಿದ್ದೀಯ

ಆವ್ರೆ ಅಂಬು – ೨೧೭
ಅವರೆಕಾಯಿಗಿಡದ ಬಳ್ಳಿ

ಅವ್ನೆ – ೮
ಇದ್ದಾನೆ

ಅಸಮಾನುಕಾರ – ದುಸಮಾನುಕಾರ‍
೧೨೫, ೧೪೧, ೨೨೫, ೩೦೦
ಅಸಾಮಾನ್ಯ ಕೇಡಿಗ, ಕೆಟ್ಟಮನುಷ್ಯ

ಅಸಿಟ್ಟು – ೯೩
ಧ್ಯಾನದ ಹಿಟ್ಟು

ಅಸ್ಬೆ – ೨೧೧, ೪೨೧
ಹೆಗಲ ಹಿಂದೆ ಮುಂದೆ ಜೋತು ಬೀಳುವ ಚೀಲ

ಅಳ್ಳಾಡ್ತಾವ್ಮೆ – ೨೬
ತೂರಾಡುತ್ತಾ ಇದ್ದಾನೆ

ಅಳಿಯೆಣ್ಣೆ -೧೬೯
ಉಡುಗೆ ಕಳೆಹೆಣ್ಣೆ
ಅಂತು, ಅಂತ್ನೋಡು- ೧೩೦, ೧೪೩, ೧೭೦
ಮೇಲಕ್ಕೆ ನೋಡು

ಆತ್ರಸ್ಗಂಡು – ೨೦೯
ಗಾಬರಿಗೊಂಡು

ಇಂಕೈ – ೨೧೭

ಇಕ್ಕವನೆ – ೧೬೦
ಧರಿಸವನೆ

ಇಕ್ಕಲು : ಇಕ್ಕಾಲು – ೨೬, ೧೭೬ ೨೧೮
ಸಂದು ಅಥವಾ ಕಿಂಡಿ

ಇಕ್ಕು – ಇಕ್ಕುದ್ರು ೭೬, ೧೦೩
ಉಣಬಡಿಸು

ಇಡ್ಕಂಡ್ – ೧೪೪
ಹಿಡಿದುಕೊಂಡು

ಇರನಾರಿ – ೪೬
ಇರಲಾರೆ

ಇರೀಕೊಂಡು – ೧೪೨
ನಡುವಿನ ಮೇಲೆ ಕೊಡ ಇರಿಸಿಕೊಂಡು

ಇರ್ಸುಬುಟ್ಟು -೫೧
ನೆಲೆಸುವಂತೆ ಹೇಳಿಬುಟ್ಟು
ಇಳುಕ್ಬುಟ್ರು – ೯೪
ಕೆಳಗೆ ಇಳಿಸಿದರು

ಈಬೂತಿ – ೨೦, ೨೧
ವಿಭೂತಿ

ಈಸ್ಕೊಂಡು – ೫೨, ೬೫
ತೆಗೆದುಕೊಂಡು / ಪಡೆದುಕೊಂಡು

ಈಳ್ಯ – ೯೪
ವೀಳೆಯ

ಉಂಗುಸ್ಟ -೧೧೬
ತಪ್ಪಲಿನಲ್ಲಿ ಹೆಬ್ಬೆಟು ತೂರಿಸುವ ಪಟ್ಟಿ

ಉಕ್ಕುನ ಕುಲಾವಿ – ೧೦೪
ಉಕ್ಕಿನ ತಲೆಯ ಉಡುಗೆ

ಉಡುದಾರ‍- ೨೯
ನಡುವಿಗೆ ಕಟ್ಟುವ ದಾರ

ಉರುಬವರೆ- ೫೨
ಬಾಯಿಯಿಂದ ಗಾಳಿ ಊದಿ
ಬೂದಿಯನ್ನು ಹಾರಿಸುವುದು

ಉರಿಚಮ್ಮಾಳಿಗೆ – ೧೧೨
ಮನುಷ್ಯನ ಚರ್ಮದ ಚಪ್ಪಲಿ

ಉರ್ಸಿಂಗಿ ಕೊರಡು – ೨೦೩, ೨೦೫
ಚುರುಚುರು ಉರಿಯನ್ನುಂಟುಮಾಡುವ ಚಾವಟಿ

ಉಸಾರಾಗಿ – ೮೯
ಎಚ್ಚರಿಕೆಯಿಂದ

ಉಸುರು ಪಸುರು -೧೫೯
ಜೀವ

ಊಡ್ಕ – ೨೨೬
ಹೊರಿಸಿಕೊಂಡು

ಎಡೆ – ೩, ೭೧, ೭೨
ನೈವೇದ್ಯ

ಎಕ್ಕಾಸೊಕ್ಕಿನ – ೧೮೮, ೩೪೧
ಅಹಂಕಾರ‍ದ

ಎಟುಕುದೇನೆ – ೩೯
ಸಾಕಾಗಲಾರದೆ

ಎಡದವರೆ – ೧೬೩
ಬಿಡಿಸುವುದು

ಎತ್ತಮುತ್ತ – ೯
ಪೂರ್ವಜರು

ಎದೆಮಟ್ಟ – ೧೨೨, ೧೨೩
ಎದೆಯ ಎತ್ತರಕ್ಕೆ ಇರುವ

ಎರಡು ಮಂಡಿ ಊರ್ಕಂಡು – ೧೮೩
ಎರಡು ಮಂಡಿಯನ್ನು ನೆಲಕ್ಕೆ ಊರಿಕೊಂಡು

ಎಲಗುದ್ಲಿ – ೪೦೩
ಅಗೆಯುವ ಒಂದು ಸಾಧನ

ಎಲಡಕೆ – ೧೦
ವೀಳೆಯ

ಎಲ್ರುನು – ೧೪೫
ಎಲ್ಲರೂ

ಎಸರು – ೮೦, ೧೦೦
ಸಾಂಬಾರು

ಎಳಗಾವಿ – ೧೫, ೭೫, ೧೬೬, ೨೦೩, ೨೭೫
ಖಾವಿ ಹೊದಿಕೆ

ಐಭೋಗ – ೭೮, ೧೨೧, ೧೫೮
ಶ್ರೀಮಂತಿಕೆ

ಒಂತಕ್ಕೆ – ೮೦
ಒಂದು ಕಡೆಗೆ

ಒಂದ್ ಮನ್ಸ್ ಎರಡುಮನ್ಸ್ – ೫೩
ಅನುಮಾನದ ಮನಸ್ಸು

ಒಂದೆಣ್ಣ – ೧೨೭, ೧೨೮
ಒಂದು ಹೆಣ್ಣನ್ನು

ಒಕ್ಕಲು – ೧೧೦, ೧೬೩
ಭಕ್ತರ ಒಂದು ಕುಟುಂಬ

ಒಕ್ಕಳಕ್ಕಿ – ೩೮೩
ಒಂದು ಕೊಳಗ ಅಕ್ಕಿ

ಒಗತಾನ – ೮೦
ಮನೆವಾಳ್ತನ

ಒಡಕೆಯ ಹುಲ್ಲು – ೧೬೩
ಚೌಗುಪ್ರದೇಶದಲ್ಲಿ ಬೆಳೆಯುವ ಒಂದು ಜಾತಿಯ ಹುಲ್ಲು

ಒಡದಾರ – ೫೫
ನಡುವಿಗೆ ಕಟ್ಟುವ ದಾರ‍

ಒತ್ತರ್ಸಾಡ್ಕಂಡು – ೧೯೮
ಒಬ್ಬರಿಗೊಬ್ಬರು ಮೈ- ಕೈ ತಾಗಿಸಿಕೊಂಡು

ಒತ್ತೆಮೊಳುಗೆ – ೬೫
ಪೊದೆಯ ಒಳಗೆ

ಒಪ್ಪಂದ್ ವೀಳ್ಯ – ೧೩೪
ಮದುವೆಗೆ ಒಪ್ಪಿಗೆ ಸೂಚನೆಗಾಗಿ ನೀಡುವ ವೀಳೆಯ

ಒರಿ – ೧೪೯
ವಂತಿಗೆ

ಒಲುಮೆ – ೧೬೬
ಮೋಹ

ಕಂಡುಗ – ೩೫
ಧಾನ್ಯದ ಅಳತೆ ಹದಿನೆಂಟು ಕೊಳಗ ಅಥವಾ ಎಪ್ಪತ್ತೆರಡು ಸೇರು

ಕಂತೇಭಿಕ್ಷೆ – ೬೮
ಜಂಗುಮರು ಮನೆಮನೆಯಲ್ಲಿ ಸಂಗ್ರಹಿಸುವ ಅನ್ನ ಆಹಾರದ ಭಿಕ್ಷೆ

ಕಂಸಾಳೆ – ೩೩, ೭೦, ೭೦, ೭೫
ಮಾದೇಶ್ವರ ಸಂಪ್ರದಾಯದ ಶಿಶುಮಕ್ಕಳು ಭಿಕ್ಷೆ ಮಾಡಲು ಬಳಸುವ ಕಂಚಿನ ತಾಳ

ಕಕ್ಕರಿದೊ – ೧೬೬
ಕೂಗು

ಕಡಕೊಂಡು – ೫೬
ಬಾಯಿಂದ ಕಚ್ಚಿ ತಿನ್ನುತ್ತಾ

ಕಡೇಶ್ರಾವಣ – ೧೧೬, ೧೧೭
ಶ್ರಾವಣಮಾಸದ   ಕಡೇ ಶನಿವಾರ‍

ಕಣಜ – ೧೨
ಭೂಮಿಯ ಒಳಗೆ ಧಾನ್ಯ ತುಂಬುವ ಸಲುವಾಗಿ ಮಾಡಿರುವ ಹಗೇವು

ಕಣ್ಣೇ ಹಿಂಗಿ ಹೋಗಲಿ – ೧೩೬
ಕಣ್ಣು ಕಾಣದಂತೆ ಕುರುಡಾಗಿ ಹೋಗಲಿ

ಕತ್ತಿ – ೧೧೬, ೧೧೭
ಉರಿಯುತ್ತ (ಬೆಂಕಿ )

ಕನ್ನೆಂಬ – ೮೫
ಹೆಣ್ಣು ಅಥವ ಸ್ತ್ರೀ

ಕರಬಿಟ್ಟು – ೮೧
ಹಾಲು ಹಿಂಡಲು ಕರುವನ್ನು ಬಿಟ್ಟು

ಕರೀಜಾತಿ – ೮೫, ೩೧೯
ಹಂದಿ

ಕಲಿ ಕಟ್ಟಾಳಬೇಕು – ೨೧, ೬೫
ಭಕ್ತರ ಸಾಮ್ರಾಜ್ಯವನ್ನು ಆಳಬೇಕು / ಕಟ್ಟಬೇಕು

ಕರೀತಾ – ೧೪೦
ಕರೆಯುವ

ಕಳಕೋದಿಲ್ಲ – ೨೨
ಕಳುಹಿಸುವುದಿಲ್ಲ

ಕಳನಿಲ್ಲ – ೧೫೨
ಕಳ್ಳತನ ಮಾಡಲಿಲ್ಲ

ಕಳ್ಳು -೩೫, ೩೬
ಕರುಳು

ಕಳ್ಳು ಚುರುಕ್ – ೫೭
ಅನುಕಂಪ ಮೂಡಿತು

ಕಲ್ ಮಲ್ಲಯ್ಯ – ೨೦೧
ಮಾದೇಶ್ವರನ ನೇಮ – ನಿಷ್ಠೆಯನ್ನು             ಮೀರಿ ಅಪಚಾರ ಮಾಡಿದರೆ ಹುಲಿಗೆ ಬಲಿಯಾಗುತ್ತಾರೆ ಅಂಥವರಿಗೆ ಬಂದಿರುವ ಪರುಸೆಯಲ್ಲಾ ಒಂದೊಂದು ಕಲ್ಲನ್ನು ಹಾಕಿ ಹೋಗುವುದು.

ಕಾ ಅನ್ನಾಕೆ ಕಾಗಿಲ್ಲ ಗೂ ಅನ್ನಾಕೆ
ಗೂಗಿಲ್ಲ – ೧೬೧, ೧೬೨, ೧೬೪
ನಿರ್ಜನ ಪ್ರದೇಶ

ಕಾಡುಕಟ್ಟೋನು, ಮೇಘಿಕಟ್ಟೋನು –
೮೩, ೧೪೫, ೧೩೨, ೧೫೯
ಕಾಡು ಮತ್ತು ಮಳೆಯನ್ನು ನಿಯಂತ್ರಿಸುವವನು- ಮಂತ್ರಗಾರ‍

ಕಾರಪುಡಿ – ೯೩
ಸಂಬಾರ ಪದಾರ್ಥ, ಮೆಣಸಿನ ಹಣ್ಣು ಸೇರಿಸಿ ಸಿದ್ಧಪಡಿಸಿದ ಪುಡಿ

ಕಾರ್ಮಳೂರು – ೧೬೮
ಕಾರೆ ಮಳೆ ಸುರಿದು

ಕಾಲ ಮಾಡವ್ನೆ – ೫೫
ಜೀವನ ಮಾಡುತ್ತಿದ್ದಾನೆ

ಕಾಲೇ ಸೇದಿ ಹೋಗಲಿ – ೧೭೬
ಕಾಲು ನಡೆಯಲುಬಾರ‍ದೆ ನಿಸಕ್ತಿಯಾಗಿ ಹೋಗಲಿ

ಕ್ಯಾಣ -೧೬೨
ಕೋಪ

ಕ್ವಾತ್ ಜನ – ೭೩, ೧೨೦
ಕಾಡು ಜನ

ಕಿತ್ತಿ-೩೫
ಒಂದು ಸಲ ಅಥವಾ ಒಮ್ಮೆ

ಕುಂದುಕೋವಿದ್ದರೆ – ೨
ತಪ್ಪು ನೆಪ್ಪುಗಳಿದ್ದರೆ

ಕುಂಪಿಣಿ – ಕುಂಪಣಿರಾಜ್ಯ – ೧೧೬, ೧೨೦, ೧೨೧
ಭಾರ‍ತದಲ್ಲಿದ್ದ ಬ್ರಿಟಿಷ್ ಸಾಮ್ರಾಜ್ಯ

ಕುಕ್ಕೆ – ೧೩, ೩೪, ೩೬, ೪೩
ಬಿದಿರ ಬುಟ್ಟಿ

ಕುನ್ನೀರು – ೧೭, ೧೯, ೩೪, ೩೫, ೧೦೫
ಪನ್ನೀರು / ಪವಿತ್ರವಾದ ನೀರು

ಕುರಿಕೋಲು – ೧೨೭
ಕುರಿಕಾಯುವಾಗ ಬಳಸುವ ಕೋಲು

ಕುಲಾಮೀರಿದ ಹೆಣ್ಣು, ಹೊಲಾ ಮೀರಿದ ಪಕ್ಷಿ ಒಂದು – ೧೫೨
ಗಂಡನ ಮಾತು ಕೇಳದ ಹೆಣ್ಣನ್ನು ಕುರಿತ ಮಾತು

ಕೆಂಡದ ರೊಟ್ಟಿ – ೧೧೭
ಕೊಂಗುನ – ೭೩, ೧೨೦, ೧೯೭
ತಮಿಳುಜನ

ಕೊಂಗ್ದಗ್ಲ – ೧೯೩
ಕೊಂಗ (ಮೊರ) ದಷ್ಟು ಅಗಲ

ಕೊಕ್ಕೆ ಜೋಡು – ೧೨೮
ಮೆಟ್ಟಿನ ಮುಂಭಾಗ ಸುರುಳಿಯಂತೆ   ಇರುವುದು

ಕೊಡಬೆ – ೧೬೮
ಮೀನು ಹಿಡಿಯುವ ಬಲೆ ಅಥವಾ ಒಂದು ಸಾಧನ

ಕೊಡ ಮಕ್ಕಳು – ೨೧
ಮೈನೆರೆಯುವ ಹೆಣ್ಣು ಮಕ್ಕಳು

ಕೊತ್ತಿ – ೩೬೧, ೩೬೨
ಬೆಕ್ಕು

ಕೊತ್ತಿ ಮೆಳೆ
ಒಂದು ಸಸ್ಯದ ಹೆಸರು

ಕೊತ್ತೀ ಸೆತ್ತೆ – ೧೬೭
ಬೆಕ್ಕಿನ ಮಾಸಲು

ಕೊಮಾರ ಭಾಗ್ಯ – ೧೮೮
ಮಕ್ಕಳ ಭಾಗ್ಯ

ಕೊಳಕುಮಂಡಲ – ೧೭೬, ೨೩೦
ಕೊಳಕುಮಂಡಲ ಒಂದು ಹಾವು

ಬದ್ಕು- ೧೪೧, ೧೪೮
ಕೆಲಸ ಮತ್ತು ಜೀವನ

ಕೈಯೇ ಬರದೇ ಹೋಗಲಿ / ೧೭೬
ಕೈ ಕೆಲಸಕ್ಕೆ ಬಾರ‍ದೇ ನಿಸಕ್ತಿಯಾಗಿ     ಹೋಗಲಿ

ಕೊಡಬಾರ್ದ ಕೊಲೆಕೊಟ್ಟು -೧೫೯
ಕೊಡಬಾರದ ಹಿಂಸೆ ಕೊಟ್ಟು

ಕ್ವಾರಣ್ಯ – ೩೩
ಭಿಕ್ಷೆ

ಕೋಡು ಬಂಡೆ – ೫೮
ಕೋಡಿನಾಕಾರಾದಲ್ಲಿರುವ ಬಂಡೆ

ಗಂಟೆಯ ಸರ – ೨೦೧
ಎತ್ತುಗಳಿಗೆ ಹಾಕುವ ಗೆಜ್ಜೆ ಸರ

ಗಂಡು ಕೊಡಲಿ – ೭೮
ಅಗಲವಾದ ಬಾಯಿವುಳ್ಳ ಹರಿತವಾದ ಆಯುಧ

ಗಂಧದ ಮಾತು – ೧೪೫
ಒಳ್ಳೆಯ ಮಾತು

ಗಗ್ಗರ – ೩೬೬
ತಾಳಕ್ಕಾಗಿ ಬಳಸುವ ಲೋಹದ ಬಳೆ

ಗಜಕಡ್ಡಿ -೧೧೨
ಉದ್ದವನ್ನು ಅಳತೆಮಾಡುವ ಅಳತೆ ಮಾಪನ

ಗಿಗೆ ಹೊನ್ನು – ೫೫, ೫೮
ಬಂಗಾರ‍ತುಂಬಿದ ಗಡಿಗೆ