ಗಣಂಗಳು – ೫೯, ೬೦
ಭಕ್ತರು

ಗಮಲ – ೪೪
ವಾಸನೆ

ಗಲಗು – ಗಲಗಿರಬಾರದು – ೩೦೩
ಸದ್ದು (ಶಬ್ದ) ಇರಬಾರದು

ಗಳು – ೧೬೩
ಬಿದಿರ ಉದ್ದನೆಯ ಕೋಲು

ಗಾಡುಗರಿದ್ಯ – ೨೫೧, ೨೭೩, ೨೮೦, ೨೮೪……
ಗಾರುಡಿ ವಿದ್ಯೆ

ಗಾಳಗೋಳಿಂದಳುತಾವಳೆ – ೧೭೯
ಅತಿಯಾದ ಗೋಳಾಟ

ಗುಟುರು – ೩೫
ಹೂಂಕರಿಸು

ಗುಡಾರ ಹುಯ್ಕೊಂಡು – ೯೦
ಗುಡಾರ ಹಾಕಿಕೊಂಡು

ಗುಡ್ಡ (ದೇವರ) – ೩೩, ೮೯
ಮಾದೇಶ್ವರನ ಸಂಪ್ರದಾಯಕ್ಕೆ ಸೇರಿದ ಶಿಶುಮಕ್ಕಳು

ಗುದ್ದಲಿ: ಗುದ್ಲಿ – ೧೧
ಮಣ್ಣು ಹಗೆಯುವ ಆಯುಧ

ಗುಲ್ಲಾಕ್ಕಂಡು – ೧೯೬
ಹಾಸ್ಯದ ಮಾತನಾಡಿಕೊಂಡು

ಗೆಯ್ಸಿಬುಡು – ಗೆಯಿಸ್ಬುಟ್ಟು – ೯೧, ೯೨
ಕಟ್ಟಿಸಿಕೊಂಡು

ಗೇಲಿನ ಮಾತು- ೧೪೫
ಹಾಸ್ಯದ ಮಾತು

ಗೋತ್ರು – ಗೋತ್ರ, ೧೫೮, ೧೯೯
ಗೋಚರ

ಗೋಣ ಮುರಿ – ೧೯೯
ಕತ್ತನ್ನು ಹಿಸುಕು

ಗ್ನಾಪ್ ನ – ೧೯೦
ಜ್ಞಾಪಕ

ಗ್ವಾರ – ೫೩
ಸಿಡುಬು

ಗ್ವಾರಂದ – ೩೧
ಪ್ರಾಣಿಗಳ ದೇಹದಲ್ಲಿ ಸಿಗುವ ಗೋಲಿಯಾಕಾರದ ವಸ್ತು ವಿಶೇಷ

ಗೊದ್ದೆ – ೪೩
ದೊಣ್ಣೆಕಾಟ, ಹೆಂಟೆಗೊದ್ದೆ

ಗೊರವ- ೪೯
ಮೈಲಾರ ಸಂಪ್ರದಾಯದ ಶಿಶುಮಕ್ಕಳು

ಗೊಲ್ಲಗುರಿ – ೧೯೦
ಗೊಲ್ಲನ ಹಿಂದೆ ಕುರಿ ಬರುವಂತೆ ಬರುವ ಹುಲಿ

ಗೋಗಲ್ಲು – ೧೨೧, ೧೨೩, ೨೧೩
ಕೋಡುಗಲ್ಲು

ಗಾಟೆ – ೧೩೨, ೧೩೩, ೨೬೫, ೨೮೧
ಚೀಲ, ಗಂಟುಮೂಟೆ

ಚಕ್ಕಳದ ಚಡ್ಡಿ – ೧೬೧, ೧೭೭
ಚರ್ಮದ ಚೆಡ್ಡಿ

ಚಪ್ಪೋಡು – ೯
ಪತ್ರ ಶಾಸನ, ದಾಖಲೆ

ಚಿಕ್ಕೋನು – ೪೦
ಚಿಕ್ಕವನು

ಚೆನ್ನಾಗೊಪ್ಪ- ೩೬
ಚೆನ್ನಾಗಿ ಶವಸಂಸ್ಕಾರ ಮಾಡುವುದು

ಚೆಮ್ಮಾಳಿಗೆ – ೧೧೨, ೧೧೩, ೧೧೪, ೧೧೫
ಮನುಷ್ಯನ ಚರ್ಮದ ಪಾದರಕ್ಷೆ

ಜೋಗಿ, ಜೋಗಪ್ಪ – ೩೩, ೪೯
ಆದಿ ಚುಂಚನಗಿರಿ ಬೈರವೇಶ್ವರ ಸಂಪ್ರದಾಯದ ಶಿಶುಮಕ್ಕಳು

ಜ್ಯೋತಮ್ಮ – ೨೨೦
ದೀಪ

ಟಮ್ಮಟುಮ್ಮನೆ – ೫೩
ಚಂಗ ಚಂಗನೆ ಕುಣಿಯುವುದು

ತಡಿಕೆ – ೩೬
ಬಿದಿರ ಆಚ್ಚೆಯಿಂದ ಹೆಣೆದ ತಟ್ಟಿ

ತತ್ತಾಯಿಲ್ಲ – ೪೪
ತೆಗೆದುಕೊಂಡು ಬರುತ್ತಿಲ್ಲ

ತಪ್ಲೆ – ೩೭
ಚೆಂಬು

ತಮ್ಮಡಿ > ತಂಬಡಿ – ೭೨, ೪೩೪, ೪೩೬
ಪೂಜಾರಿ

ತರಜೋಗು (೩೬)
ಚರ್ಮದ ಮೇಲ್ಪದರು ಕಿತ್ತುಹೋಗುವುದು

ತರ್ಗುಬುರ್ಗು – ೨೧೮
ಒಣಗಿದ ಎಲೆ, ಕಸಕಡ್ಡಿ

ತಾರಿಸಿ – ೧೦೦
ಶುಚಿಗೊಳಿಸಿ

ತೀರೀಕೊಂಡು – ೪೮
ಹಿಂತಿರುಗಿಕೊಂಡು

ತಿರುಗ – ೮೯
ಪುನಃ

ತೀಡಿ- ೩೫
ಉಜ್ಜಿ

ತುಂಡೇಡು ಮುಂಡೇಡು – ೧೩೫, ೨೬೧, ೨೬೫
ಒಂದೇ ಏಟಿಗೆ ರುಂಡ ಮುಂಡ ಎರಡಾಗುವಂತೆ ಮಾಡು

ತುರುಗಲ್ಲು – ೧೭೪, ೨೬೬
ನುಚ್ಚು ಕಲ್ಲು

ತೆಂಕ್ಲು – ೧೬, ೩೯
ದಕ್ಷಿಣ

ತೆಕ್ಕೆಮಡಿಸಿ- ೯೮, ೨೯೪
ದುಂಡೆಗೆ ಸುತ್ತಿಕೊಳ್ಳುವುದು

ತೆಗೆಸ್ತ್ರು – ೯೨
ತೆಗೆಸಿದರು

ತ್ರೆಷ್ಣೆ – ೨, ೪೦
ಸೃಷ್ಟಿ

ತೊಂಡಾಲು ಬಾಸಿಂಗ – ೧೩೭,
೧೩೮, ೧೫೭

ಮದುಮಕ್ಕಳು ಧರಿಸುವ ಆಭರಣ

ದಾಸ – (೩೩,೪೯, ೨೧೧)
ತಿರುಪತಿ ವೆಂಕಟರಮಣಸ್ವಾಮಿ ಸಂಪ್ರದಾಯದ ಶಿಶುಮಕ್ಕಳು

ದಾಸೋಹ – ೬೯, ೬೫, ೨೬೯
ಅನ್ನದಾನ ಮಾಡುವುದು

ದುಂಡಾರೀತಿ- ೧೪೬
ವಿರುದ್ಧವಾಗಿ ವರ್ತಿಸು

ದುಂಡುಗೋಲು > ದಂಡಕೋಲು – ೩೩, ೪೭, ೪೯………..
ಮಾದೇಶ್ವರ ಬಿರುದುಗಳಲ್ಲಿ ಒಂದು

ದುಡ- ೭೪, ೩೨೮, ೪೦೩
ದೃಢ

ದುರ್ಭಿಕ್ಷ – ೧೨
ಬರಗಾಲ – ಕ್ಷಾಮ
ಕೇಡಿಗ

ದೂಷಣೆ – ೧೮೮
ಆರೋಪ

ಧರ್ಮದ ಬಡ್ಡಿ – ೫೫
ಕಡಿಮೆ ಬಡ್ಡಿ

ನಂಟ್ರಗೇಳ್ಬುಟ್ಟು- ೧೩೫
ನೆಂಟರಿಗೆ ಹೇಳಿದ ಬಳಿಕ

ನಡ್ಕಂಡ್ – ೧೪೯
ನಡೆದುಕೊಂಡು

ನಡೀಕೊಂಡು- ೩೬
ನಡುಗಿಕೊಂಡು

ನರಮುರಿಜೋಡು – ೧೬೦, ೧೭೭, ೩೦೯
ಜುರುಕಿ ಚಪ್ಪಲಿ

ನಾಗಬೆತ್ತ – ೧೭೬, ೧೮೧, ೨೦೫, ೩೦೩, ೩೮೮
ಶ್ರೇಷ್ಠಜಾತಿಯ ಬೆತ್ತ

ನೆಚ್ಚೋದಿಲ್ಲ – ೧೬೬
ನಂಬುವುದಿಲ್ಲ

ನೆತ್ತಿಯ ಮಲಕು- ೧೬೯, ೧೭೦
ತಲೆಗೆ ಧರಿಸುವ ಆಭರಣ

ಪಂಚವೀಳ್ಯ – ೧೩೪
ಐವರು ಪ್ರಮುಖರಿಗೆ ನೀಡುವ ವೀಳೆಯ

ಪಟ್ಟೆ – ೧೩
ಗೆರೆ

ಪಡೂಲು> ಪಡುಲ>ಪಡುವಲ- ೧೩, ೧೬, ೩೯
ಪಶ್ಚಿಮ

ಪರಪಾಡ್ಯ – ೯೩, ೯೬
ದೇವರಿಗೆ ಹರಕೆ ಸಲುವಾಗಿ ಏರ್ಪಡಿಸಿದ ಅನ್ನಸಂತರ್ಪಣೆ

ಪಿಡುದವರೆ – ೧೫೯
ಹಾಕಿದ್ದಾರೆ

ಪ್ವಾಟೆ – ೮, ೯
ಬಿಲದಂತ ರಂಧ್ರ

ಬಕರೆ – ೬೬
ನಾಡಹೆಂಚಿನ ಚೂರು

ಬಟ್ಲ ಅಡಿ – ೯೮
ತಟ್ಟೆಯ ತಳ ಭಾಗ

ಬಡಗಲು – ೧೬, ೩೬, ೨೧೩
ಉತ್ತರ

ಬಡಸ್ತಾನ – ೫೬, ೫೭, ೨೫೬, ೨೬೦…..
ಬಡತನ

ಬದುಕ್ಮಾಡ್ತಾಳೆ – ೧೪೦
ಜೀವನ ಸಾಗಿಸುತ್ತಿದ್ದಾಳೆ

ಬರಗನ ಹಕ್ಕಿ – ನವಣೆ ಅಕ್ಕಿ

ಬರದಾದಂಥ ಕಳ – ೭೪
ಖಾಲಿಯಾದ ಕಣ

ಬಸುಮಾಂಗ – ೨, ೩೮
ವಿಭೂತಿ

ಬಾಡೋಗುತ್ತೆ – ೨೦
ಒಣಗಿ ಹೋಗುತ್ತೆ

ಬಾಣಗಾರ – ೧೬, ೧೩
ಜೀತಗಾರ

ಬಾಯ ಕಟ್ಟವರು – ೧೭೯
ಮಂತ್ರಗಾರ

ಬೆದ್ರಿ – ೨೧೭
ಬೆದರಿ

ಬೇಡಗಂಪನ – ೬೦, ೬೯, ೭೨, ೭೩
ಮಾದೇಶ್ವರಬೆಟ್ಟದ ಅರಣ್ಯ ಪ್ರದೇಶದಲ್ಲಿ ವಾಸಿಸುತ್ತಿದ್ದ ಬುಡಕಟ್ಟು ಜನಾಂಗ

ಬೇಯಿಸ್ತ್ವಾರ – ೧೧೭
ಗುರುವಾರ

ಬೊಕ್ಕಂಡು – ೧೩೦
ಬಗ್ಗಿಕೊಂಡು

ಭಾಷೆ – ೧೫೨, ೧೫೩, ೧೫೪
ಪ್ರಮಾಣ

ಭಿನ್ಯಕ್ಕೆ – ೭೫, ೬೯, ೯೭
ಮೀಸಲು ಮಾಡುವುದು

ಭೀಮು
ತೊಲೆ

ಮಂಕು ಮರುಳ – ೧೫೯
ಮಾತುಬಾರದಂತೆ ಮಾಡು

ಮಡಗಿ – ೧೦
ಇಡು

ಮಡಗೋದಿಲ್ಲ – ೧೧೯
ಬದುಕಿಸುವುದಿಲ್ಲ

ಮಲ್ಹಾರ – ೧೬೫
ಬಳೆಗಾರ‍ನ ಚೀಲ

ಮರುಳು – ೩೫
ಉಸುಕು

ಮರಾಳೆ ಎಣ್ಣೆ- ಒಂದು ಸಸ್ಯ ಜಾತಿ, ಅದರ ಬೀಜದಿಂದ ಎಣ್ಣೆ ತೆಗೆದು ದೀಪ ಉರಿಸುವರು

ಮುನಿಸ್ಕೊಂಡು -೧೨೭
ಸಿಟ್ಟುಮಾಡಿಕೊಂಡು

ಮುಳ್ಳುದಸಿ – ೪೦
ಮೊನಚಾದ ಮುಳ್ಳು

ಮೂಕುಮಾರಿಲ್ಲದೆನೆ – ೪೦೮
ನುಚ್ಚಾಗದ ಧಾನ್ಯ

ಮೂಡಲು>ಮೂಡ್ಲು – ೧೩, ೩೬, ೬೦, ೬೧
ಪೂರ್ವ

ಮೆರೆಯುವಂತ – ೧೨೫
ಮೆರವಣಿಗೆ ಮಾಡುವಂತ

ಮೆಳೆಗುಂಪಿನ – ೮೮
ಪೊದೆಯ ಮಧ್ಯೆ

ಮೆಳೆ – ೮೮
ಪೊರೆ / ಗಿಡ

ಮೇಟಿ – ಕಣದ ಮಧ್ಯದ ನೆಡುವ
ಕಂಬ

ಮೇಗ್ದಲ್ಲಿ – ೨೦೯
ಮೋಡದಲ್ಲಿ

ಮೈಮ – ೧
ಮಹಿಮೆ

ಮೊಕ್ಕಣ್ಣಾಗಿ – ೧೪, ೧೪೪, ೧೪೫, ೧೭೧, ೧೭೩
ಅಂಗಾತ ಮಲಗಿಸುವುದು

ಮೊರ್ತ – ೫೧, ೧೧೧
ಆರ್ಭಟ

ಮೊಟ್ಟ – ೧೭೩
ಮೂಟೆ

ಯರ್ಕವೆ ಕುರ್ಕವೆ – ೧೬೩
ತುದಿಯಲ್ಲಿ ಕವಲು ಇರುವ – ಚಿಕ್ಕ ದೊಡ್ಡ ಕಟ್ಟಿಗೆ

ಯತಿ – ೧, ೭೫
ಮುನಿ

ಯಾಳ್ಯ > ವ್ಯಾಳ್ಯ – ೨೧೨, ೨೨೨
ಸಮಯ

ಯೋಗವಾಗಿ – ೧೧೩
ಹರುಷವಾಗಿ

ರಕುತಾ – ೮೦, ೮೧
ರಕ್ತ

ರಜಾ – ೧೫, ೫೬
ಹರಕೆ ಮಾಡಿಕೊಂಡವರು ಮಾದೇಶ್ವರ ದೇವಸ್ಥಾನದ ಕಸ ಗುಡಿಸುವುದು.

ರಾಸ್ಯ – ೩೫೪
ರಹಸ್ಯ

ರುದ್ದುರುಗೋಪ – ೬೭
ರುಧ್ರ ಕೋಪ

ರೊಟ್ಟಿ ಪರ – ೧೧೬, ೧೭

ವರ್ಷಕ್ಕೊಮ್ಮೆ ದೀಪಾವಳಿಯ ಸಂದರ್ಭದಲ್ಲಿ ನಾಗಮಲೆಯಲ್ಲಿ ಹಾಸು ಬಂಡೆಯ ಮೇಲೆ ಬಹಳ ನೇಮ ನಿಷ್ಠೆಯಿಂದ ಮೀಸಲಿಟ್ಟ ರಾಗಿಯನ್ನು ಉಜ್ಜು ಪುಡಿಮಾಡಿ ಅದರಿಂದ ಕೆಂಡದಲ್ಲಿ ಸುಟ್ಟದ್ದು ಇದನ್ನು ನೇಮಕವಾದ ಕುಟುಂಬವು ಸಿದ್ಧಪಡಿಸಿ ಮಾದೇಶ್ವರನಿಗೆ ಪ್ರತಿವರ್ಷ ನೈವೇದ್ಯ ಮಾಡಿ ಬಂದ ಪರುಸೆಗೆ (ಭಕ್ತರು) ಪ್ರಸಾದದಂತೆ ಹಂಚುವರು.

ವಸೀಕೊಂಡು – ೮೩
ನಿರ್ಲಕ್ಷದಿಂದ

ವಾಕ್ಸುವಾಗೋದಿಲ್ಲ – ೯೧
ಸತ್ಯವಾಗೋದಿಲ್ಲ

ವಾಲೀಸಿಕೊಂಡು – ೧೫೪
ಮೋಹಗೊಳಿಸಿ

ವಿಳ್ಳೇದಾಟ – ೪೫
ಗಿಲ್ಲಿದಾಂಡು ಆಟ ಚಿಣ್ಣಿಪಣಿ ಆಟ

ವೋಟುಮಯ್ಯ- ೯೩
ಪುರೋಹಿತ

ಶಿರಬೊಗ್ಗಿ – ೪೮
ಶಿರಬಾಗಿಸಿ

ಸಂಕೋಲೆ – ೧೭೩
ಬಂಧನ

ಸಂಬಂಧಮಾಲೆ – ೧೩೮, ೧೫೭
ಮದುವೆಯಲ್ಲಿ ತಾಳಿಕಟ್ಟುವ ಮೊದಲು ಹೆಣ್ಣು – ಗಂಡು ಪರಸ್ಪರ ಬದಲಾಯಿಸುವ ತುಳಸಿ ಮಾಲೆ

ಸತ್ತಿಗೆ – ದೇವತಾಕಾರ್ಯದಲ್ಲಿ ಉತ್ಸವಕ್ಕೆ
ಒಯ್ಯುವ ಛತ್ರಿ

ಸಮಕೆ – ೧೪೯
ಸಮಾನವಾಗಿ

ಸರಳೆಮ್ಮೆ ಹಿಂಡು – ೧೬೭
ಎಮ್ಮೆಗಳ ಗುಂಪು

ಸರಾಸರನೆ – ೮೦
ವೇಗದಲ್ಲಿ

ಸುಂಡ – ೨೨೧, ೪೦೨
ಇಲಿ

ಸುದ್ದ ಸುಳಿ – ೧೩೦
ರೀತಿನೀತಿ

ಹನ್ನೆರಡಾಳು ಮಟ – ೧೭೭
ಹನ್ನೆರಡು ಆಳುಗಳಷ್ಟು ಆಳವುಳ್ಳದ್ದು

ಹಸುವಾರ > ಅಸ್ವಾರ
ಧೂಪದ ಜಾತಿಗೆ ಸೇರಿದ ಒಂದು ಮರ

ಹಾಲು ಮತಸ್ಥ – ೮
ಕುರುಬ ಜಾತಿ

ಹುಚ್ಚೆಳ್ಳೆಣ್ಣೆ – ೧೦೭
ಗುರ್ರೆಳ್ಳಿನ ಎಣ್ಣೆ ಅಥವಾ ಕರಿಎಳ್ಳಿನ ಎಣ್ಣೆ

ಹುಟ್ಟರೆ- ೧೧೪, ೧೧೬, ೧೬೦
ಮೂಲ ಶಿಲೆ

ಉಲುಪೆ – ೪೦೭, ೪೦೮
ಕಾಣಿಕೆ

ಹೆಡ್ಡನ್ ದಗ್ಲೆ – ೪೧೨
ಹಸಿರು ತರಕಾರಿ

ಹೆಚ್ಚಾಳ – ೧೨೬, ೧೩೫, ೧೩೯, ೧೪೦
ಹೆಚ್ಚುಗಾರಿಕೆ> ಸಂತಸ

ಹೊಡೆದಪ್ಪಂದ – ೧೬
ಹೊಡೆದ ಮಾದರಿಯಲ್ಲಿ

ಹೊದರ್ಬುಡ್ತು – ೨೦೯
ಜಾಡಿಸಿಬಿಟ್ಟಿತು

ಹೊದಿಕೆ – ೧೬೩
ಮನೆಯ ಮೇಲ್ಚಾವಣಿ

ಹೊರ್ಲಾರ್ದೇನೆ – ೨೦೩
ಹೊರಲಾರದೆ