ಮಂಗಳಾರತಿಯ ಎತ್ತಿದರು
ಮಾದಪ್ಪ ನಿನಗೆ ಕರ್ಪೂರದಾರ‍ತಿಯ ಬೆಳಗಿದರು
ಮಾದಪ್ಪ ನಿನಗೆ ಮಂಗಳಾರತಿಯ ಬೆಳಗಿದರು
ಉಡುವಾಗ ಹುಲಿಗಳ ವರ್ಣ
ಬೆಳೆವಾಗ ಕರಡಿಯ ರೂಪು
ಹುಟ್ಟಿದ ಮೂರೇಳು ದಿನಕೆ ಹುಲಿಯನೇ ಮೂರುತ ಮಾಡಿ || ಮಂಗಳಾರುತಿ ||
ಮಾದಪ್ಪ ನಿನಗೆ ಕರ್ಪಾರದ ಆರತಿ ಬೆಳಗಿದರು
ಉತ್ತಾಮಪುರಕ್ಕೆ ಬಂದು ಉತ್ರಾಜಮ್ಮನ ಇಡದು
ಉತ್ತಾಮಪುರಕ್ಕೆ ಬಂದೂ ಉತ್ರಾಜಮ್ಮನ ಇಡದು
ಎತ್ತ ತಾಯಿಯ ಪಡೆದೆ || ಮಂಗಳಾರುತಿ ||
ಮಾದಪ್ಪ ನಿಮಗೇ ಕರ್ಪಾರದಾರ‍ತಿ ಬೆಳಗಿದವೋ
ಸದ್ಗುರುವೇ ನಿಮಗೇ ಮಂಗಳಾರತೀಯ ಬೆಳಗಿದವೋ
ಸುತ್ತೂರು ಮಠಕ್ಕೆ ಬಂದು ಕುಕ್ಕೆಲಿ ರಾಗಿ ಬೀಸಿ
ಸಾಲೂರ ಮಠಾದ ಒಳಿಗೆ ಸರಣೂ ಸರಣೆಂಬ ರಾಗ || ಮಂಗಳಾರತಿ ||
ಮಾದಪ್ಪ ನಿಮಗೇ ಕರ್ಪಾರದ ಆರತಿಯ ಬೆಳಗಿದವೋ
ಕುಂತೂರು ಮಠಕ್ಕೆ ಬಂದು ಗುರುಗಳಾ ಮುಂದೆ ನಿಂತು
ಪಂಚೇಳು ದೀಕ್ಷಿತರಾಗಿ ಮುತ್ತಿನ ಜೋಳಿಗೆ ಪಡೆದು || ಮಂಗಳಾರುತಿ ||
ಮಾದಪ್ಪ ನಿಮ್ಮಗೆ ಕರ್ಪೂರದಾರತಿಯ ಬೆಳಗಿದವೋ
ಮುತ್ತಿನ ಜೋಳೀಗೆ ಪಡೆದು ಮುಂಗಾದಾರ ಮಾಡಿ
ಗುರುಗಳಿಗೆ ಸರಣ ಮಾಡಿ
ಏಳುಮಲೆಗೆ ಹೊರಟರಾಗ ಮಂಗಳಾರತಿಯ ಬೆಳಗಿದರೋ || ಮಂಗಳಾರುತಿ ||
ಏಳು ಮಲೆ ಕೈಲಾಸಕೆ ಬಂದು
ಜಾಗ ಒಳ್ಳೇದು ಎಂದು
ಸಾಲಾದ ಒಡ್ಡಿಗೆ ಬಂದೇ
ಏಳು ಮಲೆ ಮಾದೇವ ಸ್ವಾಮಿಗೆ || ಮಂಗಳಾರುತಿ ||
ಮಾದಪ್ಪ ನಿಮಗೆ ಕರ್ಪೂರದಾರತಿ ಬೆಳಗಿದೆವೋ
ಜಾಲದ ಒಡ್ಡಿಗೆ ಬಂದು
ಜಾಗ ಒಳ್ಳೇದು ಎಂದು
ಎಡ ಬಾಯಿ ಹೊನ್ನುತ್ತ ಸೇರಿ
ಏಳು ಮಲೇಲಿ ನೆಲೆಗೊಂಡೇ || ಮಂಗಳಾರತಿ ||
ಬೇವಿನ ಕಾಳಮ್ಮನಿಗೆ
ಬೇಡಿದ ವರವನ್ನು ಕೊಟ್ಟು
ಬೇವನಟ್ಟಿ ದುಡವ ನೋಡಿ || ಮಂಗಳಾರತಿ ||
ಬೇವನಟ್ಟಿ ದುಡವ ನೋಡಿ
ಬೇವನಟ್ಟಿ ಹಾಳು ಮಾಡೊ
ನಡಿಯೋರ್ಗೆ ರೋಡ್ ಮಾಡಿ
ಯೋಗದಲ್ಲಿ ನೆಲೆಗೊಂಡೆ || ಮಂಗಳಾರತಿ ||
ಆಲಂಬಾಡಿಗೆ ಹೋಗಿ
ಜುಂಜೇಗೌಡನ ಪಡೆದೆ
ಹಾಲಮಜ್ಜನಕ್ಕೆ ವಕ್ಕಲಪಡದೆ || ಮಂಗಳಾರತಿ ||
ಸೆಟ್ಟಿ ಸರಗೂರಗೇ ಬಂದು
ದುಡುವುಳ್ಲ ಮೂಗಯ್ಯನ ಪಡೆದು
ಎಣ್ಣೆ ಮಜ್ಜನಕ್ಕೆ ವಕ್ಕಲ ಪಡೆದ || ಮಂಗಳಾರತಿ ||
ಇಂದಿನ ವಾಲಗದಲ್ಲೀ
ನಂಬಿಕೊಳ್ಳಯ್ಯ ದೇವ
ನಾಳೆ ನಮ್ಮ ವಾಲಗದಲ್ಲೀ
ನಾಳೆ ಮೇಲೆ ಬನ್ನಿ ಗುರುವೇ || ಮಂಗಳಾರತಿ ||
ಇಂದಿನ ವಾಲಗದಲ್ಲೀ
ನಂಬಿಕೊಳ್ಳಯ್ಯ ದೇವ
ನಾಳೆ ನಮ್ಮ ವಾಲಗದಲ್ಲೀ
ನಾಳೆ ಮೇಲೆ ಬನ್ನಿ ಗುರುವೇ || ಮಂಗಳಾರತಿ ||
ಸದ್ಗುರುವೇ ನಿಮಗೆ || ಮಂಗಳಾರತಿ ||
ಸಾಲು ಮಠದ ಗುರುಗಳಾ ಪಾದಕೆ
ಹೂವ ಚೆಲ್ಲಾಡಿ ಬಂದೇವೋ
ವಿದ್ಯಗುರುವಿನ ಮ್ಯಾಲೇ
ಕಮಲ ಚೆಲ್ಲಾಡಿ ಬಂದೇವೋ
ವಿದ್ಯಗುರುವಿನ ಮ್ಯಾಲೇ
ಕಮಲ ಚೆಲ್ಲಾಡಿ ಬಂದೇವೋ
ತಂದೆ ತಾಯ್ಗಳ ಮ್ಯಾಲೇ || ಮಂಗಳಾರತಿ ಬೆಳಗಿದೆವೋ ||
ಗುರು ಹಿರಿಯರ ಮ್ಯಾಲೇ
ಹೂವ ಚೆಲ್ಲಾಡಿ ಬಂದೇವೋ
ಸತ್ತಿನ ಶನಿದೇವನ ಮ್ಯಾಲೇ
ತುಳಸಿ ಚೆಲ್ಲಾಡಿ ಬಂದೇವೋ
ಹೊತ್ತಿರುವ ಭೂಮಿ ತಾಯ್ಗೇ || ಮಂಗಳಾರುತಿ ಬೆಳಗಿದೆವೋ ||

ನಾವೆಲ್ಲ ಸೇರಿ || ಮಂಗಳಾರುತಿ ||
ಹರ ನಮಃ ಪಾರ್ವತಿ ಪತಿಯೆ
ಹರ ಮಹದೇವ ಶಂಭೋ
ಬಸವಾದಿ ಪ್ರಮಥರ ಪಾದಕ್ಕೆ ಜೈ ಪರಾಕ್