ಬೆಂಗಳೂರು ಕರ್ನಾಟಕದ ರಾಜಧಾನಿ. ಉದ್ಯಾನ ನಗರಿ, ಭಾರತದ ಸಿಲಿಕಾನ್ ಕಣಿವೆ, ಮುಂತಾದ ಅನೇಕ ಬಿರುದುಗಳನ್ನು ಹೊಂದಿರುವ ನಗರ. ಸುಮಾರು ೮೦ ಲಕ್ಷ ಜನ ಸಂಖ್ಯೆ ಹೊಂದಿರುವ ಭಾರತದ ಅತೀ ದೊಡ್ಡ ನಗರ ಹಾಗೂ ಏಷ್ಯಾದಲ್ಲೇ ಅಭಿವೃದ್ಧಿ ಹೊಂದುತ್ತಿರುವ ನಗರ. ಇತ್ತೀಚೆಗೆಬೆಂಗಳೂರ್ಅನ್ನು ಬೆಂಗಳೂರುಎಂದು ಪುನರ್ನಾಮಕರಣ ಮಾಡಲಾಗಿದೆ. ಸಮುದ್ರಮಟ್ಟದಿಂದ ೯೦೦ ಮೀ ಎತ್ತರದಲ್ಲಿದೆ. ಭೌಗೋಳಿಕವಾಗಿ ೭೭.೩೮ ಪೂರ್ವ ರೇಖಾಂಶ ಉ ಹಾಗೂ ೧೨.೫೮ ಉ ಅಕ್ಷಾಂಶದಲ್ಲಿದೆ. ಸುಮಾರು ೧೪೦ ಸೆಂಟಿ ಗ್ರೇಡ್ ರಿಂದ ೩೫೦ ಸೆಂಟಿಗ್ರೇಡ್ ರವರೆಗೆ ಉಷ್ಣಾಂಶವಿರುವುದು.

ಬೆಂಗಳೂರಿಗೆ ಹೆಚ್ಚು ಕಡಿಮೆ ಮೂರು ಸಾವಿರ ವರ್ಷಗಳ ಇತಿಹಾಸವಿದೆ. ಕ್ರಿ..೫ನೇ ಶತಮಾನದಲ್ಲಿ ಗಂಗವಾಡಿ ತೊಂಭತ್ತಾರು ಸಾವಿರ ಪ್ರಾಂತದಲ್ಲಿ ಬೆಂಗಳೂರು ಇತ್ತೆಂಬುದು ಇತಿಹಾಸದಿಂದ ತಿಳಿಯುತ್ತದೆ. ಕೋಟೆಯ ಒಂದು ಭಾಗದಲ್ಲಿ ಸಳನು ಹುಲಿಯನ್ನು ಕೊಲ್ಲುತ್ತಿರುವ ಶಿಲಾ ಪ್ರತಿಮೆ ಹೊಯ್ಸಳರ ಪ್ರಭಾವ ಹೊಂದಿದೆಯಂದು ಇತಿಹಾಸಕಾರರು ನುಡಿಯುತ್ತಾರೆ. ೧೪ನೆಯ ಶತಮಾನದಲ್ಲಿ ಮೊಹಮ್ಮದೀಯರ ದಾಳಿಯನ್ನೆದುರಿಸಿ ತಲೆ ಎತ್ತಿ ನಿಂತವಿಜಯನಗರ ಸಾಮ್ರಾಜ್ಯ. ಈ ಸಾಮ್ರಾಜ್ಯದ ಮಾಂಡಲಿಕ ಅರಸು ಮನತನವೇ ಯಲಹಂಕ ಪ್ರಭುಗಳು. ಈ ಮನೆತನದ ಹಿರಿಯ ಕೆಂಪೇಗೌಡ ೧೫೩೭ ರಲ್ಲಿ ಬೆಂಗಳೂರು ನಗರ ಸ್ಥಾಪಿಸಿ, ಅಭಿವೃದ್ಧಿಗೆ ಗಂಧದ ಕೊರಡಿನಂತೆ ಜೀವ ಸವಿಸಿದ ಬಗ್ಗೆ ಇತಿಹಾಸವಿದೆ. ಕೆಂಪೇಗೌಡರ ನಂತರ ಇಮ್ಮಡಿ ಕೆಂಪೇಗೌಡರು, ಮರಾಠರು, ಮೈಸೂರಿನ ಒಡೆಯರು, ಬಿಜಾಪುರದ ಸುಲ್ತಾನರು, ಚೋಳರು ಮತ್ತು ಬ್ರಿಟಿಷರು ಬೆಂಗಳೂರನ್ನು ಆಳಿ ಅಭಿವೃದ್ಧಿ ಪಡಿಸುತ್ತಾ ಬಂದಿದ್ದಾರೆ.

ಹೀಗೆ ಕಾಲದಿಂದ ಕಾಲಕ್ಕೆ ಅನೇಕ ರೂಪಾಂತರದೊಂದಿಗೆ ಬೆಂಗಳೂರು ತನ್ನ ವಿಶಿಷ್ಠತೆಯಿಂದ ಮೆರೆಯುತ್ತಾ ಬಂದಿದೆ. ಈಗ ಬೆಂಗಳೂರು ಬರೀ ಐವತ್ತು ವರ್ಷಗಳಲ್ಲಿ ಆಧುನಿಕತೆಯನ್ನು ಮೈಗೂಡಿಸಿಕೊಂಡು ಇಡೀ ವಿಶ್ವವೇ ಬೆರಗಿನಿಂದ ನೋಡುವಂತೆಬೆಳೆದಿದೆ. ಜೀವನ ಶೈಲಿ, ವಿದ್ಯಾಭ್ಯಾಸ, ಉದ್ಯಮ, ಕಟ್ಟಡ ವಿನ್ಯಾಸ, ರಸ್ತೆಗಳು, ಫ್ಯಾಷನ್, ತಂತ್ರಜ್ಞಾನ ಎಲ್ಲವೂ ಸಮಕಾಲೀನ ಪ್ರಪಂಚದೊಂದಿಗೆ ದಾಪು ಹೆಜ್ಜೆ ಹಾಕುತ್ತ ಸಾಗಿದೆ. ಅಲ್ಲದೆ ಮೂಲಭೂತ ಸೌಕರ್ಯಗಳಾದ ಬಸ್‌ಸ್ಟ್ಯಾಂಡ್, ಪುಟ್‌ಪಾತ್‌ಗಳು, ಸಾರಿಗೆ ವ್ಯವಸ್ಥೆ, ವಾಹನ ನಿಲುಗಡೆ, ಕುಡಿಯುವ ನೀರು ಸರಬರಾಜು, ವಿದ್ಯುತ್ ಪೂರೈಕೆ, ಪರಿಸರ ಈ ಎಲ್ಲವೂ ಈಚಿನ ದಶಕಗಳ ಸಾಧನೆ.

ದೂರ ಎಷ್ಟು ?

ಜಿಲ್ಲೆ : ಬೆಂಗಳೂರು ನಗರ
ವಿಧಾನ ಸೌಧದಿಂದ : ೨೦ ಕಿ.ಮೀ

ಬೆಂಗಳೂರಿನಲ್ಲಿ ಇತ್ತೀಚಿನ ದಶಕಗಳಲ್ಲಿ ಕಂಪ್ಯೂಟರ್ ತಂತ್ರಜ್ಞಾನ ಅದ್ಭುತವಾಗಿ ಬೆಳದಿದೆ. ದೇಶ ವಿದೇಶಗಳಿಂದ ಬರುವ ಗಣ್ಯರು ಇಲ್ಲಿಯ ಅನುಕೂಲಗಳನ್ನು ಮೆಚ್ಚಿ ಮಾತನಾಡಿದ್ದಾರೆ, ಮಾತ್ರವಲ್ಲ ಪ್ರಪಂಚದ ಅತೀ ಶ್ರೀಮಂತ ಸಂಸ್ಥೆಗಳು ಇಲ್ಲಿ ವ್ಯಾಪಾರ ವಹಿವಾಟು ನಡೆಸುತ್ತಿದ್ದಾರೆ, ವಿಪ್ರೋ, ಇನ್‌ಫೋಸಿಸ್ ಇತ್ಯಾದಿ ಕಂಪನಿಗಳು ಬೆಂಗಳೂರಿನಲ್ಲಿ ಯಶಕಂಡು ಜಗತ್ತಿನ ಮಾಹಿತಿ ತಂತ್ರಜ್ಞಾನಕ್ಕೆ ಕಾಣಿಕೆ ನೀಡುತ್ತಾ ಸ್ಥಳೀಯ ಬೆಂಗಳೂರಿಗೆ ಉದ್ಯೋಗಾವಕಾಶವನ್ನು ಕಲ್ಪಿಸಿವೆ. ಈ ಕಾರಣಗಳಿಂದ ಬೆಂಗಳೂರು ಸಿಲಿಕಾನ್ ವ್ಯಾಲಿಎಂದು ಪ್ರಸಿದ್ಧಿ ಪಡೆದಿದೆ. ‘ನಿರ್ಮಲ ಬೆಂಗಳೂರು’, ‘ಕೆರೆ ಉಳಿಸಿಯೋಜನೆ ಬೆಂಗಳೂರಿಗೆ ಆತ್ಮವಿಶ್ವಾಸವನ್ನು ತುಂಬಿದೆ. ಬೆಂಗಳೂರಿನ ಡಾಕ್ಟರುಗಳು, ಇಂಜಿನಿಯರುಗಳು ವಿಶ್ವ ಮಾನ್ಯರಾಗುತ್ತಿದ್ದಾರೆ.

ಬೆಂಗಳೂರಿನ ಕಂಟೋನ್ಮೆಂಟ್, ಟಿಪ್ಪು ಅರಮನೆ, ಕಬ್ಬನ್‌ಪಾರ್ಕ್, ಹೈಕೋರ್ಟ್ ಲಾಲ್‌ಬಾಗ್, ಬೆಂಗಳೂರಿನ ಅಂತರ್‌ರಾಷ್ಟ್ರೀಯ ವಿಮಾನ ನಿಲ್ದಾಣ, ಬನ್ನೇರುಘಟ್ಟದ ರಾಷ್ಟ್ರೀಯ ಪ್ರಾಣಿ ಉದ್ಯಾನವನ, ವಿಶ್ವೇಶ್ವರಯ್ಯ ಮ್ಯೂಸಿಯಂ, ಜವಾಹರಲಾಲ್ ನೆಹರು ಪ್ಲಾನೆಟೋರಿಯಂ, ಬೆಂಗಳೂರು ಅರಮನೆ ಕಲೆಯ ವೆಂಕಟಪ್ಪ ಗ್ಯಾಲರಿ, ಸಂಗೀತದ ಚೌಡಯ್ಯ ಮೆಮೋರಿಯಲ್ ಹಾಲ್, ಕನ್ನಡ ಸಾಹಿತ್ಯ ಪರಿಷತ್ತು ಧಾರ್ಮಿಕ ಇಸ್ಕಾನ್ ಮಂದಿರ ಹಾಗೂ ಆಡಳಿತ ಕೇಂದ್ರ ವಿಧಾನಸೌಧ ಮೊದಲಾದ ಐತಿಹಾಸಿಕ ಸ್ಥಳಗಳು ಬೆಂಗಳೂರಿನ ಹಿರಿಮೆಯನ್ನು ಸಾರಿ ಸಾರಿ ಹೇಳುತ್ತವೆ.

ದೇಶ ವಿದೇಶಗಳ ಎಲ್ಲಾ ಜಾತಿ, ಮತ, ಧರ್ಮ ಮತ್ತು ಭಾಷೆ ಹಾಗೂ ವಿವಿಧ ಸಂಸ್ಕೃತಿ ಸಂಪ್ರದಾಯದ ಜನ ಇಲ್ಲಿದ್ದಾರೆ. ರಾಷ್ಟ್ರಕವಿ ಕುವೆಂಪು ರವರು ಈ ದೇಶವನ್ನು ಸರ್ವಜನಾಂಗದ ಶಾಂತಿಯ ತೋಟಎಂದು ಕರೆದಿದ್ದಾರೆ.

ವ್ಯಕ್ತಿತ್ವ ಬೆಳವಣಿಗೆ, ಮಾನಸಿಕ ಸ್ಥಿಮಿತತೆ, ದೇಶಾಭಿಮಾನ, ಸ್ವಾಭಿಮಾನ, ಯೋಗ, ತತ್ವ, ಔಷಧ ಮೊದಲಾದವುಗಳಲ್ಲಿ ಯುವ ಜನತೆಆಸಕ್ತಿ ತೋರಿಸುತ್ತಿದ್ದಾರೆ. ಸಾಮಾಜಿಕವಾಗಿ, ರಾಜಕೀಯವಾಗಿ, ನೈತಿಕವಾಗಿ, ಸಾಂಸ್ಕೃತಿಕವಾಗಿ, ಧಾರ್ಮಿಕವಾಗಿ ಶಿಸ್ತಿನ ತಳಹದಿಯ ಮೇಲೆ ಭದ್ರ ನೆಲೆ ಕಟ್ಟುತ್ತಿದ್ದಾರೆ. ಸಿನಿಮಾ, ನಾಟಕ, ನೃತ್ಯ ಪ್ರದರ್ಶಿಸುವ ತಾಣಗಳು ನಿಜವಾದ ಮನರಂಜನೆ ನೀಡುತ್ತ ಬಂದಿವೆ. ಕನ್ನಡ ಪ್ರಭ, ಪ್ರಜಾವಾಣಿಯಂತಹ ಪತ್ರಿಕೆಗಳು ತಾಜಾ ತಾಜಾ ಮಾಹಿತಿ ನೀಡುತ್ತ ಜ್ಞಾನವಾಣಿಗಳಾಗಿವೆ. ಸಿದ್ಧ ಉಡುಪುಗಳಿಗೆ, ಬೇಕುಬೇಕಾದ ತಿಂಡಿ ತಿನಿಸುಗಳಿಗೆ ಬೆಂಗಳೂರು ತನ್ನದೇ ಆದ ಸಾರದೊಂದಿಗೆ ಪ್ರವಾಸಿಗರನ್ನು ಕೈ ಬೀಸಿ ಕರೆದು ಅತಿಥಿಗಳ ಉಪಚಾರದೊಂದಿಗೆ ಅತಿಥಿ ದೇವೋಭವಎಂಬ ಮಾತಿಗೆ ಉದಾಹರಣೆಯಾಗಿದೆ.

ಉತ್ತಮ ಹವೆ ಹೊಂದಿರುವುದರಿಂದ ಬೆಂಗಳೂರು ಒಂದು ಆಕರ್ಷಕ ಪ್ರವಾಸಿ ತಾಣ. ಇದು ಪ್ರತಿಯೊಬ್ಬರಿಗೂ ತನ್ನದೇ ನಗರವೆಂಬಂತೆ ಅನುಭವ ನೀಡುವ ಸ್ಥಳ.


 ವಿಧಾನಸೌಧ :

ಕರ್ನಾಟಕ ಸರ್ಕಾರದ ಹೆಮ್ಮೆಯ ವಾಸ್ತುಶಿಲ್ಪ ವಿಧಾನಸೌಧ. ನಗರದ ರೈಲ್ವೆ ನಿಲ್ದಾಣದಿಂದ ಮೂರು ಕಿ.ಮೀ ಅಂತರದಲ್ಲಿದೆ. ಆಗಿನ ಮುಖ್ಯಮಂತ್ರಿಯಾಗಿದ್ದ ಕೆಂಗಲ್ ಹನುಮಂತರಾಯರ ಮುಂದಾಲೋಚನೆಯಿಂದ ಸರ್ಕಾರದ ಆಡಳಿತಗಳೆಲ್ಲ ಒಂದೇ ಕಟ್ಟಡದಲ್ಲಿ ನಡೆಯಬೇಕೆಂಬ ಆಶಯದೊಂದಿಗೆ ಈ ಕಟ್ಟಡ ನಿರ್ಮಾಣಕ್ಕೆ ಮುಂದಾದರು. ಸುಮಾರು ೧.೭೫ ಕೋಟಿ ಅಂದಾಜು ವೆಚ್ಚದಲ್ಲಿ ಮುಖ್ಯ ಎಂಜಿನಿಯರ್ ಮುನಿಸ್ವಾಮಪ್ಪನವರ ನೇತೃತ್ವದಲ್ಲಿ ಮಾಣಿಕ್ಯ ವಾಸ್ತು ಶಿಲ್ಪಿಗಳ ವಾಸ್ತು ಶಿಲ್ಪದಲ್ಲಿ ನಿರ್ಮಿಸಿದರು. ಶ್ರೀ ಹನುಮಂತಯ್ಯನವರಿಗೆ ೧೯೫೬ ರಲ್ಲಿ ನಿರ್ಮಿಸಿದ ದೆಹಲಿ ರಾಷ್ಟ್ರಪತಿ ಭವನವು ಸ್ಫೂರ್ತಿದಾಯಕವಾಗಿದೆ. ಇತ್ತೀಚೆಗೆ ಇದರ ಪಕ್ಕದಲ್ಲೊಂದು ತದ್ರೂಪಿ ವಿಕಾಸಸೌಧ ನಿರ್ಮಿಸಲಾಗಿದೆ. ವಿಜಯ ದಶಮಿಯಂದು ಉದ್ಘಾಟನೆಯಾಯಿತು.

ಈ ಕಟ್ಟಡವು ದ್ರಾವಿಡ ಶೈಲಿಯಲ್ಲಿದ್ದು, ಪ್ರಮುಖ ನಾಲ್ಕು ಮುಖ್ಯದ್ವಾರಗಳಿವೆ. ನೆತ್ತಿಯಲ್ಲಿ ಕಿರೀಟದಂತೆ ಗುಮ್ಮಟವಿದೆ. ನಾಲ್ಕು ತಲೆಗಳ ಸಿಂಹಲಾಂಛನವಿದೆ. ಮೂರು ಅಂತಸ್ತಿನ ಗ್ರಾನೈಟ್ ಕೆತ್ತನೆ ಕಲ್ಲುಗಳಿಂದ ನಿರ್ಮಿಸಲಾಗಿದೆ. ಮಹಡಿಗೊಂದರಂತೆ ವಿಶಾಲ ಸಭಾಂಗಣವಿದೆ. ವಿಧಾನಸಭೆ ಹಾಗೂ ವಿಧಾನ ಪರಿಷತ್ ಅಧಿವೇಶನ ನಡೆಸಲು ಸಭಾಂಗಣಗಳಿವೆ. ವಿಧಾನಸಭೆ ಮತ್ತು ವಿಧಾನ ಪರಿಷತ್ ಹಾಗೂ ಸಚಿವಾಲಯಗಳು, ಸರ್ಕಾರದ ಆಡಳಿತ ನಡೆಯುತ್ತಿದೆ. ಬೆಂಗಳೂರಿಗೆ ಬಂದ ಪ್ರತಿಯೊಬ್ಬ ಪ್ರವಾಸಿಗನೂ ಇದರ ಸೌಂದರ್ಯವನ್ನು ನೋಡಲೇಬೇಕು.

 

ಬೆಂಗಳೂರು ಅರಮನೆ :

ದೂರ ಎಷ್ಟು?
ಜಿಲ್ಲೆ : ಬೆಂಗಳೂರು ನಗರ
ವಿಧಾನ ಸೌಧದಿಂದ : ೪ ಕಿ.ಮೀ

ಬೆಂಗಳೂರು ಅರಮನೆಯು ಭಾರತದಲ್ಲಿನ ಅರಮನೆಯಲ್ಲಿ ಒಂದು. ಬೆಂಗಳೂರು ನಗರದ ಹೃದಯ ಭಾಗದಲ್ಲಿರುವ ಈ ಅರಮನೆಯು ಉದ್ಯಾನವನಗಳಲ್ಲಿದೆ. ೧೮೮೭ ರಲ್ಲಿ ಒಡೆಯರ್ ಮನೆತನವು ಭವ್ಯವಾದ ಮರದ ಕೆತ್ತನೆ ಹಾಗೂ ಟ್ಯೂಡರ್ವಾಸ್ತುಶಿಲ್ಪದ ಶೈಲಿಯಲ್ಲಿ ಅರಮನೆಯ ಒಳಭಾಗವನ್ನು ವಿನ್ಯಾಸಗೊಳಿಸಿ ನಿರ್ಮಿಸಿರುತ್ತಾರೆ. ವಾಸ್ತವವಾಗಿ ಈ ಅರಮನೆಯು ನಾರ್ಮಂಡಿ ಮತ್ತು ಇಂಗ್ಲೆಂಡಿನಲ್ಲಿ ನಿರ್ಮಿಸಿರುವಂತ ಮಧ್ಯಕಾಲೀನ ಕೋಟೆಗಳನ್ನು ಹೋಲುತ್ತದೆ. ಒಡೆಯರ್ ಸಾಮ್ರಾಜ್ಯದ ರಾಜ ಚಾಮರಾಜ ಒಡೆಯರ‍್ರವರು, ಇಂಗ್ಲೆಂಡ್ ಪ್ರವಾಸವನ್ನು ಕೈಗೊಂಡಿದ್ದಾಗ ಲಂಡನ್ನಿನ ವಿಂಡ್ಸರ್ ಕಾಸ್ಟಲ್/ಕೋಟೆ ಮನೆಯು ಇವರನ್ನು ಹೆಚ್ಚು ಪ್ರಭಾವಿಸಿತ್ತು. ಟ್ಯೂಡರ್ ಶೈಲಿಯ ವಾಸ್ತುಶಿಲ್ಪಕ್ಕೆ ಮಾರುಹೋದ ಇವರು ನಗರದಲ್ಲಿ ಬೆಂಗಳೂರು ಅರಮನೆಯನ್ನು ನಿರ್ಮಿಸಿದರು.

 

ಕಬ್ಬನ್‌ಪಾರ್ಕ್ :

ದೂರ ಎಷ್ಟು?
ಜಿಲ್ಲೆ : ಬೆಂಗಳೂರು ನಗರ
ವಿಧಾನ ಸೌಧದಿಂದ : ೧ ಕಿ.ಮೀ

ಕಬ್ಬನ್‌ಪಾರ್ಕ್ ವಿಧಾನಸೌಧದ ಎದುರುಗಿರುವ ಹೈಕೋರ್ಟ್ ಕಟ್ಟಡದ ಹಿಂದಿರುವ ಉದ್ಯಾನ ಪ್ರದೇಶ. ವಿಶಾಲವಾಗಿದ್ದು, ನಾನಾರೀತಿಯ ಮರ ಗಿಡಗಳಿಂದ ಕೂಡಿದೆ. ಇದರ ಮೊದಲ ಹೆಸರು ಶ್ರೀ ಚಾಮರಾಜೇಂದ್ರ ತೋಟ’. ಆಗಿನ ಕಮೀಷನರ್ ಆಗಿದ್ದ ಮಾರ್ಕ್ ಕಬ್ಬನ್ ಮೊದಲು ಸ್ಥಾಪಿಸಿದ್ದರಿಂದ ಅವರ ನೆನಪಿಗಾಗಿ ಇದನ್ನು ಕಬ್ಬನ್‌ಪಾರ್ಕ್ಎಂದು ಕರೆಯಲಾಗಿದೆ. ಇದು ವಿಧಾನಸೌಧ ವೀದಿಯಿಂದ ಹಿಡಿದು, ಮ್ಯೂಸಿಯಂ ರಸ್ತೆಯವರೆವಿಗೂ, ಒಂದು ಕಡೆ ಕ್ರಿಕೆಟ್ ಸ್ಟೇಡಿಯಂವರೆಗೂ, ಇನ್ನೊಂದು ಕಡೆ ಕಾರ್ಪೊರೇಷನ್ ಆಫೀಸ್‌ವರೆಗೂ ಹರಡಿಕೊಂಡಿದೆ. ಒಂದಾನೊಂದು ಕಾಲದಲ್ಲಿ ಈ ತಾಣ ಪೂರ್ತಿ ಬರೀ ಮಹಾವೃಕ್ಷಗಳ ಪ್ರದೇಶವೇ ಆಗಿದ್ದಿರಬೇಕು. ಮುಂದಿನ ವರ್ಷಗಳಲ್ಲಿ ಅಠಾರಾ ಕಛೇರಿ (ಹೈಕೋರ್ಟ್), ಕರ್ನಾಟಕ ಸರ್ಕಾರದ ವಿಮಾ ಇಲಾಖೆ ಕಟ್ಟಡ, ಪಬ್ಲಿಕ್ ಲೈಬ್ರರಿ, ಸೆಕ್ರೆಟೆರಿಯಟ್ ಕ್ಲಬ್, ಕಬ್ಬನ್‌ಪಾರ್ಕ್ ರೆಸ್ಟೋರೆಂಟ್ ಎಂದು ಕರೆಸಿಕೊಳ್ಳುತ್ತಿದ್ದ ಈಗಿನ ಮಕ್ಕಳ ಪುಸ್ತಕ ಭಂಡಾರ, ಅದರ ಮುಂದೆ ಎಲೆಕ್ಟ್ರಿಕ್ ಆಫೀಸ್ ಪಕ್ಕದಲ್ಲಿಯೇ ಸೆಂಚುರಿ ಕ್ಲಬ್, ನ್ಯೂ ಪಬ್ಲಿಕ್ ಆಫೀಸ್ ಸಾಲಿನ ಕಟ್ಟಡಗಳು, ಪೋಲೀಸ್ ಮಹಾನಿರ್ದೇಶಕ ಕಛೇರಿ, ಆ ಕಡೆ ಮ್ಯೂಜಿಯಂ ಕಟ್ಟಡಗಳು, ಬಾಲಭವನ, ಪುಟಾಣಿ ರೈಲು, ಪೋಲೀಸ್ ಸ್ಟೇಷನ್ ಹೀಗೆ ಅನೇಕ ಕಟ್ಟಡಗಳು ಈ ಮಹಾನ್ ಉದ್ಯಾನದಲ್ಲಿ ನಿರ್ಮಾಣಗೊಂಡಿವೆ. ಹೀಗೆ ತನ್ನ ಕಾಲು ಭಾಗವನ್ನು ಕಳೆದುಕೊಂಡರೂ ವಿಸ್ತಾರವಾಗಿಯೇ ಕಬ್ಬನ್‌ಪಾರ್ಕ್ ಕಾಣುತ್ತದೆ.

 

ಇಸ್ಕಾನ್ ದೇವಾಲಯ :

ದೂರ ಎಷ್ಟು?

ಜಿಲ್ಲೆ : ಬೆಂಗಳೂರು ನಗರ
ವಿಧಾನ ಸೌಧದಿಂದ : ೧೦ ಕಿ.ಮೀ

ಬೆಂಗಳೂರಿನ ವಿಧಾನಸೌಧ ದಿಂದ ೧೦ ಕಿ.ಮೀ ದೂರವಿದೆ. ಈ ದೇವಾಲಯವು ಏಳು ಎಕರೆ ವಿಶಾಲ ಪ್ರದೇಶದಲ್ಲಿ ಹರೆ ಕೃಷ್ಣಗುಡ್ಡದ ಮೇಲೆ ನಿರ್ಮಾಣವಾಗಿದೆ. ಆಧುನಿಕ ತಂತ್ರಜ್ಞಾನ, ತಾತ್ವಿಕ ಸಮಷ್ಠಿಗಳ ಅತ್ಯುತ್ತಮ ಪವಿತ್ರ ಮಿಶ್ರಣವಾಗಿದೆ. ರಾಧಾಕೃಷ್ಣ, ಶ್ರೀ ಕೃಷ್ಣಬಲರಾಮ ಮತ್ತು ನಿಟಾಯಿ ಗೌರಾಂಗ ಇವುಗಳ ಮೂರು ಗರ್ಭಗುಡಿ ಒಳಗೊಂಡ ಮುಖ್ಯ ಪ್ರಾಂಗಣವಿದೆ. ಇದೊಂದು ಸಾಂಸ್ಕೃತಿಕ ಸಂಕೀರ್ಣ. ಇಲ್ಲಿ ವರ್ಷಕ್ಕೊಮ್ಮೆ ಕೃಷ್ಣ ಬಲರಾಮರ ರಥಯಾತ್ರೆ ಜನಪ್ರಿಯ.

 

ವಿಶ್ವೇಶ್ವರಯ್ಯ ಕೈಗಾರಿಕಾ ಮತ್ತು ತಾಂತ್ರಿಕ ವಸ್ತು ಸಂಗ್ರಹಾಲಯ :

ದೂರ ಎಷ್ಟು?
ಜಿಲ್ಲೆ : ಬೆಂಗಳೂರು ನಗರ
ವಿಧಾನ ಸೌಧದಿಂದ : ೧ ಕಿ.ಮೀ

ಈ ಕೈಗಾರಿಕಾ ಮತ್ತು ತಾಂತ್ರಿಕ ವಸ್ತು ಸಂಗ್ರಹಾಲಯವನ್ನು ಭಾರತರತ್ನ ಸರ್.ಎಂ. ವಿಶ್ವೇಶ್ವರಯ್ಯನವರ ನೆನಪಿನಲ್ಲಿ ೧೯೬೫ ರಲ್ಲಿ ಸ್ಥಾಪಿಸಲಾಯಿತು. ಮ್ಯೂಸಿಯಂ ಆವರಣದಲ್ಲಿ ರಾಕೆಟ್, ವಿಮಾನ, ರೈಲುಇಂಜಿನ್ ಮೊದಲಾದವುಗಳ ಬೃಹತ್ ಆಕಾರಗಳನ್ನು ನಿರ್ಮಿಸಲಾಗಿದೆ. ಒಳಹೊಕ್ಕಂತೆವಿಜ್ಞಾನದ ವಿವಿಧ ತಾಂತ್ರಿಕ ವಿಭಾಗ, ಮರ ಮತ್ತು ಕಾಗದ, ಜನಪ್ರಿಯ ವಿಜ್ಞಾನ, ದೂರದರ್ಶನ ಮೊದಲಾದ ಹಲವು ವಿಭಾಗಗಳು ವಿವಿಧ ಮಹಡಿಗಳಲ್ಲಿ ಪ್ರದರ್ಶಿಸಲಾಗಿದೆ. ಇಲ್ಲಿ ಸಂಗ್ರಹಿಸಿರುವ ಗಡಿಯಾರಗಳುಅವು ಬೆಳೆದು ಬಂದ ಬಗೆಯನ್ನು ಹೇಳುತ್ತವೆ. ಹೆಚ್ಚಾಗಿ ಕಿರಿಯರನ್ನು ಆಕರ್ಷಿಸುವ ಈ ಸಂಸ್ಥೆಯು ನವದೆಹಲಿಯ ಕೌನ್ಸಿಲ್ ಆಫ್ ಸೈಂಟಿಫಿಕ್ ಅಂಡ್ ಇಂಡಸ್ಟ್ರಿಯಲ್ ರೀಸರ್ಚ್ ಸಂಸ್ಥೆಯಿಂದ ನಿರ್ವಹಿಸಲ್ಪಡುತ್ತದೆ. ಇದರ ಉದ್ದೇಶ ಎಲ್ಲಾ ವಿಧದ ಪ್ರಯೋಗಗಳ ಮೂಲಕ ವಿಜ್ಞಾನ ತಂತ್ರಜ್ಞಾನಗಳ ಅರಿವು ಜನರಿಗೆ ಮೂಡಿಸುವುದಾಗಿದೆ. ಅಲ್ಲದೆ ಇಲ್ಲಿ ಕೆಲವು ಪುರಾತನ ವಸ್ತುಗಳು ಮೊದಲಾದ ಹತ್ತು ಹಲವು ವಸ್ತುಗಳನ್ನು ಸಂಗ್ರಹಿಸಿಡಲಾಗಿದೆ. ಮೋಟಿವ್ ಫವರ್, ಎಲೆಕ್ಟ್ರೋಟೆಕ್ನಿಕ್ ಮರ ಮತ್ತು ಲೋಹ, ಜನಪ್ರಿಯ ವಿಜ್ಞಾನ, ಮಕ್ಕಳ ವಿಜ್ಞಾನ ಇವು ಸದ್ಯ ಇರುವ ವಿಭಾಗಗಳು, ಇಲ್ಲಿ ವೈಜ್ಞಾನಿಕ ವಸ್ತುಗಳನ್ನು ಹೇಗೆ ಬಳಸಬೇಕು ಎಂಬುದಕ್ಕೆ ಅಲ್ಲಲ್ಲೆ ಫಲಕಗಳನ್ನು ಬರೆಸಿಡಲಾಗಿದೆ.

 

ಲಾಲ್‌ಬಾಗ್ ಸಸ್ಯತೋಟ :

ದೂರ ಎಷ್ಟು?
ಜಿಲ್ಲೆ : ಬೆಂಗಳೂರು ನಗರ
ವಿಧಾನ ಸೌಧದಿಂದ : ೩ ಕಿ.ಮೀ

ಬೆಂಗಳೂರು ನಗರದ ಮಾರುಕಟ್ಟೆಯ ಆಗ್ನೇಯಕ್ಕೆ ೨ ಕಿ.ಮೀ ದೂರದಲ್ಲಿರುವ ಲಾಲ್‌ಬಾಗ್ ಅಂದವಾಗಿ ಯೋಜಿಸಿದ ಈ ಉದ್ಯಾನವನ ಸಸ್ಯಕಾಶಿಯೆಂದೇ ಪ್ರಸಿದ್ಧವಾಗಿದೆ. ೧೬ನೇ ಶತಮಾನದಲ್ಲಿ ಹೈದರಾಲಿಯಿಂದ ನಿರ್ಮಾಣ ಕಾರ್ಯ ಪ್ರಾರಂಭಗೊಂಡು ಆತನ ಮಗ ಟಿಪ್ಪು ಸುಲ್ತಾನ್ ೧೭೬೦ ರಲ್ಲಿ ಪೂರ್ಣಗೊಳಿಸಿದ್ದಾನೆ. ಸುಮಾರು ೨೪೦ ಎಕರೆ ವಿಸ್ತೀರ್ಣವುಳ್ಳ ಈ ಸಸ್ಯತೋಟವು ೧೦೦ ವರ್ಷಗಳಿಗಿಂತಲೂ ಹಳೆಯದಾದ ಮರಗಳು, ಅಪರೂಪದ ಹೂ ಗಿಡಗಳು ಮತ್ತು ಭಿನ್ನಭಿನ್ನ ಸಸ್ಯರಾಶಿಯನ್ನು ಹೊಂದಿದೆ. ಪರ್ಷಿಯ, ಆಫ್‌ಘಾನಿಸ್ತಾನ್ ಮತ್ತು ಫ್ರಾನ್ಸ್ ದೇಶಗಳಿಂದ ಸಸ್ಯಗಳನ್ನು ತರಿಸಿಕೊಂಡು ವಿಶೇಷವಾಗಿ ಇಲ್ಲಿ ಬೆಳೆಸಲಾಗಿದೆ. ಲಾಲ್‌ಬಾಗ್ ಸಸ್ಯಶಾಸ್ತ್ರಜ್ಞರಿಗೆ ಹಾಗೂ ಅಧ್ಯಯನ ಶೀಲರಿಗೆ ಒಂದು ಮಾಹಿತಿಯ ಆಕರ ತಾಣವಾಗಿದೆ. ಲಂಡನ್ನಿನ ಕ್ರಿಸ್ಟಲ್ ಪ್ಯಾಲೇಸ್ ಮಾದರಿಯ ಗಾಜಿನ ಮನೆ, ೭ ಮೀ ವ್ಯಾಸವುಳ್ಳ ಒಂದು ಬೃಹದಾಕಾರ ವಿದ್ಯುನ್ಮಾನ ಪುಷ್ಪಗಡಿಯಾರ, ಸುಮಾರು ಮೂರು ಸಾವಿರದಷ್ಟು ಹಳೆಯದಾದ ಮರದ ಪಳೆಯುಳಿಕೆ ಹಾಗೂ ಇಲ್ಲಿನ ವೃಕ್ಷವರ್ಗಕ್ಕೆ ಜಲಜೀವನಾಧಾರವಾಗಿರುವ ಕೆರೆಯನ್ನು ಒಳಗೊಂಡಿದೆ.ರಾಷ್ಟ್ರೀಯ ಹಬ್ಬಗಳಾದ ಸ್ವಾತಂತ್ರ್ಯ ದಿನಾಚರಣೆ ಹಾಗೂ ಗಣರಾಜ್ಯೋತ್ಸವಗಳ ದಿನಗಳಲ್ಲಿ ಫಲ ಪುಷ್ಪ ಪ್ರದರ್ಶನವನ್ನು ಸಾರ್ವಜನಿಕರಿಗೆ ಏರ್ಪಡಿಸಲಾಗುತ್ತಿದೆ.

 

ಚಿತ್ರಕಲಾ ಪರಿಷತ್ತು:

ದೂರ ಎಷ್ಟು?
ಜಿಲ್ಲೆ : ಬೆಂಗಳೂರು ನಗರ
ವಿಧಾನ ಸೌಧದಿಂದ : ೧ ಕಿ.ಮೀ

ಚಿತ್ರಕಲಾ ಪರಿಷತ್ತು ಕರ್ನಾಟಕದ ಹೆಮ್ಮೆಯ ಸಾಂಸ್ಕೃತಿಕ ಕೇಂದ್ರವಾಗಿದೆ. ಬೆಂಗಳೂರಿನ ಹೃದಯ ಭಾಗದಲ್ಲಿರುವ ಕುಮಾರಕೃಪ ರಸ್ತೆಯಲ್ಲಿರುವ ಈ ಸಂಸ್ಥೆಯು ೧೯೬೦ ರಲ್ಲಿ ಸ್ಥಾಪನೆಯಾಯಿತು. ಇದರ ಸಂಸ್ಥಾಪಕರು ಹೆಸರಾಂತ ಕಲಾವಿದರು, ಕಲಾ ಸಂಘಟಕರುಆದ ದಿ|| ಎಂ.ಎಸ್.ನಂಜುಂಡರಾವ್ ಅವರು. ಕರ್ನಾಟಕದ ಚಿತ್ರಕಲಾ ಕ್ಷೇತ್ರದಲ್ಲಿ ಬಹುದೊಡ್ಡ ಹೆಸರು.

ಈ ಸಂಸ್ಥೆ ಚಿತ್ರಕಲೆ, ಶಿಲ್ಪಕಲೆ, ಮುದ್ರಣ ಕಲೆ, ಅನ್ವಯಿಕ ಕಲೆಗಳಲ್ಲಿ ಪದವಿಯನ್ನು ನೀಡುತ್ತಾ ಬಂದು ಸಾವಿರಾರು ಕಲಾವಿದರನ್ನು ನಾಡಿಗೆ ನೀಡುತ್ತಾ ಬಂದಿದೆ. ಬೆಂಗಳೂರು ವಿಶ್ವವಿದ್ಯಾಲಯಕ್ಕೆ ಸಂಯೋಜನೆಗೊಂಡು ದೃಶ್ಯ ಕಲಾ ಪದವಿಗಳನ್ನು ನೀಡುತ್ತಿತ್ತು. ಇತ್ತೀಚೆಗೆ ಈ ಸಂಸ್ಥೆ ಡೀಮ್ಡ್ ಯೂನಿವರ್ಸಿಟಿಯಾಗಿ ಸ್ವಾಯತ್ತತೆ ಪಡೆದು ಚಿತ್ರಕಲಾ ಪದವಿ ಶಿಕ್ಷಣವನ್ನು ಮುಂದುವರಿಸುತ್ತಾ ಭಾರತದ ಪ್ರತಿಷ್ಠಿತ ಕಲಾ ಸಂಸ್ಥೆಯಾಗಿದೆ.

ಅದಲ್ಲದೇ ಕೇಜ್ರಿವಾಲ್ ಕಲಾ ಸಂಗ್ರಹಾಲಯವನ್ನು ಹೊಂದಿದೆ. ಇಲ್ಲಿ ಭಾರತದ ಹೆಸರಾಂತ ಹಿರಿಯ ಕಲಾವಿದರ ಅಪೂರ್ವವರ್ಣ ಚಿತ್ರಗಳು ಪ್ರದರ್ಶನಗೊಂಡಿವೆ.

ರಷ್ಯಾದ ಪ್ರಸಿದ್ಧ ಕಲಾವಿದ ದಿ|| ಸ್ಲೆತೋಸ್ಲಾವ್ ರೋರಿಚ್‌ರವರ ವರ್ಣಚಿತ್ರಗಳ ಸಂಗ್ರಹದ ಗ್ಯಾಲರಿಯನ್ನು ಹೊಂದಿದೆ. ಕರ್ನಾಟಕದ ಸಾಂಪ್ರದಾಯಿಕ ವರ್ಣಚಿತ್ರಗಳ ಅಪರೂಪವಾದ ಸಂಗ್ರಹ, ಪುರಾತನ ಕಾಲದ ತೊಗಲು ಬೊಂಬೆಗಳ ಕಲಾಸಂಗ್ರಹ ಇವೆಲ್ಲವೂ ಚಿತ್ರಕಲಾ ಪರಿಷತ್ತು ಕಲಶಪ್ರಾಯವಾಗಿದೆ. ರಾಷ್ಟ್ರೀಯ, ಅಂತರಾಷ್ಟ್ರೀಯ ಮಟ್ಟದಲ್ಲಿ ಖ್ಯಾತಿಯನ್ನು ಪಡೆದಿದೆ. ಚಿತ್ರಕಲೆ, ಶಿಲ್ಪಕಲಾ ಪ್ರದರ್ಶನದಕ್ಕೆ ಸುಸಜ್ಜಿತವಾದ ನಾಲ್ಕು ಗ್ಯಾಲರಿಗಳು ಇವೆ. ಇಲ್ಲಿ ದೇಶ ವಿದೇಶದ ಕಲಾವಿದರು ತಮ್ಮ ಕಲೆಯನ್ನು ಪ್ರದರ್ಶಿಸುತ್ತಾರೆ. ಪ್ರಕೃತಿಯ ಸೊಬಗನ್ನು ಹೊಂದಿರುವ ಚಿತ್ರಕಲಾ ಪರಿಷತ್ತು ಆವರಣದಲ್ಲಿ ವಿಶಾಲವಾದ ಬಯಲು ರಂಗಮಂದಿರವಿದೆ.

ಒಟ್ಟಾರೆಯಾಗಿ ಕರ್ನಾಟಕದ ಈ ಕಲಾಸಂಸ್ಥೆ ರಾಷ್ಟ್ರೀಯ ಅಂತರಾಷ್ಟ್ರೀಯ ಮಟ್ಟದಲ್ಲಿ ತನ್ನದೇ ಆದ ವಿಶಿಷ್ಠ ಛಾಪನ್ನು ಮೂಡಿಸಿದೆ.

 

ಜವಾಹರಲಾಲ್ ನೆಹರು ತಾರಾಲಯ :

ದೂರ ಎಷ್ಟು?
ಜಿಲ್ಲೆ : ಬೆಂಗಳೂರು ನಗರ
ವಿಧಾನ ಸೌಧದಿಂದ : ೧ ಕಿ.ಮೀ

ಬೆಂಗಳೂರಿನಲ್ಲಿ ಪ್ರವಾಸಿಗರನ್ನು ಆಕರ್ಷಿಸುವ ಸ್ಥಳಗಳಲ್ಲಿ ಜವಹರಲಾಲ್ ನೆಹರು ತಾರಾಲಯವೂ ಒಂದು. ನೀವು ಒಂದು ವೇಳೆ ಬ್ರಹ್ಮಾಂಡದ ವಿಸ್ಮಯಗಳನ್ನು ಕಂಡುಆನಂದಿಸಬಯಸಿದರೆ ಈ ತಾರಾಲಯಕ್ಕೆ ಭೇಟಿ ನೀಡಲೇಬೇಕು. ನಗರದ ಯಾವುದೇ ಮೂಲೆಯಿಂದಲೂ ಇಲ್ಲಿಗೆ ಸುಲಭವಾಗಿ ತಲುಪಬಹುದಾಗಿದ್ದು, ರಾಜಭವನದ ಪಕ್ಕದಲ್ಲಿದೆ. ತಾರಾಲಯವು ಖಗೋಳಶಾಸ್ತ್ರ ಕುರಿತಾದ ಪ್ರದರ್ಶನಗಳನ್ನು ನೀಡುತ್ತದೆ. ಇದನ್ನು ೧೯೮೯ ರಲ್ಲಿ ನಿರ್ಮಿಸಲಾಯಿತು.

೨೨೫ ಆಸನಗಳ ಸಾಮರ್ಥ್ಯವನ್ನು ಹೊಂದಿರುವ ಇದು, ವೃತ್ತಾಕಾರದಲ್ಲಿ ೧೫ ಮೀ ಗಳ ವೃತ್ತಾಕಾರದ ಗುಮ್ಮಟದ ಸ್ಕೈಥಿಯೇಟರ್‌ಆಗಿದೆ. ವಿದ್ಯಾರ್ಥಿಗಳಿಗಲ್ಲದೆ ಜನಸಾಮಾನ್ಯರಿಗೂ ಖಗಳಶಾಸ್ತ್ರದ ಬಗ್ಗೆ ಜಾಗೃತಿಯನ್ನು ಮೂಡಿಸುವುದು. ಇದರ ಉದ್ದೇಶವಾಗಿದೆ. ಇಲ್ಲಿಗೆ ಭೇಟಿ ನೀಡುವುದು ಮರೆಯಲಾಗದ ಅನುಭವವಾಗಿರುತ್ತದೆ. ಒಮ್ಮೆ ಈ ಪ್ರದರ್ಶನಗಳ ಮೂಲಕ ಖಗೋಳಶಾಸ್ತ್ರದ ಪ್ರಪಂಚಕ್ಕೆ ತೆರೆದುಕೊಂಡರೆ ಸಾಕು, ವಿಶ್ವದ ಬಗ್ಗೆ ಹೆಚ್ಚಿನ ಮಾಹಿತಿ ಸಂಗ್ರಹಿಸಲು ವಿಚಾರ ಮಾಡಲು, ಶೋಧಿಸಲು ನೀವು ಸಹ ಪ್ರಭಾವಿತರಾಗುತ್ತೀರಿ.

ಈ ತಾರಾಲಯದಲ್ಲಿ, ಗ್ರಹಣಗಳು, ಕ್ಷಿಪ್ರಚಲನೆ, ನಕ್ಷತ್ರಗಳು, ಸೌರವ್ಯೂಹ, ಉಲ್ಕೆ ಮುಂತಾದವುಗಳಂತಹ ವಿಶೇಷ ಖಗೋಳ ಸಂಗತಿಗಳನ್ನು ಪ್ರದರ್ಶಿಸಲಾಗುವುದು. ಹೆಚ್ಚಿನ ವಿಷಯಗಳನ್ನು ತಿಳಿದುಕೊಳ್ಳಲು ಬಯಸುವವರಿಗಾಗಿ ಉನ್ನತ ಶಿಕ್ಷಣಮೌಲ್ಯವನ್ನು ಹೊಂದಿರುವ ಉನ್ನತಭವನವಿದೆ. ಇಲ್ಲಿ ಖಗೋಳಶಾಸ್ತ್ರದ ಚಿತ್ರಗಳು, ಕಾರ್ಟೂನ್‌ಗಳ ಪೈಂಟಿಂಗ್‌ಗಳನ್ನು ಹಾಗೂ ಕೊಟೇಷನ್‌ಗಳನ್ನು ಪ್ರದರ್ಶಿಸಲಾಗಿದೆ.